ಫಸ್ಟ್ ಡ್ರೈವ್ ರಿವ್ಯೂ: ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಭಾರತೀಯ ಆಟೋ ಉದ್ಯಮವು ಕಳೆದ ಒಂದು ದಶಕದ ಅವಧಿಯಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ವಾಹನ ಉತ್ಪಾದನೆ, ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಅದರಲ್ಲೂ ಎಸ್‌ಯುವಿ ಸೆಗ್ಮೆಂಟ್ ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಂಡಿದ್ದು, ಕಳೆದ ಕೆಲ ವರ್ಷಗಳಲ್ಲಿ ಎಸ್‌ಯುವಿ ವಿಭಾಗದಲ್ಲಿ ಪೈಪೋಟಿ ತೀವ್ರಗೊಳ್ಳುತ್ತಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಎಸ್‌ಯುವಿ ವಿಭಾಗದಲ್ಲಿನ ಪೈಪೋಟಿಯಿಂದಾಗಿ ವಿವಿಧ ಕಾರು ಉತ್ಪಾದನಾ ಕಂಪನಿಗಳು ಕಳೆದ ಕೆಲ ವರ್ಷಗಳಲ್ಲಿ ಆಕರ್ಷಕ ಕಾರು ಮಾದರಿಗಳನ್ನು ಬಿಡುಗಡೆ ಮಾಡಿದ್ದು, ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಹ್ಯುಂಡೈ ಕೂಡಾ ತನ್ನ ಹೊಚ್ಚ ಹೊಸ ಅಲ್ಕಾಜರ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ಮೂಲಕ ಎಸ್‌‌ಯುವಿ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಸಬ್ ಫೋರ್ ಮೀಟರ್ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಫುಲ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯಿಟ್ಟುಕೊಂಡಿರುವ ಹ್ಯುಂಡೈ ಕಂಪನಿಯು ವೆನ್ಯೂ, ಕ್ರೆಟಾ, ಕೊನಾ ಇವಿ ಮತ್ತು ಟಕ್ಸನ್ ಮೂಲಕ ಈಗಾಗಲೇ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಅಲ್ಕಾಜರ್ ಕಾರು ಮಾದರಿಯು ಹ್ಯುಂಡೈ ಕಂಪನಿಗೆ ಮತ್ತಷ್ಟು ಬೇಡಿಕೆ ತಂದುಕೊಡುವ ನೀರಿಕ್ಷೆಯಲ್ಲಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಹೊಸ ಅಲ್ಕಾಜರ್ ಎಸ್‌ಯುವಿ ಮಾದರಿಯನ್ನು ಹ್ಯುಂಡೈ ಕಂಪನಿಯು ಈ ತಿಂಗಳು 18ರಂದು ಬಿಡುಗಡೆ ಮಾಡಿದ್ದು, ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಹೊಸ ಕಾರು ಬಿಡುಗಡೆಯ ನಂತರ ಕಾರಿನ ಕಾರ್ಯಕ್ಷಮತೆ ಕುರಿತು ಮಾಧ್ಯಮ ಸಂಸ್ಥೆಗಳಿಗೆ ವಿಶೇಷ ಡ್ರೈವ್ ಕಲ್ಪಿಸಿದ್ದ ಹ್ಯುಂಡೈ ಕಂಪನಿಯು ಡ್ರೈವ್‌ಸ್ಪಾರ್ಕ್ ತಂಡಕ್ಕೆ ಅಲ್ಕಾಜರ್ ಹೈ ಎಂಡ್ ಮಾದರಿಯನ್ನು ಹಸ್ತಾಂತರಿಸಿತ್ತು.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಅಲ್ಕಾಜರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯಗಳನ್ನು ಹೊಂದಿದ್ದು, ಪ್ರತಿಸ್ಪರ್ಧಿ ಮಾದರಿಗಿಂತಲೂ ಅಲ್ಕಾಜರ್ ಹೇಗೆ ವಿಭಿನ್ನವಾಗಿದೆ ಎನ್ನುವುದನ್ನು ಈ ಫಸ್ಟ್ ಡ್ರೈವ್ ವಿಮರ್ಶೆ ಲೇಖನದಲ್ಲಿ ಸಂಪೂರ್ಣವಾಗಿ ಚರ್ಚಿಸಿದ್ದೇವೆ. ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಧರಿಸಿ ನಿರ್ಮಾಣವಾಗಿರುವ ಹೊಸ ಅಲ್ಕಾಜರ್ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳೊಂದಿಗೆ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಹೊಂದಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಡಿಸೈನ್ ಮತ್ತು ಸ್ಟೈಲ್

ಆಕರ್ಷಕ ಡಿಸೈನ್ ಹೊಂದಿರುವ ಅಲ್ಕಾಜರ್ ಎಸ್‌ಯುವಿ ಮಾದರಿಯು ಕ್ರೆಟಾ ಮಾದರಿಯಲ್ಲಿಯೇ ಫ್ರಂಟ್ ಫಾಸಿಯಾ ಹೊಂದಿದ್ದು, ಬಂಪರ್‌‌ ವಿನ್ಯಾಸದಲ್ಲಿಯೇ ಸೆರ್ಪಡೆಯಾಗಿರುವ ಸ್ಪ್ಲಿಟ್-ಶೈಲಿಯ ಎಲ್ಇಡಿ ಹೆಡ್‌ಲ್ಯಾಂಪ್‌, ತ್ರಿ ಬೀಮ್ ಹೆಡ್‌ಲ್ಯಾಂಪ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಎಲ್ಇಡಿ ಫಾಗ‌್‌ಲ್ಯಾಂಪ್, ಟರ್ನ್ ಇಂಡಿಕೇಟರ್, ಗ್ರಿಲ್‌ನಲ್ಲಿ ಹ್ಯುಂಡೈ ಲೊಗೊ ಪ್ರಮುಖ ಆಕರ್ಷಣೆಯಾಗಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಹೊಸ ಕಾರಿನ ಸೈಡ್ ಪ್ರೋಫೈಲ್ ಕೂಡಾ ಆಕರ್ಷಕವಾಗಿದ್ದು, ಕ್ರೆಟಾ ಪ್ಲ್ಯಾಟ್‌ಫಾರ್ಮ್ ಆಧರಿಸಿದ್ದರೂ ಹೊಸ ಕಾರು ಕ್ರೆಟಾ ಮಾದರಿಗಿಂತಲೂ ಭಿನ್ನವಾದ ನಿಲುವನ್ನು ಪ್ರದರ್ಶಿಸುವುದರ ಜೊತೆಗೆ ಗ್ರಾತದಲ್ಲಿ ಬಲಿಷ್ಠತೆಯನ್ನು ಪಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಅಲ್ಕಾಜರ್ ಕಾರಿನ ಎ, ಬಿ, ಸಿ ಪಿಲ್ಲರ್‌ಗಳು ಬ್ಲ್ಯಾಕ್ ಔಟ್ ಅಂಶಗಳನ್ನು ಹೊಂದಿದ್ದು, ಪ್ರೀಮಿಯಂ ಫ್ಲೋಟಿಂಗ್ ರೂಫ್, ಡೈಮಂಡ್-ಕಟ್ 18-ಇಂಚಿನ ಅಲಾಯ್ ಚಕ್ರಗಳು, ಫಸ್ಟ್-ಇನ್-ಸೆಗ್ಮೆಂಟ್ ಸೈಡ್ ಫೂಟ್ ಸ್ಟೆಪ್ ಅನ್ನು ಸಹ ಪಡೆದುಕೊಂಡಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಹೊಸ ಕಾರಿಗೆ ಮತ್ತಷ್ಟು ಪ್ರೀಮಿಯಂ ಲುಕ್ ನೀಡಲು ಹೊಸ ಕಾರಿನಲ್ಲಿ ಹಲವಾರು ಹೊಸ ಫೀಚರ್ಸ್‌ಗಳನ್ನು ಜೋಡಣೆ ಮಾಡಿದ್ದು, ಡಾರ್ಕ್ ಕ್ರೋಮ್ ಹೊಂದಿರುವ ಕ್ಲಾಸಿ ಡೋರ್ ಹ್ಯಾಂಡಲ್, ಡಾರ್ಕ್ ಕ್ರೋಮ್ ಸ್ಟ್ರಿಪ್ ಮತ್ತು ವಿಭಜಿತವಾಗಿರುವ ಎಲ್ಇಡಿ ಟೈಲ್‌ಲ್ಯಾಂಪ್ ಹೊಂದಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ನಾವು ಚಾಲನೆ ಮಾಡಿದ ಸಿಗ್ನೆಚರ್ ಮಾದರಿಯಲ್ಲಿ ಎಂಜಿನ್ ಸೂಚಿಸುವ 2.0 ಸಿಗ್ನೆಚರ್ ವೆರಿಯೆಂಟ್ ಬ್ಯಾಡ್ಜ್, ಟ್ವಿನ್ ಎಕ್ಸಾಸ್ಟ್ ಸೌಲಭ್ಯಗಳಿದ್ದು, ಡಾರ್ಕ್ ಕ್ರೋಮ್ ಸ್ಟ್ರಿಪ್‌ನಲ್ಲಿ ಅಲ್ಕಾಜರ್ ಪದವನ್ನು ಜೋಡಣೆ ಮಾಡಲಾಗಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಇಂಟಿರಿಯರ್ ಡಿಸೈನ್

ಹೊಸ ಕಾರು ಹೊರಭಾಗದಲ್ಲಿ ಕಾಣುವಂತೆ ಒಳಭಾಗದಲ್ಲೂ ವಿಶಾಲವಾದ ಕ್ಯಾಬಿನ್ ಸೌಲಭ್ಯಗಳೊಂದಿಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಬ್ರೌನ್ ಮತ್ತು ಬ್ಲ್ಯಾಕ್‌ನ ಪ್ರೀಮಿಯಂ ಸಂಯೋಜನೆಯಾಗಿರುವ ಕಾಗ್ನ್ಯಾಕ್ ಡ್ಯುಯಲ್ ಟೋನ್ ಬಣ್ಣವು ಒಳ ಭಾಗದ ವಿನ್ಯಾಸಕ್ಕೆ ಹೊಸ ಲುಕ್ ನೀಡಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಸಾಫ್ಟ್ ಟಚ್ ನೀಡಲಾಗಿದ್ದರೂ ಅದು ಹಾರ್ಡ್ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದ್ದು, ವೆಚ್ಚ ತಗ್ಗಿಸಲು ಸಾಫ್ಟ್-ಟಚ್ ಪ್ಲಾಸ್ಟಿಕ್‌ನಂತೆ ಕಾಣುವಂತೆ ಮಾಡಲಾಗಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಡ್ಯಾಶ್‌ಬೋರ್ಡ್‌ನ ಮಧ್ಯದಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಘಟಕವಿದ್ದು, ಇದು ಹಲವಾರು ವೈಶಿಷ್ಟ್ಯಗಳೊಂದಿಗೆ ಕೂಡಿದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಯೊಂದಿಗೆ ಬ್ಲೂಟೂತ್ ಸ್ಮಾರ್ಟ್‌ಫೋನ್ ಸಂಪರ್ಕವನ್ನು ಪಡೆಯುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸಿಸ್ಟಮ್‌ಗೆ ಸಂಪರ್ಕಿಸುವುದು ಬಹಳ ಸುಲಭವಿದ್ದು, ಎಲ್ಲಾ ತಾಂತ್ರಿಕ ಅಂಶಗಳನ್ನು ಈ ಮೂಲಕ ನಿಯಂತ್ರಿಸಬಹುದು.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಹಾಗೆಯೇ ಹೊಸ ಕಾರಿನಲ್ಲಿ 64 ವಿವಿಧ ಬಣ್ಣಗಳನ್ನು ಒಳಗೊಂಡ ಆ್ಯಂಬಿಯೆಂಟ್ ಲೈಟಿಂಗ್ಸ್, ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಸೌಲಭ್ಯಕ್ಕಾಗಿ 10.25 ಇಂಚಿನ ಪರದೆ ನೀಡಲಾಗಿದ್ದು, ಸಂಪೂರ್ಣ ಡಿಜಿಟಲ್ ಉಪಕರಣಗಳು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್‌ನಂತಹ ಉನ್ನತ ಮಟ್ಟದ ವೈಶಿಷ್ಟ್ಯಗಳನ್ನು ಖಾತ್ರಿ ಪಡಿಸುತ್ತವೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಕಾರು ಚಾಲನೆಯ ವೇಳೆ ಚಾಲಕನು ಸಂದರ್ಭಕ್ಕೆ ಅನುಗುಣವಾಗಿ ಇಂಡಿಕೇಟರ್ ಬಳಸುವಾಗ ರಿಯರ್ ವ್ಯೂ ಮಿರರ್‌ನಲ್ಲಿ ಕ್ಯಾಮೆರಾ ಮೂಲಕ ಬ್ಲೈಂಡ್ ಸ್ಪಾಟ್ ಸುಲಭವಾಗಿ ಗುರುತಿಸಬಹುದಾಗಿದ್ದು, ಚಾಲಕನು ಯಾವುದೇ ಗೊಂದಲಗಳಿಲ್ಲದೆ ಕಾರನ್ನು ತಿರುಗಿಸಿಕೊಳ್ಳಲು ಸಹಕಾರಿಯಾಗಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಇನ್ನು ಹೊಸ ಕಾರಿನಲ್ಲಿ ಮನರಂಜನೆಗಾಗಿ ಬೋಸ್‌ ನಿರ್ಮಾಣದ 8-ಸ್ಪೀಕರ್ ಆಡಿಯೊ ಸಿಸ್ಟಮ್, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, 6 ಸೀಟರ್ ಮಾದರಿಯಲ್ಲಿ ಎರಡನೇ ಸಾಲಿನಲ್ಲಿರುವ ಕ್ಯಾಪ್ಟನ್ ಆಸನಗಳಿಗಾಗಿ ಫೋರ್ಡ್-ಡೌನ್ ಟೇಬಲ್ ಸೌಲಭ್ಯಗಳನ್ನು ನೀಡಲಾಗಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

6 ಸೀಟರ್ ಮಾದರಿಯು 2+2+2 ವಿನ್ಯಾಸದ ಆಸನಗಳನ್ನು ಹೊಂದಿದ್ದು, ಎರಡನೇ ಸಾಲಿನಲ್ಲೂ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಜೊತೆಗೆ ಮೂರನೇ ಸಾಲಿನಲ್ಲಿರುವ ಪ್ರಯಾಣಿಕ ಅನುಕೂಲಕ್ಕಾಗಿ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಮತ್ತು ಎಸಿ ವೆಂಟ್ಸ್ ನೀಡಲಾಗಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಸ್ಥಳವಾಕಾಶ ಮತ್ತು ಅರಾಮದಾಯಕ ಪ್ರಯಾಣಕ್ಕಿರುವ ಸೌಲಭ್ಯಗಳು

ಅಲ್ಕಾಜರ್ ಕಾರು ಮಾದರಿಯನ್ನು ಮಧ್ಯಮ ಕ್ರಮಾಂಕದ ಎಸ್‌ಯುವಿ ವಿಭಾಗದಲ್ಲಿ ಅತ್ಯಂತ ಆರಾಮದಾಯಕ ಕಾರು ಮಾದರಿ ಎಂದು ಹ್ಯುಂಡೈ ಕಂಪನಿಯು ಹೇಳಿಕೊಂಡಿದೆ. ಆದರೆ ಅಲ್ಕಾಜರ್‌ ಕಾರಿನಲ್ಲಿ ಕೆಲವು ಗಂಟೆಗಳ ಕಾಲ ಪ್ರಯಾಣಿಸಿದ ನಮಗೆ ಮೂರನೇ ಸಾಲಿನ ಆಸನ ಸೌಲಭ್ಯವು ಧೀರ್ಘಕಾಲದ ಪ್ರಯಾಣಕ್ಕಾಗಿ ಅನುಕೂಲಕರವಾಗಿಲ್ಲ ಎನ್ನುವುದನ್ನು ಕಂಡುಕೊಂಡೆವು.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

2,760-ಎಂಎಂ ವ್ಹೀಲ್ ಬೆಸ್ ಹೊಂದಿರುವ ಹೊಸ ಕಾರಿನಲ್ಲಿ ಅಚ್ಚುಕಟ್ಟಾಗಿ 7 ಸೀಟರ್ ಮತ್ತು 6 ಸೀಟರ್ ಸೌಲಭ್ಯಗಳನ್ನು ಅಳವಡಿಸಿದ್ದರೂ ಹಿಂಬದಿಯ ಆಸನದ ಸಾಲು ವಯಸ್ಕ ಪ್ರಯಾಣಿಕರಿಗೆ ಧೀರ್ಘಕಾಲದ ಪ್ರಯಾಣಕ್ಕೆ ಅಡಚಣೆ ಉಂಟು ಮಾಡಲಿದ್ದು, ಮಕ್ಕಳಿಗಾಗಿ ಮಾತ್ರ ಹಿಂಬದಿಯ ಆಸನಗಳು ಸೂಕ್ತವಾಗಿವೆ ಎನ್ನಬಹುದು.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಇನ್ನುಳಿದಂತೆ ಚಾಲಕ, ಸಹ ಪ್ರಯಾಣಿಕರ ಸೀಟುಗಳು ಮತ್ತು ಮಧ್ಯದ ಸಾಲಿನ ಆಸನಗಳು ಅತ್ಯುತ್ತಮ ಲೆಗ್‌ರೂಂ ಸೌಲಭ್ಯದೊಂದಿಗೆ ಆರಾಮದಾಯಕ ಪ್ರಯಾಣಕ್ಕೆ ಅನುಕೂಲವಾಗಿದ್ದು, ಕ್ಯಾಪ್ಟನ್ ಸೀಟುಗಳಲ್ಲಿ ಆರ್ಮ್ ರೆಸ್ಟ್, ಕಪ್ ಹೋಲ್ಡರ್, ಸೀಟ್ ಬ್ಯಾಕ್ ಟೇಬಲ್ ಸೌಲಭ್ಯಗಳಿವೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಕಾರು ಚಾಲನೆಗೆ ಅನುಕೂಲಕರವಾಗುವಂತೆ ಡ್ರೈವರ್ ಸೈಡ್ ಆಸನದಲ್ಲಿ 8 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಎಲೆಕ್ಟ್ರಿಕ್ ಪವರ್ ಅಡ್ಜೆಸ್ಟ್, ಮೂರು ಹಂತದ ಕೂಲಿಂಗ್ ಸಿಸ್ಟಂ, ಕ್ಯಾಪ್ಟನ್ ಸೀಟುಗಳಲ್ಲಿ ವೆಂಟಿಲೆಷನ್ ಸೌಲಭ್ಯ, ಆಟೋ ಏರ್ ಪ್ಯೂರಿಫೈರ್ ಮತ್ತು ಉತ್ತಮವಾಗಿರುವ ಪನೊರಮಿಕ್ ಸನ್‌ರೂಫ್ ಹೊಂದಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಸನ್‌ರೂಫ್ ಅನ್ನು ಇನ್ಫೋಟೈನ್‌ಮೆಂಟ್ ಘಟಕದ ಮೂಲಕ ವಾಯ್ಸ್ ಅಸಿಸ್ಟ್ ಬಳಸಿ ನಿಯಂತ್ರಿಸಬಹುದಾಗಿದ್ದು, ಹೊಸ ಕಾರಿನಲ್ಲಿ ಮೂರು ಸಾಲಿನ ಆಸನದೊಂದಿಗೆ 180-ಲೀಟರ್ ಬೂಟ್‌ಸ್ಪೆಸ್ ಪಡೆದುಕೊಂಡಿದೆ. ಒಂದು ವೇಳೆ ಹೆಚ್ಚುವರಿ ಬೂಟ್‌ಸ್ಪೆಸ್ ಬೇಕಿದ್ದಲ್ಲಿ ಹಿಂಬದಿ ಆಸನಗಳನ್ನು ಮಡಿಕೆ ಮಾಡಿ ಹೆಚ್ಚುವರಿ ಸ್ಥಳಾವಕಾಶ ಮಾಡಿಕೊಳ್ಳಬಹುದು.

Dimensions Hyundai Alcazar
Length 4,500mm
Width 1,790mm
Height 1,675mm
Wheelbase 2,760mm
Boot Space 180 litres
Ground Clearance 200mm
ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಅಲ್ಕಾಜರ್ ಕಾರು ಅತ್ಯುತ್ತಮ ಫೀಚರ್ಸ್‌, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿದ್ದು, ಹೈ ಎಂಡ್ ಮಾದರಿಗಳಲ್ಲಿ 2.0-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಮತ್ತು ಆರಂಭಿಕ ಮಾದರಿಗಳಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

2.0-ಲೀಟರ್(1,999 ಸಿಸಿ) ಎಂಪಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮಾದರಿಗಳು ಉತ್ತಮ ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ಪೆಟ್ರೋಲ್ ಮಾದರಿಯು 157-ಬಿಎಚ್‌ಪಿ, 191-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 113.4-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಎರಡು ಎಂಜಿನ್‌ಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಿದ್ದು, ಇಕೋ, ಕಂಫರ್ಟ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ನೀಡಲಾಗುತ್ತದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಹೊಸ ಕಾರು ಟರ್ಬೊ ಕಾರಿಗಳಿಂತ ತುಸು ನಿಧಾನ ಎನ್ನಿಸಲಿದ್ದು, ಹೊಸ ಕಾರಿನ ಎಂಪಿಐ ಎಂಜಿನ್ ಥ್ರೊಟಲ್ ಪ್ರತಿಕ್ರಿಯೆ ಸ್ವಲ್ಪ ಅಸ್ಪಷ್ಟವಾಗಿದೆ. ಆದರೂ ಉತ್ತಮ ಮಟ್ಟದ ಥ್ರೊಟಲ್ ಪ್ರತಿಕ್ರಿಯೆಯೊಂದಿಗೆ ನೀವು ನಗರದಲ್ಲಿ ಪ್ರಯಾಣಿಸಲು ಬಯಸಿದಾಗ ಆರಾಮವಾಗಿರಲಿದ್ದು, ಡ್ರೈವ್ ಕಂಫರ್ಟ್ ಹೆಚ್ಚಿಸಲು ಸಂದರ್ಭಕ್ಕೆ ಅನುಗುಣವಾಗಿ ಮಡ್, ಸ್ಯಾಂಡ್ ಮತ್ತು ಸ್ನೋ ಮೋಡ್ ವಿಧಾನಗಳನ್ನು ಬಳಸಿಕೊಳ್ಳಬಹುದು.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಜೊತೆಗೆ ಹೊಸ ಕಾರಿನ ಮೂಲಕ ಹ್ಯುಂಡೈ ಕಂಪನಿಯು ಸ್ಟೀರಿಂಗ್ ವ್ಹೀಲ್‌ನಲ್ಲಿ ಉತ್ತಮ ಹಿಡಿತ ನೀಡಿದ್ದು, ಹ್ಯುಂಡೈ ಇತರೆ ಕಾರು ಮಾದರಿಗಳಿಗೆ ಹೋಲಿಕೆ ಮಾಡಿದರೆ ಅಲ್ಕಾಜರ್ ಕಾರಿನ ಸ್ಪೀರಿಂಗ್ ವ್ಹೀಲ್ ಉತ್ತಮ ಹಿಡಿತದೊಂದಿಗೆ ವೇಗದ ಚಾಲನೆಯಲ್ಲೂ ಕಾರನ್ನು ಉತ್ತಮವಾಗಿ ನಿರ್ವಹಿಸಬಹುದು ಎನ್ನುವುದನ್ನು ಖಾತ್ರಿಪಡಿಸುತ್ತದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಇನ್ನು ಎಆರ್‌ಎಐ ಪ್ರಮಾಣೀಕರಿಸಿದಂತೆ ಹೊಸ ಕಾರಿನ ಪೆಟ್ರೋಲ್ ಮಾದರಿಯ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 14.5 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 14 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ 1.5 ಲೀಟರ್ ಡೀಸೆಲ್ ಮಾದರಿಯ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 18.5 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 18 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಸುರಕ್ಷಾ ಫೀಚರ್ಸ್‌ಗಳು

ಅಲ್ಕಾಜರ್ ಕಾರಿನಲ್ಲಿ ಹ್ಯುಂಡೈ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಿದ್ದು, ಹೈ ಎಂಡ್ ಮಾದರಿಯಲ್ಲಿ ಹೆಚ್ಚಿನ ಮಟ್ಟದ ಫೀಚರ್ಸ್‌ಗಳಿವೆ. ಹೊಸ ಫೀಚರ್ಸ್‌ಗಳು ಸೆಗ್ಮೆಂಟ್ ಫಸ್ಟ್ ಸೌಲಭ್ಯಗಳಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಖಾತ್ರಿ ಪಡಿಸುತ್ತದೆ.

* ಬ್ಲೈಂಡ್ ವ್ಯೂ ಮಾನಿಟರ್

* ಟ್ರಾಕ್ಷನ್ ಕಂಟ್ರೋಲ್ ಮೋಡ್(ಸ್ನೋ, ಸ್ಯಾಂಡ್ ಮತ್ತು ಮಡ್)

* ಎಬಿಎಸ್ ಜೊತೆ ಇಬಿಡಿ

* ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್

* ಹಿಲ್ ಅಸಿಸ್ಟ್ ಕಂಟ್ರೋಲ್

* ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

* ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ

* ಆಟೋ ಹೆಡ್‌ಲ್ಯಾಂಪ್

* 360 ಡಿಗ್ರಿ ಕ್ಯಾಮೆರಾ

*6 ಏರ್‌ಬ್ಯಾಗ್‌ಗಳು

* ಅಡಾಪ್ಟಿವ್ ಗೈಡ್‌ಲೆನ್ಸ್ ಹೊಂದಿರುವ ರಿಯರ್ ಪಾರ್ಕಿಂಗ್ ಕ್ಯಾಮೆರಾ

* ಕ್ರೂಸ್ ಕಂಟ್ರೋಲ್ ಮತ್ತು ಆಲ್ ವೀಲ್ಹ್ ಡಿಸ್ಕ್ ಬ್ರೇಕ್

* ವಾಯ್ಸ್ ಅಸಿಸ್ಟ್ ಹೊಂದಿರುವ ಪನೊರಮಿಕ್ ಸನ್‌ರೂಫ್

* ಸ್ಮಾರ್ಟ್ ಕೀ ಹೊಂದಿರುವ ರಿಮೋಟ್ ಎಂಜಿನ್ ಸ್ಟಾರ್ಟ್

* ಫಾಲೋ ಮಿ ಹೆಡ್‌ಲ್ಯಾಂಪ್

* ಪ್ಯಾಡಲ್ ಶಿಫ್ಟರ್ * ಪ್ಯಾಡಲ್ ಲ್ಯಾಂಪ್ಸ್

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ವೆರಿಯೆಂಟ್ ಮತ್ತು ಬೆಲೆ

ಅಲ್ಕಾಜರ್ ಕಾರು ಪ್ಲ್ಯಾಟಿನಂ, ಪ್ರೆಸ್ಟೀಜ್, ಸಿಗ್ನೆಚೆರ್, ಪ್ಲ್ಯಾಟಿನಂ ಆಪ್ಷನ್, ಪ್ರೆಸ್ಟೀಜ್ ಆಪ್ಷನ್ ಮತ್ತು ಸಿಗ್ನೆಚೆರ್ ಆಪ್ಷನ್ ಎನ್ನುವ ಆರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಟೈಗಾ ಬ್ರೌನ್, ಸ್ಟೇರಿ ನೈಟ್, ಪೊಲಾರ್ ವೈಟ್ ಮತ್ತು ಪ್ಯಾಂಥಮ್ ಬ್ಲ್ಯಾಕ್ ಬಣ್ಣ ಸೇರಿ ಎರಡು ಡ್ಯುಯಲ್ ಟೋನ್ ಮಾದರಿಗಳು ಖರೀದಿಗೆ ಲಭ್ಯವಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.30 ಲಕ್ಷದಿಂದ ಟಾಪ್ ಎಂಡ್ ಮಾದರಿಯ ರೂ. 19.99 ಲಕ್ಷ ಬೆಲೆ ಹೊಂದಿದ್ದು, ಪ್ರತಿಸ್ಪರ್ಧಿ ಮಾದರಿಗಳೊಂದಿಗೆ ಉತ್ತಮ ಬೆಲೆ ಪೈಪೋಟಿ ನೀಡಲಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ವಾರಂಟಿ

ಹೊಸ ಕಾರು ಖರೀದಿಯ ಮೇಲೆ ಗ್ರಾಹಕರಿಗೆ 3 ವರ್ಷ ಅಥವಾ ನಿಗದಿತ ಅವಧಿಯಲ್ಲಿ ಅನ್ ಲಿಮಿಟೆಡ್ ಕಿ.ಮೀ ವಾರಂಟಿ ಪಡೆದುಕೊಳ್ಳಬಹುದು. ಹಾಗೆಯೇ ಹೆಚ್ಚುವರಿ ಮೊತ್ತಗಳೊಂದಿಗೆ 5 ವರ್ಷ ಅಥವಾ 1.40 ಲಕ್ಷ ಕಿ.ಮೀ ವಾರಂಟಿ ಪಡೆದುಕೊಳ್ಳಬಹುದಾಗಿದ್ದು, ಸ್ಟ್ಯಾಂಡರ್ಡ್ ಆಗಿ ರೋಡ್ ಸೈಡ್ ಅಸಿಸ್ಟ್ ಸೌಲಭ್ಯವು ಇದರಲ್ಲಿ ಸೇರ್ಪೆಡೆಯಾಗಿರುತ್ತದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಪ್ರತಿಸ್ಪರ್ಧಿಗಳಿಂತ ಅಲ್ಕಾಜರ್ ಹೇಗೆ ವಿಭಿನ್ನ?

6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಅಲ್ಕಾಜರ್ ಎಸ್‌ಯುವಿ ಮಾದರಿಯು ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಎಂಪಿವಿ ಮಾದರಿಗಳಿಗೂ ಪೈಪೋಟಿ ನೀಡುವ ತವಕದಲ್ಲಿದೆ.

Specifications Hyundai Alcazar Tata Safari MG Hector Plus
Engine 2.0-litre Petrol / 1.5-litre Turbo-Diesel 2.0-litre Turbo-Diese 1.5-litre Turbo-Petrol / 1.5-litre Turbo-Petrol Hybrid / 2.0-litre Turbo-Diesel
Power 157bhp / 113.4bhp 167.6bhp 141bhp / 141bhp / 167.6bhp
Torque 191Nm / 250Nm 350Nm 250Nm / 250Nm / 350Nm
Transmission 6-Speed Manual / 6-Speed Automatic 6-Speed Manual / 6-Speed Automatic 6-Speed Manual / DCT / CVT
Starting Price Rs 16.30 lakh (ex-showroom) Rs 14.99 lakh (ex-showroom) Rs 13.62 lakh (ex-showroom)
ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಅಲ್ಕಾಜರ್ ಕುರಿತು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಅಲ್ಕಾಜರ್ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಿಗೆ ಮಾತ್ರವಲ್ಲ ಎಂಪಿವಿ ಕಾರಿಗಳೂ ಪೈಪೋಟಿ ನೀಡುವ ವೈಶಿಷ್ಟ್ಯತೆಗಳನ್ನು ಹೊಂದಿದೆ. ಆದರೆ ಹೊಸ ಕಾರಿನ ಆರಂಭಿಕ ಮಾದರಿಯ ಬೆಲೆಯು ಪ್ರತಿಸ್ಪರ್ಧಿ ಕಾರು ಮಾದರಿಗಳ ಆರಂಭಿಕ ಬೆಲೆಗಿಂತಲೂ ರೂ. 1 ಲಕ್ಷದಿಂದ ರೂ. 2.50 ಲಕ್ಷದಷ್ಟು ಬೆಲೆ ಹೆಚ್ಚಳವಿದ್ದು, ಬೆಲೆ ಹೆಚ್ಚಳವಾದರೂ ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಿರುವ ಕಾರಿನ ಬೆಲೆ ಹೆಚ್ಚಿಸಿದೆ.

ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟ ಹ್ಯುಂಡೈ ಅಲ್ಕಾಜರ್ ವಿಶೇಷತೆ ಏನು?

ಆರಂಭಿಕ ಮಾದರಿಗಳ ಬೆಲೆ ಹೆಚ್ಚಳವಾಗಿದೆ ಎನ್ನಿಸುವುದು ಬಿಟ್ಟರೆ ಹ್ಯುಂಡೈ ಅಲ್ಕಾಜರ್ ಕಾರಿನ ಆರಂಭಿಕ ಮಾದರಿಗಳು ಪ್ರತಿಸ್ಪರ್ಧಿಗಳ ಮಧ್ಯಮ ಕ್ರಮಾಂಕಗಳಿಗೆ ಸರಿಸಮನಾದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಎಸ್‌ಯುವಿ ಸೆಗ್ಮೆಂಟ್ ಮಾರಾಟದಲ್ಲಿ ಅಲ್ಕಾಜರ್ ಕಾರು ಹೊಸ ಸಂಚಲನ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Hyundai Alcazar First Drive Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X