ಬದಲಾವಣೆಯೇ ಜಗತ್ತಿನ ನಿಯಮ; ಯಮಹಾ ಎಲೆಕ್ಟ್ರಿಕ್ ಬೈಕ್

By Nagaraja

ಭವಿಷ್ಯದ ಸಂಚಾರ ವಾಹಕ ಕೇವಲ ನಾಲ್ಕು ಚಕ್ರದ ವಾಹನಗಳಿಗಷ್ಟೇ ಸೀಮಿತವಾಗಿಲ್ಲ. ಪ್ರತಿಷ್ಠಿತ ಟೊಕಿಯೊ ಮೋಟಾರ್ ಶೋದಲ್ಲಿ ಇನ್ನೊಂದು ವಿದ್ಯುತ್ ಚಾಲಿತ ವಾಹನ ಸಹ ಭರ್ಜರಿ ಅನಾವರಣ ಕಂಡಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಹೌದು, ಜಪಾನ್ ಮೂಲದವರೇ ಆಗಿರುವ ಯಮಹಾ ತವರೂರಿನಲ್ಲಿ ನಡೆದ ಟೊಕಿಯೊ ಮೋಟಾರ್ ಶೋದಲ್ಲಿ ಪಿಇಎಸ್1 ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಕಾನ್ಸ್ಪೆಪ್ಟ್ ಪ್ರದರ್ಶಿಸಿದೆ. ಇದು ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಂಡಿರಲಿದೆ.

ಯಮಹಾ ಪಿಇಎಸ್1 ಎಲೆಕ್ಟ್ರಿಕ್ ಮೋಟಾರು ಸೈಕಲ್

ಯಮಹಾ ಪಿಇಎಸ್1 ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡಲಿದೆ. ಬದಲಾಯಿಸಬಹುದಾದ ಈ ಬ್ಯಾಟರಿ ಪ್ಯಾಕ್, ಯಮಹಾ ಸ್ಮಾರ್ಟ್ ಪವರ್ ಮೊಡ್ಯೂಲ್ ಎಂದು ಹೆಸರಿಸಲ್ಪಡಲಿದೆ.

ಯಮಹಾ ಪಿಇಎಸ್1 ಎಲೆಕ್ಟ್ರಿಕ್ ಮೋಟಾರು ಸೈಕಲ್

ನೂತನ ಯಮಹಾ ಪಿಇಎಸ್1 ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಯಮಹಾ ಪಿಇಎಸ್1 ಎಲೆಕ್ಟ್ರಿಕ್ ಮೋಟಾರು ಸೈಕಲ್

ಇದು ಮೊನೊಕಾಕ್ ವಿನ್ಯಾಸ ಪಡೆದುಕೊಂಡಿದ್ದು, ಭಾರ ಕಡಿಮೆ ಮಾಡಲು ನೆರವಾಗಿದೆ.

ಯಮಹಾ ಪಿಇಎಸ್1 ಎಲೆಕ್ಟ್ರಿಕ್ ಮೋಟಾರು ಸೈಕಲ್

ಈ ಮೊದಲೇ ಸೂಚಿಸಿರುವಂತೆಯೇ ಒಂದೇ ಫ್ರೇಮ್‌ನ ಮೊನೊಕಾಕ್ ವಿನ್ಯಾಸ ಚಾಲಕರಿಗೆ ಉತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ.

ಯಮಹಾ ಪಿಇಎಸ್1 ಎಲೆಕ್ಟ್ರಿಕ್ ಮೋಟಾರು ಸೈಕಲ್

ಇದರ ಟ್ರಾನ್ಸ್‌ಮಿಷನ್ ಇನ್ನೊಂದು ಪ್ರಮುಖ ವೈಶಿಷ್ಯ್ಟವಾಗಿರಲಿದೆ. ಇತರ ಎಲೆಕ್ಟ್ರಿಕ್ ವಾಹನಗಳಿಗಿಂತಲೂ ವಿಭಿನ್ನವಾಗಿ ಇದು ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ತಂತ್ರಜ್ಞಾನ ಪಡೆದುಕೊಂಡಿದೆ.

ಯಮಹಾ ಪಿಇಎಸ್1 ಎಲೆಕ್ಟ್ರಿಕ್ ಮೋಟಾರು ಸೈಕಲ್

ಇನ್ನೊಂದು ವೈಶಿಷ್ಟ್ಯವೆಂದರೆ ಇದರ ಮಾಹಿತಿ ಸಿಸ್ಟಂಗೆ ಸ್ಮಾರ್ಟ್ ಫೋನ್ ಸಂಪರ್ಕ ಸಾಧಿಸಬಹುದಾಗಿದೆ. ಹಾಗೆಯೇ ಮಾಹಿತಿ ಸಿಸ್ಟಂ ಪರದೆ ಮೇಲೆ ಮಾಹಿತಿಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

Most Read Articles

Kannada
English summary
Yamaha PES1 Electric Motorcycle Concept Displayed At Tokyo Motor Show
Story first published: Monday, November 25, 2013, 12:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X