ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಸಣ್ಣ ಬಜೆಟ್‌ನಿಂದ ದುಬಾರಿ ಬೆಲೆಯ ಅಪಾಚೆ ಸರಣಿಗಳನ್ನು ಉತ್ಪಾದಿಸುವ ಟಿವಿಎಸ್ ಇದೀಗ 2018ರ ಆರ್‌ಟಿಆರ್ 160 4ವಿ ಬೈಕ್‌ ಮಾದರಿಯನ್ನು ಬಿಡುಗಡೆ ಮಾಡಿದೆ.

By Praveen Sannamani

ಸುಮಾರು 2 ದಶಕಗಳಿಂದ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಲೇ ಬಂದಿರುವ ದೇಶಿ ಸಂಸ್ಥೆ ಟಿವಿಎಸ್, ಅಪಾಚೆ ಬೈಕ್ ಸರಣಿಗಳ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ ಎಂದರೇ ತಪ್ಪಾಗಲಾರದು. ಸಣ್ಣ ಬಜೆಟ್‌ನಿಂದ ದುಬಾರಿ ಬೆಲೆಯ ಅಪಾಚೆ ಸರಣಿಗಳನ್ನು ಉತ್ಪಾದಿಸುವ ಟಿವಿಎಸ್ ಇದೀಗ 2018ರ ಆರ್‌ಟಿಆರ್ 160 4ವಿ ಬೈಕ್‌ ಮಾದರಿಯನ್ನು ಬಿಡುಗಡೆ ಮಾಡಿದೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಕಮ್ಯುಟರ್ ಬೈಕ್ ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ್ದ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸ ಬೈಕಿನಲ್ಲಿ ಒದಗಿಸಲಾಗಿರುವ ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಜಿನ್ ಸೇರಿದಂತೆ ಹೊಸ ವಿನ್ಯಾಸಗಳನ್ನು ಪಡೆದುಕೊಂಡಿದೆ. ಈ ಹಿನ್ನೆಲೆ ಹೊಸ ಬೈಕಿನ ಕಾರ್ಯಕ್ಷಮತೆ ಕುರಿತಂತೆ ಡ್ರೈವ್‌ಸ್ಪಾರ್ಕ್ ನಡೆದ ಮೊದಲ ಚಾಲನಾ ಅನುಭವಗಳನ್ನು ಇಲ್ಲಿ ನೀಡಲಾಗಿದೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಟಿವಿಎಸ್ ಸಂಸ್ಥೆಯ ಹೊಸೂರು ರೇಸ್ ಟ್ರ್ಯಾಕ್‌ನಲ್ಲಿ ಹೊಸ ಬೈಕಿನ ಎಂಜಿನ್ ಸಾಮರ್ಥ್ಯದ ಕುರಿತು ಟೆಸ್ಟಿಂಗ್ ನಡೆಸಲಾಗಿದ್ದು, ಅಪಾಚೆ 160 4ವಿ ಬೈಕ್‌ಗಳು ವಿಶೇಷವಾಗಿ ರೇಸಿಂಗ್ ತಂತ್ರಜ್ಞಾನದ ಪ್ರೇರಣೆ ಹೊಂದಿವೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಇದೇ ಕಾರಣಕ್ಕೆ ಸತತ 6 ಬಾರಿ ನ್ಯಾಷನಲ್ ಚಾಂಪಿಯನ್‌ಶಿಪ್ ಆಗಿ ಹೊರಹೊಮ್ಮಿರುವ ಅಪಾಚೆ ಸರಣಿಗಳು ಯುವ ಸಮುದಾಯದ ಬೆಸ್ಟ್ ಬೈಕ್ ಆಗಿ ಹೊರಹೊಮ್ಮಿದ್ದು, ಮುಂಬುರುವ ದಿನಗಳಲ್ಲಿ ಇನ್ನಷ್ಟು ಜನಪ್ರಿಯತೆ ಸಾಧಿಸಲಿದೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಇದಕ್ಕೆ ಕಾರಣ, ಸ್ಪೋರ್ಟಿ ಲುಕ್ ಮತ್ತು ಹೊಸ ತಂತ್ರಜ್ಞಾನ ಪ್ರೇರಣೆ ಹಿನ್ನೆಲೆ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಈ ಹಿಂದಿಗಿಂತಲೂ ಹೆಚ್ಚು ಆಕರ್ಷಣೆ ಹೊಂದಿದ್ದು, ಟ್ರ್ಯಾಕ್‌ನಲ್ಲಿ ಕಮಾಲ್ ಮಾಡಬಲ್ಲ ಗುಣ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮು ಮೂರು ವಿವಿಧ ಮಾದರಿಯಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಬೇಡಿಕೆ ಅನುಗುಣವಾಗಿ ಗ್ರಾಹಕರ ತಮ್ಮ ಇಷ್ಟದ ಬೈಕ್ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಕ್ರಾಬ್ ಫ್ರಂಟ್ ಡಿಸ್ಕ್ ಬ್ರೇಕ್, ಕ್ರಾಬ್ ರಿರ್ ಡಿಸ್ಕ್ ಬ್ರೇಕ್ ಮತ್ತು ಫ್ಯೂಲ್ ಇಂಜೆಕ್ಷೆಡ್ ರಿರ್ ಡಿಸ್ಕ್ ಬ್ರೇಕ್ ಎಂಬ ಮೂರು ವಿಧಗಳಲ್ಲಿ ಆರ್‌ಟಿಆರ್ 160 4ವಿ ಬೈಕ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಎಂಜಿನ್‌ನಲ್ಲಿ ಭಿನ್ನತೆ ಹೊಂದಿದ್ದರು ಫರ್ಮಾಮೆನ್ಸ್‌ನಲ್ಲಿ ಒಂದೇ ರೀತಿ ಗುಣ ಪಡೆದಿವೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಈ ಮೂಲಕ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಕಮ್ಯುಟರ್ ಬೈಕ್ ಸವಾರಿಗೆ ಹೊಸ ಚಾಲನಾ ಅನುಭವ ನೀಡಲಿದ್ದು, ಈ ಹಿಂದಿನ ಅಪಾಚೆ ಸರಣಿಗಳ ವಿನ್ಯಾಸಗಳನ್ನು ಹೊಸ ಬೈಕಿನಲ್ಲೂ ಎರವಲು ಪಡೆಯಲಾಗಿದೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಎಂಜಿನ್ ವೈಶಿಷ್ಟ್ಯತೆ

ನ್ಯೂ ಜನರೇಷನ್ ವಿನ್ಯಾಸಗಳನ್ನು ಹೊಂದಿರುವ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು 159.7 ಸಿಸಿ ಸಿಂಗಲ್ ಸಿಲಿಂಡರ್ 4 ವಾಲ್ವೆ ಏರ್ ಕೂಲ್ಡ್ ಎಂಜಿನ್‌ ಜೋಡಣೆ ಪಡೆದಿವೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಈ ಮೂಲಕ ಫ್ಯೂಲ್ ಇಂಜೆಕ್ಷೆಡ್ ಮಾದರಿಯು 16.56 ಬಿಎಚ್‌ಪಿ, 14.8 ಟಾರ್ಕ್ ಉತ್ಪಾದಿಸಿದ್ದಲ್ಲಿ ಕಾರ್ಬೋರೆಟೆಡ್ ಎಂಜಿನ್ ಮಾದರಿಯು 16.28 ಬಿಎಚ್‌ಪಿ, 14.8 ಎನ್ಎಂ ಟಾರ್ಕ್ ಉತ್ಪಾದಿಸಲಿವೆ ಎಂದು ಟಿವಿಎಸ್ ಹೇಳಿಕೊಂಡಿದೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಇದರೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಹೊಸ ಬೈಕ್‌ಗಳು ಕೇವಲ 4.3 ಸೇಕೆಂಡ್‌ಗಳಲ್ಲಿ 60 ಕಿಮಿ ವೇಗ ಸಾಧಿಸುವ ಸಾಮರ್ಥ್ಯ ಪಡೆದುಕೊಂಡಿದ್ದು, ಗಂಟೆಗೆ 114 ಕಿಮಿ ಟಾಪ್ ಸ್ಪೀಡ್‌ನಲ್ಲಿ ಚಲಿಸುತ್ತವೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಮೈಲೇಜ್

12 ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯ ಹೊಂದಿರುವ ಆರ್‌ಟಿಆರ್ 160 4ವಿ ಬೈಕ್‌ಗಳು, ಪ್ರದೇಶಗಳಿಗೆ ಅನುಗುಣವಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ 40ರಿಂದ 45 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಹೊರ ವಿನ್ಯಾಸಗಳು

ಅಪಾಚೆ ಆರ್‌ಟಿಆರ್ 160 4ವಿ ತನ್ನ ಉತ್ನತ ಮಾದರಿಯಾದ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಪ್ರೇರಣೆ ಪಡೆದುಕೊಂಡಿದ್ದು, ರೇಸಿಂಗ್ ಟೆಕ್ನಾಲಜಿ ಅಳವಡಿಕೆಯೊಂದಿಗೆ ಅಕ್ರಮಶೀಲ ಹೊರ ನೋಟವೇ ಈ ಬೈಕಿನ ಗುಣವಿಶೇಷ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಜೊತೆಗೆ ಡಬಲ್ ಕ್ರೇಡಲ್ ಸ್ಪ್ಲಿಟ್ ಸಿಂಕ್ರೋ ಸ್ಟಿಫ್ ಫ್ರೇಮ್ ವಿನ್ಯಾಸವನ್ನು ಆಧರಿಸಿದ್ದು, ಅಪಾಚೆ ಆರ್‌ಟಿಆರ್ 200 4ವಿ ಮಾದರಿಯಲ್ಲೇ ಸಂಪೂರ್ಣ ಡಿಜಿಟಲ್ ಸಲಕರಣೆ ಕ್ಲಸ್ಟರ್ ಮತ್ತು ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಮಫ್ಲರ್ ಪಡೆದಿರುತ್ತವೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಇನ್ನು ಹಿಂಭಾದಗ ವಿನ್ಯಾಸಗಳನ್ನು ಗಮನಿಸಿದ್ದಲ್ಲಿ, ಶಾರ್ಪ್ ಟೈಲ್ ಕ್ಲಸ್ಟರ್ ಮತ್ತು ಎಲ್ಇಡಿ ಒದಗಿಸಲಾಗಿದ್ದು, ಡಬಲ್ ಬ್ಯಾರಲ್ ಎಕ್ಸಾಸ್ಟ್‌ಗಳು ರೇಸಿಂಗ್ ಸೌಂಡ್ ಉತ್ಪಾದನೆ ಮಾಡುವಲ್ಲಿ ಸಹಕಾರಿ ಆಗಲಿವೆ ಎನ್ನಬಹುದು.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಪೆರೆಲ್ಲಿ ಟೈರ್ಸ್

ಹೊಸ ಆರ್‌ಟಿಆರ್ 160 4ವಿ ಬೈಕ್‌ಗಳಲ್ಲಿ ಅತ್ಯುತ್ತಮ ಶ್ರೇಣಿಯ ಪೆರೆಲ್ಲಿ ಟೈರ್‌ಗಳನ್ನು ಬಳಕೆ ಮಾಡಲಾಗಿದ್ದು, 90/90 ಮತ್ತು 130/70 ರಬ್ಬರ್ ಮಾದರಿಯೊಂದಿಗೆ 17 ಇಂಚಿನ ಅಲಾಯ್ ಚಕ್ರಗಳನ್ನು ಒದಗಿಸಲಾಗಿದೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಬ್ರೇಕಿಂಗ್ ಸಿಸ್ಟಂ

ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮುಂಭಾಗದ ಚಕ್ರಗಳಲ್ಲಿ ಟೆಲೆಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಮೊನೊ ಸಸ್ಷೆಷನ್ ಹೊಂದಿದ್ದು, 270ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಮತ್ತು 200ಎಂಎಂ ರಿರ್ ಡಿಸ್ಕ್ ಬ್ರೇಕ್‌ ಅಳವಡಿಕೆಯೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಲಭ್ಯವಿರುವ ಬಣ್ಣಗಳು

ರೆಡ್ ರೇಸಿಂಗ್, ಮೆಟಾಲಿಕ್ ಬ್ಲೂ ಮತ್ತು ನೈಟ್ ಬ್ಲಾಕ್ ಬಣ್ಣಗಳಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಖರೀದಿಗೆ ಲಭ್ಯವಿವೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಬೈಕ್ ಬೆಲೆಗಳು (ಎಕ್ಸ್‌ಶೋರಂ)

ದೆಹಲಿ ಎಕ್ಸ್‌ಶೋರಂ ಪ್ರಕಾರ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಆರಂಭಿಕವಾಗಿ ರೂ.81,490 ಬೆಲೆ ಪಡೆದುಕೊಂಡಿವೆ.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಹಾಗೆಯೇ, ಕ್ರಾಬ್ ಫ್ರಂಟ್ ಡಿಸ್ಕ್ ಬ್ರೇಕ್ ಮಾದರಿಯು ರೂ. 81.490 ಬಿಡುಗಡೆಯಾದರೇ ಕ್ರಾಬ್ ರಿರ್ ಡಿಸ್ಕ್ ಬ್ರೇಕ್ ಮಾದರಿಯು ರೂ. 84,490ಕ್ಕೆ ಮತ್ತು ಫ್ಯೂಲ್ ಇಂಜೆಕ್ಷೆಡ್ ರಿರ್ ಡಿಸ್ಕ್ ಬ್ರೇಕ್ ಮಾದರಿಯು ರೂ. 89,990ಕ್ಕೆ ಖರೀದಿಸಬಹುದು.

ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

ಒಟ್ಟಾರೆ ಟಿವಿಎಸ್ ಸಂಸ್ಥೆಯು ಈ ಹಿಂದಿನ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಗುಣಗಳನ್ನೇ ಎರವಲು ಪಡೆದುಕೊಂಡು ಆರ್‌ಟಿಆರ್ 160 4ವಿ ಬೈಕ್ ಮಾದರಿಯನ್ನು ಸಿದ್ದಗೊಳಿಸಿದ್ದು, ಅತ್ಯುತ್ತಮ ರೇಸಿಂಗ್ ಫೀಚರ್ಸ್‌ಗಳಿಂದಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸರ್ ಎನ್ಎಸ್160, ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಯಮಹಾ FZ-S FI V2.0 ಬೈಕ್‌ಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗುವ ನೀರಿಕ್ಷೆಯಿದೆ.

Most Read Articles

Kannada
Read more on review apache
English summary
TVS Apache RTR 160 4V Review — A True Entry-Level Race Machine.
Story first published: Friday, March 23, 2018, 19:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X