ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಐಷಾರಾಮಿ ಕಾರು ತಯಾರಕ ಜಾಗ್ವಾರ್‍‍ನಲ್ಲಿ ಸಂಸ್ಥೆಯಲ್ಲಿನ ಎಸ್ಎಫ್ ಕಾರು ಮುಖ್ಯವಾದದ್ದು, ಏಕೆಂದರೆ 2009ರಲ್ಲಿ ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಈ ಮಿಡ್ ಸೈಜ್ ಲಕ್ಷುರಿ ಸೆಡಾನ್ ಕಾರು ಸಂಸ್ಥೆಯ ಜನಪ್ರಿಯತೆಯನ್ನು ಮತ್ತೆ ಗ್ರಾಹಕರನ್ನು ತಲುಪುವ ಹಾಗೆ ಮಾಡಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ದಿನಕಳೆದಂತೆ ಜಾಗ್ವಾರ್ ಎಕ್ಸ್ಎಫ್ ಕಾರು ತಮ್ಮ ಎದುರಾಳಿ ಕಾರುಗಳು ನೀಡುತ್ತಿದ್ದ ಉತ್ತಮ ಸಾಮರ್ಥ್ಯ ಮತ್ತು ಟೆಕ್ನಾಲಜಿ ಕಾರಣ ಮಾರುಕಟ್ಟೆಯಲ್ಲಿ ಮರೆಯಾಗುತಾ ಬಂತು. ಈ ನಿಟ್ಟಿನಲ್ಲಿ ಎದುರಾಳಿಗಳಿಗೆ ಗಟ್ಟಿ ಪೈಪೋಟಿ ನೀಡಲು ಎರಡನೆ ತಲೆಮಾರಿನ ಎಕ್ಸ್ಎಫ್ ಕಾರುಗಳನ್ನು ಮತ್ತೆ ಬಿಡುಗಡೆಗೊಳಿಸಿತು ಜಾಗ್ವಾರ್.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಇದೀಗ ಡ್ರೈವ್‍‍ಸ್ಪಾರ್ಕ್ ತಂಡಕ್ಕೆ ರೂ.53.29 ಲಕ್ಷ ಬೆಲೆಬಾಳುವ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ರಿವ್ಯೂ ಮಾಡಲು ನಮಗೆ ಅವಕಾಶವು ಲಭಿಸಿದ್ದು, ಪರ್ಫಾರ್ಮೆನ್ಸ್ ಪ್ರಿಯರಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದ ಈ ಕಾರಿನ ಜೊತೆಗಿನ ನಮ್ಮ ಪ್ರಯಾಣವನ್ನು ನಾವಿಂದು ಈ ಲೇಖನದಲ್ಲಿ ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇವೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಅಚ್ಚುಕಟ್ಟಾಗಿ ಆಕರ್ಷಣಿಯವಾಗಿ ಮಧ್ಯಭಾಗದಲ್ಲಿ ಕ್ರೋಮ್ ಫಿನಿಷ್‍ ಪಡೆದ ಹನಿಕೊಂಬ್ ಗ್ರಿಲ್ ಮತು ಜಾಗ್ವಾರ್ ಚಿಹ್ನೆಯನ್ನು ನೀಡಲಾಗಿದೆ. ಕ್ರೋಮ್ ಗಾರ್ನಿಶಿಂಗ್ ಪಡೆದ ಬಂಪರ್ ಹೆಚ್ಚು ಆಕರ್ಷಕವಾಗಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಹೆಡ್‍‍ಲೈಟ್‍‍ಗಳನ್ನು ಜಾಗ್ವಾರ್ ಎಲ್ಇಡಿ ಟೆಕ್ನಾಲಜಿಯೊಂದಿಗೆ ಸಿದ್ಧಗೊಳಿಸ್ಲಾಗಿದ್ದು, ಇವು ಜಾಗ್ವಾರ್ ಸಂಸ್ಥೆಯಲ್ಲಿ ಇನ್ನಿತರೆ ಕಾರುಗಳಿಗಿಂತ ಡ್ರೈವರ್‍‍ಗಳಿಗೆ ಹೆಚ್ಚು ದೃಷ್ಟಿಕೋನವನ್ನು ನೀಡುತ್ತದೆ. ಹೆಡ್‍‍ಲೈಟ್ ಕ್ಲಸ್ಟರ್ ಕಾರ್ನರಿಂಗ್ ಲೈಟ್‍‍ಗಳನ್ನ್ ಕೂಡಾ ಪಡೆದುಕೊಂದಿದ್ದು, ಈ ಕಾರು ಜಾಗ್ವಾರ್‍‍ನ ವಿನೂತನ ಐಕ್ಯೂ ಅಲ್ಯೂಮೀನಿಯಂ-ಇಂಟೆನ್ಸೀವ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸುವುದರಿಂದ ಹಿಂದಿನ ತಲೆಮಾರಿನ ಕಾರಿಗಿಂತಾ 190 ಕಿಲೋಗ್ರಾಂ ಕಡಿಮೆ ತೂಕವನ್ನು ಪಡೆದಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಈ ಕಾರು ತನ್ನ ದೇಹದಾದ್ಯಂತ ಹಗುರವಾದ ಹೊದಿಕೆಯವರೆಗೆ ಚಲಾಯಿಸುವ ಕ್ರೀಸ್‍ತ್ಗಳಾನ್ನು ಒಳಗೊಂಡಿದೆ.

ನಾವು ಮೊದಲೇ ಹೇಳಿದಂತೆ, ಕ್ರೋಮ್‍ನೊಂದಿಗೆ ಅದರ ನೋಟ ಮತ್ತು ಕ್ರೋಮ್ ಸಾಲುಗಳನ್ನು ಎ-ಪಿಲ್ಲರ್‍‍‍ನಿಂದ ಸಿ-ಪಿಲ್ಲರ್‍‍ನ ವರೆಗು ಡಿಸೈನ್‍ ಮಾಡಲಾಗಿದ್ದು ಈ ಕಾರು ಎಕ್ಸ್ಇ ಕಾರಿನ ವಿನ್ಯಾಸವನ್ನು ಬಹುತೇಕ ಹೋಲುತ್ತದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಜಾಗ್ವಾರ್ ಎಕ್ಸ್ಎಫ್ ಕಾರಿನ ಹಿಂಭಾಗದಲ್ಲಿ ನವೀಕರಿಸಲಾದ ಎಫ್ ಆಕಾರದ ಟೈಲ್‍ಲೈಟ್‍‍ಗಳನ್ನು ನೀಡಲಾಗಿದ್ದು, ವಿನ್ಯಾಸಕ್ಕೆ ತಕ್ಕ ಹಾಗೆ ರಿಯರ್ ಬಂಪರ್ ಅನ್ನು ಒದಗಿಸಲಾಗಿದೆ. ಹಿಂಭಾಗದ ಮಧ್ಯ ಭಾಗದಲ್ಲಿ ಜಾಗ್ವಾರ್ ಚಿಹ್ನೆಯನ್ನು ಮತ್ತು ಎರಡು ಬದಿಗಳಲ್ಲಿ 20ಡಿ ಎಂಬ ಗುರುತನ್ನು ಒದಗಿಸಲಾಗಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಕಾರಿನ ಒಳಭಾಗದಲ್ಲಿ ವಿಶಾಲವಾದ ಕ್ಯಾಬಿನ್ ಜಾಗವನ್ನು ನೀಡಲಾಗಿದೆ. ಎಫ್-ಪೇಸ್ ಕಾರಿನಲ್ಲಿ ಕಾಣಬಹುದಾದ ಸೆಂಟ್ರಲ್ ಕಂಸೋಲ್ ಅನ್ನು ಒದಗಿಸಲಾಗಿದ್ದು, ಸ್ಟಾರ್ಟ್/ಸ್ಟಾಪ್ ಬಟನ್ ಕ್ಲಮೇಟ್ ಕಂಟ್ರೋಲ್ ಬಟನ್‍‍ಗಳನ್ನು ಅಳವಡಿಸಲಾಗಿದೆ. ಮತ್ತೊಂದು ಆಕರ್ಷಕವಾದ ಅಂಶವೆಂದರೆ ಇದರಲ್ಲಿನ ಜಾಗ್ವಾರ್ ಡ್ರೈವ್ ಕಂಟ್ರೋಲ್ ಫ್ಲೋಟಿಂಗ್ ಡ್ಯಾಶ್ನಿಂದ ಕಂಟ್ರೋಲ್ ಟಾಗಲ್ ಮರುಕಳಿಸುತ್ತದೆ. ಅಲ್ಲದೇ ಈ ಕಾರಿನಲ್ಲಿ 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು 11 ಸ್ಪೀಕರ್ ಮೆರಿಡಿಯನ್ ಆಡಿಯೊ ಸೌಂಡ್ ಸಿಸ್ಟಮ್ ಅನ್ನು ನೀಡಲಾಗಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಕಂಫರ್ಟ್‍‍ನ ವಿಷಯಕ್ಕೆ ಬಂದಲ್ಲಿ ಮುಂಭಾಗದ ಸೀಟ್‍‍ಗಳನ್ನು ಅಚ್ಚುಕಟ್ಟಗಿ ಸಜ್ಜುಗೊಳಿಸಲಾಗಿದ್ದು, ಎರಡೂ ಸೀಟ್‍‍ಗಳನ್ನು ವಿದ್ಯುತ್ ಸಹಾಯದಿಂದ ಅಡ್ಜಸ್ಟ್ ಮಾಡಬಹುದಾಗಿದೆ. ಹಿಂಭಾಗದ ಸೀಟ್‍‍ಗಳು ಕೂಡಾ ಸೌಕರ್ಯವಂತವಾಗಿದ್ದು, ಉದ್ದನೆಯ ಗಾತ್ರ ಇರುವವರು ಕೂರಲು ಸ್ವಲ್ಪ ಇಕ್ಕಟ್ಟಾಗಬಹುದು. ಕಾರಿನಲ್ಲಿ 5 ಆಸನಗಳಿದ್ದರೂ ಕೇವಲ ನಾವ್ಲರು ಮಾತ್ರ ಕೂರುವಷ್ಟು ಜಾಗವಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಇದರಲ್ಲಿ ವಿದ್ಯುತ್ ಸಹಾಯದಿಂದ ತೆರೆದುಕೊಳ್ಳುವ ಬೂಟ್ ಸ್ಪೇಸ್ ಅನ್ನು ನೀಡಲಾಗಿದ್ದು, ದೈಹಿಕವಾಗಿ ಮುಚ್ಚಬೇಕಾಗುತ್ತದೆ. ಇದರಲ್ಲಿ ಬೇಕಾದ ಸಾಮನುಗಳನ್ನು ತುಂಬಿಸಿಕೊಳ್ಳಬಹುದಾಗಿದೆ. ಇದಲ್ಲದೇ ಪ್ಯಾನರಾಮಿಕ್ ಸನ್‍‍ರೂಫ್ ಅನ್ನು ನೀಡಲಾಗಿದ್ದು, ಪ್ರಾಕೃತಿಕ ಸೌಂದರ್ಯವನ್ನು ಕಾಣಬಹುದಾಗಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ರೋಡ್ ಟೆಸ್ಟಿಂಗ್‍ಗಾಗಿ ನಮಗೆ ನೀಡಲಾದ ಕಾರಿನ ಒಳಭಾಗವು ಉಟ್ಟುಬಟ್ಟೆ ಇಂದ ಮತ್ತು ಡಾರ್ಕ್ ಬ್ರೌನ್ ಡ್ಯುಯಲ್ ಟೋನ್ ಬಣ್ಣದೊಂದಿಗೆ ಸಜ್ಜುಗೊಳಿಸಲಾಗಿತ್ತು. ಕಾರಿನ ಡ್ಯಾಶ್‍‍ಬೋರ್ಡ್ ಅನ್ನು ಲೆಧರ್‍‍ನಿಂದ ಸಜ್ಜುಗೊಳಿಸಲಾಗಿದ್ದು, ಇಸ್ಟ್ರೂಮೆಂಟ್ ಕ್ಲಸ್ಟರ್‍‍ನ ಎರಡು ಅನಾಲಾಗ್ ಡೈಯಲ್‍‍ಗಳ ನಡುವೆ ಇರುವ ಸಣ್ಣ ಸ್ಕ್ರೀನ್ ಕಾರಿನ ರಿಯಲ್ ಟೈಮ್ ಅನ್ನು ತೋರಿಸುತ್ತದೆ. ಇಲ್ಲಿನ ಆಯ್ಕೆಯನ್ನು ಸ್ಟೀರಿಂಗ್ ಮೌಂಟೆಡ್ ಸ್ವಿಚ್‍‍ಗಳಿಂದ ಬದಲಾಯಿಸಬಹುದು.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ತಾಂತ್ರಿಕವಾಗಿ ಜಾಗ್ವಾರ್ ಎಕ್ಸ್ಎಫ್ ಕಾರು 2.0 ಲೀಟರ್ ಎಂಜೆನಿಯಂ ಡೀಸೆಲ್ ಎಂಜಿನ್ ಸಹಾಯದೊಂದಿಗೆ 177ಬಿಹೆಚ್‍‍ಪಿ ಮತ್ತು 430ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಜೆಡ್ಎಫ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಗಂಟೆಗೆ 0 ಇಂದ 100ಕಿಲೋಮೀಟರ್ ಆಕ್ಸಿಲರೇಷನ್ ಪವರ್ ಅನ್ನು ಪಡೆದಿದ್ದು, ಗಂಟೆಗೆ 229 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಜಾಗ್ವಾರ್ ಎಕ್ಸ್ಎಫ್ ಕಾರು ಇಕೊ, ನಾರ್ಮಲ್/ಸಿಟಿ, ಡಿನಾಮಿಕ್ ಮತ್ತು ರೈನ್/ಸ್ನೋ/ಐಸ್ ಎಂಬ ನಾಲ್ಕು ಡ್ರೈವಿಂಗ್ ಮೋಡ್‍‍ಗಳನ್ನು ಪಡೆದುಕೊಂಡಿದ್ದು, ಇಕೊ ಮೋಡ್‍‍ನಲ್ಲಿ ಉತ್ತಮ ಇಂದಿನ ದಕ್ಷತೆ, ಡೈನಾಮಿಕ್ ಮೋಡ್‍ನಲ್ಲಿ ಥ್ರೋಟಲ್ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ರೈನ್/ಸ್ನೋ/ಐಸ್ ಮೋಡ್‍‍ನಲ್ಲಿ ಗರಿಷ್ಠವಾದ ಹಿಡಿತ ಮತ್ತು ಸ್ಥಿರತೆಯನ್ನು ಪಡೆಯಬಹುದಾಗಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನಲ್ಲಿನ ಪ್ರಯಾಣಿರ ಸುರಕ್ಷತೆಗಾಗಿ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್‍+ಇಬಿಡಿಯೊಂದಿಗೆ ಬಿಎ, ಟ್ರಾಕ್ಷನ್ ಕಂಟ್ರೋಲ್, ಆಲ್ ಸರ್ಫೇಸ್ ಪ್ರೋಗ್ರೆಸ್ ಕಂಟ್ರೋಲ್ ಮತ್ತು ಆರು ಏರ್‍‍ಭ್ಯಾಗ್‍‍ಗಳನ್ನು ಒದಗಿಸಲಾಗಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನಲ್ಲಿ 17 ಇಂಚಿನ ಲಾಯ್ ವ್ಹೀಲ್‍‍ಗಳನ್ನು ನೀಡಲಾಗಿದ್ದು, ಸಲಲೂಗಳಲ್ಲಿ ಒಟ್ಟಾರೆ ಪ್ರಮಾಣದಲ್ಲಿ ಹೊಂದುವ ಕೆಲವು ದೊಡ್ಡ ಮಿಶ್ರಲೋಹಗಳನ್ನು ನೋಡಲು ನಾವು ಇಷ್ಟಪಟ್ಟೆವು. ಹಾಗು ಕಾಂಟಿನೆಂಟಲ್ 255/17 ಕಾಂಟಿಪ್ರೀಮಿಯಮ್ ಚಕ್ರಗಳನ್ನು ಈ ಕಾರು ಪಡೆದುಕೊಂದಿದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ತೂಕದ ಉಳಿತಾಯ ಮತ್ತು ನವೀಕರಿಸಿದ ಅಮಾನತು ವ್ಯವಸ್ಥೆಗಳೆರಡೂ ಸೇರಿ ಹೊಸ ಎಕ್ಸ್ಎಫ್ ಅನ್ನು ಹೆಚ್ಚು ವೇಗವುಳ್ಳ ಮತ್ತು ಮೋಜಿನ ರೀತಿಯಲ್ಲಿ ಟ್ವಿಸ್ಟಿ ರಸ್ತೆಗಳ ಜೊತೆಗೆ ನಗರದಲ್ಲಿ ಸುಲಭವಾಗಿ ಚಲಿಸಬಲ್ಲ ಹಾಗೆ ತಯಾರು ಮಾಡಿದ್ದಾರೆ. ಜಗ್ವಾರ್ ಎಕ್ಸ್ಎಫ್ ಕಾರು ಪ್ರತೀ ಲೀಟರ್‍‍ಗೆ 19 ಕಿಲೋಮೀಟರ್‍‍ನ ಮೈಲೇಜ್ ನೀಡುತ್ತದೆ.

ಎಕ್ಸಿಕ್ಯೂಟಿವ್ ಲಗ್ಷುರಿ ಸೆಡಾನ್ ಜಾಗ್ವಾರ್ ಎಕ್ಸ್ಎಫ್ 20ಡಿ ಕಾರಿನ ವಿಮರ್ಶೆ

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಉತ್ತಮ ಡ್ರೈವಿಂಗ್ ಅನುಭವವನ್ನು ಪಡೆಯಲು ಬಯಸುವವರು ಜಾಗ್ವಾರ್ ಎಕ್ಸ್ಎಫ್ 20ಡಿ ಕಾರನ್ನು ಖರೀದಿ ಮಾಡಬಹುದಾಗಿದ್ದು, ಈ ಕಾರು ಎಕ್ಸ್ ಶೋರಂ ಪ್ರಕಾರ ರೂ. 53.29 ಲಕ್ಷಕ್ಕೆ ಮಾರಾಟಗೊಳ್ಳಿತ್ತಿದೆ. ಈ ಬೆಲೆಯಲ್ಲಿ ನೀವು ಮರ್ಸಿಡೀಸ್ ಎ ಕ್ಲಾಸ್ ಎಲ್‍ಡಬ್ಲ್ಯೂಬಿ, ಆಡಿ ಎ6 ಮ್ಯಾಟ್ರಿಕ್ಸ್ ಮತ್ತು ಹೊಸ ಬಿಎಂಡಬ್ಲ್ಯೂ 5 ಸಿರೀಸ್ ಅನ್ನು ಖರೀದಿಸಬಹುದಾಗಿದೆ. ಆದರೆ ಇದೇ ಬೆಲೆಯಲ್ಲಿ ಐಷಾರಾಮಿ ಸೌಲತ್ತು ಮತ್ತು ಹೆಚ್ಚು ಸಾಮರ್ಥ್ಯದ ಕಾರನ್ನು ಖರೀದಿಸಲು ಇಚ್ಛಿಸುವವರು ಜಾಗ್ವಾರ್ ಎಕ್ಸ್ಎಫ್ ಕಾರನು ಖರೀದಿಸಬಹುದಾಗಿದೆ.

Most Read Articles

Kannada
English summary
Jaguar XF 20d Road Test Review — An Executive Luxury Sedan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X