ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯ ಥಂಡರ್‍‍ಬರ್ಡ್ ಕ್ರೂಸರ್ ಶೈಲಿಯ ಮೋಟರ್‍‍‍ಸೈಕಲ್ 2002ರಲ್ಲಿ ಬಿಡುಗಡೆಗೊಂಡಿತ್ತು. ದಶಕದ ಹಿಂದೆ ಬಿಡುಗಡೆಗೊಂಡ ಈ ಬೈಕ್ 350ಸಿಸಿ ಎಂಜಿನ್‍ ಮತ್ತು 5 ಸ್ಪೀಡ್ ಗೇರ್‍‍ಬಾಕ್ಸ್ ಹೊಂದಿದೆ.

By Rahul Ts

ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯ ಥಂಡರ್‍‍ಬರ್ಡ್ ಕ್ರೂಸರ್ ಶೈಲಿಯ ಮೋಟರ್‍‍‍ಸೈಕಲ್ 2002ರಲ್ಲಿ ಬಿಡುಗಡೆಗೊಂಡಿತ್ತು. ದಶಕದ ಹಿಂದೆ ಬಿಡುಗಡೆಗೊಂಡ ಈ ಬೈಕ್ 350ಸಿಸಿ ಎಂಜಿನ್‍ ಮತ್ತು 5 ಸ್ಪೀಡ್ ಗೇರ್‍‍ಬಾಕ್ಸ್ ಹೊಂದಿದೆ. 350ಸಿಸಿ ಮತ್ತು 500ಸಿಸಿ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಂಡ ಥಂಡರ್‍‍ಬರ್ಡ್ ಆಗಿನ ಕಾಲದಲ್ಲೆ ಬುಲ್ಲೆಟ್ ಹಾಗು ಕ್ಲಾಸಿಕ್ ಶೈಲಿಯ ಬೈಕ್‍‍ಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿತು.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ಒಂದಾನೊಂದು ಕಾಲದಲ್ಲಿ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್ ಬಹಳಷ್ಟು ಮಂದಿಗೆ ಸ್ಟೇಟಸ್ ಸಿಂಬಲ್ ಆಗಿತ್ತು. ಆದರೆ ಇದನ್ನು ಖರೀದಿಸಿದ ನಂತರವೇ ಜೊತೆಗೆ ಲಭ್ಯವಾಗುವ ಇನ್ನಿತರೆ ಫೀಚರ್‍‍ಗಳನ್ನು ತಪ್ಪದೇ ಖರೀಸಿದಬೇಕು ಎನಿಸುತ್ತದೆ. ಲಾಂಗ್ ಡ್ರೈವ್ ಮತ್ತು ಸೌಕರ್ಯವಂತವಾದ ರೈಡಿಂಗ್‍‍ಗಾಗಿ ಇವುಗಳ ಅವಸರವು ಅಧಿಕವಾಗಿರುತ್ತದೆ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ರಾಯಲ್ ಎನ್‍‍ಫೀಲ್ಡ್ ಇಂತಹ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾರುಕಟ್ಟೆಯಲ್ಲಿ ಹೊಸ ಥಂಡರ್‍‍ಬರ್ಡ್ ಎಕ್ಸ್ 350ಸಿಸಿ ಬೈಕ್ ಮತ್ತು 500 ಸಿಸಿ ಎರಡು ಬೈಕ್‍‍ಗಳನ್ನು ಬಿಡುಗಡೆಗೊಳಿಸಿದೆ. ಇವುಗಳಲ್ಲಿ ಸೌಕರ್ಯವಂತವಾದ ಸೀಟ್‍‍ಗಳು, ಅಲಾಯ್ ವ್ಹೀಲ್ಸ್, ಟ್ಯೂಬ್‍‍ಲೆಸ್ ಟೈರ್‍‍ಗಳು, ಧೀರ್ಘ ಕಾಲದ ಪ್ರಯಾಣಕ್ಕಾಗಿ ಸಹಾಯಕವಾದ ಹ್ಯಾಂಡಲ್‍‍ಬಾರ್. ಅಧಿಕ ಸ್ಟೋರೇಜ್ ಹೊಂದಿದ ಫ್ಯುಯಲ್ ಟ್ಯಾಂಕ್ ಮತ್ತು ಹಲವು ಬಗೆಯ ಕಲರ್ ಆಯ್ಕೆಯ ಜೊತೆಗೆ ಆಧುನಿಕ ರೈಡರ್‍‍ಗಳು ಬಯಸುವ ಹಲವಾರು ಫೀಚರ್‍‍ಗಳನ್ನು ಒದಗಿಸಲಾಗಿದೆ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ರಾಯಲ್ ಎನ್‍‍ಫೀಲ್ಡ್ ತಮ್ಮ ಥಂಡರ್‍‍ಬರ್ಡ್ 500 ಎಕ್ಸ್ ಬೈಕ್‍ ಅನ್ನು ಕೆಲ ದಿನಗಳ ಟೆಸ್ಟ್ ರೈಡ್ ಮಾಡುವ ಅವಕಾಶವನ್ನು ಡ್ರೈವ್‍‍ಸ್ಪಾರ್ಕ್ ಕನ್ನಡಕ್ಕೆ ನೀಡಿದೆ. ಇಂದಿನ ಲೇಖನದಲ್ಲಿ ಥಂಡರ್‍‍ಬರ್ಡ್ 500 ಎಕ್ಸ್ ಬಗೆಗಿನ ನಮ್ಮ ಅಭಿಪ್ರಾಯವನ್ನು ನಿಮ್ಮೊಂದಿಗೆ ಹೇಳಿಕೊಳ್ಳಲಿದ್ದೇವೆ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ 500 ಎಕ್ಸ್ ಮೊದಲ ನೋಟದಲ್ಲಿಯೆ ತನ್ನ ಆಲ್ ಬ್ಲಾಕ್ ಕಲರ್ ಪೆಯಿಂಟ್ ಥೀಮ್‍‍ನೊಂದಿಗೆ ಆಕರ್ಷಿಸುತ್ತದೆ. ಟ್ಯಾಂಕ್‍ನ ಮೇಲಿನ ಬಣ್ಣವನ್ನು ಹೊರತುಪಡಿಸಿ ಬೈಕ್‍‍ನ ಎಲ್ಲಾ ಭಾಗಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಆದರೆ ಆಲ್ಲಲ್ಲಿ ಆರೆಂಜ್ ಬಣ್ಣವನ್ನು ಗಮನಿಸಬಹುದಾಗಿದೆ. ಥಂಡರ್‍‍ಬರ್ಡ್ 500ಎಕ್ಸ್ ಗೆಟ್‍ಅವೇ ಆರೆಂಜ್ ಮತ್ತು ಡ್ರಿಫ್ಟರ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ 500 ಎಕ್ಸ್ ಬೈಕಿನ ಮುಂಭಾಗದಲ್ಲಿ ಬ್ಲಾಕ್ ಕಲರ್ ಪಿನಿಷಿಂಗ್‍‍ನಲ್ಲಿರುವ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ವೃತ್ತಾಕಾರದಲ್ಲಿರುವ ಹೆಡ್‍‍ಲ್ಯಾಂಪ್, ಮತ್ತು ಹ್ಯಾಂಡಲ್ ಬಾರ್‍‍ನ ಮೇಲೆ ದಶಕದ ಹಿಂದೆ ಬಿಡುಗಡೆಗೊಂಡ ಬೈಕಿನಲ್ಲಿ ಬಳಸಲಾದ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ದೀರ್ಘ ಕಾಲದ ಪ್ರಯಾಣಕ್ಕಾಗಿ 20 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಆದರೆ ಸ್ವಿಚಿಂಗ್‍‍ನ ಪ್ರಮಾಣವು ಇನ್ನಷ್ಟು ಉತ್ತಮವಾಗಿ ನೀಡಬಹುದಾಗಿತ್ತು.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ಪ್ರಸ್ಥುತ ಮಾರುಕಟ್ಟೆಯಲ್ಲಿರುವ ಸಾಧಾರಣ ಥಂಡರ್‍‍ಬರ್ಡ್ ಬೈಕ್‍‍ಗಳಲ್ಲಿ ಕಾಣಬಹುದಾದ ಪಕ್ಕಕ್ಕೆ ಬಾಗಿರುವಂತಹ ಹ್ಯಾಂಡಲ್ ಬಾರ್, ಆಲ್ಲದೇ ಸಮಾಂತರವಾಗಿ ಮತ್ತು ಬ್ಲಾಕ್ ಪೆಯಿಂಟ್ ಸ್ಕೀಮ್‍‍ನಲ್ಲಿರುವ ಹ್ಯಾಂಡಲ್ ಅನ್ನು ಒದಗಿಸಲಾಗಿದ್ದು, ಇದರಿಂದಾಗಿ ರೈಡರ್ ಸೌಕರ್ಯವಂತವಾಗಿ ಬೈಕ್ ಅನ್ನು ಚಲಾಯಿಸಬಹುದು.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ಮತ್ತೊಂದು ಮುಖ್ಯವಾದ ವಿಷಯವೆಂದರೆ ಈ ಬೈಕಿನಲ್ಲಿ ಅಳವಡಿಸಲಾಗಿರುವ ಸೀಟ್‍‍ಗಳು, ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಈ ಬಾರಿ ಥಂಡರ್‍‍ಬರ್ಡ್ 500 ಎಕ್ಸ್ ಬೈಕ್‍‍ಗಳಲ್ಲಿ ಒಳ್ಳೆಯ ಗುಣಮಟ್ಟದಿಂದ ಕೂಡಿದ ಉಪಕರಣವನ್ನು ಉಪಯೋಗಿಸಿ ಸೀಟ್‍‍ಗಳನ್ನು ತಯಾರಿಸಲಾಗಿದೆ. ನುಣುಪಾದ ಮತ್ತು ಹೆಚ್ಚು ಸೌಕರ್ಯವಂತವಾದ ಸೀಟ್‍‍ಗಳನ್ನು ನೀಡಿರುವುದರಿಂದ ರೈಡರ್ ಹಾಗು ಹಿಂಬದಿಯ ಸವಾರರು ಉತ್ತಮ ರೈಡಿಂಗ್ ಅನುಭವವನ್ನು ಸವಿಯಬಹುದಾಗಿದೆ. ಆದರೆ ಇದರಲ್ಲಿ ಬ್ಯಾಕ್ ರೆಸ್ಟ್ ಅನ್ನು ಬಿಡಿಭಾಗವಾಗಿ ಖರೀದಿಸಬೇಕಾಗಿದೆ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ಎಂಜಿನ್ ಸಾಮರ್ಥ್ಯ

ತಾಂತ್ರಿಕವಾಗಿ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ 500 ಎಕ್ಸ್ ಆಧುನಿಕ ಕ್ರೂಸರ್ ಬೈಕ್‍‍ನಲ್ಲಿ 499ಸಿಸಿ ಸಾಮರ್ಥ್ಯವುಳ್ಳ, ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ ಸರಾಸರಿಯಾಗಿ 27ಬಿಹೆಚ್‍‍ಪಿ ಮತ್ತು 41ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ಟ್ರಾಫಿಕ್‍‍ನಲ್ಲಿರುವಾಗ ಎಂಜಿನ್ ಉತ್ಪಾದಿಸುವ ಟಾರ್ಕ್ ಬೈಕಿನ ತೂಕವನ್ನು ಲೆಕ್ಕಿಸದೆ ಬಹಳ ಸೂಕ್ಷ್ಮವಾಗಿ ಮಿಗಿಲಿಸುತ್ತದೆ. ಮತ್ತು ರೈಡಿಂಗ್ ಮಾಡುತ್ತಿರುವಾಗ ಬೈಕ್‍‍ನ ವೇಗವು ಮೇಲಕ್ಕೆ ಕೆಳಕ್ಕೆ ಆಗುತ್ತಿರುತ್ತದೆ, ಇಂತಹ ಸಂದರ್ಭದಲ್ಲಿ ಗೇರ್ ಅನ್ನು ಕಡಿಮೆ ಮಾಡುವ ಅವಕಾಶವೇ ಇರುವುದಿಲ್ಲವೆಂಬ ವಿಷಯವು ಗಮನಾರ್ಹ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ಥಂಡರ್‍‍ಬರ್ಡ್ ಎಕ್ಸ್ ಸರಣಿಯಲ್ಲಿನ ಎರಡು ಬೈಕ್‍‍ಗಳು ಅದ್ಭುತವಾದ ರೈಡಿಂಗ್ ಅನುಭವವನ್ನು ನೀಡುತ್ತದೆ. ಈ ಬೈಕ್‍‍ಗಳು 197 ಕಿಲೋಗ್ರಾಮ್‍ನ ತೂಕವನ್ನು ಪಡೆದುಕೊಂಡಿದ್ದು, ರಾಯಲ್ ಎನ್‍‍ಫೀಲ್ಡ್ ಥಂಡರ್‍‍ವರ್ಡ್ 500 ಎಕ್ಸ್ ಗಂಟೆಗೆ 90 ಕಿಲೋಮೀಟರ್‍‍ನ ವರೆಗು ಸೂಕ್ಷ್ಮವಾಗಿ ಸಾಗುತ್ತದೆ, ಆದರೆ ಅದಕ್ಕೂ ಮಿಂಚಿದ ವೇಗದಲ್ಲಿ ಚಲಿಸಿದರೆ ಹ್ಯಾಂಡಲ್ ಬಾರ್ ಮತ್ತು ಫುಟ್ ಪೆಡಲ್ಸ್ ನಿಂದ ಶರೀರಕ್ಕೆ ನೀಡುವ ವೈಬ್ರೆಶನ್ ರೈಡಿಂಗ್‍‍ನ ಮೇಲೆ ನಿರಾಶೆಯನ್ನು ಉಂಟು ಮಾಡುತ್ತದೆ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ರಾಯಲ್ ಎನ್‍‍ಫೀಲ್ಡ್ ಮೊದಲಬಾರಿಗೆ ಅಲಾಯ್ ವ್ಹೀಲ್‍‍ಗಳನ್ನು ಟ್ಯೂಬ್‍‍ಲೆಸ್ ಟೈ‍ರ್‍‍ಗಳನ್ನು ಪರಿಚಯಿಸಿದೆ. ಅದಾಗ್ಯೂ ಟೈರ್‍‍ಗಳನ್ನು ಅದೇ ಹಿಂದಿನ ಬೈಕ್‍‍ಗಳಲ್ಲಿ ಬಳಸಲಾದ ಟೈರ್‍‍ಗಳ ಗಾತ್ರದಲ್ಲಿಯೆ ಮುಂಭಾಗದಲ್ಲಿ 19 ಇಂಚಿನ ಮತ್ತು ಹಿಂಭಾಗದಲ್ಲಿ 18 ಇಂಚಿನ ಚಕ್ರಗಳನ್ನು ಒದಗಿಸಿವೆ. ಸಸ್ಪೆಂಷನ್ ವಿಚಾರದಲ್ಲಿ ಯಾವುದೇ ಬದಲಾವಣೆಯನ್ನು ಪಡೆದಿರುವುದಿಲ್ಲ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ಥಂಡರ್‍‍ಬರ್ಡ್ 500 ಎಕ್ಸ್ ಬೈಕ್‍‍ನ ಮುಂಭಾಗದಲ್ಲಿ ಅಧಿಕವಾದ ತೂಕವಿಲ್ಲದಿರುವ ಕಾರಣದಿಂದಾಗಿ ರಸ್ತೆಯ ತಿರುವುಭಾಗಗಳಲ್ಲಿ ಬಹಳ ಸುಲಭವಾಗಿ ಟರ್ನ್ ಮಾಡಿಕೊಳ್ಳಬಹುದಾಗಿದೆ. ಸೂಕ್ಷ್ಮವಾದ ರಸ್ತೆ ತಿರುವುಗಳಲ್ಲಿ ಫುಟ್ ಪೆಡಲ್ ನೆಲಕ್ಕೆ ತಾಕದಿರುವ ಹಾಗೆ ಮಡಿಚಿ ರೈಡ್ ಮಾಡಬಹುದಾಗಿದೆ. ಇಂತಹ ಅವಕಾಶಗಳು ಕೇವಲ ಸ್ಪೋರ್ಟ್ಸ್ ಬೈಕ್‍‍ಗಳಲ್ಲಿ ಮಾತ್ರ ನಾವು ಕಾಣಬಹುದಾಗಿದೆ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ಸಾಫ್ಟ್-ಆಂಡ್-ಗೋ ಟ್ರಾಫಿಕ್‍‍ನಲ್ಲಿ ಎಂಜಿನ್‍‍ನ ಉಷ್ಣತೆಯು ಸ್ವಲ್ಪ ಹೆಚ್ಚಾಗಿಯೆ ಇರುತ್ತದೆ. ಆದರೆ ರೈಡಿಂಗ್ ಶೂಗಳು, ಜಾಕೆಟ್ ಮತ್ತು ಹೆಲ್ಮೆಟ್ ಧರಿಸಿದರೆ ಆ ಉಷ್ಣವು ನಮ್ಮ ದೇಹದ ವರೆಗು ಬರುವುದಿಲ್ಲ ಮತ್ತು ಅತ್ಯಂತ ಸುರಕ್ಷಿತವಾಗಿ ರೈಡ್ ಮಾಡಬಹುದು. ಟೆಸ್ಟ್ ರೈಡ್ ಮಾಡುವಾಗ ಈ ಬೈಕ್ ಪ್ರತಿ ಲೀಟರ್‍‍ಗೆ 27 ಕಿಲೋಮೀಟರ್‍‍ನ ಮೈಲೇಜ್ ನೀಡಿದೆ.

ಟೆಸ್ಟ್ ರೈಡ್ ರಿವ್ಯೂ : ಕೊಟ್ಟ ಬೆಲೆಗೆ ಮೋಸವಿಲ್ಲ ಆರ್‍ಇ ಥಂಡರ್‍‍ಬರ್ಡ್ 500 ಎಕ್ಸ್ ಖರೀದಿ..

ಕನ್ನಡ ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಆಧುನಿಕ ಕ್ರೂಸರ್ ಬೈಕ್ ಸೆಗ್ಮೆಂಟ್‍‍ನಲ್ಲಿರುವ ಅತ್ಯಾಧುನಿಕ ಮೋಟರ್‍‍ಸೈಕಲ್ ಥಂಡರ್‍‍ಭರ್ಡ್ 500 ಎಕ್ಸ್ ಎಂದೇ ಹೇಳಬಹುದು. ಈ ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.98 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಮತ್ತು ಸಾಧಾರಣ ಥಂಡರ್‍‍ಬರ್ಡ್‍‍ಗಿಂತಾ ಇದರ ಬೆಲೆಯು ರೂ.8000 ಸಾವಿರ ಅಧಿಕವಾಗಿದೆ. ಈ ಬೆಲೆಯ ಪ್ರಮಾಣದಲ್ಲಿ ರಾಯಲ್‍ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್ ಉತ್ತಮವಾದ ಆಯ್ಕೆ ಎಂದೇ ಹೇಳಬಹುದು.

Most Read Articles

Kannada
English summary
2018 Royal Enfield Thunderbird 500X Road Test Review.
Story first published: Saturday, August 25, 2018, 13:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X