ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹ್ಯುಂಡೈ ಕಂಪನಿಯು ಬಜೆಟ್ ಕಾರುಗಳಿಂದ ಹಿಡಿದು ಹಲವಾರು ಪ್ರೀಮಿಯಂ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ವಿಯಾದ ಮುಂಚೂಣಿ ಕಾರು ಉತ್ಪಾದನಾ ಕಂಪನಿಯಾಗಿದೆ. ಇದು ವಿಶ್ವಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ ಹಲಾವರು ಕಾರು ಆವೃತ್ತಿಗಳೊಂದಿಗೆ ಉತ್ತಮ ಗ್ರಾಹಕರ ಬೇಡಿಕೆ ಹೊಂದಿದ್ದು, ಕಂಪನಿಯು ಇದೀಗ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಯಶಸ್ವಿ ಜಾಗತಿಕ ಕಾರು ಆವೃತ್ತಿಗಳನ್ನು ಭಾರತದಲ್ಲೂ ಪರಿಚಯಿಸುತ್ತಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಎನ್ ಲೈನ್ ಆವೃತ್ತಿಗಳ ಮೂಲಕ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುತ್ತಿರುವ ಹ್ಯುಂಡೈ ಇಂಡಿಯಾ ಕಂಪನಿಯು ಭಾರತದಲ್ಲಿ ಹೊಸದಾಗಿ ವೆನ್ಯೂ ಎನ್ ಲೈನ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಕುರಿತಾಗಿ ಕಂಪನಿಯು ಇತ್ತೀಚೆಗೆ ಫಸ್ಟ್ ಡ್ರೈವ್ ಆಯೋಜಿಸಿತ್ತು. ಹೊಸ ಎನ್ ಲೈನ್ ಆವೃತ್ತಿಯು ಪರ್ಫಾಮೆನ್ಸ್ ಪ್ರಿಯರ ಬೇಡಿಕೆ ಹಲವಾರು ಹೊಸ ಫೀಚರ್ಸ್ ಹೊತ್ತು ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರಿನ ಕುರಿತಾಗಿ ಈ ವಿಮರ್ಶೆ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹ್ಯುಂಡೈ ಕಂಪನಿಯು ಐ20 ನಂತರ ಇದೀಗ ವೆನ್ಯೂ ಮಾದರಿಯಲ್ಲೂ ಹೊಸ ಆವೃತ್ತಿಯನ್ನು ಪರಿಚಯಿಸಿದ್ದು, ಹೊಸ ವೆನ್ಯೂ ಎನ್ ಲೈನ್ ಆವೃತ್ತಿಯು ವಿವಿಧ ತಾಂತ್ರಿಕ ಅಂಶಗಳನ್ನು ಆಧರಿಸಿ ಎನ್6 ಮತ್ತು ಎನ್8 ಎನ್ನುವ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹೊಸ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.16 ಲಕ್ಷ ಬೆಲೆ ಹೊಂದಿದ್ದರೆ ಎನ್8 ರೂಪಾಂತರವು ರೂ. 13.15 ಲಕ್ಷ ಬೆಲೆ ಹೊಂದಿದೆ. ಹೊಸ ರೂಪಾಂತರಗಳು ಸ್ಟ್ಯಾಂಡರ್ಡ್ ರೂಪಾಂತರಗಳಿಂತ ಬೆಲೆಯಲ್ಲಿ ರೂ. 58 ಸಾವಿರದಿಂದ ರೂ. 1.19 ಲಕ್ಷ ಹೆಚ್ಚುವರಿ ಬೆಲೆ ಹೊಂದಿದ್ದು, ಬೆಲೆ ಹೆಚ್ಚಳಕ್ಕೆ ತಕ್ಕಂತೆ ಹೊಸ ಆವೃತ್ತಿಯಲ್ಲಿ ಹಲವಾರು ಹೊಸ ಫೀಚರ್ಸ್ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ವೆನ್ಯೂ ಎನ್ ಲೈನ್ ವಿನ್ಯಾಸಗಳು

ಹ್ಯುಂಡೈ ಕಂಪನಿಯು ವೆನ್ಯೂ ಎನ್ ಲೈನ್ ಮಾದರಿಯಾಗಿ ಸುಧಾರಿತ ವಿನ್ಯಾಸ ಸೌಲಭ್ಯವನ್ನು ನೀಡಿದ್ದು, ಪ್ಯಾರಾಮೆಟ್ರಿಕ್ ಜ್ಯುವೆಲ್ ಗ್ರಿಲ್, ಹೊಸ ಸ್ಪೋರ್ಟಿ ಬಂಪರ್‌ಗಳು ಮತ್ತು ಚಕ್ರಗಳು ಮತ್ತು ಸಂಪರ್ಕಿತ ಟೈಲ್‌ಲೈಟ್‌ಗಳನ್ನು ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹಾಗೆಯೇ ಹೊಸ ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ವ್ಹೀಲ್‌ಗಳು, ಸೈಡ್ ಸ್ಕರ್ಟ್‌ಗಳು ಮತ್ತು ರೂಫ್ ರೈಲ್‌ಗಳಲ್ಲಿ ಕೆಂಪು ಹೈಲೈಟ್‌ಗಳನ್ನು ನೀಡಲಾಗಿದ್ದು, ಫಕ್ಸ್ ಸ್ಕಿಡ್ ಪ್ಲೇಟ್‌ಗಳನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹಿಂಭಾಗದ ವಿನ್ಯಾಸದಲ್ಲಿ ಹೊಸ ಕಾರಿಗೆ ಸ್ಪೋರ್ಟಿ ಬಂಪರ್, ಎನ್ ಲೈನ್ ಬ್ಯಾಡ್ಜ್ ಮತ್ತು ಹೊಸ ಡ್ಯುಯಲ್ ಎಕ್ಸಾಸ್ಟ್ ಟಿಪ್ಸ್ ಅನ್ನು ಸಹ ಒಳಗೊಂಡಿದ್ದು, ಸ್ಪೋರ್ಟಿ ಲುಕ್ ಹೆಚ್ಚಿಸಲು 16-ಇಂಚಿನ ಮಿಶ್ರಲೋಹದ ಚಕ್ರಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಇಂಟೀರಿಯರ್ ಡಿಸೈನ್ ಮತ್ತು ವೈಶಿಷ್ಟ್ಯಗಳು

ವೆನ್ಯೂ ಎನ್ ಲೈನ್ ಎಸ್‌ಯುವಿಯ ಒಳಭಾಗದಲ್ಲೂ ಹ್ಯುಂಡೈ ಕಂಪನಿಯು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದ್ದು, ಕೆಲವು ತಾಂತ್ರಿಕ ಬದಲಾವಣೆಗಳು ಗ್ರಾಹಕರ ಗಮನಸೆಳೆಯುತ್ತವೆ. ಹೊಸ ಮಾದರಿಯಲ್ಲಿ ಕಂಪನಿಯು ಸಂಪೂರ್ಣವಾಗಿ ಕಪ್ಪು ಕ್ಯಾಬಿನ್ ನೀಡಿದ್ದು, ರೆಡ್ ಹೈಲೆಟ್ಸ್‌ಗಳು ಮುಂದುವರಿಯುತ್ತವೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹೊಸ ಕಾರಿನ ಸೀಟುಗಳು, ಸ್ಟೀರಿಂಗ್ ವ್ಹೀಲ್, ಗೇರ್ ಸ್ಟಿಕ್, ಹ್ವಾಕ್ ಕಂಟ್ರೋಲ್ ಡಯಲ್‌ಗಳು ಮತ್ತು ಏರ್ ವೆಂಟ್‌ಗಳ ಮೇಲೆ ರೆಡ್ ಹೈಲೈಟ್ಸ್ ನೀಡಲಾಗಿದ್ದು, ಎನ್ ಲೋಗೋದೊಂದಿಗೆ ಹೊಸದಾಗಿ ತ್ರಿ-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಸಹ ರೆಡ್ ಹೈಲೆಟ್ಸ್‌ನೊಂದಿಗೆ ಕಾಂಟ್ರಾಸ್ಟ್ ಸ್ಟಿಚಿಂಗ್ ರೂಪದಲ್ಲಿ ಬರುತ್ತವೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ವೆನ್ಯೂ ಎನ್-ಲೈನ್‌ನ ಒಳಭಾಗದಲ್ಲಿ ಡ್ರೈವಿಂಗ್ ಅನುಭವ ಹೆಚ್ಚಿಸಲು ಕಂಪನಿಯು ಸ್ಪೋರ್ಟಿ ಥೀಮ್‌ ಸೇರಿಸಿದ್ದು, ಇದಕ್ಕಾಗಿ ಅಲ್ಯೂಮಿನಿಯಂ ಪೆಡಲ್‌ಗಳು ಮತ್ತು ಕೆಂಪು ಆಂಬಿಯೆಂಟ್ ಲೈಟಿಂಗ್ ಸೌಲಭ್ಯಗಳನ್ನು ನೀಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹೊಸ ವೆನ್ಯೂ ಎನ್ ಲೈನ್ ಮಾದರಿಯಲ್ಲಿ 8-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಹ ಒಳಗೊಂಡಿದ್ದು, ಹೆಚ್ಚಿನ ಸುರಕ್ಷತೆಗಾಗಿ ಬ್ಲೂಲಿಂಕ್ ಸಂಪರ್ಕಿತ ಕಾರ್ ಸೂಟ್‌ಗೆ ಬೆಂಬಲವನ್ನು ಸಹ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಇದರಲ್ಲಿ ಇತರೆ ವೈಶಿಷ್ಟ್ಯತೆಗಳೆಂದರೆ ಡಿಜಿಟಲ್ ಡ್ರೈವರ್ಸ್, ಇನ್ಸ್ಟ್ರುಮೆಂಟ್ ಕ್ಲಸ್ಟರ್, ವರ್ಣರಂಜಿತವಾಗಿರುವ ಡ್ರೈವಿಂಗ್ ಮೋಡ್ ಥೀಮ್‌ಗಳು, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪ್ಯಾಡ್ ಮತ್ತು ವಿದ್ಯುತ್ ಚಾಲಿತ ಸನ್‌ರೂಫ್ ಅನ್ನು ಒಳಗೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಮತ್ತೊಂದು ವಿಶೇಷತೆಯೆಂದರೆ ಹೊಸ ಕಾರಿನಲ್ಲಿ ಪ್ರತಿ ಪ್ರಯಾಣವನ್ನು ರೆಕಾರ್ಡ್ ಮಾಡಲು ಬಯಸುವವರಿಗಾಗಿ ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್‌ಕ್ಯಾಮ್ ಸೌಲಭ್ಯವನ್ನು ನೀಡಿದ್ದು, ಗರಿಷ್ಠ ಸುರಕ್ಷತೆಗಾಗಿ ಗರಿಷ್ಠ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್‌ಗಳು, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಪಾಯಿಂಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸೇರಿದಂತೆ ಹಲವಾರು ಸುರಕ್ಷತಾ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ವೆನ್ಯೂ ಎನ್ ಲೈನ್ ಎಂಜಿನ್ ಮತ್ತು ಪರ್ಫಾಮೆನ್ಸ್

ಹ್ಯುಂಡೈ ಕಂಪನಿಯು ವೆನ್ಯೂ ಎನ್ ಲೈನ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಟರ್ಬೊ ಆವೃತ್ತಿಯ ಎಂಜಿನ್ ಆಯ್ಕೆಯನ್ನೇ ಇದರಲ್ಲೂ ಮುಂದುವರೆಸಿದ್ದು, ಆದರೆ ಹೊಸ ಕಾರನ್ನು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಮಾತ್ರ ನೀಡಲಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹೊಸ ಕಾರಿನಲ್ಲಿರುವ 998ಸಿಸಿ, 3-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಮಾದರಿಯು 6,000ಆರ್‌ಪಿಎಂನಲ್ಲಿ 118.3 ಬಿಎಚ್‌ಪಿ ಮತ್ತು 1,500ರಿಂದ 4,000 ಆರ್‌ಪಿಎಂ ನಡುವೆ 172 ಎನ್ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಹೊಸ ಆವೃತ್ತಿಯಲ್ಲಿ ಕಾರಿನ ಶಕ್ತಿಯನ್ನು ಮುಂಭಾಗದ ಚಕ್ರಗಳಿಗೆ ಕಳುಹಿಸಲಿದ್ದು, ಕಾರಿನ ಆಯಾಮಗಳು ಸಾಮಾನ್ಯ ಮಾದರಿಯಲ್ಲಿರುವಂತೆಯೇ ಮುಂದುವರೆಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹುಂಡೈ ವೆನ್ಯೂ ಎನ್ ಲೈನ್ ಮಾದರಿಯು 3,995 ಎಂಎಂ ಉದ್ದ, 1,770 ಎಂಎಂ ಅಗಲ ಮತ್ತು 1,617 ಎಂಎಂ ಎತ್ತರವಿದ್ದು, ವೆನ್ಯೂ N ಲೈನ್‌ನ ವ್ಹೀಲ್‌ಬೇಸ್ 2,500 ಎಂಎಂ ಉದ್ದವಾಗಿದೆ ಮತ್ತು 45-ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹೊಸ ಕಾರಿನ ಚಾಲನಾ ಅನುಭವ

ವೆನ್ಯೂ ಎನ್ ಲೈನ್ ಸಾಮಾನ್ಯ ಎಸ್‌ಯುವಿಗಿಂತ ಉನ್ನತ ಶ್ರೇಣಿಯಲ್ಲಿದ್ದು, ಇದು ತನ್ನ ವಿಭಾಗದಲ್ಲಿಯೇ ಇತರೆ ಮಾದರಿಗಿಂತಲೂ ಉತ್ತಮ ಚಾಲನಾ ಅನುಭವವನ್ನು ಖಾತ್ರಿಪಡಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಮೂರು-ಪಾಟ್ ತಾಂತ್ರಿಕ ವೈಶಿಷ್ಟ್ಯತೆ ಪೆಟ್ರೋಲ್ ಎಂಜಿನ್‌ ಹೆಚ್ಚು ಉತ್ಸಾಹಭರಿತವಾಗಿದ್ದು, ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಎಂದಿನಂತೆ ನುಣುಪಾದವಾಗಿದೆ. ಆದಾಗ್ಯೂ ಪವರ್‌ಪ್ಲಾಂಟ್‌ನಿಂದ ಧ್ವನಿಪಥವು ಕಾರಿನ ಚಾಲನೆ ಮತ್ತಷ್ಟು ಹುರುಪು ತುಂಬುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹೊಸ ಮಾದರಿಯಲ್ಲಿ ಕಂಪನಿಯು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಮೂರು ವಿಭಿನ್ನ ಡ್ರೈವಿಂಗ್ ಮೋಡ್‌ಗಳನ್ನು ನೀಡಿದ್ದು, ಇಕೋ ಮೋಡ್‌ನಲ್ಲಿ ಗೇರ್‌ಬಾಕ್ಸ್ ಬೇಗನೆ ಮೇಲಕ್ಕೆ ಚಲಿಸುತ್ತದೆ ಮತ್ತು ಥ್ರೊಟಲ್ ಪ್ರತಿಕ್ರಿಯೆಯು ಸಾಕಷ್ಟು ಹಿಂದಕ್ಕೆ ಇರುವಾಗ ಕಡಿಮೆ ವೇಗದಲ್ಲಿಯೂ ಹೆಚ್ಚಿನ ಗೇರ್‌ನಲ್ಲಿ ಉಳಿಯಲು ಆದ್ಯತೆ ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಗೇರ್‌ಬಾಕ್ಸ್ ಸ್ವಲ್ಪ ಸಮಯದವರೆಗೆ ಗೇರ್‌ಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ನಾರ್ಮಲ್ ಮೋಡ್ ವಿಷಯಗಳನ್ನು ಸ್ವಲ್ಪಮಟ್ಟಿಗೆ ಸುಗಮಗೊಳಿಸುತ್ತದೆ ಮತ್ತು ಥ್ರೊಟಲ್ ಪೆಡಲ್ ಅನ್ನು ಒತ್ತುವ ಪ್ರತಿಕ್ರಿಯೆಯು ಹೆಚ್ಚು ಗಮನಾರ್ಹವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಹಾಗೆಯೇ ಸ್ಪೋರ್ಟ್ ಮೋಡ್‌ನಲ್ಲಿ ವೆನ್ಯೂ ಎನ್ ಲೈನ್‌ನ ಗೇರ್‌ಬಾಕ್ಸ್ ಮೂರು ಪಾಟ್ ಅಪ್ ಮಾಡಲು ನಿಮಗೆ ಅನುಮತಿಸುತ್ತದೆ ಮತ್ತು ಜೋರಾಗಿ ಪೆಡಲ್‌ನ ಪ್ರತಿಕ್ರಿಯೆಯು ತ್ವರಿತ ಮತ್ತು ಹೆಚ್ಚು ಸ್ಪಷ್ಟವಾಗಿರುತ್ತದೆ. ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಹಸ್ತಚಾಲಿತವಾಗಿರುವ ಗೇರ್‌ಗಳನ್ನು ಬದಲಾಯಿಸುವ ಸಾಮರ್ಥ್ಯವು ಇನ್ನಷ್ಟು ಸುಧಾರಣೆಯಾಗಬಹುದಿತ್ತು ಎನ್ನಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಡ್ರೈವಿಂಗ್ ಮೋಡ್‌ಗಳ ಮೂಲಕ ಗೇರ್ ಬದಲಿಸುವಾಗ ಸ್ಟೀರಿಂಗ್ ವೀಲ್ ಅನ್ನು ಸಹ ಟ್ವೀಕ್ ಮಾಡುತ್ತದೆ. ಇಕೋ ಮೋಡ್‌ನಲ್ಲಿ ಸ್ಟೀರಿಂಗ್ ಚಕ್ರವು ತುಂಬಾ ಹಗುರವಾಗಿರುತ್ತದೆ, ಇದು ಟ್ರಾಫಿಕ್‌ನಲ್ಲಿ ಸಾಕಷ್ಟು ಸಹಾಯಕವಾಗಿದೆ. ಸ್ಪೋರ್ಟ್ ಮೋಡ್ ಒಂದು ಭಾರವಾದ ಸ್ಟೀರಿಂಗ್ ಭಾವನೆಯನ್ನು ಉಂಟುಮಾಡುತ್ತದೆ. ಇದು ಸ್ಟಾರ್ಟ್ ಸ್ಟಾಪ್ ಟ್ರಾಫಿಕ್‌ಗೆ ನಿಜವಾಗಿಯೂ ಉತ್ತಮವಾಗಿಲ್ಲದಿದ್ದರೂ ಅದರ ಮೇಲೆ ಹಿಡಿತ ಹೊಂದಿರುವವರಿಗೆ ಹೆಚ್ಚಿನ ವೇಗದಲ್ಲಿ ಅದನ್ನು ನಿಯಂತ್ರಿಸುವ ವಿಶ್ವಾಸವನ್ನು ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಇದಲ್ಲದೆ ಹೊಸ ಕಾರಿನಲ್ಲಿ ಕಂಪನಿಯು ಸಸ್ಷೆಂಷನ್ ಸೆಟಪ್ ಅನ್ನು ಸುಧಾರಿಸಲು ಹ್ಯುಂಡೈ ಕಂಪನಿಯು ಪ್ರಯತ್ನಿಸಿರುವುದು ಚಾಲನೆ ವೇಳೆ ನಿಮ್ಮ ಅನುಭವಕ್ಕೆ ಬರಲಿದ್ದು, ಸರಳವಾಗಿ ಹೇಳುವುದಾದರೆ ವೆನ್ಯೂ ಎನ್ ಲೈನ್ ಈ ವಿಭಾಗದಲ್ಲಿ ಅತ್ಯುತ್ತಮ ಎಸ್‌ಯುವಿ ಎನ್ನಬಹುದಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಸುಧಾರಣೆಗೊಂಡಿರುವ ಸಸ್ಷೆಂಷನ್ ಸೆಟಪ್ ಹ್ಯುಂಡೈ ಹೊಸ ಕಾರನ್ನು ಮತ್ತೊಂದು ಹಂತದ ಯಶಸ್ವಿ ಸಹಕಾರಿಯಾಗಲಿದ್ದು, ಉತ್ತಮ ಪರ್ಫಾಮೆನ್ಸ್ ಮಾದರಿಯನ್ನು ಕ್ವಿಕ್ ಆಗಿ ನಿಲ್ಲಿಸಲು ಆಲ್ ವ್ಹೀಲ್ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಿದೆ. ಹೊಸ ಕಾರಿನ ಬ್ರೇಕ್‌ಗಳು ಉತ್ತಮ ಆರಂಭಿಕ ಬೈಟ್ ಅನ್ನು ನೀಡುತ್ತವೆ ಮತ್ತು ಪೆಡಲ್ ಕಾರ್ಯನಿರ್ವಹಿಸಲು ಸುಲಭ ಮತ್ತು ಹೆಚ್ಚು ಪ್ರಯಾಣವನ್ನು ಹೊಂದಿಲ್ಲದಿರುವಾಗಲೂ ಸಾಕಷ್ಟು ಪ್ರಗತಿಪರವಾಗಿರುತ್ತದೆ ಎನ್ನಬಹುದು.

ಫಸ್ಟ್ ಡ್ರೈವ್ ರಿವ್ಯೂ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದ ಹ್ಯುಂಡೈ ಎನ್ ಲೈನ್ ವಿಶೇಷತೆಗಳೇನು?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ವೆನ್ಯೂ ಎನ್ ಲೈನ್ ಮಾದರಿಯು ತನ್ನ ವಿಭಿನ್ನ ವಿನ್ಯಾಸ ಮತ್ತು ಫೀಚರ್ಸ್‌ಗಳ ಗ್ರಾಹಕರಿಗೆ ಮತ್ತಷ್ಟು ಆಕರ್ಷಿಸಲಿದ್ದು, ಹೊಸ ಕಾರು ಹಲವಾರು ಹೊಸ ಸೌಲಭ್ಯಗಳೊಂದಿಗೆ ಇನ್ನು ಹೆಚ್ಚಿನ ಮಟ್ಟದ ಬೇಡಿಕೆ ನೀರಿಕ್ಷೆಯಲ್ಲಿದೆ. ಈ ವಿಭಾಗದಲ್ಲಿ ಹೊಸ ಕಾರು ಅತ್ಯುತ್ತಮ ಫೀಚರ್ಸ್‌ಗಳ ಮೂಲಕ ಹೊಸ ಚಾಲನಾ ಅನುಭವ ಖಾತ್ರಿಪಡಿಸಲಿದ್ದು, ಶೀಘ್ರದಲ್ಲಿಯೇ ಕಂಪನಿಯು ಮತ್ತಷ್ಟು ಹೊಸ ಮಾದರಿಗಳಲ್ಲಿ ಎನ್ ಲೈನ್ ಆವೃತ್ತಿಗಳನ್ನು ಪರಿಚಯಿಸಲು ಸಿದ್ದವಾಗಿರುವುದು ಪರ್ಫಾಮೆನ್ಸ್ ಪ್ರಿಯರಿಗೆ ಹಬ್ಬವೇ ಸರಿ ಎನ್ನಬಹುದು.

Most Read Articles

Kannada
English summary
Hyundai venue n line first drive review features engine driving impressions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X