ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಮೊದಲ ತಲೆಮಾರಿನ ಹಾರ್ನೆಟ್ 160 ಬೈಕನ್ನು 2015ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಸಂದರ್ಭದಲ್ಲಿ ಹೋಂಡಾ ಹಾರ್ನೆಟ್ 160 ಬೈಕ್ ದಾಖಲೆಯ ಮಟ್ಟದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿತ್ತು. ಮೊದಲ ತಲೆಮಾರಿನ ಹೋಂಡಾ ಹಾರ್ನೆಟ್ 160 ಬೈಕ್ ಆಕರ್ಷಕ ಸ್ಟೈಲಿಂಗ್ ಮತ್ತು ಫೀಚರ್ ಗಳ ಮೂಲಕ ಹೆಚ್ಚಿನ ಯುವಜನತೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಇತ್ತೀಚೆಗೆ ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಎರಡನೇ ತಲೆಮಾರಿನ ಹಾರ್ನೆಟ್ 2.0 ಬೈಕನ್ನು ಮತ್ತಷ್ಟು ಸೈಲಿಷ್ ಆಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.27 ಲಕ್ಷಗಳಾಗಿದೆ. ಮೊದಲ ತಲೆಮಾರಿನ ಹೋಂಡಾ ಹಾರ್ನೆಟ್ 160 ಬೈಕಿಗೆ ಹೋಲಿಸಿದರೆ ಹೊಸ ಮಾದರಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಹೊಸ ಹೋಂಡಾ ಹಾರ್ನೆಟ್ 2.0 ಬೈಕ್ ಮತ್ತಷ್ಟು ಸ್ಪೋರ್ಟಿ ಲುಕ್ ಮತ್ತು ಹೊಸ ಎಂಜಿನ್ ಅನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಹ್ಯಾಡಲಿಂಗ್, ಫೀಚರ್ ಮತ್ತು ಪರ್ಫಾಮೆನ್ಸ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲು ನಾವು ಈ ಬೈಕನ್ನು ಫಸ್ಟ್ ರೈಡ್ ರಿವ್ಯೂ ಮಾಡಲಾಗಿದೆ. ತನ್ನ ಸ್ಟೈಲಿಂಗ್ ಮೂಲಕ ಯುವಗ್ರಾಹಕರ ಮನಗೆದ್ದ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬಗ್ಗೆ ಪರಿಪೂರ್ಣವಾದ ಮಾಹಿತಿ ಇಲ್ಲಿವೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಬೈಕಿನ ವಿನ್ಯಾಸ

ಹೊಸ ಹೋಂಡಾ ಹಾರ್ನೆಟ್ 2.0 ಮೊದಲ ನೋಟದಲ್ಲೇ ಎಲ್ಲರ ಮನಗೆಲ್ಲುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನಾವು ಫಸ್ಟ್ ರೈಡ್ ರಿವ್ಯೂ ಮಾದಲಾದ ಬೈಕ್ ಮ್ಯಾಟ್ ಬ್ಲೂ ಶೇಡ್ ಬಣ್ಣಗಳಿಂದ ಕೂಡಿದೆ. ಈ ಬೈಕಿನ ಬಗ್ಗೆ ಹೇಳುವುದಾದರೆ, ಮುಂಭಾಗದಿಂದ ಪ್ರಾರಂಭಿಸಿದರೆ, ಗ್ರಾಹಕರ ಗಮನಸೆಳೆಯುವಂತೆ ಇರುವ ಶೋವಾದಿಂದ ಪಡೆದ ಗೋಲ್ಡನ್ ಬಣ್ಣವನ್ನು ಹೊಂದಿರುವ ಅಪ್ ಸೈಡ್-ಡೌನ್ ಫ್ರಂಟ್ ಫೋರ್ಕ್‌ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಈ ಹೊಸ ಹಾರ್ನೆಟ್ 2.0 ಬೈಕಿನಲ್ಲಿ ಫುಲ್ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಯುನಿಟ್ ಅನ್ನು ಹೊಂದಿದ್ದು, ಇದು ಎಲ್ಇಡಿ ಡಿಆರ್ಎಲ್ ಅನ್ನು ಸಹ ಹೊಂದಿದೆ. ಈ ಹೆಡ್ ಲೈಟ್ ಹೆಚ್ಚು ಪ್ರಕಾಶಮಾನವಾಗಿದ್ದು, ರಾತ್ರಿಯ ಸಮಯದಲ್ಲಿ ರೈಡ್ ಹೋಗುವಾಗ ಹೆಡ್ ಲೈಟ್ ಹೆಚ್ಚು ಪ್ರಕಾಶಮಾನವಾಗಿರುವುದರಿಂದ ರೈಡರಿಗೆ ಉತ್ತಮ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಇನ್ನು ಈ ಬೈಕಿನಲ್ಲಿ ಎಲ್‌ಇಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕ್ಲಸ್ಟರ್ ಐದು ಹಂತದ ಬ್ರೈಟ್ ನಸ್ ಅನ್ನು ಹೊಂದಿದೆ. ಆದರೆ ಹೆಚ್ಚು ಬಿಸಿಲು ಇರುವ ಕಡೆ ಕ್ಲಸ್ಟರ್ ಮಾಹಿತಿ ಅಷ್ಟು ಸ್ಪಷ್ಟವಾಗಿಲ್ಲವೆಂದು ಹೇಳಬಹುದು.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಸ್ಪೀಡೋಮೀಟರ್, ಟ್ಯಾಕೋಮೀಟರ್, ಗೇರ್ ಪೊಸಿಷನಿಂಗ್ ಇಂಡಿಕೇಟರ್, ಬ್ಯಾಟರಿ ವೋಲ್ಟೇಜ್, ಟ್ರಿಪ್, ಟೈಮ್ ಮಾಹಿತಿಗಳನ್ನು ನೀಡುತ್ತದೆ. ಇದರೊಂದಿಗೆ ಚೆಕ್ ಎಂಜಿನ್, ಎಬಿಎಸ್, ಹೈ ಬೀಮ್ ಮತ್ತು ಟರ್ನ್ ಸಿಗ್ನಲ್ ಇಂಡಿಕೇಟರ್ ಸಿಗ್ನಲ್ ಗಳ ಮಾಹಿತಿಯನ್ನು ಒಳಗೊಂಡಿದೆ. ಹೊಸ ಹಾರ್ನೆಟ್ 2.0 ಎಲ್‌ಇಡಿ ಇಂಡಿಕೇಟರ್ ಅನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಹೊಸ ಹಾರ್ನೆಟ್ 2.0 ಬೈಕಿನಲ್ಲಿ ಸ್ವಿಚ್ ಗೇರ್ ಗುಣಮಟ್ಟ ಸ್ವಲ್ಪ ಉತ್ತಮವಾಗಿದೆ ಎಂದು ಹೇಳಬಹುದು. ಆದರೆ ಅದರಲ್ಲಿ ಇಷ್ಟವಾಗುವ ಫೀಚರ್ ಅಂದರೆ ಪ್ರತಿ ಬಟರ್ ಅನ್ನು ಹ್ಯಾಂಡಲ್‌ಬಾರ್‌ನ ಬಲಗೈಯಲ್ಲಿ ಇರಿಸಲಾಗಿದೆ. ಹರ್ಝರ್ಡ್ ಲೈಟ್ ಸ್ವೀಚ್ ಅನ್ನು ಕೂಡ ನೀಡಲಾಗಿದೆ. ಇದರಿಂದ ಸವಾರನಿಗೆ ಹೆಚ್ಚು ಸಹಕರಿಯಾಗಿರಲಿದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಹೊಸ ಹೋಂಡಾ ಹಾರ್ನೆಟ್ 2.0 ಬೈಕ್ ಹೆಚ್ಚು ಸ್ಫೊರ್ಟಿ ಲುಕ್ ಅನ್ನು ಹಿಂದಿರುವ ಟ್ಯಾಂಕ್ ಅನ್ನು ಪಡೆದುಕೊಂಡಿದೆ. ಈ ಫ್ಯೂಯಲ್ ಟ್ಯಾಂಕ್ ನೋಡಲು ಮಾತ್ರ ದೊಡ್ಡದಾಗಿದೆ ಆದರೆ ಇದು ಕೇವಲ 12-ಲೀಟರ್ ಫ್ಯೂಯಲ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಬೈಕಿನ ಫ್ಯೂಯಲ್ ಟ್ಯಾಂಕ್ ನಲ್ಲಿ ‘ಹಾರ್ನೆಟ್' ಬ್ಯಾಡ್ಜಿಂಗ್ ಮತ್ತು ಹೋಂಡಾ ಬ್ಯಾಡ್ಜ್ ಅನ್ನು ಹೊಂದಿದೆ. 2.0 ಸ್ಟಿಕ್ಕರ್ ಇರಿಸಲಾಗಿರುವ ಸೆಂಟರ್ ಪ್ಯಾನೆಲ್‌ನ ಫಿಟ್ ಮತ್ತು ಫಿನಿಶ್ ಗುಣಮಟ್ಟ ಅಷ್ಟು ಉತ್ತಮವಾಗಿಲ್ಲ ಎಂದು ತೋರುತ್ತದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಇನ್ನು ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನಲ್ಲಿ ಸ್ಪ್ಲಿಟ್ ಸೀಟ್ ಸೆಟಪ್ ಅನ್ನು ಹೊಂದಿದೆ. ಸವಾರನ ಸೀಟ್ ಲೋ ಆಗಿ ಆರಾಮದಾಯಕವಾಗಿದೆ. ಇನ್ನು ಪಿಲಿಯನ್ ಸವಾರನ ಸೀಟ್ ಅಗಲವಾಗಿದ್ದು, ಇದರಿಂದ ಸೂರ ಪ್ರಯಾಣದಲ್ಲಿ ಕುಳಿತುಕೊಂಡಾಗ ದೊಡ್ಡ ಸಮಸ್ಯೆಯಾಗುವುದಿಲ್ಲ. ಬೈಕಿನ ಗ್ರ್ಯಾಬ್ ರೈಲ್ ಆಕರ್ಷಕವಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬ್ರೇಕ್ ಲೈಟ್ ಸಹ ಎಲ್ಇಡಿ ಆಗಿದೆ ಮತ್ತು ಎಕ್ಸ್ ಆಕಾರದ ವಿನ್ಯಾಸವನ್ನು ಹೊಂದಿದೆ ಮತ್ತು ರಾತ್ರಿಯ ಸಮಯದಲ್ಲಿ ಚೆನ್ನಾಗಿ ಕಾಣುತ್ತದೆ. ಒಟ್ಟಾರೆಯಾಗಿ ಈ ಹೋಂಡಾ ಹಾರ್ನೆಟ್ 2.0 ಬೈಕ್ ವಿನ್ಯಾಸವು ಅದ್ಭುತವಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಬೈಕಿನ ಎಂಜಿನ್

ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನಲ್ಲಿ 184.5 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 17 ಬಿಹೆಚ್‍ಪಿ ಪವರ್ ಮತ್ತು 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಗೇರ್ ಬಾಕ್ಸ್ ಹಗುರವಾಗಿದೆ ಮತ್ತು ಉತ್ತಮವಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಇನ್ನು ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಕ್ಲಚ್ ಹಗುರವಾಗಿದೆ. ಈ ಬೈಕಿನ ರೈಡಿಂಗ್ ಪೊಷಿಸನ್ ಕೂಡ ಉತ್ತಮವಾಗಿದೆ. ಏಕೆಂದರೆ ಅದು ಫುಟ್‌ಪೆಗ್‌ಗಳನ್ನು ಸ್ವಲ್ಪ ಹಿಂಭಾಗಕ್ಕೆ ಹೊಂದಿಸಲಾಗಿದೆ ಮತ್ತು ಹ್ಯಾಂಡಲ್‌ಬಾರ್ ಅನ್ನು ಸ್ವಲ್ಪ ಮುಂದಕ್ಕೆ ಜೋಡಿಸಲಾಗಿದೆ. ಈ ಸಂಯೋಜನೆಯು ಎತ್ತರದ ಸವಾರರಿಗೆ ಉತ್ತಮ ರೈಡಿಂಗ್ ಪೊಷಿಸನ್ ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಹೋಂಡಾ ಹಾರ್ನೆಟ್ 2.0 ಬೈಕ್ ಮುಂಭಾಗದಲ್ಲಿ 110 ಎಂಎಂ ವಿಭಾಗ ಮತ್ತು ಹಿಂಭಾಗದಲ್ಲಿ 140 ಎಂಎಂ ವಿಭಾಗದ ಟೈರ್ ಅನ್ನು ಪಡೆಯುತ್ತದೆ. ಹೋಂಡಾ ಹಾರ್ನೆಟ್ 2.0 ಬೈಕ್ ಮುಂಭಾಗ ಯುಎಸ್‌ಡಿ ಫೋರ್ಕ್‌ಗಳನ್ನು ಹೊಂದಿರುವುದರಿಂದ, ಹಿಂದಿನ ಪೀಳಿಗೆಯ ಮಾದರಿಗೆ ಹೋಲಿಸಿದರೆ ಸಸ್ಪೆಂಕ್ಷನ್ ಸೆಟಪ್ ಉತ್ತಮವಾಗಿದೆ. ಇನ್ನು ಈ ಬೈಕಿನ ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಹೋಂಡಾ ಹಾರ್ನೆಟ್ 2.0 ಬೈಕ್ ಸಿಟಿಗಳಲ್ಲಿ ಹೆಚ್ಚು ಆರಾಮದಾಯಕವಾಗಿದೆ. ಅಲ್ಲದೇ ಗ್ರಾಮಿಣಭಾಗದ ರಸ್ತೆಗಳ ಸವಾರಿಗೂ ಯೋಗ್ಯವಾಗಿರುವಂತೆ ಈ ಬೈಕನ್ನು ಅಭಿವೃದ್ದಿಪಡಿಸಲಾಗಿದೆ. ಕೆಟ್ಟ ಮತ್ತು ಹಳ್ಳ ತುಂಬಿದ್ದ ರಸ್ತೆಗಳಲ್ಲಿ ಉತ್ತಮವಾಗಿ ಚಲಿಸುತ್ತದೆ. ಈ ಬೈಕಿನಲ್ಲಿ ಉತ್ತಮ ಸಸ್ಪೆಂಕ್ಷನ್ ಹೊಂದಿರುವುದರಿಂದ ಹೆಚ್ಚು ನೆರವಾಗುತ್ತದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಹೋಂಡಾ ಹಾರ್ನೆಟ್ 2.0 ಬೈಕ್ ಉತ್ತಮ ಪಿಕ್-ಅಪ್ ಮತ್ತು ಬಲವಾದ ಮಿಡ್ರೇಂಜ್ ಹೊಂದಿದೆ. ಈ ಬೈಕ್ 9,700 ಆರ್‌ಪಿಎಂ ಮಾರ್ಕ್ ವರೆಗೆ ಎಲ್ಲಾ ರೀತಿಯಲ್ಲಿ ಪರಿಷ್ಕರಿಸುತ್ತದೆ. ಲೋ ಗೇರ್ ನಲ್ಲಿ ನೀವು ಹೆಚ್ಚಿನ ಗೇರ್‌ನಲ್ಲಿ ಪ್ರಯಾಣಿಸುತ್ತಿದ್ದರೂ ಸಹ, ಬೈಕ್‌ಗೆ ಯಾವುದೇ ಒತ್ತಡವಿಲ್ಲದೆ ಚಲಿಸುತ್ತದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಮಧ್ಯಮ ವೇಗದಲ್ಲಿ ಚಲಿಸಿದರು ಕೂಡ ಕಂಪನಗಳು ಗಮನಾರ್ಹವಾಗಿ ಕಂಡುಬರುವುದಿಲ್ಲ, ಆದರೆ ನೀವು ಮೂರು-ಅಂಕಿಯ ಗುರುತು ದಾಟಿದಾಗ ಫುಟ್‌ಪೆಗ್‌ಗಳಿಂದ ಕಂಪನಗಳು ಪ್ರಾರಂಭವಾಗುತ್ತವೆ. ಆದರೂ 120 ಕಿ.ಮೀ ವೇಗದಲ್ಲಿ ಸುಲಭವಾಗಿ ಚಲಾಯಿಸಬಹುದು. ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ, ಆದರೆ ಈ ಬೈಕಿನಲ್ಲಿ ಸಿಂಗಲ್ ಚಾನಲ್ ಎಬಿಎಸ್ ಅನ್ನು ಮಾತ್ರ ನೀಡಲಾಗಿದೆ. ಆದರೂ ಉತ್ತಮವಾಗಿ ಬ್ರೇಕಿಂಗ್ ಅನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಇನ್ನು ಹಲವಾರು ಬೈಕ್ ಖರೀದಿಸುವಾಗ ಕೇಳುವ ಮೊದಲ ಪ್ರಶ್ನೆ ಮೈಲೇಜ್ ಎಷ್ಟು ನೀಡುತ್ತದೆ ಎಂದು. ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್ ಸಿಟಿಗಳಲ್ಲಿ 34 ರಿಂದ 37 ಕಿ.ಮೀ ನಡುವೆ ಮೈಲೇಜ್ ನೀಡಿದರೆ, ಹೈವೇಯಲ್ಲಿ 49 ರಿಂದ 45 ಕಿ.ಮೀಗಳವರೆಗೆ ಮೈಲೇಜ್ ಅನ್ನು ನೀಡುತ್ತದೆ. ಇನ್ನು ನೀವು ಬೈಕಿನಲ್ಲಿ ಟ್ಯಾಂಕ್ ಫುಲ್ ಮಾಡಿದರೆ ಸುಲಭವಾಗಿ 480 ರಿಂದ 500 ಕಿ.ಮೀ ಪ್ರಯಾಣಿಸಬಹುದು.

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ಹಾರ್ನೆಟ್ 2.0 ಬೈಕಿನ ಬಗ್ಗೆ ಒಟ್ಟಾರೆಯಾಗಿ ಅದ್ಭುತವಾಗಿದೆ, ವಿಶೇಷವಾಗಿ ಗೋಲ್ಡನ್ ಯುಎಸ್ಡಿ ಫೋರ್ಕ್ಸ್ ಮತ್ತು ಮ್ಯಾಟ್ ನೀಲಿ ಬಣ್ಣವು ಈ ಬೈಕಿನ ಸ್ಟೈಲಿಂಗ್ ಅನ್ನು ಹೆಚ್ಚಿಸಿದೆ. ಉತ್ತಮವಾಗಿರಸಬಹುದಾದ ಕೆಲವು ವಿಷಯಗಳು ಸ್ವಿಚ್‌ಗಿಯರ್ ಗುಣಮಟ್ಟ, ಸೈಡ್ ಪ್ಯಾನೆಲ್‌ಗಳ ಫಿಟ್ ಮತ್ತು ಫಿನಿಶ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಆಗಿದೆ

ಫಸ್ಟ್ ರೈಡ್ ರಿವ್ಯೂ: ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಿಳಿದ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್

ಇದಲ್ಲದೆ, ಹೊಸ ಹಾರ್ನೆಟ್ 2.0 ಬೈಕ್ ಸವಾರಿ ಮಾಡಲು ಉತ್ತಮ ಸುಗಮವಾಗಿದೆ. ಇದು ನಿಜವಾಗಿಯೂ ಆರಾಮದಾಯಕ ಪ್ರೀಮಿಯಂ ಕಮ್ಯೂಟರ್ ಬೈಕ್ ಆಗಿದೆ. ಖಂಡಿತವಾಗಿಯೂ ಯುವ ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಹೊಸ ಹಾರ್ನೆಟ್ 2.0 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಎನ್ಎಸ್ 200, ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮತ್ತು ಯಮಹಾ ಎಂಟಿ -15 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Honda Hornet 2.0 Review (First Ride): Best Handling Motorcycle In The Segment?. Read In Kannada
Story first published: Monday, November 30, 2020, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X