ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

By Praveen Sannamani

ಭಾರತೀಯ ಮಾರುಕಟ್ಟೆಗಾಗಿ ಹೊಸ ನಮೂನೆಯ ಕಂಪ್ಯಾಕ್ಟ್ ಯುಟಿಲಿಟಿ ಕಾರು ಮಾದರಿಯೊಂದನ್ನು ಅಭಿವೃದ್ಧಿಗೊಳಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು, ಫಿಗೊ ಹ್ಯಾಚ್‌ಬ್ಯಾಕ್ ಫ್ಯಾಟ್ ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ಧಿಗೊಳಿಸುವ ಮೂಲಕ ಹೊಸ ಸಂಚಲಯ ಸೃಷ್ಠಿಸಲು ಸಜ್ಜುಗೊಳ್ಳುತ್ತಿದೆ. ಹೀಗಾಗಿ ಬಿಡುಗಡೆಯ ಹಂತದಲ್ಲಿರುವ ಫ್ರೀ ಸ್ಟೈಲ್ ಕಾರುಗಳ ಮೊದಲ ಚಾಲನಾ ವಿಮರ್ಶೆಯನ್ನು ಇಲ್ಲಿ ಚರ್ಚೆ ಮಾಡಲಾಗಿದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಈ ಹಿಂದೆ ಮೂರು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದ ಫೋರ್ಡ್ ಸಂಸ್ಥೆಯು ಇದೀಗ ಸುಧಾರಿತ ತಂತ್ರಜ್ಞಾನ ಪ್ರೇರಿತ ಕಂಪ್ಯಾಕ್ಟ್ ಯುಟಿಲಿಟಿ ಫ್ರೀ ಸ್ಟೈಲ್ ಕಾರುನ್ನು ಅಭಿವೃದ್ಧಿಗೊಳಿಸಿದ್ದು, ಇದೇ ವರ್ಷ ಮೇ ಆರಂಭದಲ್ಲಿ ಹೊಸ ಕಾರು ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದೆ. ಇದರಿಂದಾಗಿ ಹ್ಯಾಚ್‌ಬ್ಯಾಕ್ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಸೂಕ್ತ ಆಯ್ಕೆಯಾಗಬಲ್ಲದು.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಫೋರ್ಡ್ ನಿರ್ಮಾಣದ ಇಕೋ ಸ್ಪೋರ್ಟ್ ಮತ್ತು ಫಿಗೊ ಕಾರುಗಳ ನಡುವಿನ ಕಾರು ಮಾದರಿಯಾಗಲಿರುವ ಫ್ರೀ ಸ್ಟೈಲ್ ಕಾರುಗಳು ಹತ್ತು ವಿಶೇಷತೆಗಳಿಂದಾಗಿ ಗ್ರಾಹಕರ ಆಯ್ಕೆಯನ್ನು ಹೆಚ್ಚಿಸುವ ಎಲ್ಲಾ ಲಕ್ಷಣಗಳಿದ್ದು, ಹೊಸ ತಂತ್ರಜ್ಞಾನ ಸೌಲಭ್ಯಗಳ ಬಗೆಗೆ ಮುಂದಿನ ಸ್ಲೈಡ್‌ಗಳಲ್ಲಿ ತಿಳಿಯೋಣ...

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಡಿಸೈನ್ ಮತ್ತು ಸ್ಟೈಲ್

ಫೋರ್ಡ್ ಒಡೆತನದ ಕೆನೆಟಿಕ್ ಡಿಸೈನ್ ಲಾಗ್ವೆಂಜ್ ಆಧಾರದ ಮೇಲೆ ಸಿದ್ದವಾಗಿರುವ ಫೋರ್ಡ್ ಫ್ರೀ ಸ್ಟೈಲ್ ಕಾರುಗಳು ಯುಟಿಲಿಟಿ ವೆಹಿಕಲ್ ಗುಣಲಕ್ಷಣಗಳನ್ನು ಹೊಂದಿದೆ. ಈ ಮೂಲಕ ಫಿಗೊ ಕಾರಿಗಿಂತ 16ಎಂಎಂ ಹೆಚ್ಚುವರಿ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು 190ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿವೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಮಹೀಂದ್ರಾ ಎಕ್ಸ್‌ಯುವಿ500ಗಿಂತ ಕೇವಲ 10ಎಂಎಂ ಕಡಿಮೆ ಕ್ಲಿಯೆರೆನ್ಸ್ ಪಡೆದಿರುವ ಫ್ರೀ ಸ್ಟೈಲ್ ಕಾರುಗಳು ಎಸ್‌ಯುವಿ ಮಾದರಿಯಲ್ಲೇ ಸಿದ್ದಗೊಂಡಿದ್ದು, 15-ಇಂಚಿನ 4 ಸ್ಪೋಕ್ ಅಲಾಯ್ ಚಕ್ರಗಳ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿಗಳಿಗೂ ಪೈಪೋಟಿ ನೀಡಬಲ್ಲದು.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಇದಲ್ಲದೇ ಸ್ಪೋಟಿ ಲುಕ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಹೆಕ್ಸಾಗೊನಲ್ ಹನಿಕೊಂಬೊ ಮಾದರಿಯ ಗ್ರಿಲ್ ಜೋಡಣೆಯು ಹೊಸ ಕಾರಿನ ಹೊರ ನೋಟವನ್ನು ಹೆಚ್ಚಿಸಿದ್ದು, ಹೊಸ ನಮೂನೆಯ ಬ್ಯಾನೆಟ್, ಬಂಪರ್, ಬ್ಲ್ಯಾಕ್ ಕ್ಲ್ಯಾಂಡಿಂಗ್, ಫಾಗ್ ಲ್ಯಾಂಪ್ಸ್ ನೀಡಲಾಗಿದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಬಹುತೇಕ ಫಿಗೊ ಕಾರುಗಳ ಹೋಲಿಕೆ ಇದ್ದರೂ ಚಕ್ರಗಳು, ಸೈಡ್ ಗ್ರಾರ್ನಿಷ್, ಟೈಲ್ ಲ್ಯಾಂಪ್, ಗ್ರಾಫಿಕ್ಸ್ ಡಿಸೈನ್, ಒವಿಎಂಆರ್ ವಿಭಾಗದಲ್ಲಿ ಗುರುತರ ಬದಲಾವಣೆ ಹೊಂದಿವೆ. ಜೊತೆಗೆ ಸ್ಕೀಡ್ ಪ್ಲೇಟ್ ಮತ್ತು ಫ್ಲಕ್ಸ್ ಕ್ಲ್ಯಾಂಡಿಂಗ್ ಸಹ ಹೊಂದಿರಲಿವೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಫ್ರೀ ಸ್ಟೈಲ್ ಒಳವಿನ್ಯಾಸ

6.5 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರುವ ಹೊಸ ಕಾರುಗಳು ವಿನೂತನ ಡ್ಯಾಶ್ ಬೋರ್ಡ್, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಫೋರ್ಡ್ ಸಿಂಕ್ 3 ಇನ್ಪೋಟೈನ್‌ಮೆಂಟ್ ಸೆಟ್ ಅಪ್ ಹೊಂದಿದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಇದರಿಂದ ಕಾರು ಚಾಲನೆಯನ್ನು ಮತ್ತಷ್ಟು ಆರಾಮದಾಯಕ ಎನಿಸಲಿರುವ ಫ್ರೀ ಸ್ಟೈಲ್ ಕಾರುಗಳು, ವಿಸ್ತರಿತ ಕ್ಯಾಬಿನ್ ಸ್ಪೆಸ್, ಯುಸರ್ ಇಂಟರ್‌ಫೇಸ್ ಹಾಗೂ ಕಂಪಾಸ್ ಮಾದರಿಯಲ್ಲಿ ಡಿಸ್‌ಫೈ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಬೂಟ್ ಸ್ಪೆಸ್ ವಿನ್ಯಾಸ

ಮೇಲೆ ಹೇಳಿದ ಹಾಗೆ ವಿಸ್ತರಿತ ಕ್ಯಾಬಿನ್ ಸೌಲಭ್ಯ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಉತ್ತಮ ಬೂಟ್ ಸ್ಪೆಸ್ ಪಡೆದುಕೊಂಡಿದ್ದು, ಫಿಗೊ ಮಾದರಿಯಲ್ಲೇ 275-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಒದಗಿಸಲಾಗಿದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಇದು ದೂರದ ಪ್ರಯಾಣಗಳಿಗೆ ಸಾಕಷ್ಟು ಅನೂಕಲಕರವಾಗಲಿದ್ದು, ಚಾಲಕ ಸೇರಿ ನಾಲ್ವರು ಅರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ. ಹೀಗಾಗಿ ಹ್ಯಾಚ್‌ಬ್ಯಾಕ್ ಆಯ್ಕೆ ಮಾಡುವ ಗ್ರಾಹಕರು ಫ್ರೀ ಸ್ಟೈಲ್ ನತ್ತ ಗಮನಹರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಎಂಜಿನ್ ಸಾಮರ್ಥ್ಯ

ಫೋರ್ಡ್ ಸಂಸ್ಥೆಯು ಫ್ರೀ ಸ್ಟೈಲ್ ಕಾರುಗಳಲ್ಲಿ ಪವರ್ ಫುಲ್ ಎಂಜಿನ್ ಒದಗಿಸಿರುವುದು ಮತ್ತೊಂದು ವಿಶೇಷವಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನಲ್ಲಿ ಹೊಸ ಕಾರು ಆಯ್ಕೆ ಮಾಡಬಹುದು.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

1.2-ಲೀಟರ್ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು, 1.2-ಲೀಟರ್ ಮಾದರಿಯಲ್ಲಿ 94.6 ಬಿಎಚ್‌ಪಿ, 120 ಎನ್ಎಂ ಟಾರ್ಕ್ ಹಾಗೂ 1.5-ಲೀಟರ್ ಮಾದರಿಯಲ್ಲಿ 99 ಬಿಎಚ್‌ಪಿ ಮತ್ತು 120 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಇನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಫಿಗೊ ಹ್ಯಾಚ್‌ಬ್ಯಾಕ್‌ಗಿಂತಲೂ ಉತ್ತಮ ಮೈಲೇಜ್‌, ಪರ್ಫಾಮೆನ್ಸ್ ನೀಡಬಲ್ಲವು.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಈ ಮೂಲಕ ಬೆಸ್ಟ್ ಪರ್ಫಾಮೆನ್ಸ್ ಹೊಂದಿದ ಕಾರು ಮಾದರಿ ಇದಾಗಲಿದ್ದು, ಕ್ರಾಸ್ ಓವರ್ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ಹೆಚ್ಚಿನ ಗುಣವೈಶಿಷ್ಟ್ಯತೆಗಳನ್ನು ಹೊಂದಿಕೊಂಡಿದೆ. ಒಟ್ಟಿನಲ್ಲಿ ಪ್ರದೇಶಗಳಿಗೆ ಅನುಗುಣವಾಗಿ ತನ್ನ ಕಾರ್ಯಕ್ಷಮತೆ ಪ್ರದರ್ಶಿಸುವ ಫ್ರೀ ಸ್ಟೈಲ್ ಕಾರುಗಳು ನಿಜಕ್ಕೂ ಅದ್ಬುತ ಕಾರು ಆವೃತ್ತಿಯಾಗಿದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಫ್ರೀ ಸ್ಟೈಲ್ ಕಾರುಗಳು ಗುಣವಿಶೇಷಗಳ ಬಗ್ಗೆ ಇಲ್ಲಿ ಸಂಕ್ಷಿಪ್ತ ವಿವರಣೆ ಇಲ್ಲಿದೆ ನೋಡಿ.....

ಕಾರು ಮಾದರಿ ಪೆಟ್ರೋಲ್ ಡೀಸೆಲ್
ಎಂಜಿನ್ 1.2-ಲೀಟರ್,

ನ್ಯಾಚುರಲ್ ಆಸ್ಪೈರೆಡ್ 3-ಸಿಲಿಂಡರ್

1.5-ಲೀಟರ್,

ಟರ್ಬೋಚಾಜ್ಡ್ 4-ಸಿಲಿಂಡರ್

ಎಂಜಿನ್ (ಸಿಸಿ) 1194 1498
ಪವರ್ (ಬಿಎಚ್‌ಪಿ) 94.7 98.6
ಟಾರ್ಕ್ (ಎನ್ಎಂ) 120 215
ಗೇರ್‌ಬಾಕ್ಸ್ ಸೌಲಭ್ಯ 5-ಸ್ಪೀಡ್ ಮ್ಯಾನುವಲ್ 5-ಸ್ಪೀಡ್ ಮ್ಯಾನುವಲ್
ಮೈಲೇಜ್ 19 24.4
ಟೈರ್ ಅಳತೆ 185/60 ಆರ್15 185/60 ಆರ್15

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಕಾರು ಮಾದರಿಗಳು

ಫೋರ್ಡ್ ನಿರ್ಮಾಣದ ಕಾರುಗಳಲ್ಲಿ ಸಾಂಪ್ರದಾಯಿಕವಾಗಿ ಕಂಡು ಬರುವ ಆ್ಯಂಬನೆಟ್, ಟ್ರೆಂಡ್, ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್ ಆವೃತ್ತಿಗಳಲ್ಲಿ ಫ್ರೀ ಸ್ಟೈಲ್ ಕಾರುಗಳು ಖರೀದಿ ಲಭ್ಯವಿರಲಿದ್ದು, ಇದರಲ್ಲಿ ಟೈಟಾನಿಯಂ ಪ್ಲಸ್ ಮಾದರಿಯು ಉನ್ನತ ಕಾರು ಆವೃತ್ತಿಯಾಗಲಿರಲಿದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಲಭ್ಯಲಿರುವ ಬಣ್ಣಗಳು

ಕೆನಾಯಿನ್ ರಿಡ್ಜ್, ಮೂನ್‌ಡಸ್ಟ್ ಸಿಲ್ವರ್, ಸ್ಮೋಕಿ ಗ್ರೇ, ವೈಟ್ ಗೊಲ್ಡ್, ಆಕ್ಸ್‌ಫರ್ಡ್ ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಫ್ರೀ ಸ್ಟೈಲ್ ಕಾರುಗಳು ಖರೀದಿಗೆ ಲಭ್ಯವಿರಲಿವೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಫ್ರೀ ಸ್ಟೈಲ್ ಕಾರಿನ ಮೈಲೇಜ್

ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 19 ಕಿ.ಮೀ ಮೈಲೇಜ್ ನೀಡಲಿದ್ದು, ಡೀಸೆಲ್ ಎಂಜಿನ್ ಪ್ರೇರಿತ ಫ್ರೀ ಸ್ಟೈಲ್ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 24.4 ಕಿ.ಮೀ ಮೈಲೇಜ್ ನೀಡಲಿವೆ ಎಂದು ಫೋರ್ಡ್ ಸಂಸ್ಥೆಯು ಹೇಳಿಕೊಂಡಿದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಕಾರಿನ ಸುರಕ್ಷಾ ಸಾಧನಗಳು

ಪ್ರಮುಖ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಫ್ರೀ ಸ್ಟೈಲ್ ಕಾರುಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಕೀ ಲೆಸ್ ಎಂಟ್ರಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಸೀಟ್ ಬೆಲ್ಟ್ ರೀಮೆಂಡರ್ ಸೌಲಭ್ಯಗಳನ್ನು ಪಡೆದುಕೊಂಡಿರುತ್ತದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಜೊತೆಗೆ 15-ಇಂಚಿನ್ ಅಲಾಯ್ ಚಕ್ರಗಳು, ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ರಿಯರ್ ಸ್ಪಾಯ್ಲರ್, ರೂಫ್ ವ್ಯಾರ್ಪ್, ಆ್ಯಂಟಿ ಥೆಪ್ಟ್ ನಟ್ಸ್, ರಿಯರ್ ವ್ಯೂ ಕ್ಯಾಮೆರಾ, ನೆಕ್ ರೆಸ್ಟ್ ಮತ್ತು ಪಿಲ್ಲೋ ಸೇರಿದಂತೆ ಪ್ರಮುಖ ವೈಶಿಷ್ಟ್ಯತೆಗಳನ್ನು ಹೊಂದಿರಲಿದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಬಿಡುಗಡೆಯ ದಿನಾಂಕ ಮತ್ತು ಬೆಲೆ(ಅಂದಾಜು)

ಫ್ರೀಸ್ಟೈಲ್ ಕಾರನ್ನು ಇದೇ ವರ್ಷ ಮೇ ಪ್ರಾರಂಭದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದು, ಹೊಸ ಕಾರಿನ ಬೆಲೆಗಳು ಆರಂಭಿಕವಾಗಿ ರೂ.6 ಲಕ್ಷದಿಂದ ರೂ.9 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

ಒಟ್ಟಾರೆಯಾಗಿ ಹೊಸ ಕಾರಿನ ಗುಣ ವಿಶೇಷಗಳನ್ನು ನೋಡುವುದಾದರೇ ಕೈಗೆಟುಕುವ ದರದಲ್ಲಿ ಉತ್ತಮ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಕಾರು ಖರೀದಿಗೆ ಇದೊಂದು ಅತ್ಯುತ್ತಮ ಆಯ್ಕೆ ಎನ್ನಬಹುದಾಗಿದ್ದು, ಹ್ಯುಂಡೈ ಐ20 ಮತ್ತು ಟೊಯೊಟಾ ಇಟಿಯಾಸ್ ಕ್ರಾಸ್ ಮಾದರಿಗಳಿಗೆ ತ್ರೀವ ಪೈಪೋಟಿ ನೀಡಲಿದೆ.

Most Read Articles

Kannada
Read more on ford car review
English summary
Ford Freestyle Review — From The Land Of The Free, To The Hands Of The Brave!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X