ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಭಾರತದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹಲವು ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ. ಇದರ ನಡುವೆ ಬೌನ್ಸ್ ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತು.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಬೌನ್ಸ್ ಬೆಂಗಳೂರು ಮೂಲದ ಸ್ಮಾರ್ಟ್ ಮೊಬಿಲಿಟಿ ಸಲ್ಯೂಷನ್ಸ್ ಕಂಪನಿಯಾಗಿದೆ. ಕೆಲವು ಗ್ರಾಹಕರಿಗೆ ಉನ್ನತ-ಮಟ್ಟದ ಐಷಾರಾಮಿ ಮೋಟಾರ್‌ಸೈಕಲ್‌ಗಳನ್ನು ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳು ಸೇರಿದಂತೆ ಪ್ರಯಾಣಿಕರ ಸ್ಕೂಟರ್‌ಗಳನ್ನು ಬಾಡಿಗೆಗೆ ನೀಡುತ್ತಿತ್ತು. ಗ್ರಾಹಕರಿಂದ ಯಾವುದೇ ಠೇವಣಿ ತೆಗೆದುಕೊಳ್ಳದೆ ಬ್ರ್ಯಾಂಡ್ ಇದನ್ನು ಮೊದಲು ಮಾಡಿತು.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ತನ್ನದೇ ಆದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿತು. ಇದೇ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ, ಈ ಮಾದರಿಯು ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ. ಈ ಸ್ಕೂಟರ್ ಅನ್ನು ನಾವು ರೈಡ್ ಮಾಡಿದ್ದೇವೆ. ಈ ಹೊಸ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸ, ಪೀಚರ್ಸ್ ಮತ್ತು ಫರ್ಫಾಮೆನ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ವಿನ್ಯಾಸ

ಹೊಸ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ ಮತ್ತು ರೆಟ್ರೊ ಶೈಲಿಯನ್ನು ಹೊಂದಿದೆ. ಮುಂಭಾಗದಿಂದ ಪ್ರಾರಂಭಿಸಿ, ಇದು ಎಲ್ಇಡಿ ಡಿಆರ್ಎಲ್ ಗಳೊಂದಿಗೆ ವೃತ್ತಾಕಾರದ ಹೆಡ್ ಲ್ಯಾಂಪ್ ಅನ್ನು ಹೊಂದಿದೆ ಮತ್ತು ಅದು ವೃತ್ತಾಕಾರದ ಆಕಾರವನ್ನು ಹೊಂದಿದೆ. ಎರಡು ಪ್ರೊಜೆಕ್ಟರ್ ಯುನನಿಟ್ ಗಳು ಹೆಚ್ಚಿನ ಮತ್ತು ಲೋ ಬೀಮ್ ಗಳನ್ನು ಹೊಂದಿವೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಸ್ಕೂಟರ್ ವಿಶಿಷ್ಟವಾದ ಹ್ಯಾಂಡಲ್‌ಬಾರ್ ಅನ್ನು ಸಹ ಪಡೆಯುತ್ತದೆ ಮತ್ತು ಹೆಡ್‌ಲ್ಯಾಂಪ್ ಕ್ಲಸ್ಟರ್ ಹ್ಯಾಂಡಲ್‌ಬಾರ್‌ಗಳ ಮೇಲ್ಭಾಗದಲ್ಲಿ ಇರುತ್ತದೆ. ಬೌನ್ಸ್ ಇನ್ಫಿನಿಟಿ ಇ1 ಕನಿಷ್ಠ ಬಾಡಿ ಲೈನ್‌ಗಳನ್ನು ಹೊಂದಿದೆ ಮತ್ತು ಅದೇ ಸೈಡ್ ಪ್ಯಾನೆಲ್‌ಗಳಲ್ಲಿ ಕಂಡುಬರುತ್ತದೆ. ಹಿಂಬದಿಯ ಕಡೆಗೆ ಚಲಿಸುವಾಗ, ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ ಮತ್ತು ಟರ್ನ್ ಸಿಗ್ನಲ್ ಇಂಡೀಕೆಟರ್ ಸಹ ಎಲ್ಇಡಿ ಯುನಿಟ್ ಗಳಾಗಿವೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಫೀಚರ್ಸ್

ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ ಅದು ಸ್ಕೂಟರ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಇದು ಟ್ರಿಪ್ ಮೀಟರ್‌ಗಳು, ಬ್ಯಾಟರಿ, ರೇಂಜ್, ಸ್ಪೀಡ್, ಸಮಯ, ಇತ್ಯಾದಿಗಳನ್ನು ಪ್ರದರ್ಶಿಸುತ್ತದೆ. ಇದು ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ ಮತ್ತು ನೀವು ಪ್ರಯಾಣದಲ್ಲಿರುವಾಗ ಕರೆಗಳ ಮಾಹಿತಿಯನ್ನು ಪ್ರದರ್ಶಿಸುತ್ತದೆ

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಈ ಎಲೆಕ್ಟ್ರಿಕ್ ಸ್ಕೂಟರ್ ಡಯಲ್ ದೊಡ್ಡದಾಗಿದೆ ಮತ್ತು ಓದಲು ಸುಲಭವಾಗಿದೆ, ಪ್ರಕಾಶಮಾನವಾದ ಬಿಸಿಲಿನ ದಿನದಲ್ಲಿ ಮತ್ತು ರಾತ್ರಿಯಲ್ಲಿ ನೀವು ಇನ್ನೂ ಉತ್ತಮವಾದ ಓದುವಿಕೆಗಾಗಿ ವೈಟ್ ಬಣ್ಣದ ಬ್ಲ್ಯಾಕ್ರೌಂಡ್ ಲೈಟ್ ಅನ್ನು ಹೊಂದಿದೆ. ಈ ಸ್ಕೂಟರ್ ಸೀಟ್ ಕೆಳಗೆ ಉತ್ತಮ ಸ್ಟೋರೇಂಜ್ ಸ್ಪೇಸ್ ಅನ್ನು ಹ ಪಡೆಯುತ್ತೀರಿ, ಆದರೆ ಪೂರ್ಣ ಗಾತ್ರದ ಹೆಲ್ಮೆಟ್ ಅದರಲ್ಲಿ ಹೊಂದಿಕೆಯಾಗುವುದಿಲ್ಲ. ಬದಲಾಯಿಸಬಹುದಾದ ಬ್ಯಾಟರಿಯನ್ನು ಸಹ ಸೀಟಿನ ಕೆಳಗೆ ಇರಿಸಲಾಗಿದೆ. ಇದಲ್ಲದೆ, ಇದು ಟೈಪ್-ಎ ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಅನ್ನು ಸಹ ಪಡೆಯುತ್ತದೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಮೋಟಾರ್ ಹಾಗೂ ಪರ್ಫಾಮೆನ್ಸ್

ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮೋಟಾರ್ ಬಗ್ಗೆ ಮೊದಲಿಗೆ ಹೇಳುವುದಾದರೆ, ಇದು 2kWh ಬ್ಯಾಟರಿ ಪ್ಯಾಕ್‌ ನೊಂದಿಗೆ 2.2kW ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಈಗ ಪವರ್ ಅಂಕಿಅಂಶಗಳು ಉತ್ತಮವಾಗಿಲ್ಲ, ಆದರೆ ಸ್ಕೂಟರ್ 85 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ಪರಿಭಾಷೆಯಲ್ಲಿ ಅದು ಕೇವಲ ಅದ್ಭುತವಾಗಿದೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮಲ್ಟಿಪಲ್ ರೈಡಿಂಗ್ ಮೋಡ್ ಗಳನ್ನು ಸಹ ಪಡೆಯುತ್ತದೆ. ಇದು ಪವರ್, ಇಕೋ ಮತ್ತು ಡ್ರ್ಯಾಗ್ ಆಗಿದೆ. ಇದರಲ್ಲಿ ಇಕೋ ಮೋಡ್‌ನಲ್ಲಿ 35 ಕಿ.ಮೀ ಮತ್ತು ಪವರ್ ಮೋಡ್‌ನಲ್ಲಿ 65 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ 65 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ,

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಡ್ರ್ಯಾಗ್ ಮೋಡ್ ತುಂಬಾ ಸಹಾಯಕವಾದ ರೈಡಿಂಗ್ ಮೋಡ್ ಆಗಿದೆ ಮತ್ತು ನೀವು ಪಂಕ್ಚರ್ ಹೊಂದಿರುವಾಗ ಇದು ಸೂಕ್ತವಾಗಿ ಬರುತ್ತದೆ. ಆದ್ದರಿಂದ ಡ್ರ್ಯಾಗ್ ಮೋಡ್ ಅನ್ನು ಸಕ್ರಿಯಗೊಳಿಸಿದಾಗ ನೀವು ಸ್ಕೂಟರ್ ಅನ್ನು ಡ್ರ್ಯಾಗ್ ಮಾಡದೆಯೇ 3 ಕಿಮೀ / ಗಂ ವೇಗದಲ್ಲಿ ಸಾಗಬಹುದು.ಚಾರ್ಜಿಂಗ್‌ಗೆ ಸಂಬಂಧಿಸಿದಂತೆ, ಸ್ಕೂಟರ್ ಅನ್ನು ಸಾಮಾನ್ಯ ಚಾರ್ಜರ್‌ನಿಂದ ಸುಮಾರು 5 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಬೌನ್ಸ್ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿದೆ ಮತ್ತು ದೇಶಾದ್ಯಂತ ಅಂತಹ ಕೇಂದ್ರಗಳನ್ನು ಸ್ಥಾಪಿಸುವ ಕೆಲಸ ಮಾಡುತ್ತಿದೆ. ಸ್ವಾಪಿಂಗ್ ಸೌಲಭ್ಯಗಳನ್ನು ಬಳಸಲು, ಗ್ರಾಹಕರು ಸುಮಾರು ರೂ 850 ರ ಮಾಸಿಕ ಚಂದಾದಾರಿಕೆಯನ್ನು ಖರೀದಿಸಬೇಕು. ಬಳಕೆದಾರರು ಹತ್ತಿರದ ಸ್ವಾಪಿಂಗ್ ಸೌಲಭ್ಯಕ್ಕೆ ತೆರಳಬಹುದು. ಅದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ ಯುನಿಟ್ ನೊಂದಿಗೆ ಬದಲಾಯಿಸಬಹುದು ಮತ್ತು ನಂತರ ಸವಾರಿ ಮಾಡಬಹುದು.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಆದರೂ ಅದನ್ನು ವೇಗದ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಿ ಮತ್ತು ಚಾರ್ಜಿಂಗ್ ಸಮಯವು 100 ರಿಂದ 120 ನಿಮಿಷಗಳವರೆಗೆ ಕಡಿಮೆಯಾಗುತ್ತದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಸ್ಕೂಟರ್ ನಿಮಗೆ ಇಕೋ ಮತ್ತು ಪವರ್ ಮೋಡ್‌ನಲ್ಲಿ ಕ್ರಮವಾಗಿ ಸುಮಾರು 65 ಕಿಮೀ ಮತ್ತು 50 ಕಿಮೀ ನೈಜ ರೇಂಜ್ ಅನ್ನು ನೀಡುತ್ತದೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಈ ಸಂಪೂರ್ಣ ಪ್ರಕ್ರಿಯೆಯು ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಒಂದೇ ಬ್ಯಾಟರಿ ಸ್ವಾಪ್‌ಗೆ ನಿಮಗೆ ಕೇವಲ ರೂ,35 ಆಗಿದೆ. ಕಂಪನಿಯು ಹೆಚ್ಚಿನ ರೇಂಜ್ ಫುಟ್‌ಬೋರ್ಡ್ ಅಡಿಯಲ್ಲಿ ದ್ವಿತೀಯ ಬ್ಯಾಟರಿಯನ್ನು ಸೇರಿಸುವ ಸಾಧ್ಯತೆಗಳಿವೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಸೀಟ್ ವಿಶಾಲ ಮತ್ತು ಆರಾಮದಾಯಕವಾಗಿದೆ. ಸೀಟ್ ಮುಂಭಾಗದ ಕಡೆಗೆ, ಸಾಮಾನ್ಯವಾಗಿ ಇರುವುದಕ್ಕಿಂತ ಸ್ವಲ್ಪ ಅಗಲವಾಗಿರುತ್ತದೆ. ಪರಿಣಾಮವಾಗಿ, ಸವಾರರು ತಮ್ಮ ಕಾಲುಗಳನ್ನು ಸ್ವಲ್ಪ ಅಗಲವಾಗಿ ಇಟ್ಟು ಕುಳಿತುಕೊಳ್ಳಬೇಕಾಗುತ್ತದೆ, ಇದು ಸ್ವಲ್ಪ ಅನಾನುಕೂಲವಾಗಿದೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ರೈಡಿಂಗ್ ಗುಣಮಟ್ಟಕ್ಕೆ ಬಂದಾಗ, ವಿಷಯಗಳು ಖಂಡಿತವಾಗಿಯೂ ಉತ್ತಮವಾಗಿರಬಹುದು. ಗಟ್ಟಿಯಾದ ಸಸ್ಪೆಂಕ್ಷನ್ ಸೆಟಪ್‌ನಿಂದಾಗಿ, ಸ್ಕೂಟರ್ ಸವಾರಿ ಮಾಡಲು ತುಂಬಾ ಆರಾಮದಾಯಕವಲ್ಲ. ರಸ್ತೆಗಳಲ್ಲಿ ಸಣ್ಣ ಏರಿಳಿತಗಳನ್ನು ಸಹ ಅನುಭವಿಸಬಹುದು ಮತ್ತು ನೀವು ವೇಗದಲ್ಲಿ ಗುಂಡಿಗೆ ಬಿದ್ದಾಗ ಹೆಚ್ಚಿನ ಅನುಭವವಾಗುತ್ತದೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಈ ಸ್ಕೂಟರ್ ಹ್ಯಾಂಡಲ್‌ಬಾರ್ ಅನ್ನು ರೈಡರ್‌ಗೆ ಬಹಳ ಹತ್ತಿರದಲ್ಲಿ ಇರಿಸಲಾಗಿದೆ ಮತ್ತು ಇದರ ಪರಿಣಾಮವಾಗಿ, ನೀವು ಹ್ಯಾಂಡಲ್‌ಬಾರ್ ಅನ್ನು ಸಂಪೂರ್ಣವಾಗಿ ಬಲಕ್ಕೆ ಅಥವಾ ಎಡಕ್ಕೆ ತಿರುಗಿಸಿದಾಗ ಅದು ನಿಮ್ಮ ಮೊಣಕಾಲುಗಳನ್ನು ತಗಲುತ್ತದೆ. ನೀವು ಎತ್ತರದ ಸವಾರರಾಗಿದ್ದರೆ ಇದು ವಿಶೇಷವಾಗಿ ಸತ್ಯವಾಗಿದೆ. ವೇಗವರ್ಧನೆಯು ಕ್ರಮೇಣ ಮತ್ತು ಮೃದುವಾಗಿರುತ್ತದೆ, ಮತ್ತು ಇದು ಕ್ಲೈಮ್ ಮಾಡಲಾದ ಟಾಪ್ ಸ್ಪೀಡ್ ಅನ್ನು ಸುಲಭವಾಗಿ ತಲುಪುತ್ತದೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಇನ್ನೂ ಉಲ್ಲೇಖಿಸಬೇಕಾದ ಇನ್ನೊಂದು ಅಂಶವೆಂದರೆ, ನಾವು ಓಡಿಸಿದ ಸ್ಕೂಟರ್‌ಗಳು ಎಲ್ಲಾ ಪೂರ್ವ-ನಿರ್ಮಾಣ ಮಾದರಿಗಳಾಗಿವೆ. ನೀವು ವೇಗದಲ್ಲಿ ಎಡಗೈ ತಿರುವು ತೆಗೆದುಕೊಂಡರೆ ಸೈಡ್ ಸ್ಟ್ಯಾಂಡ್ ರಸ್ತೆಯ ಮೇಲ್ಮೈಯನ್ನು ತಗುಲುತ್ತದೆ. ಈ ಸ್ಟ್ಯಾಂಡ್ ಅನ್ನು ಹೊಸ ವಿನ್ಯಾಸದಿಂದ ಬದಲಾಯಿಸಲಾಗುವುದು ಎಂದು ಬ್ರ್ಯಾಂಡ್ ಉಲ್ಲೇಖಿಸಿದೆ. ಇತರ ಸುಧಾರಣೆಗಳಲ್ಲಿ ಪ್ಯಾನಲ್ ಅಂತರವನ್ನು ಸರಿಪಡಿಸುವುದು ಮತ್ತು ಸ್ಕೂಟರ್ ಸಾಫ್ಟ್‌ವೇರ್ ನವೀಕರಣವನ್ನು ಸಹ ಪಡೆಯುತ್ತದೆ.

ಕೈಗೆಟುಕುವ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಸಿದ್ಧವಾಗಿರುವ ಯುಗದಲ್ಲಿ, ಸ್ವಲ್ಪ ವೈವಿಧ್ಯತೆಯನ್ನು ಹೊಂದಿರುವುದು ಒಳ್ಳೆಯದು. ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಈ ಸಾಲಿಗೆ ಸೇರುತ್ತದೆ, ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಇದು ಉತ್ತಮ ಆಯ್ಕೆಯಾಗಿದೆ. ಅಲ್ಲದೇ ಈ ಎಲೆಕ್ಟ್ರಿಕ್ ಸ್ಕೂಟರ್ ಬಜೆಟ್ ಬೆಲೆ, ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮತ್ತು ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿವೆ. ಬೌನ್ಸ್‌ನಿಂದ ಸ್ಥಾಪಿಸಲಾದ ಬ್ಯಾಟರಿ ವಿನಿಮಯ ಕೇಂದ್ರಗಳು ಸ್ಕೂಟರ್‌ಗೆ ಪರಿಪೂರ್ಣ ಒಡನಾಡಿಯಾಗಿ ಕಾರ್ಯನಿರ್ವಹಿಸುತ್ತವೆ, ಉಪಯುಕ್ತತೆಯನ್ನು ಸುಧಾರಿಸುತ್ತದೆ.

Most Read Articles

Kannada
English summary
Bounce infinity e1 electric scooter review specifications riding features and other details
Story first published: Tuesday, February 22, 2022, 20:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X