ಫಸ್ಟ್ ರೈಡ್ ರಿವ್ಯೂ: ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಭಾರತದಲ್ಲಿ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ವಾಹನಗಳ ಮಾರಾಟವನ್ನು ತಗ್ಗಿಸಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಮಾರಾಟದ ಮೇಲೆ ವಿಶೇಷ ಒತ್ತು ನೀಡಲಾಗುತ್ತಿದೆ. ಇದರಿಂದಾಗಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸಿದ್ದು, ಇದೀಗ ಟಿವಿಎಸ್ ಮೋಟಾರ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಹೊಸೂರು ಮೂಲದ ಟಿವಿಎಸ್ ಮೋಟಾರ್ ಸಂಸ್ಥೆಯು ಭಾರತದ ಪ್ರಮುಖ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದು, ದ್ವಿಚಕ್ರ ವಾಹನಗಳು ಮಾತ್ರವಲ್ಲದೇ ವಾಣಿಜ್ಯ ಬಳಕೆಯ ವಾಹನ ಮಾರಾಟದಲ್ಲೂ ಮುಂಚೂಣಿಯಲ್ಲಿದೆ. ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನ ಮಾರಾಟಕ್ಕೆ ಎಂಟ್ರಿ ಕೊಟ್ಟಿರುವ ಟಿವಿಎಸ್ ಸಂಸ್ಥೆಯು ಮೊದಲ ಹಂತದಲ್ಲಿ ತನ್ನ ಬಹುನೀರಿಕ್ಷಿತ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಮಾದರಿಯು ಅತ್ಯುತ್ತಮ ಬೆಲೆಯೊಂದಿಗೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಸದ್ಯ ಬೆಂಗಳೂರಿನಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಮುಂಬರುವ ದಿನಗಳಲ್ಲಿ ದೇಶದ ಪ್ರಮುಖ ರಾಜ್ಯಗಳಲ್ಲೂ ಖರೀದಿಗೆ ಲಭ್ಯವಿರಲಿದ್ದು, ಹೊಸ ಸ್ಕೂಟರ್ ಬೆಂಗಳೂರಿನಲ್ಲಿ ಆನ್-ರೋಡ್ ಪ್ರಕಾರ ರೂ.1.15 ಲಕ್ಷ ಬೆಲೆ ಪಡೆದುಕೊಂಡಿದೆ.

ರೆಟ್ರೋ ಲುಕ್‌ನೊಂದಿಗೆ ಮಾರ್ಡನ್ ಫೀಚರ್ಸ್‌ಗಳನ್ನು ಹೊಂದಿರುವ ಐಕ್ಯೂಬ್ ಸ್ಕೂಟರ್ ಮಾದರಿಯು ಪೆಟ್ರೋಲ್ ಸ್ಕೂಟರ್‌ಗಳಿಂತಲೂ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಹೊಸ ಸ್ಕೂಟರ್ ಮುಂದಿನ ಕೆಲವೇ ದಿನಗಳಲ್ಲಿ ಗ್ರಾಹಕರ ಕೈಸೆರಲಿದೆ. ಇದಕ್ಕೂ ಮುನ್ನ ಡ್ರೈವ್‌ಸ್ಪಾಕ್ ತಂಡಕ್ಕೆ ಸ್ಪೆಷಲ್ ರೈಡ್ ಕಲ್ಪಿಸಿದ್ದ ಟಿವಿಎಸ್ ಮೋಟಾರ್ ಸಂಸ್ಥೆಯು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಬೈಕ್ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಪರಿಚಯಿಸಿದ್ದು, ಐಕ್ಯೂಬ್ ಮಾದರಿಗಿಂತಲೂ ಹೆಚ್ಚು ಮೈಲೇಜ್ ಮತ್ತು ಉತ್ತಮ ಫೀಚರ್ಸ್‌ಗಳೊಂದಿಗೆ ಮಾರಾಟ ಮಾಡುತ್ತಿವೆ. ಆದರೆ ಬೆಲೆ ವಿಚಾರವಾಗಿ ಗ್ರಾಹಕರ ಗಮನಸೆಳೆಯಲಿರುವ ಟಿವಿಎಸ್ ಮೋಟಾರ್ ಸಂಸ್ಥೆಯು ಎಲ್ಲಾ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಐಕ್ಯೂಬ್ ನಿರ್ಮಾಣ ಮಾಡಿದೆ. ಹಾಗಾದ್ರೆ ಹೊಸ ಐಕ್ಯೂಬ್ ಸ್ಕೂಟರ್ ಮಾದರಿಯು ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಸ್ಕೂಟರ್‌ಗಿಂತಲೂ ಹೇಗೆ ವಿಭಿನ್ನವಾಗಿದೆ? ಹಾಗೆಯೇ ಹೊಸ ಸ್ಕೂಟರ್‌ನಲ್ಲಿರುವ ವಿಶೇಷತೆಗಳೇನು ಎನ್ನುವುದನ್ನು ಈ ಲೇಖನದಲ್ಲಿ ಇಲ್ಲಿ ತಿಳಿಯೋಣ..

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಡಿಸೈನ್ ಮತ್ತು ಸ್ಟೈಲ್

ಮೊದಲ ನೋಟದಲ್ಲೇ ಗಮನಸೆಳೆಯುವ ಐಕ್ಯೂಬ್ ಸ್ಕೂಟರ್ ಮಾದರಿಯು ಪ್ರತಿಸ್ಪರ್ಧಿ ಸ್ಕೂಟರ್‌ಗಳಿಂತಲೂ ಸಂಪೂರ್ಣವಾಗಿ ವಿಭಿನ್ನವಾದ ಡಿಸೈನ್ ಹೊಂದಿದ್ದು, ಬಿಳಿ ಬಣ್ಣದಲ್ಲಿ ಮಾತ್ರವೇ ಖರೀದಿ ಲಭ್ಯವಿರುವ ಹೊಸ ಸ್ಕೂಟರ್‌ನಲ್ಲಿ ರೌಂಡ್ ಎಲ್ಇಡಿ ಲೈಟಿಂಗ್‌ ವಿನ್ಯಾಸವು ಪ್ರಮುಖ ಆಕರ್ಷಣೆಯಾಗಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಹಾಗೆಯೇ ಸ್ಕೂಟರ್ ಸೈಡ್ ವ್ಯೂವ್ ಕೂಡಾ ಸಾಕಷ್ಟು ಆಕರ್ಷಕವಾಗಿದ್ದು, ಸೀಟಿನ ಕೆಳ ಭಾಗದಲ್ಲಿ ನೀಡಲಾಗಿರುವ ‘ಐಕ್ಯೂಬ್ ಎಲೆಕ್ಟ್ರಿಕ್' ಬ್ಯಾಡ್ಜಿಂಗ್‌ ಎದ್ದುಕಾಣಿಸುತ್ತದೆ. ಜೊತೆಗೆ ಆಸನದಲ್ಲಿ ಕಪ್ಪು ಬಣ್ಣದ ಕಾನ್ಟ್ರಾಸ್ಟ್ ಬಳಕೆ ಮಾಡಿರುವುದು ಪ್ರೀಮಿಯಂ ವೈಶಿಷ್ಟ್ಯತೆ ಹೆಚ್ಚಿಸಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಸೈಡ್ ಪ್ಯಾನೆಲ್‌ನಲ್ಲಿ ಬಿಎಂಎಸ್ (ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್) ಅನ್ನು ತಂಪಾಗಿಸಲು ಸಹಾಯವಾಗುವಂತೆ ಅಚ್ಚುಕಟ್ಟಾಗಿ ಸಂಯೋಜಿತಗೊಳಿಸಲಾಗಿದ್ದು, ಎಲೆಕ್ಟ್ರಿಕ್ ಮೋಟಾರ್ ಬಳಿ ಪ್ರಕಾಶಮಾನಗೊಳ್ಳುವ ‘ಎಲೆಕ್ಟ್ರಿಕ್' ಬ್ಯಾಡ್ಜ್ ಕೂಡಾ ಗಮನಸೆಳೆಯುತ್ತೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಸ್ಕೂಟರ್ ಹಿಂಭಾಗದ ವಿನ್ಯಾಸವು ಕೂಡಾ ಗಮನಸೆಳೆಯಲಿದ್ದು, ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪ್ರಮುಖವಾಗಿವೆ. ಎಲ್ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಎರಡು ಬದಿಯಲ್ಲೂ ಜೋಡಿಸಲಾಗಿದ್ದು, ಹಿಂಬದಿಯ ಸವಾರರು ಆರಾಮವಾಗಿ ಕೂರಲು ರೈಲ್ ಗ್ರ್ಯಾಬ್ ಜೋಡಿಸಲಾಗಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಫೀಚರ್ಸ್‌ಗಳು

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಟಿವಿಎಸ್ ಮೋಟಾರ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಸ್ಮಾರ್ಟ್ ಕನೆಕ್ಟ್ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, 5.5-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಜೋಡಣೆ ಮಾಡಲಾಗಿದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌‌ನಲ್ಲಿ ಸ್ಮಾರ್ಟ್‌ಫೋನ್ ಮೂಲಕ ಬ್ಲೂಟೂತ್ ಸಂಪರ್ಕ್ ಮಾಡಬಹುದಾಗಿದ್ದು, ಅಪ್ಲಿಕೇಶನ್ ಮತ್ತು ಡಿಜಿಟಲ್ ಕನ್ಸೋಲ್ ನಡುವೆ ಒಟ್ಟು 58 ವೈಶಿಷ್ಟ್ಯಗಳನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಪ್ರಮುಖವಾಗಿ ಇದರಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ರೈಡ್ ಅನಾಲಿಟಿಕ್ಸ್, ಹೈಸ್ಪೀಡ್ ಅಲರ್ಟ್, ಜಿಯೋ ಫೆನ್ಸಿಂಗ್, ಇನ್‌ಕಮಿಂಗ್ ಕಾಲ್ಸ್, ಟೆಕ್ಸ್ ಮೇಸೆಜ್ ಅಲರ್ಟ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಬ್ಯಾಟರಿ ಬಾಳಿಕೆ, ಚಾರ್ಜ್ ಸ್ಥಿತಿಗಡಿ, ಬ್ಯಾಟರಿ ಬಾಳಿಕೆ, ತಲುಪಬೇಕಿರುವ ಸ್ಥಳದ ದೂರದ ಮಾಹಿತಿ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಟಿವಿಎಸ್ ಮೋಟಾರ್ ಸಂಸ್ಥೆಯು ಐಕ್ಯೂಬ್‌ನಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ರೈಡಿಂಗ್ ಮೋಡ್‌ಗಳನ್ನು ಆಯ್ಕೆಯಾಗಿ ನೀಡಿದ್ದು, ಇಕೋ ಮತ್ತು ಪವರ್ ಮೋಡ್‌ಗಳು ಹೊಸ ಸ್ಕೂಟರ್ ಬ್ಯಾಟರಿ ಬಾಳಿಕೆ ಮತ್ತು ಪರ್ಫಾಮೆನ್ಸ್ ನಿರ್ಧರಿಸುತ್ತವೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಇದರ ಜೊತೆಗೆ ಹೊಸ ಸ್ಕೂಟರ್ ಸವಾರರ ಸುರಕ್ಷತೆಗಾಗಿ ಸೈಡ್ ಸ್ಟ್ಯಾಂಡ್ ಪವರ್ ಕಟ್ ಆಫ್ ಸೆನ್ಸಾನ್ ಜೋಡಣೆ ಮಾಡಲಾಗಿದ್ದು, ಈ ಸೌಲಭ್ಯವಿದ್ದಲ್ಲಿ ಸ್ಟ್ಯಾಂಡ್ ಮಾಡಿರುವ ಸಂದರ್ಭದಲ್ಲಿ ಸ್ಕೂಟರ್ ಯಾವುದೇ ಕಾರಣಕ್ಕೂ ಆನ್ ಆಗುವುದಿಲ್ಲ.

ಕೆಲವೊಮ್ಮೆ ಯಾವುದೋ ಅವಸರದಲ್ಲಿ ಸ್ಟ್ಯಾಂಡ್ ತೆಗೆಯುವುದನ್ನ ಮರೆತುಬಿಟ್ಟಾಗ ರೋಡ್ ಹಂಪ್‌ಗಳಿಂದ ಸ್ಕೀಡ್ ಆಗಿ ಬೀಳಬಹುದಾದ ಸಾಧ್ಯತೆಗಳಿದ್ದು, ಸೈಡ್ ಸ್ಟ್ಯಾಂಡ್ ಪವರ್ ಕಟ್ ಆಫ್ ಸಿಸ್ಟಂ ಜೋಡಣೆಯಿದ್ದಲ್ಲಿ ಸೈಡ್ ಸ್ಟ್ಯಾಂಡ್ ತೆಗೆಯದ ಹೊರತು ಎಂಜಿನ್ ಆನ್ ಆಗದಿರುವುದೇ ಈ ಸೌಲಭ್ಯದ ಪ್ರಮುಖ ಗುಣಲಕ್ಷಣವಾಗಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಹಾಗೆಯೇ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಪಾರ್ಕ್ ಅಸಿಸ್ಟ್ ಸೌಲಭ್ಯವನ್ನು ನೀಡಲಾಗಿದ್ದು, ಇದು ಫಾರ್ವರ್ಡ್ ಮತ್ತು ರಿವರ್ಸ್ ಚಾಲನೆಯೊಂದಿಗೆ ಬರುತ್ತದೆ. ಫಾರ್ವರ್ಡ್ ಪಾರ್ಕ್ ಅಸಿಸ್ಟ್ನಲ್ಲಿರುವಾಗ ಉನ್ನತ ವೇಗವು ಪ್ರತಿ ಗಂಟೆಗೆ 12 ಕಿ.ಮೀ ಮತ್ತು ರಿವರ್ಸ್ ಪಾರ್ಕ್ ಅಸಿಸ್ಟ್‌ನಲ್ಲಿ ಟಾಪ್ ಸ್ಪೀಡ್ ಕೇವಲ ಗಂಟೆಗೆ 3 ಕಿ.ಮೀ ಸೀಮಿತವಾಗಿರುತ್ತದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ರಿವರ್ಸ್ ಪಾರ್ಕ್ ಮಾಡುವಾಗ ಎಚ್ಚರಿಕೆಯ ಬೀಪ್ ಶಬ್ದ ಹೊರಹೊಮ್ಮಲಿದ್ದು, ಪಾರ್ಕಿಂಗ್ ಸಮಸ್ಯೆಯಿರುವ ಜಾಗಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಪಾರ್ಕ್ ಮಾಡಲು ಪಾರ್ಕ್ ಅಸಿಸ್ಟ್ ಸೌಲಭ್ಯವು ಸಾಕಷ್ಟು ಸಹಕಾರಿಯಾಗಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜಿಂಗ್ ಸೌಲಭ್ಯಗಳು

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 4.4 ಕಿ.ವ್ಯಾ ರೇಟೆಡ್ ಹಬ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಜೋಡಿಸಲಾಗಿದ್ದು, ಇದನ್ನು ಮೂರು ಲೀಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ವ್ಯವಸ್ಥಿತವಾಗಿ ಅಳವಡಿಸಲಾಗಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಮೂರು ಬ್ಯಾಟರಿಗಳಲ್ಲಿ ಒಂದನ್ನು ಫುಟ್ ಬೋರ್ಡ್ ಕೆಳಗೆ ಇರಿಸಿಲಾಗಿದ್ದು, ಇನ್ನುಳಿದ ಎರಡು ಬ್ಯಾಟರಿಗಳನ್ನು ಸೀಟಿನ ಕೆಳಗೆ ಭಾಗದಲ್ಲಿ ಜೋಡಿಸಲಾಗಿದೆ. ಈ ಮೂರು ಮೂರು ಬ್ಯಾಟರಿ ಪ್ಯಾಕ್‌ಗಳು ಒಟ್ಟಾಗಿ 2.25 ಕಿ.ವ್ಯಾ ಉತ್ಪಾದಿಸಲಿದ್ದು, ಬ್ಯಾಟರಿ ಸಂಪನ್ಮೂಲವನ್ನು ಎಲ್‌ಜಿ ಸಂಸ್ಥೆಯಿಂದ ಎರವಲು ಪಡೆಯಲಾಗಿದೆ. ಈ ಮೂಲಕ ಪ್ರತಿ ಚಾರ್ಜ್‌ಗೆ ಇಕೋ ಮೋಡ್‌ನಲ್ಲಿ ಗರಿಷ್ಠ 78 ಕಿ.ಮೀ ಮೈಲೇಜ್ ಪಡೆಯಬಹುದಾಗಿದ್ದು, ಪವರ್ ಮೋಡ್‌ನಲ್ಲಿ 80ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಗರಿಷ್ಠ 55 ಕಿ.ಮೀ ಮೈಲೇಜ್ ಹಿಂದಿರುಗಿಸುವಲ್ಲಿ ಐಕ್ಯೂಬ್ ಶಕ್ತವಾಗಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಸ್ಕೂಟರ್ ಬ್ಯಾಟರಿಯನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲು 5 ಗಂಟೆ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಹೋಮ್ ಚಾರ್ಜಿಂಗ್ ಟಿವಿಎಸ್ ಸಂಸ್ಥೆಯಿಂದಲೇ ನೀಡಲಾಗಿತ್ತದೆ. ಇದರ ಹೊರತಗಾಗಿ ಬೆಂಗಳೂರಿನ ಪ್ರಮುಖ ಹತ್ತು ಕಡೆಗಳಲ್ಲಿ ಪಬ್ಲಿಕ್ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲಾಗಿದ್ದು, ಇಲ್ಲಿ ಕೇವಲ 50 ನಿಮಿಷಗಳಲ್ಲಿ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಇದರೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೇ ಉತ್ತಮ ಆಯ್ಕೆಯಾಗಿರುವ ಐಕ್ಯೂಬ್ ಮಾದರಿಯು ಮೈಲೇಜ್ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್ ಮತ್ತು 12-ಇಂಚಿನ ಟ್ಯೂಬ್ ಲೆಸ್ ಟೈರ್ ಸೌಲಭ್ಯವನ್ನು ಹೊಂದಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಸ್ಕೂಟರ್‌ಗಳು

ತಾಂತ್ರಿಕ ಸೌಲಭ್ಯಗಳು ಟಿವಿಎಸ್ ಐಕ್ಯೂಬ್ ಎಥರ್ 450ಎಕ್ಸ್ ಬಜಾಜ್ ಚೇತಕ್ ಎಲೆಕ್ಟ್ರಿಕ್
ಎಲೆಕ್ಟ್ರಿಕ್ ಮೋಟಾರ್ 4.4ಕೆವಿ 3.3ಕೆವಿ 4ಕೆವಿ
ಬ್ಯಾಟರಿ 2.25ಕೆವಿಹೆಚ್ 2.9ಕೆವಿಹೆಚ್ 3ಕೆವಿಹೆಚ್
ರೇಂಜ್ 75 ಕಿ.ಮೀ 85 ಕಿ.ಮೀ 95 ಕಿ.ಮೀ
ಟಾಪ್ ಸ್ಪೀಡ್ ಪ್ರತಿ ಗಂಟೆಗೆ 78ಕಿ.ಮೀ ಪ್ರತಿ ಗಂಟೆಗೆ 80 ಕಿ.ಮೀ ಪ್ರತಿ ಗಂಟೆ 60 ಕಿ.ಮೀ
ಆಕ್ಸಿಲೆಟರ್ ಸ್ಪೀಡ್ 0-40ಕಿ.ಮೀ/ಗಂಟೆಗೆ 4.2 ಸೇಕೆಂಡುಗಳು 0-40ಕಿ.ಮೀ/ಗಂಟೆಗೆ 3.3 ಸೇಕೆಂಡುಗಳು NA
ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಬುಕ್ಕಿಂಗ್ ಮತ್ತು ಲಭ್ಯತೆ

ಮೇಲೆ ಹೇಳಿದ ಹಾಗೆ ಹೊಸ ಐಕ್ಯೂಬ್ ಸ್ಕೂಟರ್ ಮಾದರಿಯು ಸದ್ಯಕ್ಕೆ ಬೆಂಗಳೂರು ನಗರದಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ರೂ.5 ಸಾವಿರ ಮುಂಗಡದೊಂದಿಗೆ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ. ಮುಂಬರುವ ಏಪ್ರಿಲ್ ಆರಂಭದಲ್ಲಿ ಹೊಸ ಸ್ಕೂಟರ್ ವಿತರಣೆ ಶುರುವಾಗಲಿದ್ದು, ವರ್ಷಾಂತ್ಯಕ್ಕೆ ದೇಶದ ಪ್ರಮುಖ ಹತ್ತು ರಾಜ್ಯಗಳಲ್ಲಿ ಹೊಸ ಐಕ್ಯೂಬ್ ಸ್ಕೂಟರ್ ಖರೀದಿಗೆ ಲಭ್ಯವಾಗಲಿದೆ.

ಬಜೆಟ್ ಬೆಲೆಯೊಂದಿಗೆ ಎಂಟ್ರಿ ಕೊಟ್ಟ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮೈಲೇಜ್ ಮತ್ತು ಬೆಲೆ ಲೆಕ್ಕಾಚಾರದಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮವಾಗಿರುವ ಐಕ್ಯೂಬ್ ಸ್ಕೂಟರ್ ಮಾದರಿಯು ಖರೀದಿ ಉತ್ತಮವಾಗಿದ್ದು, ಗ್ರಾಹಕರನ್ನು ಸೆಳೆಯಲು ಪಬ್ಲಿಕ್ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆದಿರುವುದು ಪ್ರಮುಖ ಆಕರ್ಷಣೆಯಾಗಿದೆ ಎನ್ನಬಹುದು.

Most Read Articles

Kannada
English summary
TVS iQube Electric Scooter Review (First Ride): TVS Motor Company's First Take At Charging Life. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X