ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆಯೊಂದಿಗೆ ಅಭಿವೃದ್ದಿ ಹೊಂದಿರುವ ಜೀಪ್ ಕಂಪಾಸ್ ಬಿಡುಗಡೆಗೆ ಸಜ್ಜುಗೊಂಡಿದ್ದು, ಈ ಹಿನ್ನೆಲೆಯಲ್ಲಿ ನಡೆಸಿದ ಮೊದಲ ಚಾಲನಾ ವಿಮರ್ಶೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಕಳೆದ ಮೂರು ದಶಕಗಳಿಂದ ಭಾರತೀಯ ಆಟೋ ಉದ್ಯಮದಲ್ಲಿ ಛಾಪು ಮೂಡಿಸಿರುವ ಜೀಪ್ ಸಂಸ್ಥೆಯು, ಬೇಡಿಕೆಗೆ ತಕ್ಕಂತೆ ಕಾಲಕಾಲಕ್ಕೆ ಬದಲಾವಣೆಗೊಳ್ಳುತ್ತಲೇ ಬಂದಿದೆ. ಸದ್ಯ ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆಯೊಂದಿಗೆ ಅಭಿವೃದ್ದಿ ಹೊಂದಿರುವ ಜೀಪ್ ಕಂಪಾಸ್ ಬಿಡುಗಡೆಗೆ ಸಜ್ಜುಗೊಂಡಿದ್ದು, ಈ ಹಿನ್ನೆಲೆಯಲ್ಲಿ ನಡೆಸಿದ ಮೊದಲ ಚಾಲನಾ ವಿಮರ್ಶೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಇದೇ ವರ್ಷ ಅಗಸ್ಟ್ ತಿಂಗಳಲ್ಲಿ ಬಿಡುಗಡೆಗೆ ಎದುರು ನೋಡುತ್ತಿರುವ ಜೀಪ್ ಕಂಪಾಸ್ ಈಗಾಗಲೇ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಹತ್ತು ಹಲವು ಹೊಸ ವೈಶಿಷ್ಟ್ಯತಗಳೊಂದಿಗೆ ಗಮನಸೆಳೆಯುತ್ತಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಎಸ್‌ಯುವಿ ಮಾದರಿಗಳಲ್ಲೇ ಅತಿ ಹೆಚ್ಚು ಬಲಾಡ್ಯತೆಯನ್ನು ಹೊಂದಿರುವ ಜೀಪ್ ಕಂಪಾಸ್, ವಿಶೇಷ ಹೊರ ವಿನ್ಯಾಸಗಳಿಂದಾಗಿ ಯಾರನ್ನೇ ಆಗಲಿ ಮೋಡಿ ಮಾಡದೆ ಇರಲಾರದು.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಜೀಪ್ ಕಂಪಾಸ್‌ನ ಎಲ್‌ಇಡಿ ಹೆಡ್‌ಲ್ಯಾಂಪ್, ಅತ್ಯಾಕರ್ಷಕ ಬಂಪರ್ ವಿನ್ಯಾಸ ಮತ್ತು ಉತ್ತಮ ಮಾದರಿ ಗ್ರೀಲ್ ವಿನ್ಯಾಸಗಳು ಹೊಸ ಕಾರಿನ ಅಂದವನ್ನು ಹೆಚ್ಚಿಸಿದ್ದು, 16-ಇಂಚಿನ ಫೈರ್ ಸ್ಟೋನ್ ಟೈರ್ ವ್ಯವಸ್ಥೆ ಹೊಂದಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಒಳ ಮತ್ತು ಹೊರ ವಿನ್ಯಾಸ

ಸ್ಕೈ ಗ್ರೇ ಲೆದರ್ ಸೀಟುಗಳೊಂದಿಗೆ ಐಷಾರಾಮಿ ಒಳವಿನ್ಯಾಸವನ್ನು ಹೊಂದಿರುವ ಜೀಪ್ ಕಂಪಾಸ್, ಸಾಕಷ್ಟು ಸ್ಥಳಾವಕಾಶ ಪಡೆದುಕೊಂಡಿದೆ. ಜೊತೆಗೆ ಡ್ಯುಯಲ್ ಟೋನ್ಡ್ ಕಲರ್ ಥೀಮ್ ಲುಕ್ ನೀಡಲಾಗಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಸ್ಪೋರ್ಟ್ ಲುಕ್ ಸಹ ಹೊಂದಿರುವ ಜೀಪ್ ಕಂಪಾಸ್, 3ಡಿ ಎಲ್‌ಇಡಿ ಟೈಲ್ ಲ್ಯಾಂಪ್‌ ಮತ್ತು ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಹಿಂಬದಿಯ ಸೀಟು ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಸ್ಟೇರಿಂಗ್ ವಿಲ್ಹ್ ಕೂಡಾ ಲೆದರ್ ಕೊಟಿಂಗ್ ಪಡೆದುಕೊಳ್ಳುವ ಜೀಪ್ ಕಂಪಾಸ್ ಖದರ್ ಹೆಚ್ಚಿಸಿದ್ದು, ವಿವಿಧ ಮಾಹಿತಿ ಒಂದೇ ಸೂರಿನಡಿ ನೀಡ ಬಲ್ಲ ದೊಡ್ಡ ಸ್ಕ್ರೀನ್ ಇರಿಸಲಾಗಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ದರಗಳನ್ನು ಆಧರಿಸಿ ವಿವಿಧ ಆವೃತ್ತಿಗಳಲ್ಲಿ ಲಭ್ಯವಿರುವ ಜೀಪ್ ಕಂಪಾಸ್, ಉನ್ನತ ಮಟ್ಟದ ಕಾರು ಆವೃತ್ತಿ ಹೆಚ್ಚಿನ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹೀಗಾಗಿ ಸ್ಪೋರ್ಟ್ ಆವೃತ್ತಿಯಲ್ಲಿ ಮಾತ್ರ ನೆವಿಗೆಷನ್ ಸೌಲಭ್ಯ ಒದಗಿಸಲಾಗಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಇನ್ನು ಡ್ಯುಯಲ್ ಜೋನ್ ಏರ್ ಕಂಡೀಷನರ್ ಇದ್ದು, ಅಗತ್ಯ ಸಂದರ್ಭಗಳಲ್ಲಿ ಕಾರು ಚಾಲನೆಯ ಮೂಡ್ ಬದಲಾಯಿಸಿ ಆಪ್-ರೋಡ್ ಮೂಡ್‌ನಲ್ಲಿ ಚಾಲನೆ ಮಾಡಬಹುದಾಗಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಸುರಕ್ಷಾ ವೈಶಿಷ್ಟ್ಯತೆಗಳು

ಜೀಪ್ ಕಂಪಾಸ್‌ನಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್ ಹಾಗೂ ಎಬಿಎಸ್ ತಂತ್ರಜ್ಞಾನ ಸೌಲಭ್ಯ ಕಲ್ಪಿಸಲಾಗಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಎಂಜಿನ್ ಸಾಮರ್ಥ್ಯ

2-ಲೀಟರ್ ಟರ್ಬೋ ಚಾಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಜೀಪ್ ಕಂಪಾಸ್, 171ಬಿಎಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಅದೇ ರೀತಿಯಾಗಿ 1.4-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿ ಕೂಡಾ ಆಯ್ಕೆ ಮಾಡಬಹುದಾಗಿದ್ದು, ಪೆಟ್ರೋಲ್ ಆವೃತ್ತಿಯು 160ಬಿಎಚ್‌ಪಿ ಹಾಗೂ 250ಎನ್‌ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಜೀಪ್ ಕಂಪಾಸ್, ಹಿಂದಿನ ಮಾದರಿಗಳಿಂತಲೂ ಅಗಲವಾದ ಬೂಟ್ ಸ್ಪೇಸ್ ಹೊಂದಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಹೀಗಾಗಿ ಆಪ್ ರೋಡಿಂಗ್ ಮತ್ತು ಸಾಮಾನ್ಯ ಚಾಲನೆಯಲ್ಲೂ ಉತ್ತಮ ಕಾರ್ಯಕ್ಷಮತೆ ಪ್ರದರ್ಶನ ನೀಡ ಸಾಮರ್ಥ್ಯ ಹೊಂದಿರುವ ಜೀಪ್ ಕಂಪಾಸ್, ಆಕ್ಟಿವ್ ಡ್ರೈವ್ 4x4 ಸೌಲಭ್ಯ ಪಡೆದುಕೊಂಡಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಆಪ್ ರೋಡಿಂಗ್‌ಗಾಗಿಯೇ ಕೆಲವು ವಿಶೇಷ ವಿನ್ಯಾಸಗಳನ್ನು ಪಡೆದಿರುವ ಜೀಪ್ ಕಂಪಾಸ್, ಹಿಲ್ ಡ್ರೈವ್ ಅಸಿಸ್ಟೆನ್ಸ್ ವ್ಯವಸ್ಥೆ ಅಳವಡಿಕೆ ಮಾಡಲಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಜೀಪ್ ಕಂಪಾಸ್ ಗುಣಲಕ್ಷಣ(ವಿಮರ್ಶೆ ಕೈಗೊಂಡ ಕಾರು ಆವೃತ್ತಿ)

ಕಾರು ಆವೃತ್ತಿ- ಡೀಸೆಲ್ ಕಾರು ಆವೃತ್ತಿ

ಬೆಲೆ- ರೂ. 17 ಲಕ್ಷದಿಂದ ರೂ.25 ಲಕ್ಷ (ಅಂದಾಜು)

ಎಂಜಿನ್-2.0 -ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್

ಗೇರ್ ಬಾಕ್ಸ್- 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್

ಫ್ಯೂಲ್ ಟ್ಯಾಂಕ್ ಸಾಮರ್ಥ್ಯ- 60 ಲೀಟರ್

ಮೈಲೇಜ್(ಅಂದಾಜು)- 11 ಕಿ.ಮಿ/ ಪ್ರತಿ ಲೀಟರ್

ಬೂಟ್ ಸ್ಪೇಸ್ ಪ್ರಮಾಣ- 770 ಲೀಟರ್ (ಸೀಟುಗಳನ್ನು ಫೋಲ್ಡ್ ಮಾಡಿದಾಗ)

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಒಟ್ಟಿನಲ್ಲಿ ದಿನಬಳಕೆಗೆ ಮತ್ತು ಆಪ್‌ ರೋಡಿಂಗ್‌ಗೂ ಸಹಾಯವಾಗುವಂತೆ ಜೀಪ್ ಕಂಪಾಸ್ ಅಭಿವೃದ್ಧಿಗೊಳಿಸಲಾಗಿದ್ದು, ಅತ್ಯುತ್ತಮ ಕಾರ್ಯನಿರ್ವಹಣಾ ಸಾಮರ್ಥ್ಯ ಇತರೆ ಎಸ್‌ಯುವಿ ಮಾದರಿಗಳಿಂತ ಉತ್ತಮವಾಗಿದೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಮೇಡ್ ಇನ್ ಇಂಡಿಯಾ ಹೆಗ್ಗಳಿಕೆ

ಹೌದು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಮೇಡ್ ಇನ್ ಇಂಡಿಯಾ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ಜೀಪ್ ಕಂಪಾಸ್, ಹಿಂದಿನ ಕಾರು ಆವೃತ್ತಿಗಳಿಂತಲೂ ಕಡಿಮೆ ಬೆಲೆಗಳ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಮೇಡ್ ಇನ್ ಇಂಡಿಯಾ ಜೀಪ್ ಕಂಪಾಸ್ ಮೊದಲ ಚಾಲನಾ ವಿಮರ್ಶೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹತ್ತು ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿ ಹೊಂದಿರುವ ಜೀಪ್ ಕಂಪಾಸ್, ದೇಶಿಯವಾಗಿ ಅಭಿವೃದ್ದಿಗೊಳ್ಳುವ ಮೂಲಕ ಇತರೆ ಕಾರು ಮಾದರಿಗಳಿಂತ ಭಿನ್ನತೆ ಪಡೆದುಕೊಂಡಿದೆ. ಹೀಗಾಗಿ ಇದೊಂದು ಉತ್ತಮ ಎಸ್‌ಯುವಿ ಮಾದರಿಯಾವುದರಲ್ಲಿ ಯಾವುದೇ ಸಂದೇಹವಿಲ್ಲ.

Most Read Articles

Kannada
English summary
Read in Kannada about Jeep Compass Car First Drive Review.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X