ಪ್ರದರ್ಶನಗೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು 2020ರ ವೇಳೆಗೆ ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿದ್ದು, ಸಂಸ್ಥೆಯು ತಮ್ಮ ಪ್ರಥಮ ಎಲೆಕ್ಟ್ರಿಕ್ ಕಾರಾದ ವ್ಯಾಗನ್‍ಆರ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಹಿರಂಗಗೊಳಿಸಿದೆ. ಇಷ್ಟೆ ಅಲ್ಲದೇ ಮುಂದಿನ ತಿಂಗಳಿನಿಂದ ಕಾರಿನ ಟೆಸ್ಟಿಂಗ್ ಅನ್ನು ಶುರುಮಾಡಲಿದೆ.

ಮಾರುತಿ ಸುಜುಕಿಯು ಇ-ವರ್ಷನ್ ವ್ಯಾಗನ್‍ಆರ್ ಕಾರನ್ನು ಟೊಯೊಟಾ ಜೊತೆ ಕೈ ಜೋಡಿಸಿ ಉತ್ಪಾದಿಸಲಿದೆ ಎನ್ನಲಾಗಿದ್ದು, ಈ ಕಾರಿನ ಬೆಲೆಯು ಸ್ಪರ್ಧಾತ್ಮಕವಾಗಿ ಇರಲಿದೆ ಎನ್ನಲಾಗಿದೆ. ಮತ್ತು ಬ್ಯಾಟರಿಗಳ ಬೆಲೆ ಅಧಿಕವಿರುವ ಕಾರಣ ರೆಗ್ಯುಲರ್ ಮಾಡಲ್ ಮ್ಯಾಗನ್ ಆರ್ ಮಾದರಿಗಿಂತಾ ಎರಡರಷ್ಟು ಜಾಸ್ತಿ ಇರಲಿದೆ.

ವ್ಯಾಗನ್ಆರ್ ಇವಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರ್ ಆಗಿರಲಿದ್ದು, ಇದು ಏಪ್ರಿಲ್ 2020ರಲ್ಲಿ ಬಿಡುಗಡೆಗೊಳ್ಳಲಿದೆ. ಈ ಕಾರು ಗುಜರಾತ್‍‍ನಲ್ಲಿರುವ ಸುಜುಕಿ ಪ್ಲಾಂಟ್‍‍ನಲ್ಲಿ ತಯಾರಾಗಲಿದ್ದು, ಇದರ ಬ್ಯಾಟರಿಯ ಉತ್ಪಾದನೆಯನ್ನು ಟೊಯೊಟಾ ಜೊತೆಗಿನ ಪಾಲುದಾರಿಕೆಯಲ್ಲಿ ಉತ್ಪಾದಿಸುತ್ತೆವೆ ಎಂದು ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಿದೆ.

ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರು ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ತಯಾರಾಗಲಿರುವ ಮೊದಲ ಎಲೆಕ್ಟ್ರಿಕ್ ಕಾರಾಗಿದು, ಟೊಯೊಟಾ ಈಗಾಗಲೆ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರಿಗಾಗಿ ಅಲ್ಟ್ರಾ ಹೈ ಎಫಿಶಿಯೆನ್ಸಿ ಪವರ್‍‍ಟ್ರೈನ್ ಬ್ಯಾಟರಿಯನ್ನು ತಯಾರಿಸುವುದಾಗಿ ಹೇಳಿಕೊಂಡಿದೆ.

ಜೊತೆಗೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮುಂದಿನ ತಲೆಮಾರಿನ ವ್ಯಾಗನ್‍ಆರ್ ಕಾರನ್ನು ಇದೇ ವರ್ಷದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರು ಕಡಿಮೆ ತೂಕದ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದೆ. ಈ ಹೊಸ ಪ್ಲಾಟ್‍‍ಫಾರ್ಮ್ ಕಾರಿನ ತೂಕವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ.

ವ್ಯಾಗನ್‍ಆರ್ ಇವಿ ಉತ್ಪಾದನೆಗೆ ಯಾವ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಮಾರುತಿ ಯೋಚಿಸುತಿದ್ದು, ಪ್ರಸ್ಥುತ ತಲೆಮಾರಿನ ವ್ಯಾಗನ್‍ಆರ್ ಕಾರನ್ನು ಹರಿಯಾಣದ ಗುರ್‍‍‍ಗ್ರಾಮ್ ಪ್ಲಾಂಟ್‍‍ನಲ್ಲಿ ಉತ್ಪಾದಿಸುತ್ತಿದೆ.

ಮಾಹಿತಿಗಳ ಪ್ರಕಾರ ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರುಗಳನ್ನು ಕೂಡ ಅದೇ ಪ್ಲಾಂಟ್‍‍ನಲ್ಲಿ ಉತ್ಪಾದಿಸಲಿದೆ ಎಂದು ಹೇಳಲಾಗಿದ್ದು, ಕಾರಿನ ಬ್ಯಾಟರಿಯನ್ನು ಗುಜರಾತ್‍‍ನಿಂದ ತರಸಿಕೊಳ್ಳಲಾಗುತ್ತದೆ.

ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರು 1999ರಲ್ಲಿ ಬಿಡುಗಡೆಗೊಂಡಿದ್ದು, ಈ ಹಾಚ್‍‍ಬ್ಯಾಕ್ ಕಾರು 20 ಲಕ್ಷಕ್ಕು ಹೆಚ್ಚು ಯೂನಿಟ್ ಮಾರಾಟಗೊಂಡಿವೆ. ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ಲಭ್ಯವಿದ್ದು, ಹೊಸ ತಲೆಮಾರಿನ ವ್ಯಾಗನ್‍ಆರ್ ಕಾರು ಇದೇ ವರ್ಷ ಬಿಡುಗಡೆಗೊಳ್ಳಲಿದೆ.

ಭಾರತವಷ್ಟೇ ಅಲ್ಲದೇ ಜಪಾನ್ ಮಾರುಕಟ್ಟೆಯಲ್ಲೂ ಕಮಾಲ್ ಮಾಡಿರುವ ಸಾದಾರಣ ವ್ಯಾಗನ್ ಆರ್ ಕಾರುಗಳು ಕಿಯೈ ಕಾರುಗಳಿಂತಲೂ ಕಳೆಮಟ್ಟದಲ್ಲಿ ಮಾರಾಟಗೊಳ್ಳಲಿದ್ದು, 16ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ 660ಸಿಸಿ ಎಂಜಿನ್ ಪಡೆದುಕೊಳ್ಳಲಿದೆ.

ಹಾಗೆಯೇ ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಹೊಸ ವ್ಯಾಗನ್ ಆರ್ ಕಾರುಗಳು 4ನೇ ತಲೆಮಾರಿನ ಗುಣವೈಶಿಷ್ಟ್ಯತೆಗಳನ್ನು ಹೊಂದಿದ್ದು, 1.0-ಲೀಟರ್(1 ಸಾವಿರ ಸಿಸಿ) ಕೆ10 ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಮೂಲಕ ಆಲ್ಟೊ ಮತ್ತು ಸೆಲೆರಿಯೊ ಕಾರುಗಳ ಎಂಜಿನ್‌ಗೆ ಸರಿಸಮನಾಗಿರಲಿದೆ.

ಇದರ ಜೊತೆಗೆ ಸಿಎನ್‍ಜಿ ಮತ್ತು ಎಲ್‌ಪಿಜಿ ಎರಡನ್ನು ಬಳಕೆ ಮಾಡಬಹುದಾದ ವ್ಯವಸ್ಥೆಯನ್ನು ಸಹ ಹೊಸ ಮಾದರಿಯ ವ್ಯಾಗನ್ ಆರ್ ಕಾರುಗಳಲ್ಲಿ ಒದಗಿಸಲಾಗಿದ್ದು, ಮುಂಬರುವ ನವೆಂಬರ್‌ ಇಲ್ಲವೇ ಡಿಸೆಂಬರ್ ಅಂತ್ಯಕ್ಕೆ ಹೊಸ ವ್ಯಾಗನ್ ಆರ್ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಹಾಗೆಯೇ ವ್ಯಾಗನ್ ಆರ್ ಕಾರುಗಳಲ್ಲಿ ಡಿಸೇಲ್ ವರ್ಷನ್ ಲಭ್ಯವಾಗುವ ಮಾಹಿತಿಗಳಿದ್ದು, ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಅತಿ ದೊಡ್ಡಎಂಜಿನ್ ಮಾದರಿಯಾದ 1.3-ಲೀಟರ್ ಡಿಸೇಲ್ ಎಂಜಿನ್ ಮಾದರಿಯನ್ನು ಹೊಸ ವ್ಯಾಗನ್ ಆರ್ ಕಾರುಗಳಲ್ಲಿ ಪರಿಚಯಿಸುವ ಸಾಧ್ಯತೆಗಳಿವೆ.

ಇನ್ನು ಕಳೆದ ಫೆಬ್ರುವರಿಯಲ್ಲಿ ಬಿಡುಗಡೆಯಾದ ನ್ಯೂ ಜನರೇಷನ್ ಸ್ವಿಫ್ಟ್ ಫ್ಯಾಟ್‌ಫಾರ್ಮ್ ಅಡಿಯಲ್ಲೇ ವ್ಯಾಗನ್ ಆರ್ ಕೂಡಾ ಅಭಿವೃದ್ಧಿಗೊಳ್ಳಲಿದ್ದು, ವ್ಯಾರ್ಪ್ ಮಾದರಿಯ ಹೆಡ್‌ಲ್ಯಾಂಪ್, ತ್ರಿ ಸ್ಲೈಟ್ ಕ್ರೋಮ್ ಗ್ರಿಲ್, ಸ್ಟೀಲ್ ಚಕ್ರಗಳು, ಎಲ್ಇಡಿ ಟೈಲ್ ಲೈಟ್ಸ್‌ಗಳನ್ನು ಹೊಂದಿರಲಿದೆ.

ಈಗಾಗಲೇ ಸಾಕಷ್ಟು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ವ್ಯಾಗನ್ ಆರ್ ಕಾರಿನ ಹೊರ ಭಾಗದ ವಿನ್ಯಾಸಗಳು ಬಹಿರಂಗವಾಗಿದ್ದು, ಕಾರಿನ ಇಂಟಿರಿಯರ್ ಡಿಸೈನ್ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಬೆಲೆ(ಅಂದಾಜು)

ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೆಚ್ಚಿಸಿರುವ ಹಿನ್ನೆಲೆ ಹೊಸ ಕಾರಿನ ಬೆಲೆಯನ್ನು 4.50 ಲಕ್ಷದಿಂದ 5 ಲಕ್ಷಕ್ಕೆ ನಿಗದಿ ಮಾಡಬಹುದೆಂದು ಅಂದಾಜಿಸಲಾಗಿದೆ.

Read more...