ವಿಮರ್ಶೆ: ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

By Nagaraja

ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರು 100 ಹಾಗೂ 110 ಸಿಸಿ ವಿಭಾಗದಿಂದ ನಿಧಾನವಾಗಿ 150 ಸಿಸಿ ನಿರ್ವಹಣಾ ಬೈಕ್ ಗಳತ್ತ ವಾಲುತ್ತಿದ್ದಾರೆ. ಆದರೂ ಬೆಲೆ, ಶೈಲಿ, ಇಂಧನ ಕ್ಷಮತೆ ಹಾಗೂ ಚಾಲನೆ ವಿಚಾರದಲ್ಲಿ ಯಾವುದೇ ರಾಜಿಗೂ ಸಿದ್ಧರಿಲ್ಲ.

ಹಾಗಿರುವಾಗ ನೂತನ ಬೈಕ್ ಖರೀದಿಗಾರರಿಗೆ ಒಮ್ಮಲೇ 150 ಸಿಸಿ ವಿಭಾಗಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಈ ನಿಟ್ಟಿನಲ್ಲಿ ಪ್ರಯಾಣಿಕ ಮೋಟಾರ್ ಸೈಕಲ್ ಶೈಲಿಯ ಬೈಕ್ ಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಸ್ಪರ್ಧಾತ್ಮಕ ಬೆಲೆಯಲ್ಲಿ ಅತಿ ನೂತನ ಅಚೀವರ್ 150 ಸಿಸಿ ಬೈಕನ್ನು ಬಿಡುಗಡೆಗೊಳಿಸಿದೆ. ನೂತನ ಅಚೀವರ್ ಮಾರುಕಟ್ಟೆಯಲ್ಲಿ ನೆಲೆಯೂರಿ ನಿಂತಿರುವ ಬಜಾಜ್ ಪಲ್ಸರ್ ಮತ್ತು ಹೀರೊ ಯೂನಿಕಾರ್ನ್ ಮಾದರಿಗಳಿಗೆ ಹೇಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ ಎಂಬುದನ್ನು ಚಾಲನಾ ವಿಮರ್ಶೆಯ ಮೂಲಕ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗುವುದು.

ಎಂಜಿನ್

ಎಂಜಿನ್

ಭಾರತ್ ಸ್ಟೇಜ್-IV ಎಮಿಷನ್ ಮಟ್ಟವನ್ನು ಕಾಯ್ದುಕೊಂಡಿರುವ ನೂತನ ಅಚೀವರ್ ಟಾರ್ಕ್ ಆನ್ ಡಿಮಾಂಡ್ 149.2 ಸಿಸಿ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದಿದ್ದು, 12.80 ಎನ್ ಎಂ ತಿರುಗುಬಲದಲ್ಲಿ 13.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

ಇತರೆ ನಿರ್ವಹಣೆ ಬೈಕ್ ಗಳಂತೆಯೇ ಹೀರೊ ಅಚೀವರ್ ನಿರ್ವಹಣೆಯು ಪರಿಣಾಮಕಾರಿಯೆನಿಸಿಕೊಂಡಿದ್ದು, ಗಂಟೆಗೆ 60-70 ಕೀ.ಮೀ. ವೇಗದಲ್ಲಿ ಬಹಳ ಸಲೀಸಾಗಿ ಸವಾರಿ ಮಾಡಬಹುದಾಗಿದೆ.

 ಚಾಲನಾ ಗುಣಮಟ್ಟತೆ ಮತ್ತು ಬ್ರೇಕ್

ಚಾಲನಾ ಗುಣಮಟ್ಟತೆ ಮತ್ತು ಬ್ರೇಕ್

ಸಾಮಾನ್ಯವಾಗಿ 150 ಸಿಸಿ ಬೈಕ್ ಗಳಿಗೆ ಎದುರಾಗುವ ಪ್ರಮುಖ ತೊಂದರೆಯೆಂದರೆ ಚೊಕ್ಕದಾದ ಚಕ್ರಗಳು ಮತ್ತು ಕಡಿಮೆ ಸ್ಥಳಾಂತರವಾಗಿದೆ. ಆದರೆ ಟ್ಯೂಬುಲರ್ ಡೈಮಂಡ್ ವಿಧದ ಚಾಸೀ ಗಿಟ್ಟಿಸಿಕೊಂಡಿರುವ ನೂತನ ಅಚೀವರ್ ಮುಂಭಾಗದಲ್ಲಿ 80/100 - 18 ಮತ್ತು ಹಿಂಭಾಗದಲ್ಲಿ 80/100 - 18 ಚಕ್ರಗಳನ್ನು ಗಿಟ್ಟಿಸಿಕೊಂಡಿದೆ.

ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

ಇನ್ನು ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಮತ್ತು ಹಿಂಭಾಗದಲ್ಲಿ ಹೊಂದಾಣಿಸಬಹುದಾದ ಸ್ವಿಂಗ್ ಆರ್ಮ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ವ್ಯವಸ್ಥೆಗಳನ್ನು ಪಡೆದಿದೆ.

ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

ಬ್ರೇಕಿಂಗ್ ನಿಖರವಾಗಿದ್ದು ಡಿಸ್ಕ್ ಹಾಗೂ ಡ್ರಮ್ ಬ್ರೇಕ್ ಸೌಲಭ್ಯವಿರುತ್ತದೆ. ಇವೆರಡು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 62,800 ಹಾಗೂ 61,800 ರು.ಗಳಷ್ಟು ದುಬಾರಿಯೆನಿಸುತ್ತದೆ.

ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

ಉದ್ದವಾದ ಸೀಟಿನೊಂದಿಗೆ ಕೂಡಿರುವ ಹೀರೊ ಅಚೀವರ್ ದೇಶದ ಕ್ಲಿಷ್ಟಕರ ರಸ್ತೆ ಪರಿಸ್ಥಿತಿಯಲ್ಲೂ ಆರಾಮದಾಯಕ ಚಾಲನೆಯನ್ನು ಪ್ರದಾನ ಮಾಡಲಿದೆ. ಇದರಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಆಳವಡಿಸಲಾಗಿದೆ.

ಶೈಲಿ ಮತ್ತು ನಿರ್ಮಾಣ ಗುಣಮಟ್ಟತೆ

ಶೈಲಿ ಮತ್ತು ನಿರ್ಮಾಣ ಗುಣಮಟ್ಟತೆ

ಹಿಂದಿನ ಮಾದರಿಯಿಂದಲೂ ಆಮದು ಮಾಡಿಕೊಂಡಿರುವ ಹೀರೊ ಅಚೀವರ್ ಸರಳ ವಿನ್ಯಾಸ ಶೈಲಿಯನ್ನು ಮೈಗೂಡಿಸಿಕೊಂಡಿದೆ. ಹೊಸತಾದ ಬಾಡಿ ಗ್ರಾಫಿಕ್ಸ್, ದೊಡ್ಡದಾದ ಇಂಧನ ಟ್ಯಾಂಕ್, ಹೊಸ ಹೆಡ್ ಲೈಟ್, ಟೈಲ್ ಲೈಟ್, ಟರ್ನ್ ಇಂಡೀಕೇಟರ್, ದೊಡ್ಡದಾದ ವೈಸರ್, ತಾಜಾತನದ ಫೆಂಡರ್ ಗಳನ್ನು ಪಡೆದಿದೆ.

ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

ಅತಿ ನೂತನ ಆಟೋಮ್ಯಾಟಿಕ್ ಹೆಡ್ ಲೈಟ್ ಆನ್ (ಎಎಚ್ ಒ) ವ್ಯವಸ್ಥೆಯು ಇದರಲ್ಲಿರುತ್ತದೆ. ಸುರಕ್ಷತೆಯ ದೃಷ್ಟಿಕೋನದಲ್ಲಿ ಇದೊಂದು ಗಮನಾರ್ಹ ವೈಶಿಷ್ಟ್ಯವಾಗಿ ಹೊರಹೊಮ್ಮಿದೆ. ಇನ್ನು ಅತ್ಯುತ್ತಮ ನಿರ್ಮಾಣ ಗುಣಮಟ್ಟತೆಯನ್ನು ಕಾಪಾಡಿಕೊಂಡಿದೆ.

ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

ಬಣ್ಣಗಳು: ಪ್ಯಾಂಥರ್ ಬ್ಲ್ಯಾಕ್ ಮೆಟ್ಯಾಲಿಕ್, ಕ್ಯಾಂಡಿ ಬ್ಲೇಜಿಂಗ್ ರೆಡ್ ಮತ್ತು ಎಬೋನಿ ಗ್ರೇ ಮೆಟ್ಯಾಲಿಕ್.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಇವೆಲ್ಲದಕ್ಕೂ ಮಿಗಿಲಾಗಿ ಭಾರತ್ ಸ್ಟೇಜ್ 4 150 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ಅಚೀವರ್, ಸ್ಪ್ಲೆಂಡರ್ ನಲ್ಲಿರುವುದಕ್ಕೆ ಸಮಾನವಾದ ಐ3ಎಸ್ (ಐಡಲ್ ಸ್ಟ್ಯಾರ್ಟ್ ಸ್ಟಾಪ್ ಸಿಸ್ಟಂ) ಎಂಜಿನ್ ಪಡೆಯಲಿದೆ. ಇದು ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.

ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

ಟ್ರಾಫಿಕ್ ಗಳಲ್ಲಿ ಕೆಂಪು ದೀಪ ಉರಿದ ಸಂದರ್ಭದಲ್ಲಿ ಸವಾರ ನ್ಯೂಟ್ರಲ್ ಗೆ ಬದಲಾಯಿಸಿದಾಗ ಐದು ಸೆಕೆಂಡುಗಳ ಬಳಿಕ ಎಂಜಿನ್ ಸ್ವಯಂಚಾಲಿತವಾಗಿ ಆಫ್ ಆಗಲಿದೆ. ಬಳಿಕ ಗ್ರೀನ್ ಸಿಗ್ನಲ್ ಬಂದಾಗ ವಾಹನ ಸ್ಟಾರ್ಟ್ ಆಗಲು ಕ್ಲಚ್ ಅದುಮಿದರೆ ಸಾಕು. ವಾಹನದ ಎಂಜಿನ್ ನಿಧಾನವಾಗಿ ಚಲಿಸಲು ಬಿಡಲಿದೆ. ಇದರಿಂದ ಇಂಧನ ಉಳಿತಾಯವಾಗಲಿದ್ದು, ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ. ಬಲಬದಿಯ ಹ್ಯಾಂಡಲ್ ಬಾರ್ ನಲ್ಲಿ ಕೊಟ್ಟಿರುವ ಸ್ವಿಚ್ ಗೇರ್ ಮುಖಾಂತರ ಇದನ್ನು ನಿಯಂತ್ರಿಸಬಹುದಾಗಿದೆ.

ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

ಉಪಯುಕ್ತ ವಿಚಾರಕ್ಕೆ ಬಂದಾಗ ಹೊಸತಾದ ಡಿಜಿಟಲ್ ಸ್ಪೀಡೋಮೀಟರ್ ಹಾಗೂ ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಗಳು ಕಾಣಿಸಲಿದೆ. ಇನ್ನು 13 ಲೀಟರ್ ಗಳ ಇಂಧನ ಟ್ಯಾಂಕ್ ಜೊತೆಗೆ 1.8 ಲೀಟರ್ ರಿಸರ್ವ್ ಟ್ಯಾಂಕ್ ಜೋಡಣೆ ಮಾಡಲಾಗಿದೆ.

ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

ಕೆಲವು ನಿರ್ದಿಷ್ಟ ರಸ್ತೆಗಳಲ್ಲಿ ಹೀರೊ ಅಚೀವರ್ ಪರೀಕ್ಷೆ ನಡೆಸಲಾಗಿತ್ತು. ಹಾಗಾಗಿ ನೈಜ ರಸ್ತೆ ಪರಿಸ್ಥಿತಿಯ ಇಂಧನ ಕ್ಷಮತೆ ಉಲ್ಲೇಖಿಸಲು ಇಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಿದ್ದರೂ ಹೀರೊ ಅಚೀವರ್ ಪ್ರತಿ ಲೀಟರ್ ಗೆ 50ರಿಂದ 55 ಕೀ.ಮೀ. ಇಂಧನ ಕ್ಷಮತೆ ನೀಡಲು ಸಕ್ಷಮವಾಗಿರಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಜೀವನದಲ್ಲಿ ಏನಾದರೊಂದು ಸಾಧನೆಯ ಹಂಬಲ ಇರುವವರಿಗಾಗಿ ಹೀರೊ ಅಚೀವರ್ ಆಗಮನವಾಗಿದೆ. ಇದು ಅತ್ಯಂತ ಶಕ್ತಿಶಾಲಿ 150 ಸಿಸಿ ಬೈಕಾಗಿದ್ದು, ಐ3ಎಸ್ ತಂತ್ರಗಾರಿಕೆಯೊಂದಿಗೆ ಮತ್ತಷ್ಟು ಬಲಿಷ್ಠವೆನಿಸಿಕೊಂಡಿದೆ.

ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

ಇವನ್ನೂ ಓದಿ: ಸ್ಮಾರ್ಟ್, ಸ್ಟೈಲಿಷ್ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 110 ಸಿಸಿ ಚಾಲನಾ ವಿಮರ್ಶೆ

Most Read Articles

Kannada
English summary
Hero Achiever 150 Review — A Commuter For The Achievers
Story first published: Wednesday, October 5, 2016, 14:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more