ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಹಿಮಾಲಯನ್ ಅಡ್ವೆಂಚರ್-ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ 2016ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು. ರಾಯಲ್ ಎನ್‌ಫೀಲ್ಡ್ ಕಂಪನಿಯ ಇತರೆ ಬೈಕ್ ಮಾದರಿಗಳಿಗಿಂತಲೂ ವಿಭಿನ್ನವಾಗಿ ಈ ಹಿಮಾಲಯನ್ ಬೈಕನ್ನು ಬಿಡುಗಡೆಗೊಳಿಸಿದ್ದು, ಅದಕ್ಕೂ ಮುನ್ನ ರಾಯಲ್ ಎನ್‌ಫೀಲ್ಡ್ ಸರಣಿಯಲ್ಲಿ 350 ಸಿಸಿ ಮತ್ತು 500 ಸಿಸಿ ವಿಭಾಗದಲ್ಲಿ ಕ್ರೂಸರ್ ಬೈಕ್‌ಗಳನ್ನು ಮಾತ್ರ ಒಳಗೊಂಡಿತ್ತು.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್-ಟೂರರ್ ಮಾದರಿಯನ್ನು ಕೈಗೆಟುಕುವ ದರದಲ್ಲಿ ಬಿಡುಗಡೆಗೊಳಿಸಿದ್ದು, ಮೊದಲ ತಲೆಮಾರಿನ (ಬಿಎಸ್ 3) ಮಾದರಿಗಳಲ್ಲಿ ಕೆಲವು ಗುಣಮಟ್ಟದ ಸಮಸ್ಯೆಗಳಿತ್ತು. ಆದರೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ನವೀಕರಿಸಿದ (ಬಿಎಸ್ 4) ಹಿಮಾಲಯನ್ ಮಾದರಿಯನ್ನು ಪರಿಚಯಿಸಿತ್ತು. ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹಿಮಾಲಯನ್ ಬೈಕನ್ನು ನಿರಂತರವಾಗಿ ನವೀಕರಿಸಿದ್ದು, ಹಾಗೆಯೇ ಹೊಸ ಹೊಸ ಫೀಚರ್ ಗಳನ್ನು ಕೂಡಾ ಅಳವಡಿಸಿತ್ತು. ಅವುಗಳಲ್ಲಿ ಪ್ರಮುಖವಾಗಿ ಫ್ಯೂಯಲ್ ಇಂಜೆಕ್ಷನ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ವರ್ಷದ ಆರಂಭದಲ್ಲಿ ಹಿಮಾಲಯನ್ ಬೈಕ್ ಮಾದರಿಯನ್ನು ಮತ್ತೆ ನವೀಕರಿಸಿದೆ. 2020ರ ಹಿಮಾಲಯನ್ ಈಗ ನವೀಕರಿಸಿದ ಬಿಎಸ್-6 ಎಂಜಿನ್ ಅನ್ನು ಹೊಂದಿದೆ. ಇದರೊಂದಿಗೆ ಕಾಸ್ಮೆಟಿಕ್ ಅಪ್‌ಡೇಟ್‌ಗಳು ಮತ್ತು ಹೆಚ್ಚುವರಿ ಫೀಚರ್ ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಸವಾರಿ ಮಾಡಲು ಯೋಗ್ಯವಾಗಿದೆ. ಇದು ನಗರ ಪ್ರದೇಶಗಳ ರಸ್ತೆ, ಹೆದ್ದಾರಿ, ಮರಳು ಪ್ರದೇಶ ಮತ್ತು ಕಠಿಣವಾದ ಭೂ ಪ್ರದೇಶಗಳಲ್ಲಿ ಚಲಿಸಲು ಸಮರ್ಥವಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ವಿನ್ಯಾಸ ಹಾಗೂ ಶೈಲಿ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ವಿನ್ಯಾಸದಲ್ಲಿ ಯಾವುದೇ ಬದಲಾಣೆಗಳನ್ನು ಮಾಡಲಾಗಿಲ್ಲ, ಹಿಮಾಲಯನ್ ಬೈಕಿನ ವಿನ್ಯಾಸವು ಅಫ್-ರೋಡ್ ಮತ್ತು ಸಾಮಾನ್ಯ ರಸ್ತೆಗಳಿಗೂ ಸಹಕರಿಯಾಗುವಂತಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಮುಂಭಾಗದಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್ ಅನ್ನು ಹೊಂದಿದೆ. ಇದು ಸ್ವಲ್ಪ ಹಳೆಯ ತಲೆಮಾರಿನ ಮಾದರಿಯಾಗಿದೆ, ಆದರೆ ಈ ಬೈಕಿನಲ್ಲಿ ಹೊಸ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಇನ್ನು ಇದರಲ್ಲಿ ದೊಡ್ಡ ವಿಂಡ್ ಶಿಲ್ಡ್ ಅನ್ನು ಅಳವಡಿಸಲಾಗಿದೆ. ಇದು ಸವಾರರಿಗೆ ಗಾಳಿಯಿಂದ ಉತ್ತಮ ರಕ್ಷಣೆ ನೀಡುತ್ತದೆ, ವಿಶೇಷವಾಗಿ ಹೆಚ್ಚಿನ ದೂರ ಪ್ರವಾಸ ಮಾಡುವಾಗ ವೇಗದಲ್ಲಿ ಚಲಿಸುವಾಗ ಇದು ಹೆಚ್ಚು ಸಹಕಾರಿಯಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಹೈ-ಮೌಂಟಡ್ ಫ್ರಂಟ್ ಫೆಂಡರ್ ಸಹ ಇದೆ, ಇದು ತೀವ್ರವಾದ ಆಫ್-ರೋಡಿಂಗ್ ಪರಿಸ್ಥಿತಿಗಳಲ್ಲಿ ಸಸ್ಪೆಂಷನ್ ಮುಕ್ತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಬೈಕಿನಲ್ಲಿ ಸಸ್ಪೆಂಷನ್ ಗಾಗಿ ಸ್ಟ್ಯಾಂಡರ್ಡ್ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ 200 ಎಂಎಂ ಟ್ರ್ಯಾವೆಲ್ ನೀಡುತ್ತದೆ. ಇವುಗಳನ್ನು 21 ಇಂಚಿನ ಸ್ಪೋಕ್ ವೀಲ್‌ನೊಂದಿಗೆ ಜೋಡಿಸಲಾಗಿದೆ, ಇದರೊಂದಿಗೆ 300 ಎಂಎಂ ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಈ ಬೈಕಿನ ಹಿಂಭಾಗ ಪ್ರೊಫೈಲ್‌ಗಳ ವಿನ್ಯಾಸವು ಆಕರ್ಷಕವಾಗಿದೆ. ಇನ್ನು ಈ ಹಿಮಾಲಯನ್ ಬೈಕಿನಲ್ಲಿ 15-ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಒಳಗೊಂಡಿದೆ. ಎತ್ತರದ ಹ್ಯಾಂಡಲ್‌ಬಾರ್‌ಗಳು ಮತ್ತು ನ್ಯೂಟರಲ್ ಫುಟ್-ಪೆಗ್‌ಗಳು ಅತ್ಯಂತ ಆರಾಮದಾಯಕವನ್ನು ಒದಗಿಸುತ್ತದೆ. ದೂರ ಪ್ರಯಾಣಿಸಲು ಇದು ಉತ್ತಮ ಸಹಕಾರಿಯಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ನ್ಯಾರೂ ಟ್ಯಾಂಕ್ ಮತ್ತು ನ್ಯೂಟರಲ್ ಫುಟ್-ಪೆಗ್‌ಗಳು ಕಠಿಣ ಭೂಪ್ರದೇಶಗಳು ಅಥವಾ ಟಾರ್ಮ್ಯಾಕ್ ಮೇಲೆ ನಿಂತು ಸವಾರಿ ಮಾಡುವಾಗಲೂ ಸಹ ಆರಾಮದಾಯಕ ಸ್ಥಾನವನ್ನು ನೀಡುತ್ತವೆ. ರೈಡರ್ ಮತ್ತು ಪಿಲಿಯನ್ ಎರಡು ಸೀಟುಗಳು ಉತ್ತಮ ಕುಶನ್ ನೀಡುತ್ತವೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಇನ್ನು ಹಿಂಭಾಗದ ಪ್ರೊಫೈಲ್ ಮುಖ್ಯವಾಗಿ ಗ್ರ್ಯಾಬ್ ರೈಲ್ ಕೆಳಗೆ ಸ್ಲೀಕ್ ಎಲ್ಇಡಿ ಟೈಲ್ ಲೈಟ್ ಇರಿಸಲಾಗಿದೆ. ಈ ಹಿಮಾಲಯನ್ ಬೈಕ್ ಅಪ್‌ಸೆಪ್ಟ್ ಎಕ್ಸಾಸ್ಟ್ ಪೈಪ್‌ಗಳನ್ನು ಒಳಗೊಂಡಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಹಿಂಭಾಗದಲ್ಲಿ ಡಬಲ್ ಸೈಡೆಡ್ ಸ್ವಿಂಗಾರ್ಮ್ ಜೊತೆಗೆ ಮೊನೊ-ಶಾಕ್ ಸಸ್ಪೆಂಷನ್ ಸೆಟಪ್ ಜೊತೆಗೆ 180 ಎಂಎಂ ವ್ಹೀಲ್ ಟ್ರ್ಯಾವೆಲ್ ಹೊಂದಿದೆ, ಈ ಬೈಕಿನ 120 ಇಂಚಿನ ಸ್ಪೋಕ್ಡ್ ವ್ಹೀಲ್ ಗಳಲ್ಲಿ 120/90 ಪ್ರೊಫೈಲ್‌ನೊಂದಿಗೆ ಹೊಂದಿದ್ದರೆ, ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಅನ್ನು ನೀಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಫೀಚರ್ಸ್‌ಗಳು

ಹಿಂದಿನ ಮಾದರಿಗಳಲ್ಲಿರುವಂತಹ ಎಲ್ಲಾ ಫೀಚರ್‌ಗಳನ್ನು ಬಿಎಸ್ 6 ಮಾದರಿಯು ಹೊಂದಿದೆ. ಇದರೊಂದಿಗೆ ಬಿಎಸ್ 6 ಮಾದರಿಯಲ್ಲಿ ಹೆಚ್ಚುವರಿಯಾಗಿ ಕೆಲವು ಫೀಚರ್‌ಗಳನ್ನು ಸೇರಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಬಿಎಸ್ 6 ಹಿಮಾಲಯನ್ ಸೆಮಿ-ಡಿಜಿಟಲ್ ಕ್ಲಸ್ಟರ್ ಅನ್ನು ಹೊಂದಿದೆ. ಇದರೊಂದಿಗೆ ಅನಲಾಗ್ ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್ ಅನ್ನು ಒಳಗೊಂಡಿದೆ, ಡಿಜಿಟಲ್ ಪರದೆಯು 'ಓಡೊ' ಮೀಟರ್, ಡಬಲ್ ಟ್ರಿಪ್ ಮೀಟರ್, ಟೈಮ್ ಮತ್ತು ಗೇರ್ ಸೂಚಕದಂತಹ ಹೆಚ್ಚುವರಿ ಮಾಹಿತಿಯನ್ನು ನೀಡಲು ಸೀಮಿತವಾಗಿದೆ. ಇದಲ್ಲದೆ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನಲಾಗ್ ಫ್ಯೂಯಲ್ ಗೇಜ್ ಮತ್ತು ದಿಕ್ಸೂಚಿಯೊಂದಿಗೆ ಬರುತ್ತದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಬಿಎಸ್ 6 ಹಿಮಾಲಯನ್ ಬೈಕಿನಲ್ಲಿ ಪ್ರಮುಖವಾಗಿ ಸ್ವಿಚ್ ಮಾಡಬಹುದಾದ-ಎಬಿಎಸ್ ಬಟನ್ ಹೊಸದಾಗಿ ನೀಡಲಾಗಿದೆ. ಇದು ಸವಾರನಿಗೆ ಅಗತ್ಯವಿರುವಾಗ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ವಿಚ್-ಆಫ್ ಮಾಡಲು ಅಥವಾ ಸ್ವಿಚ್-ಆನ್ ಮಾಡಬಹುದಾಗಿದೆ. ಇದರೊಂದಿಗೆ ಹಜಾರ್ಡ್ ಲೈಟ್ ಅನ್ನು ಕೂಡ ಹೊಸದಾಗಿ ಅಳವಡಿಸಲಾಗಿದೆ. ಇದನ್ನು ಈಗ ಎಡಭಾಗದ ಹ್ಯಾಂಡಲ್‌ಬಾರ್‌ಗಳಲ್ಲಿ ಇರಿಸಲಾಗಿದೆ. ಇದರಿಂದ ಸವಾರನಿಗೆ ಹೆಚ್ಚು ಸೂಕ್ತವಾದ ಮತ್ತು ಸುಲಭವಾಗಿ ಬಳಕೆಮಾಡಬಹುದಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ರಾಯಲ್ ಎನ್‌ಫೀಲ್ಡ್ ಸೈಡ್ ಸ್ಟ್ಯಾಂಡ್ ಅನ್ನು ಬಲಪಡಿಸಿದೆ ಎಂದು ಹೇಳಲಾಗುತ್ತಿದೆ, ಹೊಸ ಹೊಸ ಸೈಡ್-ಸ್ಟ್ಯಾಂಡ್ ಅನ್ನು ಈಗ ನವೀಕರಿಸಲಾಗಿದೆ ಮತ್ತು ಹೆಚ್ಚು ಗಟ್ಟಿಮುಟ್ಟಾಗಿದೆ. ಇದು ಹೆಚ್ಚುವರಿ 5 ಕೆಜಿ ಅನ್ನು ಒಳಗೊಂಡಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಎಂಜಿನ್ ಮತ್ತು ಪರ್ಫಾಮೆನ್ಸ್

2020ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ಅದೇ 411 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂನೊಂದಿಗೆ ಎಸ್‌ಒಹೆಚ್‌ಸಿ ಎಂಜಿನ್ ನವೀಕರಿಸಲಾಗಿದೆ. ಹೊಸ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಎಂಜಿನ್ 6500 ಆರ್‌ಪಿಎಂನಲ್ಲಿ 24.3 ಬಿಹೆಚ್‌ಪಿ ಪವರ್ ಮತ್ತು 4000 - 4500 ಆರ್‌ಪಿಎಂನಲ್ಲಿ 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 5 ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಹಿಮಾಲಯನ್ ಅಡ್ವೆಂಚರ್-ಟೂರರ್ ಆಗಿರುವುದರಿಂದ ಲಾಂಗ್-ಸ್ಟ್ರೋಕ್ ಸಿಲಿಂಡರ್ ಸಿಸ್ಟಂ ಅನ್ನು ಹೊಂದಿದೆ. ಇದು ಅರಾಮದಾಯಕ ಸವಾರಿಗೆ ಸಹಕಾರಿಯಾಗಿದೆ. ಇದು ಬೈಕಿನ ಸ್ಪೀಡ್ ಅನ್ನು ಹೆಚ್ಚಿಸಲು ಇದು ಅನುವು ಮಾಡಿಕೊಡುತ್ತದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಹಿಂದಿನ ಮಾದರಿಗೆ ಹೋಲಿಸಿದರೆ ವೇಗವಾಗಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 100 ಕಿಮೀ ಸ್ಫೀಡ್ ನಲ್ಲಿ ಉತ್ತಮ ನಿಯಂತ್ರಣದಿಂದ ಚಲಿಸುತ್ತದೆ, ಇನ್ನು ಹಿಮಾಲಯನ್ ಬೈಕ್ 120 ಕಿ.ಮೀ ಸ್ಪೀಡ್ ಮೇಲೆ ಚಲಿಸಿದರೆ ಅಷ್ಟು ನಿಯಂತ್ರಣವಿಲ್ಲ ಎಂಬಂತೆ ಭಾಸವಾಗುತ್ತದೆ. ಹೆದ್ದಾರಿಗಳಲ್ಲಿ ಸವಾರಿ ಮಾಡಲು ಉತ್ತಮವಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಮಧ್ಯೆ ಇದು ಯಾವುದೇ ಕಷ್ಟಕರವಿಲ್ಲದೆ ನಿರಾಳವಾಗಿ ಚಲಿಸಬಹುದು. ಈ ಹಿಮಾಲಯನ್ ತುಸು ಅಧಿಕ ತೂಕವಿದೆ ಎಂದು ನಗರ ಪ್ರದೇಶದಲ್ಲಿ ರೈಡ್ ಮಾಡುವಾಗ ಅನುಭವವಾಗುತ್ತದೆ. ಈ ಬೈಕಿನ ಸೀಟ್ 800 ಎಂಎಂ ಎತ್ತರವಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಎದ್ದು ನಿಂತು ಈ ಹೊಸ ಹಿಮಾಲಯನ್ ಬೈಕನ್ನು ರೈಡ್ ಮಾಡುವಾಗ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ. ಚಪ್ಪಟೆ ಫುಟ್-ಪೆಗ್‌ಗಳು ಮತ್ತು ಎತ್ತರದ ಹ್ಯಾಂಡಲ್‌ಬಾರ್‌ಗಳು ಎದ್ದುನಿಂತಾಗಲೂ ಬೈಕನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ಹೊಸ ಹಿಮಾಲಯನ್ ಬೈಕನ್ನು ಕಠಿಣವಾದ ಭೂ ಪ್ರದೇಶಗಳಲ್ಲಿಯು ಚಲಾಯಿಸಿದಾಗಲೂ ಇದು ಉತ್ತಮ ಪರ್ಪಾಮೆನ್ಸ್ ಆನ್ನು ನೀಡಿದೆ. ಕಠಿಣವಾದ ಭೂ ಪ್ರದೇಶಗಳಲ್ಲಿಯು ಸುಲಭವಾಗಿ ಚಲಾಯಿಬಹುದಾಗಿದೆ. ಆಫ್-ರೋಡ್ ಗಳಲ್ಲಿ ಸಸ್ಷಂಷೆನ್ ಉತ್ತಮವಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನಲ್ಲಿನ ಬ್ರೇಕ್‌ಗಳು ಆಫ್-ರೋಡ್ ಹಾದಿಗಳಿಗೆ ಸಂಪೂರ್ಣವಾಗಿ ಸೂಕ್ತವಾಗಿವೆ. ಸ್ವಿಚ್ ಮಾಡಬಹುದಾದ-ಎಬಿಎಸ್ ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಸ್ವಿಚ್ ಆಫ್ ಮಾಡುತ್ತದೆ. ಬ್ರೇಕಿಂಗ್ ಗಳು ಸ್ವಲ್ಪ ಸ್ಪಂಜಿಯಂತೆ ಭಾಸವಾಗುತ್ತದೆ. ಬ್ರೇಕಿಂಗ್ ಗಳು ಇನ್ನಷ್ಟು ಹಿಡಿತದಿಂದ ಕೂಡಿರಬೇಕಿತ್ತು. ಹೆದ್ದಾರಿಯಲ್ಲಿ ವೇಗವಾಗಿ ಪ್ರಯಾಣಿಸುವಾಗ ಅಗತ್ಯವಿರುತ್ತದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಎಂಜಿನ್ ಉತ್ತಮ ಪರಿಷ್ಕರಣೆಯನ್ನು ನೀಡುತ್ತದೆ ಮತ್ತು ಅತ್ಯಂತ ಮೃದುವಾಗಿದೆ. ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ಚಲಿಸುವಾಗ ಸ್ವಲ್ಪ ಕಂಪನಗಳ ರೀತಿ ಅನುಭವವಾಗುತ್ತದೆ. ಇದು ಹಿಮಾಲಯನ್ ಸ್ಟ್ಯಾಂಡರ್ಡ್ ಆಗಿ ಚಲಿಸುವ ನಾಬಿ ಡ್ಯುಯಲ್-ಪರ್ಪಸ್ ಸಿಯೆಟ್ ಟಯರ್ ಗಳ ಕಾರಣದಿಂದ ಇರಬಹುದು. ಇನ್ನು ಈ ಟಯರ್ ಗಳು ಎಲ್ಲಾ ಪರಿಸ್ಥಿತಿಗಳಲ್ಲಿಯೂ ಉತ್ತಮ ಹಿಡಿತವನ್ನು ನೀಡುತ್ತವೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಬೈಕಿನ ಪ್ರತಿಸ್ಪರ್ಧಿಗಳು

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಎಸ್ 6 ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಅಡ್ವೆಂಚರ್-ಟೂರರ್ ಬೈಕುಗಳ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಹಿಮಾಲಯನ್ ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸ್‌ಪಲ್ಸ್ 200 ಮತ್ತು ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಭಾರತೀಯ ಮಾರುಕಟ್ಟೆಯಲ್ಲಿ ಸಮರ್ಥ ಮತ್ತು ಕೈಗೆಟುಕುವ ಅಡ್ವೆಂಚರ್-ಟೂರರ್ ಆಗಿದೆ. ಅಡ್ವೆಂಚರ್ ಟೂರರ್ ಬೈಕನ್ನು ಖರೀದಿಸಲು ಬಯಸುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ ಎಂದು ಹೇಳಬಹುದಾಗಿದೆ. ಈ ಬಿಎಸ್ 6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.30 ಲಕ್ಷ ಗಳಾಗಿದೆ. ಈ ಹೊಸ ಸ್ವಿಚ್ ಮಾಡಬಹುದಾದ-ಎಬಿಎಸ್ ನೊಂದಿಗೆ ಆಫ್-ರೋಡಿಂಗ್ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸುವುದಲ್ಲದೆ, ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಸವಾರಿ ಮಾಡಲು ಉತ್ತಮವಾಗಿದೆ.

ಫಸ್ಟ್ ರೈಡ್ ರಿವ್ಯೂ: ಕೈಗೆಟುಕುವ ಬೆಲೆಯಲ್ಲಿ ಸಮರ್ಥ ಆಫ್-ರೋಡರ್ ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಮತ್ತು ಕೈಗೆಟುಕುವ ಅಡ್ವೆಂಚರ್-ಟೂರರ್ ಬೈಕ್ ಅತ್ಯುತ್ತಮ ಆಯ್ಕೆಯಾಗಿದೆ. ಹಿಮಾಲಯನ್ ಅತ್ಯಂತ ಸಮರ್ಥ ಬೈಕ್ ಆಗಿದ್ದು, ಆಪ್-ರೋಡ್ ನಲ್ಲಿ ಉತ್ತಮ ಸವಾರಿಯ ಅನುಭವನ್ನು ನೀಡುತ್ತದೆ.

Most Read Articles

Kannada
English summary
Royal Enfield Himalayan BS6 Review. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X