ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರು

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಏಳನೇ ತಲೆಮಾರಿನ 3-ಸೀರಿಸ್ ಮಾದರಿಯನ್ನು ಒಂದು ವರ್ಷದ ಹಿಂದೆ ಪರಿಚಯಿಸಿದ್ದರು. ಇನ್ನು ಈ ವರ್ಷದ ಆರಂಭದಲ್ಲೇ ಬಿಎಂಡಬ್ಲ್ಯು ತನ್ನ ಲಾಂಗ್-ವ್ಹೀಲ್ ಬೇಸ್ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಅನ್ನು ಬಿಡುಗಡೆಗೊಳಿಸಿತು. ಇದೀಗ ತಿಂಗಳುಗಳ ಬಳಿಕ ಜರ್ಮನ್ ಐಷಾರಾಮಿ ಕಾರು ತಯಾರಕರು ಹೊಸ ಎಂ340ಐ ಎಕ್ಸ್‌ಡ್ರೈವ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಈ ಹೊಸ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರನ್ನು ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಎಂ ಕಾರು ಇದಾಗಿದೆ. ಈ ಬಹುನಿರೀಕ್ಷಿತ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರನ್ನು ಒಂದೆರಡು ದಿನಗಳವರೆಗೆ ಓಡಿಸಲು ನಮಗೆ ಅವಕಾಶ ದೊರಕಿತ. ಈ ಸಂದರ್ಭದಲ್ಲಿ ನಾವು ಡ್ರೈವ್ ಮಾಡಿದ ಅನುಭವ, ಕಾರಿನ ವಿನ್ಯಾಸ ಪೀಚರ್ ಗಳು ಮತ್ತು ತಂತ್ರಜ್ಙಾನಗಳ ಬಗ್ಗೆ ವಿವರವಾಗಿ ಇಲ್ಲಿ ತಿಳಿಸುತ್ತೇವೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ವಿನ್ಯಾಸ

ಮೊದಲ ನೋಟದಲ್ಲಿ ಈ ಕಾರು ಪರ್ಫಾಮೆನ್ಸ್ - ಆಧಾರಿತ ಸೆಡಾನ್ ಎಂದು ಹೇಳಲು ನಿಮಗೆ ಕಷ್ಟವಾಗುತ್ತದೆ ಏಕೆಂದರೆ ಮುಂಭಾಗದ ಗ್ರಿಲ್‌ನಲ್ಲಿ ಎಂ ಬ್ಯಾಡ್ಜಿಂಗ್ ಇಲ್ಲ. ಆದರೆ ಇದರ ಬದಿಯಲ್ಲಿ ಬ್ಯಾಡ್ಜಿಂಗ್ ಗಳು ಮತ್ತು ವ್ಜೀಲ್ ಗಳನ್ನು ನೋಡಿದಾಗ ಇದು ಸಾಮಾನ್ಯ 3-ಸೀರಿಸ್ ಸೆಡಾನ್ ಅಲ್ಲ ಎಂದು ನಿಮಗೆ ಅರಿವಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಹೊಸ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಮುಂಭಾಗದಲ್ಲಿ ಏರ್ ವೆಂಟ್ ಗಳೊಂದಿಗೆ ಸಬ್ಟಲ್ ಗ್ರಿಲ್ ಅನ್ನು ಪಡೆಯುತ್ತದೆ, ಅದು ಎಂಜಿನ್ ಹೆಚ್ಚಿನ ಗಾಳಿ ಅಗತ್ಯವಿದ್ದಾಗ ತೆರೆಯುತ್ತದೆ ಮತ್ತು ಮುಚ್ಚುತ್ತದೆ. ಇದು ಚ್ಚಿದ ನಂತರ ಅವು ಉತ್ತಮ ಏರೋಡೈನಾಮಿಕ್ ಒದಗಿಸುತ್ತವೆ. ಈ ಕಾರಿನಲ್ಲಿ ಕ್ರೋಮ್ ಅನ್ನು ನೀಡಿಲ್ಲ, ಗ್ರಿಲ್ ಅದರ ಕ್ರೋಮ್ ಬಿಟ್‌ಗಳಿಂದ ಕೂಡಿದೆ ಎಂದು ತೋರುತ್ತಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಈ ಹೊಸ ಬಿಎಂಡಬ್ಲ್ಯು ಕಾರಿನಲ್ಲಿ ಲೇಸರ್ ಎಲ್ಇಡಿ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ ಮತ್ತು ಇದು ಅತ್ಯಂತ ಪ್ರಕಾಶಮಾನವಾಗಿದೆ. ಪ್ರೊಜೆಕ್ಟರ್ ಒಳಗೆ ಬ್ಲೂ ಬಣ್ನದ ಅಂಶವನ್ನು ಸಹ ಒಳಗೊಂಡಿದೆ. ಇದು ನೋಡಲು ತುಂಬಾ ಅದ್ಭುತವಾಗಿದೆ. ಸೆಡಾನ್ ಮುಂಭಾಗದಲ್ಲಿ ಅಗ್ರೇಸಿವ್ ಬಂಪರ್ ಅನ್ನು ಪಡೆಯುತ್ತದೆ, ಇದರ ಬದಿಯಲ್ಲಿ ಏರ್ ವೆಂಟ್ ಗಳನ್ನು ಹೊಂದಿರುತ್ತದೆ ಮತ್ತು ಬಂಪರ್ ಮಸ್ಕಲರ್ ಲುಕ್ ನಂತೆ ಕಾಣುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಈ ಕಾರಿನ ಬದಿಗಳಲ್ಲಿ ಕ್ರೋಮ್ ಅನ್ನು ಪಡೆಯುವುದಿಲ್ಲ, ಬದಲಾಗಿ, ವಿಂಡೋಗಳ ಸುತ್ತಲೂ ಕಪ್ಪು ಬಣ್ಣದ ಪಿಲ್ಲರ್ ಗಳ ಹೊಂದಿವೆ, ಇನ್ನು ಈ ಕಾರಿನಲ್ಲಿ ಸನ್‌ರೂಫ್ ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಹೊಂದಿರುತ್ತದೆ. ಇನ್ನು ಕಾರಿನ ಬದಿಯಲ್ಲಿ ಅಗ್ರೇಸಿವ್ ಲೈನ್ ಗಳು ಮತ್ತು ಮತ್ತು ಕ್ರೀಸ್‌ಗಳನ್ನು ಹೊಂದಿಲ್ಲ,

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಹಿಂಭಾಗಕ್ಕೆ ಬಂದರೆ ಯವಾದ-ಕಾಣುವ ಎಲ್ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ ಮತ್ತು ಹಿಂಭಾಗದಲ್ಲಿ ಎಂ340ಐ ಎಕ್ಸ್‌ಡ್ರೈವ್ ಬ್ಯಾಡ್ಜ್, ಎಕ್ಸ್‌ಡ್ರೈವ್ ಬ್ಯಾಡ್ಜ್ ಮತ್ತು ಟ್ವಿನ್ ಎಕ್ಸಾಸ್ಟ್ ಸೆಟಪ ಅನ್ನು ಹೊಂದಿದೆ. ಇನ್ನು ಹೆಚ್ಚು ಸಹಕಾರಿಯಾಗಿರುವ ಫೀಚರ್ ಆದ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಪಡೆಯುತ್ತದೆ, ಅದು ನಿಮಗೆ ಬಿಗಿಯಾದ ಸ್ಥಳಗಳಲ್ಲಿ ಸುಲಭವಾಗಿ ಪಾರ್ಕ್ ಮಾಡಲು ಸಹಾಯ ಮಾಡುತ್ತದೆ. ಕ್ಯಾಮೆರಾದ ದೃಶ್ಯಗಳು ಉತ್ತಮ ಗುಣಮಟ್ಟವನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಇಂಟಿರಿಯರ್

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಕ್ಯಾಬಿನ್ ಬಿಟ್ಸ್ ಮತ್ತು ಬ್ರಷ್ಡ್ ಸಿಲ್ವರ್ ಮತ್ತು ಅಲ್ಕಾಂಟರಾದಿಂದ ಕ್ಯಾಬಿನ್ ಸಹ ಸ್ಪೋರ್ಟಿ ಆಗಿ ಕಾಣುತ್ತದೆ. ಡೋರ್ ಪ್ಯಾನಲ್ ಗಳಲ್ಲಿ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಸಾಕಷ್ಟು ಸಾಫ್ಟ್ ಟಚ್ ವಸ್ತುಗಳು ಇವೆ. ಇನ್ನು ಡ್ಯಾಶ್‌ಬೋರ್ಡ್‌ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಹೊಂದಿರುವ 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಸಿಸ್ಟಂ ಟಚ್ ಉತ್ತಮವಾಗಿದೆ ಮತ್ತು ಇದರ ರೆಸ್ಪಾನ್ಸ್ ಕೂಡ ಚೆನ್ನಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಇನ್ನು ಈ ಕಾರಿನಲ್ಲಿ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಿದ್ದು, ಇದು ಅತ್ಯಂತ ಆಕರ್ಷಕವಾಗಿದೆ. ಕಾರಿನ ಮೋಡ್‌ಗಳನ್ನು ಬದಲಾಯಿಸುವಾಗ ಡಿಸ್ ಪ್ಲೇಯಲ್ಲಿ ಅದನ್ನು ನೋಡಬಹುದಾಗಿದೆ. ಚಾಲಕನ ಅಗತ್ಯಗಳಿಗೆ ಅನುಗುಣವಾಗಿ ಕ್ಲಸ್ಟರ್ ಅನ್ನು ಸಹ ಕಾನ್ಫಿಗರ್ ಮಾಡಬಹುದು. ಕ್ಲಸ್ಟರ್‌ನ ಮೇಲ್ಭಾಗದಲ್ಲಿ ಹೆಡ್ಸ್-ಅಪ್-ಡಿಸ್ ಪ್ಲೇ ಇದ್ದು, ಯಾರಾದರೂ ಕರೆ ಮಾಡುತ್ತಿದ್ದರೆ ಅಥವಾ ನೀವು ಹಾಡನ್ನು ಆಯ್ಕೆ ಮಾಡಲು ಬಯಸಿದರೆ, ಆದ್ದರಿಂದ ಚಾಲಕರ ಗಮನವನ್ನು ರಸ್ತೆಯ ಮೇಲೆ ಇಟ್ಟುಕೊಳ್ಳುವುದಕ್ಕೆ ಸಹಕಾರಿಯಾಗಿದೆ ಮತ್ತು ಇದು ಹೆಚ್ಚಿನ ಮಾಹಿತಿಯನ್ನು ಸಹ ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಸ್ಟೀರಿಂಗ್ ವ್ಹೀಲ್ ಎಂ ವಿಭಾಗದಿಂದ ಕೂಡಿದ್ದು ಲೆದರ್ ನಿಂದ ಕೂಡಿರುವುದಕ್ಕೆ ಉತ್ತಮ ಗ್ರಿಪ್ ಅನ್ನು ಹೊಂದಿದೆ. ಇದು ಎಂ ಬ್ಯಾಡ್ಜ್ ಪಡೆಯುತ್ತದೆ ಆದರೆ ದುಃಖಕರವೆಂದರೆ ಅದು ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್ ಅಲ್ಲ. ಇನ್ನು ಸ್ಟೀಯರಿಂಗ್ ನಲ್ಲಿ ಮೌಂಟಡ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಡೋರ್ ಪ್ಯಾನೆಲ್ ಕೆಳಗೆ ಮತ್ತು ಕ್ಲೈಮೇಟ್ ಕಂಟ್ರೋಲ್ ಹೊಂದಿರುವದರ ಕೆಳಭಾಗದಲ್ಲಿ ಸಾಕಷ್ಟು ಸ್ಟ್ರೋರೇಂಜ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಈ ಕಾರು ಮೂರು ಜೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಪಡೆಯುತದೆ. ಇದು ಹಲವಾರು ಚಾರ್ಜಿಂಗ್ ಸಾಕೆಟ್‌ಗಳನ್ನು ಮತ್ತು ನಿಮ್ಮ ಮೊಬೈಲ್‌ ಚಾರ್ಜ್ ಮಾಡಲು ವೈರ್‌ಲೆಸ್ ಚಾರ್ಜರ್ ಅನ್ನು ಸಹ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಇನ್ನು ಈ ಕಾರಿನ ಸೀಟುಗಳ ಬಗ್ಗೆ ಹೇಳುವುದಾದರೆ, ಮುಂಭಾಗದ ಬಕೆಟ್ ಆಕಾರದಲ್ಲಿರುತ್ತವೆ ಮತ್ತು ಲೆದರ್ ಮತ್ತು ಅಲ್ಕಾಂಟರಾದಲ್ಲಿ ಸುತ್ತಿರುತ್ತವೆ. ಅವುಗಳನ್ನು ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡಬಹುದು, ಇದರಲ್ಲಿ ಡ್ರೈವರ್ ಸೀಟ್ ಮಾತ್ರ ಮೆಮೊರಿ ಫಂಕ್ಷನ್ ಪಡೆಯುತ್ತದೆ. ಸೀಟುಗಳಲ್ಲಿ ಕೂತು ಪ್ರಯಾಣಿಸಲು ಆರಾಮದಾಯಕವಾಗಿವೆ. ಮೆತ್ತನೆಯ ಕೊರತೆಯಿಂದಾಗಿ, ದೀರ್ಘ ಪ್ರಯಾಣದಲ್ಲಿ ಹೋದರೆ ಆಯಾಸವಾಗಬಹುದು. ಇನ್ನು ಸೀಟುಗಳಲ್ಲಿ ಇರುವ ಸೀಟ್‌ಬೆಲ್ಟ್‌ಗಳು ಸಹ ಎಂ ಬ್ಯಾಡ್ಜಿಂಗ್ ಅನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಹಿಂಭಾಗದ ಸೀಟುಗಳು ಉತ್ತಮವಾಗಿದೆ, ಮುಂಭಾಗದ ಸೀಟುಗಳಿಗಿಂತ ಹೆಚ್ಚು ಆರಾಮದಾಯಕವಾಗಿದೆ. ಇನ್ನು ಹಿಂಭಾಗದಲ್ಲಿ ಸೀಟಿನಲ್ಲಿ ಸೆಂಟರ್ ಆರ್ಮ್ ರೆಸ್ಟ್ ಅನ್ನು ಸಹ ಪಡೆಯುತ್ತೀರಿ. ಹಿಂಭಾಗದ ಪ್ರಯಾಣಿಕರಿಗಾಗಿ ಮೂರು ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎರಡು ಟೈಪ್-ಸಿ ಚಾರ್ಜಿಂಗ್ ಸಾಕೆಟ್‌ಗಳನ್ನು ನೀಡಿದ್ದಾರೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಇನ್ನು ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರು 440 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದು ಸಾಮಾನ್ಯ ದಿನಬಳಕ್ಕೆ ವಸ್ತುಗಳು ಇಡಲು ಸೂಕ್ತವಾಗಿದೆ. ಮಗೆ ಹೆಚ್ಚಿನ ಸ್ಥಳವಕಾಶ ಬೇಕಾದರೆ 60:40 ಸ್ಪ್ಲೀಟ್ ಮಾಡಬಹುದು.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಎಂಜಿನ್

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಅದರ ಡ್ರೈವ್ ಡೈನಾಮಿಕ್ಸ್‌ಗೆ ಹೆಸರುವಾಸಿಯಾಗಿದೆ. ಈ ಸೆಡಾನ್ ನಲ್ಲಿ ಇನ್-ಲೈನ್ ಸಿಕ್ಸ್-ಸಿಲಿಂಡರ್, ಟ್ವಿನ್-ಸ್ಕ್ರಾಲ್ ಟರ್ಬೊ, 3.0-ಲೀಟರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 385 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಫೀಡ್ ಸ್ಟೆಪ್ಟ್ರಾನಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಪರ್ಫಾಮೆನ್ಸ್ ಪ್ರಕಾರ ಎಂ340ಐ ಅತ್ಯುತ್ತಮವಾಗಿದೆ. ಈ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರು ಕೇವಲ 4.4 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಇನ್ನು ಈ ಕಾರು 250 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಈ ಹೊಸ ಕಾರಿನಲ್ಲಿ ಇಕೋ ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್ ಮೂರು ಡ್ರೈವಿಂಗ್ ಮೋಡ್ ಗಳನ್ನು ಹೊಂದಿವೆ, ಇಕೋ ಪ್ರೊ ಮತ್ತು ಕಂಫರ್ಟ್‌ನಲ್ಲಿ ಚಾಲನೆ ಮಾಡುವಾಗ ಅಷ್ಟು ಚಾಲನಾ ಶಬ್ದವಿಲ್ಲ. ಸ್ಪೋರ್ಟ್ ಮೋಡ್ ನಲ್ಲಿ ಚಲಿಸಿದಾಗ ಎಕ್ಸಾಸ್ಟ್ ನಿಂದ್ ಸ್ಪೋರ್ಟ್ಸ್ ಕಾರಿನ ರೀತಿ ಉತ್ತಮವಾದ ಶಬ್ದವಿದೆ. ಇನ್ನು 4,000 ಆರ್ಪಿಎಂ ತಲುಪಿದರೆ ಎಕ್ಸಾಸ್ಟ್ ನಿಂದ ರೇಸಿಂಗ್ ಕಾರಿನ ಮಾದರಿಯಲ್ಲಿ ಶಬ್ದ ಕೇಳಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ನೀವು ಮೋಡ್ ಅನ್ನು ಬದಲಾಯಿಸಿದಾಗಲೆಲ್ಲಾ ಥ್ರೊಟಲ್ ರೆಸ್ಪಾನ್ಸ್ ಬದಲಾಗುತ್ತದೆ. ಥ್ರೊಟಲ್ ಮಾತ್ರವಲ್ಲದೆ ಸ್ಟೀರಿಂಗ್ ವೀಲ್ ಮತ್ತು ಸಸ್ಪೆಂಕ್ಷನ್ ಕೂಡ ಗಟ್ಟಿಯಾಗುತ್ತದೆ ಇದರಿಂದ ನೀವು ಬಯಸಿದಾಗ ಕಾರು ಕಾರ್ಯನಿರ್ವಹಿಸಬಹುದು.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ನೀವು ವೇಗವಾಗಿ ಹೋಗುವಾಗ ನಿಮಗೆ ಸ್ಟಾಪ್ ಮಾಡಲು ನೆರವಾಗಲು ಇದರಲ್ಲಿ ಎಂ ಕಾಲಿಪರ್‌ಗಳೊಂದಿಗೆ ಅಳವಡಿಸಲಾಗಿದೆ ಮತ್ತು ಮೈಕೆಲಿನ್ ಟೈರ್‌ಗಳೊಂದಿಗೆ ಎಂ340ಐ ಹೆಚ್ಚಿನ ವೇಗದಿಂದ ವಾಹನವನ್ನು ನಿಲ್ಲಿಸಲು ಬ್ರೇಕಿಂಗ್ ಸಿಸ್ಟಂ ಕೂಡ ಉತ್ತಮವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಮೈಲೇಜ್ ವಿಷಯ ಸಂಬಂಧಿಸಿದಂತೆ, ಇದು ಸ್ಪೋರ್ಟಿ ಕಾರ್ ಆಗಿರುವುದರಿಂದ ಅದರಿಂದ ನಿರೀಕ್ಷಿಸಿದ ಮೈಲೇಜ್ ನೀಡುವುದಿಲ್ಲ. ಇಕೋ ಮೋಡ್ ನಲ್ಲಿ ಚಲಿಸಿದರೆ 10 ಕಿ.ಮೀ ಮೈಲೇಜ್ ನೀಡಬಹುದು.. ಇದರ ಮೋಡ್ ಗಳಲ್ಲಿ ವೇಗವಾಗಿ ಚಲಿಸಿದರೆ ರಿಂದ 7 ಕಿ.ಮೀ ಮೈಲೇಜ್ ನೀಡಬಹುದು.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್

ಡ್ರೈವ್‌ಸ್ಪಾಕ್ ಅಭಿಪ್ರಾಯ

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಸ್ಪೋರ್ಟೆಸ್ಟ್ ಸೆಡಾನ್‌ಗಳಲ್ಲಿ ಒಂದಾಗಿದ್ದು, ಇದು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಸೆಡಾನ್‌ನ ಸ್ಪೋರ್ಟಿ ಗುಣಲಕ್ಷಣಗಳ ಜೊತೆಗೆ, ಇದು ಪ್ರೀಮಿಯಂ ಲುಕ್ ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಈ ಕಾರಿನ ಪರ್ಫಾಮೆನ್ಸ್ ಉತ್ತಮವಾಗಿದೆ. ಈ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಬೆಲೆಯನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಆದರೆ ಈ ಕಾರಿಗೆ ಅಂದಾಜು ಎಕ್ಸ್ ಶೋರೂಂ ಪ್ರಕಾರ ರೂ.65 ರಿಂದ ರೂ.70 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
BMW M340i xDrive Review First Drive. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X