ಫಸ್ಟ್ ಡ್ರೈವ್ ರಿವ್ಯೂ: ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಹೆಕ್ಟರ್ ಎಸ್‌ಯುವಿ ಮೂಲಕ ಭಾರತದಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಇದೀಗ ನಾಲ್ಕನೇ ಕಾರು ಮಾದರಿಯ ಬಿಡುಗಡೆಗೆ ಸಿದ್ದವಾಗಿದ್ದು, ಹೆಕ್ಟರ್, ಹೆಕ್ಟರ್ ಪ್ಲಸ್, ಜೆಡ್ಎಸ್ ಎಲೆಕ್ಟ್ರಿಕ್ ನಂತರ ಗ್ಲೊಸ್ಟರ್ ಫುಲ್ ಸೈಜ್ ಎಸ್‌ಯುವಿ ಮಾದರಿಯನ್ನು ರಸ್ತೆಗಿಳಿಸುತ್ತಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆ ಅರಿತಿರುವ ಎಂಜಿ ಮೋಟಾರ್ ಕಂಪನಿಯು ವಿವಿಧ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುತ್ತಿದ್ದು, ಹೆಕ್ಟರ್, ಹೆಕ್ಟರ್ ಪ್ಲಸ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಇದೀಗ ಫುಲ್ ಸೈಜ್ ಎಸ್‌ಯುವಿ ಕಾರು ಮಾದರಿಯಾದ ಗ್ಲೊಸ್ಟರ್ ಮೂಲಕ ಮತ್ತೊಂದು ಹಂತದ ಬೆಳವಣಿಗೆಯತ್ತ ಮಹತ್ವದ ಹೆಜ್ಜೆಯಿರಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಆಫ್-ರೋಡ್ ಜೊತೆಗೆ ಐಷಾರಾಮಿ ಎಸ್‌ಯುವಿ ಕಾರು ಮಾದರಿಗಳ ಮಾರಾಟದಲ್ಲೂ ಗಮನಸೆಳೆಯಬಹುದಾದ ಆವೃತ್ತಿಯೊಂದನ್ನು ಅಭಿವೃದ್ದಿಗೊಳಿಸಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದ ಗ್ಲೊಸ್ಟರ್ ಕಾರು ಮಾದರಿಯನ್ನು ಇದೀಗ ಅಧಿಕೃತವಾಗಿ ಬಿಡುಗಡೆ ಮಾಡುತ್ತಿರುವ ಎಂಜಿ ಮೋಟಾರ್ ಕಂಪನಿಯು ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಅನಾವರಣಗೊಳಿಸಿದ್ದ ಮಾದರಿಯನ್ನೇ ಉತ್ಪಾದನಾ ಆವೃತ್ತಿಯಲ್ಲಿ ಯಾವುದೇ ಬದಲಾಣೆಯಿಲ್ಲದೆ ಅಭಿವೃದ್ದಿಗೊಳಿಸಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಎಸ್‌ಯುವಿ ಪ್ರಿಯರ ಬೇಡಿಕೆಯೆಂತೆ ಹಲವಾರು ಸುಧಾರಿತ ತಂತ್ರಜ್ಞಾನಗಳೊಂದಿಗೆ ಹೊಸ ಗ್ಲೊಸ್ಟರ್ ಎಸ್‌ಯುವಿ ನಿಗದಿತ ಮಟ್ಟದ ಬೆಲೆ ಅಂತರದಲ್ಲಿ ಅಭಿವೃದ್ದಿಗೊಳಿಸುವಲ್ಲಿ ಯಶಸ್ವಿಯಾಗಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಾರು ಬಿಡುಗಡೆಗೂ ಮುನ್ನ ಡ್ರೈವ್‌ಸ್ಪಾರ್ಕ್ ತಂಡಕ್ಕೆ ಫಸ್ಟ್ ಡ್ರೈವ್ ಕಲ್ಪಿಸಿತ್ತು. ಫಸ್ಟ್ ಡ್ರೈವ್ ಚಾಲನೆಗೆ 4x4 ಡ್ರೈವ್ ಸಿಸ್ಟಂ ಮಾದರಿಯನ್ನು ಹಸ್ತಾಂತರ ಮಾಡಿದ್ದ ಎಂಜಿ ಮೋಟಾರ್ ಕಂಪನಿಯು ಕರೋನಾ ವೈರಸ್ ಭೀತಿ ನಡೆಯುವ ಸುರಕ್ಷಿತ ಕಾರು ಚಾಲನೆಗೆ ಅನುವು ಮಾಡಿಕೊಡಿತ್ತು.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಹಾಗಾದ್ರೆ ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಯಲ್ಲಿ ಹೊಸ ಸಂಚಲನ ಸೃಷ್ಠಿಸಲು ಸಜ್ಜಾಗಿರುವ ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯು ಎಂಜಿ ನಿರ್ಮಾಣದ ಇತರೆ ಕಾರುಗಳಿಂತ ಹೇಗೆ ಭಿನ್ನವಾಗಿದೆ? ಪ್ರತಿಸ್ಪರ್ಧಿ ಕಾರುಗಳ ಮುಂದೆ ಗ್ಲೊಸ್ಟರ್‌ ಕಾರಿನಲ್ಲಿ ಗಮನಸೆಳೆಯುವ ಅಂಶಗಳು ಯಾವವು? ಹೀಗೆ ಹಲವಾರು ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸಲು ಪ್ರಯತ್ನಿಸಿದ್ದೇವೆ

ಗೊಸ್ಟರ್ ಹೊರ ವಿನ್ಯಾಸ

ಹೊಚ್ಚ ಹೊಸ ಗ್ಲೊಸ್ಟರ್ ಎಸ್‌ಯುವಿಯು ಕಾರು ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಮ್ಯಾಕ್ಸಸ್ ಡಿ90 ಎಸ್‌ಯುವಿಯನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಹೊಸ ಕಾರು 5,005-ಎಂಎಂ ಉದ್ದ, 1,932-ಎಂಎಂ ಅಗಲ, 1,875-ಎಂಎಂ ಎತ್ತರ ಮತ್ತು 2,950-ಎಂಎಂ ವ್ಹೀಲ್ ಬೇಸ್ ಹೊಂದಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್ ಎಸ್‌ಯುವಿಯು ಮುಂಭಾಗದಲ್ಲಿ ಫುಲ್ ಎಲ್ಇಡಿ ಟೆಕ್ ಬ್ಯಾಡ್ಜ್ ಹೊಂದಿರುವ ಹೆಡ್‌ಲೈಟ್ ಯೂನಿಟ್, ಎಲ್ಇಡಿ ಡಿಆರ್ ಎಲ್ ಹೊಂದಿರುವ ಟರ್ನ್ ಇಂಡಿಕೇಟರ್, ಫಾಗ್ ಲ್ಯಾಂಪ್ ಗಳ ಬದಲು ಹ್ಯಾಲೊಜೆನ್ ಬಲ್ಬ್ ಸೆಟಪ್ ಗಳನ್ನು ಹೊಂದಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್ ಎಸ್‌ಯುವಿಯಲ್ಲಿ ಬ್ರಷ್ಡ್ ಅಲ್ಯುಮಿನಿಯಂ ಬಣ್ಣದ ಮೂರು ಹಾರಿಜೆಂಟಲ್ ಸ್ಲಾಟ್‌ಗಳನ್ನು ಹೊಂದಿರುವ ದೊಡ್ಡ ಗ್ರಿಲ್ ಅಳವಡಿಸಲಾಗಿದ್ದು, ಗ್ರಿಲ್ ಸುತ್ತಲೂ ಹೆಡ್‌ಲೈಟ್ ಒಳಗೆ ಹಾಗೂ ಮುಂಭಾಗದ ಬಂಪರ್‌ನ ಮೇಲೆ ಕ್ರೋಮ್ ಬಣ್ಣವನ್ನು ನೀಡಿರುವುದು ಆಕರ್ಷಕವಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಹೊಸ ಕಾರಿನ ಎಸ್‌ಯುವಿಯ ಎರಡೂ ಬದಿಗಳಲ್ಲಿ ಬ್ರಿಟ್ ಡೈನಾಮಿಕ್ ಬ್ಯಾಡ್ಜ್ ಅಳವಡಿಸಲಾಗಿದ್ದು, ಈ ಎಸ್‌ಯುವಿಯಲ್ಲಿ 19 ಇಂಚಿನ ಡ್ಯುಯಲ್ ಟೋನ್ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ. ವಾಹನದ ಒಟ್ಟಾರೆ ಗಾತ್ರಕ್ಕೆ ಹೋಲಿಸಿದರೆ ಈ ಅಲಾಯ್ ವ್ಹೀಲ್‌ಗಳು ಚಿಕ್ಕದಾಗಿ ಕಾಣಲಿದ್ದು, ವಾಹನದ ಗಾತ್ರಕ್ಕೆ ತಕ್ಕಂತೆ 21 ಅಥವಾ 22 ಇಂಚಿನ ವ್ಹೀಲ್ ಗಳನ್ನು ಅಳವಡಿಸಬಹುದಾಗಿದೆ. ದೊಡ್ಡ ಗಾತ್ರದ ವೀಲ್ಹ್‌ಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಹೊಸ ಕಾರಿನಲ್ಲಿ ವಿಸ್ತರಿತ ವೀಲ್ಹ್ ಆರ್ಚ್ ಜೋಡಣೆ ಮಾಡಲಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಹೊಸ ಕಾರಿನ ಒಆರ್ ವಿಎಂಗಳ ಎರಡೂ ಬದಿಯಲ್ಲೂ 360 ಡಿಗ್ರಿ ಕ್ಯಾಮೆರಾವನ್ನು ನೀಡಲಾಗಿದ್ದು, ಈ ಕ್ಯಾಮೆರಾಗಳು ಇಕ್ಕಟ್ಟಾದ ಸ್ಥಳಗಳಲ್ಲೂ ಸುಲಭ ಮತ್ತು ಸುರಕ್ಷಿತವಾಗಿ ಪಾರ್ಕಿಂಗ್ ಮಾಡಲು ಸಾಕಷ್ಟು ಸಹಕಾರಿಯಾಗಿವೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್ ಕಾರಿನ ಹಿಂಭಾಗದಲ್ಲಿ ಸ್ಲೀಕ್ ಎಲ್ಇಡಿ ಟೈಲ್ ಲೈಟ್ ಅಳವಡಿಸಲಾಗಿದ್ದು, ಇದರ ಜೊತೆಗೆ ಬೂಟ್‌ ಮೇಲೆ ದೊಡ್ಡ ಗಾತ್ರದ ಫಾಂಟ್‌ಗಳಲ್ಲಿ ಬರೆಯಲಾದ 'GLOSTER'ಬ್ಯಾಡ್ಜ್ ಕಾರಿನ ಖದರ್ ಹೆಚ್ಚಿಸಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಆದರೆ ಹೊಸ ಕಾರಿನಲ್ಲಿ ರಿಯರ್ ಪಾರ್ಕಿಂಗ್ ಸೌಲಭ್ಯಕ್ಕಾಗಿ ಹೊಸ ಕಾರಿನಲ್ಲಿ ಹೆಚ್‌ಡಿ ಗುಣಮಟ್ಟದ ಕ್ಯಾಮೆರಾ ಸೌಲಭ್ಯವನ್ನು ನೀಡಿಬಹುದೆಂದು ನಿರೀಕ್ಷೆ ಹುಸಿಯಾಗಿದ್ದು, ಸಾಧಾರಣ ಗುಣಮಟ್ಟದ ವಿಡಿಯೋ ಪ್ರೀಮಿಯಂ ಇಷ್ಟಪಡುವ ಗ್ರಾಹಕರಿಗೆ ನಿರಾಶೆ ಉಂಟುಮಾಡಬಹುದು.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಇಂಟಿರಿಯರ್ ಸೌಲಭ್ಯ

ಹೊಸ ಗ್ಲೊಸ್ಟರ್ ಎಸ್‌ಯುವಿಯು ವಿಶಾಲವಾದ ಕ್ಯಾಬಿನ್‌ ವಿನ್ಯಾಸ ಹೊಂದಿದೆ. ಇಂಟಿರಿಯರ್ ನಲ್ಲಿ ಲೆದರ್ ಹಾಗೂ ಸಾಫ್ಟ್ ಟಚ್ ವಸ್ತುಗಳನ್ನು ಬಳಸಲಾಗಿದೆ. ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಜೊತೆಗೆ ಈ ಎಸ್‌ಯುವಿಯಲ್ಲಿ 64 ವಿಭಿನ್ನ ಆಂಬಿಯೆಂಟ್ ಲೈಟ್ ಸೆಟ್ಟಿಂಗ್‌ ಆಯ್ಕೆಗಳನ್ನು ನೀಡಲಾಗುತ್ತದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್ ಕಾರಿನಲ್ಲಿ ಎಸಿ ವೆಂಟ್‌ಗಳನ್ನು ಚಿಕ್ಕದಾಗಿಸಿರುವ ಕಾರಣ ಮುಖದ ಕಡೆಗೆ ಗಾಳಿಯ ಹರಿವು ಕೆಲವೊಮ್ಮೆ ಕಿರಿಕಿರಿ ಉಂಟು ಸಾಧ್ಯತೆಗಳಿದ್ದು, ಡ್ಯಾಶ್‌ಬೋರ್ಡ್‌ನ ಮಧ್ಯದಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಎಸ್‌ಯುವಿಯಲ್ಲಿ ಇಂಟರ್‌ನೆಟ್ ಸೌಲಭ್ಯವನ್ನು ಹೊಂದಿರುವ ಕಾರಣಕ್ಕೆ ಸಂಗೀತ, ನ್ಯಾವಿಗೇಷನ್ ಸೌಲಭ್ಯಗಳನ್ನು ಬಳಸಬಹುದಾಗಿದ್ದು, ಹವಾಮಾನವನ್ನು ಪರಿಶೀಲನೆಯ ಜೊತೆಗೆ ವೀಡಿಯೊಗಳನ್ನು ಸಹ ನೋಡಬಹುದಾಗಿದೆ. ಈ ಸಿಸ್ಟಂ ಆಂಡ್ರಾಯಿಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಗಳನ್ನು ಬೆಂಬಲಿಸುವ ಕಾರಣಕ್ಕಾಗಿ ಚಾಲನೆಯನ್ನು ಮತ್ತಷ್ಟು ಅರಾಮದಾಯಕಗೊಳಿಸುತ್ತದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್‌ ಎಸ್‌ಯುವಿ ಕಾರಿನಲ್ಲಿ ಸೆಮಿ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಎಂಟು ಇಂಚಿನ ಎಲ್ಇಡಿ ಎಂಐಡಿ ಸ್ಕ್ರೀನ್ ಗಳನ್ನು ಜೋಡಿಸಲಾಗಿದ್ದು, ಎಂಐಡಿ ಸ್ಕ್ರೀನ್ ಗಳ ಎರಡೂ ಬದಿಗಳಲ್ಲೂ ಟ್ಯಾಕೋಮೀಟರ್ ಹಾಗೂ ಸ್ಪೀಡೋಮೀಟರ್ ಹೊಂದಿರುತ್ತದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್ ಎಸ್‌ಯುವಿಯು ಮೌಂಟೆಡ್ ಕಂಟ್ರೋಲ್ ಹೊಂದಿರುವ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಹೊಂದಿದ್ದು, ಎಡಭಾಗದಲ್ಲಿರುವ ಬಟನ್ ಗಳನ್ನು ಕ್ರೂಸ್ ಕಂಟ್ರೋಲ್ ಸೆಟ್ಟಿಂಗ್‌ಗಳಿಗಾಗಿ ಹಾಗೂ ಬಲಭಾಗದಲ್ಲಿ ಬಟನ್ ಗಳನ್ನು ಇನ್ಫೋಟೈನ್‌ಮೆಂಟ್ ಸಿಸ್ಟಂ ವಾಯ್ಸ್ ಕಮಾಂಡ್ ಹಾಗೂ ಎಮರ್ಜೆನ್ಸಿ ಹೆಲ್ಪ್ ಲೈನ್ ಕಾಲ್ ಗಳಿಗಾಗಿ ಬಳಕೆ ಮಾಡಬಹುದು.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಇನ್ನು ದೊಡ್ಡ ಗಾತ್ರದ ಗ್ಲೊಸ್ಟರ್‌ ಎಸ್‌ಯುವಿಯು ಗ್ರಾಹಕರ ತಮ್ಮ ಬೇಡಿಕೆಯೆಂತೆ ಆರು ಹಾಗೂ ಏಳು ಸೀಟ್‌ಗಳ ಆವೃತ್ತಿಯನ್ನು ಆಯ್ಕೆ ಮಾಡಬಹುದಾಗಿದ್ದು, ನಾವು ಆರು ಸೀಟುಗಳ ಆವೃತ್ತಿಯನ್ನು ಚಾಲನೆ ಮಾಡಿದೆವು. ಮುಂಭಾಗದಲ್ಲಿರುವ ಎರಡೂ ಸೀಟುಗಳನ್ನು ಎಲೆಕ್ಟ್ರಿಕ್ ಅಡ್ಜಸ್ಟ್ ಮಾಡಬಹುದ್ದು, ಆರಾಮದಾಯಕ ಆಸನ ಸೌಲಭ್ಯ ಇದಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಹಾಗೆಯೇ ಎರಡನೇ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಅಡ್ಜಸ್ಟೆಬಲ್ ಹ್ಯಾಂಡ್‌ರೆಸ್ಟ್ ಹಾಗೂ ಸೈಡ್ ನಲ್ಲಿ ಕಪ್ ಹೋಲ್ಡರ್ ಗಳನ್ನು ಪಡೆದುಕೊಂಡಿದ್ದು, ಲೆಗ್ ರೂಂ ಹಾಗೂ ಬ್ಯಾಕ್‌ರೆಸ್ಟ್‌ಗಾಗಿ ಸೀಟುಗಳನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಹೊಸ ಕಾರಿನಲ್ಲಿ ಎಲ್ಲಾ ಮಾದರಿಯ ಹವಾಗುಣದಲ್ಲೂ ಅನುಕೂಲಕರ ಚಾಲನೆಗಾಗಿ ತ್ರೀ ಜೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಹೊಂದಿದ್ದು, ಮಧ್ಯದ ಸಾಲಿನಲ್ಲಿ ಸೆಂಟರ್ ಎಸಿ ಹಾಗೂ ಏರ್ ಫ್ಲೋ ಗಳನ್ನು ನೀಡಲಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಜೊತೆಗೆ ಮೂರನೇ ಸಾಲಿನಲ್ಲೂ ಸಾಕಷ್ಟು ಹೆಡ್‌ರೂಮ್ ನೀಡಲಾಗಿದ್ದು, ಇದು ಮಕ್ಕಳಿಗೆ ಅಥವಾ ಸಣ್ಣ ಗಾತ್ರದ ವ್ಯಕ್ತಿಗಳಿಗೆ ಸೂಕ್ತವಾಗಿದೆ. ಆದರೆ ಐದು ಅಡಿಗಿಂತಲೂ ಹೆಚ್ಚು ಎತ್ತರದ ಪ್ರಯಾಣಿಕರಿಗೆ ದೂರದ ಪ್ರಯಾಣದ ತುಸು ಅನಾಕೂಲ ಎನ್ನಿಸಬಹುದು.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್‌ ಕಾರಿನಲ್ಲಿ ಎರಡು ಬ್ಯಾಗ್‌ಗಳನ್ನು ಇಡುವಷ್ಟು ಸುಮಾರು 343-ಲೀಟರ್‌‌ನಷ್ಟು ಬೂಟ್ ಸ್ಪೇಸ್ ನೀಡಲಾಗಿದ್ದು, ಒಂದು ವೇಳೆ ಇನ್ನು ಹೆಚ್ಚಿನ ಬೂಟ್ ಸ್ಪೆಸ್ ಅವಶ್ಯಕತೆ ಇದ್ದಲ್ಲಿ ಮೂರನೇ ಸಾಲಿನ ಸೀಟುಗಳನ್ನು ಫೋಲ್ಡ್ ಮಾಡಿ 1,350 ಲೀಟರ್ ನಷ್ಟು ಬೂಟ್ ಸ್ಪೆಸ್ ಪಡೆಯಬಹುದಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಎಂಜಿನ್ ಹಾಗೂ ಫರ್ಪಾಮೆನ್ಸ್

ಗ್ಲೊಸ್ಟರ್ ಎಸ್‌ಯುವಿಯು 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು, ಎಂಜಿನ್ ಅನ್ನು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಜೊತೆಗೆ ಜೋಡಿಸಲಾಗಿದೆ. ಈ ಎಂಜಿನ್ 218-ಬಿಹೆಚ್‌ಪಿ ಪವರ್ ಹಾಗೂ 480-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್ ಕಾರಿನಲ್ಲಿ ಆನ್ ಡಿಮ್ಯಾಂಡ್ ಫೋರ್-ವ್ಹೀಲ್ ಡ್ರೈವ್, ರಿಯರ್ ಡಿಫರೆನ್ಷಿಯಲ್ ಹಾಗೂ ಬೋರ್ಗ್‌ವರ್ನರ್ ಟ್ರಾನ್ಸ್ ಫರ್‌ ಗಳನ್ನು ಸಹ ನೀಡಲಾಗಿದ್ದು, ಎಂಜಿ ಕಂಪನಿಯು ಈ ಎಸ್‌ಯುವಿಯಲ್ಲಿ ಹಿಲ್ ಡಿಸೆಂಟ್ ಜೊತೆಗೆ ನಾರ್ಮಲ್, ಇಕೋ, ಸ್ಪೋರ್ಟ್, ಸ್ಯಾಂಡ್, ಮಡ್, ರಾಕ್, ಸ್ನೋ ಹಾಗೂ ಆಟೊ ಸೇರಿದಂತೆ ಹಲವಾರು ಟೆರೆನ್ ರೆಸ್ಪಾನ್ಸ್ ಸಿಸ್ಟಂಗಳನ್ನು ಅಳವಡಿಸಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಮಾದರಿಗಳ ಆಧಾರದ ಮೇಲೆ ಥ್ರೊಟಲ್ ಹಾಗೂ ಸ್ಟೀಯರಿಂಗ್ ರೆಸ್ಪಾನ್ಸ್ ಗಳು ಬದಲಾಗಲಿದ್ದು, ಸ್ಪೋರ್ಟ್ ಮೋಡ್ ನಲ್ಲಿ ಥ್ರೊಟಲ್ ರೆಸ್ಪಾನ್ಸ್ ಹೆಚ್ಚಾಗಿರುತ್ತದೆ. ಇದೇ ಕಾರಣಕ್ಕೆ ಎರಡು ಟನ್ ತೂಕದ ಎಂಜಿ ಗ್ಲೊಸ್ಟರ್ ಎಸ್‌ಯುವಿಯು ತಕ್ಷಣವೇ ಪವರ್ ಉತ್ಪಾದಿಸುವಲ್ಲಿ ತುಸು ಹಿನ್ನಡೆ ಅನುಭವಿಸುತ್ತದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

2200-ಆರ್‌ಪಿಎಂ ನಂತರ ಆಕ್ಸಲೆರೇಷನ್ ಹೆಚ್ಚಾಗಲಿದ್ದು, ಮಧ್ಯ ಶ್ರೇಣಿಯ ಈ ಎಸ್‌ಯುವಿಯು 4800-ಆರ್‌ಪಿಎಂಗಳವರೆಗೆ ಸಲೀಸಾಗಿ ಚಲಿಸುತ್ತದೆ. ಜೊತೆಗೆ ಗೇರ್ ಬಾಕ್ಸ್ ಸ್ಮೂಥ್ ಆಗಿದ್ದರೂ ಗೇರ್ ಶಿಫ್ಟ್ ನಿಧಾನವಾಗಿದೆ. ಮ್ಯಾನುವಲ್ ಮೋಡ್‌ನಲ್ಲಿ ಗೇರ್‌ಬಾಕ್ಸ್‌ ಮೇಲೆ ಗ್ರಿಪ್ ಸಿಕ್ಕ ನಂತರ ಗೇರ್ ಶಿಫ್ಟ್ ವೇಗವಾಗಲಿದ್ದು, ಅಗ್ರೆಸಿವ್ ಮೋಡ್‌ನಲ್ಲಿ ಗೇರ್ ಶಿಫ್ಟಿಂಗ್ ಗೇರ್‌ಗಳನ್ನು ಸುಲಭಗೊಳಿಸಲು ಪ್ಯಾಡಲ್ ಶಿಫ್ಟರ್‌ಗಳು ನೆರವಾಗುತ್ತವೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಈ ಎಸ್‌ಯುವಿಯಲ್ಲಿರುವ ಸಾಫ್ಟ್ ಸಸ್ಪೆಂಷನ್‌ಗಳು ಹಂಪ್ ಹಾಗೂ ರಸ್ತೆ ಗುಂಡಿಗಳ ಮೇಲೆ ಚಲಿಸಿದರೂ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಲಿದ್ದು, ಇನ್ಸುಲೇಶನ್ ಹಾಗೂ ಎನ್‌ವಿಹೆಚ್ ಲೆವೆಲ್ ಗಳು ಉತ್ತಮವಾಗಿರುವುದರಿಂದ ರಸ್ತೆ ಹಾಗೂ ಎಂಜಿನ್ ಶಬ್ದ ಬಹುತೇಕ ಕೇಳಿಸುವುದಿಲ್ಲ. ಸಾಫ್ಟ್ ಸಸ್ಪೆಂಷನ್ ಗಳ ಕಾರಣಕ್ಕೆ ಗ್ಲೊಸ್ಟರ್ ಹೆಚ್ಚು ಬಾಡಿ ರೋಲ್ ಗಳನ್ನು ಹೊಂದಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಹೊಸ ಕಾರಿನ ಚಾಲನೆ ವೇಳೆ ಕಡಿಮೆ ವೇಗದಲ್ಲಿದ್ದಾಗ ಗಟ್ಟಿಯಾಗಿ ಬ್ರೇಕ್ ಒತ್ತಿದರೆ ಟಯರ್‌ಗಳ ಶಬ್ದವನ್ನು ಕೇಳಬಹುದಾಗಿದ್ದು, ಒಂದು ದೊಡ್ಡ ವ್ಹೀಲ್ ಗಳು ಕಾರಿನ ಮೆಂಟೆನೆನ್ಸ್ ಅನ್ನು ತೀಕ್ಷ್ಣಗೊಳಿಸುತ್ತವೆ. ಜೊತೆಗೆ ಪ್ರಯಾಣದ ಪ್ರಮಾಣವನ್ನು ಕಡಿಮೆ ಮಾಡುತ್ತವೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್‌ನಲ್ಲಿರುವ ಸ್ಟೀಯರಿಂಗ್ ವ್ಹೀಲ್ ಇಷ್ಟು ದೊಡ್ಡ ಗಾತ್ರದ ಎಸ್ ಯುವಿಗೆ ಹಗುರವಾಗಿದ್ದು, ಸ್ಟೀಯರಿಂಗ್ ಹೆಚ್ಚಿನ ವೇಗದಲ್ಲಿ ಗಟ್ಟಿಯಾಗುವುದಿಲ್ಲ. ಇದು ಕೆಲವೊಮ್ಮೆ ಅಪಾಯಕಾರಿಯಾಗಬಹುದಾಗಿದ್ದು, ಸ್ಟೀಯರಿಂಗ್ ವ್ಹೀಲ್ ನ ರೆಸ್ಪಾನ್ಸ್ ನಿರೀಕ್ಷಿಸಿದ ಮಟ್ಟದಲ್ಲಿಲ್ಲ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಸ್ಟೀರಿಂಗ್ ವ್ಹೀಲ್ ಫ್ಲಿಕ್ ಮಾಡುವುದು ಹಾಗೂ ಲೇನ್‌ಗಳನ್ನು ಬದಲಿಸುವುದು ಸಹ ನಿರಾಶೆ ಮೂಡಿಸಲಿದ್ದು, ಐಆರ್‌ವಿಎಂ ಹಿಂದೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಗಾಗಿ ಕ್ಯಾಮೆರಾ ಅಳವಡಿಸಲಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ವಾಹನದ ಮೇಲೆ ಕ್ರೂಸ್ ಕಂಟ್ರೋಲ್ ಹೊಂದಿಸಿ ಕ್ಯಾಮೆರಾದ ಮೂಲಕ ಮುಂಭಾಗದಲ್ಲಿರುವ ವಾಹನವನ್ನು ಗುರುತಿಸಿದರೆ ಆಟೋಮ್ಯಾಟಿಕ್ ಆಗಿ ಕಾರಿನ ವೇಗವನ್ನು ನಿಧಾನಗೊಳಿಸುತ್ತದೆ. ಮುಂದೆ ಅದು ಸ್ಪಷ್ಟವಾದ ಮಾರ್ಗವನ್ನು ಕಂಡುಕೊಂಡಾಗ ಅದು ಮೊದಲಿನ ವೇಗಕ್ಕೆ ಹಿಂತಿರುಗಿಸುತ್ತದೆ. ಇನ್ ಬಿಲ್ಟ್ ಜಿಪಿಎಸ್ ಸಿಸ್ಟಂ ಮೂಲಕ ಈ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಗ್ಲೊಸ್ಟರ್‌ನಲ್ಲಿ ಲೇನ್ ಡಿಪಾರ್ಚರ್ ವಾರ್ನಿಂಗ್, ಫ್ರಂಟ್ ಕೂಲ್ಯೂಷನ್ ವಾರ್ನಿಂಗ್, ಆಟೋನಾಮಸ್ ಎಮರ್ಜೆನ್ಸಿ ಬ್ರೇಕಿಂಗ್ ಹಾಗೂ ಆಟೋ ಪಾರ್ಕ್ ಅಸಿಸ್ಟ್ ಗಳಂತಹ ಹಲವಾರು ಟೆಕ್ನಾಲಜಿಗಳ ಸೌಲಭ್ಯವನ್ನು ಅಳವಡಿಸಲಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಈ ಕಾರಣಕ್ಕೆ ಎಂಜಿ ಮೋಟಾರ್ ಕಂಪನಿಯು ಹೊಸ ಎಸ್‌ಯುವಿಯನ್ನು ಭಾರತದ ಮೊದಲ ಆಟೋನಾಮಸ್ ಲೆವೆಲ್ -1 ಪ್ರೀಮಿಯಂ ಎಸ್‌ಯುವಿ ಎಂದು ಕರೆದಿದ್ದು, ಈ ಎಸ್ ಯುವಿಯಲ್ಲಿ ಫ್ಯಾಟಿಗ್ ರಿಮ್ಯಾಂಡರ್ ಸಿಸ್ಟಂ ಸಹ ಅಳವಡಿಸಲಾಗಿದೆ. ಈ ಸಿಸ್ಟಂ ದೀರ್ಘಕಾಲದವರೆಗೆ ನಿರಂತರವಾಗಿ ಚಾಲನೆ ಮಾಡುತ್ತಿರುವುದು ಕಾರಿನಲ್ಲಿರುವ ಸೆನ್ಸಾರ್ ಗಳ ಮೂಲಕ ಪತ್ತೆಯಾದರೆ ಚಾಲಕನಿಗೆ ವಿಶ್ರಾಂತಿ ಪಡೆಯುವಂತೆ ಸೂಚಿಸುತ್ತದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಇನ್ನು ಗ್ಲೊಸ್ಟರ್ ಕಾರು ಸುಮಾರು 210-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದ್ದು, ಇದರಿಂದಾಗಿ ಯಾವುದೇ ರೀತಿಯ ಭೂಪ್ರದೇಶಗಳಲ್ಲೂ ಸುಲಭವಾಗಿ ನುಗ್ಗುವ ಕೌಶಲ್ಯ ಹೊಂದಿದ್ದು, ದೊಡ್ಡ ಗಾತ್ರದ ಈ ಎಸ್‌ಯುವಿಯು ವಿಶಾಲವಾದ ಟರ್ನಿಂಗ್ ರೇಡಿಯಸ್ ಅನ್ನು ಹೊಂದಿದೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಕೆಲ ಅವಧಿಗೆ ಮಾತ್ರವೇ ಈ ಎಸ್‌ಯುವಿಯನ್ನು ಚಾಲನೆ ಮಾಡಿದ ಕಾರಣಕ್ಕೆ ಆಫ್-ರೋಡ್ ಕೌಶಲ್ಯ ಪರೀಕ್ಷಿಸಲು ಸಾಧ್ಯವಾಗಲಿಲ್ಲ. ಜೊತೆಗೆ ಮೈಲೇಜ್ ಅಂಕಿಅಂಶಗಳನ್ನು ಪರೀಕ್ಷಿಸಲು ಸಾಧ್ಯವಾಗಲಿಲ್ಲ. ಆದರೆ ಬಿಡುಗಡೆಯ ನಂತರ ಈ ಎಸ್‌ಯುವಿಯ ಆಫ್ ರೋಡ್ ಕೌಶಲ್ಯ ಬಗೆಗೆ ಮತ್ತಷ್ಟು ಮಾಹಿತಿ ನೀಡುತ್ತವೆ.

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಹೆಕ್ಟರ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದ ನಂತರ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದು, ಇದೀಗ ಗ್ಲೊಸ್ಟರ್ ಎಸ್ ಯುವಿಯ ಮೂಲಕ ಮತ್ತೊಂದು ಹಂತದ ಜನಪ್ರಿಯತೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಗಾತ್ರದಲ್ಲಿ ವಿಶಾಲವಾದ ವಿನ್ಯಾಸದೊಂದಿಗೆ ಐಷಾರಾಮಿ ಟೆಕ್ನಾಲಜಿಗಳನ್ನು ಹೊಂದಿರುವ ಮತ್ತು ಚಾಲನೆ ಮಾಡಲು ಆರಾಮದಾಯಕವಾಗಿರುವ ಗ್ಲೊಸ್ಟರ್ ಕಾರು ಹಾರ್ಡ್‌ಕೋರ್ ಆಫ್-ರೋಡ್ ಎರಡು ಮಾದರಿಯಲ್ಲೂ ಗಮನಸೆಳೆಯಲಿದೆ

ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಗ್ಲೊಸ್ಟರ್

ಹೊಸ ಕಾರು ವಿಭಿನ್ನವಾದ ಡ್ರೈವಿಂಗ್ ಅನುಭವದೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದ್ದು, ಹೊಸ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ರಸ್ತೆಗಿಳಿಯಲಿದೆ. ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಗ್ಲೊಸ್ಟರ್ ಕಾರು ಆಕರ್ಷಕ ಬೆಲೆಯೊಂದಿಗೆ ಹಲವಾರು ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Most Read Articles

Kannada
English summary
MG Gloster 4X4 First Drive Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X