ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ, ಭಾರತದ ಆಟೋ ಮೊಬೈಲ್ ಉದ್ಯಮವು ಸಂಕಷ್ಟವನ್ನು ಎದುರಿಸುತ್ತಿದೆ. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಕಟ್ಟುನಿಟ್ಟಿನ ಲಾಕ್‌ಡೌನ್ ನಂತರ ಮೇ ತಿಂಗಳ ಮಧ್ಯಭಾಗದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಿಸಲಾಯಿತು.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಇದರಿಂದಾಗಿ ಸುಮಾರು ಎರಡು ತಿಂಗಳ ಕಾಲ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದ ಆಟೋ ಮೊಬೈಲ್ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿದವು. ಲಾಕ್‌ಡೌನ್ ನಿಂದಾಗಿ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಬಿಡುಗಡೆಯನ್ನು ಮುಂದೂಡಿದವು. ಆಂಪಿಯರ್ ವೆಹಿಕಲ್ಸ್ ಸಹ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯನ್ನು ಮುಂದೂಡಿತ್ತು.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಲಾಕ್ ಡೌನ್ ವಿನಾಯಿತಿ ಹಿನ್ನೆಲೆಯಲ್ಲಿ ಆಂಪಿಯರ್ ವೆಹಿಕಲ್ಸ್, ತನ್ನ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2020ರ ಜೂನ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಸ್ಕೂಟರ್ ಅನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ಬಿಡುಗಡೆಗೊಳಿಸಿತು.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್, ಆಂಪಿಯರ್ ಕಂಪನಿಯ ಪ್ರಮುಖ ಪ್ರೀಮಿಯಂ ಮಾದರಿಯಾಗಿದ್ದು, ಬಲಶಾಲಿ ಪಫಾರ್ಮೆನ್ಸ್, ಹೆಚ್ಚಿನ ಶ್ರೇಣಿ ಹಾಗೂ ಇನ್ನಿತರ ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಆಂಪಿಯರ್ ಮ್ಯಾಗ್ನಸ್ ಪ್ರೊ ಇ-ಸ್ಕೂಟರ್ ಅನ್ನು ಬೆಂಗಳೂರಿನ ರಸ್ತೆಗಳಲ್ಲಿ ಫಸ್ಟ್ ರೈಡ್ ಮಾಡಲಾಯಿತು. ದೇಶಿಯ ಮಾರುಕಟ್ಟೆಯಲ್ಲಿರುವ ಇನ್ನಿತರ ಪ್ರಮುಖ ಮಾದರಿಗಳಿಗೆ ಪೈಪೋಟಿ ನೀಡಲು ಈ ಸ್ಕೂಟರ್ ನಲ್ಲಿರುವ ಫೀಚರ್ ಗಳೇನು ಎಂಬುದನ್ನು ಈ ರಿವ್ಯೂ ಲೇಖನದಲ್ಲಿ ನೋಡೋಣ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ವಿನ್ಯಾಸ ಹಾಗೂ ಶೈಲಿ

ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್, ಸಾಂಪ್ರದಾಯಿಕ ಮಾದರಿಯ ವಿನ್ಯಾಸವನ್ನು ಹೊಂದಿದೆ. ನೋಡಿದ ತಕ್ಷಣ ಈ ಸ್ಕೂಟರ್ ಐಸಿ-ಎಂಜಿನ್ ಸ್ಕೂಟರಿನಂತೆ ಕಾಣುತ್ತದೆ. ಮ್ಯಾಗ್ನಸ್ ಪ್ರೊ ಸ್ಕೂಟರಿನಲ್ಲಿರುವ ಹಲವಾರು ಅಂಶಗಳು, ಕ್ರೋಮ್ ಫಿನಿಷಿಂಗ್ ಹಾಗೂ ಹೈ ಲೈಟ್ ಗಳು ಈ ಸ್ಕೂಟರಿನ ಆಕರ್ಷಣೆಯನ್ನು ಹೆಚ್ಚಿಸುತ್ತವೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಹೊಸ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರಿನ ಮುಂಭಾಗದ ಕೌಲ್‌ನಲ್ಲಿ ದೊಡ್ಡ ಎಲ್‌ಇಡಿ ಹೆಡ್‌ಲ್ಯಾಂಪ್ ಯುನಿಟ್ ಅಳವಡಿಸಲಾಗಿದೆ. ಮೇಲ್ಭಾಗದಲ್ಲಿ ದಪ್ಪ ಕ್ರೋಮ್ ಸ್ಟ್ರಿಪ್ ಅಳವಡಿಸಲಾಗಿದೆ. ಕೆಳಕ್ಕೆ ಬಂದರೆ ಮ್ಯಾಗ್ನಸ್ ಪ್ರೊ ಮುಂಭಾಗದ ಏಪ್ರನ್ ದೊಡ್ಡ ಗಾತ್ರದ ವಿ-ಶೇಪಿನ ಕ್ರೋಮ್ ಅಂಶ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ದೊಡ್ಡ ಗಾತ್ರದ ಟರ್ನ್ ಇಂಡಿಕೇಟರ್ ಗಳನ್ನು ಇಂಟಿಗ್ರೇಟ್ ಮಾಡಲಾಗಿದೆ. ಸೈಡ್ ಪ್ರೊಫೈಲ್‌ನಲ್ಲಿ ಆಂಪಿಯರ್ ಮ್ಯಾಗ್ನಸ್ ಪ್ರೊ ಕಡಿಮೆ ವಿನ್ಯಾಸದ ಸರಳವಾದ ಸ್ಟೈಲಿಂಗ್ ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಸೈಡ್ ಬಾಡಿ ಪ್ಯಾನಲ್ ಬದಿಯಲ್ಲಿ ಮ್ಯಾಗ್ನಸ್ ಪ್ರೊ ಬ್ಯಾಡ್ಜಿಂಗ್ ನೀಡಲಾಗಿದೆ. ಮುಂಭಾಗದಲ್ಲಿರುವ ಏಪ್ರನ್‌ನ ಬದಿಗಳಲ್ಲಿ ಈ ಸ್ಕೂಟರ್ ಪರಿಸರ ಸ್ನೇಹಿ ಎಂಬುದರ ಸೂಚಕವಾಗಿ ಎಲೆಕ್ಟ್ರಿಕ್ ಸ್ಟಿಕ್ಕರಿಂಗ್ ಗಳನ್ನು ಅಳವಡಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಮ್ಯಾಗ್ನಸ್ ಪ್ರೊ ಒಂದೇ ಸೀಟ್ ಅನ್ನು ಹೊಂದಿದ್ದೆ. ಉದ್ದವಾದ ಫುಟ್‌ಬೋರ್ಡ್‌ ಹೊಂದಿರುವ ಅಗಲವಾದ ಸೀಟ್ ಸವಾರ ಹಾಗೂ ಹಿಂಬದಿಯ ಸವಾರರಿಗೆ ಆರಾಮದಾಯಕ ಭಂಗಿಯನ್ನು ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಸೀಟುಗಳು ಕುಷನ್ ಗಳನ್ನು ಹೊಂದಿದ್ದು, ಸವಾರ ಹಾಗೂ ಹಿಂಬದಿಯ ಸವಾರನಿಗೆ ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡುತ್ತವೆ. ಲಾಂಗ್ ರೈಡ್ ನಲ್ಲೂ ನೆರವಾಗುತ್ತವೆ. ಮ್ಯಾಗ್ನಸ್ ಪ್ರೊನಲ್ಲಿರುವ ಬ್ಯಾಟರಿಗಳನ್ನು ಅಂಡರ್-ಸೀಟ್ ಸ್ಟೋರೇಜ್ ನಲ್ಲಿಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಅಂಡರ್-ಸೀಟ್ ಸ್ಟೋರೇಜ್ ನಲ್ಲಿ ಪೂರ್ಣ ಗಾತ್ರದ ಹೆಲ್ಮೆಟ್‌ ಇಡಲು ಸಾಧ್ಯವಿಲ್ಲ. ಇದರಲ್ಲಿ ಎಲ್ಇಡಿ ಲೈಟ್‌ ಅಳವಡಿಸಲಾಗಿದ್ದು, ಎಲ್ಲಾ ಸಮಯದಲ್ಲೂ ಆನ್ ಮಾಡಲಾಗುತ್ತದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಹಿಂಭಾಗದಲ್ಲಿ ದೊಡ್ಡ ಗ್ರಾಬ್ ರೇಲ್ ಗಳನ್ನು ಸಹ ನೀಡಲಾಗಿದೆ. ಇವುಗಳನ್ನು ಟೇಲ್ ಲ್ಯಾಂಪ್ ಹಾಗೂ ಎರಡೂ ಬದಿಗಳಲ್ಲಿ ಟರ್ನ್ ಇಂಡಿಕೇಟರ್ ಗಳೊಂದಿಗೆ ಸರಳವಾಗಿಡಲಾಗುತ್ತದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಎಂಜಿನ್ ಹಾಗೂ ಪರ್ಫಾಮೆನ್ಸ್

ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 60ವಿ 30 ಎಎಚ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು 1.2 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಜೋಡಿಸಲಾಗಿದೆ, ಮ್ಯಾಗ್ನಸ್ ಪ್ರೊ ಸ್ಕೂಟರ್ ನಲ್ಲಿ ಎಲ್ ಮೋಡ್ ಹಾಗೂ ಹೆಚ್ ಎಂಬ ಎರಡು ರೈಡಿಂಗ್ ಮೋಡ್ ಗಳಿವೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಹೆಚ್ ಮತ್ತು ಎಲ್ ಎಂಬ ಎರಡು ಅಕ್ಷರಗಳನ್ನು ಹ್ಯಾಂಡಲ್ ಬಾರ್ ನಲ್ಲಿ ಅಳವಡಿಸಲಾಗಿದೆ. ಈ ಎರಡು ರೈಡಿಂಗ್ ಮೋಡ್ ಗಳ ನಡುವೆ ಸಾಕಷ್ಟು ವ್ಯತಾಸಗಳಿವೆ. ಎಲ್ ಮೋಡ್‌ನಲ್ಲಿ ಸ್ಕೂಟರ್ ಹೆಚ್ಚಿನ ಪವರ್ ಉತ್ಪಾದಿಸುವುದಿಲ್ಲ. ಪವರ್ ಕಟ್-ಆಫ್ ಮಾಡುವ ಮೊದಲು ಸ್ಕೂಟರಿನ ವೇಗವು ಕಡಿಮೆ ಸೆಟ್ಟಿಂಗ್‌ನಲ್ಲಿ ಗಂಟೆಗೆ 35 ಕಿ.ಮೀ ಗಳಾಗಿರುತ್ತದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಈ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಎಲ್ ಮೋಡ್‌ನಲ್ಲಿ 100 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಸಾಮಾನ್ಯ ರಸ್ತೆಗಳಲ್ಲಿ ಎಲ್ ಮೋಡ್‌ನಲ್ಲಿ 75 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್‌ ಹೈ ಅಥವಾ ಹೆಚ್ ಮೋಡ್‌ನಲ್ಲಿ ಹೆಚ್ಚಿನ ಪವರ್ ಉತ್ಪಾದಿಸುತ್ತದೆ. ಈ ಹೆಚ್ ಮೋಡ್ ನಲ್ಲಿ ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರಿನ ವೇಗವು ಪ್ರತಿ ಗಂಟೆಗೆ 55 ಕಿ.ಮೀಗಳಾಗಿರುತ್ತದೆ, ಈ ಮೋಡ್‌ನಲ್ಲಿ 60 ಕಿ.ಮೀ ಮೈಲೇಜ್ ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಟಾಪ್ ಸ್ಪೀಡ್ ವ್ಯತ್ಯಾಸವನ್ನು ಹೊರತುಪಡಿಸಿ, ಎರಡು ಮೋಡ್ ಗಳ ಪವರ್ ಉತ್ಪಾದನೆಯಲ್ಲಿಯೂ ಸಹ ವ್ಯತ್ಯಾಸಗಳಿವೆ. ಎಲ್ ಮೋಡ್‌ನಲ್ಲಿ ಸ್ಪೀಡ್ ಪಡೆಯುಲು ಕೆಲವು ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಹೆಚ್ ಮೋಡ್‌ನಲ್ಲಿ ತಕ್ಷಣದಲ್ಲಿ ಸ್ಪೀಡ್ ಅನ್ನು ಪಡೆಯುತ್ತದೆ. ಈ ಸ್ಕೂಟರ್ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ವಿಶೇಷವಾಗಿ ಓವರ್‌ಟೇಕ್ ಮಾಡುವಾಗ ಅಥವಾ ಇಳಿಜಾರಿನಲ್ಲಿ ಇಳಿಯುವಾಗ ಹೆಚ್ ಮೋಡ್ ಹೆಚ್ಚು ಸಹಕಾರಿಯಾಗಿದೆ. ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ 150 ಕೆಜಿ ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ 82 ಕೆ.ಜಿ ತೂಕವನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್ ಅತ್ಯಂತ ಹಗುರವಾಗಿದ್ದು, ನಗರದ ದಟ್ಟಣೆಯಲ್ಲಿ ಚಾಲನೆ ಮಾಡಲು ಸುಲಭವಾಗಿದೆ. ಹಗುರವಾಗಿರುವುದರಿಂದ, ಮ್ಯಾಗ್ನಸ್ ಪ್ರೊ ಸ್ಕೂಟರ್ ಅನ್ನು ಸುಲಭವಾಗಿ ಪಾರ್ಕ್ ಮಾಡಬಹುದು.ಸಣ್ಣ ರಸ್ತೆಗಳಲ್ಲಿಯೂ ಯಾವುದೇ ತೊಂದರೆಯಿಲ್ಲದೇ ಸುಲಭವಾಗಿ ಚಲಿಸಬಹುದು.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ 150 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ರಸ್ತೆಯ ಎಲ್ಲಾ ಉಬ್ಬುಗಳು, ಗುಂಡಿಗಳಲ್ಲಿ ಸುಲಭವಾಗಿ ಚಲಾಯಿಸಲು ಸಹಕಾರಿಯಾಗಿದೆ. ಫುಟ್ ಬೋರ್ಡ್ ಸ್ವಲ್ಪ ಮಟ್ಟಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಹ್ಯಾಂಡಲ್‌ಬಾರ್ ಮೊಣಕಾಲುಗಳನ್ನು ಮುಟ್ಟುತ್ತದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಗುಂಡಿ ಹಾಗೂ ಸ್ಪೀಡ್ ಬ್ರೇಕರ್‌ಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರಿನ ಸಸ್ಪೆಂಷನ್ ದುರ್ಬಲವಾಗಿದೆ. ಈ ಸ್ಕೂಟರಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಎರಡೂ ತುದಿಯಲ್ಲಿರುವ 130 ಎಂಎಂ ಡ್ರಮ್ ಬ್ರೇಕ್‌, ಕಂಬೈಂಡ್ ಬ್ರೇಕಿಂಗ್ ಸಿಸ್ಟಂ ಉತ್ತಮವಾಗಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರಿನ ಫೀಚರ್ ಹಾಗೂ ಬಣ್ಣಗಳು

ಎಲೆಕ್ಟ್ರಿಕ್ ಸ್ಕೂಟರ್ ಆಗಿರುವುದರಿಂದ ಮ್ಯಾಗ್ನಸ್ ಪ್ರೊ ಹಲವಾರು ಫೀಚರುಗಳನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್,ರಿಮೋಟ್ ಕೀ, ಬೂಟ್‌ನಲ್ಲಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಆಂಟಿ-ಥೆಫ್ಟ್ ಅಲಾರ್ಮ್, ಲಿಂಪ್-ಹೋಮ್ ಮೋಡ್ ಹಾಗೂ ಫೈಂಡ್-ಮೈ-ಸ್ಕೂಟರ್ ಫೀಚರ್ ಗಳನ್ನು ನೀಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬ್ಲೂಲಿಷ್ ಪೆರಲ್ ವೈಟ್, ಗೋಲ್ಡನ್ ಯೆಲ್ಲೊ, ಮೆಟಾಲಿಕ್ ರೆಡ್ ಹಾಗೂ ಗ್ರ್ಯಾಫೈಟ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸದ್ಯಕ್ಕೆ ಬೆಂಗಳೂರು ನಗರದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಮುಂಬರುವ ತಿಂಗಳುಗಳಲ್ಲಿ ಆಂಪಿಯರ್ ವೆಹಿಕಲ್ಸ್ ಇತರ ನಗರಗಳಲ್ಲಿ ಮ್ಯಾಗ್ನಸ್ ಪ್ರೊ ಅನ್ನು ಬಿಡುಗಡೆಗೊಳಿಸಲಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರಿನ ಬೆಲೆ ಹಾಗೂ ಪ್ರತಿಸ್ಪರ್ಧಿಗಳು

ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಆಂಪಿಯರ್ ಕಂಪನಿಯ ಇತ್ತೀಚಿನ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಎಥರ್ 450, ಬಜಾಜ್ ಚೇತಕ್ ಎಲೆಕ್ಟ್ರಿಕ್ ಹಾಗೂ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಆಂಪಿಯರ್ ಕಂಪನಿಯ ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ರೂ.1 ಲಕ್ಷಕ್ಕಿಂತ ಹೆಚ್ಚಾಗಿದ್ದರೆ, ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.73,990ಗಳಾಗಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್, ಪ್ರೀಮಿಯಂ ಸ್ಕೂಟರ್ ಆಗಿದ್ದರೂ ಜನಸಾಮಾನ್ಯರನ್ನು ಹೆಚ್ಕಿನ ಸಂಖ್ಯೆಯಲ್ಲಿ ಆಕರ್ಷಿಸಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬೇರೆ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ ಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರಸ್ತೆಗಿಳಿದ ಆಂಪಿಯರ್ ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್

ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಸೊಗಸಾದ ವಿನ್ಯಾಸವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಫೀಚರ್, ಹೆಚ್ಚು ಪರ್ಫಾಮೆನ್ಸ್ ನಂತಹ ಗುಣಲಕ್ಷಣಗಳನ್ನು ಹೊಂದಿದೆ.

Most Read Articles

Kannada
English summary
Ampere Magnus pro electric scooter first ride review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X