ಟಾಪ್ ಕ್ಲಾಸ್ ಮೈಲೇಜ್ ನೀಡುವ ಕಾಂಪಾಕ್ಟ್ ಸೆಡಾನ್ ಕಾರುಗಳು

By Nagaraja

ಕಾರು ನೋಡಲು ಸುಂದರವಾಗಿರಬೇಕು, ನಿರ್ವಹಣೆ ಸಹ ನಿಖರವಾಗಿರಬೇಕು, ಒಳಮೈಯ ಜೊತೆಗೆ ದೂರ ಪ್ರವಾಸದ ವೇಳೆ ಸಾಮಾನಗಳನ್ನು ಹೊತ್ತೊಯ್ಯಯಲು ಢಿಕ್ಕಿ ಜಾಗವಿರಬೇಕು. ಇವೆಲ್ಲದರ ಹೊರತಾಗಿ ಜಾಸಿ ಮೈಲೈಜ್ ಮತ್ತು ಬೆಲೆಯೂ ಸ್ವಲ್ಪ ಕಡಿಮೆಯಾಗಿರಬೇಕು. ಇದು ನೂತನ ಕಾರು ಖರೀದಿಸುವ ಭಾರತೀಯ ಗ್ರಾಹಕರ ಮನೋಸ್ಥಿತಿಯಾಗಿದೆ.

ಇದರಿಂದಾಗಿ ಕಾಂಪಾಕ್ಟ್ ಸೆಡಾನ್ ಎಂಬ ಕಾರು ವಿಭಾಗವು ದೇಶದಲ್ಲಿ ಅತಿ ಶಿಪ್ರ ಗತಿಯಲ್ಲಿ ಬೆಳೆದು ಬಂದಿದೆ. ದೇಶದೆಲ್ಲ ಮುಂಚೂಣಿಯ ಸಂಸ್ಥೆ ಒಂದಕ್ಕೊಂದು ಅಂದವಾಗಿರುವ ಅತ್ಯುತ್ತಮ ಕಾಂಪಾಕ್ಟ್ ಸೆಡಾನ್ ಕಾರುಗಳನ್ನು ಒದಗಿಸುತ್ತಿವೆ. ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆ ಪಡೆದ ದೇಶದ ಐದು ಅತ್ಯುತ್ತಮ ಮೈಲೇಜ್ ಕಾರುಗಳನ್ನು ಇಲ್ಲಿ ಪರಿಚಯಿಸಲಾಗುವುದು.

05. ಟಾಟಾ ಜೆಸ್ಟ್

05. ಟಾಟಾ ಜೆಸ್ಟ್

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ನ ಮನಮೋಹಕ ಕಾಂಪಾಕ್ಟ್ ಸೆಡಾನ್ ಕಾರು ಇದಾಗಿದೆ. ಇದರಲ್ಲಿರುವ ಟರ್ಬೊಚಾರ್ಜ್ಡ್ 1.2 ಲೀಟರ್ ಪೆಟ್ರೋಲ್ ಎಂಜಿನ್ 89 ಅಶ್ವಶಕ್ತಿಯನ್ನು (140 ಎನ್ ಎಂ ತಿರುಗುಬಲ) ಉತ್ಪಾದಿಸುತ್ತದೆ. ಅದೇ ರೀತಿ 1.3 ಲೀಟರ್ ಡೀಸೆಲ್ ಎಂಜಿನ್ 74 ಮತ್ತು 89 ಅಶ್ವಶಕ್ತಿಯನ್ನು (200 ಎನ್ ಎಂ ತಿರುಗುಬಲ) ನೀಡುತ್ತದೆ. 5 ಸ್ಪೀಡ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ ಆಯ್ಕೆಯೂ ಚಾಲನೆಯನ್ನು ಸುಲಭವಾಗಿಸಲಿದೆ.

ಟಾಟಾ ಜೆಸ್ಟ್

ಟಾಟಾ ಜೆಸ್ಟ್

ಟಾಟಾ ಜೆಸ್ಟ್ ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳು ಪ್ರತಿ ಲೀಟರ್ ಗೆ ಅನುಕ್ರಮವಾಗಿ 23 ಮತ್ತು 17.6 ಕೀ.ಮೀ. ಮೈಲೇಜ್ ನೀಡಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 5.55 ಲಕ್ಷ ರು.ಗಳಾಗಿವೆ.

04. ಹ್ಯುಂಡೈ ಎಕ್ಸ್ ಸೆಂಟ್

04. ಹ್ಯುಂಡೈ ಎಕ್ಸ್ ಸೆಂಟ್

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಸಹ ಅತ್ಯಾಕರ್ಷಕ ಎಕ್ಸ್ ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರನ್ನು ವಾಹನ ಪ್ರೇಮಿಗಳ ಮುಂದಿಟ್ಟಿದೆ. ಇದು 1.2 ಲೀಟರ್ ಪೆಟ್ರೋಲ್ (81 ಅಶ್ವಶಕ್ತಿ ಹಾಗೂ 114 ಎನ್ ಎಂ ತಿರುಗುಬಲ) ಮತ್ತು 1.1 ಲೀಟರ್ ಡೀಸೆಲ್ (71 ಅಶ್ವಶಕ್ತಿ ಹಾಗೂ 180 ಎನ್ ಎಂ ತಿರುಗುಬಲ) ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಹ್ಯುಂಡೈ ಎಕ್ಸ್ ಸೆಂಟ್

ಹ್ಯುಂಡೈ ಎಕ್ಸ್ ಸೆಂಟ್

ಹ್ಯುಂಡೈ ಎಕ್ಸ್ ಸೆಂಟ್ ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 24.4 ಮತ್ತು 19.1 ಕೀ.ಮೀ. ಗಳ ಮೈಲೇಜ್ ನೀಡಲಿದೆ. ಇದರ ಬೆಲೆ 5.82 ಲಕ್ಷ ರು.ಗಳಾಗಿದೆ.

 03. ಹೋಂಡಾ ಅಮೇಜ್

03. ಹೋಂಡಾ ಅಮೇಜ್

ಹೋಂಡಾ ದೇಶದಲ್ಲಿ ಬಿಡುಗಡೆಗೊಳಿಸಿರುವ ಮೊದಲ ಡೀಸೆಲ್ ಕಾರು ಇದಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಹೋಂಡಾ ಅಮೇಜ್ 5 ಸ್ಪೀಡ್ ಮ್ಯಾನುವಲ್ ಜೊತೆಗೆ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಲಭ್ಯವಿರುತ್ತದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 109 ಎನ್ ಎಂ ತಿರುಗುಬಲದಲ್ಲಿ 87 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು 1.5 ಲೀಟರ್ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ನೀಡಲಿದೆ.

ಹೋಂಡಾ ಅಮೇಜ್

ಹೋಂಡಾ ಅಮೇಜ್

ಹೋಂಡಾ ಅಮೇಜ್ ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳು ಪ್ರತಿ ಲೀಟರ್ ಗೆ ಅನುಕ್ರಮವಾಗಿ 25.8 ಮತ್ತು 17.8 ಕೀ.ಮೀ. ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 5.84 ಲಕ್ಷ ರು.ಗಳಾಗಿದೆ.

02. ಫೋರ್ಡ್ ಫಿಗೊ ಆಸ್ಪೈರ್

02. ಫೋರ್ಡ್ ಫಿಗೊ ಆಸ್ಪೈರ್

ತಂತ್ರಜ್ಞಾನದಲ್ಲಿ ಎಂದು ಮುಂದಿರುವ ಫೋರ್ಡ್ ಬಿಡುಗಡೆ ಮಾಡಿರುವ ತಾಜಾ ಆವೃತ್ತಿಗಳಲ್ಲಿ ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರು ಒಂದಾಗಿದೆ. ಇದು 1.2 ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುತ್ತಿದ್ದು, ಅನುಕ್ರಮವಾಗಿ 87 (112 ಎನ್ ಎಂ ತಿರುಗುಬಲ) ಮತ್ತು 110 ಅಶ್ವಶಕ್ತಿಯನ್ನು (136 ಎನ್ ಎಂ ತಿರುಗುಬಲ) ಉತ್ಪಾದಿಸುತ್ತದೆ. ಇದರ 1.5 ಲೀಟರ್ ಡೀಸೆಲ್ ಎಂಜಿನ್ 215 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ನೀಡಲಿದೆ. ಈ ಪೈಕಿ 1.5 ಲೀಟರ್ ಪೆಟ್ರೋಲ್ ಎಂಜಿನ್ ನಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ.

ಫೋರ್ಡ್ ಫಿಗೊ ಆಸ್ಪೈರ್

ಫೋರ್ಡ್ ಫಿಗೊ ಆಸ್ಪೈರ್

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 5.71 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಫೋರ್ಡ್ ಫಿಗೊ ಆಸ್ಪೈರ್ ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್ ಗೆ ಅನುಕ್ರಮವಾಗಿ 25.8 ಮತ್ತು 18.1 ಕೀ.ಮೀ. ಮೈಲೇಜ್ ನೀಡಲಿದೆ.

01. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

01. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ದೇಶದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಮೀರಿಸುವವರು ಸದ್ಯಕ್ಕೆ ಯಾರೂ ಇಲ್ಲದಂತಾಗಿದೆ. ಇದರಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ 115 ಎನ್ ಎಂ ತಿರುಗುಬಲದಲ್ಲಿ 83 ಅಶ್ವಶಕ್ತಿ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ 190 ಎನ್ ಎಂ ತಿರುಬುಬಲದಲ್ಲಿ 74 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಐಚ್ಛಿಕ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 5.79 ಲಕ್ಷ ರು.ಗಳಷ್ಟು ದುಬಾರಿಯೆನಿಸಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳು ಪ್ರತಿ ಲೀಟರ್ ಗೆ 26.5 ಮತ್ತು 20.8 ಕೀ.ಮೀ. ಮೈಲೇಜ್ ನೀಡಲಿದೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಇಂಧನ ಕ್ಷಮತೆ ನೀಡುವ ಕಾಂಪಾಕ್ಟ್ ಸೆಡಾನ್ ಕಾರೆನಿಸಿಕೊಂಡಿದೆ.

ಟಾಪ್ ಕ್ಲಾಸ್ ಮೈಲೇಜ್ ನೀಡುವ ಕಾಂಪಾಕ್ಟ್ ಸೆಡಾನ್ ಕಾರುಗಳು

ಇಲ್ಲಿ ಕೊಟ್ಟಿರುವ ಪಟ್ಟಿಯಲ್ಲಿರುವ ಕಾರನ್ನು ನೀವು ಹೊಂದಿರುವುದಾದ್ದಲ್ಲಿ ನೈಜ ರಸ್ತೆ ಪರಿಸ್ಥಿತಿಯಲ್ಲಿ ಅವುಗಳು ನೀಡುತ್ತಿರುವ ಮೈಲೇಜ್ ಬಗ್ಗೆ ವಿವರವನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಲಗತ್ತಿಸಿರಿ.

Most Read Articles

Kannada
English summary
Top 5 Most Fuel Efficient Compact Sedans In India - Looking To Buy One?
Story first published: Wednesday, June 1, 2016, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X