ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ದಕ್ಷಿಣ ಕೊರಿಯಾದ ದೈತ್ಯ ಕಾರು ತಯಾರಕ ಕಂಪನಿಯಾದ ಕಿಯಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೂರನೇ ಕಾರನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಈ ಮೊದಲು ಕಂಪನಿಯು ಭಾರತದಲ್ಲಿ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಹಾಗೂ ಕಾರ್ನಿವಾಲ್ ಎಂಪಿವಿ ಕಾರುಗಳನ್ನು ಬಿಡುಗಡೆಗೊಳಿಸಿತ್ತು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಈಗ ಸೊನೆಟ್ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಿಯಾ ಸೊನೆಟ್ ಕಾರು, ಸೆಲ್ಟೊಸ್ ನಂತರ ಭಾರತದಲ್ಲೇ ತಯಾರಾಗುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯ ಎರಡನೇ ಕಾರು ಮಾದರಿಯಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಇತ್ತೀಚಿಗಷ್ಟೇ ಕಿಯಾ ಸೊನೆಟ್ ಕಾರನ್ನು ಅಧಿಕೃತ ಬಿಡುಗಡೆಗೂ ಮುನ್ನ ಫಸ್ಟ್ ಡ್ರೈವ್ ಮಾಡಲಾಯಿತು. ಈ ಫಸ್ಟ್ ಡ್ರೈವ್ ನ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಡಿಸೈನ್ ಮತ್ತು ಸ್ಟೈಲಿಂಗ್

ಕಿಯಾ ಮೋಟಾರ್ಸ್ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ್ದ ಕಾನ್ಸೆಪ್ಟ್-ಆವೃತ್ತಿಯನ್ನು ಸೊನೆಟ್ ಉತ್ಪಾದನಾ ಮಾದರಿಯಲ್ಲೂ ಉಳಿಸಿಕೊಂಡಿದೆ. ಬೋಲ್ಡ್ ಡಿಸೈನ್ ಹೊಂದಿರುವ ಈ ಕಾರು ಅಗ್ರೇಸಿವ್ ಹಾಗೂ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಈ ಕಾರಿನ ಮುಂಭಾಗದಲ್ಲಿ ಗ್ಲೋಸ್ ಬ್ಲ್ಯಾಕ್‌ ಬಣ್ಣದಲ್ಲಿರುವ ಟೈಗರ್ ನೋಸ್ ಗ್ರಿಲ್ ನೀಡಲಾಗಿದೆ. ಮುಂಭಾಗದಲ್ಲಿರುವ ಗ್ರಿಲ್ ರೆಡ್ ಅಸೆಂಟ್ ಗಳನ್ನು ಹೊಂದಿದೆ. ಕಾರು ಮಾದರಿಯು ಯಾವ ವೆರಿಯೆಂಟ್ ಎಂಬುದನ್ನು ಸೂಚಿಸಲು ಜಿಟಿ-ಲೈನ್ ಬ್ಯಾಡ್ಜಿಂಗ್ ನೀಡಲಾಗಿದೆ. ಗ್ರಿಲ್ ಕಾರ್ನಿವಾಲ್ ನಲ್ಲಿರುವಂತೆ ನರ್ಲ್ಡ್ ಕ್ರೋಮ್‌ ಬಣ್ಣವನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಈ ಗ್ರಿಲ್‌ನ ಎರಡೂ ಬದಿಗಳಲ್ಲಿ ಶಾರ್ಪ್ ಆದ ಹೆಡ್‌ಲ್ಯಾಂಪ್‌ಗಳಿವೆ. ಇವುಗಳನ್ನು ಕಿಯಾ ಕ್ರೌನ್-ಜ್ಯುವೆಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಇಂಟಿಗ್ರೇಟ್ ಮಾಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಹೆಡ್‌ಲ್ಯಾಂಪ್ ಯುನಿಟ್ ಕೆಳಗೆ ಮುಂಭಾಗದ ಬಂಪರ್‌ನಲ್ಲಿ ಎಲ್‌ಇಡಿ ಫಾಗ್ ಲ್ಯಾಂಪ್‌ಗಳಿವೆ. ಮಧ್ಯದಲ್ಲಿ ದೊಡ್ಡ ಗಾತ್ರದ ಏರ್ ಇನ್ ಟೇಕ್ ನೀಡಲಾಗಿದೆ.ಈ ಕಂಪ್ಯಾಕ್ಟ್ ಎಸ್ ಯುವಿಯ ಸೈಡ್ ನಲ್ಲಿ 16-ಇಂಚಿನ ಕ್ರಿಸ್ಟಲ್ -ಕಟ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಎಸ್‌ಯುವಿಯ ಫೀಲ್ ಹೆಚ್ಚಿಸಲು ಬ್ಲ್ಯಾಕ್ ಕ್ಲಾಡಿಂಗ್ ನೀಡಲಾಗಿದೆ. ಕಪ್ಪು ಕ್ಲ್ಯಾಡಿಂಗ್‌ಗಳನ್ನು ಎರಡೂ ವ್ಹೀಲ್ ಆರ್ಕ್ ಹಾಗೂ ಡೋರ್ ಪ್ಯಾನೆಲ್ ಗಳ ಬಳಿ ಕಾಣಬಹುದು. ಜಿಟಿ-ಲೈನ್ ಮಾದರಿಯಾಗಿರುವ ಕಾರಣಕ್ಕೆ ಈ ಸೊನೆಟ್ ರೆಡ್ ಅಸೆಂಟ್ ಗಳನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಇದರ ಜೊತೆಗೆ ಸೈಡ್ ಪ್ಯಾನೆಲ್‌ನಲ್ಲಿ ಬ್ಲಾಕ್ ಪಿಲ್ಲರ್, ಕ್ರೋಮ್ ಸ್ಟ್ರಿಪ್, ರೂಫ್ ರೇಲ್ ಗಳನ್ನು ಹೊಂದಿರುವ ದೊಡ್ಡ ವಿಂಡೊಗಳಿವೆ. ಕಿಯಾ ಸೊನೆಟ್ ವಿಶಿಷ್ಟವಾದ ಸಿ-ಪಿಲ್ಲರ್ ಅನ್ನು ಹೊಂದಿದೆ. ಈ ಪಿಲ್ಲರ್ ಗ್ಲೋಸಿ ಬ್ಲಾಕ್ ಅಸೆಂಟ್ ಗಳನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಒಆರ್ ವಿಎಂಗಳು ಕಾರಿನ ಬಾಡಿ ಕಲರ್ ಅನ್ನು ಹೊಂದಿದ್ದರೆ, ಸೈಡ್ ಪ್ರೊಫೈಲ್‌ನಲ್ಲಿ ಪೂರ್ತಿಯಾಗಿ ಕ್ರೋಮ್ ಬಣ್ಣವನ್ನು ಹೊಂದಿದೆ. ಡೋರ್ ಹ್ಯಾಂಡಲ್‌ಗಳು ವಿಭಿನ್ನ ಕಲರ್ ಅನ್ನು ಹೊಂದಿವೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಕಿಯಾ ಸೊನೆಟ್ ಹಿಂಭಾಗವು ಹಾರ್ಟ್ ಬೀಟ್ ಎಲ್‌ಇಡಿ ಟೇಲ್ ಲೈಟ್‌ಗಳನ್ನು ಹೊಂದಿದೆ. ಬೂಟ್ ಲಿಡ್ ಎಡ ಟೇಲ್ ಲ್ಯಾಂಪ್ ಕೆಳಗೆ ಸೊನೆಟ್ ಅನ್ನು ಕಾಣಬಹುದು. ಯಾವ ಮಾದರಿ ಎಂಬುವುದನ್ನೂ ಬಲಭಾಗದಲ್ಲಿ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಕಿಯಾ ಸೊನೆಟ್ ಹಿಂಭಾಗದಲ್ಲಿ ರೂಫ್ ಮೌಂಟೆಡ್ ಸ್ಪಾಯ್ಲರ್ ಜೊತೆಗೆ ಎಲ್ಇಡಿ ಸ್ಟಾಪ್ ಲೈಟ್ ಅನ್ನು ಸಹ ಕಾಣಬಹುದು. ಹಿಂಭಾಗದ ಬಂಪರ್ ಕಪ್ಪು ಬಣ್ಣವನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಕಿಯಾಸೊನೆಟ್ ಇಂಟಿರಿಯರ್

ಇನ್ನು ಕಿಯಾ ಸೊನೆಟ್‌ನ ಇಂಟಿರಿಯರ್ ಕೂಡಾ ಆಕರ್ಷಕವಾಗಿದ್ದು, ಇನ್ಫೋಟೈನ್‌ಮೆಂಟ್ ಯುನಿಟ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಹಾಗೂ ಡ್ಯಾಶ್ ಬೋರ್ಡ್ ಗಳನ್ನು ನೀಡಲಾಗಿದೆ. ಇವುಗಳು ಪ್ರೀಮಿಯಂ ಫೀಲ್ ನೀಡುತ್ತವೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಕಿಯಾ ಸೊನೆಟ್ ಫ್ಲಾಟ್-ಬಾಟಮ್ ನ ಸೊಗಸಾದ ಮೂರು-ಸ್ಪೀಕ್ ಸ್ಟೀಯರಿಂಗ್ ವ್ಹೀಲ್ ಗಳನ್ನು ಹೊಂದಿದೆ. ಈ ಸ್ಟೀಯರಿಂಗ್ ವ್ಹೀಲ್ ನಲ್ಲಿ ಸಿಲ್ವರ್ ಅಸೆಂಟ್ ನಲ್ಲಿರುವ ಜಿಟಿ-ಲೈನ್ ಬ್ಯಾಡ್ಜಿಂಗ್‌ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಈ ಸ್ಟೀಯರಿಂಗ್ ವ್ಹೀಲ್ ರೇನ್-ವೈಪರ್‌, ಟರ್ನ್ ಸಿಗ್ನಲ್ ಇಂಡಿಕೇಟರ್ ಹಾಗೂ ಹೆಡ್‌ಲ್ಯಾಂಪ್ ನಂತಹ ಫೀಚರ್ ಗಳನ್ನು ಕಂಟ್ರೋಲ್ ಮಾಡುತ್ತದೆ. ಇದರ ಜೊತೆಗೆ ಡ್ರೈವರ್ ಸುಲಭವಾಗಿ ತಲುಪಬಲ್ಲ ಬಟನ್ ಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಈ ಬಟನ್ ಗಳು ಆಡಿಯೋ, ಕಾಲ್ ಹಾಗೂ ವಾಲ್ಯೂಮ್ ರಾಕರ್ಸ್ ಸೇರಿದಂತೆ ಸೊನೆಟ್ ನಲ್ಲಿರುವ ಹಲವು ಫಂಕ್ಷನ್ ಗಳನ್ನು ಕಂಟ್ರೋಲ್ ಮಾಡುತ್ತವೆ. ಕ್ರೂಸ್ ಕಂಟ್ರೋಲ್ ಹಾಗೂ ಟಾಗಲ್‌ಗಳಂತಹ ಇತರ ಚಾಲಕ ಸಹಾಯ ಫೀಚರ್ ಗಳನ್ನು ಸಹ ಈ ಬಟನ್ ಕಂಟ್ರೋಲ್ ಮಾಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಕಿಯಾ ಸೊನೆಟ್ ಡಿಜಿಟಲ್ ಸ್ಪೀಡೋಮೀಟರ್ ಜೊತೆಗೆ ಮಧ್ಯದಲ್ಲಿ ಲ್ಲಿ 4.2-ಇಂಚಿನ ಡಿಜಿಟಲ್ ಡಿಸ್ ಪ್ಲೇಯನ್ನು ಹೊಂದಿದೆ. ಕನ್ಸೋಲ್‌ನ ಎರಡೂ ತುದಿಗಳಲ್ಲಿ ಟ್ಯಾಚೋಮೀಟರ್, ಫ್ಯೂಯಲ್ ಹಾಗೂ ಟೆಂಪರೇಚರ್ ಡಯಲ್‌ಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಕಿಯಾ ಸೊನೆಟ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ. ಈ ಸಿಸ್ಟಂ ಬ್ಲೂಟೂತ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಹಾಗೂ ಕಂಪನಿಯ ಯುವೊ ಕನೆಕ್ಟೆಡ್ ಟೆಕ್ನಾಲಜಿ ಮೂಲಕ ಆಡಿಯೋ, ನ್ಯಾವಿಗೇಷನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಯುವಿಒ ಕನೆಕ್ಟೆಡ್ ಟೆಕ್ನಾಲಜಿಯಲ್ಲಿ ವಾಯ್ಸ್ ರೆಕಗ್ನಿಷನ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಜಿಯೋಫೆನ್ಸಿಂಗ್, ರಿಮೋಟ್ ಕ್ಲೈಮೇಟ್ ಕಂಟ್ರೋಲ್ಸ್, ರಿಮೋಟ್ ಇಗ್ನಿಷನ್ ಓವರ್-ದಿ-ಏರ್ ಅಪ್ ಡೇಟ್ ಹಾಗೂ ಸ್ಮಾರ್ಟ್ ವಾಚ್ ಕನೆಕ್ಟಿವಿಟಿಗಳು ಸೇರಿವೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಕಿಯಾ ಸೊನೆಟ್‌ನಲ್ಲಿ ಸ್ನೋ, ಮಡ್, ಸ್ಯಾಂಡ್ ಎಂಬ ಮೂರು ರೀತಿಯ ಟ್ರಾಕ್ಷನ್ ಮೋಡ್ ಹಾಗೂ ನಾರ್ಮಲ್, ಇಕೊ, ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ಇದರ ಜೊತೆಗೆ ವೈರ್ ಲೆಸ್ ಚಾರ್ಜಿಂಗ್ ಪ್ಯಾಡ್, ಯುಎಸ್ ಬಿ ಪೋರ್ಟ್ ಹಾಗೂ 12 ವೋಲ್ಟ್ ಸಾಕೆಟ್ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಕಾರು ಮಾದರಿಗಳು

ಕಿಯಾ ಸೊನೆಟ್ ಅನ್ನು ಟೆಕ್-ಲೈನ್ ಹಾಗೂ ಜಿಟಿ-ಲೈನ್ ಎರಡು ಮಾದರಿಗಳಲ್ಲಿ ಹಾಗೂ ಹೆಚ್ ಟಿಇ, ಹೆಚ್ ಟಿಕೆ, ಹೆಚ್ ಟಿಕೆ ಪ್ಲಸ್, ಹೆಚ್ ಟಿಎಕ್ಸ್, ಹೆಚ್ ಟಿಎಕ್ಸ್ ಪ್ಲಸ್ ಹಾಗೂ ಜಿಟಿಎಕ್ಸ್ ಪ್ಲಸ್ ಎಂಬ ಆರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಸುರಕ್ಷತಾ ಫೀಚರ್ ಗಳು

ಆರು ಏರ್‌ಬ್ಯಾಗ್‌

ಇಬಿಡಿಹೊಂದಿರುವ ಎಬಿಎಸ್

ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ)

ಬ್ರೇಕ್ ಅಸಿಸ್ಟ್

ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್

ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ಲಾಕ್

ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್

ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್

ರೇರ್ ವೀವ್ ಪಾರ್ಕಿಂಗ್ ಕ್ಯಾಮೆರಾ

ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ ಗಳನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಎಂಜಿನ್ ಹಾಗೂ ಪರ್ಫಾಮೆನ್ಸ್

ಕಿಯಾ ಸೊನೆಟ್ ಅನ್ನು, 1.2-ಲೀಟರಿನ ನ್ಯಾಚುರಲಿ ಆಸ್ಪೀರೆಟೆಡ್ ಪೆಟ್ರೋಲ್ ಎಂಜಿನ್, 1.0-ಲೀಟರಿನ ಮೂರು ಸಿಲಿಂಡರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಸಿಆರ್ ಡಿ ಡೀಸೆಲ್ ಎಂಜಿನ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಇದರಲ್ಲಿ 1.2-ನ್ಯಾಚುರಲಿ ಆಸ್ಪೀರೆಟೆಡ್ ಪೆಟ್ರೋಲ್ ಎಂಜಿನ್ 83 ಬಿಹೆಚ್‌ಪಿ ಪವರ್ ಹಾಗೂ 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಐದು-ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

1.0-ಲೀಟರಿನ ಮೂರು ಸಿಲಿಂಡರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ 120 ಬಿಹೆಚ್‌ಪಿ ಪವರ್ ಹಾಗೂ 172 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಟರ್ಬೊ-ಪೆಟ್ರೋಲ್ ಎಂಜಿನ್ ಆರು-ಸ್ಪೀಡಿನ ಇಂಟೆಲಿಜೆಂಟ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹಾಗೂ ಏಳು-ಸ್ಪೀಡಿನ ಡಿಸಿಟಿ ಗೇರ್‌ಬಾಕ್ಸ್ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

1.5-ಲೀಟರಿನ ಸಿಆರ್ ಡಿ ಡೀಸೆಲ್ ಎಂಜಿನ್ ಎರಡು ರೀತಿಯ ಟ್ಯೂನ್ ಹೊಂದಿರಲಿದೆ. ಲೋವರ್ ಟ್ಯೂನ್ ಎಂಜಿನ್ 110 ಬಿಹೆಚ್‌ಪಿ ಪವರ್ ಹಾಗೂ 240 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ ಆರು-ಸ್ಪೀಡಿನ ಮ್ಯಾನುವಲ್‌ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಹೈ ಟ್ಯೂನ್ ಎಂಜಿನ್ 115 ಬಿಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ ಆರು-ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ನಾವು ಚಾಲನೆ ಮಾಡಿದ ಜಿಟಿಎಕ್ಸ್ ಪ್ಲಸ್ ಮಾದರಿಯು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳನ್ನು ಹೊಂದಿದೆ. 1.5-ಲೀಟರಿನ ಡೀಸೆಲ್ ಎಂಜಿನ್ 115 ಬಿಹೆಚ್‌ಪಿ ಉತ್ಪಾದಿಸಿದರೆ, 1.0 ಲೀಟರಿನ ಟಿ-ಜಿಡಿಐ ಪೆಟ್ರೋಲ್ ಎಂಜಿನ್ 120 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಬೆಲೆ, ಬಣ್ಣಗಳು

ಕಿಯಾ ಸೊನೆಟ್ ಎಸ್‌ಯುವಿ ಕಾರು ಈ ತಿಂಗಳ 18ಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಸೊನೆಟ್‌ನ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ಆರಂಭಿಕವಾಗಿ ರೂ.8 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯು ರೂ. 12 ಲಕ್ಷಗಳಾಗಿರುವ ಸಾಧ್ಯತೆಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಕಿಯಾ ಮೋಟಾರ್ಸ್ ಈ ಹೊಸ ಕಂಪ್ಯಾಕ್ಟ್-ಎಸ್‌ಯುವಿಗಾಗಿ ಪ್ರೀ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಆನ್‌ಲೈನ್ ಮೂಲಕ ಅಥವಾ ದೇಶಾದ್ಯಂತವಿರುವ ಕಂಪನಿಯ ಡೀಲರ್ ಗಳ ಬಳಿ ರೂ.25,000 ಪಾವತಿಸಿ ಕಾರು ಖರೀದಿಗೆ ಬುಕ್ಕಿಂಗ್ ಮಾಡಬಹುದು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಕಿಯಾ ಸೊನೆಟ್ ಬಿಡುಗಡೆಯಾದ ತಕ್ಷಣ ಈ ಎಸ್‌ಯುವಿಯ ವಿತರಣೆಯನ್ನು ಆರಂಭಿಸಲು ಸಜ್ಜಾಗಿದ್ದು, ಹೊಸ ಕಾರು ಇಂಟೆನ್ಸ್ ರೆಡ್, ಬೀಜ್ ಗೋಲ್ಡ್, ಅರೋರಾ ಬ್ಲ್ಯಾಕ್ ಪರ್ಲ್, ಗ್ರಾವಿಟಿ ಗ್ರೇ, ಸ್ಟೀಲ್ ಸಿಲ್ವರ್, ಇಂಟೆಲಿಜೆನ್ಸಿ ಬ್ಲೂ, ಗ್ಲೇಸಿಯರ್ ವೈಟ್ ಪರ್ಲ್ ಹಾಗೂ ಕ್ಲಿಯರ್ ವೈಟ್ ಎಂಟು ಮೊನೊ-ಟೋನ್ ಬಣ್ಣಗಳಲ್ಲಿ ಹಾಗೂ ಇಂಟೆನ್ಸ್ ರೆಡ್ / ಅರೋರಾ ಬ್ಲಾಕ್ ಪರ್ಲ್, ಬೀಜ್ ಗೋಲ್ಡ್ / ಅರೋರಾ ಬ್ಲಾಕ್ ಪರ್ಲ್ ಹಾಗೂ ಗ್ಲೇಸಿಯರ್ ವೈಟ್ ಪರ್ಲ್ /ಅರೋರಾ ಬ್ಲಾಕ್ ಪರ್ಲ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಪ್ರತಿ ಸ್ಪರ್ಧೆ

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಈ ಎಸ್‌ಯುವಿಯು ಸಬ್ -4-ಮೀಟರ್ ಕಾಂಪ್ಯಾಕ್ಟ್-ಎಸ್‌ಯುವಿ ಸೆಗ್ ಮೆಂಟಿನಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಹಾಗೂ ಮಹೀಂದ್ರಾ ಎಕ್ಸ್‌ಯುವಿ 300 ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಕಿಯಾ ಸೊನೆಟ್?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಒಟ್ಟಾರೆಯಾಗಿ, ಕಿಯಾ ಸೊನೆಟ್ ಅತ್ಯುತ್ತಮವಾದ ಮೊದಲ ಆಕರ್ಷಣೆಯನ್ನು ಸೃಷ್ಟಿಸುತ್ತದೆ. ಕಾರು ಅತ್ಯಂತ ಸ್ಟೈಲಿಶ್ ಆಗಿದ್ದು, ಪ್ರೀಮಿಯಂ ಫೀಲ್ ನೀಡುತ್ತದೆ. ಜೊತೆಗೆ ಆತ್ಮವಿಶ್ವಾಸದ ಡ್ರೈವ್ ಅನ್ನು ಸಹ ನೀಡುತ್ತದೆ. ಫನ್-ಟು-ಡ್ರೈವ್ ಸ್ಪೋರ್ಟಿ ಎಸ್‌ಯುವಿ ಮಾದರಿಯಾರುವ ಹೊಸ ಕಾರು ಹಲವಾರು ಫೀಚರ್ ಹಾಗೂ ಟೆಕ್ನಾಲಜಿಯೊಂದಿಗೆ ಆರಾಮದಾಯಕ ಮತ್ತು ಸುರಕ್ಷಿತ ಚಾಲನೆ ಸಹಕಾರಿಯಾಗಿದೆ ಎನ್ನಬಹುದು.

Most Read Articles

Kannada
English summary
Kia Sonet First drive review. Read in Kannada.
Story first published: Friday, September 11, 2020, 19:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X