ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಹತ್ತಾರು ವಿಶೇಷತೆಗಳೊಂದಿಗೆ ಅಭಿವೃದ್ಧಿಗೊಂಡಿರುವ 2018ರ ಸ್ಕೌಟ್ ಬಾಬರ್ ಮಾದರಿಯ ಮೊದಲ ರೋಡ್ ಟೆಸ್ಟ್ ವಿಮರ್ಶೆಯ ಮಾಹಿತಿ ಇಲ್ಲಿದೆ.

By Praveen Sannamani

1930ರಿಂದಲೂ ಜಾಗತಿಕ ಆಟೋ ಉದ್ಯಮದಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಅಮೆರಿಕದ ಜನಪ್ರಿಯ ಇಂಡಿಯನ್‌ ಮೋಟಾರ್ ಸೈಕಲ್ ಸಂಸ್ಥೆಯು ಸದ್ಯ ಭಾರತದಲ್ಲಿ ಸ್ಕೌಟ್‌ ಬಾಬರ್ ಕ್ರೂಸರ್ ಬೈಕ್ ಸರಣಿಗಳೊಂದಿಗೆ ಸದ್ದು ಮಾಡುತ್ತಿದ್ದು, ಹತ್ತಾರು ವಿಶೇಷತೆಗಳೊಂದಿಗೆ ಅಭಿವೃದ್ಧಿಗೊಂಡಿರುವ 2018ರ ಸ್ಕೌಟ್ ಬಾಬರ್ ಮಾದರಿಯ ಮೊದಲ ರೋಡ್ ಟೆಸ್ಟ್ ವಿಮರ್ಶೆಯ ಮಾಹಿತಿ ಇಲ್ಲಿದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಆರಂಭದ ದಿನಗಳಲ್ಲಿ ಬಾಬ್ ಜಾಬ್ ಎನ್ನುವ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ ಸ್ಕೌಟ್ ಬಾಬರ್ ಮೋಟಾರ್ ಸೈಕಲ್‌ಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಹತ್ತಾರು ಬದಲಾವಣೆಗಳೊಂದಿಗೆ ಇಂದಿಗೂ ಬೇಡಿಕೆಯಲ್ಲಿರುವ ಕ್ರೂಸರ್ ಮಾದರಿಯಾಗಿದ್ದು, ಇದೀಗ ಹೊಸ ತಂತ್ರಜ್ಞಾನ, ವಿಶೇಷ ಹೊರ ವಿನ್ಯಾಸಗಳನ್ನು ಹೊತ್ತು ಮಾರುಕಟ್ಟೆಗೆ ಪ್ರವೇಶಿಸಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಮಾರಾಟದಲ್ಲೂ ಉತ್ತಮ ಪ್ರಗತಿ ದಾಖಲಿಸುತ್ತಿದ್ದು, ಆಹ್ವಾನ ಮೇರೆಗೆ ಡ್ರೈವ್ ಸ್ಪಾರ್ಕ್ ತಂಡವು ಹೊಸ ಬೈಕಿನ ಚಾಲನಾ ವಿಮರ್ಶೆ ಕೈಗೊಂಡಿತ್ತು.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಹೊಸತನಗಳ ಸಮ್ಮಿಲನದೊಂದಿಗೆ ಮಿಂಚುತ್ತಿರುವ ಇಂಡಿಯನ್ ಸ್ಕೌಟ್ ಬಾಬರ್ ಮೋಟಾರ್ ಸೈಕಲ್ ಮಾದರಿಗಳು ಈ ಹಿಂದಿನ ಮಾದರಿಗಿಂತಲೂ ಸಾಕಷ್ಟು ಸುಧಾರಣೆ ಕಂಡಿದ್ದು, ಕಸ್ಟಮ್ ಬಿಲ್ಟ್ ನಿರ್ಮಾಣದೊಂದಿದೆ ಮಾಢಿಪೈ ಫ್ರೇಮ್, ಲೋವರ್ಡ್ ಸೀಟುಗಳು, ಶಾರ್ಟ್ ವೀಲ್ಹ್ ಬೇಸ್, ಕಾರ್ಪ್ ಫೆಂಡರ್, ಬಣ್ಣಗಳ ಆಯ್ಕೆಯಲ್ಲಿ ಗುರುತರ ಬದಲಾವಣೆ ಹೊಂದಿವೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಹೀಗಾಗಿ ಮಾರ್ಡನ್ ಪರ್ಫಾಮೆನ್ಸ್ ಬೈಕುಗಳಲ್ಲಿ ತೀವ್ರ ಪೈಪೋಟಿ ನೀಡುವ ಮಾದರಿ ಇದಾಗಿದ್ದು, ಚಾಲನಾ ವೈಖರಿ, ಎಂಜಿನ್ ಕಾರ್ಯಕ್ಷಮತೆ ಐಷಾರಾಮಿ ಬೈಕ್ ಪ್ರಯಣವನ್ನು ಬಯಸುವ ಗ್ರಾಹಕರಿಗೆ ಹೊಸ ಚಾಲನಾ ಅನುಭೂತಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಬೈಕ್‌ ಡಿಸೈನ್ ಮತ್ತು ಸ್ಟೈಲ್

ಭಾರತೀಯ ಮಾರುಕಟ್ಟೆಯಲ್ಲಿ ಬೆಸ್ಟ್ ಕ್ರೂಸರ್ ಮಾದರಿಗಳಲ್ಲಿ ಒಂದಾಗಿರುವ ಇಂಡಿಯನ್ ಸ್ಕೌಟ್ ಬಾಬರ್ ಮೋಟಾರ್ ಸೈಕಲ್‌ಗಳು ಮೂಲತಃ ಸ್ಕೌಟ್ ಮಾದರಿಯ ಗುಣ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಿಂದಾಗಿ ಎರಡು ಮಾದರಿಗಳ ಸಮ್ಮಿಲನವಾಗಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸುತ್ತವೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಇನ್ನು ಇಂಡಿಯನ್ ಸ್ಕೌಟ್ ಬಾಬರ್ ಮೋಟಾರ್ ಸೈಕಲ್‌ಗಳು ಸಾಂಪ್ರದಾಯಿಕವಾಗಿ ಕತ್ತರಿಸಿದ ಮಾದರಿಯಲ್ಲಿರುವ ಫೆಂಡರ್‌ಗಳು ಮತ್ತು ರಿಯರ್ ಫೆಂಡರ್‌ಗಳನ್ನು ಹೊಂದಿದ್ದು, ಇಂಡಿಯನ್ ಸ್ಕೌಟ್ ಮಾದರಿಯಿಂದ ಹೊಸ ವಿನ್ಯಾಸಗಳನ್ನು ಎರವಲು ಪಡೆದುಕೊಂಡಿದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಆದ್ರೆ, ತಳ ವಿನ್ಯಾಸದ ರಿಯರ್ ಸಸ್ಪೆಸ್ಷೆನ್, ಸ್ಟ್ರೀಟ್ ಟ್ರ್ಯಾಕರ್ ಹ್ಯಾಂಡಲ್‌ಬಾರ್‌ಗಳು ಚಾಲನೆಗೆ ಕೊಂಚ ಕಷ್ಟಕರ ಎನ್ನಬಹುದಾಗಿದ್ದು, ಇವು ಓರೆಯಾಗಿ ಬೈಕ್ ಸವಾರಿ ಮಾಡುವಾಗ ಅಡೆತಡೆ ಉಂಟುಮಾಡುವ ಅವಕಾಶವಿದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಇನ್ನು ಮ್ಯಾಟ್ ಕಪ್ಪು ಥೀಮ್‌ನೊಂದಿಗೆ ಸಿದ್ದಗೊಂಡಿರುವ ಸ್ಕೌಟ್ ಬಾಬರ್ ಮೋಟಾರ್ ಸೈಕಲ್‌ಗಳು ಮೇಲೆ ಹೇಳಿದ ಹಾಗೇ ವಿನ್ಯಾಸದಲ್ಲಿ ಗುರುತರ ಬದಲಾವಣೆ ಹೊಂದಿದ್ದು, ಇಂಡಿಯನ್ ಸಂಸ್ಥೆಯ ಬ್ಯಾಡ್ಜ್‌ಗಳು ಫ್ಯೂಲ್ ಟ್ಯಾಂಕ್‌ಗಳ ಮೇಲೆ ಹೊಸ ವಿನ್ಯಾಸಗಳೊಂದಿಗೆ ಸೇರಿಸಲಾಗಿದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಇದಲ್ಲದೇ ಸ್ಕೌಟ್ ಮೋಟಾರ್ ಸೈಕಲ್ ಮಾದರಿಯಲ್ಲೇ ಸ್ಕೌಟ್ ಬಾಬರ್ ಮೋಟಾರ್ ಸೈಕಲ್ ಮಾದರಿಗಳಲ್ಲಿ ಅಕ್ರಣಕಾರಿ ಸ್ಟೈಲಿಶ್ ಮುಂದುವರಿಸಲಾಗಿದ್ದು, ಎದ್ದು ಕಾಣುವ ಚಕ್ರಗಳು, ಹಾಲೋಜೆನ್ ಬಲ್ಪ್, ಟರ್ನ್ ಸಿಗ್ನಲ್ ಸೂಚಕಗಳು, ಟೈಲ್ ದೀಪಗಳು, ಬ್ರೇಕ್ ಲೈಟ್‌ಗಳನ್ನು ಜೋಡಿಸಲಾಗಿದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಜೊತೆಗೆ ಅನಲಾಗ್ ಡಿಜಿಟಲ್ ಸ್ಪೀಡೋಮೀಟರ್ ಅನ್ನು ಸ್ಕೌಟ್ ಬೈಕಿನಂತೆ ಅದೇ ಮಾದರಿಯನ್ನು ಇಲ್ಲೂ ಮುಂದುವರಿಸಲಾಗಿದ್ದು, ವಿವಿಧ ಮಾಹಿತಿಗಳನ್ನು ಒಂದೇ ಸೂರಿನಡಿ ನೀಡಬಲ್ಲ ಪರದೆಯಲ್ಲಿ ಟೈಮ್, ಎಂಜಿನ್ ತಾಪಾಮಾನ, ಎಂಜಿನ್ ವೇಗದ ಬಗೆಗೆ ಮಾಹಿತಿ ನೀಡುತ್ತದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಇಲ್ಲಿ ಪ್ರಮುಖವಾಗಿ ಕ್ರೂಸರ್ ಬೈಕ್ ಪ್ರಿಯರನ್ನು ಗಮನಸೆಳೆಯುವ ಪ್ರಮುಖ ಅಂಶ ಅಂದ್ರೆ, ಬೈಕಿನ ಫ್ಯೂಲ್ ಟ್ಯಾಂಕ್ ಮೇಲೆ ಲಗತ್ತಿಸಿರುವ ಇಂಡಿಯನ್ ಸಂಸ್ಥೆಯ ಬ್ಯಾಡ್ಜ್‌ಗಳು. ಇವು ಬೈಕಿಗೆ ಹೊಸ ಲುಕ್ ನೀಡಿದ್ದು, ಇದಕ್ಕೆ ಕಾರಣ ಈ ಹಿಂದಿನ ಬೈಕುಗಳಿಂತ ಹೊಸ ಬೈಕಿನಲ್ಲಿ ನೀಡಲಾಗಿರುವ ಲೊಗೊಗಳು ಶೇ.30ರಷ್ಟು ಹೆಚ್ಚುವರಿ ಬದಲಾವಣೆ ಹೊಂದಿವೆ ಎನ್ನಲಾಗಿದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಬೈಕ್ ಎಂಜಿನ್ ಸಾಮರ್ಥ್ಯ

ಸೂಪರ್ ಬೈಕ್‌ಗಳಲ್ಲಿ ಅತಿ ಹೆಚ್ಚು ಆಕರ್ಷಣೆ ಹೊಂದಿರುವ ಸ್ಕೌಟ್ ಬಾಬರ್ ಮೋಟಾರ್ ಸೈಕಲ್‌ಗಳು ಎಂಜಿನ್ ಸಾಮರ್ಥ್ಯದಲ್ಲೂ ಹಿಂದೆ ಬಿದ್ದಿಲ್ಲ. 1,113 ಸಿಸಿ ವಿ-ಟ್ವಿನ್ ಎಂಜಿನ್ ಹೊಂದಿರುವ ಹೊಸ ಬೈಕ್‌ಗಳು ಮ್ಯಾಟೆ ಬ್ಲ್ಯಾಕ್ ಬಣ್ಣದೊಂದಿಗೆ ಸಿಲ್ಪರ್ ಕ್ರೊಮ್ ಪಡೆದುಕೊಂಡಿವೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಈ ಮೂಲಕ 98.6 ಬಿಎಚ್‌ಪಿ ಮತ್ತು 100ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿರುವ ಸ್ಕೌಟ್ ಬಾಬರ್ ಮೋಟಾರ್ ಸೈಕಲ್‌ಗಳು, ಸುಖಕರ ಚಾಲನಾ ಅನುಭವಕ್ಕಾಗಿ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿರುತ್ತದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಇದರಿಂದಾಗಿ ಐಷಾರಾಮಿ ಬೈಕ್ ಸವಾರರಿಗೆ ಹೊಸ ಚಾಲನಾ ಅನುಭೂತಿ ನೀಡಲಿರುವ ಬಾಬರ್ ಬೈಕ್‌ಗಳು 1,700 ಆರ್‌ಪಿಎಂ ನಲ್ಲಿ ಅತಿ ಹೆಚ್ಚು ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರಿಂದಾಗಿಯೇ ಅತಿ ಕಡಿಮೆ ಅವಧಿಯಲ್ಲಿ ಟಾಪ್ ಸ್ಪೀಡ್ ತಲುಪುವ ಗುಣಲಕ್ಷಣ ಈ ಬೈಕಿನಲ್ಲಿದೆ ಎನ್ನಬಹುದು.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಇದರಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಏನೆಂದರೇ, ಪ್ರತಿಗಂಟೆಗೆ 190 ಕಿಮಿ ಗರಿಷ್ಠ ವೇಗ ಹೊಂದಿರುವ ಸ್ಕೌಟ್ ಬಾಬರ್ ಬೈಕ್‌ಗಳು ಕ್ರೂಸರ್ ವೈಶಿಷ್ಟ್ಯತೆ ಹೊಂದಿದ್ದರು 110ಕಿಮಿ ಮೇಲ್ಪಟ್ಟ ವೇಗದ ಚಾಲನೆ ವೇಳೆ ಕಂಪನ ಅನುಭವ ಉಂಟು ಮಾಡುತ್ತವೆ. ಇದು ಕೆಲವೊಮ್ಮೆ ಬೈಕ್ ಸವಾರಿಗೆ ಕಷ್ಟ ಏನಿಸಬಹುದು.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಒಟ್ಟಾರೆ ಬೈಕಿನ ವಿನ್ಯಾಸಗಳು ಎಲ್ಲಾ ಮಾದರಿಯ ಬೈಕ್ ಸವಾರರಿಗೂ ಇಷ್ಟವಾಗದೇ ಇದ್ದರೂ ಧೀರ್ಘಕಾಲದ ಸವಾರಿಗೆ ಅನುಕೂಲವಾಗಿದೆ ಎನ್ನಬುಹುದು. ಜೊತೆಗೆ ಆಪ್ ಶೂಟ್ ಬಾಬರ್ ಡಿಸೈನ್‌ಗಳು ಬೈಕ್ ಸವಾರಿಯನ್ನು ಮತ್ತಷ್ಟು ರೋಚಕವಾಗಿಸುತ್ತವೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಬೈಕಿನ ತೂಕ

ಆಧುನಿಕ ಕ್ರೂಸರ್ ಮಾದರಿಯಾಗಿರುವ ಸ್ಕೌಟ್ ಬಾಬರ್ ಮೋಟಾರ್ ಸೈಕಲ್‌ಗಳು ಸುಸಜ್ಜಿತ ಕಾರ್ಟ್ರಿಜ್ ಫೋರ್ಕ್ ಫ್ರಂಟ್ ಸಸ್ಪೆನ್ಷನ್‌ನೊಂದಿಗೆ 245 ಕೆಜಿ ತೂಕವನ್ನು ಹೊಂದಿದ್ದು, ಅದು ರೈಡರ್‌ಗಳಿಗೆ ಆಕ್ರಮಣಕಾರಿ ಭಾವನೆಯನ್ನು ನೀಡುತ್ತದೆ. ಆದರೂ ಬೈಕ್ ಚಾಲನೆ ಸಮಯದಲ್ಲಿ ಹಗುರವಾದ ಮತ್ತು ಸಮತೋಲನ ಸಿಗುತ್ತದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಜೊತಗೆ ಸಸ್ಪೆಸ್ಷನ್ ಮತ್ತು ವಿಶಾಲವಾದ ಟೈರ್‌ಗಳು ಒಟ್ಟಾಗಿ ಸವಾರಿ ಗುಣಮಟ್ಟವನ್ನು ಮತ್ತು ಭಾರತೀಯ ಮೋಟಾರ್ ‌ಕಾರ್ಪ್ ಬಾಬರ್‌ನ ಸ್ಥಿರತೆಯನ್ನು ಸುಧಾರಿಸುತ್ತದೆ ಎನ್ನಬಹುದು. ಆದ್ರೆ, ಗ್ರೌಂಡ್ ಕ್ಲಿಯರೆನ್ಸ್‌ನಲ್ಲಿ ಹಿಂದಿ ಬಿದ್ದಿರುವ ಸ್ಕೌಟ್ ಬಾಬರ್‌ಗಳು ತಗ್ಗುದಿಣ್ಣೆ ಪ್ರದೇಶಗಳಲ್ಲಿ ಬೈಕ್ ಚಾಲನೆ ಕಷ್ಟ ಸಾಧ್ಯ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಬ್ರೇಕಿಂಗ್ ಸಿಸ್ಟಂ

ಭಾರೀ ಪ್ರಮಾಣದ ಎಂಜಿನ್ ಸಾಮರ್ಥ್ಯ ಹೊಂದಿರುವ ಸ್ಕೌಟ್ ಬಾಬರ್ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಹಾಗೂ ಡ್ಯುಯಲ್ ಚಾಲೆನ್ ಎಬಿಎಸ್ ಸೇರಿದಂತೆ ಹೊಸ ಸುರಕ್ಷಾ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಬೈಕ್‌ಗಳ ಬೆಲೆ(ಎಕ್ಸ್ ಶೋರಂ ಪ್ರಕಾರ)

ಇಂಡಿಯನ್ ಬೈಕ್ ಉತ್ಪನ್ನಗಳಲ್ಲಿ ಮಧ್ಯಮ ಕ್ರಮಾಂಕದ ಬೆಲೆಯಲ್ಲಿ ಲಭ್ಯವಿರುವ ಸ್ಕೌಟ್ ಬಾಬರ್ ಬೈಕ್‌ಗಳು ಮುಂಬೈ ಎಕ್ಸ್‌ಶೋರಂ ಪ್ರಕಾರ ರೂ. 11,99,000ಕ್ಕೆ ಖರೀದಿಗೆ ಲಭ್ಯವಿದ್ದು, ದುಬಾರಿಯಾದ್ರು ಬೈಕಿನ ಒದಗಿಸಲಾಗಿರುವ ಎಂಜಿನ್ ಮತ್ತು ಬೈಕಿನಲ್ಲಿ ಜೋಡಿಸಲಾಗಿರುವ ಐಷಾರಾಮಿ ವಿನ್ಯಾಸಕ್ಕೆ ಇದು ಸರಿಸಮನಾಗಿರಲಿದೆ.

ರೋಡ್ ಟೆಸ್ಟ್ ರಿವ್ಯೂ- ಕ್ರೂಸರ್ ಮಾದರಿಯಾದ ಇಂಡಿಯನ್ ಸ್ಕೌಟ್ ಬಾಬರ್ ವಿಶೇಷತೆ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್‌ಸನ್ ಸ್ಟ್ರೀಟ್ ಬಾಬ್‌ ಮತ್ತು ಟ್ರಯಂಫ್ ಬೊನ್ನೆವಿಲ್ಲೆ ಬಾಬರ್ ಕ್ರೂಸರ್ ಆವೃತ್ತಿಗಳಿಗೆ ಪೈಪೋಟಿ ನೀಡಬಲ್ಲ ಏಕೈಕ ಮಾದರಿಯಾಗಿರುವ ಸ್ಕೌಟ್ ಬಾಬರ್ ಮೋಟಾರ್ ಸೈಕಲ್‌ಗಳು ದೇಶಿಯವಾಗಿ ಉತ್ತಮ ಬೇಡಿಕೆ ಪಡೆಯುವ ತವಕದಲ್ಲಿದ್ದು, ಮುಂಬರುವ ದಿನಗಳಲ್ಲಿ ಹೊಸ ಬೈಕ್‌ಗಳಿಗೆ ಯಾವ ರೀತಿ ಬೇಡಿಕೆ ಸೃಷ್ಠಿಯಾಗಲಿದೆ ಎನ್ನವುದನ್ನು ಕಾಯ್ದುನೋಡಬೇಕಿದೆ.

Most Read Articles

Kannada
English summary
2018 Indian Motorcycles Scout Bobber Road Test Review.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X