ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಟರ್ಬೋ

ಹ್ಯುಂಡೈ ಐ 10 ಕಾರನ್ನು ಹ್ಯುಂಡೈ ಸ್ಯಾಂಟ್ರೋ ಕಾರಿನ ಉತ್ತರಾಧಿಕಾರಿಯಾಗಿ 2007ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರು ಸಹ ಸ್ಯಾಂಟ್ರೋ ಕಾರಿನ ರೀತಿಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆಯಿತು.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

2015ರಲ್ಲಿ ಹ್ಯುಂಡೈ ಕಂಪನಿಯು ಸ್ಯಾಂಟ್ರೊ ಕಾರನ್ನು ಸ್ಥಗಿತಗೊಳಿಸಿದ ನಂತರ ಈ ಪೋರ್ಟ್ ಫೋಲಿಯೋದಲ್ಲಿ ಐ 10 ಕಾರು ಮಾತ್ರ ಉಳಿದಿತ್ತು. ಐ 10 ಕಾರನ್ನು ಹಲವಾರು ಬಾರಿ ಅಪ್ ಡೇಟ್ ಮಾಡಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎರಡನೇ ತಲೆಮಾರಿನ ಐ 10 ಕಾರು ಸಹ ಅದ್ಭುತವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಹ್ಯುಂಡೈ ಕಂಪನಿಯು ಈ ವರ್ಷದ ಆರಂಭದಲ್ಲಿ 1-ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಗ್ರ್ಯಾಂಡ್ ಐ 10 ನಿಯೋಸ್ ಟರ್ಬೊ ಕಾರನ್ನು ಬಿಡುಗಡೆಗೊಳಿಸಿತ್ತು. ಇತ್ತೀಚಿಗೆ ಹೊಸ ಗ್ರ್ಯಾಂಡ್ ಐ 10 ಟರ್ಬೊ ಪೆಟ್ರೋಲ್ ಕಾರನ್ನು ಫಸ್ಟ್ ಡ್ರೈವ್ ಮಾಡಲಾಯಿತು. ಇದರ ಅನುಭವವನ್ನು ಈ ವೀಡಿಯೊದಲ್ಲಿ ನೋಡೋಣ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ವಿನ್ಯಾಸ ಹಾಗೂ ಶೈಲಿ

ಮೊದಲ ನೋಟದಲ್ಲಿಯೇ ಡ್ಯುಯಲ್-ಟೋನ್ ರೆಡ್, ಬ್ಲ್ಯಾಕ್ ಬಣ್ಣವನ್ನು ಹೊಂದಿರುವ ಗ್ರ್ಯಾಂಡ್ ಐ 10 ಟರ್ಬೊ ನಮ್ಮನ್ನು ಬೆರಗುಗೊಳಿಸುತ್ತದೆ. ಈ ಕಾರಿನ ಮುಂಭಾಗದಲ್ಲಿ ಕಪ್ಪು ಬಣ್ಣದ ಗ್ರಿಲ್, ಎಡಗಡೆಯ ಕಾರ್ನರ್ ನಲ್ಲಿ ಟರ್ಬೊ ಬ್ಯಾಡ್ಜ್ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಗ್ರಿಲ್ ನ ಎರಡೂ ಬದಿಗಳಲ್ಲಿ ಬ್ರೈಟ್ ಆಗಿರುವ ಏಳು-ಎಲ್ಇಡಿ ಲೈಟ್ ಗಳಿವೆ. ಹೆಡ್ಲೈಟ್ ನಲ್ಲಿ ಹೈ ಬೀಮ್ ಹಾಗೂ ಲೋ ಬೀಮ್ ಗಾಗಿ ಪ್ರೊಜೆಕ್ಟರ್ ಸೆಟಪ್ ನೀಡಲಾಗಿದೆ. ಫಾಗ್ ಲ್ಯಾಂಪ್ ಗಳು ಸಹ ಪ್ರೊಜೆಕ್ಟರ್ ಗಳಾಗಿವೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಕಾರಿನ ಮುಂಭಾಗದ ಹೆಡ್‌ಲೈಟ್ ಒಳಗೆ, ಫಾಗ್ ಲ್ಯಾಂಪ್ ಗಳ ಸುತ್ತಲೂ ಕಡಿಮೆ ಪ್ರಮಾಣದ ಕ್ರೋಮ್‌ ಬಳಸಲಾಗಿದೆ. ಕಾರಿನ ಸ್ಪೋರ್ಟಿ ಲುಕ್ ಅನ್ನು ಉಳಿಸಿಕೊಳ್ಳಲು ಕಡಿಮೆ ಪ್ರಮಾಣದಲ್ಲಿ ಕ್ರೋಮ್ ಅನ್ನು ಬಳಸಲಾಗಿದೆ. ಹುಡ್ ಲೈನ್ ಹಾಗೂ ಕ್ರೀಸ್‌ಗಳು ಕಾರನ್ನು ಸ್ವಲ್ಪ ಪ್ರಮಾಣದಲ್ಲಿ ಮಸ್ಕ್ಯುಲರ್ ಆಗಿ ಕಾಣುವಂತೆ ಮಾಡುತ್ತವೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಗ್ರ್ಯಾಂಡ್ ಐ 10 ನಿಯೋಸ್ ಟರ್ಬೊ ಡ್ಯುಯಲ್-ಟೋನ್ ನ ನಾಲ್ಕು-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದರೆ, ಕಾರಿನ ಅರ್ಧ ಮೇಲ್ಭಾಗವು ಕಪ್ಪು ಬಣ್ಣವನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಪಿಲ್ಲರ್, ರೂಫ್ ಹಾಗೂ ಒಆರ್‌ವಿಎಂಗಳು ಕಪ್ಪು ಬಣ್ಣದಲ್ಲಿವೆ. ಕ್ವಾರ್ಟರ್ ಗ್ಲಾಸ್ ಪಕ್ಕದಲ್ಲಿರುವ ಸಿ-ಪಿಲ್ಲರ್‌ನಲ್ಲಿ ಜಿ-ಐ 10 ಬ್ಯಾಡ್ಜ್ ಅಳವಡಿಸಲಾಗಿದೆ. ಶಾರ್ಕ್ ಫಿನ್ ಆಂಟೆನಾ ಹಾಗೂ ವ್ಹೀಲ್ ಗಳು ಈ ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಕಾರಿನ ಲೋಗೊ ಹಾಗೂ ಬ್ಯಾಡ್ಜ್‌ಗಳು ಎಲ್ಲಿಯೂ ಕ್ರೋಮ್‌ಗಳನ್ನು ಹೊಂದಿಲ್ಲ. ಕಾರಿನ ಎಡಭಾಗದಲ್ಲಿ ದೊಡ್ಡ ಅಕ್ಷರದ ಗ್ರ್ಯಾಂಡ್ ಐ 10 ಬ್ಯಾಡ್ಜ್, ಬಲಭಾಗದಲ್ಲಿ ಸ್ಪೋರ್ಟ್ಸ್ ಎಂದು ಹಾಗೂ ಮಧ್ಯದಲ್ಲಿ ನಿಯೋಸ್ ಎಂದು ಬರೆಯಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಇಂಟಿರಿಯರ್ ಹಾಗೂ ಫೀಚರ್ ಗಳು

ಕಾರಿನ ಇಂಟಿರಿಯರ್ ಸ್ಪೋರ್ಟಿ ಕ್ಯಾಬಿನ್ ಅನ್ನು ಹೊಂದಿದೆ. ಇವುಗಳು ಸಹ ಕಪ್ಪು ಬಣ್ಣದಲ್ಲಿವೆ. ರೆಗ್ಯುಲರ್ ಗ್ರ್ಯಾಂಡ್ ಐ 10 ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಹೊಂದಿದ್ದರೆ, ಟರ್ಬೊ ಮಾದರಿಯು ಕಪ್ಪು ಬಣ್ಣವನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಈ ಕಾರು ಕಪ್ಪು ಬಣ್ಣದ ಜೊತೆಗೆ ರೆಡ್ ಅಸೆಂಟ್ ಗಳನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್, ಎಸಿ ವೆಂಟ್ ಹಾಗೂ ಸೀಟುಗಳು ಕೆಂಪು ಸ್ಟಿಚಿಂಗ್ ಗಳನ್ನು ಹೊಂದಿವೆ. ಮುಂಭಾಗದ ಎರಡು ಸೀಟುಗಳು ಬಕೆಟ್ ಸೀಟುಗಳ ಶೇಪ್ ನಲ್ಲಿದ್ದು, ಸ್ಥಿರವಾದ ಹೆಡ್‌ರೆಸ್ಟ್ ಗಳನ್ನು ಹೊಂದಿವೆ. ಎರಡನೇ ಸಾಲಿನಲ್ಲಿ ಮೂರು ಜನರು ಆರಾಮವಾಗಿ ಕುಳಿತುಕೊಳ್ಳಬಹುದು.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಕಾರಿನ ಎಸಿ ಅತ್ಯುತ್ತಮವಾಗಿದ್ದು, ಹಿಂಭಾಗದಲ್ಲಿ ಎಸಿ ವೆಂಟ್ ಗಳಿರುವುದರಿಂದ ಕ್ಯಾಬಿನ್ ಬೇಗ ತಣ್ಣಗಾಗುತ್ತದೆ. ಎಸಿ ವೆಂಟ್ ಗಳ ಕೆಳಗೆ ಚಾರ್ಜಿಂಗ್ ಸಾಕೆಟ್ ಅನ್ನು ನೀಡಲಾಗಿದೆ. ಈ ಕಾರಿನಲ್ಲಿ ಸೆಂಟರ್ ಆರ್ಮ್ ರೆಸ್ಟ್ ನೀಡಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಐ 10 ನಿಯೋಸ್ ಟರ್ಬೊದಲ್ಲಿನ 260 ಲೀಟರಿನ ಬೂಟ್ ಸ್ಪೇಸ್ ಹೊಂದಿದೆ. ಈ ಕಾರು ಸ್ಪ್ಲಿಟ್ ರೇರ್ ಸೀಟ್ ಹೊಂದಿಲ್ಲದ ಕಾರಣ ಲಗೇಜ್ಗಾಗಿ ಹೆಚ್ಚು ಸ್ಥಳಾವಕಾಶ ಬೇಕಾದರೆ, ಇಡೀ ಸಾಲನ್ನು ಫೋಲ್ಡ್ ಮಾಡಬೇಕಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಡ್ಯಾಶ್‌ಬೋರ್ಡ್‌ನ ಸೆಂಟರ್ ನಲ್ಲಿ ಏಳು ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ. ಇದರಲ್ಲಿ ಆಂಡ್ರಾಯ್ಡ್ಆಟೋ, ಆಪಲ್ ಕಾರ್ ಪ್ಲೇ, ನಾಲ್ಕು ಸ್ಪೀಕರ್ ಗಳ ಮ್ಯೂಸಿಕ್ ಸಿಸ್ಟಂ ನೀಡಲಾಗಿದೆ. ಎಸಿ ಸಿಸ್ಟಂ ಅನ್ನು ಇನ್ಫೋಟೇನ್‌ಮೆಂಟ್ ಸಿಸ್ಟಂನಡಿಯಲ್ಲಿ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಟೆಂಪರೇಚರ್ ಸೆಟ್ಟಿಂಗ್‌ಗಳಿಗಾಗಿ ಎಲ್ ಸಿಡಿ ಸ್ಕ್ರೀನ್ ನೀಡಲಾಗಿದೆ. ಐ 10 ರ ಟರ್ಬೊ ಸಾಫ್ಟ್-ಟಚ್ ವಸ್ತುಗಳನ್ನು ಹೊಂದಿರುವ ರೆಡ್ ಸ್ಟಿಚಿಂಗ್ ಹೊಂದಿರುವ ಮೂರು-ಸ್ಪೋಕ್ ನ ಸ್ಟೀಯರಿಂಗ್ ವ್ಹೀಲ್ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಎಂಜಿನ್ ಹಾಗೂ ನಿರ್ವಹಣೆ

ಈ ಕಾರಿನಲ್ಲಿ 1-ಲೀಟರಿನ ಮೂರು-ಸಿಲಿಂಡರ್, ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಹ್ಯುಂಡೈ ಒರಾ ಹಾಗೂ ವೆನ್ಯೂ ಕಾರುಗಳಲ್ಲಿಯೂ ಸಹ ಅಳವಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಈ ಎಂಜಿನ್ 98 ಬಿಹೆಚ್‌ಪಿ ಪವರ್ ಹಾಗೂ 172 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 983 ಕೆ.ಜಿ ತೂಕವನ್ನು ಹೊಂದಿದೆ. ಐದು-ಸ್ಪೀಡ್ ಗೇರ್‌ಬಾಕ್ಸ್ ತೀಕ್ಷ್ಣವಾಗಿದ್ದು, ಶಿಫ್ಟ್‌ಗಳ ನಡುವಿನ ಅಂತರವು ಚಿಕ್ಕದಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

1500 ರಿಂದ 1700 ಆರ್ ಪಿಎಂಗಳ ವರೆಗೆ ಬರುವವರೆಗೂ ಪವರ್ ಉತ್ಪಾದನೆ ಸ್ವಲ್ಪ ಕಡಿಮೆ ಇರುತ್ತದೆ. ಮಿಡ್ ರೆಂಜ್ ಹಾಗೂ ಟಾಪ್-ಎಂಡ್ ಗಳು ಅದ್ಭುತವಾಗಿವೆ. ಅದರಲ್ಲೂ ಟಾಪ್ ಎಂಡ್ ಅತ್ಯದ್ಭುತವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಈ ಕಾರಿನಲ್ಲಿ ಮೂರು-ಅಂಕಿಯ ವೇಗವನ್ನು ಸುಲಭವಾಗಿ ತಲುಪಬಹುದು. ಟ್ರಾಕ್ಷನ್ ಕಂಟ್ರೋಲ್ ಇಲ್ಲದ ಕಾರಣ ಕ್ಲಚ್ ಅನ್ನು ಗಟ್ಟಿಯಾಗಿ ಡಂಪ್ ಮಾಡಿದರೆ ಸಾಕಷ್ಟು ಪ್ರಮಾಣದಲ್ಲಿ ವ್ಹೀಲ್ ಸ್ಪಿನ್ ಸಿಗುತ್ತದೆ. ಈ ಕಾರಿನಲ್ಲಿ ಬ್ರೇಕಿಂಗ್ ಗಾಗಿ ಎಬಿಎಸ್ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಯಾರನ್ನಾದರೂ ಓವರ್ ಟೇಕ್ ಮಾಡ ಬೇಕಾದರೆ ಗೇರ್ ಅನ್ನು ಕೆಳಕ್ಕೆ ಬದಲಿಸುವ ಅಗತ್ಯವಿಲ್ಲ. ಈ ಕಾರು 7000 ಆರ್ ಪಿಎಂನಲ್ಲಿ ಸಾಗಬಲ್ಲದು. ಸ್ಟೀಯರಿಂಗ್ ವ್ಹೀಲ್ ಬೇರೆ ಹ್ಯುಂಡೈ ಕಾರುಗಳಿಗಿಂತ ಸ್ವಲ್ಪ ಗಟ್ಟಿಯಾಗಿದ್ದು, ಒಂದು ಬೆರಳಿನಿಂದ ವ್ಹೀಲ್ ಅನ್ನು ತಿರುಗಿಸಬಹುದು.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಸ್ಟೀಯರಿಂಗ್ ವ್ಹೀಲ್ ರೆಸ್ಪಾನ್ಸ್ ಅದ್ಭುತವಾಗಿದ್ದು, ಸಮಸ್ಯೆಯಲ್ಲದಿದ್ದರೆ ಹೆಚ್ಚಿನ ವೇಗದಲ್ಲಿ ಒಂದು ಲೇನ್‌ನಿಂದ ಮತ್ತೊಂದು ಲೇನ್‌ಗೆ ಸ್ಥಳಾಂತರಗೊಳ್ಳುತ್ತದೆ.ಗ್ರ್ಯಾಂಡ್ ಐ 10 ನಿಯೋಸ್ ಟರ್ಬೊನಲ್ಲಿರುವ ಸಸ್ಪೆಂಷನ್ ಗಳು ಗಟ್ಟಿಯಾಗಿರುವಂತೆ ಹಾಗೂ ಮೃದುವಾಗಿರುವಂತೆ ಭಾಸವಾಗುತ್ತವೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಇವುಗಳು ನಗರದ ರಸ್ತೆಗಳಲ್ಲಿರುವ ಹಂಪ್ ಗಳಲ್ಲಿ ಹಾಗೂ ಗುಂಡಿಗಳಲ್ಲಿ ನೆರವಾಗುತ್ತವೆ. ಹೆಚ್ಚಿನ ವೇಗದಲ್ಲಿ ಎಲ್ಲಾ ಬಾಡಿ ರೋಲ್ ಗಳು ಕಣ್ಮರೆಯಾಗುವ ಕಾರಣ ಮೆಂಟೆನೆನ್ಸ್ ಹೆಚ್ಚುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಇನ್ಸುಲೇಷನ್ ಹಾಗೂ ಎನ್ ವಿಹೆಚ್ ಲೆವೆಲ್ ಗಳು ಸಹ ಉತ್ತಮವಾಗಿವೆ. ಹೊರಗಿನ ಶಬ್ದವು ಕ್ಯಾಬಿನ್‌ನೊಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಿಸುವುದಿಲ್ಲ. ಎಂಜಿನ್ ಶಬ್ದದ ಬಗ್ಗೆ ಹೇಳುವುದಾದರೆ ಕಾರು 3000 ಆರ್‌ಪಿಎಂ ತಲುಪುವವರೆಗೂ ನಿಶಬ್ದವಾಗಿರುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಅದಾದ ನಂತರ ಸ್ವಲ್ಪ ಪ್ರಮಾಣದಲ್ಲಿ ಎಂಜಿನ್ ಶಬ್ದವು ಕ್ಯಾಬಿನ್‌ ಪ್ರವೇಶಿಸುತ್ತದೆ. ಕ್ಯಾಬಿನ್ ಶಬ್ದಕ್ಕೆ ಸಂಬಂಧಿಸಿದಂತೆ ಕಂಪನಿಯು ಅತ್ಯುತ್ತಮ ಕೆಲಸವನ್ನು ಮಾಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಕಂಪನಿಯು ಈ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 20 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ. ಆದರೆ ನಾವು ನಗರದಲ್ಲಿ ಕಾರನ್ನು ಡ್ರೈವ್ ಮಾಡಿದಾಗ ಈ ಕಾರು 9ರಿಂದ 12 ಕಿ.ಮೀಗಳ ಮೈಲೇಜ್ ನೀಡಿತು.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಆದರೆ ಕಾರನ್ನು ನಿಧಾನವಾಗಿ ಚಾಲನೆ ಮಾಡಿದರೆ, ನಗರದಲ್ಲಿ 13ರಿಂದ 14 ಕಿ.ಮೀ ಮೈಲೇಜ್ ಪಡೆಯಬಹುದು. ಹೈವೇಗಳಲ್ಲಿ ಇದಕ್ಕಿಂತ ಹೆಚ್ಚಿನ ಮೈಲೇಜ್ ಪಡೆಯಬಹುದು. ಕಡಿಮೆ ತೂಕವನ್ನು ಹೊಂದಿರುವ ಕಾರಣಕ್ಕೆ ಗ್ರಾಂಡ್ ಐ 10 ನಿಯೋಸ್ ಟರ್ಬೋ ಸ್ಪೋರ್ಟ್ಸ್ ಹೆಚ್ಚಿನ ಪ್ರಮಾಣದ ಪವರ್ ಅನ್ನು ಉತ್ಪಾದಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಡಿಮೆ ತೂಕ ಹೊಂದಿದ್ದರೂ ಮೋಡಿ ಮಾಡುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಗ್ರ್ಯಾಂಡ್ ಐ 10 ನಿಯೋಸ್‌ನಲ್ಲಿ ಟರ್ಬೊ ಪೆಟ್ರೋಲ್ ಎಂಜಿನ್ ಕಾರಿನ ನಿರ್ವಹಣೆ ಆಶ್ಚರ್ಯವನ್ನುಂಟು ಮಾಡುತ್ತದೆ. ಈ ಕಾರಿನಲ್ಲಿರುವ ಪವರ್ ಉತ್ಪಾದನೆಯು ಸಹ ಅದ್ಭುತವಾಗಿದೆ. ಹಗುರ ತೂಕದ ಗ್ರ್ಯಾಂಡ್ ಐ 10 ನಿಯೋಸ್ ಟರ್ಬೋ ಸ್ಪೋರ್ಟ್ಜ್ ಕಾರು ನಮ್ಮನ್ನು ಮೋಡಿ ಮಾಡುತ್ತದೆ.

Most Read Articles

Kannada
English summary
Hyundai Grand i10 Nios Turbo First Drive review absolute hoot to drive around. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X