ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿವಿಧ ಕಾರು ಆವೃತ್ತಿಗಳ ಮೂಲಕ ಜನಪ್ರಿಯವಾಗಿರುವ ಫೋರ್ಡ್ ಸಂಸ್ಥೆಯು ಭಾರತದಲ್ಲೂ ತನ್ನದೇ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದ್ದು, ಫಿಗೋ ಆವೃತ್ತಿಯು ಫೋರ್ಡ್ ಸಂಸ್ಥೆಗೆ ಅತಿಹೆಚ್ಚು ಜನಪ್ರಿಯತೆ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಕಾಲ ಕಾಲಕ್ಕೆ ಗ್ರಾಹಕರ ಬೇಡಿಕೆಗಳನ್ನು ಪೂರೈಸುತ್ತಿರುವ ಫೋರ್ಡ್ ಸಂಸ್ಥೆಯು ಮೊನ್ನೆಯಷ್ಟೇ 2019ರ ಫಿಗೋ ಕಾರು ಮಾದರಿಯನ್ನು ಅತಿ ವಿನೂತನ ಸೌಲಭ್ಯಗಳೊಂದಿಗೆ ಮರುಬಿಡುಗಡೆ ಮಾಡಿರುವುದು ಹಲವು ವಿಶೇಷಗಳಿಗೆ ಕಾರಣವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಭಾರತದಲ್ಲಿ ಸದ್ಯ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಗೆ ಭಾರೀ ಬೇಡಿಕೆಯಿದ್ದು, ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಮುನ್ನಡೆ ಸಾಧಿಸುವ ಸಲುವಾಗಿ ತ್ರೀವ ಪೈಪೋಟಿ ನಡೆಸುತ್ತಿವೆ. ಇದರಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳಿಗೆ ಅತಿಹೆಚ್ಚಿನ ಬೇಡಿಕೆಯಿದ್ದು, ತಾಂತ್ರಿಕವಾಗಿ ಇರಡು ಕಾರುಗಳಿಂತ ಹೆಚ್ಚು ಬಲಿಷ್ಠವಾಗಿರುವ ಫಿಗೋ ಕಾರು ಕೂಡಾ ಒಂದು ಹಂತದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದರೂ ಸಹ ಗರಿಷ್ಠಮಟ್ಟದ ಬೇಡಿಕೆ ಪಡೆಯುವಲ್ಲಿ ಹಿಂದೆ ಬಿದ್ದಿರುವುದು ಫೋರ್ಡ್ ಸಂಸ್ಥೆಗೂ ಗೊತ್ತು. ಹೀಗಾಗಿ ಈ ಬಾರಿ ಫಿಗೋ ಹೊಸ ಆವೃತ್ತಿಯ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ದೇಶಿಯ ಮಾರುಕಟ್ಟೆಗೆ ಮೊದಲ ಬಾರಿಗೆ 2010ರಲ್ಲಿ ಲಗ್ಗೆಯಿಟ್ಟಿದ್ದ ಫಿಗೋ ಕಾರು ತದನಂತರ 2012ರಲ್ಲಿ ಫೇಸ್‌ಲಿಫ್ಟ್ ಆವೃತ್ತಿಯನ್ನು ಪಡೆದುಕೊಂಡಿತ್ತು. ಆದರೂ ಬೇಡಿಕೆಯಲ್ಲಿ ಮಾತ್ರ ನೀರ್ದಿಷ್ಟ ಮಟ್ಟದ ಬೇಡಿಕೆಯನ್ನು ಹೊರತುಪಡಿಸಿ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗಲಿಲ್ಲ. ಇದೇ ಕಾರಣಕ್ಕೆ ಈ ಬಾರಿ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಫೋರ್ಡ್ ಸಂಸ್ಥೆಯು ಮಹತ್ವದ ಬದಲಾವಣೆಯೊಂದಿಗೆ ಫಿಗೋ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಹೀಗಾಗಿ ಈ ಹಿಂದಿನ ಫಿಗೋ ಆವೃತ್ತಿಗೂ ಹಾಗೂ ಹೊಸ ಫಿಗೋ ಆವೃತ್ತಿಗೂ ಸಾಕಷ್ಟು ಬದಲಾವಣೆಗಳಾಗಿದ್ದು, ಈ ಬಾರಿ ಹೊಸದಾಗಿ ಪರಿಚಯಿಸಲಾಗಿರುವ ಬ್ಲ್ಯೂ ಫಿಗೋ ವೆರಿಯೆಂಟ್ ಗ್ರಾಹಕರ ಆಕರ್ಷಣೆಗೆ ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಇಲ್ಲಿ ಮತ್ತೊಂದು ವಿಚಾರ ಅಂದ್ರೆ, ಟೆಸ್ಟ್ ಡ್ರೈವ್‌ಗಾಗಿ ಹೈ ಎಂಡ್ ಮಾದರಿಯಾದ ಟೈಟಾನಿಯಂ ಬ್ಲ್ಯೂ ಆವೃತ್ತಿಯನ್ನು ಇಲ್ಲಿ ವಿಮರ್ಶೆ ಮಾಡಲಾಗಿದ್ದರೂ ಕೂಡಾ ಕೆಲವು ಬದಲಾವಣೆಗಳನ್ನು ಹೊರತುಪಡಿಸಿ ಆರಂಭಿಕ ಆವೃತ್ತಿಯಲ್ಲೂ ಎಲ್ಲಾ ರೀತಿಯಲ್ಲೂ ಗುಣಮಟ್ಟದ ತಾಂತ್ರಿಕ ಅಂಶಗಳನ್ನು ನೀಡಿರುವುದು ಸ್ಪಷ್ಟವಾಗಿದೆ. ಪ್ರತಿ ಬಾರಿಯೂ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳನ್ನು ಬಿಡುಗಡೆ ಮಾಡಿದಾಗ ಇಲ್ಲವೇ ಉನ್ನತಿಕರಿಸಿದಾಗ ಬೆಲೆ ಹೆಚ್ಚಳ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಫೋರ್ಡ್ ಸಂಸ್ಥೆಯು ಈ ಬಾರಿ ಹೊಸ ಕಾರಿನ ಬೆಲೆಯನ್ನು ಕಡಿತಗೊಳಿಸಿ ಹೊಸ ಫಿಗೋ ಆವೃತ್ತಿಯನ್ನು ಹೊರತಂದಿದೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಡಿಸೈನ್ ಮತ್ತು ಸ್ಟೈಲ್

2019ರ ಫಿಗೋ ಆವೃತ್ತಿಯು ಈ ಬಾರಿ ಯುರೋಪ್ ಮಾರುಕಟ್ಟೆಯಲ್ಲಿರುವ ಫೋರ್ಡ್ ನಿರ್ಮಾಣದ ಮತ್ತೊಂದು ಜನಪ್ರಿಯ ಕಾರು ಕಾ ಪ್ಲಸ್ ಮಾದರಿಯಿಂದ ಹಲವಾರು ವಿನ್ಯಾಸಗಳನ್ನು ಎರವಲು ಪಡೆದು ಮರುನಿರ್ಮಾಣ ಮಾಡಲಾಗಿದ್ದು, ನವೀಕರಿಸಲಾದ ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ಹನಿಕೊಂಬ್ ಫ್ರಂಟ್ ಗ್ರೀಲ್, ಹೊಸದಾದ ಹೆಡ್‌ಲ್ಯಾಂಪ್ ಕ್ಲಸ್ಟರ್, ಟೈಲ್‌ಲೈಟ್ಸ್ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್ಹ್‌ಗಳು ಈ ಬಾರಿ ಹೊಸ ಫಿಗೋ ಕಾರಿನ ಪ್ರಮುಖ ಬದಲಾವಣೆಗಳಾಗಿವೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಹಾಗೆಯೇ ಹೊಸ ಕಾರು ಸ್ಪೋರ್ಟಿ ಮಾದರಿಯ 15-ಇಂಚಿನ ಬ್ಲ್ಯಾಕ್ಡ್-ಔಟ್ ಅಲಾಯ್ ವೀಲ್ಹ್‌ಗಳನ್ನು ಪಡೆದಿದ್ದು, ಡ್ಯುಯಲ್ ಟೋನ್ ಬ್ಲ್ಯಾಕ್ಡ್-ಔಟ್ ರೂಫ್, ಸ್ಪೋರ್ಟಿ ಲುಕ್ ಡೋರ್, ಬ್ಲ್ಯೂ ನೆಮ್ ಬ್ಯಾಡ್ಜ್ ಹೊಂದಿದೆ. ಇದರ ಹೊರತಾಗಿ ಹೊಲೊಜೆನ್ ಹೆಡ್‌ಲ್ಯಾಂಪ್ ಸೌಲಭ್ಯವನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ರಾತ್ರಿ ವೇಳೆಯ ಕಾರು ಚಾಲನೆಯಲ್ಲಿ ಹೈ ಬೀಮ್ ಲೈಟಿಂಗ್ ಸೌಲಭ್ಯವು ತುಸು ಹಿನ್ನಡೆ ಅನುಭವಿಸುವ ಸಾಧ್ಯತೆಗಳಿವೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಕಾರಿನ ಒಳವಿನ್ಯಾಸ

ಹೊಸ ಫಿಗೋ ಕಾರಿನ ಒಳಭಾಗದ ವಿನ್ಯಾಸವು ಈ ಬಾರಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಬಹುತೇಕ ಸೌಲಭ್ಯಗಳು ಆಸ್ಪೈರ್ ಸೆಡಾನ್ ಮಾದರಿಯ ಹೋಲಿಕೆಯನ್ನೇ ಪಡೆದಿದೆ. ಎಲೆಕ್ಟ್ರಾನಿಕ್ ಅಡ್ಜೆಸ್ಟೆಬಲ್ ORVMs, ಪ್ರಯಾಣಿಕರಿಗೆ ಅನುಕೂಲಕರವಾಗುವಂತೆ ಜೋಡಿಸಲಾಗಿರುವ ಎಸಿ ವೆಂಟ್ಸ್, ಪವರ್ ವಿಂಡೋ ಕಂಟ್ರೋಲ್ ಬಟನ್‌ಗಳನ್ನು ಈ ಬಾರಿ ಡೋರ್ ಮಧ್ಯದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಸ್ಟಿರಿಯೋ ಮತ್ತು ಇನ್ಪೋಟೈನ್‌ಮೆಂಟ್

ಫಿಗೋ ಕಾರಿನಲ್ಲಿ ಈ ಬಾರಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಮತ್ತು ವೈಪರ್ಸ್, ಪಾರ್ಕಿಂಗ್ ಕ್ಯಾಮೆರಾ, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಪ್ರೇರಣೆ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಕಂಫರ್ಟ್ ಮತ್ತು ಬೂಟ್ ಸ್ಪೆಸ್

ಹ್ಯಾಚ್‌ಬ್ಯಾಕ್ ಆವೃತ್ತಿಯ ಕಾರುಗಳಲ್ಲೇ ವಿಶೇಷ ಒಳವಿನ್ಯಾಸ ಹೊಂದಿರುವ ಹೊಸ ಫಿಗೊ ಕಾರು ಚಾಲಕ ಸೇರಿ ಐದು ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದ್ದು, ಟಾಪ್ ಎಂಡ್ ಆವೃತ್ತಿಯಲ್ಲಿ ಫ್ಯಾಬ್ರಿಕ್ ಆಸನಗಳನ್ನು ನೀಡಲಾಗಿದೆ. ಹಾಗೆಯೇ ಹೆಡ್‌ರೂಂ ಮತ್ತು ಲೆಗ್‌ರೂಂ ಸೌಲಭ್ಯವನ್ನು ಈ ಬಾರಿ ವಿಸ್ತರಿಸಲಾಗಿದ್ದು, ಇದು ದೂರದ ಪ್ರಮಾಣದ ವೇಳೆ ಸಾಕಷ್ಟು ಸಹಕಾರಿಯಾಗಲಿದೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಇನ್ನು ಹೊಸ ಕಾರಿನಲ್ಲಿ 257-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯವನ್ನು ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಹಿಂಭಾಗದ ಸೀಟುಗಳನ್ನು ಮಡಿಚಿಟ್ಟುಕೊಳ್ಳುವ ಮೂಲಕ ಮತ್ತಷ್ಟು ಸ್ಥಳಾವಕಾಶವನ್ನು ಮಾಡಿಕೊಳ್ಳಬಹುದಾಗಿದೆ.

MOST READ: ಜುಲೈ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಎರ್ಟಿಗಾ ಪ್ರತಿಸ್ಪರ್ಧಿ ರೆನಾಲ್ಟ್ 7 ಸೀಟರ್ ಕಾರು..!

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಫೋರ್ಡ್ ಸಂಸ್ಥೆಯು ಫಿಗೋ ಹೊಸ ಕಾರುಗಳನ್ನು ಒಂದು ಡೀಸೆಲ್ ಎಂಜಿನ್‌ಲ್ಲಿ ಮತ್ತು ಎರಡು ಪೆಟ್ರೋಲ್ ಎಂಜಿನ್ ಆವೃತ್ತಿಯಲ್ಲಿ ಪರಿಚಯಿಸಿದ್ದು, ಡಿಸೇಲ್ ಆವೃತ್ತಿಯಲ್ಲಿ ಮೂರು ವೆರಿಯೆಂಟ್‌ಗಳು ಖರೀದಿ ಲಭ್ಯವಿದ್ದಲ್ಲಿ ಪೆಟ್ರೋಲ್ ವೆರಿಯೆಂಟ್‌ಗಳಲ್ಲಿ ಒಟ್ಟು ನಾಲ್ಕು ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಫಿಗೋ ಫೇಸ್‌ಲಿಫ್ಟ್ ಆವೃತ್ತಿಗಳು ಈ ಹಿಂದಿನಂತೆಯೇ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮುಂದುವರಿಸಿರುವ ಫೋರ್ಡ್ ಸಂಸ್ಥೆಯು ಈ ಬಾರಿ ಹೊಸದಾಗಿ ಟಾಪ್ ಎಂಡ್ ಆವೃತ್ತಿಯಾದ ಟೈಟಾನಿಯಂ ಬ್ಲೂ ವೆರಿಯೆಂಟ್‌ನಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಬಳಕೆ ಮಾಡಿರುವುದು ಪ್ರಮುಖ ಬದಲಾವಣೆಯಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಹೀಗಾಗಿ 1.2-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 1.5-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವ ಫೋರ್ಡ್ ಗ್ರಾಹಕರ ಬೇಡಿಕೆಗೆ ಹೆಚ್ಚು ಮನ್ನಣೆ ನೀಡಿದೆ.

MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಮೈಲೇಜ್

ಫಿಗೋ ಕಾರಿನಲ್ಲಿ ಲಭ್ಯವಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಪ್ರತಿ ಲೀಟರ್‌ಗೆ 20.5 ಕಿ.ಮಿ ಮೈಲೇಜ್ ನೀಡಿದ್ದಲ್ಲಿ, 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು ಪ್ರತಿ ಲೀಟರ್ 25.5ಕಿ.ಮಿ ಮೈಲೇಜ್ ನೀಡಲಿದೆ. ಹಾಗೆಯೇ ಹೊಸದಾಗಿ ಪರಿಚಯಿಸಲಾಗಿರುವ 1.5-ಲೀಟರ್ ಪೆಟ್ರೋಲ್ ಮಾದರಿಯು ಪರ್ಫಾಮೆನ್ಸ್ ವಿಚಾರವಾಗಿ ಗಮನ ಸೆಳೆಯಲಿದ್ದು, ಪ್ರತಿ ಲೀಟರ್ 16.6 ಕಿ.ಮಿ ಮೈಲೇಜ್ ನೀಡುವುದಾಗಿ ಫೋರ್ಡ್ ಸಂಸ್ಥೆ ಹೇಳಿಕೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಫಿಗೋ ಫೇಸ್‌ಲಿಫ್ಟ್ ಕಾರಿನ ವೆರಿಯೆಂಟ್‌ಗಳು ಮತ್ತು ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)

ಪೆಟ್ರೋಲ್ ಆವೃತ್ತಿಗಳು
ಆ್ಯಂಬಿಯೆಂಟ್ ರೂ. 5.15 ಲಕ್ಷ
ಟೈಟಾನಿಯಂ ರೂ. 6.39 ಲಕ್ಷ
ಟೈಟಾನಿಯಂ (1.5-ಲೀಟರ್) ರೂ. 8.09 ಲಕ್ಷ
ಟೈಟಾನಿಯಂ ಬ್ಲ್ಯೂ ರೂ. 6.94 ಲಕ್ಷ
ಡೀಸೆಲ್ ಆವೃತ್ತಿಗಳು
ಆ್ಯಂಬಿಯೆಂಟ್ ರೂ. 5.95 ಲಕ್ಷ
ಟೈಟಾನಿಯಂ ರೂ. 7.19 ಲಕ್ಷ
ಟೈಟಾನಿಯಂ ಬ್ಲ್ಯೂ ರೂ. 7.74 ಲಕ್ಷ

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಸುರಕ್ಷಾ ಸೌಲಭ್ಯಗಳು

ಹೊಸ ಫಿಗೋ ಕಾರು ಈ ಬಾರಿ ಸುರಕ್ಷತೆಯಲ್ಲಿ ಮತ್ತಷ್ಟು ಬಲಿಷ್ಠತೆ ಪಡೆದಿದ್ದು, ಪ್ರತಿ ಕಾರು ವೆರಿಯೆಂಟ್‌ನಲ್ಲೂ ಕೂಡಾ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಮತ್ತು ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಸ್ಪೀಡ್ ಅಲರ್ಟ್ ಸಿಸ್ಟಂ, ಎಲೆಕ್ಟ್ರಿಕ್ ಡೋರ್ ಲಾಕ್, ರೈನ್ ಸೆನ್ಸಿಂಗ್ ವೈಪರ್ಸ್ ಮತ್ತು ಟಾಪ್ ಎಂಡ್ ಆವೃತ್ತಿಯಲ್ಲಿ ಹೋಂದಾಣಿಕೆ ಮಾಡಬಹುದಾದ ರಿಯರ್ ಹೆಡ್ ರೆಸ್ಟ್, ಆರ್ ಏರ್‌ಬ್ಯಾಗ್‌ಗಳು, ಟ್ರಾನ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಸೌಲಭ್ಯ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಖರೀದಿಗೆ ಲಭ್ಯವಿರುವ ಬಣ್ಣಗಳು

ಫಿಗೋ ಕಾರುಗಳು ಒಟ್ಟು ಏಳು ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಆಕ್ಸ್‌ಫರ್ಡ್ ವೈಟ್, ಮೂನ್‌ಡಸ್ಟ್ ಸಿಲ್ವರ್, ಸ್ಮೊಕ್ ಗ್ರೇ, ಡೀಪ್ ಇಂಪ್ಯಾಕ್ಟ್ ಬ್ಲ್ಯೂ, ರೂಬಿ ರೆಡ್, ವೈಟ್ ಗೋಲ್ಡ್ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿವೆ.

ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಪ್ರತಿಸ್ಪರ್ಧಿ ಕಾರುಗಳಿಂತ ಹೊಸ ಫಿಗೋ ಹೇಗೆ ವಿಭಿನ್ನ?

ಕಾರು ಮಾದರಿಗಳು ಎಂಜಿನ್ ಸಾಮರ್ಥ್ಯ

ಪರ್ಫಾಮೆನ್ಸ್

ಬಿಎಚ್‌ಪಿ/ಟಾರ್ಕ್

ಆರಂಭಿಕ ಬೆಲೆ
ಹೊಸ ಫೋರ್ಡ್ ಫಿಗೋ 1,194 ಸಿಸಿ 96/120 ರೂ. 5.15 ಲಕ್ಷ
ಟಾಟಾ ಟಿಯಾಗೋ 1,199 ಸಿಸಿ 84/114 ರೂ. 4.21 ಲಕ್ಷ
ಮಾರುತಿ ಸುಜುಕಿ ಸ್ವಿಫ್ಟ್ 1,197ಸಿಸಿ 82/113 ರೂ. 4.99 ಲಕ್ಷ
ಹ್ಯುಂಡೈ ಐ10 ಗ್ರ್ಯಾಂಡ್ 1,197ಸಿಸಿ 81/114 ರೂ. 4.97 ಲಕ್ಷ
ಫಸ್ಟ್ ಡ್ರೈವ್ ರಿವ್ಯೂ- ಕಡಿಮೆ ಬೆಲೆ, ಉತ್ತಮ ಎಂಜಿನ್ ಪ್ರೇರಣೆಯೊಂದಿಗೆ ಬಂದ 2019ರ ಫೋರ್ಡ್ ಫಿಗೋ

ಒಟ್ಟಿನಲ್ಲಿ ಫೋರ್ಡ್ ಸಂಸ್ಥೆಯು ಈ ಬಾರಿ ಮಾರುತಿ ಸುಜುಕಿ ಸ್ವಿಫ್ಟ್, ಹ್ಯುಂಡೈ ಗ್ರ್ಯಾಂಡ್ ಐ10 ಮತ್ತು ಫೋಕ್ಸ್‌ವ್ಯಾಗನ್ ಪೋಲೊ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ವಿಶ್ವಾಸದಲ್ಲಿದ್ದು, ಹೊಸ ಕಾರಿನಲ್ಲಿ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯಗಳು ಇಲ್ಲದಿರುವುದು ಕೆಲವು ಕಾರು ಖರೀದಿದಾರರಿಗೆ ಹೊಸ ಕಾರು ಇಷ್ಟವಾಗದೇ ಇರಬಹುದು.

Most Read Articles

Kannada
English summary
2019 Ford Figo Review — Driving The BLU’s Away. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X