ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಟಿವಿಎಸ್ ಅಪಾಚೆ ಬೈಕ್, ಮೊದಲ ಬಾರಿ ಬಿಡುಗಡೆಯಾದಾಗಿನಿಂದ ಎಂಟ್ರಿ ಲೆವೆಲ್ ಪರ್ಫಾಮೆನ್ಸ್ ಬೈಕಿಗೆ ತಕ್ಕಂತೆ ಇದೆ. 2005ರಲ್ಲಿ, ಆಗಿನ ಹೆಚ್ಚು ಮಾರಾಟವಾಗುತ್ತಿದ್ದ ಪಲ್ಸರ್ 150 ಹಾಗೂ ಪಲ್ಸರ್ 180 ಬೈಕ್‍‍ಗಳಿಗೆ ಪೈಪೋಟಿ ನೀಡಲು ಟಿವಿಎಸ್ ಅಪಾಚೆ 150 ಬೈಕ್ ಅನ್ನು ಬಿಡುಗಡೆಗೊಳಿಸಲಾಗಿತ್ತು.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಟಿವಿಎಸ್ ಅಪಾಚೆ ಈ ಸೆಗ್‍‍ಮೆಂಟಿನಲ್ಲಿರುವ ಹೆಚ್ಚು ವಿಶ್ವಾಸಾರ್ಹ ಬೈಕ್ ಎಂದು ಸಾಬೀತಾಯಿತು. ಹಲವಾರು ವರ್ಷಗಳಿಂದ ಟಿವಿಎಸ್ ಅಪಾಚೆ ಸಾಕಷ್ಟು ಜನಪ್ರಿಯವಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಟಿವಿಎಸ್ ಮೋಟಾರ್ ಕಂಪನಿಯು ಈ ಬೈಕ್ ಅನ್ನು ಅಪ್‍‍ಡೇಟ್ ಮಾಡುತ್ತಲೇ ಇದೆ. ಇದರ ಜೊತೆಗೆ ಹೊಸ ಬಲಶಾಲಿಯಾದ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದೆ. ಅಪಾಚೆ ಆರ್‍‍ಟಿ‍ಆರ್ 160 ಹಾಗೂ ಆರ್‍‍ಟಿ‍ಆರ್ 180 ಬೈಕ್‍‍ಗಳು ತಮ್ಮ ಸೆಗ್‍‍ಮೆಂಟಿನಲ್ಲಿ ಹೊಸ ಅಲೆಯನ್ನು ಎಬ್ಬಿಸಿದವು.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಇದಕ್ಕೆ ಈ ಬೈಕ್‍‍ಗಳಲ್ಲಿದ್ದ ಬಲಶಾಲಿ ಹಾಗೂ ಬುಲೆಟ್ ಪ್ರೂಫ್ ರೀತಿಯ ಎಂಜಿನ್‍‍ಗಳು ಮುಖ್ಯ ಕಾರಣ. ನಂತರ ಟಿವಿಎಸ್ ಕಂಪನಿಯು 2016ರಲ್ಲಿ ಅಪಾಚೆ ಆರ್‌ಟಿಆರ್ 200 4 ವಿ ಬೈಕ್ ಅನ್ನು ಬಿಡುಗಡೆಗೊಳಿಸಿತು.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಬಿಡುಗಡೆಯಾದಾಗ ಈ ಬೈಕ್ ಅತ್ಯಂತ ಬಲಶಾಲಿಯಾದ ಅಪಾಚೆ ಮಾದರಿಯಾಗಿತ್ತು. ಈ ಬೈಕ್ ಹೊಸ ವಿನ್ಯಾಸ ಹಾಗೂ ಚಾಸಿಸ್‍‍ಗಳನ್ನು ಹೊಂದಿತ್ತು. ಈ ಸೆಗ್‍ಮೆಂಟಿನ ಮಾರುಕಟ್ಟೆಯನ್ನು ಚಂಡಮಾರುತದಂತೆ ಅಪ್ಪಳಿಸಿತು. ಟಿವಿಎಸ್ ಅಪಾಚೆ 200 4 ವಿ ಬೈಕಿನ ಮಾಲೀಕರು ಈ ಬೈಕ್ ಅನ್ನು ಇಷ್ಟ ಪಡುವುದರ ಜೊತೆಗೆ ಈ ಬೈಕ್ ತನ್ನದೇ ಆದ ಪರಂಪರೆಯನ್ನು ಬೆಳೆಸಿಕೊಂಡಿತು.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಟಿವಿಎಸ್ ಕಂಪನಿಯು ಈ ಬೈಕ್ ಅನ್ನು ನಮಗೆ ಸುಮಾರು ಒಂದು ತಿಂಗಳ ಕಾಲ ನೀಡಿತ್ತು. ಟಿವಿಎಸ್ ಅಪಾಚೆ ಆರ್‍‍‍ಟಿ‍ಆರ್ 200 4 ವಿ ರೇಸ್ ಬೈಕ್ ಅನ್ನು ನಾವು ಚಲಾಯಿಸಿ ಅದರ ಬಗೆಗಿನ ವಿಮರ್ಶೆಯನ್ನು ಈ ಲೇಖನದಲ್ಲಿ ಮಾಡುತ್ತಿದ್ದೇವೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ತನ್ನ ರಾಸ್ಪಿ ಎಕ್ಸಾಸ್ಟ್ ನೋಟ್, ಸಾರ್ಟ್ ಮಾಡಲಾಗಿರುವ ಚಾಸೀಸ್, ಟಾರ್ಕಿ ಎಂಜಿನ್ ಹಾಗೂ ಆರಾಮದಾಯಕ ಸವಾರಿಯ ಗುಣಗಳೊಂದಿಗೆ, ಟಿವಿಎಸ್ ಅಪಾಚೆ ಆರ್‍‍ಟಿಆರ್ 200 4 ವಿ ಬೈಕ್ ಸಾಮಾನ್ಯವಾಗಿ ಬೈಕಿಂಗ್ ಉತ್ಸಾಹಿಗಳನ್ನು ರೋಮಾಂಚನಗೊಳಿಸುತ್ತದೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಈಗ ಟಿವಿಎಸ್ ಕಂಪನಿಯು ಬೈಕಿನ ಬಿಎಸ್ 6 ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬರಲು ಇನ್ನೂ ನಾಲ್ಕು ತಿಂಗಳು ಬಾಕಿಯಿರುವಾಗಲೇ ಟಿವಿಎಸ್ ಕಂಪನಿಯು ಬಿಎಸ್ 6 ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಈ ಬೈಕ್ ಅನ್ನು ಹೊಸೂರಿನಲ್ಲಿರುವ ಟಿವಿ‍ಎಸ್ ಘಟಕದಲ್ಲಿ ಚಲಾಯಿಸಲಾಯಿತು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಡಿಸೈನ್ ಹಾಗೂ ಸ್ಟೈಲಿಂಗ್

ಬಿ‍ಎಸ್ 6 ಎಂಜಿನ್ ಹೊಂದಿರುವ ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 200 4ವಿ ಬೈಕ್ ಅನ್ನು ಮುಂಭಾಗದಲ್ಲಿ ಹೆಚ್ಚು ನವೀಕರಣಗೊಳಿಸಲಾಗಿದೆ. ಮುಂಭಾಗದಲ್ಲಿ ಎಲ್‍ಇ‍‍ಡಿ ಡಿ‍ಆರ್‍ಎಲ್ ಹೊಂದಿರುವ ಹೊಸ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್‍‍ಗಳಿವೆ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಹೊಸ ಹೆಡ್‍ಲ್ಯಾಂಪ್‍ ಮಾಸ್ಕ್ ಈ ಬೈಕ್ ಅನ್ನು ಅದು ಇರುವ ಗಾತ್ರಕ್ಕಿಂತ ಹೆಚ್ಚು ದೊಡ್ಡದಾಗಿ ಕಾಣುವಂತೆ ಮಾಡುತ್ತವೆ. ಈ ಹೆಡ್‍‍ಲ್ಯಾಂಪ್‍‍ನ ಕೆಳಭಾಗದಲ್ಲಿ ಲೋ ಬಿಮ್‍‍ಗಳಿವೆ. ಹೈ ಬೀಮ್ ಅನ್ನು ಆನ್ ಮಾಡಿದಾಗ, ಮೇಲ್ಭಾಗದ ಎಲ್‍ಇ‍‍ಡಿ ಸಹ ಆನ್ ಆಗುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಎಲ್ಇಡಿಗಳು ಹಗಲು ಹೊತ್ತಿನಲ್ಲಿ ಉರಿಯುವಂತೆ ಮಾಡುವ ಪ್ರಯತ್ನವು ಯಶಸ್ವಿಯಾಗಿದೆ ಎಂದು ಟಿವಿಎಸ್ ಕಂಪನಿಯು ಹೇಳಿದೆ. ಇದರಿಂದಾಗಿ ಈ ಬೈಕ್ ಅನ್ನು ಚಾಲನೆ ಮಾಡುವವರು ರಾತ್ರಿಯಲ್ಲಿ ಚಾಲನೆ ಮಾಡುವುದು ಸುಲಭವಾಗಲಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಎಲ್ಇಡಿ ಹೆಡ್‌ಲ್ಯಾಂಪ್‌ಗಳಲ್ಲಿ ನೀಲಿ ಬಣ್ಣದ ಛಾಯೆಗಿಂತ ಹಳದಿ ಬಣ್ಣದ ಛಾಯೆಗಳಿವೆ. ಮುಂಭಾಗದಲ್ಲಿ ಗೋಲ್ಡ್ ಬಣ್ಣದ ಛಾಯೆಯನ್ನು ಹೊಂದಿರುವ ಸಾಂಪ್ರದಾಯಿಕ ರೀತಿಯ ಟೆಲಿಸ್ಕೋಪಿಕ್ ಫೋರ್ಕ್‍‍ಗಳಿವೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಬಿಎಸ್ 6 ಎಂಜಿನ್ ಹೊಂದಿರುವ ಅಪಾಚೆ 200 4 ವಿ ಸ್ಟೈಲಿಶ್ ಆಗಿರುವ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಈ ವ್ಹೀಲ್‍‍ಗಳನ್ನು ಮಾರುಕಟ್ಟೆಯಲ್ಲಿರುವ ಬೈಕ್‍‍ಗಳಲ್ಲಿಯೂ ಸಹ ಅಳವಡಿಸಲಾಗಿದೆ. ಹೊಸ ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 200 4 ವಿ ಬೈಕಿನಲ್ಲಿ ರೇಸಿ ಗ್ರಾಫಿಕ್ಸ್ ಗಳಿದ್ದು, ಬೈಕ್ ಅನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಹಿಂಭಾಗದಲ್ಲಿರುವ ಡಿಸೈನ್ ಹಾಗೂ ಸ್ಟೈಲಿಂಗ್ ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿರುವಂತಿವೆ. ಇವುಗಳಲ್ಲಿ ಎಲ್‍ಇ‍‍ಡಿ ಟೇಲ್ ಲ್ಯಾಂಪ್ ಹಾಗೂ ಬಲ್ಬ್ ಲಿಟ್ ಇಂಡಿಕೇಟರ್‍‍ಗಳಿವೆ. ಎಕ್ಸಾಸ್ಟ್ ಸಿಸ್ಟಂನಲ್ಲಿ ಟ್ವಿನ್ ಬ್ಯಾರೆಲ್ ಯುನಿಟ್‍‍ಗಳಿವೆ. ಈ ಬೈಕಿನಲ್ಲಿರುವ ಕ್ಯಾಟಲಿಕ್ಟ್ ಕನ್ವರ್ಟರ್ ಅನ್ನು ಕೆಳಗೆ ಚಲಿಸಲಾಗಿದ್ದು, ಎಂಜಿನ್ ಹೆಡ್‍‍ಗೆ ಹತ್ತಿರದಲ್ಲಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಎಂಜಿನ್ ಹಾಗೂ ಪರ್ಫಾಮೆನ್ಸ್

ಮಾರುಕಟ್ಟೆಯಲ್ಲಿರುವ ಬೈಕಿಗೂ ಹೊಸ ಬೈಕಿಗೂ ಇರುವ ದೊಡ್ಡ ವ್ಯತ್ಯಾಸವೆಂದರೆ ಹೊಸ ಬೈಕಿನಲ್ಲಿ 197.75 ಸಿಸಿಯ, ಏರ್ ಹಾಗೂ ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಈ ಎಂಜಿನ್ ಹೊಸ ಅಸಿಮೆಟ್ರಿಕ್ ನ್ಯಾನೊ ಫ್ರಿಕ್ಸ್ ಪಿಸ್ಟನ್ ಹಾಗೂ ಹೊಸ ರೇಸ್ ಟ್ಯೂನ್ಡ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಂದಿದೆ. ಇದರಿಂದಾಗಿ ಕಡಿಮೆ ಪ್ರಮಾಣದ ಮಾಲಿನ್ಯವನ್ನು ಉಂಟು ಮಾಡಲಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಬಿ‍ಎಸ್ 6 ನಿಯಮಕ್ಕೆ ಹೊಂದಿಕೊಳ್ಳಲು ಟಿವಿ‍ಎಸ್ ಕಂಪನಿಯ ಎಂಜಿನಿಯರ್‍‍ಗಳು ಕ್ಯಾಟಲಿಕ್ಟ್ ಕನ್ವರ್ಟರ್ ಅನ್ನು ಎಕ್ಸಾಸ್ಟ್ ಸಿಸ್ಟಂನ ಮೇಲಿಟ್ಟಿದ್ದಾರೆ. ಈಗ ಇದನ್ನು ಡೌನ್‍‍ಪೈಪ್ / ಹೆಡರ್ ಮೇಲಿದ್ದು, ಎಕ್ಸಾಸ್ಟ್ ವಾಲ್ವ್ ಗೆ ಹತ್ತಿರದಲ್ಲಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಟಿವಿಎಸ್‌ನಲ್ಲಿರುವ ಟೆಕ್ನಿಕಲ್ ಟೀಂ ಪ್ರಕಾರ, ಇದರಿಂದಾಗಿ ಹೊರಸೂಸುವಿಕೆಯು ಕಡಿಮೆಯಾಗುತ್ತದೆ. ಏಕೆಂದರೆ ಕ್ಯಾಟಲಿಸ್ಟ್ ಕನ್ವರ್ಟರ್‍‍ನಲ್ಲಿರುವ ಕ್ಯಾಟಲಿಸ್ಟ್ ಮೊದಲಿಗಿಂತ ಹೆಚ್ಚು ವೇಗವಾಗಿ ಬಿಸಿಯಾಗುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಎಂಜಿನ್ ಅನ್ನು ಬಿ‍ಎಸ್ 6ಗೆ ಅಪ್‍‍ಡೇಟ್ ಮಾಡಿರುವ ಕಾರಣಕ್ಕೆ ಅಂಕಿ ಅಂಶದಲ್ಲಿ ಕುಸಿತವಾಗಲಿದೆ. ಹೊಸ ಬಿ‍ಎಸ್ 6 ಎಂಜಿನ್ 8,500 ಆರ್‍‍ಪಿ‍ಎಂ‍‍ನಲ್ಲಿ 20.21 ಬಿಹೆಚ್‍‍ಪಿ ಪವರ್ ಹಾಗೂ 7,500 ಆರ್‍‍ಪಿ‍ಎಂನಲ್ಲಿ 16.8 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಅಂದರೆ ಬಿಎಸ್ 4 ಎಂಜಿನ್‍‍ಗಿಂತ 0.03 ಕಡಿಮೆ ಬಿ‍‍ಹೆಚ್‍‍ಪಿ ಪವರ್ ಹಾಗೂ 1.3 ಎನ್‍ಎಂ ಕಡಿಮೆ ಟಾರ್ಕ್ ಉತ್ಪಾದಿಸುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಬಿ‍ಎಸ್ 6 ಎಂಜಿನ್ ಈ ಬೈಕಿನ ಪರ್ಫಾಮೆನ್ಸ್ ಅನ್ನು ಕಡಿಮೆಗೊಳಿಸುವುದಿಲ್ಲ. ಸವಾರನ ಬಲಗಡೆಯ ಮಣಿಕಟ್ಟಿನ ಪ್ರತಿಯೊಂದು ಚಲನೆಯು ಈಗ ಎಂಜಿನ್‌ನಿಂದ ಪ್ರತಿಕ್ರಿಯೆಯನ್ನು ಪಡೆಯುತ್ತದೆ. ಟಿವಿಎಸ್ ಕಂಪನಿಯು ಹೊಸ ಬೈಕಿನಲ್ಲಿ ಗ್ಲೈಡ್ ಥ್ರೂ ಟೆಕ್ನಾಲಜಿ (ಜಿಟಿಟಿ)ಯನ್ನು ಅಳವಡಿಸಿದೆ. ಇದರಿಂದಾಗಿ ಬೈಕ್ ಅನ್ನು ನಿಧಾನವಾಗಿ ಚಲಾಯಿಸುವಾಗ ಆಫ್ ಆಗದಂತೆ ತಡೆಯುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಈ ಫೀಚರ್‍‍ನಿಂದಾಗಿ ಪ್ರತಿದಿನ ಬೈಕ್ ಚಲಾಯಿಸುವ ಬೈಕ್ ಸವಾರರಿಗೆ ಅನುಕೂಲವಾಗಲಿದೆ. ಭಾರತದ ರಸ್ತೆಗಳಲ್ಲಿರುವ ವಾಹನ ದಟ್ಟಣೆಯ ಪರಿಣಾಮವಾಗಿ ವಾಹನಗಳು ಟ್ರಾಫಿಕ್‍‍ನಲ್ಲಿ ಗಂಟೆಗಟ್ಟಲೇ ನಿಲ್ಲುವುದು ಅನಿವಾರ್ಯವಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಜಿಟಿ‍ಟಿಯನ್ನು ಹೊಂದಲಿರುವ ಅಪಾಚೆ ಆರ್‍‍ಟಿ‍ಆರ್ 200 4ವಿ ಬೈಕ್ ಲೋ ಗೇರ್‍‍ನಲ್ಲಿದ್ದರೂ ಟ್ರಾಫಿಕ್‍‍ನಲ್ಲಿ ಆಫ್ ಆಗುವುದಿಲ್ಲ. ಬೈಕ್ 1ನೇ, 2ನೇ ಹಾಗೂ 3ನೇ ಗೇರ್‍‍ನಲ್ಲಿ ಯಾವುದೇ ಥಾಟಲ್ ಇನ್‍ಪುಟ್ ಇಲ್ಲದೇ ಚಲಿಸಲಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಈ ಗೇರ್‌ಗಳಲ್ಲಿ, ವಾಹನ ದಟ್ಟಣೆಯಲ್ಲಿ ಚಲಿಸುವಾಗ, ಬೈಕಿನಲ್ಲಿರುವ ಎಫ್‌ಐ ಸಿಸ್ಟಂ ಬೈಕ್ ಅನ್ನು 2,000 ಆರ್‌ಪಿಎಂನಲ್ಲಿಡುತ್ತದೆ. ಬೈಕಿನಲ್ಲಿ ರೇಸ್ ಟ್ಯೂನ್ಡ್ ಸ್ಲಿಪ್ಪರ್ ಕ್ಲಚ್ ಅನ್ನು ಸಹ ಅಳವಡಿಸಲಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಟಿವಿ‍ಎಸ್ ಕಂಪನಿಯ ದ್ವಿ ಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುವಲ್ಲಿ, ಟಿವಿ‍ಎಸ್ ರೇಸಿಂಗ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ರೇಸ್ ಟ್ರಾಕ್‍‍ನಲ್ಲಿ ಹೈ ಆರ್‍‍ಪಿ‍ಎಂ ಡೌನ್‍‍ಶಿಫ್ಟ್ ಯಾವಾಗಲೂ ಚಾಲನೆಯಲ್ಲಿರುತ್ತದೆ. ಸ್ಲಿಪ್ಪರ್ ಕ್ಲಚ್ ಹಿಂಭಾಗದ ವ್ಹೀಲ್ ಅನ್ನು ಹೆಚ್ಚಿನ ಆರ್‌ಪಿಎಂಗಳಲ್ಲಿ ಲಾಕ್ ಆಗದಂತೆ ತಡೆಯುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಹೊಸ ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 200 4ವಿ ಬೈಕ್ ಹೆಚ್ಚಿನ ಪರ್ಫಾಮೆನ್ಸ್ ನೀಡುತ್ತದೆ. ಈ ಬೈಕ್ ಅನ್ನು ಟ್ರ್ಯಾಕ್‍‍ನಲ್ಲಿ ಚಾಲನೆ ಮಾಡುವಾಗ ಟಾರ್ಕ್ ಅಂಕಿಗಳು ಕಡಿಮೆಯಾಗಲಿಲ್ಲ. 0-60 ಕಿ.ಮೀ ವೇಗವನ್ನು ಕೇವಲ ನಾಲ್ಕು ಸೆಕೆಂಡುಗಳಲ್ಲಿ ಚಲಿಸಿದರೆ, 0-100 ಕಿ.ಮೀ ವೇಗವನ್ನು ಕೇವಲ 12 ಸೆಕೆಂಡುಗಳಲ್ಲಿ ಚಲಿಸಬಹುದು.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ರೈಡ್ ಹಾಗೂ ಹ್ಯಾಂಡ್ಲಿಂಗ್

ಟಿವಿಎಸ್ ಅಪಾಚೆ 200 4 ವಿ ಬೈಕ್ ಈ ಸೆಗ್‍‍ಮೆಂಟಿನಲ್ಲಿರುವ ಅತ್ಯುತ್ತಮ ಬೈಕ್‍‍ಗಳಲ್ಲಿ ಒಂದಾಗಿದೆ. ಬೈಕಿನ ಮುಂಭಾಗವು ಹಗುರವಾಗಿದ್ದು, ಟ್ರ್ಯಾಕ್ ಬಳಕೆಗೆ ಯೋಗ್ಯವಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಕೆವೈಬಿ ಮೊನೊಶಾಕ್‍‍ಗಳಿವೆ. ಸಸ್ಪೆಂಷನ್ ರೇಸ್‌ಟ್ರಾಕ್‌ನಲ್ಲಿನ ಸಣ್ಣ ಉಬ್ಬುಗಳನ್ನು ತೆಗೆದುಕೊಳ್ಳುತ್ತದೆ. ಅಪಾಚೆ ಆರ್‍‍ಟಿ‍ಆರ್ 200 4ವಿ ಬೈಕ್ ಈ ಸೆಗ್‍‍ಮೆಂಟಿನಲ್ಲಿ ಹೆಚ್ಚು ಆರಾಮದಾಯಕ ಸವಾರಿಯನ್ನು ನೀಡುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಹೊಸ ಬೈಕ್ ಅನ್ನು ರಸ್ತೆಯಲ್ಲಿ ಚಾಲನೆ ಮಾಡದಿದ್ದರೂ, ಸಸ್ಪೆಂಷನ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೇ ಇರುವುದನ್ನು ಕಾಣಬಹುದು. ಈ ಬೈಕಿನಲ್ಲಿರುವ ಟಿವಿ‍ಎಸ್ ಟಯರ್‌ಗಳು ರಸ್ತೆಯಲ್ಲಿನ ಹಿಡಿತವನ್ನು ಸರಿಯಾಗಿ ನಿರ್ವಹಿಸುತ್ತವೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಹೊಸ ಅಪಾಚೆ ಬೈಕಿನಲ್ಲಿ, ಟಿವಿಎಸ್ ಟಯರ್‌ಗಳ ರೆಮೋರಾ ಪ್ರೊಟೊರ್ಕ್ ಸರಣಿಯನ್ನು ಅಳವಡಿಸಲಾಗಿದೆ. ಅವುಗಳು ಸರಳವಾಗಿದ್ದರೂ ಅದ್ಭುತವಾಗಿ ಕಾಣುತ್ತವೆ. ಟಾರ್ಮ್ಯಾಕ್ ಮೇಲೆ ಅಂಟಿಕೊಳ್ಳುತ್ತವೆಯಾದರೂ ಇಟಾಲಿ ಮೂಲದ ಟಯರ್‍‍ಗಳಿಗಿಂತ ಉತ್ತಮವಾಗಿವೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಇದೇ ಮೊದಲ ಬಾರಿಗೆ ಟಿವಿಎಸ್ ಕಂಪನಿಯು ಬೈಕಿನ ಹಿಂಭಾಗದಲ್ಲಿ ರೇಡಿಯಲ್ ಟಯರ್‍‍ಗಳನ್ನು ಅಳವಡಿಸಿದೆ. ಸಾರ್ವಜನಿಕ ರಸ್ತೆಯಲ್ಲಿ ಈ ಬೈಕ್ ಅನ್ನು ಚಾಲನೆ ಮಾಡದ ಕಾರಣ ದಿನ ಬಳಕೆಯ ಬಗ್ಗೆ ಹೇಳಲು ಸಾಧ್ಯವಾಗುತ್ತಿಲ್ಲ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 270 ಎಂಎಂ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಗಳಿವೆ. ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಪ್ರಮುಖ ಫೀಚರ್‍‍‍ಗಳು

ಹೊಸ ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 200 4 ವಿ ಬೈಕಿನಲ್ಲಿ ಎಲ್ಇಡಿ ಡಿಆರ್‍ಎಲ್‍ ಹೊಂದಿರುವ ಎಲ್ಇಡಿ ಹೆಡ್‍‍ಲ್ಯಾಂಪ್, ರೇಸ್-ಟ್ಯೂನ್ಡ್ ಸ್ಲಿಪ್ಪರ್ ಕ್ಲಚ್, ಫ್ಯೂಯಲ್ ಇಂಜೆಕ್ಷನ್ ಸೇರಿದಂತೆ ಹಲವಾರು ಫೀಚರ್‍‍‍ಗಳಿವೆ. ಇದರ ಜೊತೆಗೆ ಹೊಸ ಸ್ಮಾರ್ಟ್ ಎಕ್ಸ್ ಕನೆಕ್ಟ್ ಹಾಗೂ ಹೊಸ ಎಲ್‍‍ಸಿಡಿ ಇನ್ಸ್ ಟ್ರೂಮೆಂಟೆಷನ್‍‍ಗಳಿವೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಇನ್ ಬಿಲ್ಟ್ ಡಾಟ್ ಮ್ಯಾಟ್ರಿಕ್ಸ್ ಡಿಸ್‍‍ಪ್ಲೇಯನ್ನು ಹೊಂದಿದ್ದು, ಬಳಕೆದಾರರಿಗೆ ಬೈಕಿನ ವೇಗವನ್ನು ಕಿ.ಮೀನಲ್ಲಿ ಅಥವಾ ಮೈಲುಗಳಲ್ಲಿ ನೋಡಲು ಅನುವು ಮಾಡಿಕೊಡುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಇದು ಬೈಕ್ ಚಲಿಸಿದ ಹೆಚ್ಚಿನ ವೇಗ, 0-100 ಕಿಮೀ / ಗಂ ಸಮಯ, ಸರಾಸರಿ ವೇಗ, ಇನ್‍‍ಕಮಿಂಗ್ ಕಾಲ್ ಅಲರ್ಟ್, ಕ್ರ್ಯಾಶ್ ಅಲರ್ಟ್ ಇತ್ಯಾದಿಗಳನ್ನು ಪ್ರದರ್ಶಿಸುತ್ತದೆ. ಕನ್ಸೋಲ್ ಅನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗೆ ಜೋಡಿಸಬಹುದು. ಇದರ ಮೂಲಕ ಇದು ನ್ಯಾವಿಗೇಷನ್ ಡೈರೆಕ್ಷನ್, ಲೋ ಫ್ಯೂಯಲ್ ವಾರ್ನಿಂಗ್, ಹತ್ತಿರದಲ್ಲಿರುವ ಪೆಟ್ರೋಲ್ ಬಂಕ್ ಮುಂತಾದವುಗಳ ಮಾಹಿತಿಯನ್ನು ನೀಡುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಈ ಬೈಕಿನಲ್ಲಿರುವ ಮತ್ತೊಂದು ಪ್ರಮುಖ ಲಕ್ಷಣವೆಂದರೆ ರೇರ್ ವ್ಹೀಲ್ ಲಿಫ್ಟ್ ಪ್ರೊಟೆಕ್ಷನ್ ಎಬಿಎಸ್ ಸಿಸ್ಟಂನ ಭಾಗವಾಗಿರಲಿದೆ. ಇದರಿಂದಾಗಿ ಮುಂಭಾಗದ ವ್ಹೀಲ್ ಅನ್ನು ಗಟ್ಟಿಯಾಗಿ ಬ್ರೇಕ್ ಹಾಕಿದಾಗ ಹಿಂಭಾಗದ ವ್ಹೀಲ್ ಮೇಲಕ್ಕೇಳುವುದನ್ನು ತಡೆಯುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಿವಿ‍ಎಸ್ ಕಂಪನಿಯು ಮಾರುಕಟ್ಟೆಯಲ್ಲಿರುವ ಬೈಕಿಗಿಂತ ಹಲವಾರು ಅಪ್‍‍ಡೇಟ್‍‍ಗಳನ್ನು ಹೊಸ ಅಪಾಚೆ ಆರ್‍‍ಟಿ‍ಆರ್ 200 4ವಿ ಬೈಕಿನಲ್ಲಿ ಮಾಡಿದೆ. ಈ ಬೈಕ್ 2014ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಡ್ರಾಕನ್ ಪರಿಕಲ್ಪನೆಯಂತೆ ಕಾಣುತ್ತದೆ. ಹೊಸ ಕ್ಲಾ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಕೆಲವರು ಇಷ್ಟಪಡುತ್ತಾರೆ, ಕೆಲವರು ಪಡದೇ ಇರಬಹುದು.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಟಿವಿ‍ಎಸ್ ಕಂಪನಿಯು ಈ ಬೈಕಿನಲ್ಲಿ 6 ಸ್ಪೀಡಿನ ಗೇರ್ ಬಾಕ್ಸ್ ಅನ್ನು ಸಹ ಅಳವಡಿಸಬಹುದಿತ್ತು. ಅಪಾಚೆ ಬೈಕ್ ಈ ಸೆಗ್‍‍ಮೆಂಟಿನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿರುವ ಏಕೈಕ ಬೈಕ್ ಆಗಿದೆ. ಇದನ್ನು ಹೊರತುಪಡಿಸಿ ಹೊಸ ಅಪಾಚೆ 200 4 ವಿ ಬೈಕ್ ಉತ್ತಮವಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 200

ಪರ್ಫಾಮೆನ್ಸ್ ಹಾಗೂ ರಾಸ್ಪಿ ಎಕ್ಸಾಸ್ಟ್ ನೋಟ್ ಕಳೆದುಕೊಳ್ಳದೆ ಹೊಸ ಬೈಕ್ ಸ್ವಚ್ಛವಾಗಿದ್ದು, ಪರಿಸರ ಸ್ನೇಹಿಯಾಗಿದೆ. ಹೊಸ ಬೈಕಿನ ಬೆಲೆಯು ಬಜಾಜ್ 200 ಎನ್ಎಸ್ ಬೈಕಿಗಿಂತ ಹೆಚ್ಚಾಗಿದೆ. ಆದರೆ ಈ ಬೈಕ್ ಹಲವಾರು ಫೀಚರ್ ಹಾಗೂ ವಿನ್ಯಾಸಗಳನ್ನು ಹೊಂದಿದೆ.

Most Read Articles

Kannada
English summary
TVS Apache RTR 200 4V BS-VI First Ride Review: Cleaner, Greener & Still A Thriller - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X