Just In
- 9 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 10 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 12 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 13 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಬಿಎಸ್-6 ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್
ಕಳೆದ ಫೆಬ್ರವರಿ ತಿಂಗಳ ದ್ವಿಚಕ್ರ ಮಾರಾಟದಲ್ಲಿ ರಾಯಲ್ ಎನ್ಫೀಲ್ಡ್ ಬೈಕುಗಳ ಮಾರಾಟವು ಬೆಳವಣಿಗೆಯನ್ನು ಕಂಡಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ರಾಯಲ್ ಎನ್ಫೀಲ್ಡ್ 61,188 ಯುನಿಟ್ಗಳು ಮಾರಾಟವಾಗಿವೆ.
ಇದರಲ್ಲಿ ಬಿಎಸ್-6 ಹಿಮಾಲಯನ್ ಬೈಕುಗಳು ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಕಳೆದ ಫೆಬ್ರವರಿ ತಿಂಗಳಲ್ಲಿ ಬಿಎಸ್-6 ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕಿನ 2,161 ಯುನಿಟ್ಗಳು ಮಾರಾಟವಾಗಿವೆ. ಹೊಸ ರಾಯಲ್ ಎನ್ಫೀಲ್ಡ್ ಬಿಎಸ್-6 ಹಿಮಾಲಯನ್ ಬೈಕಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.87 ದಿಂದ ರೂ.1.91ಲಕ್ಷಗಳಾಗಿದೆ. ಬಿಎಸ್-6 ಹಿಮಾಲಯನ್ ಬೈಕಿನಲ್ಲಿ ಹೊಸ 3 ಬಣ್ಣಗಳನ್ನು ಸೇರಿಸಲಾಗಿದೆ. ಹೊಸ 3 ಬಣ್ಣಗಳನ್ನು ಸೇರಿಸಿ ಒಟ್ಟು 6 ಬಣ್ಣಗಳಲ್ಲಿ ಬಿಎಸ್-6 ರಾಯಲ್ ಎನ್ಫೀಲ್ಡ್ ಹಿಮಾಲಯನ್ ಲಭ್ಯವಿರಲಿದೆ. ಈ ಬೈಕ್ ಸ್ಪೋಕ್ ವ್ಹೀಲ್, ಎಂಆರ್ಎಫ್ ಡ್ಯುಯಲ್ ಪರ್ಪಸ್ ಟಯರ್ಗಳನ್ನು ಹೊಂದಿದೆ.
ಹೊಸ ಬೈಕ್ ಸ್ಪೋಕ್ ವ್ಹೀಲ್, ಎಂಆರ್ಎಫ್ ಡ್ಯುಯಲ್ ಪರ್ಪಸ್ ಟಯರ್ಗಳನ್ನು ಹೊಂದಿದೆ. ಫ್ಯೂಯಲ್ ಟ್ಯಾಂಕ್, ರೇರ್ ಲಗೇಜ್ ರ್ಯಾಕ್ನ ಮೇಲಿರುವ ರಾಕ್ ರೆಡ್ ಅಸೆಂಟ್ನೊಂದಿಗಿರುವ ಕಪ್ಪು ಬಣ್ಣವನ್ನು ಹೊಂದಿದೆ.
ಇದರ ಜೊತೆಗೆ ಬ್ಲೂ ಹಾಗೂ ವೈಟ್ ಬಣ್ಣವನ್ನು ಹೊಂದಿರುವ ಮಾದರಿಗಳಿವೆ. ಬಾಡಿ ಪ್ಯಾನೆಲ್ಗಳು ಗ್ರಾವೆಲ್ ಗ್ರೇ ಬ್ಲಾಕ್ ಬಣ್ಣವನ್ನು ಹೊಂದಿವೆ. ಹೊಸ ಹಿಮಾಲಯನ್ ಬೈಕಿನಲ್ಲಿ ಸ್ವಿಚ್ಎಬಲ್ ಎಬಿಎಸ್ ಮತ್ತು ಹಾರ್ಜಾರ್ಡ್ ಲೈಟ್ಗಳನ್ನು ಹೊಂದಿವೆ.
ಸ್ವಿಚ್ಬಲ್ ಮಾಡಬಹುದಾದ ಎಬಿಎಸ್ ಆಯ್ಕೆಯ ಸಹಾಯದಿಂದ ಸವಾರನಿಗೆ ಬೈಕಿನ ಬೆಲೆ ಹೆಚ್ಚು ಕಂಟ್ರೋಲ್ ಅನ್ನು ಹೊಂದಿದೆ. ಈ ಬೈಕಿನ ಎಂಜಿನ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿರಲಿದೆ. 2020ರ ಬಿಎಸ್-6 ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್ ಡೀಲರ್ಗಳ ಬಳಿ ತಲುಪಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿದೆ.
ಸವಾರ ಸುಲಭವಾಗಿ ಎಬಿಎಸ್ ಅನ್ನು ಆಫ್ ಮಾಡಬಹುದು ಮತ್ತು ಸಂಕಷ್ಠದ ಸನ್ನಿವೇಷದಲ್ಲಿ ಬೈಕ್ ನಿಲ್ಲಿಸಲು ಹಿಂದಿನ ಟಯರ್ಗಳನ್ನು ಲಾಕ್ ಮಾಡಬಹುದು. ಹಜಾರ್ಡ್ ಲೈಟ್ಗಳು ಕಠಿಣವಾದ ಹವಮಾನ ಪರಿಸ್ಥಿತಿಯಲ್ಲೂ ಸವಾರಿ ಮಾಡಲು ಹೆಚ್ಚು ಸಹಕಾರಿಯಾಗಿವೆ.
ಹಿಮಾಲಯನ್ ಬಿಎಸ್-6 ಮಾದರಿಯಲ್ಲಿ 411 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 24.5 ಬಿಹೆಚ್ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 5 ಸ್ಪೀಡ್ ಗೇರ್ಬಾಕ್ಸ್ ನೀಡಲಾಗುವುದು. ಬಿಎಸ್-6 ಹಿಮಾಲಯನ್ ಬೈಕಿನ ಬೆಲೆಯು ಬಣ್ಣಗಳ ಮೇಲೆ ನಿರ್ಧರವಾಗಿದೆ.
ಬೈಕಿನ ಮುಂಭಾಗದಲ್ಲಿ 21 ಇಂಚಿನ ಮತ್ತು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವ್ಹೀಲ್ಗಳಿದ್ದು, ಕ್ರಮವಾಗಿ 90/90 ಹಾಗೂ 120/90 ಸೆಕ್ಷನ್ ಟಯರ್ಗಳನ್ನು ಹೊಂದಿವೆ. ಬ್ರೇಕಿಂಗ್ಗಳಿಗಾಗಿ ಮುಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್ನ 300 ಎಂಎಂ ಫ್ರಂಟ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂನ ಸಿಂಗಲ್ ಪಿಸ್ಟನ್ ಕ್ಯಾಲಿಪರ್ಗಳಿವೆ.
ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್ನಲ್ಲಿ ಹೊಸ ಫೀಚರ್ಸ್ಗಳನ್ನು ಹೊಂದಿರುವುದರಿಂದ ಅಳವಡಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಹಾಗೂ ಕವಾಸಕಿ ವರ್ಸಿಸ್-ಎಕ್ಸ್ 300, ಕೆಟಿಎಂ 390 ಬೈಕುಗಳಿಗೆ ಪೈಪೋಟಿ ನೀಡುತ್ತದೆ.