ಫಸ್ಟ್ ರೈಡ್ ರಿವ್ಯೂ: 125ಸಿಸಿ ಬೈಕ್ ವಿಭಾಗದಲ್ಲಿ ಸದ್ದು ಮಾಡುತ್ತಾ ಟಿವಿಎಸ್ ಹೊಸ ರೈಡರ್?

ಭಾರತವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದ್ದು, ಹಲವಾರು ಪ್ರಯಾಣಿಕ ಸೆಗ್ ಮೆಂಟ್ ಬೈಕುಗಳು ಮಾರಾಟವಾಗುತ್ತವೆ. ಕೆಲವರಿಗೆ ಪರ್ಫಾಮೆನ್ಸ್ ಹಾಗೂ ವೇಗದ ಬೈಕುಗಳು ಇಷ್ಟವಾಗಬಹುದು. ಆದರೆ ಪ್ರಯಾಣಿಕ ಬೈಕುಗಳು ಇಲ್ಲದಿದ್ದರೆ ದೇಶಿಯ ಮಾರುಕಟ್ಟೆಯು ಎಂದಿನಂತೆ ಇರುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು.

ಟಿವಿಎಸ್ ರೈಡರ್ 125 ರಿವ್ಯೂ

TVS ಮೋಟಾರ್ ಕಂಪನಿ ಭಾರತದಲ್ಲಿ ಪ್ರಯಾಣಿಕ ಬೈಕುಗಳನ್ನು ಪರಿಚಯಿಸುತ್ತಿರುವುದು ಹೊಸತೆನಲ್ಲ. ಕಂಪನಿಯು ವಿಕ್ಟರ್, ಸ್ಟಾರ್ ಸಿಟಿಯಂತಹ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. TVS ಕಂಪನಿಯು ಈ ಹಿಂದೆ ಮಾರಾಟ ಮಾಡುತ್ತಿದ್ದ ಫಿಯೆರೊ ಬೈಕ್ ಸಹ ಜನಪ್ರಿಯವಾಗಿತ್ತು.

ಟಿವಿಎಸ್ ರೈಡರ್ 125 ರಿವ್ಯೂ

ಈಗ TVS ಕಂಪನಿಯು ಭಾರತದಲ್ಲಿ ಹೊಸ ಪ್ರೀಮಿಯಂ ಪ್ರಯಾಣಿಕ ಬೈಕ್ ಅನ್ನು ಹೊರತಂದಿದೆ. Rider 125 ಸಿಸಿ ಬೈಕ್ ಮೂಲಕ TVS ಮೋಟಾರ್ ಕಂಪನಿಯು ಪ್ರಯಾಣಿಕ ಬೈಕ್ ಸೆಗ್ ಮೆಂಟಿಗೆ ಮರಳುತ್ತಿದೆ. ನಾವು ಇತ್ತೀಚಿಗೆ ಹೊಸೂರಿನಲ್ಲಿರುವ ಕಂಪನಿಯ ಪರೀಕ್ಷಾ ಟ್ರ್ಯಾಕ್‌ನಲ್ಲಿ ಈ ಬೈಕ್ ಅನ್ನು ಪರೀಕ್ಷಿಸಿದೆವು. ಈ ಬೈಕಿಗೆ ಸಂಬಂಧಿಸಿದ ಮತ್ತಷ್ಟು ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಟಿವಿಎಸ್ ರೈಡರ್ 125 ರಿವ್ಯೂ

ವಿನ್ಯಾಸ ಹಾಗೂ ಶೈಲಿ

TVS Rider ಬೈಕ್ ಅನ್ನು ಮೊದಲ ಬಾರಿಗೆ ನೋಡಿದರೆ 125 ಸಿಸಿ ಪ್ರಯಾಣಿಕ ಎಂದು ಕಂಡು ಹಿಡಿಯುವುದು ಅಸಾಧ್ಯ. ಈ ಬೈಕ್ 160 - 180 ಸಿಸಿ ಸ್ಟ್ರೀಟ್ ಬೈಕ್‌ನಂತೆ ಕಾಣುತ್ತದೆ. ಈ ಬೈಕ್ ಜನ ದಟ್ಟಣೆಯಲ್ಲೂ ಎದ್ದು ಕಾಣುತ್ತದೆ.

ಟಿವಿಎಸ್ ರೈಡರ್ 125 ರಿವ್ಯೂ

ನಾವು ಚಾಲನೆ ಮಾಡಿದ ಬೈಕ್ ಫಿಯರಿ ಯೆಲ್ಲೋ ಬಣ್ಣದಲ್ಲಿತ್ತು. Rider‌ ಬೈಕ್ ಹಲವು ಬಣ್ಣಗಳನ್ನು ಹೊಂದಿದೆ. ಫ್ಯೂಯಲ್ ಟ್ಯಾಂಕ್, ಫ್ರಂಟ್ ಮಡ್‌ಗಾರ್ಡ್ ಹಾಗೂ ಎಂಜಿನ್ ಬ್ಯಾಷ್‌ಪ್ಲೇಟ್ ಗಳು ಗ್ಲೋಸಿ ಯೆಲ್ಲೋ ಬಣ್ಣವನ್ನು ಹೊಂದಿವೆ. ಟ್ಯಾಂಕ್ ಎಕ್ಸ್ ಟೆಂಷನ್ ಗ್ಲೋಸ್ ಕಪ್ಪು ಬಣ್ಣವನ್ನು ಹೊಂದಿದ್ದರೆ ಅದರ ಕೆಳಭಾಗವು ಗ್ರೇ ಬಣ್ಣವನ್ನು ಹೊಂದಿದೆ. ಹಿಂಭಾಗದ ತುದಿವರೆಗೂ ಗ್ರೇ ಫಿನಿಷಿಂಗ್ ನೀಡಲಾಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

TVS Rider ಹೆಚ್ಚು ಪ್ರೀಮಿಯಂ ಆಗಿ ಕಾಣಲು ಈ ಅಂಶಗಳು ನೆರವಾಗುತ್ತವೆ. ಫಿಯರಿ ಯೆಲ್ಲೋ ಬಣ್ಣ ಇಷ್ಟವಾಗದಿದ್ದರೆ ಸ್ಟ್ರೈಕಿಂಗ್ ರೆಡ್, ವಿಕೆಡ್ ಬ್ಲಾಕ್ಹಾಗೂ ಬ್ಲೇಜಿಂಗ್ ಬ್ಲೂ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಕೆಡ್ ಬ್ಲ್ಯಾಕ್ ಶೇಡ್ ಸರಳವಾಗಿದೆ. ಆದರೆ ಬ್ಲೇಜಿಂಗ್ ಬ್ಲೂ ಹೆಚ್ಚು ಆಕರ್ಷಕವಾಗಿದೆ ಎಂಬುದು ನಮ್ಮ ಅಭಿಪ್ರಾಯ. ಆದರೆ ವೈಯಕ್ತಿಕ ಅಭಿರುಚಿ ಹಾಗೂ ಆದ್ಯತೆಗಳ ಮೇಲೆ ಅವಲಂಬಿತವಾಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

Rider ಒಂದು ಹೊಸ ಪ್ಲಾಟ್‌ಫಾರಂ ಅನ್ನು ಆಧರಿಸಿದ ಹೊಸ ಬೈಕ್ ಆಗಿದ್ದರೂ, ವಿನ್ಯಾಸ ಸ್ಫೂರ್ತಿಯನ್ನು TVS Apache RTR 160 4 V ಬೈಕಿನಿಂದಪಡೆಯಲಾಗಿದೆ. TVS Rider‌ನಲ್ಲಿರುವ ವಿಶಿಷ್ಟವಾದ ವಿನ್ಯಾಸ ಅಂಶವೆಂದರೆ ಮುಂಭಾಗದಲ್ಲಿರುವ ಎಲ್‌ಇಡಿ ಹೆಡ್‌ಲ್ಯಾಂಪ್. ಈ ಹೆಡ್ ಲ್ಯಾಂಪ್ ವಿಶಿಷ್ಟವಾದ ಎಕ್ಸ್ ಶೇಪಿನ ಎಲ್ಇಡಿ ಡಿಆರ್‌ಎಲ್‌ ಹಾಗೂ ಎಲ್‌ಇಡಿಗಳಿರುವ ಹೈ ಮತ್ತು ಲೋ ಬೀಮ್ ಗಳನ್ನು ಹೊಂದಿದೆ.

ಟಿವಿಎಸ್ ರೈಡರ್ 125 ರಿವ್ಯೂ

ಅದರ ಮೇಲೆ ಒಂದು ಸಣ್ಣ ಫ್ಲೈಸ್ಕ್ರೀನ್, ಅದರ ಹಿಂದೆ ಎಲ್‌ಸಿ‌ಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಉತ್ತಮವಾಗಿದ್ದು, ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಮುಂಭಾಗದ ಮಡ್‌ಗಾರ್ಡ್ ಡ್ಯುಯಲ್ ಟೋನ್ ಘಟಕವಾಗಿದ್ದು, ಪೆಟಲ್ ಡಿಸ್ಕ್ ಬ್ರೇಕ್ ವಿನ್ಯಾಸದ ಅಂಶವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಟಿವಿಎಸ್ ರೈಡರ್ 125 ರಿವ್ಯೂ

ಸೈಡ್ ಪ್ರೊಫೈಲ್‌ನಿಂದ TVS Rider ಅನ್ನು ವೀಕ್ಷಿಸಿದರೆ ಬೃಹತ್ ಗಾತ್ರದ ಫ್ಯೂಯಲ್ ಟ್ಯಾಂಕ್ ಕಡೆಗೆ ನಿಮ್ಮ ಗಮನ ಸೆಳೆಯುತ್ತದೆ. ಈ ಬೈಕ್ ಮಸ್ಕ್ಯುಲರ್ ಆಗಿದ್ದು, ಆಕರ್ಷಕವಾಗಿದೆ. ಈ ಬೈಕ್ ದೊಡ್ಡ ಗಾತ್ರವನ್ನು ಹೊಂದದೆ ಇದ್ದರೂ ಫ್ಯೂಯಲ್ ಟ್ಯಾಂಕ್ ದೊಡ್ಡದಾಗಿದೆ ಎಂಬ ಭಾವನೆಯನ್ನು ಮೂಡಿಸುತ್ತದೆ. ಅಷ್ಟರ ಮಟ್ಟಿಗೆ ಫ್ಯೂಯಲ್ ಟ್ಯಾಂಕ್ ಬೈಕ್ ವಿನ್ಯಾಸದ ಮೇಲೆ ಪರಿಣಾಮ ಬೀರುತ್ತದೆ.

ಟಿವಿಎಸ್ ರೈಡರ್ 125 ರಿವ್ಯೂ

ಎಂಜಿನ್ ಅಡಿಯಲ್ಲಿರುವ ಬ್ಯಾಷ್‌ಪ್ಲೇಟ್ ಮತ್ತಷ್ಟು ಸ್ಪೋರ್ಟಿ ವಿನ್ಯಾಸವನ್ನು ನೀಡುತ್ತದೆ. ಈ ಬೈಕಿನ ಸೈಡ್ ಪ್ಯಾನಲ್‌ಗಳಲ್ಲಿ Rider ಬ್ಯಾಡ್ಜಿಂಗ್, ಇಂಜಿನ್‌ನಲ್ಲಿ ಕೂಲಿಂಗ್ ಫಿನ್, ಸ್ಪ್ಲಿಟ್ ಸೀಟ್ ಅರೇಂಜ್ಮೆಂಟ್, ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಹಾಗೂ ದೊಡ್ಡ ಗ್ರ್ಯಾಬ್ರೈಲ್ ಗಳನ್ನು ನೀಡಲಾಗಿದೆ. Rider ಬೈಕಿನಲ್ಲಿ ಆರು ಸ್ಪೋಕ್ ಅಲಾಯ್ ವ್ಹೀಲ್ ನೀಡಲಾಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

ಹಿಂಭಾಗದಲ್ಲಿ TVS Rider ಸರಳವಾದ, ಸ್ಪೋರ್ಟಿ ಸೆಟಪ್‌ ಹೊಂದಿದೆ. ಟೇಲ್ ಲ್ಯಾಂಪ್ ಒಂದು ಸ್ಪ್ಲಿಟ್ ಎಲ್ಇಡಿ ಯುನಿಟ್ ಆಗಿದ್ದು ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಟರ್ನ್ ಸಿಗ್ನಲ್ ಇಂಡಿಕೇಟರ್ ಗಳು ಹ್ಯಾಲೊಜೆನ್ ಬಲ್ಬ್‌ಗಳನ್ನು ಹೊಂದಿವೆ. ಸ್ಯಾರಿ ಗಾರ್ಡ್ ಮತ್ತೊಂದು ವಿನ್ಯಾಸದ ಅಂಶವಾಗಿದ್ದು ಸ್ವಲ್ಪ ದೊಡ್ಡದಾಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

ಒಟ್ಟಾರೆಯಾಗಿ ಈ ಬೈಕ್ ಪ್ರೀಮಿಯಂ ಕಮ್ಯೂಟರ್ ಬೈಕ್ ಆಗಿದ್ದು ಸ್ಪೋರ್ಟಿಯಾಗಿ ಹಾಗೂ ಆಕರ್ಷಕವಾಗಿ ಕಾಣುತ್ತದೆ. ಈ ಬೈಕಿನಲ್ಲಿರುವ ವಿನ್ಯಾಸ ಹಾಗೂ ಸ್ಟೈಲಿಂಗ್ ಯುವ ಖರೀದಿದಾರರನ್ನು ಆಕರ್ಷಿಸುವ ಸಾಧ್ಯತೆಗಳಿವೆ.

ಟಿವಿಎಸ್ ರೈಡರ್ 125 ರಿವ್ಯೂ

ಫೀಚರ್'ಗಳು

TVS Rider ಬೈಕ್ ಅನ್ನು ಯುವ ಖರೀದಿದಾರರನ್ನು ಅಥವಾ Gen-Z ಗ್ರಾಹಕರನ್ನು ಗುರಿಯಾಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಯುವ ಗ್ರಾಹಕರು ಬೈಕುಗಳಲ್ಲಿ ಹೆಚ್ಚು ಫೀಚರ್ ಗಳನ್ನು ಬಯಸುತ್ತಾರೆ. TVS Rider ಸಹ ಹೆಚ್ಚು ಫೀಚರ್ ಗಳನ್ನು ಹೊಂದಿದೆ. Rider ಬೈಕಿನಲ್ಲಿರುವಷ್ಟು ಫೀಚರ್ ಗಳನ್ನು ಭಾರತದಲ್ಲಿರುವ ಯಾವುದೇ 125 ಸಿಸಿ ಬೈಕ್ ಹೊಂದಿಲ್ಲವೆಂದು ಹೇಳಬಹುದು.

ಟಿವಿಎಸ್ ರೈಡರ್ 125 ರಿವ್ಯೂ

Rider 125 ಸಿಸಿ ಸೆಗ್ ಮೆಂಟಿನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಹೊಂದಿರುವ ಏಕೈಕ ಬೈಕ್ ಆಗಿದ್ದು ಇತರ ಬೈಕುಗಳು ಕೇವಲ ಎಲ್ಇಡಿ ಡಿಆರ್‌ಎಲ್ ಗಳನ್ನು ಹೊಂದಿವೆ. ನಾವು ಈ ಬೈಕಿನಲ್ಲಿ ಎಲ್ಇಡಿ ಇಂಡಿಕೇಟರ್ ಅನ್ನು ಸಹ ಬಯಸುತ್ತೇವೆ. ಆದರೆ ಅದರ ಬೆಲೆಯನ್ನು ಸುಮಾರು ರೂ. 1,000 ಹೆಚ್ಚಾಗುತ್ತದೆ.

ಟಿವಿಎಸ್ ರೈಡರ್ 125 ರಿವ್ಯೂ

ಈ ಬೈಕಿನಲ್ಲಿರುವ ಇನ್ಸ್ಟ್ರುಮೆಂಟೇಶನ್ ಸೂಪರ್ ಇನ್ಫರ್ಮೇಟಿವ್ ಇನ್ವರ್ಟೆಡ್ ಎಲ್‌ಸಿ‌ಡಿ ಸ್ಕ್ರೀನ್ ನಿರ್ವಹಿಸುತ್ತದೆ. ಇದು ಸ್ಪೀಡೋಮೀಟರ್, ಓಡೋಮೀಟರ್, ಟ್ಯಾಕೋಮೀಟರ್, ಟ್ರಿಪ್ ಮೀಟರ್, ರೇಂಜ್, ಇಂಧನ ಮಿತವ್ಯಯ, ರೈಡ್ ಮೋಡ್‌ಗಳನ್ನು ಪ್ರದರ್ಶಿಸುತ್ತದೆ ಹಾಗೂ ಟಾಪ್/ಸರಾಸರಿ ಸ್ಪೀಡ್ ರೆಕಾರ್ಡರ್ ಅನ್ನು ಸಹ ಪಡೆಯುತ್ತದೆ.

ಟಿವಿಎಸ್ ರೈಡರ್ 125 ರಿವ್ಯೂ

Rider ಬೈಕಿನ ಟಾಪ್ ಎಂಡ್ ಮಾದರಿಯು 5 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ TVS ಕಂಪನಿಯ ಸ್ಮಾರ್ಟ್‌ಎಕ್ಸ್ ಕನೆಕ್ಟ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೂಟ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಇದು ಹೈ ಸ್ಪೀಡ್ ಅಲರ್ಟ್, ಎಸ್‌ಎಂಎಸ್ ನೋಟಿಫಿಕೇಶನ್ ಅಲರ್ಟ್, ಡಿಜಿಟಲ್ ಡಾಕ್ಯುಮೆಂಟ್ ಡಿಸ್ ಪ್ಲೇ ಗಳನ್ನು ಹೊಂದಿದೆ.

ಟಿವಿಎಸ್ ರೈಡರ್ 125 ರಿವ್ಯೂ

ಸ್ವಿಚ್ ಗೇರ್ ಹೊಸದಾಗಿದ್ದು, ಹ್ಯಾಂಡಲ್‌ಬಾರ್‌ನ ಎಡಭಾಗದಲ್ಲಿ ಲೈಟಿಂಗ್ ಹಾಗೂ ಹಾರ್ನ್‌ಗಾಗಿ ಸ್ವಿಚ್‌ಗಳನ್ನು ನೀಡಲಾಗಿದೆ. ಬಲಭಾಗದಲ್ಲಿ ಒನ್-ಟಚ್ ಸ್ಟಾರ್ಟರ್ ಬಟನ್ ನೀಡಲಾಗಿದೆ. ಎಂಜಿನ್ ಕಿಲ್ ಸ್ವಿಚ್ ಅನ್ನು ರೈಡ್ ಮೋಡ್‌ಗಳ ಸ್ವಿಚ್‌ನಿಂದ ಬದಲಿಸಲಾಗಿದೆ. ಈ ಸ್ವಿಚ್ ಫ್ಲಿಕ್ ನಲ್ಲಿ ಇಕೋ ಹಾಗೂ ಪವರ್ ಮೋಡ್‌ಗಳ ನಡುವೆ ಆಯ್ಕೆ ಮಾಡಬಹುದು.

ಟಿವಿಎಸ್ ರೈಡರ್ 125 ರಿವ್ಯೂ

ಎಂಜಿನ್ ಅನ್ನು ಆಫ್ ಮಾಡಲು ಎಂಜಿನ್ ಕಿಲ್ ಸ್ವಿಚ್ ಅನ್ನು ಬಳಸಿದರೆ, ಈ ಹೊಸ ರೈಡ್ ಮೋಡ್ ಸ್ವಿಚ್ ಸ್ವಲ್ಪಮಟ್ಟಿಗೆ ಬಳಸಿಕೊಳ್ಳುತ್ತದೆ. TVS Rider ಬೈಕಿನಲ್ಲಿ ಮೊಬೈಲ್ ಫೋನ್ ಚಾರ್ಜ್ ಮಾಡಲು ಫ್ಯೂಯಲ್ ಟ್ಯಾಂಕ್ ಮುಂದೆ ಯುಎಸ್‌ಬಿ ಸ್ಲಾಟ್ ನೀಡಲಾಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

ಎಂಜಿನ್ ಕಾರ್ಯಕ್ಷಮತೆ ಹಾಗೂ ರೈಡಿಂಗ್ ಇಂಪ್ರೆಶನ್ಸ್

ಈ ಹೊಸ ಇಂಜಿನ್ ಮಾಡುವ ವ್ಯತ್ಯಾಸ ಹಾಗೂ ಪ್ರೀಮಿಯಂ ವಿಭಾಗದ ಅನುಭವವನ್ನು ಸ್ಟಾರ್ಟರ್ ಬಟನ್ ಒತ್ತಿದ ಕ್ಷಣವೇ ಅನುಭವಿಸಬಹುದು. ಇದು ಒನ್ ಟಚ್ ಸ್ಟಾರ್ಟರ್ ಹಾಗೂ ಎಂಜಿನ್ ಅನ್ನು ನಿಶಬ್ದವಾಗಿ ಜೀವಂತಗೊಳಿಸುತ್ತದೆ. ಈ ಮೂಲಕ ಹೊಸ ಬೈಕಿನಲ್ಲಿರುವ ಹೊಸತನವನ್ನು ಅರಿಯಬಹುದು.

ಟಿವಿಎಸ್ ರೈಡರ್ 125 ರಿವ್ಯೂ

ಇದು ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಆಗಿ ಕಾರ್ಯನಿರ್ವಹಿಸಿ ಬೈಕಿಗೆ ಪ್ರೀಮಿಯಂ ಫೀಲ್ ನೀಡುತ್ತದೆ. ನಂತರ ಬಾಸ್ಸಿ ಎಕ್ಸಾಸ್ಟ್ ಟಿಪ್ ನೀಡಲಾಗಿದೆ. ಈ ಹಿಂದೆ ಬಿಡುಗಡೆಯಾಗುತ್ತದ್ದ ಹಲವು ಸಾಂಪ್ರದಾಯಿಕ TVS ಬೈಕುಗಳು ಆಳವಾದ, ಬಾಸಿ ಎಕ್ಸಾಸ್ಟ್ ನೋಟ್‌ಗಳನ್ನು ಹೊಂದಿದ್ದವು. ಈಗ ಹೊಸ TVS Rider ಬೈಕಿನಲ್ಲಿ ಅದನ್ನು ನೀಡಲಾಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

ಈ ಬೈಕ್ ಅನ್ನು ನೋಡದೆ ದೂರದಿಂದ ಎಕ್ಸಾಸ್ಟ್ ಟಿಪ್ ಕೇಳಿದರೆ, ಈ ಶಬ್ದವು 125 ಸಿಸಿ ಎಂಜಿನ್ ನಿಂದ ಹೊರ ಬರುತ್ತಿದೆ ಎಂದು ಕಂಡುಹಿಡಿಯುವುದು ಅಸಾಧ್ಯ. ಈ ಬೈಕ್ ರಿವ್ ರೇಂಜ್‌ನಾದ್ಯಂತ ಉತ್ತಮ ಸೌಂಡ್ ಟ್ರಾಕ್ ಅನ್ನು ಉತ್ಪಾದಿಸುತ್ತದೆ. ಇದು 6,500 ಆರ್‌ಪಿಎಂ ನಂತರ ಸ್ವಲ್ಪ ಒತ್ತಡವನ್ನುಂಟುಮಾಡುತ್ತದೆ. ಆದರೆ ಅಲ್ಲಿಯವರೆಗೂ ಇದು ಆರಾಮದಾಯಕವಾಗಿರುತ್ತದೆ.

ಟಿವಿಎಸ್ ರೈಡರ್ 125 ರಿವ್ಯೂ

ನಾವು TVS ಕಂಪನಿಯ ಹೊಸೂರು ಉತ್ಪಾದನಾ ಘಟಕದ ಒಳಗೆ ಇರುವ ಟೆಸ್ಟ್ ಟ್ರ್ಯಾಕ್‌ನಲ್ಲಿ ಈ ಬೈಕ್ ಅನ್ನು ಚಾಲನೆ ಮಾಡಿದೆವು. ಪ್ರಯಾಣಿಕರನ್ನು ಕೂರಿಸಿಕೊಂಡು ಪರೀಕ್ಷಿಸಲು ಇದು ಸೂಕ್ತ ಸ್ಥಳವಲ್ಲ. ನಾವು ಈ ಬೈಕ್ ಅನ್ನು ಶೀಘ್ರದಲ್ಲೇ ನೈಜ ಜಗತ್ತಿನಲ್ಲಿ ಪರೀಕ್ಷಿಸುತ್ತೇವೆ. ಆದರೆ ಟೆಸ್ಟ್ ಟ್ರ್ಯಾಕ್‌ನಲ್ಲಿ ಚಾಲನೆ ಮಾಡುವುದು TVS Rider ಬೈಕಿನ ಸ್ಪೋರ್ಟಿ ಅನುಭವವನ್ನು ಪರಿಚಯವನ್ನು ಪಡೆಯಲು ನಮಗೆ ನೆರವಾಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

ಈ ಬೈಕ್ TVS ರೇಸಿಂಗ್ ಬ್ಯಾಡ್ಜ್‌ಗಳಿಗೆ ಸಾಕಷ್ಟು ಸ್ಪೋರ್ಟಿಯಲ್ಲ ಆದರೆ TVS ರೇಸಿಂಗ್ ಲೋಗೋವನ್ನು ಹೊಂದಿರದ ಇತರ ಎಲ್ಲ ಬೈಕುಗಳಿಗಿಂತ ಸ್ಪೋರ್ಟಿಯಾಗಿದೆ. TVS Rider ಬೈಕಿನಲ್ಲಿ 124.8 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಹಾಗೂ ಆಯಿಲ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

ಈ ಎಂಜಿನ್ 7,500 ಆರ್‌ಪಿಎಂನಲ್ಲಿ ಗರಿಷ್ಠ 11.2 ಬಿ‌ಹೆಚ್‌ಪಿ ಪವರ್ ಹಾಗೂ 6,000 ಆರ್‌ಪಿಎಂನಲ್ಲಿ 11.2 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಗೇರ್ ಬಾಕ್ಸ್ ಹಿಂದಿನ ಚಕ್ರವನ್ನು ಚಾಲನೆ ಮಾಡುತ್ತದೆ.

ಟಿವಿಎಸ್ ರೈಡರ್ 125 ರಿವ್ಯೂ

TVS Rider ಬೈಕ್ KTM 125 Duke, KTM RC 125 ಹಾಗೂ Bajaj Pulsar NS 125 ಬೈಕುಗಳ ನಂತರ ಭಾರತದಲ್ಲಿರುವ ನಾಲ್ಕನೇ ಅತ್ಯಂತ ಶಕ್ತಿಶಾಲಿ 125 ಸಿಸಿ ಬೈಕ್ ಆಗಿದೆ. ಈ ಬೈಕ್ 123 ಕೆ.ಜಿ ತೂಕವನ್ನು ಹೊಂದಿದೆ. ಈ ತೂಕವು ಮೇಲೆ ಬೈಕ್ ಗಳಿಗಿಂತ ಕಡಿಮೆಯಾಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

ನಾವು ಈ ಬೈಕ್ ಅನ್ನು ನೇರ ಬಾಗಿದ ಸ್ಥಿತಿಯಲ್ಲಿ 107 ಕಿ.ಮೀ ವೇಗದಲ್ಲಿ ಹಾಗೂ ನೇರ ಸವಾರಿ ಸ್ಥಾನದಲ್ಲಿ 101 ಕಿ.ಮೀ ವೇಗದಲ್ಲಿ ಚಾಲನೆ ಮಾಡಿದೆವು. ಈ ಬೈಕ್ 5ನೇ ಗೇರ್‌ನಲ್ಲಿ 2,000 ಆರ್‌ಪಿಎಂನಷ್ಟು ಕಡಿಮೆ ಎಳೆಯುತ್ತದೆ.

ಟಿವಿಎಸ್ ರೈಡರ್ 125 ರಿವ್ಯೂ

TVS Rider ಬೈಕ್ 5,000 ಆರ್‌ಪಿಎಂನಲ್ಲಿ ಪ್ರತಿ ಗಂಟೆಗೆ 70 ಕಿ.ಮೀ ವೇಗದಲ್ಲಿ ಹಾಗೂ 6,500 ಆರ್‌ಪಿಎಂನಲ್ಲಿ ಪ್ರತಿ ಗಂಟೆಗೆ 90 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಗಂಟೆಗೆ 90 ಕಿ.ಮೀ ವೇಗದಲ್ಲಿ ಸಂಚರಿಸುವುದು ಸ್ವಲ್ಪ ಹೆಚ್ಚು ಒತ್ತಡವನ್ನು ಉಂಟು ಮಾಡುತ್ತದೆ. ಆದರೆ 70 - 75 ಕಿ.ಮೀ ವೇಗವನ್ನು ಹೆಚ್ಚಿನ ದೂರದಲ್ಲಿ ಮಾಡಬಹುದಾಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

ಸಸ್ಪೆಂಷನ್ ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 30 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ 5 ವೇ ಅಡ್ಜಸ್ಟಬಲ್ ಮೊನೊಶಾಕ್ ನೀಡಲಾಗಿದೆ. ಈ ಸಸ್ಪೆಂಷನ್ ಸೆಟಪ್ ಬಗ್ಗೆ ಮತ್ತಷ್ಟು ತಿಳಿಯಲು ಗುಂಡಿಗಳಿಂದ ತುಂಬಿರುವ ರಸ್ತೆಗಳಲ್ಲಿ ಈ ಬೈಕ್ ಅನ್ನು ಚಾಲನೆ ಮಾಡಬೇಕು.

ಟಿವಿಎಸ್ ರೈಡರ್ 125 ರಿವ್ಯೂ

ಬ್ರೇಕಿಂಗ್ ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 240 ಎಂಎಂ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 130 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ. ಹಿಂಭಾಗದ ಬ್ರೇಕ್ ಪೆಡಲ್ ಅನ್ನು ಕೆಳಗೆ ತಳ್ಳುವುದರಿಂದ ಮುಂಭಾಗದ ಬ್ರೇಕ್‌ಗಳನ್ನು ಅನ್ವಯಿಸಲಾಗುತ್ತದೆ ಹಾಗೂ ಬೈಕ್ ಅನ್ನು ಬಹಳ ಬೇಗನೆ ನಿಲ್ಲಿಸಬಹುದು.

ಟಿವಿಎಸ್ ರೈಡರ್ 125 ರಿವ್ಯೂ

TVS Rider ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ. ಜೊತೆಗೆ TVS ಯೂರೋಗ್ರಿಪ್ ರೆಮೊರಾ ಟಯರ್‌ಗಳನ್ನು ನೀಡಲಾಗಿದೆ.ರೆಮೊರಾ ಬ್ರಾಂಡ್ ಟಯರ್‌ಗಳು ಅಸಾಧಾರಣವಾಗಿದ್ದು, ಅಸಾಧಾರಣ ಗ್ರಿಪ್ ನೀಡುತ್ತವೆ.

ಟಿವಿಎಸ್ ರೈಡರ್ 125 ರಿವ್ಯೂ

ಪೈಪೋಟಿ

ಈ ಹಿಂದೆ 125 ಸಿಸಿ ಸೆಗ್ ಮೆಂಟಿನಲ್ಲಿ ಕೇವಲ ಪ್ರಯಾಣಿಕ ಬೈಕುಗಳನ್ನು ಮಾತ್ರ ಕಾಣಬಹುದಾಗಿತ್ತು. ಈಗ ಈ ಸೆಗ್ ಮೆಂಟಿನಲ್ಲಿ ಪ್ರಯಾಣಿಕ ಹಾಗೂ ಪರ್ಫಾಮೆನ್ಸ್ ಬೈಕುಗಳನ್ನು ಸಹ ಕಾಣಬಹುದು.

ಟಿವಿಎಸ್ ರೈಡರ್ 125 ರಿವ್ಯೂ

KTM 125 Duke, KTM RC 125 ಹಾಗೂ Bajaj Pulsar NS 125 ಈ ಸೆಗ್ ಮೆಂಟಿನಲ್ಲಿರುವ ಪರ್ಫಾಮೆನ್ಸ್ ಬೈಕುಗಳಾದರೆ Honda SP 125, Honda CB Shine, Hero Glamour i 3 S ಈ ಸೆಗ್ ಮೆಂಟಿನಲ್ಲಿರುವ ಪ್ರಯಾಣಿಕ ಬೈಕುಗಳಾಗಿವೆ. TVS Rider 125 ಸಿಸಿ ಸೆಗ್ ಮೆಂಟಿನಲ್ಲಿ ಇತರ ಕಂಪನಿಯ ಬೈಕುಗಳಿಗೆ ಎರಡೂ ರೀತಿಯಲ್ಲಿ ಪೈಪೋಟಿ ನೀಡುತ್ತದೆ.

ಟಿವಿಎಸ್ ರೈಡರ್ 125 ರಿವ್ಯೂ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಯಾಣಿಕ ಬೈಕುಗಳು ತಮ್ಮ ಮೂಲಭೂತ ಅವಶ್ಯಕತೆಗಳಿಂದ ಬಹು ದೂರ ಸಾಗಿವೆ. TVS Rider ಬೈಕ್ ಇದಕ್ಕೆ ಸಾಕ್ಷಿಯಾಗಿದೆ. ಕೆಲವು ಪ್ರೀಮಿಯಂ ಫೀಚರ್ ಹಾಗೂ ಎಂಜಿನ್ ನೊಂದಿಗೆ ಈ ಬೈಕ್ ಪ್ರೀಮಿಯಂ ಕಮ್ಯೂಟರ್ ಸೆಗ್ ಮೆಂಟಿನಲ್ಲಿ ಉತ್ತಮ ಬೈಕ್ ಆಗಿದೆ.

ಟಿವಿಎಸ್ ರೈಡರ್ 125 ರಿವ್ಯೂ

ನಾವು ಈ ಬೈಕ್ ಅನ್ನು ಟ್ರ್ಯಾಕ್‌ನಲ್ಲಿ ಮಾತ್ರ ಚಾಲನೆ ಮಾಡಿದೆವು. ನಾವು ನೈಜ ಜಗತ್ತಿನಲ್ಲಿ ಈ ಬೈಕ್ ಅನ್ನು ಚಾಲನೆ ಮಾಡಲು ಎದುರು ನೋಡುತ್ತಿದ್ದೇವೆ. ನಾವು ಶೀಘ್ರದಲ್ಲೇ ಈ ಬೈಕ್ ಅನ್ನು ರಸ್ತೆ ಪರೀಕ್ಷೆ ವಿಮರ್ಶೆಗೆ ಒಳಪಡಿಸಿ ಎಲ್ಲಾ ವಿವರಗಳನ್ನು ನೀಡಲಿದ್ದೇವೆ.

Most Read Articles

Kannada
English summary
Tvs raider 125 review design style engine features and other details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X