ಬಹುನಿರೀಕ್ಷಿತ ಹೊಸ ಸಿಟ್ರನ್ eC3 ಎಲೆಕ್ಟ್ರಿಕ್ ಕಾರಿನ ರಿವ್ಯೂ

ಪ್ರಮುಖ ಫ್ರೆಂಚ್ ಕಾರು ತಯಾರಕ ಕಂಪನಿ ಸಿಟ್ರನ್ 'ಸಿ5 ಏರ್‌ಕ್ರಾಸ್‌'ನೊಂದಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಸಿತು. ನಮ್ಮ ರಸ್ತೆಗಳಲ್ಲಿ ಸಂಚರಿಸಲು ಯೋಗ್ಯವಾಗಿರುವಂತೆ ಈ ಕಾರನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿತ್ತು. ಕಳೆದ ವರ್ಷ, ಕಂಪನಿಯು ಸಿ3 ಕ್ರಾಸ್‌ಒವರ್ ಹ್ಯಾಚ್‌ಬ್ಯಾಕ್‌ ಅನ್ನು ಪರಿಚಯಿಸಿತು. ಇದರಲ್ಲಿ ಜನರು ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿತ್ತು.

ಇಂಧನ ಚಾಲಿತ ಸಿ3 ಬಿಡುಗಡೆಯ ಸಮಯದಲ್ಲಿ, ಈ ಹೊಸ ಹ್ಯಾಚ್‌ಬ್ಯಾಕ್‌ ಅನ್ನು ಎಲೆಕ್ಟ್ರಿಕ್ ಆವೃತ್ತಿಯಾಗಿ ಮಾರುಕಟ್ಟೆಗೆ ತರುವುದಾಗಿ ಘೋಷಣೆ ಮಾಡಿತ್ತು. ತಾನು ನೀಡಿದ ಭರವಸೆಯಂತೆ ಸಿಟ್ರನ್ ಇಸಿ3 (Citroen eC3) ಎಲೆಕ್ಟ್ರಿಕ್ ಕಾರನ್ನು ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಹಾಗಾದರೆ ಈ ಕಾರು, ಜನಸಾಮಾನ್ಯರನ್ನು ಆಕರ್ಷಿಸಲಿದೆಯೇ? ದೇಶದ ಪ್ರಮುಖ ವಾಹನ ತಯಾರಕ ಟಾಟಾ ಮೋಟಾರ್ಸ್ ತಯಾರಿಸುವ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡಲಿದೆಯೇ.. ಇದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲು ಹೊಸ ಸಿಟ್ರನ್ ಇಸಿ3 ಕಾರನ್ನು ಚೆನ್ನೈನಲ್ಲಿ ಟೆಸ್ಟ್ ಡ್ರೈವ್ ನಡೆಸಲಾಯಿತು.

ಟಾಟಾ ಪಂಚ್ ಅಬ್ಬರ: 15 ತಿಂಗಳಲ್ಲೇ ಹೊಸ ದಾಖಲೆ

ಸಿಟ್ರನ್ ಇಸಿ3 ವಿನ್ಯಾಸ, ವೈಶಿಷ್ಟ್ಯಗಳು ಹೇಗೆವೆ:
ನೂತನ ಸಿಟ್ರನ್ eC3 ಅನ್ನು ಅದರ ಡಿನೋ-ಬರ್ನಿಂಗ್ ಸಿಬ್ಲಿಂಗ್ (ಸಿಟ್ರನ್ ಸಿ3) ಪಕ್ಕದಲ್ಲಿ ನಿಲ್ಲಿಸಿದರೆ ಏನು ಬದಲಾಗಿದೆ ಎಂಬುದನ್ನು ಕಂಡುಹಿಡಿಯಲು ಸಾಕಷ್ಟು ಕಷ್ಟವಾಗಲಿದೆ. ಕೆಲವರು ಇದಕ್ಕೆ ಟೀಕೆಗಳನ್ನು ಮಾಡಿದ್ದಾರೆ. ಬಹುತೇಕ ನೂತನ ಸಿಟ್ರನ್ ಇಸಿ3 ವಿನ್ಯಾಸ ಅದರ ಹಿಂದಿನ ಮಾದರಿ ಸಿಟ್ರನ್ ಸಿ3ಗೆ ಹೋಲುತ್ತದೆ. ಮುಂಭಾಗದಲ್ಲಿ, ಸಿಟ್ರನ್ ಬ್ಯಾಡ್ಜ್‌ನ ಟ್ವಿನ್ ಚೆವ್ರಾನ್‌ಗಳು ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್‌ಗೆ ಸಂಪರ್ಕ ಹೊಂದಿದೆ. ಅಪ್ಪರ್ ಬಾರ್‌ಗಳು DRLಗಳೊಂದಿಗೆ ಕೂಡಿಕೊಂಡಿವೆ. ಆದರೆ, ಲೋಯರ್ ಆರ್ಮಸ್ ಹೆಡ್‌ಲ್ಯಾಂಪ್‌ಗಳ ಪಕ್ಕದಲ್ಲಿ DRLಗಳ ಜೊತೆ ಕೊನೆಗೊಳ್ಳುತ್ತದೆ.

ಈ ಕಾರಿನ ಮುಂಭಾಗದ ಬಂಪರ್‌ ಬ್ಲ್ಯಾಕ್ ಪ್ಲಾಸ್ಟಿಕ್ ಹೊದಿಕೆಯನ್ನು ಹೊಂದಿದ್ದು, ಅದರ ಕೆಳಗೆ ಫಾಗ್ ಲೈಟ್ಸ್ ಕಾಣಬಹದು. ಜೊತೆಗೆ ಇಸಿ3 ಕಾರಿನ ಬಂಪರ್ ಪೋಲಾರ್ ವೈಟ್ ಎಂಬ ಹೊಸ ಬಣ್ಣದಲ್ಲಿ ಕವರ್ ಆಗಿದೆ. 'ಪೋಲಾರ್ ವೈಟ್' ಇಸಿ3ಗಾಗಿ ಅದರ ಹೊಸ ಡ್ಯುಯಲ್-ಟೋನ್ ಥೀಮ್‌ಗಳಿಗಾಗಿ ಆಯ್ಕೆ ಮಾಡಬಹುದಾದ ಬಣ್ಣವಾಗಿದೆ. ಅಲ್ಲದೆ, ಈ ಕಾರಿಗಾಗಿ ಮೂರು ಹೊಸ ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳು ಪೋಲಾರ್ ವೈಟ್ ರೂಫ್ ಅನ್ನು ಹೊಂದಿವೆ. ಜೊತೆಗೆ ಕಾರಿನ ಬಾಡಿಯ ಬಹುತೇಕ ಭಾಗವು ಝೆಸ್ಟಿ ಆರೆಂಜ್, ಪ್ಲಾಟಿನಂ ಗ್ರೇ, ಸ್ಟೀಲ್ ಗ್ರೇ ಬಣ್ಣವನ್ನು ಒಳಗೊಂಡಿದೆ.

ಟಾಟಾ ಪಂಚ್ ಅಬ್ಬರ: 15 ತಿಂಗಳಲ್ಲೇ ಹೊಸ ದಾಖಲೆ

ಸದ್ಯ ಪೋಲಾರ್ ವೈಟ್ ಸರೌಂಡ್‌ಗಳು ಮತ್ತು ರೂಫ್ ಅನ್ನು ಸಾಮಾನ್ಯ C3ಯ ಕಸ್ಟಮ್ ಕಾರುಗಳ ಜೊತೆಗೆ ಹೊಸ ಎಲೆಕ್ಟ್ರಿಕ್ ಕಾರಿಗೂ 13 ಬಾಹ್ಯ ಬಣ್ಣ (exterior colour) ಸಂಯೋಜನೆಗಳು, 3 ಪ್ಯಾಕ್‌ಗಳು ಮತ್ತು 47 ಕಸ್ಟಮೈಸೇಶನ್‌ಗಳಲ್ಲಿ ನೀಡಲಾಗುತ್ತದೆ. ಪೋಲಾರ್ ವೈಟ್ ಬಣ್ಣವು ಡೋರ್ ಗಳನ್ನೂ ಸುತ್ತುವರೆದಿರುವುದನ್ನು ಕಾಣಬಹುದು. ಇದರಿಂದ ಇC3 ಎಲೆಕ್ಟ್ರಿಕ್ ಕಾರನ್ನು ಸುಲಭವಾಗಿ ಗುರುತಿಸಬಹುದು. ಡೋರ್ ಗಳನ್ನು ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಬಲಭಾಗದಲ್ಲಿರುವ ಫ್ರಂಟ್ ವೀಲ್ ಅರ್ಚಸ್ ಮೇಲೆ ಚಾರ್ಜಿಂಗ್ ಪೋರ್ಟ್‌ ಡೋರ್ ಇದೆ.

ಸಿಟ್ರನ್ eC3 ಕಾರಿನ ರೇರ್ ಭಾಗವು ಅದರ ಹಿಂದಿನ ಇಂಧನ ಚಾಲಿತ ಸಿ3ಗೆ ಬಹುತೇಕ ಹೋಲುತ್ತದೆ. ಹಿಂಭಾಗದಲ್ಲಿ eC3 ಬ್ಯಾಡ್ಜಿಂಗ್ ನೀವು ಇವಿಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಸುತ್ತಲಿನವರಿಗೆ ತಿಳಿಯುತ್ತದೆ. ಏಕೆಂದರೆ, ನಿಮ್ಮ ಕಾರು ಗ್ರೀನ್ ಬೋರ್ಡ್ ಹೊಂದಿರುತ್ತದೆ. eC3 ಕ್ಯಾಬಿನ್‌ ಗಮನಿಸಿದಾಗ ಗೇರ್ ಲಿವರ್ ಹುಡುಕಬೇಕಾಗಿದೆ. ರೆಗ್ಯುಲರ್ ಶಿಫ್ಟರ್ ಬದಲಿಗೆ, ಸಿಟ್ರಸ್ eC3 ಅನ್ನು ಸುಲಭವಾಗಿ ಡ್ರೈವ್‌ ಮಾಡಲು ನೆರವಾಗಲು ಟಾಗಲ್ ಸ್ವಿಚ್ ಅನ್ನು ಹಾಕಲಾಗಿದೆ. ಈ ಲಿವರ್‌ನ ಪಕ್ಕದಲ್ಲಿ eC3 ಅನ್ನು ಇಕೋ ಮೋಡ್‌ಗೆ ಬದಲಾಯಿಸುವ ಬಟನ್ ಕೂಡ ಇದೆ.

ಟಾಟಾ ಪಂಚ್ ಅಬ್ಬರ: 15 ತಿಂಗಳಲ್ಲೇ ಹೊಸ ದಾಖಲೆ

ಈ ಬದಲಾವಣೆಯನ್ನು ನೋಡಿದ ಮೇಲೆ eC3 ಅಷ್ಟೊಂದು ಚೆನಾಗಿಲ್ಲ ಎಂಬ ತೀರ್ಮಾನಕ್ಕೆ ಬರಬೇಡಿ. ಕ್ಯಾಬಿನ್ ಎಂದಿನಂತೆ ವಿಶಾಲವಾಗಿದೆ. ಒಳಭಾಗ ಅತ್ಯುನ್ನತವಾಗಿದೆ. eC3 10.25-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಇದ್ದು, ಅದು Android Auto ಮತ್ತು Apple CarPlay ಅನ್ನು ಸಂಪರ್ಕಿಸುತ್ತದೆ. 'MyCitroen' ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಸಂಪರ್ಕ ಕಲ್ಪಿಸುವ ಡಿಸ್‌ಪ್ಲೇ ಇದ್ದು, ಪ್ರಯಾಣದಲ್ಲಿರುವಾಗ ಬ್ಯಾಟರಿಯ ಚಾರ್ಜ್ ಸ್ಥಿತಿಯ ಜೊತೆಗೆ ನಿಮ್ಮ ಮಾರ್ಗದಲ್ಲಿ ಪ್ರಮುಖ ಚಾರ್ಜರ್‌ಗಳನ್ನು ಹುಡುಕಲು ನೆರವಾಗುತ್ತದೆ.

ಇತರೇ ವೈಶಿಷ್ಟ್ಯಗಳಲ್ಲಿ ಜಿಯೋಫೆನ್ಸಿಂಗ್, ನಿಮ್ಮ ಕಾರನ್ನು ಕೇವಲ ಒಂದು ಟ್ಯಾಪ್‌ನಲ್ಲಿ ಪತ್ತೆ ಮಾಡುವ ಸಾಮರ್ಥ್ಯ ಹೊಂದಿದ್ದು, ಬೇರೆಯವರು ನಿಮ್ಮ ಕಾರನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದರೆ SOS ಅಲರ್ಟ್ ಸಹ ಇದೆ. eC3ನಲ್ಲಿ ಸೀಟುಗಳು ಎಂದಿನಂತೆ ಆರಾಮದಾಯಕವಾಗಿವೆ. ಆದಾಗ್ಯೂ, ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವುದರಿಂದ ಇವಿಯ ಫ್ಲೋರ್ ಸುಮಾರು 70 ಮಿಮೀ ಎತ್ತರದಲ್ಲಿದೆ. ಬೂಟ್ ಸ್ಪೇಸ್ ವಿಚಾರಕ್ಕೆ ಬಂದರೆ, ಈಗಲೂ ಅದೇ 315-ಲೀಟರ್ ಜಾಗವನ್ನು ಹೊಂದಿದೆ ಎಂದು ಹೇಳಬಹುದು.

ಟಾಟಾ ಪಂಚ್ ಅಬ್ಬರ: 15 ತಿಂಗಳಲ್ಲೇ ಹೊಸ ದಾಖಲೆ

ಸಿಟ್ರನ್ eC3 ಪವರ್‌ಟ್ರೇನ್:
ಸಿಟ್ರನ್ eC3ನಲ್ಲಿನ ದೊಡ್ಡ ಬದಲಾವಣೆಯು ಸಹಜವಾಗಿ ಬಾನೆಟ್ ಮತ್ತು ಹ್ಯಾಚ್‌ಬ್ಯಾಕ್‌ನ ಫ್ಲೋರ್ ಅಡಿಯಲ್ಲಿ ಬರುತ್ತದೆ. eC3 ಫ್ಲೋರ್ ಕೆಳಗೆ ಏರ್-ಕೂಲ್ಡ್ 29.2kwh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಇದ್ದು, ಒಂದೇ ಚಾರ್ಜ್‌ನಲ್ಲಿ 320 ಕಿ.ಮೀ ರೇಂಜ್ ನೀಡುತ್ತದೆ. eC3 ಕಾರು, CCS2 ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಆದ್ದರಿಂದ DC ವೇಗದ ಚಾರ್ಜರ್‌ಗೆ ಕನೆಕ್ಟ್ ಮಾಡಿದಾಗ eC3ಯ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಕೇವಲ 57 ನಿಮಿಷಗಳಲ್ಲಿ 10 ರಿಂದ 80% ಚಾರ್ಜ್ ಆಗುತ್ತದೆ. ಮನೆಯಲ್ಲಿ 15A ಸಾಕೆಟ್‌ಗೆ ಕನೆಕ್ಟ್ ಮಾಡಲಾದ 3.3kW ಆನ್-ಬೋರ್ಡ್ ಚಾರ್ಜರ್‌ನೊಂದಿಗೆ ಚಾರ್ಜಿಂಗ್ ಆಗಲು 10 ಗಂಟೆ 30 ನಿಮಿಷ ಬೇಕಾಗಬಹುದು.

ಬ್ಯಾಟರಿ ಪ್ಯಾಕ್‌ನ ಸೇರ್ಪಡೆಯಿಂದ ಅದರ ಹಿಂದಿನ ಮಾದರಿಗೆ ಹೋಲಿಸಿದರೆ, ಈ ಎಲೆಕ್ಟ್ರಿಕ್ ಕಾರು, ತೂಕದಲ್ಲಿ ಸುಮಾರು 280kg ಹೆಚ್ಚಳವಾಗಿದೆ. eC3 ಕಾರಿನ ತೂಕ ಬರೋಬ್ಬರಿ 1,316 kg ಇದೆ. ಗ್ರೌಂಡ್ ಕ್ಲಿಯರೆನ್ಸ್ ಕೂಡ 10 ಎಂಎಂನಿಂದ 170 ಎಂಎಂ ಕಡಿಮೆಯಾಗಿದೆ. ಬ್ಯಾಟರಿ ಪ್ಯಾಕ್ eC3 ನ ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟರ್‌ಗೆ ಪವರ್ ಒದಗಿಸತ್ತದೆ. ಇದರ ಮೋಟಾರ್ 56.2 bhp ಗರಿಷ್ಠ ಪವರ್ ಮತ್ತು 143 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಟಾಟಾ ಪಂಚ್ ಅಬ್ಬರ: 15 ತಿಂಗಳಲ್ಲೇ ಹೊಸ ದಾಖಲೆ

ಸಿಟ್ರಸ್ eC3 ಡ್ರೈವಿಂಗ್ ಇಂಪ್ರೆಷನ್ಸ್:
ಈ ಕಾರಿನಲ್ಲಿ ಗಮನಿಸಬಹುದಾದ ಮೊದಲ ವಿಷಯವೆಂದರೆ ಎಲೆಕ್ಟ್ರಿಕ್ ಡ್ರೈವ್‌ಟ್ರೇನ್ ಸೈಲೆಂಟ್ ಇರುವುದು. ಒಟ್ಟಾರೆ NVH (ನಾಯ್ಸ್, ವೈಬ್ರೆಷನ್ & ಹರ್ಶ್ನೆಸ್) ಮಟ್ಟಗಳು ICE ಚಾಲಿತ C3 ಕಾರಿಗಿಂದ ಉತ್ತಮವಾಗಿದೆ. eC3 ಅತ್ಯಂತ ಕಡಿಮೆ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದರೂ 143 Nm ಗರಿಷ್ಠ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 107km/h ಟಾಪ್ ಸ್ವೀಡ್ ಹೊಂದಿದೆ. ಈ ಕಾರು ಎರಡು ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ. ಅವುಗಳೆಂದರೆ, ಇಕೋ ಮತ್ತು ಸ್ಟ್ಯಾಂಡರ್ಡ್. ಆದರೂ ಎರಡರ ನಡುವಿನ ವ್ಯತ್ಯಾಸವು ನಿಜವಾಗಿಯೂ ಅಷ್ಟಾಗಿ ಹೆಚ್ಚಿಲ್ಲ. ಹೈಪರ್‌ಮೈಲಿಂಗ್‌ನಲ್ಲಿ ಹೊರತುಪಡಿಸಿ, ಪ್ರತಿಯೊಂದು ಸಂದರ್ಭದಲ್ಲೂ ಸ್ಟ್ಯಾಂಡರ್ಡ್‌ನಲ್ಲಿ ಮೋಡ್ ನಲ್ಲಿ ಇರುತ್ತೀರಿ.

ಸಿಟ್ರಸ್ eC3 ಅನ್ನು ಕಾರಿನಲ್ಲಿ ಫ್ರಂಟ್ ಡಿಸ್ಕ್‌ ಮತ್ತು ರೇರ್ ಡ್ರಮ್‌ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ರೀಜೆನ್ ಬ್ರೇಕಿಂಗ್ ಈ ಕಾರನ್ನು ಅನ್ನು ಸ್ವಲ್ಪಮಟ್ಟಿಗೆ ನಿಧಾನಗೊಳಿಸುತ್ತದೆ. ಬ್ರೇಕ್ ಪೆಡಲ್ ಸ್ವಲ್ಪ ಬಗ್‌ಬೇರ್ ಆಗಿದೆ. ಇದು ಸ್ವಲ್ಪ ಹೆಚ್ಚು ಉದ್ದವಾಗಿದ್ದು, ಆರಂಭಿಕವಾಗಿ ಒಗ್ಗಿಕೊಳ್ಳುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಸಿಟ್ರಸ್ eC3 ಈ ಕಾರಿನ ಖರೀದಿ ಮೇಲೆ ವಾರಂಟಿಗಳನ್ನು ನೀಡುತ್ತಿದೆ. ಸಂಪೂರ್ಣ ಕಾರಿಗೆ 3-ವರ್ಷ/125,000 km ವಾರಂಟಿ ಇದ್ದು, ಮೋಟಾರ್ 5 ವರ್ಷಗಳವರೆಗೆ /100,000 km, ಬ್ಯಾಟರಿ ಪ್ಯಾಕ್ 7 ವರ್ಷಗಳು/140,000 km ವಾರಂಟಿಯನ್ನು ಹೊಂದಿರುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಸಿಟ್ರಸ್ eC3, ICE ಚಾಲಿತ ಸಿ3 ಕಾರಿಗೆ ಹೋಲಿಸಿದರೆ ಈವಿ ಪವರ್‌ಟ್ರೇನ್‌ನ ಸೈಲೆಂಟ್ ಇದೆ. ಇದರ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯ ಗ್ರಾಹಕರಿಗೆ ಇಷ್ಟವಾಗವಾಗುದು. ಇದು ಸರಿಯಾದ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆಯಾದರೆ, ಕಡಿಮೆ ಬೆಲೆಯ ಟಾಟಾ ಟಿಯಾಗೊ ಇವಿಗೆ ಪ್ರತಿಸ್ಪರ್ಧಿಯಾಗಬಹುದು. ಸಿಟ್ರನ್ eC3 ಬೆಲೆ ರೂ.10 -12 ಲಕ್ಷ (ಎಕ್ಸ್ ಶೋ ರೂಂ) ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮುಂಬರುವ ದಿನಗಳಲ್ಲಿ ಕಂಪನಿ ಘೋಷಿಸಲಿದೆ. ನಾಳೆಯಿಂದ (ಜನವರಿ 22) ಬುಕಿಂಗ್ ಆರಂಭವಾಗಲಿದೆ.

Most Read Articles

Kannada
English summary
Low price and high range citroen ec3 review
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X