ಟ್ರಾಫಿಕ್ ಪೊಲೀಸ್‍‍ರಿಂದ ತಪ್ಪಿಸಿಕೊಳ್ಳಬಹುದು ಆದ್ರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.!

ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಜನಸಂಖ್ಯೆಯನ್ನೇ ಮಿರಿಸುವ ಮಟ್ಟಕ್ಕೆ ಹೊಗುತ್ತಿದೆ. ಇದರಿಂದಾಗಿ ಟ್ರಾಫಿಕ್ ನಿಯಂತ್ರಣ ಪೊಲೀಸರಿಗೆ ಹೊಸ ಸವಾಲಾಗಿ ಸವಾಲಾಗುತ್ತಿದ್ದು, ಮಿತಿಮಿರುತ್ತಿರುವ ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ತಡೆಯಲು ಹೊಸ ಹೊಸ ತಂತ್ರಜ್ಞಾನಗಳನ್ನು ಪ್ರಯೋಗಿಸುತ್ತಿದ್ದಾರೆ. ಇವುಗಳಲ್ಲಿ ಸ್ಪೀಡ್ ಡ್ರೈವಿಂಗ್ ಮಟ್ಟಹಾಕಲು ಮಾಡಿರುವ ಹೊಸ ಪ್ರಯೋಗವೊಂದು ವಾಹನ ಸವಾರರ ಹದ್ದಿನ ಕಣ್ಣಿಟ್ಟಿದೆ.

ಇದರಿಂದ ಬೇಸತ್ತ ಟ್ರಾಫಿಕ್ ಪೊಲೀಸರು ಟೆಕ್ನಾಲಜಿಯನ್ನು ಬಳಸಿ ನಿಯಮ ಉಲ್ಲಂಘಕಾರರನ್ನು ಹಿಡಿಯಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ಓವರ್ ಸ್ಪೀಡಿಂಗ್ ಅನ್ನು ಪತ್ತೆಹಚ್ಚಲು ರಾಡರ್ ಸ್ಪೀಡ್ ಫಲಕಗಳನ್ನು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಇನ್ಸ್ಟಾಲ್ ಮಾಡಲು ಮುಂದಾಗಿದ್ದಾರೆ.

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಓವರ್ ಸ್ಪೀಡಿಂಗ್ ಮಾಡುವವರ ಪತ್ತೆಗೆ ಈ ಗ್ಯಾಡ್ಜೆಟ್ ಸಹಕಾರಿಯಾಗಿದ್ದು, ಓವರ್ ಸ್ಪೀಡಿಂಗ್ ಮಾಡಿದ ವಾಹನವನ್ನು ಪತ್ತೆ ಹಚ್ಚುವುದಲ್ಲದೇ ವಾಹನ ಮಾಲೀಕನಿಗೆ ನೋಟಿಸ್ ಕಳುಹಿಸುವ ಸಾಮರ್ಥ್ಯ ಹೊಂದಿದೆ.

ಓವರ್ ಸ್ಪೀಡಿಂಗ್ ಕಾರಣದಿಂದಾಗಿ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ, ಬೆಂಗಳೂರು ಸಂಚಾರಿ ಪೋಲಿಸ್ ರಾಡಾರ್ ಸ್ಪೀಡ್ ಸೈನ್ಬೋರ್ಡ್‍‍ಗಳನ್ನು (ಆರ್‌ಎಸ್ಎಸ್) ಹಾಕುತ್ತಿದ್ದು, ಇದು ಎದುರಿಗೆ ಬರುತ್ತಿರುವ ವಾಹನಗಳ ವೇಗವನ್ನು ಕೆಲವೇ ಸೆಕೆಂಡುಗಳಲ್ಲಿ ಅಳಿದು ಪ್ರದರ್ಶನ ಮಾಡುತ್ತೆ.

ಜೊತೆಗೆ ಟ್ರಾಫಿಕ್ ಪೊಲೀಸರ ನಿಯಂತ್ರಣ ಕಚೇರಿಗೆ ಮಾಹಿತಿ ರವಾನಿಸುವ ಈ ತಂತ್ರಜ್ಞಾನವು ಮಿತಿಮಿರಿ ಚಲಿಸುತ್ತಿರುವ ವಾಹನಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತೆ.ಇದರ ಸಹಾಯದಿಂದ ಸಂಚಾರಿ ನಿಯಮ ಉಲ್ಲಂಘಿಸಿದವರನ್ನು ಪತ್ತೆ ಹಚ್ಚುವ ಪೊಲೀಸರು ವಾಹನ ಮಾಲೀಕರಿಗೆ ಇ-ಚಲನ್ ಮೂಲಕ ದಂಡ ವಿಧಿಸುತ್ತಾರೆ.

ಮೊದಲ ಕಂತಿನಂತೆ, ಹೆಬ್ಬಾಳ-ಯಲಹಂಕ ಫ್ಲೈ-ಓವರ್ ವಿಸ್ತರಣೆಯ ಎರಡೂ ಕಡೆಗಳಲ್ಲಿ ಆರ್‍ಎಸ್ಎಸ್ ಸೌಲಭ್ಯವನ್ನು ಅನ್ನು ಅಳವಡಿಸಲಾಗಿದ್ದು, ಈ ಫ್ಲೈ-ಓವರ್ ವಿಸ್ತರಣೆಯ ಗರಿಷ್ಠ ಅನುಮತಿಸುವ ವೇಗ ಕಾರುಗಳಿಗೆ ಗಂಟೆಗೆ 80 ಕಿ.ಮೀ. ಆಗಿದ್ದು, ಬೈಕ್‌ಗಳಿಗೆ ಗಂಟೆಗೆ ಗರಿಷ್ಠ 60 ಕಿ.ಮಿ ವೇಗ ಮೀತಿಗೊಳಿಸಲಾಗಿದೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಇಷ್ಟಾದ್ರು ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳನ್ನು ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿರುವ ಬಗ್ಗೆ ದೂರುಗಳಿದ್ದು, ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕಾಗಿ ಪೊಲೀಸರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.

ಹೀಗಾಗಿಯೇ ಬೆಂಗಳೂರಿನ ಪ್ರಮುಖ ರಸ್ತೆಗಳಾದ ಭದ್ರಪ್ಪಾ ಲೇಔಟ್, ತುಮಕೂರು ರಸ್ತೆ, ನೈಸ್ ರೋಡ್, ಓಲ್ಡ್ ಏರ್‍‍ಫೋರ್ಟ್ ರಸ್ತೆ ಮತ್ತು ಇನ್ನಿತರೆ 50 ಜಂಕ್ಷನ್‍‍ಗಳಲ್ಲಿ ಈ ಸೌಲಭ್ಯವನ್ನು ಅಳವಡಿಕೆಗೆ ಮುಂದಾಗಿರುವ ಟ್ರಾಫಿಕ್ ಪೊಲೀಸರು, ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ಮಟ್ಟಹಾಕಲು ಕ್ರಮ ಕೈಗೊಳ್ಳುತ್ತಿದ್ದಾರೆ.

ಇದು ಬೆಂಗಳೂರಿನಲ್ಲಿನ ಟ್ರಾಫಿಕ್ ಪೊಲೀಸರು ಸ್ಪೀಡ್ ಲಿಮಿಟ್ ಅನ್ನು ನಿಯಂತ್ರಗೊಳಿಸಲು ತೆಗೆದುಕೊಂಡ ನಿರ್ಧಾರವಾದರೆ ಇನ್ನು ಪುಣೆ ನಗರದ ಟ್ರಾಫಿಕ್ ಪೊಲೀಸರು ರಾಂಗ್ ಸೈಡ್‍‍ನಲ್ಲಿ ಬರುವ ವಾಹನ ಚಾಲಕರಿಗೆ ಸರಿಯಾಡ ಪಾಠವನ್ನು ಕಲಿಸಲು ಮುಂದಾಗಿದ್ದಾರೆ. ಹಾಗದರೆ ಪುಣೆ ಪೊಲೀಸರು ರಾಂಗ್ ಸೈಡ್‍‍ನಲ್ಲಿ ವಾಹನ ಚಾಲನೆ ಮಾಡುವವರ ಮೆಲೆ ಯಾವ ಕ್ರಮ ಕೈಗೊಂಡಿದ್ದಾ ಎಂಬುದನ್ನು ಇಲ್ಲಿ ಓದಿರಿ.

ರಸ್ತೆ ನಿಯಮ ಉಲ್ಲಂಘಯಿಂದಾಗಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆಯು ಹೆಚುತ್ತಿದೆ. ಮಾಹಿತಿಗಳ ಪ್ರಕಾರ 2017ರಲ್ಲಿ ಸುಮಾರು 1.47 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮರಣಿಸಿದ್ದಾರೆ. ರಸ್ತೆ ನಿಯಮಗಳನ್ನು ಪಾಲಿಸಲು ಪೊಲೀಸರು ಹೊಸ ಯೋಜನಗಳನ್ನು ರೂಪಿಸಿ ಜನಸಾಮಾನ್ಯರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾರೆ.

ಪುಣೆ ನಗರದ ಟ್ರಾಫಿಕ್ ಪೊಲೀಸರು ಜನ ಸಾಮಾನ್ಯರಿಗೆ ಟ್ರಾಫಿಕ್ ನಿಯಮದ ಬಗ್ಗೆ ಅರಿವು ಮೂಡಿಸುವಲ್ಲಿ ಹೊಸ ಯೋಜನೆಗಳನ್ನು ಮಾಡುತ್ತಿದ್ದಾರೆ. ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ಪೊಲೀಸರಿಂದ ಬಚಾವ್ ಆದವರ ಪಾಸ್‍ಪೋರ್ಟ್ ಅರ್ಜಿಯನ್ನು ರದ್ದು ಮಾಡಲಾಗುವುದು ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಇದಲ್ಲದೇ ಕೇವಲ 8 ತಿಂಗಳಿನಲ್ಲಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದವರಿಂದ ಸುಮಾರು 22.55 ಕೋಟಿ ವೆಚ್ಚದ ದಂಡವನ್ನು ವಸೂಲಿ ಮಾಡಿದ್ದಾರೆ. ಇದೀಗ ಪುಣೆ ಪೊಲೀಸರು ರಾಂಗ್ ಸೈಡ್‍‍ನಲ್ಲಿ ವಾಹನ ಚಲಾಯಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ರಸ್ತೆಯಲ್ಲಿ ರಾಂಗ್ ಸೈಡ್ ಚಾಲನೆ ಮಾಡುವುದು ಭಾರತದಲ್ಲಿ ಅತ್ಯಂತ ಸಾಮಾನ್ಯ ದಟ್ಟಣೆ ಆಗಿಹೋಗಿದೆ. ರಾಂಗ್ ಸೈಡ್‍‍ನಲ್ಲಿ ಬರುವ ಮೂಲಕ ಚಾಲಕನು ಮತ್ತೊಂದು ವಾಹನಕ್ಕೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದಾಗಿದ್ದು, ಈಗಾಗಲೆ ನಾವು ಇಂತಹ ಘಟನೆಗಳನ್ನು ನೋಡಿಯೆ ಇರುತ್ತೇವೆ. ಈಗ, ರಾಂಗ್ ಸೈಡ್‍ ಚಾಲನೆ ಮಾಡುವಾಗ ಪೊಲೀಸರಿಗೆ ಕಂಡಲ್ಲಿ 6 ತಿಂಗಳಿನ ಜೈಲು ವಾಸ ಅನುಭವಿಸಬೇಕಾಗುತ್ತದೆ.

ರಾಂಗ್ ಸೈಡ್ ಡ್ರೈವಿಂಗ್ ಅಭ್ಯಾಸವನ್ನು ನಿಗ್ರಹಿಸಲು, ಪಿಂಪ್ರಿ ಚಿಂಚ್ವಾಡ್ ಪೊಲೀಸರು ಅಂತಹ ಅಪರಾಧಿಗಳ ವಿರುದ್ಧ ಕ್ರಿಮಿನಲ್ ಕೇಸ್ ನೋಂದಾಯಿಸಲು ಪ್ರಾರಂಭಿಸಿದ್ದಾರೆ. ಅವರನ್ನು ಕ್ರಿಮಿನಲ್ ಮೊಕದ್ದಮೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279 ರ ಅಡಿಯಲ್ಲಿ ದಾಖಲಾಗುವುದು. ತಪ್ಪಿತಸ್ಥರೆಂದು ಕಂಡುಬಂದರೆ, ಆ ವ್ಯಕ್ತಿಯನ್ನು ಆರು ತಿಂಗಳ ವರೆಗೆ ಬಂಧಿಸಲಾಗುವುದು ಅಥವಾ ರೂ 1,000 ದಂಡವನ್ನು ವಿದಿಸಲಾಗುವುದು.

ಪುಣೆ ಪೋಲಿಸರು ಕೂಡಾ ರಾಂಗ್ ಸೈಡ್ ಡ್ರೈವಿಂಗ್ ಅಪರಾಧಿಗಳ ವಿರುದ್ಧ ಅದೇ ಕಾನೂನನ್ನು ಅನುಸರಿಸಲು ಯೋಜಿಸುತ್ತಿದೆ. ಪಿಂಪ್ರಿ ಚಿಂಚ್ವಾಡ್ ಪೊಲೀಸರು ಈಗಾಗಲೇ ದ್ವಿಚಕ್ರ ವಾಹನಗಳು ಮತ್ತು ಆಟೋಗಳನ್ನು ಒಳಗೊಂಡಂತೆ 19 ವಾಹನಗಳನ್ನು ಬುಕ್ ಮಾಡಿದ್ದಾರೆ. ಐಪಿಸಿ ಸೆಕ್ಷನ್ 279 ರ ಅಡಿಯಲ್ಲಿ ಅಪರಾಧಿಗಳನ್ನು ಬುಕ್ ಮಾಡಲಾಗಿದೆ ಮತ್ತು ಪೊಲೀಸರು ಶೀಘ್ರದಲ್ಲೇ ಅವರ ವಿರುದ್ಧ ಚಾರ್ಜ್ ಶೀಟ್ ಅನ್ನು ಸಲ್ಲಿಸಲಿದ್ದಾರೆ.

ರಾಂಗ್ ಸೈಡ್‍ ವಾಹನ ಚಾಲನೆಯು ದೇಶದ್ಯಾಂತ ಸಾಮಾನ್ಯವಾಗಿ ಹೋಗಿದೆ. ಸಮಯವನ್ನು ಉಳಿಸಲು ಅಥವಾ ಪ್ರಯಾಣದ ದೂರವನ್ನು ಕಡಿತಗೊಳಿಸಲು ಅನೇಕರು ರಾಂಗ್ ಸೈಡ್‍‍ನಲ್ಲಿ ವಾಹನವನ್ನು ಓಡಿಸುವ ಆಯ್ಕೆಯನ್ನು ಆರಿಸಿಕೊಳ್ಳುತ್ತಾರೆ. ಆದರೆ ರಾಂಗ್ ಸೈಡ್‍‍ನಲ್ಲಿ ವಾಹನ ಚಾಲನೆ ಮಾಡುವ ಮೂಲಕ, ಒಬ್ಬ ವ್ಯಕ್ತಿಯು ತನ್ನ ಮತ್ತು ಇತರರ ಜೀವನವನ್ನು ಅಪಾಯದಲ್ಲಿ ಸಿಲುಕುವ ಹಾಗೆ ಮಾಡುತ್ತಾನೆ.

ಹೆದ್ದಾರಿಗಳಲ್ಲಿ ರಾಂಗ್ ಸೈಡ್‍ನಲ್ಲಿ ಬರುವುದು ಬಹಳಾ ಅಪಾಯಕಾರಿ ಏಕೆಂದರೆ ಎದುರಿಂದ ಬರುವ ವಾಹನ ಅತೀ ವೇಗದಲ್ಲಿ ಬರುತ್ತಿರುತ್ತದೆ. ಇದರಿಂದ ನಿಮ್ಮ ಮತ್ತು ಎದುರಿರುವ ವಾಹನಕ್ಕೂ ಹಾಗು ವಾಹನದಲ್ಲಿರುವವರಿಗು ಅಪಾಯ ತಪ್ಪಿದ್ದಲ್ಲ.

ಇನ್ನು ರಾತ್ರಿಯ ವೇಳೆ ರಾಂಗ್ ಸೈಡ್‍‍ನಲ್ಲಿ ವಾಹನ ಚಾಲಾಯಿಸುವುದರ ಮೂಲಕ ಅಪಘಾತಗಳು ಸಂಭವಿಸಬಹುದು, ಏಕೆಂದರೆ ನೀವು ರಾಂಗ್ ಸೈಡ್‍‍ನಲ್ಲಿ ಹೋಗುತ್ತಿರುವಾಗ ನೀವು ಎದುರಿನ ವಾಹನಕ್ಕೆ ಸಿಗ್ನಲ್ ಕೊಡಲು ಬಳಸುವ ಹೈ ಬೀಮ್ ಲೈಟ್‍‍ಗಳು ಎದುರಿರುವ ವಾಹನದಲ್ಲಿನ ಚಾಲಕನ ಡ್ರೈವಿಂಗ್ ನಿಯಂತ್ರಣವನ್ನು ತಪ್ಪು ದಾರಿಯನ್ನು ಹಿಡುಯುವ ಹಾಗೆ ಮಾಡುತ್ತದೆ.

ಈ ನಿಟ್ಟಿನಲ್ಲಿ ನೀವು ಟ್ರಾಫಿಕ್ ನಿಯಮವನ್ನು ಅನುಸರಿಸಲೇಬೇಕಾಗಿದ್ದು, ರಾಂಗ್ ಸೈಡ್‍‍ನಲ್ಲಿ ವಾಹನ ಚಲಾಯಿಸದಿರಿ. ತಲುಪಬೇಕಾದ ಗಮ್ಯವನ್ನು ಬೇಗ ತಲುಪಲು ಜೀವನದಲ್ಲಾಗಲಿ ಅಥವಾ ರಸ್ತೆಯ ಮೇಲಾಗಲಿ ರಾಂಗ್ ಸೈಡ್‍ನಲ್ಲಿ ಹೋಗುವ ಆಯ್ಕೆಯನ್ನು ಆರಿಸಿಕೊಂಡರೆ ಅಪಾಯ ತಪ್ಪಿದ್ದಲ್ಲ. ರಾಂಗ್ ಸೈಡ್‍‍ನಲ್ಲಿ ವಾಹನ ಚಾಲಾಯಿಸುವವರ ಬಗ್ಗೆ ಪುಣೆ ಪೊಲೀಸರು ತೆಗೆದುಕೊಂಡ ಈ ನಿರ್ಣಯವನ್ನು ನಾವು ಮೆಚ್ಚಲೇಬೇಕು.

ಎಂಪಿವಿ ಕಾರುಗಳ ಬೇಡಿಕೆಯಲ್ಲಿ ಮುನ್ನುಗ್ಗುತ್ತಿರುವ ಹೊಸ ಮಹೀಂದ್ರಾ ಮರಾಜೊ ಕಾರಿನ ಚಿತ್ರಗಳು ಇಲ್ಲಿವೆ ನೋಡಿ

Read more...