ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ವರ್ಷದ ಹಿಂದೆ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕ್ ಅನ್ನು ಮದ್ರಾಸ್ ಮೋಟಾರ್ ರೇಸ್ ಟ್ರಾಕ್‍‍ನಲ್ಲಿ ಟೆಸ್ಟ್ ಡ್ರೈವ್ ಮಾಡಲಾಗಿತ್ತು. ಆ ಸಮಯದಲ್ಲಿ ಟಿವಿ‍ಎಸ್ ಕಂಪನಿಗೆ 300 ಸಿಸಿಯ ಸೆಗ್‍‍ಮೆಂಟ್ ಹೊಸದಾಗಿತ್ತು. ಈ ಸೆಗ್‍‍ಮೆಂಟಿನಲ್ಲಿ ಆಗ ತಾನೇ ಅಪಾಚೆ ಆರ್‍ಆರ್ 310 ಬೈಕನ್ನು ಬಿಡುಗಡೆಗೊಳಿಸಲಾಗಿತ್ತು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಈ ಮೋಟಾರ್‍‍ಸೈಕಲ್ ಆಕರ್ಷಕವಾಗಿತ್ತು, ಆದರೆ ಟಿವಿ‍ಎಸ್ ಕಂಪನಿಯು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಇದಾದ ನಂತರ ಟಿ‍‍ವಿ‍ಎಸ್ ಕಂಪನಿಯು ಹಲವಾರು ಬೈಕ್‍‍ಗಳನ್ನು ಅಭಿವೃದ್ಧಿಪಡಿಸಿ ರೇಸ್ ಟ್ರಾಕಿನಲ್ಲಿ ಚಾಂಪಿಯನ್‍‍ಶಿಪ್‍‍ನಲ್ಲಿ ಬಳಸುತ್ತಿತ್ತು. ಹೈ ಆಕ್ಟೇನ್ ಫ್ಯೂಯಲ್‍‍ನ ರೇಸಿಂಗ್‍‍ನಲ್ಲಿ ಈ ಮೋಟಾರ್‍‍ಸೈಕಲ್‍‍ಗೆ ಹಲವು ಬದಲಾವಣೆಗಳನ್ನು ಮಾಡಲಾಯಿತು. ಈ ಬದಲಾವಣೆಗಳನ್ನು ರೋಡ್ ಗೋಯಿಂಗ್ ಬೈಕ್‍‍ಗಳಲ್ಲೂ ಅಳವಡಿಸಲಾಯಿತು. ಟಿವಿ‍ಎಸ್ ಕಂಪನಿಯು ಇತ್ತೀಚಿಗೆ ಈ ಬೈಕಿನಲ್ಲಿ ಇ‍‍ಸಿಯು ಅಪ್‍‍ಡೇಟ್ ಅಳವಡಿಸಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಟಿವಿ‍ಎಸ್ ಹೊಸ ಆವೃತ್ತಿಯಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಸ್ಲಿಪರ್ ಕ್ಲಚ್ ಹೊಂದಿರುವ ಹೊಸ ಬಣ್ಣದಲ್ಲಿರುವ ಹೊಸ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕ್ ಅನ್ನು 2019ರ ಮೇ 28ರಂದು ಬಿಡುಗಡೆಗೊಳಿಸಲಾಯಿತು. ಈ ಬೈಕಿನ ಬೆಲೆಯು ರೂ.2.27 ಲಕ್ಷಗಳಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ರೇಸ್ ಟ್ಯೂನ್ ಸ್ಲಿಪರ್ ಕ್ಲಚ್ ಹೊಂದಿರುವ ಈ ಹೊಸ ಬೈಕ್ ಅನ್ನು ಮದ್ರಾಸ್ ಮೋಟಾರ್ ರೇಸ್ ಟ್ರಾಕ್‍‍ನಲ್ಲಿ ಚಲಾಯಿಸಲಾಯಿತು. ಅದರ ಬಗ್ಗೆ ರಿವ್ಯೂ ಇಲ್ಲಿದೆ.

ಡಿಸೈನ್ ಮತ್ತು ಸ್ಟೈಲಿಂಗ್

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆಯಾದಾಗಿನಿಂದ ಈ ಸೆಗ್‍‍ಮೆಂಟಿನಲ್ಲಿ ಮಾತ್ರವಲ್ಲದೇ, ಬೇರೆ ಸೆಗ್‍‍ಮೆಂಟಿನಲ್ಲೂ ಹೆಚ್ಚು ಸ್ಟೈಲಿಶ್ ಆದ ಬೈಕ್ ಆಗಿದೆ. 2016ರ ಇಂಡಿಯನ್ ಆಟೋ ಎಕ್ಸ್ ಪೋ ದಲ್ಲಿ ಅನಾವರಣಗೊಳಿಸಲಾದ ಟಿವಿ‍ಎಸ್ ಅಕುಲಾದ ಬೈಕ್ ಹೆಚ್ಚು ಆಕರ್ಷಕವಾಗಿತ್ತು. ಶಾರ್ಕ್ ಮಾದರಿಯಲ್ಲಿರುವ ಅಪಾಚೆ ಆರ್‍ಆರ್ 310 ಬೈಕಿನ ಡಿಸೈನ್ ಅನ್ನು ಅಕುಲಾ ಕಾನ್ಸೆಪ್ಟ್ ನಿಂದ ಪಡೆಯಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಇದರಲ್ಲಿರುವ ಗಮನ ಸೆಳೆಯುವ ಅಂಶವೆಂದರೆ ಮುಂಭಾಗದಲ್ಲಿರುವ ಬೈ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಯೂನಿಟ್, ಅದರ ಬಲಭಾಗದ ಕೆಳಗಡೆ ಏರ್ ಇನ್‍‍ಟೇಕ್‍‍ಗಳಿವೆ. ಮಾರ್ಚ್ 2019ರಲ್ಲಿ ಮಾಡಲಾದ ಅಪ್‍‍ಡೇಟ್‍‍ನಲ್ಲಿ ಹೊಸ ವೈಸರ್ ಅನ್ನು ಟಿವಿ‍ಎಸ್ ಕಂಪನಿಯು ಏರೋಡೈನಾಮಿಕ್ ಎಂಬುದಾಗಿ ತಿಳಿಸುತ್ತದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಅಪಾಚೆ ಆರ್‍ಆರ್ 310 ಬೈಕ್ ಟಿವಿ‍ಎಸ್ ಕಂಪನಿಯಿಂದ ಬಿಡುಗಡೆಯಾದ ಮೊದಲ ಫುಲ್ ಫೇರ್ ಮೋಟಾರ್‍‍ಸೈಕಲ್ ಆಗಿದೆ. ಇದು ಕೂಲಿಂಗ್ ಅನ್ನು ಹೆಚ್ಚಿಸುತ್ತದೆ. ಹಿಂಭಾಗವು ಶಾರ್ಪ್ ರೇಕ್‍‍ನಂತಿದ್ದು, ಕಡಿಮೆ ಡಿಸೈನ್‍‍ಗಳನ್ನು ಹೊಂದಿದೆ. ಇದರಲ್ಲಿರುವ ಟೇಲ್ ಲ್ಯಾಂಪ್ ವಿಭಿನ್ನವಾಗಿದ್ದು, ಎದ್ದು ಕಾಣುತ್ತದೆ. ಬೈಕಿನ ಮೇಲಿರುವ ಸ್ಟ್ರೈಪ್‍‍ಗಳು ಹೊಸ ವಿನ್ಯಾಸವನ್ನು ಹೊಂದಿವೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕಿನಲ್ಲಿ ಲಿಕ್ವಿಡ್ ಕೂಲ್‍‍ನ 312 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಇದೆ. ಇದು ಗರಿಷ್ಟವಾದ 33.53 ಬಿ‍‍ಹೆಚ್‍‍ಪಿಯನ್ನು 9,700 ಆರ್‍‍ಪಿ‍ಎಂನಲ್ಲಿ ಹಾಗೂ 27.3 ಎನ್‍ಎಂ ಟಾರ್ಕ್ ಅನ್ನು 7,700 ಆರ್‍‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಹಿಂಭಾಗದಲ್ಲಿರುವ ವ್ಹೀಲ್ ಅನ್ನು 6 ಸ್ಪೀಡಿನ ಗೇರ್‍‍ಬಾಕ್ಸ್ ಚಲಾಯಿಸುತ್ತದೆ, ಇದಕ್ಕೆ ಸ್ಲಿಪರ್ ಕ್ಲಚ್ ಸಹಾಯ ಮಾಡುತ್ತದೆ. 0-100 ಕಿ.ಮೀ ಆಕ್ಸೆಲೆರೇಷನ್ ಅನ್ನು 7.17 ಸೆಕೆಂಡುಗಳಲ್ಲಿ ಕ್ರಮಿಸಿದರೆ, ಈ ಬೈಕಿನ ಟಾಪ್ ಸ್ಪೀಡ್ 160 ಕಿ.ಮೀ ಆಗಿದೆ. ರಿವರ್ಸ್ ಇಂಕ್ಲೈನ್ ಎಂಜಿನ್ ಹೊಂದಿದ್ದು, ಪರ್ಫಾಮೆನ್ಸ್ ಹಾಗೂ ಥ್ರಾಟಲ್ ರೆಸ್ಪಾನ್ಸ್ ನಿಂದಾಗಿ ಗಮನ ಸೆಳೆಯುತ್ತದೆ. ಹೊಸ ಇ‍‍ಸಿ‍‍ಯುನಲ್ಲಿ ಫೈನ್ ಟ್ಯೂನ್ ಮಾಡಿರುವ ಕಾರಣಕ್ಕೆ, ಎಂಜಿನ್‍‍ನ ಕಾರ್ಯಕ್ಷಮತೆ ಹೆಚ್ಚಿದೆ. ಟಿವಿ‍ಎಸ್ ಕಂಪನಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೋಟಾರ್‍‍ಸೈಕಲ್‍‍ನಲ್ಲಿ ರೇಸ್ ಟ್ಯೂನ್ ಸ್ಲಿಪರ್ ಕ್ಲಚ್ ಅನ್ನು ಅಳವಡಿಸಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಈ ಅಪ್‍‍ಡೇಟ್ ಪರೀಕ್ಷಿಸಲು ಬಯಸಿದ ಕಾರಣ ನಾವು ಮದ್ರಾಸ್ ಮೋಟಾರ್ ರೇಸ್ ಟ್ರಾಕ್ ಅನ್ನು ಆಯ್ದುಕೊಳ್ಳಲಾಯಿತು. ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಿದ್ದ ಕಾರಣ, ನಾವು ಲೆದರ್ ಸೂಟ್ ಧರಿಸಿ, 3.7 ಕಿ.ಮೀ ಉದ್ದದ ಟ್ರಾಕ್‍‍ಗೆ ಕಾಲಿಟ್ಟೆವು. ಎಂದಿನಂತೆ ಥ್ರಾಟಲ್‍‍ನ ರೆಸ್ಪಾನ್ಸ್ ಹಾಗೂ ಎಕ್ಸಾಸ್ಟ್ ನಮ್ಮ ಗಮನಸೆಳೆದಿತ್ತು. ನಮ್ಮ ಅನಿಸಿಕೆಯ ಪ್ರಕಾರ ಇದರಲ್ಲಿರುವ ಎಂಜಿನ್ ಫುಲ್ ಥ್ರಾಟಲ್‍‍ನಿಂದಾಗಿ ಹೆಚ್ಚು ಸದ್ದು ಮಾಡುವುದು ಮತ್ತೊಮ್ಮೆ ಸಾಬೀತಾಯಿತು. ಇದರ ಬಗ್ಗೆ ಶುರುವಿನಿಂದಲೇ ತಿಳಿಯಿತು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಈ ಮಾದರಿಯಲ್ಲಿರುವ ಸ್ಲಿಪರ್ ಕ್ಲಚ್‍‍ನಲ್ಲಿ ಅಸಿಸ್ಟ್ ಫಂಕ್ಷನ್ ಸಹ ಇದೆ. ಇದರ ಭಾಗವಾಗಿ, ಈ ಬೈಕಿನಲ್ಲಿ ಹೆಚ್ಚುವರಿಯಾದ ಕ್ಯಾಮ್ ಕ್ಲಚ್‍‍ನ ಸೆಂಟರ್‍ ಹಾಗೂ ಪ್ರೆಷರ್ ಪ್ಲೇಟ್‍‍ಗಳನ್ನು ಅಳವಡಿಸಲಾಗಿದೆ. ಟಿ‍‍ವಿ‍ಎಸ್ ಎಂಜಿನಿಯರ್‍‍ಗಳು ಇದರಲ್ಲಿ ಏಳು ಕ್ಲಚ್ ಪ್ಲೇಟ್‍‍ಗಳನ್ನು ಅಳವಡಿಸಿದ್ದಾರೆ. ಮೊದಲಿದ್ದ ಬೈಕಿನಲ್ಲಿ ಎಂಟು ಕ್ಲಚ್ ಪ್ಲೇಟ್‍‍‍ಗಳಿದ್ದವು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಈ ಎರಡನ್ನೂ ಸೇರಿಸಿದಾಗ ಕ್ಲಚ್ ಲೀವರ್‍‍ನಲ್ಲಿ ಮೆದುವಾದ ಅನುಭವವಾಗುತ್ತದೆ. ಟಿವಿ‍ಎಸ್ ಕಂಪನಿಯ ಪ್ರಕಾರ ಕ್ಲಚ್ ಒತ್ತುವ ಎಫರ್ಟ್ ಇದರಿಂದಾಗಿ 20% ನಷ್ಟು ಕಡಿಮೆಯಾಗಿದೆ. ಇದು ಟ್ರಾಕ್‍‍ಗಳಲ್ಲಿ ಬೈಕ್ ಚಲಾಯಿಸುವವರಿಗೆ ಅನುಕೂಲವಾಗಿದೆ, ಕೆಲವೇ ಲ್ಯಾಪ್‍‍ಗಳಲ್ಲಿ ನೂರಾರು ಗೇರ್‍‍ಶಿಫ್ಟ್ ಗಳನ್ನು ಮಾಡುವುದು ತಪ್ಪಲಿದೆ. ಇದರಿಂದಾಗಿ ಟ್ರಾಫಿಕ್ ತುಂಬಿರುವ ರಸ್ತೆಗಳಲ್ಲೂ ಅನುಕೂಲವಾಗಲಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಸ್ಲಿಪರ್ ಕ್ಲಚ್ ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ, ಬೈಕಿನ ಪ್ರತಿಯೊಂದು ಮೂಲೆಯನ್ನು ತಲುಪುತ್ತದೆ. ಇದರಿಂದಾಗಿ ಬೈಕ್ ಅನ್ನು ರೇಸ್‍‍ಟ್ರಾಕ್‍‍ನಲ್ಲಿ ಬೈಕ್ ಚಲಾಯಿಸುವುದು ಆನಂದದಾಯಕವಾಗಿದೆ. 2017ರಲ್ಲಿ ಅಪಾಚೆ ಆರ್‍ಆರ್ 310 ಬೈಕ್ ಅನ್ನು ಬಿಡುಗಡೆ ಮಾಡುವ ಮೊದಲು, ಅಭಿವೃದ್ಧಿಪಡಿಸಿ, ಎಂಎಂ‍ಆರ್‍‍ಟಿಯಲ್ಲಿ ಪರೀಕ್ಷಿಸಲಾಗಿತ್ತು. ಬಿಡುಗಡೆಯ ನಂತರವೂ, ಇದೇ ಟ್ರಾಕ್‍‍ನಲ್ಲಿ ಯಾವುದಾದರೂ ಸುಧಾರಣೆ ಬೇಕೆ ಬೇಡವೇ ಎಂಬುದನ್ನು ತಿಳಿಯಲು ಮತ್ತೆ ಪರೀಕ್ಷಿಸಲಾಗಿತ್ತು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಎಂಎಂಆರ್‍‍ಟಿ ಟಿವಿ‍ಎಸ್ ರೇಸಿಂಗ್‍‍ಗೆ ತವರು ನೆಲದಂತಾಗಿದೆ ಹಾಗೂ ಟಿವಿ‍ಎಸ್ ರೇಸಿಂಗ್‍‍ನ ಅಧಿಕೃತ ಟೆಸ್ಟ್ ಟ್ರಾಕ್ ಆಗಿದೆ. ಟಿವಿ‍ಎಸ್ ಕಂಪನಿಯ ಪ್ರಕಾರ ಕಂಪನಿಯು ಈ ಟ್ರಾಕ್‍‍ನಲ್ಲಿ 200 ಗಂಟೆಗಳಿಗೂ ಹೆಚ್ಚು ಕಾಲ ಸ್ಲಿಪರ್ ಕ್ಲಚ್ ಹೊಂದಿರುವ ಬೈಕ್ ಅನ್ನು ಈ ಟ್ರಾಕ್‍‍ನಲ್ಲಿ ಪರೀಕ್ಷಿಸಲಾಗಿದೆ, ಮೋಟಾರ್‍‍ಸೈಕಲ್ ಚಲಾವಣೆಯ ನಂತರ ಇದು ತಿಳಿದು ಬರುತ್ತದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಹೈ‍‍ಸ್ಪೀಡ್‍‍ನಲ್ಲಿ ಡೌನ್‍‍‍ಶಿಫ್ಟ್ ಮಾಡಿದಾಗ, ಬೈಕ್ ತಿರುವುಗಳಲ್ಲಿದ್ದಾಗ ಬೈಕಿನ ಹಿಂಭಾಗವು ಕುಲುಕಾಡಿ, ಜಿಗಿದಾಡುವಂತಾಗುತ್ತದೆ, ಇದು ವ್ಹೀಲ್ ಸ್ಪೀಡ್ ಹಾಗೂ ಎಂಜಿನ್ ಸ್ಪೀಡ್‍‍ನ ನಡುವೆ ಸರಿಯಾದ ಹೊಂದಾಣಿಕೆಯಿಲ್ಲದಿರುವ ಕಾರಣದಿಂದಾಗುತ್ತದೆ. ಈ ತೊಂದರೆಯು ಸ್ಲಿಪರ್ ಕ್ಲಚ್ ಅನ್ನು ಅಳವಡಿಸಿದ ನಂತರ ಉಂಟಾಗುತ್ತಿದೆ. ತಿರುವುಗಳಲ್ಲಿ ನಿಧಾನವಾಗಿ ಚಲಿಸಿದರೆ, ಹಿಂಭಾಗದಲ್ಲಿ ಯಾವುದೇ ಕುಲುಕಾಟವು ಇರುವುದಿಲ್ಲ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ರೈಡ್ ಹಾಗೂ ಹ್ಯಾಂಡ್ಲಿಂಗ್

ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕ್ ತನ್ನ ಹ್ಯಾಂಡ್ಲಿಂಗ್ ಗಾಗಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಬೈಕಿನಲ್ಲಿದ್ದ ಹ್ಯಾಂಡ್ಲಿಂಗ್ ಮೊದಲೇ ಉತ್ತಮವಾಗಿದ್ದ ಕಾರಣ, ಟಿವಿ‍ಎಸ್ ಕಂಪನಿಯು ಈ ಬೈಕಿನ ಸಸ್ಪೆಂಷನ್‍‍‍ನ ಅಪ್‍‍‍ಡೇಟ್ ಮಾಡಿಲ್ಲ. ಹೊಸ ಅಪಾಚೆ ಆರ್‍ಆರ್ 310 ಬೈಕ್ ಅನ್ನು ರೇಸ್ ಆಧಾರಿತ ಟ್ರೆಲ್ಲಿಸ್ ಫ್ರೇಂನ ಮೇಲೆ ನಿರ್ಮಿಸಲಾಗಿದೆ. ಇದರಲ್ಲಿ ಡೈ ಕಾಸ್ಟ್ ಅಲ್ಯುಮಿನಿಯಂ ಸ್ವಿಂಗ್ ಆರ್ಮ್ ಅಳವಡಿಸಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಈ ಬೈಕಿನಲ್ಲಿ ಅಗೈಲ್ ಪ್ಲಾಟ್‍‍ಫಾರಂ ಒದಗಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ ಅಪ್‍‍ಸೈಡ್ ಡೌನ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಗ್ಯಾಸ್ ಅಸಿಸ್ಟೆಡ್ ಮೊನೊಶಾಕ್ ಅಳವಡಿಸಲಾಗಿದೆ. ಈ ಸಸ್ಪೆಂಷನ್ ಅನ್ನು, ಸಸ್ಪೆಂಷನ್ ಬಗ್ಗೆ ಪರಿಣಿತಿಯನ್ನು ಹೊಂದಿರುವ ಕೆ‍ವೈ‍‍ಬಿಯಿಂದ ಪಡೆದುಕೊಳ್ಳಲಾಗಿದೆ. ಆಚೀಲ್ಸ್ ಹೀಲ್‍‍ನಿಂದಾಗಿ ಮೋಟಾರ್‍‍ಸೈಕಲ್ ಹಿಂಬದಿಯಲ್ಲಿ ತೆಳುವಾಗಿರುವಂತೆ ಭಾಸವಾಗುತ್ತದೆ.

MOST READ: ಬಿಡುಗಡೆಯಾಗಲಿದೆ ಕವಾಸಕಿ ನಿಂಜಾ ಝಡ್‍ಎಕ್ಸ್ 25 ಆರ್

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಈ ಮೊದಲು ಈ ಬೈಕಿನಲ್ಲಿದ್ದ ಹಳೆ ರೀತಿಯ ಕ್ಲಚ್ ಸಿಸ್ಟಂ‍‍ನಿಂದಾಗಿ ವೇಗವಾಗಿ ಬೈಕ್ ಚಲಾಯಿಸಿದಾಗ ತಿರುವು‍ಗಳಲ್ಲಿ ಹೆಚ್ಚು ಕುಲುಕಾಡುತ್ತಿತ್ತು, ಇದರಿಂದಾಗಿ ಕೆಲವು ವೇಳೆ ಪ್ರಾಣಾಪಾಯವಾಗುವ ಸಾಧ್ಯತೆಗಳಿದ್ದವು. ಈ ತೊಂದರೆಯು ಸ್ಲಿಪರ್ ಕ್ಲಚ್‍‍ಗಳನ್ನು ಅಳವಡಿಸಿದ ನಂತರ ನಿವಾರಣೆಯಾಗಿದೆ. ಈಗ ಬೈಕ್ ಅನ್ನು ತಿರುವುಗಳಲ್ಲೂ ಸಹ ಸರಾಗವಾಗಿ ಚಲಾಯಿಸಬಹುದಾಗಿದೆ. ತಿರುವುಗಳಲ್ಲಿ ಈ ಬೈಕ್ ಪಡೆಯುವ ವೇಗವೂ ನಮ್ಮೆಲ್ಲರನ್ನೂ ಚಕಿತಗೊಳಿಸುತ್ತದೆ. ಪ್ರಯಾಣಕ್ಕಾಗಿ ತಯಾರಿಸಿದ್ದ ಈ ಬೈಕ್ ಅನ್ನು ಟೂರಿಂಗ್ ಹಾಗೂ ರೇಸಿಂಗ್‍‍ಗಳಿಗೂ ಸಹ ಬಳಸಲಾಗುತ್ತಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಹೊಸ ಅಪಾಚೆ ಆರ್‍ಆರ್ 310 ಬೈಕಿನ ಮುಂಭಾಗದಲ್ಲಿ 300 ಎಂಎಂನ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂ ನ ಪೆಟಲ್ ಡಿಸ್ಕ್ ಗಳಿವೆ. ಡ್ಯೂಯಲ್ ಚಾನೆಲ್ ಎ‍‍ಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತಿದೆ. ಬ್ರೇಕ್‍‍ಗಳು ಬಲಿಷ್ಟವಾಗಿದ್ದು, ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ. ಈ ಸ್ಲಿಪರ್ ಕ್ಲಚ್‍‍ಗಳನ್ನು ಅಳವಡಿಸಿದ ನಂತರ ಹೊಸ ಅಪಾಚೆ ಆರ್‍ಆರ್ 310 ಬೈಕ್ ಎಲ್ಲಾ ವಿಧಗಳಿಂದಲೂ ಕಂಪ್ಲಿಟ್ ಆಗಿದೆ. ಈ ಬೈಕಿನಲ್ಲಿರುವ ಟಯರ್‍‍ಗಳು ಮಿಚೆಲಿನ್ ಕಂಪನಿಯ ಟಯರ್‍‍ಗಳಾಗಿವೆ, ಇವು ಯಾವುದೇ ಬೈಕಿಗೆ ಹೊಂದಿಕೊಳ್ಳುತ್ತವೆ. ಆದರೂ ಟ್ರಾಕ್‍‍ನ ಎಡ್ಜ್ ಗಳಲ್ಲಿ ಚಲಾಯಿಸಿದಾಗ ಟಯರ್‍‍ಗಳು ಚಿಕ್ಕದಾದವು ಎನಿಸುತ್ತದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಫೀಚರ್‍‍ಗಳು

ಹೊಸ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕಿನಲ್ಲಿ ಹಲವಾರು ಫೀಚರ್‍‍ಗಳಿದ್ದು, ಈ ಸೆಗ್‍‍ಮೆಂಟಿನ ಬೈಕುಗಳಲ್ಲಿ ಮೊದಲ ಬಾರಿಗೆ ಅಳವಡಿಸಲಾಗಿದೆ. ಇದರಲ್ಲಿರುವ ಬೈ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಈ ಸೆಗ್‍‍ಮೆಂಟಿನ ಬೈಕುಗಳಲ್ಲಿ ಮೊದಲ ಬಾರಿಗೆ ಅಳವಡಿಸಲಾಗಿದೆ. ಇದರಲ್ಲಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಲವಾರು ಮಾಹಿತಿಗಳನ್ನು ನೀಡುತ್ತದೆ. ಇದು ಸ್ಪೀಡೊಮೀಟರ್, ಟ್ಯಾಕೋಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್, ದೂರದ ಬಗ್ಗೆ, ಮೈಲೇಜ್ ರೀಡ್ ಔಟ್ ಹಾಗೂ 2 ರೇಸ್ ಟೈಮರ್‍‍ಗಳಿದ್ದು 0 - 60 ಕಿ.ಮೀ ನ ಸ್ಪ್ರಿಂಟ್ ಹಾಗೂ ಲ್ಯಾಪ್ ಟೈಮ್‍‍ಗಳ ಬಗ್ಗೆ ಮಾಹಿತಿ ನೀಡುತ್ತದೆ. ಹೊಸದಾಗಿ ಬಿಡುಗಡೆಗೊಳಿಸಲಾಗಿರುವ ಫಾಂಟಮ್ ಬ್ಲಾಕ್ ಬಣ್ಣದಿಂದ ಹೊಸ ಅಪಾಚೆ ಬೈಕ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಬೈಕಿನ ಮೇಲಿರುವ ಸಿಲ್ವರ್ ಬಣ್ಣದ ರೇಸಿಂಗ್ ಸ್ಟ್ರೈಪ್‍‍ಗಳು ಬೈಕಿನ ಅಂದವನ್ನು ಹೆಚ್ಚಿಸಿವೆ.

MOST READ: ಮಾರಾಟವಾಗದ ಟ್ರಯಂಫ್ ಬೈಕುಗಳ ಮೇಲೆ ಭಾರೀ ರಿಯಾಯಿತಿ

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ತೀರ್ಮಾನ

ಅಪಾಚೆ ಆರ್‍ಆರ್ 310 ಬೈಕ್ ಈ ಮೊದಲೇ ಅದ್ಭುತವಾದ ಬೈಕ್ ಆಗಿತ್ತು. ಇದು ಬೈಕ್ ಪ್ರಿಯರಿಗೆ ಕೈಗೆಟಕುವ ಬೆಲೆಯಲ್ಲೂ ದೊರೆಯುತ್ತಿತ್ತು. ಅಪ್‍‍ಡೇಟ್‍‍ಗಳು ಈ ಬೈಕ್ ಅನ್ನು ಮತ್ತಷ್ಟು ಉತ್ತಮವಾಗಿಸಿವೆ. ಸ್ಲಿಪರ್ ಕ್ಲಚ್‍‍ನ ಜೊತೆಗೆ ಈ ಬೈಕಿನಲ್ಲಿ ಅಳವಡಿಸಲಾಗಿರುವ ಹೊಸ ವೈಸರ್ ಹಾಗೂ ವಿಂಡ್‍‍ಸ್ಕ್ರೀನ್‍‍ಗಳು ಈ ಬೈಕ್ ಅನ್ನು ಅತ್ಯಾಕರ್ಷಕವಾಗಿಸಿವೆ. ಈಗ ಈ ಬೈಕ್ ಸಂಪೂರ್ಣವಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಹೊಸತನದೊಂದಿಗೆ ಬಂದ ಟಿವಿ‍ಎಸ್ ಅಪಾಚೆ ಆರ್‍ಆರ್310

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಅಪಾಚೆ ಆರ್‍ಆರ್ 310 ಬೈಕ್ ಟಿವಿ‍ಎಸ್ ಕಂಪನಿಯ ಅತ್ಯುತ್ತಮವಾದ ಬೈಕುಗಳಲ್ಲಿ ಒಂದಾಗಿತ್ತು. ಟಿವಿ‍ಎಸ್ ಕಂಪನಿಯ ನಿರಂತರವಾದ ಕಾರ್ಯದಿಂದ ಈ ಬೈಕ್ ಅನ್ನು ಅದ್ಭುತವಾಗಿ ಅಪ್ಡೇಟ್ ಮಾಡಿದೆ ಹಾಗೂ ಖರೀದಿದಾರರಲ್ಲಿ ಈ ಬೈಕ್‍‍ನ ಬಗ್ಗೆ ವಿಶ್ವಾಸವನ್ನು ಹೆಚ್ಚಿಸಿದೆ. ಇದರಿಂದಾಗಿ ಈ ಬೈಕಿನ ಮಾರಾಟದಲ್ಲಿ ಮತ್ತಷ್ಟು ಏರಿಕೆಗಳಾಗುವ ಸಾಧ್ಯತೆಗಳಿವೆ.

Most Read Articles

Kannada
English summary
2019 TVS Apache RR 310 First Ride Review — Art Of Perfecting - Read in kannada
Story first published: Wednesday, May 29, 2019, 11:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X