ಬಿಡುಗಡೆಗೊಂಡ ಟಾಟಾ ಟಿಯಾಗೊ ಎನ್ಆರ್‍‍ಜಿ ಕಾರು.. ಬೆಲೆ ಎಷ್ಟು.?

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೊಟಾರ್ಸ್ ತಮ್ಮ ಜನಪ್ರಿಯ ಟಿಯಾಗೊ ಕಾರು ಬಿಡುಗಡೆಗೊಂಡ ಒಂದು ವರ್ಷದ ಸಂಭ್ರಮದಲ್ಲಿ ಟಿಯಾಗೊ ಕಾರಿನ ಎನ್‍ಆರ್‍‍‍ಜಿ ಮಾದರಿಯನ್ನು ಇಂದು ಮಾರುಕಟ್ಟೆಗೆ ಪರಿಚಯಿಸಿದೆ. ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಿದ ಟಿಯಾಗೊ ಎನ್ಆರ್‍‍ಜಿ ಕಾರಿನ ಕುರಿತಾದ ಕಂಪ್ಲೀಟ್ ಡೀಟೆಲ್ಸ್ ಕೆಳಗಿನ ಸ್ಲೈಡರ್‍‍ಗಳಲ್ಲಿ ತಿಳಿಯಿರಿ.

ಸ್ಟ್ಯಾಂಡರ್ಡ್ ಟಿಯಾಗೊ ಹ್ಯಾಚ್‍‍ಬ್ಯಾಕ್ ಕಾರಿಗಿಂತಾ ಹೊಸ ಎನ್‍ಆರ್‍‍ಜಿ ಕಾರು ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ. ಬಿಡುಗಡೆಗೊಂಡ ಹೊಸ ಟಾಟಾ ಟಿಯಾಗೊ ಎನ್ಆರ್‍‍ಜಿ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.49 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಟಾಟಾ ಟೊಯಾಗೊ ಎನ್‍ಆರ್‍‍ಜಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಮಾದರಿಯ ಕಾರುಗಳ ಬೆಲೆಯು ರೂ. 5.49 ಲಕ್ಷ ಮತ್ತು ಡೀಸೆಲ್ ಮಾದರಿಯ ಕಾರುಗಳು ರೂ. 6.31 ಲಕ್ಷದ ಪ್ರಾರಂಭಿಕ ಬೆಲೆಯನ್ನು ನಿಗದಿಪಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರು ಆಕರ್ಷಕವಾದ ವಿನ್ಯಾಸವನ್ನು ಪಡುದುಕೊಂಡಿದ್ದು, ಮುಂಭಾಗದಲ್ಲಿ ಬಂಪರ್‍‍ನ ಕೇಳಗೆ ಪ್ಲಾಸ್ಟಿಕ್ ಕ್ಲೇಡಿಂಗ್ ಮತ್ತು ಗ್ರಿಲ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇನ್ನು ಕಾರಿನ ಸೈಡ್‍‍ನಲ್ಲಿ ಕ್ರಾಸ್‍ಓವರ್ ಹ್ಯಾಚ್‍‍ಬ್ಯಾಕ್‍ನಂತೆ ಕಾಣಲು ವಿಭಿನ್ನವಾದ ವೃತ್ತದ ಚಕ್ರ ಕಮಾನುಗಳನ್ನು ಒದಗಿಸಲಾಗಿದೆ.

ಟಾಟಾ ಟಿಯಾಗೊ ಎನ್‍ಅರ್‍‍ಜಿ ಕಾರು 3793ಎಮ್ಎಮ್ ಉದ್ದ, 1665ಎಮ್ಎಮ್ ಅಗಲ, 1587ಎಮ್ಎಮ್ ಎತ್ತರ, 2400ಎಮ್ಎಮ್‍ನ ವ್ಹೀಲ್ ಬೇಸ್, 180ಎಮ್ಎಮ್ ಗ್ರೌಂಡ್ ಕ್ಲಿಯರೆನ್ ಮತ್ತು 35 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯನ್ನು ಪಡೆದುಕೊಂಡಿದೆ.

ಇನ್ನು ಕಾರಿನ ಹೊರಭಾಗದಲ್ಲಿ ಮಸ್ಕ್ಯುಲರ್ ಫಿನಿಷ್ ನೀಡಲಾದ ಟೈಲ್‍‍ಗೇಟ್, ರಗ್ಡ್ ಸ್ಕಿಡ್ ಪ್ಲೇಟ್, ಡ್ಯುಯಲ್ ಟೋನ್ ಅಲಾಯ್ ವ್ಹೀಲ್ಸ್, ಇನ್ಫಿನಿಟಿ ಬ್ಲಾಕ್ ರೂಫ್, ಒಆರ್‍‍‍ವಿಎಮ್ ಮತ್ತು ರೂಫ್ ರೈಲ್‍‍ಗಳನ್ನು ಒದಗಿಸಲಾಗಿದೆ. ಇವುಗಳನ್ನು ಹೊರತು ಪಡಿಸಿ ರೆಗ್ಯುಲರ್ ಟಿಗೋರ್ ಕಾರಿನಂತೆಯೆ ಇನ್ನಿತರೆ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ.

ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ಒಳಭಾಗವನ್ನು ಆಕ್ಟೀವ್ ಬ್ಲಾಕ್ ಥೀಮ್‍‍ನೊಂದಿಗೆ ವೈಬ್ರಂಟ್ ಕಾನ್ಯನ್ ಆರೆಂಜ್ ಹೈಲೈಟ್ಸ್ ಅನ್ನು ಒದಗಿಸಲಾಗಿದೆ. ಕಾರಿನ ಸೀಟ್‍‍ಗಳನ್ನು ವಿಶೇಷವಾದ ಫ್ಯಾಬ್ರಿಕ್‍‍ನಿಂದ ಸಜ್ಜುಗೊಳಿಸಲಾಗಿದೆ.

ಮತ್ತು ಟಾಟಾ ಟಿಗೊರ್ ಎನ್‍ಆರ್‍‍‍ಜಿ ಕಾರಿನಲ್ಲಿ ನ್ಯಾವಿಗೇಷನ್ ಸಪೋರ್ಟ್ ಮಾಡುವ 5 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಎಂಟು ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಅಸ್ಸಿಸ್ಟ್, ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್, ಆರ್ಮೌರ್ಡ್ ಬಾಡಿ ಮತ್ತು ಕ್ಯಾಬಿನ್, ಸ್ಮಾರ್ಟ್ ರಿಯರ್ ವೈಪರ್ ಹಾಗು ಫಾಲೊ ಮೀ ಹೆಡ್‍‍ಲ್ಯಾಂಪ್‍‍ಗಳನ್ನು ವಿಷೇಷವಾಗಿ ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ

ಮೇಲೆ ಹೇಳಿರುವ ಹಾಗೆ ಟಾಟಾ ಟಿಗೊರ್ ಎನ್‍ಆರ್‍‍ಜಿ ಕಾರು ಪೆಟ್ರೋಲ್ ಹಾಗು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದ್ದು, ಪೆಟ್ರೋಲ್ ಆಧಾರಿತ ಕಾರುಗಳು 1.2 ರೆವಾಲ್ಟ್ರಾನ್ ಪೆಟ್ರೋಲ್ ಎಂಜಿನ್ ಸಹಾಯದಿಂದ 84ಬಿಹೆಚ್‍‍ಪಿ ಮತ್ತು 114ಎನ್ಎಮ್ ಟಾರ್ಕ್ ಅನ್ನು ಉಪ್ದಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಇನ್ನು ಡೀಸೆಲ್ ಆಧಾರಿತ ಕಾರುಗಳು 1.5 ರೆವಾಲ್ಟ್ರಾನ್ ಡೀಸೆಲ್ ಎಂಜಿನ್ ಸಹಾಯದಿಂದ 69ಬಿಹೆಚ್‍‍ಪಿ ಮತ್ತು 140ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ತಮ್ಮ ಜನಪ್ರಿಯ ಟಿಯಾಗೊ ಕಾರಿನ ಎನ್‍ಆರ್‍‍ಜಿ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದು, ಪ್ರೀಮಿಯಮ್ ವಿನ್ಯಾಸವನ್ನು ಪಡೆದುಕೊಂಡಿದೆ. ಟಾಟಾ ಟಿಯಾಗೊ ಎನ್ಆರ್‍‍ಜಿ ಕಾರು ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಮಾರುತಿ ಸೆಲೆರಿಯೊ ಎಕ್ಸ್ ಮತ್ತು ಫೋರ್ಡ್ ಫ್ರೀಸ್ಟೈಲ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಬಿಡುಗಡೆಗೊಂಡ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ಮತ್ತಷ್ಟು ಚಿತ್ರಗಳು ಇಲ್ಲಿವೆ ನೋಡಿ..

Read More About: tata motors new launch new car

Read more...