ಗ್ರಾಹಕನಿಗೆ ಟೋಪಿ ಹಾಕಿದ ಟಾಟಾ ಮೋಟಾರ್ಸ್..! ಮುಂದೇನಾಯ್ತು.?

ಹಣ ಇದ್ದವರಿಗೆ ಕಾರು ಕೊಳ್ಳುವುದು ಸುಲಭದ ವಿಚಾರ. ಆದ್ರೆ ಮಧ್ಯವರ್ಗದವರಿಗೆ ಕಾರು ಖರೀದಿಸುವಾಗ ಆಗುವ ಹಣಕಾಸಿನ ಅಡಚಣೆ ಅಷ್ಟಿಷ್ಟಲ್ಲ. ಸರಿ, ಹೇಗೋ ಮಾಡಿ ಹಣ ಹೊಂದಿಸಿ ತಮ್ಮ ಕನಸಿನ ಕಾರು ಖರೀದಿ ಮಾಡಿದ್ರು ಅದಕ್ಕೂ ನೆಮ್ಮದಿ ಇಲ್ಲ. ಯಾಕೆಂದ್ರೆ ಡೀಲರ್ಸ್‌ಗಳ ಮೋಸದ ವ್ಯಾಪರವು ಕಾರು ಖರೀದಿಸುವುದೇ ತಪ್ಪು ಎನ್ನುವಂತೆ ಮಾಡಿ ಬಿಡುತ್ತೆ. ಇಲ್ಲೂ ಕೂಡಾ ನಡೆದಿದ್ದು ಅದೇ.

ಹೊಸ ಕಾರು ಖರೀದಿಸುವಾಗ ಇನ್ಮುಂದೆ ನೀವು ಹತ್ತು ಬಾರಿ ಯೋಚಿಸಿ ವ್ಯವಹಾರ ಮಾಡುವುದು ಒಳಿತು. ಇಲ್ಲವಾದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ಕಾರು ಖರೀದಿ ಮಾಡಿ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೆಲ್ಲಾ ಯಾಕೆ ಹೇಳ್ತಾ ಇದೀವಿ ಅಂದ್ರೆ, ಟಾಟಾ ಮೋಟಾರ್ಸ್ ಡೀಲರ್ಸ್ ಒಬ್ಬ ಗ್ರಾಹಕನಿಗೆ ಹೊಸ ಕಾರು ಅಂತಾ ಹೇಳಿ ಹಳೆಯ ಕಾರಿಗೆ ಪೇಂಟ್ ಹೊಡೆದು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ಚಂಡೀಗಢದಲ್ಲಿರುವ ಬರ್ಕಲಿ ಮೆಟ್ರೊ ಮೋಟಾರ್ಸ್ ಡೀಲರ್ಸ್‌ ಮಹಾಶಯನಿಂದ. ಇದಕ್ಕೆ ಸಾಥ್ ನೀಡಿದ್ದ ಮುಂಬೈ ಮೂಲದ ಬನಾರಸಿ ದಾಸ್ ಆಟೊಮೊಬೈಲ್ಸ್ ಆಫ್ ಪಂಚಕುಲಾ ಹೆಸರಿನ ಮೊತ್ತೊಬ್ಬ ಟಾಟಾ ಮೋಟಾರ್ಸ್ ಡೀಲರ್ಸ್ ಸೇರಿ ಗ್ರಾಹಕರಿಗೆ ಸೆಕೆಂಡ್ ಹ್ಯಾಂಡ್ ಕಾರನ್ನು ಹೊಸ ಕಾರು ಅಂತಾ ಮಾರಾಟ ಮಾಡಿದ್ದಾರೆ.

ರೂ. 3.61 ಲಕ್ಷ ಪಾವತಿಸಿ ಟಿಗೊರ್ ಖರೀದಿ ಮಾಡಿದ್ದ ಗ್ರಾಹಕನಿಗೆ ಮೊದಮೊದಲು ಅದು ಸೆಕೆಂಡ್ ಹ್ಯಾಂಡ್ ಅಂತಾ ಗೊತ್ತೆ ಆಗಿಲ್ಲ. ಕಾರು ಖರೀದಿಸಿದ ಕೆಲವೇ ದಿನಗಳಲ್ಲಿ ಒಂದೊಂದೇ ತಾಂತ್ರಿಕ ತೊಂದರೆಗಳು ಶುರುವಾದಗಲೇ ಮೋಸದ ವ್ಯವಹಾರ ಬೆಳಕಿಗೆ ಬಂದಿದೆ.

ಚಂಡೀಗಢ ಬಳಿಯ ಸೆಕ್ಟಾರ್ 16, ಪಂಚಕುಲ ತಾಲೂಕಿನ ನಿವಾಸಿಯಾದ ಅತುಲ್ ಕುಮಾರ್ ಅಗರ್ವಾಲ್ ಅವರು ಜನವರಿ 10, 2015 ರಂದು ರೂ. 3.61 ಲಕ್ಷ ನೀಡಿ ಅದೇ ಊರಿನಲಿದ್ದ ಬನಸಾರಿ ದಾಸ್ ಆಟೋಮೊಬೈಲ್ಸ್ ನಲ್ಲಿ ಹೊಸ ಕಾರನ್ನು ಖರೀದಿಸಿದ್ದರು.

ಕಾರನ್ನು ಖರೀದಿಸಿದಾಗಿನಿಂದಲೂ ಕಾರಿನಲ್ಲಿ ಒಂದಲ್ಲಾ ಒಂದು ಸಮಸ್ಯೆಯು ಇರುತ್ತಲೇ ಇತ್ತು. ಈ ನಿಟ್ಟಿನಲ್ಲಿ ಅತುಲ್ ಅವರು ಫೆಬ್ರವರಿ 8, 2015ರಂದು ಕಾರಿನ ಮೊದಲನೆಯ ಸರ್ವೀಸ್ ಅನ್ನು ಮಾಡಿಸಲಾಗಿತ್ತು, ಆದರೂ ಸಹ ಕಾರಿನಲ್ಲಿರುವ ಸಮಸ್ಯೆಯು ಬಗೆಹರಿಯಲಿಲ್ಲ ಮತ್ತು ಕಾರಿನಲ್ಲಿ ಕೋಲ್ಡ್ ಸ್ಟಾರ್ಟ್ ಸಮಸ್ಯೆಯು ಎದುರಾಗಿತ್ತು.

ಅತುಲ್ ಅವರು ಚಂಡೀಗಢ್‍‍ನಲ್ಲಿನ ಬರ್ಕಲಿ ಟಾಟಾ ಮೋಟಾರ್ಸ್‍‍ಗೆ ತಮ್ಮ ಕಾರಿನಲ್ಲಿರುವ ಸಮಸ್ಯೆಯ ಬಗ್ಗೆ ಹೇಳಿಕೊಂಡರು, ಅಲ್ಲಿನ ಅಧಿಕಾರಿಗಳು ಕೂಡಾ ಕಾರಿನಲ್ಲಿರುವ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಲಿಲ್ಲ ಮತ್ತು ಕಾರಿನಲ್ಲಿನ ಎಮಿಷನ್‍‍ನ ಕೊರತೆಯಿಂದ ಕಪ್ಪು ಹೊಗೆ ಶುರುವಾಗಿತ್ತು.

ಇಷ್ಟೆಲ್ಲಾ ಆದರೂ, ಬಗೆಹರಿಯದ ಸಮಸ್ಯೆಯಿಂದ ಬೇಸತ್ತ ಅತುಲ್ ಅವರು ಗ್ರಾಹಕ ನ್ಯಾಯಾಲಯದಲ್ಲಿ ಕೇಸ್ ಕೂಡಾ ಹಾಕಿದ್ರು. ಕೇಸ್ ಹಾಕಿದ ನಂತರ ನವೆಂಬರ್ 30, 2017ರಂದು ಚಂಡೀಗಢ್‍‍ನ ಪಿಇಸಿ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯವರಿಂದ ಕಾರಿನ ಕುರಿತಾಗಿ ಕಾರ್ಯಾಚರಣೆಯನ್ನು ಮಾಡಲಾಗಿತ್ತು.

ಕಾರ್ಯಾಚರಣೆಯಲ್ಲಿ ಕಾರಿನ ಟರ್ಬೋಚಾರ್ಜರ್, ಇಂಜೆಕ್ಟರ್ ಮತ್ತು ಫ್ಯುಯಲ್ ಲೈನ್ ಮತ್ತು ಇನ್ನಿತರೆ ಬದಲಾವಣೆಗಳನ್ನು ಮಾಡಿದ ನಂತರವೂ ಕೂಡಾ ಕಾರಿನಿಂದ ಕಪ್ಪು ಹೊಗೆಯು ಬರುತ್ತಲೇ ಇತ್ತು. ಮತ್ತು ಕಾರಿನ ಪಿಕ್-ಅಪ್ ಕೂಡಾ ಬಹಳ ನಿಧಾನ ಆಗುತ್ತಿತ್ತು ಎಂದು ವರದಿ ಹೇಳುತ್ತದೆ. ಈ ನಿಟ್ಟಿನಲ್ಲಿ ಸಮಿತಿಯು ಅತುಲ್ ಅವರು ನೀಡಿದ ಕಂಪ್ಲೈಂಟ್ ಅನ್ನು ನಿಜವೆಂದು ಭಾವಿಸಿದ್ದಾರೆ.

ಹೊಸ ಕಾರನ್ನು ಖರೀಸಲು ಮುಂದಾದ ಅತುಲ್ ಅವರಿಗೆ ಆಕ್ಸಿಡೆಂಟ್ ಆದ ಕಾರನ್ನು ಮತ್ತೆ ಹೊಸದರಂತೆ ಕಾಣುವಂತೆ ಮಾಡಿ ಅಲ್ಲಿನ ಡೀಲರ್‍‍ಗಳು ಆತನಿಗೆ ಮೋಸ ಮಾಡಿ ಮಾರಾಟ ಮಾಡಿದ್ದಾರೆ ಎಂದು ಸಾಬೀತಾಗಿದೆ. ಇದರಿಂದ ಈ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲರಿಗೂ ಕೋರ್ಟ್ ಶಿಕ್ಷೆ ನೀಡಲು ಮುಂದಾಗಿದೆ.

ಕಾರಿನ ಬೆಲೆ ಜೊತೆ ಹೆಚ್ಚುವರಿ ಪರಿಹಾರ..!

ಟಾಟಾ ಮೋರಾರ್ಸ್ ಡೀಲರ್ಸ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಛೀಮಾರಿ ಹಾಕಿದ್ದಲ್ಲದೆ ಗ್ರಾಹಕನಿಗೆ ಕಾರಿನ ಪೂರ್ಣ ಮೊತ್ತ ಜೊತೆಗೆ ಇದುವರೆಗೆ ಆದ ಖರ್ಚಿನ ಜೊತೆ ಹೆಚ್ಚುವರಿಯಾಗಿ 1 ಲಕ್ಷ ಪರಿಹಾರಕ್ಕಾಗಿ ಆದೇಶ ನೀಡಿದೆ.

ಈ ನಿಟ್ಟಿನಲ್ಲಿ ಡಿಸ್ಟ್ರಿಕ್ಟ್ ಕೋರ್ಟ್ ಆದೇಶ ಪ್ರಕಾರ ಪ್ರಕರಣದಲ್ಲಿ ಭಾಗಿಯಾದವರು ಅತುಲ್ ಅವರಿಗೆ ಹೊಸ ಕಾರು ಇಲ್ಲವೇ ಕಾರಿನ ಮೊತ್ತವನ್ನು ವಾಪಸ್ ನೀಡಬೇಕಾಗಿದ್ದು, ಅತುಲ್ ಅವರಿಗೆ ಕಾರಿನ ಖರೀದಿಯ ವೇಳೆ ನೀಡಿದ್ದ ರೂ. 3.61 ಲಕ್ಷ ಮತ್ತು ನಷ್ಟ ಪರಿಹಾರಕ್ಕಾಗಿ 1 ಲಕ್ಷದ ಮೊತ್ತ ಪಡೆಯಲಿದ್ದಾರೆ. ಹೀಗಾಗಿ ಹೊಸ ಕಾರು ಖರೀದಿ ವೇಳೆ ಹತ್ತಾರು ಬಾರಿ ಯೋಚಿಸುವುದು ಒಳಿತು ಎನ್ನುವುದು ಇದೆ ಕಾರಣಕ್ಕಾಗಿ.

ಇದು ಟಾಟಾ ಮೋಟಾರ್ಸ್ ಗ್ರಾಹಕರನ್ನು ಮೋಸ ಮಾಡಿದ ಸಂಘಟನೆಯಾದರೆ, ಇದೇ ತರಹದ ಘಟನೆಯೊಂದು ಕಳೆದ ವಾರ ಮುಂಬೈ ನಗರದಲ್ಲಿನ ಸ್ಕೋಡಾ ಲೌರಾ ಕಾರು ಮಾಲಿಕೆಗೆ ಕೂಡ ನಡೆದಿದ್ದು, ಈ ಕುರಿತಾದ ಮಾಹಿತಿಯನ್ನು ಕೆಳಗಿನ ಸ್ಲೈಡರ್‍‍ಗಳಲ್ಲಿ ಓದಿ ತಿಳಿಯಿರಿ..

ಎಂಜಿನ್ ವೈಫಲ್ಯದ ಕಾರಣದಿಂದ ಸ್ಕೋಡಾ ಲೌರಾ ಸೆಡಾನ್ ಕಾರಿನ ಮಾಲಿಕರಿಗೆ ಅತಿಯಾದ ಸೇವೆಯ ವೆಚ್ಚವನ್ನು ಮುಂಬೈ ಮೂಲದ ಆಟೋಬಾನ್ ಸ್ಕೋಡಾ ರಶೀದಿ ನೀಡಿತ್ತು. ಅಧಿಕೃತ ಸ್ಕೋಡಾ ವಿತರಕರು 1.68 ಲಕ್ಷ ರೂ. ಕಾರನ್ನು ಸರಿಪಡಿಸಲು ವೆಚ್ಚವನ್ನು ನೀಡಿದರೆ, ಸ್ಥಳೀಯ ಗ್ಯಾರೇಜ್ ಒಂದು ಸ್ಕೋಡಾ ಲೌರಾರವರ ಸೆಡಾನ್ ಕಾರನ್ನು ಕೇವಲ 1,062 ರೂ.ಗೆ ಸರಿ ಪಡಿಸಿದ್ದಾರೆ.

ಆಗಸ್ಟ್ 16 ರಂದು 2012ರಲ್ಲಿ ಖರೀದಿಸಿದ ಸ್ಕೋಡಾ ಲೌರಾ ಸೆಡಾನ್ ಕಾರಿನಲ್ಲಿ ಮಾಲಿಕರು ಮುಂಬೈ ನಗರದ ರಸ್ತೆಗಳಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಲೌರಾ ಸೆಡಾನ್ ಕಾರು ಹತಾಟನೆ ವಿಚಿತ್ರವಾಗಿ ವರ್ತಿಸಲು ಶುರು ಮಾಡಿತು. ಎಂಜಿನ್ ಇದ್ದಕ್ಕಿಂದಂತೆ ಸ್ವಾಭಿಕವಾಗಿ ವರ್ತಿಸಲು ಮುಂದಾಗಿ ಕಾರು ಸ್ಲೋ ಆಗಲು ಕಾರಣವಾಗಿತು.

ನಂತರ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ಪಾರ್ಕ್ ಮಾಡಿ, ಅದು ರಾತ್ರಿಯ ಸಮಯವಾದುದರಿಂದ ಮತ್ತು ಆಗಲೇ ತಮ್ಮ ವಾಸ ಸ್ಥಳದಿಂದ ಬಹು ದೂರ ಪ್ರಯಾಣಿಸಿದರಿಂದ ಆ ಕಾರನ್ನು ಅಲ್ಲಿಯೆ ಪಾರ್ಕ್ ಮಾಡುವ ಪರಿಸ್ಥಿತಿ ಎದುರಾಯಿತು.

ಮುಂದಿನ ದಿನ ಬೆಳಿಗ್ಗೆ ಲೌರಾ ಸೆಡಾನ್ ಮಾಲಿಕರು ಖರೀದಿ ಮಾಡಿದ ತಮ್ಮ ನಿವಾಸದ ಹತ್ತಿರವಿದ್ದ ಕುರ್ಲಾನಲ್ಲಿನ ಆಟೊಬನ್ ಡೀಲರ್‍‍ನ ಹತ್ತಿರ ಕಾರಿನ ತೊಂದರೆಯ ಬಗ್ಗೆ ಹೇಳಿ ಕೊಂಡೊಯ್ಯಲಾಯಿತು. ಆದರೇ ಅಲ್ಲಿ ನಡೆದ ಘಟನೆಯು ಲೌರಾರವರಿಗೆ ದೊಡ್ಡ ಶಾಕ್ ನೀಡಿತು.

ಕಾರನ್ನು ಡೀಲ‍‍ರನತ್ತ ಕೊಂಡೊಯ್ದ ದಿನದ ಸಂಜೆ ಆಟೊಬಾನ್ ಡೀಲರ್ ಲೌರಾ ಕಾರಿನ ಮಾಲಿಕರಿಗೆ ಕರೆ ಮಾಡಿ ಕಾರಿನ ರಿಪೇರಿಗಾಗಿ ಸುಮಾರು ರೂ. 2.5 ಲಕ್ಷ ಖರ್ಚಾಗುತ್ತದೆ ಎಂದು ತಿಳಿಸಿದರು. ಕಾರುಗಳ ಬಗ್ಗೆ ಕೊಂಚ ತಿಳಿದಿದ್ದ ಮಾಲಿಕರು ಇದಕ್ಕೆ ಸಮ್ಮತಿಸದೆ, ಆಟೋಬಾನ್ ಸ್ಕೋಡಾದ ಸರ್ವೀಸ್ ಮ್ಯಾನೇಜರ್ ಆದ ಶ್ರೀ ಮುದಾಸ್ಸರ್ ಅವರ ಹತ್ತಿರ ರಶೀದಿಯ ಕುರಿತಾಗಿ ಏಕೆ ಇಷ್ಟು ಖರ್ಚಾಗುತ್ತದೆ ಎಂಬ ಮಾಹಿತಿಯನ್ನು ಕೇಳಿದಾಗ ಮ್ಯಾನೇಜರ್ ಹೇಳಿದ್ದು ಹೀಗೆ, ಕಾರಿನ ಬಿಡಿಭಾಗಗಳಿಗೆ ರೂ. 1.43 ಲಕ್ಷ ಮತ್ತು ಲೇಬರ್ ಚಾರ್ಜ್‍‍ಗಾಗಿ 25,000 ಸಾವಿರದ ಮೊತ್ತದಲ್ಲಿ ಚಾರ್ಚಾಗುತ್ತದೆ ಎಂದು ಹೇಳಿದರು.

ಸ್ಕೋಡಾ ಲೌರಾ ಸೆಡಾನ್ ಕಾರಿನ ಮಾಲಿಕರು ಡೀಲರ್‍ ತಮ್ಮನು ಮೋಸ ಮಾಡುತ್ತಿರುವುದಾಗಿ ಅರಿತು, ಸ್ಕೋಟಾ ಆಟೋ ಸಂಸ್ಥೆಯ ತತ್ವಗಳನ್ನು ಪಾಲಿಸುತ್ತಿಲ್ಲವೆಂದು ಅರಿವಾಯಿತು.ಇದರಿಂದ ಬೇಸತ್ತ ಕಾರಿನ ಮಾಲಿಕರು ಮುಂಬೈಯಲ್ಲಿ ಪ್ರಸಿದ್ಧವಾದ ಲೋಕಲ್ ಕಾರ್ಯಾಗಾರವಾದ ಭಾರತ್ ಆಟೋ ಅಸೋಸಿಯೇಟ್ಸ್ನಿಂದ ನಿತಿನ್ ಅವರನ್ನು ಕರೆದರು.

ಆಗಸ್ಟ್ 21 2018ರಂದು ಸ್ಕೋಡಾ ಲೌರಾ ಕಾರಿನ ಮಾಲಿಕರು ಸ್ಥಳಿಯ ಕಾರ್ಯಗಾರರ ಬಳಿಗೆ ತಮ್ಮ ಕಾರನ್ನು ಕೊಂಡೊಯ್ದರು. ಆದರೆ ಸುಮಾರು ನಾಲ್ಕು ದಿನಗಳ ಕಾಲ ಆಟೊಬಾನ್ ಸ್ಕೋಡಾ ಡೀಲರ್‍‍ನ ಹತ್ತಿರವಿದ್ದ ಕಾರನ್ನು ಹೊರ ತರಲು ಮಾಲಿಕರಿಗೆ ಕಷ್ಟವಾಯಿತು.

ಏಕೆಂದರೆ ನಾಲ್ಕು ದಿನಗಳ ಕಾಲ ಡೀಲರ್‍‍ನ ಬಳಿ ಇರಬೇಕಾದ ಕಾರಿಗೆ ಸರ್ವೀಸ್ ಚಾರ್ಜ್ ಮತ್ತು ಜಿಎಸ್‍‍ಟಿಯನ್ನು ಸೇರಿಸಿ ರೂ. 3,000 ಸಾವಿರದ ಮೊತ್ತವನ್ನು ಪಾವತಿಸಿ ಕಾರನ್ನು ಕೊಂಡೊಯ್ಯಲು ಮ್ಯಾನೇಜರ್ ಆದೇಶಿಸಿದರು.

ಅದೇ ದಿನದ ಸಂಜೆ ವೇಳೆ ಸ್ಕೋಡಾ ಕಾರು ಭಾರತ್ ಆಟೋ ಅಸೋಸಿಯೇಟ್ಸ್ ಅನ್ನು ತಲುಪಿದ್ದು, ಅಲ್ಲಿನ ಕಾರ್ಯಗಾರರು ಕಾರಿನಲ್ಲಿ ಉಂಟಾದ ಲೋಪವನ್ನು ಗುರುತಿಸಿ, ಕೇವಲ ಆ ಕಾರಿನಲ್ಲಿರುವ ಟೈಮಿಂಗ್ ಬೆಲ್ಟ್ ಅನ್ನು ಮಾತ್ರ ಬದಲಾಯಿಸಿದರೆ ಸಾಕು ಎಂದು ಮಾಲಿಕರಿಗೆ ತಿಳಿಸಿದರು. ಇದೇ ತೊಂದರೆಯನ್ನು ಆಟೊಬಾನ್ ಕೂಡಾ ನೀಡಿದ ರಶೀದಿಯಲ್ಲಿ ಉಲ್ಲೇಖಿಸಲಾಗಿತ್ತು.

ಸ್ಥಳಿಯ ಕಾರ್ಯಗಾರರು ಸ್ಕೋಡಾ ಲೌರಾ ಕಾರಿನಲ್ಲಿರುವ ಲೋಪವನ್ನು ನಿವಾರಿಸಲು ಸುಮಾರು ಎರಡರಿಂದ ಮೂರು ತಾಸು ಸಮಯವನ್ನು ತೆಗೆದುಕೊಂಡು, ಕೇವಲ ರೂ. 1,062 ಸಾವಿರ ಮೊತ್ತದ ಬಿಲ್ ಅನ್ನು ಮಾಲಿಕರಿಗೆ ನೀಡಲಾಗಿತ್ತು.

ಹೀಗೆ ಲೌರಾ ಸೆಡಾನ್ ಮಾಲಿಕರಿಗೆ ಕಾರಿನಲ್ಲಿದ ಲೋಪಕ್ಕಾಗಿ ಸ್ಕೋಡಾ ಅಧಿಕೃತ ಡೀಲರ್‍‍ಗಳಾದ ಆಟೋಬಾನ್ ಸ್ಕೋಡಾರವರು ರೂ. 1,68 ಲಕ್ಷದ ರಶೀದಿಯನ್ನು ನೀಡಿದರೆ, ಸ್ಥಳಿಯ ಭಾರತ್ ಆಟೋ ಅಸೋಸಿಯೇಟ್ಸ್ ಕೇವಲ 1,062 ರುಪಾಯಿಯಲ್ಲಿ ಕಾರಿನ ಲೋಪವನ್ನು ಸರಿಪಡಿಸಿದರು. ಇದೀಗ ಲೌರಾರವರು ಯಾವುದೇ ತೊಂದರೆ ಇಲ್ಲದೆ ಹೊಸ ಕಾರಿನಂತೆಯೆ ತಮ್ಮ ಕಾರನ್ನು ಚಲಾಯಿಸುತ್ತಿದ್ದಾರೆ.

Read More About: auto news

Read more...