ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಟಿವಿಎಸ್ ಮೋಟಾರ್ ಕಂಪನಿಯು ಈ ವರ್ಷದ ಆರಂಭದಲ್ಲಿ ತನ್ನ ಅಪಾಚೆ ಆರ್​ಆರ್ 310 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಈ ಬೈಕ್ ಅನ್ನು ಚೆನ್ನೈನ ಎಂಎಂಆರ್ ಟಿಯಲ್ಲಿ ಚಾಲನೆ ಮಾಡಲಾಗಿತ್ತು. ಅಪಾಚೆ ಆರ್​ಆರ್ 310 ಬೈಕಿನಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ಮಾಡಲಾಗಿಲ್ಲ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಆದರೆ ಪರ್ಫಾಮೆನ್ಸ್ ಅನ್ನು ಹೆಚ್ಚಿಸಲು ಹಾಗೂ ವೈಬ್ರೆಷನ್ ಕಡಿಮೆ ಮಾಡಲು ಬಿಟ್ ಗಳನ್ನು ಸೇರಿಸಿ ಅಪ್ ಡೇಟ್ ಮಾಡಲಾಗಿದೆ. ಇತ್ತೀಚೆಗೆ 2020ರ ಟಿವಿಎಸ್ ಅಪಾಚೆ ಆರ್​ಆರ್ 310 ಬೈಕ್ ಅನ್ನು ಹೆಚ್ಚು ಟ್ರಾಫಿಕ್ ಜಾಮ್ ಹೊಂದಿರುವ ಬೆಂಗಳೂರಿನ ರಸ್ತೆಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ಚಾಲನೆ ಮಾಡಲಾಯಿತು. ಈ ಚಾಲನೆಯ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ವಿನ್ಯಾಸ ಮತ್ತು ಶೈಲಿ

2020ರ ಟಿವಿಎಸ್ ಅಪಾಚೆ ಆರ್​ಆರ್ 310 ಬೈಕ್ ಹಳೆಯ ಬೈಕಿನಲ್ಲಿದಂತಹ ವಿನ್ಯಾಸವನ್ನು ಹೊಂದಿದೆ. ಆರ್​ಆರ್ 310 ಬೈಕ್ ಈ ಸೆಗ್ ಮೆಂಟಿನಲ್ಲಿರುವ ಶಾರ್ಪ್ ಲುಕ್ ಹೊಂದಿರುವ ಬೈಕುಗಳಲ್ಲಿ ಒಂದಾಗಿದೆ. ಈ ಬೈಕ್ ಅಗ್ರೇಸಿವ್ ಲುಕ್ ಹಾಗೂ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಟಿವಿಎಸ್ ಕಂಪನಿಯು ಈ ಬೈಕಿನಲ್ಲಿ 2018ರಲ್ಲಿ ಪರಿಚಯಿಸಲಾದ ಗ್ಲೋಸ್-ಬ್ಲ್ಯಾಕ್ ಬಣ್ಣದ ಬದಲು ಟಿಟಾನಿಯಂ ಬ್ಲ್ಯಾಕ್ ಎಂದು ಕರೆಯಲಾಗುವ ಹೊಸ ಡ್ಯುಯಲ್ ಟೋನ್ ಬಣ್ಣವನ್ನು ನೀಡಿದೆ. ಈ ಹೊಸ ಬಣ್ಣವು ಸುತ್ತಲೂ ರೆಡ್ ಅಸೆಂಟ್ ಹಾಗೂ ಹೈ ಲೈಟ್ ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಇದರ ಜೊತೆಗೆ ಈ ಬೈಕಿನಲ್ಲಿ ತನ್ನ ಸಿಗ್ನೆಚರ್ ರೇಸಿಂಗ್ ರೆಡ್ ಬಣ್ಣವನ್ನು ನೀಡಿದೆ. ಈ ಬೈಕ್, ಸೀಟಿನ ಕೆಳಗೆ ರೆಡ್ ಟ್ರೆಲ್ಲಿಸ್ ಫ್ರೇಮ್ ಅನ್ನು ಸಹ ಹೊಂದಿದೆ. ರೆಡ್ ಟ್ರೆಲ್ಲಿಸ್ ಫ್ರೇಮ್ ರೇಸ್ ಸ್ಪೆಕ್ ಸ್ಟಿಕ್ಕರಿಂಗ್ ಅನ್ನು ಸಹ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಟಿವಿಎಸ್ ಅಪಾಚೆ ಆರ್​ಆರ್ 310 ಬೈಕಿನ ಮುಂಭಾಗದಲ್ಲಿ ಒಂದೇ ರೀತಿಯ ಬೈ-ಎಲ್ಇಡಿ ಹೆಡ್‌ಲ್ಯಾಂಪ್‌, ಅದರ ಕೆಳಗೆ ಫಾಕ್ಸ್ ರಾಮ್ ಏರ್-ಇಂಟೆಕ್‌ಗಳನ್ನು ನೀಡಲಾಗಿದೆ. ಸೈಡ್ ಪ್ರೊಫೈಲ್ ಹೆಚ್ಚು ಫೇರ್ ಆಗಿದ್ದು, ಶಾರ್ಪ್ ಆದ ಕ್ರೀಸ್‌ ಹಾಗೂ ರೇಖೆಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಫೇರಿಂಗ್ ವೆಂಟ್ ಗಳನ್ನು ಹೊಂದಿದ್ದು, ಎಂಜಿನ್‌ನ ಬಿಸಿ ಗಾಳಿಯನ್ನು ಸವಾರನ ಕಾಲಿನಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಹಿಂಭಾಗದ ಪ್ರೊಫೈಲ್ ಹೈ ರೇಕ್ ಆಂಗಲ್ ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಹೊಸ ಬಣ್ಣವು ಈ ಬೈಕ್ ಬಿಎಸ್ 6 ಆವೃತ್ತಿ ಎಂಬುದನ್ನು ಸುಲಭವಾಗಿ ಗುರುತಿಸಲು ನೆರವಾಗುತ್ತದೆ. ರೇಸಿಂಗ್ ರೆಡ್‌ನ ಅಪಾಚೆ ಆರ್​ಆರ್ 310 ಬಿಎಸ್ 6 ಬೈಕ್ ಸ್ಟಿಕ್ಕರಿಂಗ್ ಹಾಗೂ ಬಾಡಿ ಗ್ರಾಫಿಕ್ಸ್‌ನಂತಹ ಸೂಕ್ಷ್ಮ ಬದಲಾವಣೆಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಪ್ರಮುಖ ಲಕ್ಷಣಗಳು

2020ರ ಅಪಾಚೆ ಆರ್​ಆರ್ 310 ಬೈಕಿನ ವಿನ್ಯಾಸವು ಹೆಚ್ಚಾಗಿ ಬದಲಾಗದೆ ಇದ್ದರೂ, ಪ್ರಮುಖವಾದ ಅಪ್ ಡೇಟ್ ಪಡೆದಿರುವುದು ಈ ಬೈಕಿನ ವಿಶೇಷತೆಯಾಗಿದೆ. ಆರ್​ಆರ್ 310 ಬಿಎಸ್ 6 ಬೈಕ್ ಹಲವಾರು ಹೊಸ ಫೀಚರ್ ಹಾಗೂ ಟೆಕ್ನಾಲಜಿಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

2020ರ ಅಪಾಚೆ ಆರ್​ಆರ್ 310 ಬೈಕ್ ಹೊಸ 5.2-ಇಂಚಿನ ಪೂರ್ಣ-ಬಣ್ಣದ ಟಿಎಫ್‌ಟಿ ಸ್ಕ್ರೀನ್, ಕಂಪನಿಯ ಸ್ಮಾರ್ಟ್ ಎಕ್ಸ್‌ಕನೆಕ್ಟ್ ಟೆಕ್ನಾಲಜಿ ಹೊಂದಿರುವ ಹೊಸ ಕಲರ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಈ ಹೊಸ ಕನೆಕ್ಟೆಡ್ ಟೆಕ್ನಾಲಜಿ ಸವಾರನಿಗೆ ಮೀಸಲಾದ ಅಪ್ಲಿಕೇಶನ್‌ ಮೂಲಕ ಬೈಕ್‌-ಸಂಬಂಧಿತ ಮಾಹಿತಿಯನ್ನು ನೀಡುತ್ತದೆ. ಈ ಸ್ಮಾರ್ಟ್ ಫೀಚರ್ ಗಳಲ್ಲಿ ವಾಹನದ ಸ್ಥಿತಿ, ಸವಾರಿ ಅಂಕಿಅಂಶ, ಸಂಚರಣೆ, ಸರಾಸರಿ ಫ್ಯೂಯಲ್ ಎಕಾನಾಮಿ, ಕಾಲ್ ಗಳು, ಮೆಸೇಜ್ ಅಲರ್ಟ್, ಸರ್ವೀಸ್ ಮಾಹಿತಿಗಳು ಸೇರಿವೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

2020ರ ಟಿವಿಎಸ್ ಅಪಾಚೆ ಆರ್​ಆರ್ 310 ರೈಡ್-ಬೈ-ವೈರ್ ಟೆಕ್ನಾಲಜಿಯನ್ನು ಹೊಂದಿದೆ. ಈ ಬೈಕ್ ಸಿಟಿ, ರೇನ್, ಸ್ಪೋರ್ಟ್ ಹಾಗೂ ಟ್ರ್ಯಾಕ್ ಎಂಬ ನಾಲ್ಕು ವಿಭಿನ್ನ ರೈಡಿಂಗ್ ಮೋಡ್ ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಪ್ರತಿಯೊಂದು ಮೋಡ್ ತನ್ನದೇ ಆದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಯುಐ ವಿನ್ಯಾಸವನ್ನು ಹೊಂದಿದೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಡೇ ಹಾಗೂ ನೈಟ್ ಮೋಡ್‌ಗಳನ್ನು ಸಹ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಹೊಸ ಆರ್​ಆರ್ 310 ಹೊಸ ಬಟನ್ ಹಾಗೂ ಹ್ಯಾಂಡಲ್‌ಬಾರ್‌ಗಳಲ್ಲಿ ಟಾಗಲ್ ಸ್ವಿಚ್‌ಗಳನ್ನು ಹೊಂದಿದೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿರುವ ಎಲ್ಲಾ ಮಾಹಿತಿಯನ್ನು ಕಂಟ್ರೋಲ್ ಮಾಡಲು ಎಡ ಹ್ಯಾಂಡಲ್‌ಬಾರ್ ಟಾಗಲ್ ಸ್ವಿಚ್‌ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಒಂದೇ ಸ್ವಿಚ್‌ ಬಳಸಿಕೊಂಡು ರೈಡರ್ ವಿಭಿನ್ನ ರೈಡಿಂಗ್ ಮೋಡ್‌ಗಳ ನಡುವೆ ಟಾಗಲ್ ಮಾಡಬಹುದು. ಬಲಭಾಗದ ಹ್ಯಾಂಡಲ್‌ಬಾರ್ ಕೇವಲ ಇಗ್ನಿಷನ್ ಕಂಟ್ರೋಲ್ ಹಾಗೂ ಇಂಟಿಗ್ರೇಟೆಡ್ ಕಿಲ್-ಸ್ವಿಚ್‌ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಎಂಜಿನ್, ಪರ್ಫಾಮೆನ್ಸ್ ಹಾಗೂ ಮೆಂಟೆನೆನ್ಸ್

ಹೊಸ ಅಪಾಚೆ ಆರ್​ಆರ್ 310 ನಲ್ಲಿರುವ ಅಪ್ ಡೇಟ್ ಮಾಡಲಾದ ಬಿಎಸ್ 6 ಎಂಜಿನ್‌ನ ಮೃದುವಾಗಿದೆ. ಥ್ರೊಟಲ್ ರೆಸ್ಪಾನ್ಸ್ ಸಹ ಮೃದುವಾಗಿದೆ. ಯಾವುದೇ ಜರ್ಕ್ಸ್ ಹಾಗೂ ಕನ್ವರ್ಟರ್ ಗಳು ಸರಾಗವಾಗಿಲ್ಲ. ಎಂಜಿನ್ ಸ್ವಲ್ಪ ಒರಟಾಗಿದ್ದರೂ ಹಳೆಯ ಆವೃತ್ತಿಗಳಿಗೆ ಹೋಲಿಸಿದರೆ ಉತ್ತಮವಾಗಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಅಪಾಚೆ ಆರ್​ಆರ್ 310 ಬೈಕ್ 312 ಸಿಸಿ ರಿವರ್ಸ್-ಇನ್ ಕ್ಲೈನ್ದ್ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಬಿಎಸ್ 6 ಎಂಜಿನ್ ಹೊಂದಿದೆ. ಈ ಎಂಜಿನ್ ರೈಡಿಂಗ್ ಮೋಡ್‌ಗಳ ಸೇರ್ಪಡೆಯಿಂದ ವಿವಿಧ ಹಂತದ ಪರ್ಫಾಮೆನ್ಸ್ ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಈ ಎಂಜಿನ್ ಅರ್ಬನ್ ಹಾಗೂ ರೇನ್ ಮೋಡ್‌ಗಳಲ್ಲಿ 7600 ಆರ್‌ಪಿಎಂನಲ್ಲಿ 25.4 ಬಿಹೆಚ್‌ಪಿ ಪವರ್ ಹಾಗೂ 6700 ಆರ್‌ಪಿಎಂನಲ್ಲಿ 25 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಸ್ಪೋರ್ಟ್ ಹಾಗೂ ಟ್ರ್ಯಾಕ್ ಮೋಡ್‌ಗಲಲ್ಲಿ ಈ ಎಂಜಿನ್ 9400 ಆರ್‌ಪಿಎಂನಲ್ಲಿ 34 ಬಿಹೆಚ್‌ಪಿ ಪವರ್ ಹಾಗೂ 7700 ಬಿಹೆಚ್‌ಪಿ ಪವರ್ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡು ವಿಧಾನಗಳು ಹೆದ್ದಾರಿಗಳಿಗೆ ಹೆಚ್ಚು ಸೂಕ್ತವಾಗಿವೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಈ ಬೈಕ್ ಗ್ಲೈಡ್ ಥ್ರೂ ಟೆಕ್ನಾಲಜಿ ಪ್ಲಸ್ (ಜಿಟಿಟಿ) ಹೊಂದಿದೆ. ಈ ಟೆಕ್ನಾಲಜಿಯು ಸಿಗ್ನಲ್ ಗಳಲ್ಲಿ ಹೆಚ್ಚು ನೆರವಿಗೆ ಬರುತ್ತದೆ. ಈ ಟೆಕ್ನಾಲಜಿಯು ಕಾರುಗಳಲ್ಲಿರುವ ಕ್ರಾಲ್ ಫಂಕ್ಷನ್ ಅನ್ನು ಹೋಲುತ್ತದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಈ ಬೈಕ್ ಅರ್ಬನ್ ಹಾಗೂ ರೈಡ್ ಮೋಡ್ ಗಳಲ್ಲಿ ಪ್ರತಿ ಲೀಟರ್ ಪೆಟ್ರೋಲಿಗೆ 32 ಕಿ.ಮೀ ಮೈಲೇಜ್ ನೀಡಿದರೆ, ಸ್ಪೋರ್ಟ್ ಹಾಗೂ ಟ್ರ್ಯಾಕ್ ಮೋಡ್‌ಗಳಲ್ಲಿ 28 ಕಿ.ಮೀ ಮೈಲೇಜ್ ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

2020 ಟಿವಿಎಸ್ ಅಪಾಚೆ ಆರ್​ಆರ್ 310 ಬೈಕ್ ನಗರ ಹಾಗೂ ಹೆದ್ದಾರಿಯಲ್ಲಿ ಸವಾರಿಗೆ ಸೂಕ್ತವಾಗಿದೆ. ಸೂಪರ್‌ಸ್ಪೋರ್ಟ್ ವಿನ್ಯಾಸವನ್ನು ಹೊಂದಿದ್ದರೂ ಈ ಬೈಕಿನಲ್ಲಿ ಒಬ್ಬರು ಆರಾಮವಾಗಿ ಕುಳಿತು ಪ್ರಯಾಣ ಮಾಡಬಹುದು.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಈ ಬೈಕ್ ಬಿಎಸ್ 4 ಮಾದರಿಗಿಂತ ಹೆಚ್ಚಿನ ಪವರ್ ಉತ್ಪಾದಿಸುತ್ತದೆ. ಪ್ರತಿ ಗಂಟೆಗೆ 160 ಕಿ.ಮೀ ವೇಗವನ್ನು ಸುಲಭವಾಗಿ ಆಕ್ಸಲರೇಟ್ ಮಾಡುತ್ತದೆ. ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಷನ್ ಗಳನ್ನು ಅಳವಡಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

2020ರ ಟಿವಿಎಸ್ ಅಪಾಚೆ ಆರ್​ಆರ್ 310 ಬೈಕಿನಲ್ಲಿ ಬ್ರೇಕಿಂಗ್ ಗಳಿಗಾಗಿ ಮುಂಭಾಗದಲ್ಲಿ 300 ಎಂಎಂ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಗಳನ್ನು ನೀಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಹೊಸ ಆರ್​ಆರ್ 310 ಬೈಕ್ ಎರಡೂ ಬದಿಗಳಲ್ಲಿ 110/70 ಆರ್ 17 ಮತ್ತು 150/60 ಆರ್ 17 ಪ್ರೊಫೈಲ್‌ನ ಮಿಚೆಲಿನ್‌ನ ಹೊಸ ರೋಡ್ 5 ಸರಣಿಯ ಟಯರ್‌ಗಳನ್ನು ಹೊಂದಿದೆ. ಇವು ಒಂದೇ ಅಲಾಯ್ ಡಿಸೈನ್ ಹೊಂದಿವೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಟಯರ್‌ಗಳು ಒಳ್ಳೆಯ ಗ್ರಿಪ್ ನೀಡಿ 2020ರ ಟಿವಿಎಸ್ ಅಪಾಚೆ ಆರ್​ಆರ್ 310 ಬೈಕ್ ಅನ್ನು ಸುಧಾರಿತ ರೈಡಿಂಗ್ ಡೈನಾಮಿಕ್ಸ್‌ಗೆ ಸೇರಿಸುತ್ತವೆ. ಮಿಚೆಲಿನ್ ರೋಡ್ 5 ಟಯರ್ ಗಳು ಒಣ ಹಾಗೂ ಶೀತ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ಈ ಬೈಕ್ ಅನ್ನು ಕಠಿಣವಾದ ಪರಿಸ್ಥಿತಿಯಲ್ಲೂ ಸವಾರಿ ಮಾಡಲು ಸಾಧ್ಯವಾಗಲಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಬಿಎಸ್ 6 ಮಾದರಿಯು ಬಿಎಸ್ 4 ಮಾದರಿಗಿಂತ 5 ಕೆ.ಜಿ ಹೆಚ್ಚು ತೂಕವನ್ನು ಹೊಂದಿದ್ದು, ಈಗ ಈ ಬೈಕಿನ ತೂಕ 174 ಕೆ.ಜಿಗಳಾಗಿದೆ. ಆದರೂ ಟಿವಿಎಸ್ ಕಂಪನಿಯು ಮೊದಲಿನಂತೆಯೇ ವೇಗವುಳ್ಳ ಪರ್ಫಾಮೆನ್ಸ್ ನೀಡಲು ಯಶಸ್ವಿಯಾಗಿದೆ. ಈ ಬೈಕ್ ಹೆಚ್ಚಿನ ವೇಗದಲ್ಲಿದ್ದರೂ ಸಹ ಸ್ಥಿರವಾಗಿರುತ್ತದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ತೀರ್ಪು

2020ರ ಟಿವಿಎಸ್ ಅಪಾಚೆ ಆರ್​ಆರ್ 310 ಬೈಕ್ ರೇಸ್ ಟ್ರ್ಯಾಕ್ ಹಾಗೂ ಈಗ ನಗರದ ಬೀದಿಗಳಲ್ಲಿ ನಮ್ಮನ್ನು ಆಕರ್ಷಿಸಿದೆ. ಟಿವಿಎಸ್ ಹಲವಾರು ಅಂಶಗಳನ್ನು ಸುಧಾರಿಸುವಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಅಪ್ ಡೇಟ್ ಮಾಡಲಾದ ಅಪಾಚೆ ಆರ್​ಆರ್ 310 ಬೈಕ್ ಈಗ ಹೆಚ್ಚು ನಯವಾಗಿದ್ದು ಸುಧಾರಿತ ಪರ್ಫಾಮೆನ್ಸ್ ನೀಡುತ್ತದೆ. ಈ ಬೈಕ್ ಹಲವಾರು ಫೀಚರ್ ಗಳನ್ನು ಹೊಂದಿದೆ. ಈ ಬೈಕ್ ಹಳೆಯ ಬೈಕಿಗಿಂತ ರೂ.12,000 ಹೆಚ್ಚು ಬೆಲೆಯನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೇಸ್ ಟ್ರ್ಯಾಕ್‌ನಿಂದ ರೋಡಿಗಿಳಿದ 2020ರ ಟಿವಿಎಸ್ ಅಪಾಚೆ ಆರ್‌ಆರ್310

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಅಪಾಚೆ ಆರ್​ಆರ್ 310 ಬೈಕ್ ಹೊಸೂರು ಮೂಲದ ಟಿವಿಎಸ್ ಕಂಪನಿಯ ಜನಪ್ರಿಯ ಬೈಕ್ ಆಗಿದೆ. ಅಪ್ ಡೇಟ್ ಮಾಡಲಾದ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.2.40 ಲಕ್ಷ ಬೆಲೆಯನ್ನು ಹೊಂದಿರುವ ಈ ಬೈಕ್ ನೀಡುವ ಹಣಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತದೆ.

Most Read Articles

Kannada
English summary
TVS Apache RR 310 BS 6 review from race track to road test. Read in Kannada.
Story first published: Monday, September 28, 2020, 21:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X