ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಕಿಯಾ ಮೋಟಾರ್ಸ್ ಕಳೆದ ವರ್ಷ ಸೆಲ್ಟೊಸ್ ಬಿಡುಗಡೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದೀಗ ಕಾರ್ನಿವಾಲ್ ಎಂಪಿವಿ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳುವ ತವಕದಲ್ಲಿದೆ. ಸೆಲ್ಟೊಸ್ ಬಿಡುಗಡೆಯ ಸಂದರ್ಭದಲ್ಲಿ ಪ್ರತಿ ಆರು ತಿಂಗಳಿಗೊಂದು ಹೊಸ ಕಾರು ಮಾದರಿಯನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದ್ದ ಕಿಯಾ ಮೋಟಾರ್ಸ್ ಇದೀಗ ಎರಡನೇ ಕಾರು ಮಾದರಿಯಾಗಿ ಕಾರ್ನಿವಾಲ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಕಾರ್ನಿವಾಲ್ ಎಂಪಿವಿ(ಮಲ್ಟಿ ಪ್ಯಾಸೆಂಜರ್ ವೆಹಿಕಲ್) ಮಾದರಿಯು ಈಗಾಗಲೇ ಪ್ರಮುಖ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸೆಡೊನಾ ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ಎಂಪಿವಿ ವಿಭಾಗದಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಭಾರತೀಯ ಮಾರುಕಟ್ಟೆಯಲ್ಲೂ ಸೆಡೊನಾ ಕಾರನ್ನು ಕಾರ್ನಿವಾಲ್ ಹೆಸರಿನೊಂದಿಗೆ ಕಿಯಾ ಸಂಸ್ಥೆಯು ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಮಲ್ಟಿ ಪ್ಯಾಸೆಂಜರ್ ವೆಹಿಕಲ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿರುವ ಕಾರ್ನಿವಾಲ್ ಆವೃತ್ತಿಯು ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್‌ ಮಾದರಿಗಿಂತ ಕೆಳದರ್ಜೆಯ ಎಂಪಿವಿ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಕಾರುಗಳಿಗೆ ಹೆಚ್ಚು ಬೇಡಿಕೆಯಿದ್ದರೂ ಕೂಡಾ ದುಬಾರಿ ಬೆಲೆಯೊಂದಿಗೆ ಕಾರ್ನಿವಾಲ್ ಬಿಡುಗಡೆಗೆ ಮುಂದಾಗಿರುವ ಕಿಯಾ ಸಂಸ್ಥೆಯು ಹೊಸ ಭರವಸೆ ಮೂಡಿಸಿದ್ದು, ವಿಶೇಷ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಮತ್ತು ಕ್ಲಾಸ್ ಲೀಡಿಂಗ್ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಹಕರನ್ನು ಸೆಳೆಯಬಹುದು ಎನ್ನುವ ವಿಶ್ವಾಸವೇ ಕಾರ್ನಿವಾಲ್ ಬಿಡುಗಡೆಗೆ ಪ್ರಮುಖ ಕಾರಣವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಸೆಲ್ಟೊಸ್ ಕೂಡಾ ದುಬಾರಿ ಬೆಲೆ ಹೊಂದಿದ್ದರೂ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುತ್ತಿದ್ದು, ಅಗ್ಗದ ಬೆಲೆಯ ಕಾರುಗಳನ್ನು ಹಿಂದಿಕ್ಕಿ ದಾಖಲೆ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಯೋಚಿಸಿರುವ ಕಿಯಾ ಸಂಸ್ಥೆಯು ಬೆಲೆ ದುಬಾರಿಯಾದರೂ ಸರಿ ಎಂಪಿವಿ ವಿಭಾಗದಲ್ಲಿ ಕಾರ್ನಿವಾಲ್ ಪರಿಚಯಿಸುವ ತೀರ್ಮಾನಕ್ಕೆ ಬಂದಿದ್ದು, ಮುಂದಿನ ತಿಂಗಳು ಫೆಬ್ರುವರಿ 7ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿ ಅಧಿಕೃತವಾಗಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಬಿಡುಗಡೆಗೂ ಮುನ್ನ ಹೊಸ ಕಾರಿನ ಕಾರ್ಯಕ್ಷಮತೆ ಕುರಿತು ಪರೀಕ್ಷಿಸಲು ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿದ್ದ ಕಿಯಾ ಸಂಸ್ಥೆಯು ಡ್ರೈವ್‌ಸ್ಪಾರ್ಕ್ ತಂಡಕ್ಕೂ ಸ್ಪೆಷಲ್ ಡ್ರೈವ್ ಕಲ್ಪಿಸಿತ್ತು. ಹಾಗಾದ್ರೆ ಎಂಪಿವಿ ವಿಭಾಗದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿರುವ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿ ನೀಡುತ್ತಾ? ಇನೋವಾ ಕ್ರಿಸ್ಟಾ ಕಾರಿಗಿಂತಲೂ ಕಾರ್ನಿವಾಲ್ ಹೇಗೆ ವಿಭಿನ್ನವಾಗಿದೆ? ಬೆಲೆ ಲೆಕ್ಕಾಚಾರದಲ್ಲಿ ಇನೋವಾ ಕ್ರಿಸ್ಟಾಗಿಂತ ಕಾರ್ನಿವಾಲ್ ಖರೀದಿಗೆ ಉತ್ತಮವೇ? ಎನ್ನುವಂತಹ ಹಲವು ಪ್ರಶ್ನೆಗಳಿಗೆ ನೀವಿಲ್ಲಿ ಸರಳವಾದ ಉತ್ತರಗಳನ್ನು ಪಡೆಯಬಹುದಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಡಿಸೈನ್ ಮತ್ತು ಸ್ಟೈಲ್

ಭಾರತೀಯ ರಸ್ತೆಗಳಲ್ಲಿ ಖಂಡಿತವಾಗಿಯೂ ಕಾರ್ನಿವಾಲ್ ಹೊಸ ಸಂಚಲನಕ್ಕೆ ಕಾರಣವಾಗಬಲ್ಲ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕಾರಿನ ಗಾತ್ರ ಮತ್ತು ಪ್ರೀಮಿಯಂ ಫೀಚರ್ಸ್‌ಗಳು ಐಷಾರಾಮಿ ಎಂಪಿವಿ ಖರೀದಿದಾರರನ್ನು ಸೆಳೆಯಲಿವೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಹೊಸ ಕಾರಿನಲ್ಲಿರುವ ಪ್ರೀಮಿಯಂ ತಾಂತ್ರಿಕ ಸೌಲಭ್ಯಗಳು, ಐಷಾರಾಮಿ ವಿನ್ಯಾಸದಿಂದಾಗಿ ಕಾರ್ನಿವಾಲ್ ಕಾರು ಆವೃತ್ತಿಯನ್ನು 'ಲಗ್ಷುರಿ ಎಂಪಿವಿ' ವಿಭಾಗದಲ್ಲಿ ಗುರುತಿಸಲಾಗಿದ್ದು, ಸಿಗ್ನೆಚರ್ ಟೈಗರ್ ನೋಸ್ ಗ್ರಿಲ್ ಮತ್ತು ಸ್ವೆಪ್ಟ್ ಆಫ್ ಕ್ರೋಮ್ ಸೌಲಭ್ಯವು ಕಾರ್ನಿವಾಲ್ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಸ್ವೆಪ್ಟ್‌ಬ್ಯಾಕ್ ಎಲ್‌ಇಡಿ ಪ್ರೋಜೆಕ್ಟರ್, ಫ್ರಂಟ್ ಬಂಪರ್‌ನ ಎರಡು ತುದಿಗಳಲ್ಲೂ ಐಸ್ ಕ್ಯೂಬ್ ಮಾದರಿಯಲ್ಲಿರುವ ಫಾಗ್ ಲ್ಯಾಂಪ್, ಬಂಪರ್ ರಕ್ಷಣೆಗಾಗಿ ಸಿಲ್ವರ್ ಸ್ಕಫ್ ಪ್ಲೇಟ್ ಜೋಡಣೆ ಹೊಂದಿದ್ದು, ಸೈಡ್ ಪ್ರೋಫೈಲ್ ಕೂಡಾ ಆಕರ್ಷಣಿಯವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಫುಲ್ ಸೈಜ್ ಎಂಪಿವಿಯಾಗಿರುವ ಕಾರ್ನಿವಾಲ್ ಕಾರು ಉದ್ದಳತೆಯಲ್ಲಿ ಗಮನಸೆಳೆಯಲಿದ್ದು, ಎಲೆಕ್ಟ್ರಾನಿಕ್ ಸ್ಲೈಡಿಂಗ್ ಡೋರ್ ಸಿಸ್ಟಂ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 18-ಇಂಚಿನ ಕ್ರೋಮ್ ಲೇಪಿತ ಅಲಾಯ್ ವೀಲ್ಹ್ ಜೋಡಣೆ ಮಾಡಲಾಗಿದ್ದು, ಇದು ಕಾರ್ನಿವಾಲ್ ಕಾರಿನ ಬಲಿಷ್ಠತೆಗೆ ಮತ್ತಷ್ಟು ಪೂರಕವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಒಳಭಾಗದ ವಿನ್ಯಾಸ ಮತ್ತು ವೈಶಿಷ್ಟ್ಯತೆ

ಹೊರಗಿನ ವಿನ್ಯಾಸಕ್ಕಿಂತಲೂ ಒಳ ಭಾಗದ ಡಿಸೈನ್ ಸೌಲಭ್ಯವು ಕಿಯಾ ಕಾರ್ನಿವಾಲ್ ಕಾರಿಗೆ ಭರ್ಜರಿ ಜನಪ್ರಿಯತೆ ತಂದುಕೊಡಲಿದ್ದು, ಅರಾಮದಾಯಕ ಪ್ರಯಾಣಕ್ಕೆ ಪೂರಕವಾದ ಆಸನ ಸೌಲಭ್ಯ, 50ಕ್ಕೂ ಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳನ್ನು ಒಳಗೊಂಡಿರುವುದು ಗ್ರಾಹಕರನ್ನು ಮೊದಲ ನೋಟದಲ್ಲೇ ಸೆಳೆಯುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಜೊತೆಗೆ ಕಾರ್ನಿವಾಲ್ ಕಾರು ಗ್ರಾಹಕರ ಬೇಡಿಕೆಯೆಂತೆ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ವೆರಿಯೆಂಟ್‌ಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, 7 ಸೀಟರ್ ಕಾರು ಮಾದರಿಯ ಟಾಪ್ ಎಂಡ್ ಮಾದರಿಯಾಗಿ ಮಾರಾಟವಾಗಲಿದ್ದರೆ 9 ಸೀಟರ್ ಮಾದರಿಯು ಬೆಸ್ ವೆರಿಯೆಂಟ್ ಕಾರು ಮಾದರಿಯಾಗಿ ಖರೀದಿಗೆ ಲಭ್ಯವಿರಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಟಾಪ್ ಎಂಡ್ ಕಾರ್ನಿವಾಲ್ ಮಾದರಿಯನ್ನು ಲಿಮೊಸಿನ್ ಎಂದು ಹೆಸರಿಸಿರುವ ಕಿಯಾ ಸಂಸ್ಥೆಯು 2+2+3 ಮಾದರಿಯಲ್ಲಿ ಆಸನ ಸೌಲಭ್ಯವನ್ನು ಜೋಡಣೆ ಮಾಡಿದೆ. ಹಾಗೆಯೇ 8 ಸೀಟರ್ ಮಾದರಿಯಲ್ಲಿ 2+3+3 ಆಸನ ಸೌಲಭ್ಯವಿದ್ದಲ್ಲಿ 9 ಸೀಟರ್ ಮಾದರಿಯು 2+2+2+3 ಮಾದರಿಯಲ್ಲಿ ನಾಲ್ಕನೇ ಆಸನ ಸಾಲನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

7 ಸೀಟರ್ ಮಾದರಿಯಲ್ಲಿ ಮಧ್ಯದಲ್ಲಿರುವ ಕ್ಯಾಪ್ಟನ್ ಸೀಟ್‌ಗಳು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಹಲವಾರು ಹೊಸ ಫೀಚರ್ಸ್‌ಗಳನ್ನು ಹೊಂದಿದ್ದು, 9 ಸೀಟರ್ ಮಾದರಿಯು ಕಡಿಮೆ ಫೀಚರ್ಸ್‌ ಹೊಂದಿದ್ದರೂ ಕೂಡಾ ಗರಿಷ್ಠ ಆಸನ ಸೌಲಭ್ಯವನ್ನು ಪಡೆದುಕೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಇನ್ನು ಹೊಸ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಹೇಳುವುದಾದರೇ, ಕಾರ್ನಿವಾಲ್ ಕಾರಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಎಲೆಕ್ಟ್ರಿಕ್ ಪವರ್ಡ್ ಡ್ರೈವರ್ ಸೀಟ್, ಲೆದರ್ ಹೊದಿಕೆ ಪಡೆದಿರುವ ಮಲ್ಟಿ ಫಂಕ್ಷನ್ ಸ್ಟಿರಿಂಗ್ ವೀಲ್ಹ್ ಹೊಂದಿದೆ. ಸ್ಟಿರಿಂಗ್ ವೀಲ್ಹ್‌ನಲ್ಲಿ ಆಡಿಯೋ ಮೌಂಟ್ ಕಂಟ್ರೋಲ್, ಕಾಲ್ಸ್ ಕಂಟ್ರೋಲ್ ಸೇರಿದಂತೆ ಹಲವು ಕಂಟ್ರೋಲ್ಸ್ ಬಟನ್‌ಗಳ ಸೌಲಭ್ಯಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಹಾಗೆಯೇ ಸ್ಟಿರಿಂಗ್ ವೀಲ್ಹ್‌ಗೆ ಹೊಂದಿಕೊಂಡಂತೆ ಟು ಅನಲಾಗ್ ಟಾಚೋ ಮೀಟರ್, ಸ್ಪೀಡೋ ಮೀಟರ್ ಜೋಡಿಸಲಾಗಿದ್ದು, 3.5-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ ಕೂಡಾ ಕಾರು ಚಾಲನೆ ವೇಳೆ ಹಲವು ಮಾಹಿತಿಗಳನ್ನು ಒಂದೇ ಸೂರಿನಡಿ ನೀಡಲಿದೆ. ಇದರಲ್ಲಿ ಗೇರ್ ಇಂಡಿಕೇಟರ್, ಕ್ರಮಿಸುವ ದೂರ ಮತ್ತು ಫ್ಯೂಲ್ ಲಭ್ಯತೆ ಮಾಹಿತಿಯನ್ನು ನೀಡಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಇನ್ನು ಹೊಸ ಕಾರಿನ ಡ್ಯಾಶ್‌ಬೋರ್ಡ್ ಕೂಡಾ ಗಮನಸೆಳೆಯಲಿದ್ದು, ಡ್ಯುಯಲ್ ಟೋನ್ ಸಾಫ್ಟ್ ಟಚ್ ಮೆಟಿರಿಯಲ್ ಹೊಸ ಅನುಭವ ನೀಡುತ್ತದೆ. ಹೊಸ ಕಾರಿನಲ್ಲಿ ಸೆಂಟ್ರಲ್ ಇನ್ಪೋಟೈನ್‌ಮೆಂಟ್, 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಇನ್ ಬಿಲ್ಟ್ ನ್ಯಾವಿಗೆಷನ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ವೆಹಿಕಲ್ ಟೆಲಿಮ್ಯಾಟಿಕ್ ಸೌಲಭ್ಯ ಪಡೆದಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಮತ್ತೊಂದು ವಿಶೇಷ ಅಂದ್ರೆ, ಕಾರ್ನಿವಾಲ್‌ನಲ್ಲಿ ನೀಡಲಾಗಿರುವ ಇನ್ಪೋಟೈನ್ ಸಿಸ್ಟಂ ಸೌಲಭ್ಯವು ಕಿಯಾ ಸಂಸ್ಥೆಯ UVO ಕನೆಕ್ಟೆಡ್ ಕಾರ್ ಟೆಕ್ನಾಲಜಿ ಪ್ರೇರಣೆ ಹೊಂದಿದ್ದು, UVO ಮೊಬೈಲ್ ಆ್ಯಪ್ ಮೂಲಕವೇ ಕಾರಿನ ಇನ್ಪೋಟೈನ್‌ಮೆಂಟ್ ನಿಯಂತ್ರಿಸಬಹುದಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಇದಲ್ಲದೇ UVO ಕನೆಕ್ಟೆಡ್ ಕಾರ್ ಟೆಕ್ನಾಲಜಿ ಮೂಲಕ ಕಾರಿನ ಪ್ರಮುಖ 35 ಫೀಚರ್ಸ್‌ಗಳನ್ನು ಮೊಬೈಲ್ ಆ್ಯಪ್‌ನಲ್ಲೇ ನಿಯಂತ್ರಿಸಬಹುದಾಗಿದ್ದು, ವಾಯ್ಸ್ ಅಸಿಸ್ಟ್, ವೆಹಿಕಲ್ ಡಯ್ನೋಸ್ಟಿಕ್, ರಿಮೋಟ್ ಕಂಟ್ರೋಲ್ ಸೇರಿದಂತೆ 35 ಫೀಚರ್ಸ್‌ಗಳನ್ನು UVO ಆ್ಯಪ್ ಮೂಲಕ ನಿಯಂತ್ರಿಸಬಹುದಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಇನ್ನುಳಿಂದತೆ ಕಾರ್ನಿವಾಲ್ ಕಾರಿನಲ್ಲಿ ತ್ರಿ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯವಿದ್ದು, ಡ್ಯಾಶ್‌ಬೋರ್ಡ್ ಮೇಲ್ಭಾದಲ್ಲಿರುವ ಕಂಟ್ರೋಲ್ ಯುನಿಟ್‌ನಲ್ಲಿ ಎಸಿ ಯುನಿಟ್, ಸನ್‌ರೂಫ್ ಕಂಟ್ರೋಲ್ ಸೈಡ್ ಡೋರ್ ಕಂಟ್ರೋಲ್ ಮತ್ತು ಟೈಲ್‌ಗೇಟ್ ಕಂಟ್ರೋಲ್ ಇದರಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಕಾರ್ನಿವಾಲ್ ಕಾರು ಸೆಲ್ಟೊಸ್‌ನಲ್ಲಿರುವಂತೆ ವೆಂಟಿಲೆಟೆಡ್ ಸೀಟುಗಳ ಸೌಲಭ್ಯವನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಿಸ್ಟಂ, ಆರ್ಮ್ ರೆಸ್ಟ್‌ನೊಂದಿಗೆ ಚಾಲಕನಿಗೆ ಸರಳವಾಗಿ ಸಿಗಬಹುದಾದ ಗೇರ್ ನಾಬ್, ಲಿಮೊಸಿನ್ ಮಾದರಿಯಲ್ಲಿ ನಪ್ಪಾ ಲೆದರ್ ಆಸನ ಸೌಲಭ್ಯವಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಲಿಮೊಸಿನ್ ಮಾದರಿಯು 7 ಸೀಟರ್ ಹೊಂದಿದ್ದು, 8 ಸೀಟರ್ ಮತ್ತು 9 ಸೀಟರ್ ಆವೃತ್ತಿಗಿಂತಲೂ ವಿಭಿನ್ನ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಅರಾಮದಾಯಕವಾದ ಮಧ್ಯದ ಆಸನಗಳು, ಮೂರನೇ ಸಾಲಿನಲ್ಲೂ ಕಾಲು ಚಾಚಿಕೊಳ್ಳಬಹುದಾದಷ್ಟು ಸ್ಥಳಾವಕಾಶ, ಹೆಡ್ ಇನ್ಟೋಟೈನ್‌ಮೆಂಟ್, ಡ್ಯುಯಲ್ ಸನ್‌ರೂಫ್ ಸೌಲಭ್ಯವು ಟಾಪ್ ವೆರಿಯೆಂಟ್‌ನ ಪ್ರಮುಖ ಆಕರ್ಷಣೆಯಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಹಾಗೆಯೇ 9 ಸೀಟರ್ ಕಾರಿನ ನಾಲ್ಕನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಅನುಕೂಕರವಾಗ ಲೆಗ್‌ರೂಮ್ ಮತ್ತು ಹೆಡ್‌ರೂಮ್ ಸೌಲಭ್ಯವನ್ನು ಆಕರ್ಷಕವಾಗಿ ಜೋಡಣೆ ಮಾಡಲಾಗಿದ್ದು, ಹಿಂಭಾಗದಲ್ಲೂ ಎಸಿ ವೆಂಟ್ಸ್, ಹೆಡ್ ರೆಸ್ಟ್, ಬಾಟಲ್ ಹೋಲ್ಡರ್ ಮತ್ತು ಆಕರ್ಷಕ ಬೂಟ್ ಸ್ಪೆಸ್ ಸೌಲಭ್ಯವಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಕಾರ್ನಿವಾಲ್ ಉದ್ದಳತೆ

ಕಿಯಾ ಕಾರ್ನಿವಾಲ್ ಕಾರು ಎಂಪಿವಿ ಕಾರುಗಳಲ್ಲೇ ಅತಿ ಹೆಚ್ಚು ಉದ್ದಳತೆ ಹೊಂದಿದ್ದು, 5,115-ಎಂಎಂ ಉದ್ದ, 1,985-ಎಂಎಂ ಅಗಲ, 1,740-ಎಂಎಂ ಎತ್ತರ, 3,060-ಎಂಎಂ ವೀಲ್ಹ್ ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 540-ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯ ಹೊಂದಿದೆ.

ಉದ್ದ 5,115 ಎಂಎಂ
ಅಗಲ 1,985 ಎಂಎಂ
ಎತ್ತರ 1,740 ಎಂಎಂ
ವೀಲ್ಹ್‌ಬೆಸ್ 3,060 ಎಂಎಂ
ಗ್ರೌಂಡ್ ಕ್ಲಿಯೆರೆನ್ಸ್ 180 ಎಂಎಂ
ಬೂಟ್ ಸ್ಪೆಸ್ ಸಾಮರ್ಥ್ಯ 540 ಲೀಟರ್
ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ವೆರಿಯೆಂಟ್ ಮತ್ತು ಸುರಕ್ಷಾ ಸೌಲಭ್ಯಗಳು

ಕಾರ್ನಿವಾಲ್ ಕಾರು ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿದಗೆ ಲಭ್ಯವಿರಲಿದ್ದು, ಪ್ರೀಮಿಯಂ, ಪ್ರೆಸ್ಟಿಜ್ ಮತ್ತು ಲಿಮೊಸಿನ್ ಮಾದರಿಗಳನ್ನು ಹೊಂದಿದೆ. ಇದರಲ್ಲಿ ಪ್ರೀಮಿಯಂ ಮಾದರಿಯು ಬೆಸ್ ವೆರಿಯೆಂಟ್ ಆಗಿ ಮಾರಾಟವಾಗಲಿದ್ದರೆ ಲಿಮೊಸಿನ್ ವೆರಿಯೆಂಟ್ ಟಾಪ್ ಎಂಡ್ ಆವೃತ್ತಿಯಾಗಿರಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ನೀರಿಕ್ಷಿಸಬಹುದಾದ ಫೀಚರ್ಸ್‌ಗಳು

* 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ

* ಎಂಟು ಸ್ಪೀಕರ್ಸ್(ಹರ್ಮನ್/ಕರ್ಡೋನ್)

* 220 ವೊಲ್ಟ್ ಲ್ಯಾಪ್‌ಟಾಪ್ ಚಾರ್ಜರ್

* 10-ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್

* ವೆಂಟಿಲೆಟೆಡ್ ಡ್ರೈವರ್ ಸೀಟ್

* ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

* ಸೆಂಟ್ರಲ್ ಲಾಕಿಂಗ್ * ಆಟೋ ORVMs

* 18-ಇಂಚಿನ ಅಲಾಯ್ ವೀಲ್ಹ್

* ಮೂರನೇ ಸಾಲಿನಲ್ಲೂ 60:40 ಅನುಪಾತದ ಆಸನ

* UVO ಕನೆಕ್ಟೆಡ್ ಟೆಕ್ನಾಲಜಿ

* ವೈರ್ ಲೆಸ್ ಮೊಬೈಲ್ ಚಾರ್ಜಿಂಗ್

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಸುರಕ್ಷಾ ಫೀಚರ್ಸ್‌ಗಳು

* ಎಬಿಎಸ್ ಜೊತೆ ಇಬಿಡಿ

* ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್

* ರೋಲ್ ಓವರ್ ಮಿಟಿಗೆಷನ್

* ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್

* 6 ಏರ್‌ಬ್ಯಾಗ್

* ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ

* ಸೀಟ್ ಬೆಲ್ಟ್ ರಿಮೆಂಡರ್

* ಇಮ್‌ಮೊಬಿಲೈಜರ್

* ISOFIX ಚೈಲ್ಡ್ ಸೀಟ್ ಮೌಂಟ್

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಕಾರ್ನಿವಾಲ್ ಕಾರಿನಲ್ಲಿ ಕೇವಲ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ಗಳಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಎಂಜಿನ್ 2.2-ಲೀಟರ್
ಪವರ್ (ಬಿಎಚ್‌ಪಿ) 200
ಟಾರ್ಕ್ (ಎನ್ಎಂ) 440
ಟ್ರಾನ್‌ಮಿಷನ್ 8-ಸ್ಪೀಡ್ ಆಟೋಮ್ಯಾಟಿಕ್
ಫ್ಯೂಲ್ ಟ್ಯಾಂಕ್ ಸಾಮರ್ಥ್ಯ 60-ಲೀಟರ್
ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಈ ಮೂಲಕ ಮೈಲೇಜ್‌ನಲ್ಲೂ ಗಮನಸೆಳೆಯುವ ಕಾರ್ನಿವಾಲ್ ಕಾರು 2,200 ಕೆಜಿ ತೂಕ ಹೊಂದಿದ್ದು, ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 13.9 ಕಿ.ಮೀ ಮೈಲೇಜ್ ನೀಡಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಈ ಮೂಲಕ ಕಾರ್ನಿವಾಲ್ ಕಾರಿನಲ್ಲಿ ಆರಾಮದಾಯಕ ಚಾಲನೆಗೆ ಅನೂಕರ ಮಾಡಿರುವ ಕಿಯಾ ಸಂಸ್ಥೆಯು ಹೈವೇ ಚಾಲನೆಗೆ ಕ್ವಿಕ್ ಸ್ಟಿರಿಂಗ್ ನೀಡುವ ಅವಶ್ಯಕತೆಯಿದ್ದು, ಡೀಸೆಲ್ ಎಂಜಿನ್ ಆದರೂ ಕೂಡಾ ಕಾರಿನ ಒಳಭಾಗದಲ್ಲಿ ಯಾವುದೇ ಕಿರಿಕಿರಿಯಿಲ್ಲದೆ ನಿಶ್ಯಬ್ದವಾಗಿರುವುದು ಪ್ರಮುಖ ಅಂಶವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಅಂದಾಜು ಬೆಲೆ ಮತ್ತು ಲಭ್ಯವಿರುವ ಬಣ್ಣಗಳು

ಸದ್ಯ ಅನಾವರಣಗೊಳ್ಳಲಿರುವ ಕಾರ್ನಿವಾಲ್ ಕಾರು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಈಗಾಗಲೇ ಹೊಸ ಕಾರು ಖರೀದಿಗೆ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭವಾಗಿದೆ. ಮಾಹಿತಿಗಳ ಪ್ರಕಾರ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.27 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.33 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಅರೋರಾ ಬ್ಲ್ಯಾಕ್ ಪರ್ಲ್, ಸ್ಟೀಲ್ ಸಿಲ್ವರ್ ಮತ್ತು ಗ್ಲಾಸಿಯರ್ ವೈಟ್ ಪರ್ಲ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಟೊಯೊಟಾ ಇನೋವಾ ಕ್ರಿಸ್ಟಾ ಟಾಪ್ ಎಂಡ್ ಮಾದರಿಯ ಜೊತೆಗೆ ಐಷಾರಾಮಿ ಎಂಪಿವಿ ಮಾದರಿಯಾದ ಮರ್ಸಿಡಿಸ್ ವಿ-ಕ್ಲಾಸ್ ಎಂಪಿವಿ ಕಾರುಗಳಿಗೆ ಇದು ಪೈಪೋಟಿ ನೀಡಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಫ್ಯಾಕ್ಟ್ ಚೆಕ್

ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿ ನೀಡುವ ಉದ್ದೇಶದೊಂದಿಗೆ ಕಾರ್ನಿವಾಲ್ ಪರಿಚಯಿಸುತ್ತಿರುವ ಕಿಯಾ ಸಂಸ್ಥೆಯು ಹೊಸ ಕಾರನ್ನು ಪ್ರೀಮಿಯಂ ಸೌಲಭ್ಯಗಳೊಂದಿಗೆ ಪರಿಚಯಿಸುತ್ತಿದ್ದು, ಬೆಲೆಯಲ್ಲಿ ದುಬಾರಿಯಾದರೂ ಗ್ರಾಹಕರನ್ನು ಸೆಳೆಯುವ ವಿಶ್ವಾಸದಲ್ಲಿದೆ.

ವೈಶಿಷ್ಟ್ಯತೆಗಳು ಕಿಯಾ ಕಾರ್ನಿವಾಲ್ ಟೊಯೊಟಾ ಇನೋವಾ ಕ್ರಿಸ್ಟಾ
ಎಂಜಿನ್ 2.2-ಲೀ ಡೀಸೆಲ್ 2.7-ಲೀಟರ್ ಡೀಸೆಲ್
ಪವರ್ (ಬಿಎಚ್‌ಪಿ) 200 150
ಟಾರ್ಕ್ (ಎನ್ಎಂ) 400 343
ಟ್ರಾನ್ಸ್‌ಮಿಷನ್ 8-ಸ್ಪೀಡ್ ಆಟೋಮ್ಯಾಟಿಕ್ 6-ಸ್ಪೀಡ್ ಆಟೋಮ್ಯಾಟಿಕ್
ಬೆಲೆ NA* ರೂ. 15.36 ಲಕ್ಷದಿಂದ ಆರಂಭ
ಫಸ್ಟ್ ಡ್ರೈವ್ ರಿವ್ಯೂ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಕಿಯಾ ಕಾರ್ನಿವಾಲ್ ರೆಡಿ...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಐಷಾರಾಮಿ ಜೊತೆ ಪರ್ಫಾಮೆನ್ಸ್ ಎಂಪಿವಿ ಆವೃತ್ತಿಯಾಗಿರುವ ಕಾರ್ನಿವಾಲ್ ಕಾರು ಆವೃತ್ತಿಯು ಇನೋವಾ ಕ್ರಿಸ್ಟಾ ಹೈ ಎಂಡ್ ಆವೃತ್ತಿಗಳನ್ನು ಖರೀದಿ ಬಯಸುವ ಗ್ರಾಹಕರನ್ನು ಸೆಳೆಯಬಲ್ಲ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಭಾರತೀಯ ಗ್ರಾಹಕರ ನೀರಿಕ್ಷೆಯೆಂತೆ ರೂ.20 ಲಕ್ಷದಿಂದ ರೂ.25 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಗೊಂಡಿದ್ದರೆ ಹೊಸ ಕಾರು ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳಬಹುದಿತ್ತು ಎನ್ನಬಹುದು. ಆದರೆ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್ ಮತ್ತು ಎಂಜಿನ್ ಆಯ್ಕೆಯು ದುಬಾರಿಯಾಗಿದ್ದು, ಕಾರ್ನಿವಾಲ್ ಖರೀದಿ ಮಾಡಬೇಕೆಂಬ ಯೋಜನೆಯಲ್ಲಿದ್ದ ಮಧ್ಯಮ ವರ್ಗದ ಗ್ರಾಹಕರಿಗೆ ಇದು ಬಿಸಿ ತುಪ್ಪ ಎನ್ನಬಹುದು.

Most Read Articles

Kannada
English summary
Kia Carnival First Drive Report. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more