ರಿವ್ಯೂ: ಬೈಕ್ ರೈಡಿಂಗ್‍‍‍ನಲ್ಲಿ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಮೂರು ವಾರಗಳ ಹಿಂದೆ ನಮ್ಮ ಡ್ರೈವ್‍‍ಸ್ಪಾರ್ಕ್ ತಂಡವು ಟಿವಿಎಸ್ ಮೋಟರ್ಸ್‍ನಿಂದ ಅಪಾಚೆ 200 4ವಿ 2.0 ರೇಸ್ ಎಡಿಷನ್ ಬೈಕ್ ಅನ್ನು ಪಡೆಯುವ ಮೂಲಕ ಲಾಂಗ್ ಟರ್ಮ್ ಟೆಸ್ಟ್ ಗ್ಯಾರೇಜ್ ಭಾಗವಾಗಿ ಪರೀಕ್ಷಿಸಲಾಗಿತ್ತು.

By Rahul Ts

ಮೂರು ವಾರಗಳ ಹಿಂದೆ ನಮ್ಮ ಡ್ರೈವ್‍‍ಸ್ಪಾರ್ಕ್ ತಂಡವು ಟಿವಿಎಸ್ ಮೋಟರ್ಸ್‍ನಿಂದ ಅಪಾಚೆ 200 4ವಿ 2.0 ರೇಸ್ ಎಡಿಷನ್ ಬೈಕ್ ಅನ್ನು ಪಡೆಯುವ ಮೂಲಕ ಲಾಂಗ್ ಟರ್ಮ್ ಟೆಸ್ಟ್ ಗ್ಯಾರೇಜ್ ಭಾಗವಾಗಿ ಪರೀಕ್ಷಿಸಲಾಗಿತ್ತು. ಮೂರು ವಾರಗಳಲ್ಲಿ ಸುಮಾರು 1,000 ಕಿಲೋಮೀಟರ್‍‍ಗಿಂತ ಹೆಚ್ಚು ರೈಡ್ ಮಾಡಿದ ನಮ್ಮ ತಂಡವು ವಿವಿಧ ಹಂತದ ಚಾಲನಾ ಅನುಭಗಳನ್ನು ಇಲ್ಲಿ ಹಂಚಿಕೊಂಡಿದೆ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಹೊಸ ಫರ್ಫಾರ್ಮೆನ್ಸ್ ಬೈಕ್ ಎಂದರೆ ನಮ್ಮ ತಲೆಗೆ ಬರುವುದು ಮೊದಲಿಗೆ ಬೈಕ್ ನೀಡುವ ಮೈಲೇಜ್ ಎಷ್ಟು.? ಈ ಬೈಕ್ ಸವಾರನಿಗೆ ಅನೂಕೂಲವಾಗಿದೆಯೆ.? ಮತ್ತು ಡ್ರೈವಿಂಗ್ ವೇಳೆ ಯಾವ ರೀತಿಯ ಅನುಭವವನ್ನು ನೀಡುತ್ತದೆ ಎಂದು. ಇಂದಿನ ಈ ರಿವ್ಯೂ‍‍ನಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದೇವೆ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಟಿವಿಎಸ್ ಮೋಟಾರ್ಸ್ ಇದೇ ಮಾರ್ಚ್ ತಿಂಗಳಿನಲ್ಲಿ ತಮ್ಮ ಅಪಾಚೆ 200 ರೇಸ್ ಎಡಿಷನ್ 2.0 ಅನ್ನು ಬಿಡುಗಡೆಗೊಳಿಸಿತ್ತು. ಡ್ರೈವ್‍‍ಸ್ಪಾರ್ಕ್ ತಂಡಕ್ಕೆ ಸಿಕ್ಕ ಅಪಾಚೆ 200 ರೇಸ್ ಎಡಿಷನ್ 2.0 ಬೈಕ್ ಕಪ್ಪು ಬಣ್ಣ ಮತ್ತು ಕೆಂಪು ಬಣ್ಣದ ಗ್ರಾಫಿಕ್ಸ್ ನೊಂದಿಗೆ ಆಕರ್ಷಕ ವಿನ್ಯಾಸವನ್ನು ಪಡೆದಿತ್ತು.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಅಪಾಚೆ 200 ರೇಸ್ ಎಡಿಷನ್ 2.0 ಬೈಕ್ ಅನ್ನು ರೈಡ್ ಮಾಡಿದ ಕೆಲದಿನಗಳ ನಂತರ ಹಲವರು ಈ ಬೈಕಿನ ಬೆಲೆ ಮತ್ತು ಮೈಲೇಜ್ ಅನ್ನು ಕೇಳುತ್ತಿದ್ದರು. ಅವರಿಗೆಲ್ಲಾ ಉತ್ತರಿಸಲು ಏಳು ಸಣ್ಣ ಮಕ್ಕಳಿಗೆ ಜಾಲಿ ರೈಡ್‍ ಅನುಭವವನ್ನು ನೀಡಿದ್ದೆವು.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ನಮ್ಮ ತಂಡದ ಕೈಗೆ ಸಿಗುವಾಗ ಈ ಬೈಕ್ ಆಗಲೇ 1,489 ಕಿಲೋಮೀಟರ್ ಚಲಿಸಿದೆ ಎಂದು ಸ್ಪೀಡೊ ಮೀಟರ್‍‍ನಲ್ಲಿ ತೋರಿಸುತ್ತಿತ್ತು. ಸಿಕ್ಕ ತಕ್ಷಣವೇ ನನ್ನ ಜೊತೆ ಕೆಲಸ ಮಾಡುತ್ತಿದ್ದವರೆಲ್ಲಾ ಬೈಕ್ ಅನ್ನು ಪರೀಕ್ಷಿಸಲು ಶುರು ಮಾಡಿದ್ದರು. ಕೊನೆಗೂ ನನ್ನ ಕೈಗೆ ಬೈಕ್ ಸಿಕ್ಕ ತಕ್ಷಣ ಬೆಂಗಳೂರಿನ ಬೈಕರ್ಸ್ ಡೆಸ್ಟಿನೇಷನ್ ಆದ ನಂದಿ ಬೆಟ್ಟದ ಕಡೆ ನಮ್ಮ ಪಯಣ ಶುರುವಾಯಿತು.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ನಂದಿ ಬೆಟ್ಟದ ಪ್ರಯಾಣದ ವೇಳೆ ಈ ಬೈಕಿನ ಕಾರ್ನೆರಿಂಗ್ ಸಾಮರ್ಥ್ಯದ ಬಗ್ಗೆ ಅರಿವಾಯಿತು. ಈ ಮೋಟರ್‍‍‍ಸೈಕಲ್‍‍‍ನಲ್ಲಿ ಕಾರ್ನೆರಿಂಗ್ ಸಾಮರ್ಥ್ಯವು ಅದ್ಬುತವಾಗಿ ವಿನ್ಯಾಸಗೊಳಿಸಲಾಗಿದ್ದು, ಬೆಟ್ಟದ ಸುತ್ತುವರಿದ ರಸ್ತೆಗಳಲ್ಲಿ ಚಲಿಸಲು ಸುಲಭವಾಗಿದೆ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಬೈಕಿನಲ್ಲಿ ಹಿಂಭಾಗದ ಫುಟ್‍‍ಪೆಗ್ಸ್ ಮತ್ತು ಕ್ಲಿಪ್ ಆನ್ ಹ್ಯಾಂಡಲ್‍‍ಬಾರ್ಸ್ ಅನ್ನು ಸಸ್ಪೆಂಷನ್‍‍ಗಳಿಗೆ ಅಲೋಚನಾತ್ಮಕವಾಗಿ ಅಳವಡಿಸಲಾಗಿದ್ದು, ಸುತ್ತಿನ ರಸ್ತೆಗಳಲ್ಲಿ ಅರಾಮದಾಯಕವಾಗಿ ಚಲಾಯಿಸಬಹುದು.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಅಪಾಚೆ 200 4ವಿ ರೇಸ್ ಎಡಿಷನ್ ಬೈಕ್ 197ಸಿಸಿ ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 20.21ಬಿಹೆಚ್‍‍ಪಿ ಮತ್ತು 18.1ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಅದಾಗ್ಯೂ ಈ ಬೈಕ್ 7,000ಆರ್‍‍ಪಿಮ್ ಪ್ಕೀಕ್ ಟಾರ್ಕ್ ಮತ್ತು 8,500ನ ಹಾರ್ಸ್ ಪವರ್ ಪಡೆದಿರುವುದರಿಂದ ಹೆಚ್ಚು ಸಾಮರ್ಥ್ಯದ ಬೈಕ್‍‍ಗಳಿಗೆ ಹೋಲಿಸಿದರೆ ಇದು ಕೊಂಚ ಕಡಿಮೆಯೆ ಇದೆ. ಮೊದಲ ಬಾರಿಗೆ ಈ ಮೋಟಾರ್‍‍ಸೈಕಲ್‍ನ ಥ್ರೊಟಲ್ ಅನ್ನು ತೆರೆದ ಕ್ಷಣ, ಹೆಚ್ಚಿನ ವೇಗ ವರ್ಧನೆಯ ನಿರೀಕ್ಷೆಯಿತ್ತು ಆದರೆ ಅದು ಕೊಂಚ ನಿರಾಶೆಯಾಯಿತು.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ನಂದಿ ಬೆಟ್ಟದಿಂದ ಹಿಂತಿರುಗಿದ ಅದೇ ವಾರಾಂತ್ಯದಲ್ಲಿ ಈ ಬೈಕ್ ಅನ್ನು ರೇಸ್‍‍ಗೆ ಕೊಂಡು ಹೋಗಲಾಯಿತು. ಆದರೂ ಆ ಮೋಟಾರ್‍‍ಸೈಕಲ್, ಟಿವಿಎಸ್ ರೇಸಿಂಗ್‍ನ ಮೂಲಕ ಟ್ಯೂನ್ ಮಾಡಲ್ಪಟ್ಟಿತ್ತು. ಮತ್ತು ರೇಸ್ ಟ್ಯೂನ್ಡ್ ಇನ್ಟೇಕ್, ಕಾರ್ಬ್ಯುರೆಟ್ಟರ್ ಮತ್ತು ಎಕ್ಸಾಸ್ಟ್ ಅನ್ನು ಒಳಗೊಂಡಿತ್ತು. ಇದು ಉನ್ನತ ಲಿಫ್ಟ್ ಮತ್ತು ಹೊಂದುವಂತಹ ದಹನ ಸಮಯದೊಂದಿಗೆ ಕ್ಯಾಮ್ ಶಾಫ್ಟ್ ಅನ್ನು ಹೊಂದಿದ್ದು, 9,300 ಆರ್ಪಿಎಂನಲ್ಲಿ 23.6 ಬಿಹೆಚ್‍‍ಪಿ ಗರಿಷ್ಠ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಿತು.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಈ ಬೈಕ್‍‍ನಲ್ಲಿ ಬಳಸಲಾದ ಎಂಜಿನ್ ಅನ್ನೇ ಟಿವಿಎಸ್‍ ಸಂಸ್ಥೆಯು ತಮ್ಮ ರ್‍ಯಾಲಿ ಮೋಟರ್‍‍ಸೈಕಲ್‍‍ಗಳಲ್ಲಿ ಅಳವಡಿಸಲಾಗಿದ್ದು, ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡಿದೆ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಇತಿಹಾಸದಲ್ಲಿ ಹೇಳಿದಂತೆ ಒಂದು ಮೋಟರ್‍‍ಸೈಕಲ್ ಅನ್ನು ಹೆಚ್ಚು ದೈನಂದಿನವಾಗಿ ಬಳಸುತ್ತಿದರೆ ಮಾತ್ರ ಅದರ ಯೋಗ್ಯತೆ ಮತ್ತು ಕಾರ್ಯನಿರ್ವಹತೆಯ ಬಗ್ಗೆ ನಮಗೆ ತಿಳಿಯುತ್ತದೆ. ಎಂಬುದು ಅಪಾಚೆ ಬೈಕ್ ಮತ್ತೊಮ್ಮೆ ನೆನಪು ಮಾಡಿದೆ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಈ ಬೈಕಿನಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ ಇದರ ಎಕ್ಸಾಸ್ಟ್. ಇದರಲ್ಲಿನ ಎಕ್ಸಾಸ್ಟ್ ಕಡಿಮೆ ಶಬ್ದವನ್ನು ಹೊರಬಿಡುತ್ತದೆ. ಮತ್ತು ಈ ಬೈಕ್‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಅಪಾಚೆ ಬೈಕ್ ಕೈಗೆ ಸಿಕ್ಕದ್ದು ಸತತ ಒಂದು ವಾರದಿಂದ ರೈಡ್ ಮಾಡುಲಾಗುತ್ತಿತ್ತು. ಆದರಿಂದ ಇದ್ರಲ್ಲಿನ ಎಲ್ಲಾ ಅಂಶಗಳ ಬಗ್ಗೆ ತಿಳಿಯುತ್ತಾ ಹೋಯಿತು. ಎಬಿಎಸ್ ವಿಷಯಕ್ಕೆ ಬಂದರೆ, ಗಂಟೆಗೆ 70 ಕಿಲೋಮೀಟರ್ ಚಲಿಸುತಿದ್ದ ನನ್ನ ಬೈಕ್‍ಗೆ ಮಹಿಳೆಯೊಬ್ಬಳು ಎದುರಾದಾಗ ಆಗ ಈ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಇರಲಿಲ್ಲದಿದ್ದರೆ ಸ್ಥಳದಲ್ಲೇ ಅಪಘಾತವಾಗುವ ಸಾಧ್ಯತೆಗಳಿದ್ದವು. ಆದ್ರೆ ಎಬಿಎಸ್ ನನ್ನ ನೆರವಿಗೆ ಬಂದಿದ್ದನ್ನ ಮರೆಯುವ ಹಾಗಿಲ್ಲ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಅಲ್ಲದೇ ಇದರಲ್ಲಿನ ಸ್ಲಿಪ್ಪರ್ ಕ್ಲಚ್ ಆ ಕ್ಷಣದಲ್ಲಿ ಬೈಕಿನ ಹಿಂದಿನ ಚಕ್ರವನ್ನು ಆಕ್ರಮಣಕಾರಿ ವೇಗದಲ್ಲಿದಾಗ ತಡೆಹಿಡಿದು ಮುಂದಾಗ ಬೇಕಿದ್ದ ಅಪಘಾತವನ್ನು ನಿಲ್ಲಿಸಿತು. ಮೇಲೆ ತಿಳಿಸಿದ ಎಲ್ಲಾ ಗುಣಲಕ್ಷಣಗಳು ಅಪಾಚೆ ಆರ್‍‍ಟಿಆರ್ 200 4ವಿ ರೇಸ್ ಎಡಿಶನ್ 2.0 ಎಬಿಎಸ್ ಸವಾರಿ ಮಾಡಲು ಸಂತೋಷವನ್ನು ನೀಡುತ್ತವೆ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ನಮ್ಮ ತಂಡವು 9.9 ಸೆಕೆಂಡಿಗೆ 0-100 ಕಿಲೋಮೀಟರ್ ಮತ್ತು ಗಂಟೆಗೆ 133 ಕಿಲೋ ಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ತಲುಪಿದೆವು. ಅಂದರೆ ನಾವು ಟಿವಿಎಸ್ ಸಂಸ್ಥೆಯು ಹೇಳಿಕೊಂಡಿರುವ 12.1 ಸೆಕೆಂಡಿನಲ್ಲಿ ಗಂಟೆಗೆ 129 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ನಾವು ಮೀರಿಸಿದ್ದೇವೆ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಮೇಲೆ ಹೇಳಿರುವುದೆಲ್ಲ ಈ ಬೈಕಿನ ಅನುಕೂಲತೆಗಳು. ಹಾಗದರೇ ಅನಾನುಕೂಲತೆಗಳು.? ಅಂದರೇ ಯವುದು ಗಣನೀಯವಲ್ಲ. ನಮ್ಮ ಕೈಗೆ ಬೈಕ್ ಫ್ರಂಟ್ ಡಿಸ್ಕ್ ಬ್ರೇಕ್ ಕ್ಯಾಲಿಪರ್‍‍ನಲ್ಲಿನ ರಬ್ಬರ್ ರಶ್ ಮಿಸ್ ಆಗಿತ್ತು.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಆದರೆ ಹತ್ತಿರದ ಸ್ಪೇರ್ ಪಾರ್ಟ್ಸ್ ಅಂಗಡಿಗೆ ಹೋದಾಗ ಸ್ಥಳಿಯ ಗ್ಯಾರೇಜ್ ಈ ನಮ್ಮ ಸಮಸ್ಯೆಯನ್ನು ಕೇವಲ ರೂ.40ರಲ್ಲಿ ಸರಿಮಾಡಿದರು. ಇದು ಗಮನ ಹರಿಸುವ ವಿಷಯವಲ್ಲವಾದರೂ ಯಾರೊಬ್ಬರು ಆ ರಬ್ಬರ್ ಅನ್ನು ಬಲದಿಂದ ಎಳೆದ ಪರಿಣಾಮ ಅದು ಕಿತ್ತು ಬಂದಿದೆ.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಇದಲ್ಲದೆ ಬೈಕ್‍‍ನಲ್ಲಿನ ಸ್ಟಾರ್ಟ್ ಮತ್ತು ಸ್ಟಾಪ್ ಬಟನ್ ಕೂಡಾ ತಕ್ಷಣ ಪ್ರತಿಕ್ರಿಯುಸುತ್ತಿರಲಿಲ್ಲ. ಗೇರ್ ಸ್ಥಾನವು ಕೂಡ ತಪ್ಪಾಗಿ ತೋರಿಸುತ್ತಿತ್ತು. ಏಕೆಂದರೆ ಬೈಕ್ ಮೊದಲನೆಯ ಗೇರ್‍‍ನಲ್ಲಿದ್ದರು ಅದು ನ್ಯೂಟ್ರಲ್‍‍ನಲ್ಲಿರುವ ಹಾಗೆ ತೋರಿಸುತ್ತಿತ್ತು. ಈ ಸಮಸ್ಯೆಗಳು ಚಿಕ್ಕದಾಗಿದ್ದರೂ, ಬೈಕು 2,500 ಮತ್ತು 3,000 ಕಿಲೋಮೀಟರ್‍‍ಗಳ ನಡುವಿನ ಎರಡನೆಯ ಸರ್ವೀಸ್‍‍ಗೆ ತೊಡಗಿದಾಗ ಶೀಘ್ರದಲ್ಲೇ ವಿಂಗಡಿಸಲಾಯಿತು.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಟಿವಿಎಸ್ ಅಪಾಚೆ ಆರ್‍‍‍ಟಿಆರ್ 200 4ವಿ ರೇಸ್‍ ಎಡಿಷನ್‍‍ನ ಮೇಲೆ ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಅಪಾಚೆ ಖಂಡಿತವಾಗಿಯೂ ರೈಡಿಂಗ್ ವೇಳೆ ಒಳ್ಳೆಯ ಅನುಭವವನ್ನು ನೀಡಿದೆ. ಹೇಗಾದರೂ, ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೆ ಅಂತ್ಯಗೊಳ್ಳುತ್ತವೆ ಹಾಗೆಯೆ ನಮ್ಮ ಗ್ಯಾರೇಜ್‍‍ನಲ್ಲಿನ ಅಪಾಚೆಯ ಸಮಯವೂ ಸಹ ಬೈಕ್‌ನಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಟ್ಟಿದ್ದರೂ ಅಂತ್ಯಗೊಂಡಿತು.

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಒಟ್ಟು ಮಾಡಿದ ಸವಾರಿ : 1,021ಕಿಮೀ

ಮೈಲೇಜ್ : 38ಕಿಮೀ/ಲೀ

ಟಾಪ್ ಸ್ಪೀಡ್ : 133 ಕಿಮೀ/ಗಂ

ಆಕ್ಸಿಲರೇಷನ್ (0-100) : 9.9 ಸೆಕೆಂಡ್

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಗುಡ್ ಬೈಟ್ಸ್

ಉತ್ತಮ ಎಂಜಿನ್

ರೈಡಿಂಗ್ ಗುಣಮಟ್ಟ

ಎಕ್ಸಾಸ್ಟ್ ನೋಟ್

ರಿವ್ಯೂ: ಬೈಕ್ ರೈಡಿಂಗ್ ಹೊಸ ಅನುಭವ ನೀಡುವ ಟಿವಿಎಸ್ ಅಪಾಚೆ 200 ರೇಸ್ ಎಡಿಷನ್

ಎದುರಾದ ತೊಂದರೆಗಳು

ಮೂಡಿ ಸ್ಟಾರ್ಟರ್ ಬಟನ್

ತಪ್ಪು ಸ್ಥಾನದಲ್ಲಿ ತೋರಿಸುತ್ತಿದ್ದ ಗೇರುಗಳು.

Most Read Articles

Kannada
Read more on tvs motor apache review
English summary
TVS Apache 200 Race Edition Long-Term Review.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X