ಬಿಎಂಡಬ್ಲ್ಯೂ ಸಂಸ್ಥೆಯು ಇತ್ತೀಚೆಗಷ್ಟೆ ದೇಶಿಯ ಮಾರುಕಟ್ಟೆಗೆ ತಮ್ಮ ಜಿ310ಆರ್ ಮತ್ತು ಜಿ310 ಜಿಎಸ್ ಬೈಕ್ಗಳನ್ನು ಟಿವಿಎಸ್ನ ಭಾಗಸ್ವಾಮ್ಯದಲ್ಲಿ ಬಿಡುಗಡೆಗೊಳಿಸಿದ್ದು, ಈಗಾಗಲೆ ದೇಶದಲ್ಲಿನ ಯುವ ಸಮುದಾಯವನ್ನು ತನ್ನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಿಂದ ತನ್ನತ್ತ ಸೆಳೆದುಕೊಳ್ಳುತ್ತಿದೆ.
ಪ್ರಸ್ಥುತ ಮಾರುಕಟ್ಟೆಯಲ್ಲಿ ಈ ಬೈಕ್ಗಳು ಟಿವಿಎಸ್ ಅಪಾಚೆ 310ಆರ್, ರಾಯಲ್ ಎನ್ಫೀಲ್ಡ್, ಕೆಟಿಎಮ್, ಹೋಂಡಾ ಸಿಬಿಆರ್ ಮತ್ತು ಬಜಾಜ್ ಡಾಮಿನಾರ್ ಬೈಕ್ಗಳಿಗೆ ಪೈಪೋಟಿ ನೀಡುತ್ತಿದ್ದು, ಪ್ರೀಮಿಯಮ್ ಬೈಕ್ಗಳ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ.
ಬಿಎಮ್ಡಬ್ಲ್ಯೂ ಜಿ 310 ಜಿಎಸ್ ಬೈಕ್ ಅನ್ನು ಕೊಂಡ ಗ್ರಾಹಕನೊಬ್ಬ ಮೊದಲನೆಯ ಬಾರಿಗೆ ಬೈಕಿನ ಎಂಜಿನ್ ಆಯಿಲ್ ಅನ್ನು ಬದಲಾಯಿಸಲು ನೀಡಲಾಗಿತ್ತು. ಆದರೆ ಆಯಿಲ್ ಬದಲಾಯಿಸಲು, ಗಾಡಿಯನ್ನು ಕ್ಲೀನ್ ಮಾಡಲು ಮತ್ತು ಇನ್ನಿತರೆ ಉಪಕರಣಗಳನ್ನು ಪರೀಕ್ಷಿಸಲು ರೂ.5000 ವೆಚ್ಚವಾಗಿದೆ.
ಬಿಎಮ್ಡಬ್ಲ್ಯೂ ಜಿ 310 ಜಿಎಸ್ ಬೈಕ್ ಮಾದರಿಯು ರೂ. 3.49 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದು, ಈ ಬೈಕ್ ಬಿಡುಗಡೆಗೊಂಡ 1 ವಾರದಲ್ಲಿಯೆ ಒಂದು ಸಾವಿರಕ್ಕು ಹೆಚ್ಚು ಮಂದಿ ಈ ಬೈಕ್ ಅನ್ನು ಖರೀದಿಸಲಾಗಿದೆ. ಇಷ್ಟು ಹಣ ಕೊಟ್ಟು ಈ ಬೈಕ್ ಅನ್ನು ಖರೀದಿಸಿದರು ಈ ಬೈಕಿನ ಮೈಂಟೆನನ್ಸ್ ಬಲು ದುಬಾರಿ ಎಂದೆ ಹೇಳಬಹುದು.
ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಎರಡು ಬೈಕ್ಗಳು ತಾಂತ್ರಿಕವಾಗಿ ಬೇರೆ ಬೇರೆ ವಿನ್ಯಾಸಗಳನ್ನು ಪಡೆದುಕೊಂಡಿದ್ದರೂ ಒಂದೇ ಮಾದರಿಯ ಎಂಜಿನ್ ಪಡೆದುಕೊಂಡಿವೆ. ಎರಡು ಬೈಕ್ಗಳಲ್ಲೂ 313 ಸಿಸಿ ಇನ್ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದ್ದು, 6-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ 34-ಬಿಎಚ್ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.
ಈ ಮೂಲಕ ಪ್ರತಿ ಗಂಟೆಗೆ 145 ಟಾಪ್ ಸ್ಪೀಡ್ ಹೊಂದಿರುವ ಬಿಎಂಡಬ್ಲ್ಯು ಹೊಸ ಬೈಕ್ಗಳು ಇಂಧನ ದಕ್ಷತೆಯಲ್ಲೂ ಉತ್ತಮವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ಗೆ 30ರಿಂದ 35 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು ಎನ್ನಲಾಗಿದೆ.
ಬಿಎಮ್ಡಬ್ಲ್ಯೂ ಜಿ310ಆರ್ ಬೈಕ್ನ ಬೆಲೆಯಲ್ಲಿ ಹಲವಾರು ಇನ್ನಿತರೆ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ಗಳಿವೆ ಅದರಲ್ಲಿ ಯಮಹಾ ಆರ್3, ಕವಾಸಕಿ ನಿಂಜಾ, ರಾಯಲ್ ಎನ್ಫೀಲ್ಡ್ ಹಿಮಾಲಯನ್, ಕೆಟಿಎಮ್, ಬಜಾಜ್ ಡಾಮಿನಾರ್ ಮತ್ತು ಇನ್ನಿತರೆ ಬೈಕ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಬಿಎಮ್ಡಬ್ಲ್ಯೂ ಸಂಸ್ಥೆಯು ತಮ್ಮ ಕ್ವಾಲಿಟಿ ವಿಷಯದಲ್ಲಿ ಎಲ್ಲರಲ್ಲು ಪ್ರತ್ಯೇಕ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಟಿವಿಎಸ್ನ ಭಾಗಸ್ವಾಮ್ಯದಲ್ಲಿ ಬಿಎಮ್ಡಬ್ಲ್ಯೂ ಬಿಡುಗಡೆಗೊಳಿಸಿದ ಜಿ310ಆರ್ ಬೈಕ್ ಬೆಲೆಯಲ್ಲಿ ಮಾತ್ರವಲ್ಲದೇ ಬೈಕಿನ ಮೈಂಟೈನನ್ಸ್ ಖರ್ಚು ಕೂಡಾ ಅಧಿಕವಾಗಿದ್ದು, ಇದರ ಕುರಿತಾಗಿ ಬಿಎಮ್ಡಬ್ಲ್ಯೂ ಸಂಸ್ಥೆಯು ಒಮ್ಮೆ ಯೋಚನೆ ಮಾಡಬೇಕಿದೆ.