ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ವೆರಿಯೆಂಟ್ ಜನಪ್ರಿಯವಾದ ಐಷಾರಾಮಿ ಸೆಡಾನ್ ಆಗಿದೆ. ಈ ಹೊಸ ಸ್ಕೋಡಾ ಸ್ಪೋರ್ಟ್‌ಲೈನ್ ಸ್ಪೋರ್ಟಿ ಲುಕ್ ನೊಂದಿಗೆ ಆಕರ್ಷಕ ಫೀಚರ್ ಗಳನ್ನು ಹೊಂದಿದೆ. ಅಲ್ಲದೇ ಈ ಐಷಾರಾಮಿ ಸೂಪರ್ಬ್ ಸ್ಪೋರ್ಟ್‌ಲೈನ್ ಉತ್ತಮ ಪರ್ಫಾಮೆನ್ಸ್ ಅನ್ನು ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಸ್ಕೋಡಾ ತನ್ನ ಜನಪ್ರಿಯ ಸೂಪರ್ಬ್ ಸೆಡಾನ್ ಅನ್ನು 2001ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಈ ಕಾರನ್ನು ವರ್ಷಗಳಲ್ಲಿ ಕೆಲವು ನವೀಕರಣಗಳು ಮತ್ತು ಫೇಸ್‌ಲಿಫ್ಟ್‌ ಗಳನ್ನು ಮಾಡಿದ್ದಾರೆ. ಮೊದಲ ತಲಮಾರಿನ ಸೂಪರ್ಬ್ ಸೆಡಾನ್ ಲೋ-ಸ್ಲಂಗ್ ಗ್ಯಾಂಗ್ ಸ್ಟರ್ ಲುಕ್ ಅನ್ನು ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಮೂರನೇ ತಲೆಮಾರಿನ ಫೇಸ್‌ಲಿಫ್ಟೆಡ್ ಸೂಪರ್ಬ್ ಅದ್ಭುತವಾಗಿದೆ ಮತ್ತು ಇದು ಎಲ್&ಕೆ ಮತ್ತು ಸ್ಪೋರ್ಟ್‌ಲೈನ್ ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ನಾವು ಹೊಸ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರನ್ನು ಫಸ್ಟ್ ರೈಡ್ ರಿವ್ಯೂ ಮಾಡಿದ್ದೇವೆ. ಹೊಸ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರಿನ ಡೈವಿಂಗ್ ಅನುಭವ, ಫೀಚರ್ ಗಳು, ವಿನ್ಯಾಸ ಮತ್ತು ಆ ಕಾರಿನ ಕಂಫರ್ಟ್ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಸುತ್ತೇವೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ನಮಗೆ ಟೆಸ್ಟ್ ಡ್ರೈವ್ ಮಾಡಲು ದೊರೆತ ಕಾರು ರೇಸ್ ಬ್ಲೂ ಬಣ್ಣದಲ್ಲಿತ್ತು. ರೇಸ್ ಬ್ಲೂ ಬಣ್ಣದಲ್ಲಿ ಆಕರ್ಷಕವಾಗಿ ಕಾಣುತ್ತಿದೆ ಈ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು. ಇನ್ನು ಈ ಕಾರು ಸ್ಪೋರ್ಟ್‌ಲೈನ್ ವೆರಿಯೆಂಟ್ ಆಗಿರುವುದರಿಂದ ಬ್ಲ್ಯಾಕ್ ಬಣ್ಣದಿಂದ ಒಳಗೊಂಡಿದೆ. ಈ ಕಾರಿನ ಮುಂಭಾಗದಲ್ಲಿ ಗ್ರಿಲ್ ಸುತ್ತಲಿನ ಅಂಶವು ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಹೊರಭಾಗದಲ್ಲಿ ಕ್ರೋಮ್‌ನೊಂದಿಗೆ ಮುಂಭಾಗದ ಲೋಗೊ, ಸೈಡ್ ‘ಸ್ಪೋರ್ಟ್‌ಲೈನ್' ಬ್ಯಾಡ್ಜ್‌ಗಳು ಮತ್ತು ಹಿಂಭಾಗದ ತುದಿಯಲ್ಲಿರುವ ಸ್ಟ್ರಿಪ್ ಗಳು ಬ್ಲ್ಯಾಕ್ ಬಣ್ಣಗಳ ಅಂಶಗಳನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರಿನ ಮುಂಭಾಗದಲ್ಲಿ ಆಕರ್ಷಕವಾದ ಸ್ಲೀಕ್ ಲುಕ್ ಹೊಂದಿರುವ ಆಲ್-ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಕಂಪನಿಯು 'ಸ್ಕೋಡಾ ಕ್ರಿಸ್ಟಲ್ ಲೈಟಿಂಗ್' ಎಂದು ಕರೆಯಲು ಇಷ್ಟಪಡುತ್ತದೆ. ಬಂಪರ್‌ನಲ್ಲಿನ ಫಾಗ್ ಲ್ಯಾಂಪ್ ಸಹ ಎಲ್‌ಇಡಿ ಆಗಿರುತ್ತವೆ, ಆದರೆ ಕೆಲವು ಕಾರಣಗಳಿಂದಾಗಿ, ಫ್ರಂಟ್ ಟರ್ನ್ ಇಂಡಿಕೇಟರ್ ಬಲ್ಬ್‌ಗಳನ್ನು ಒಳಗೊಂಡಿವೆ. ಒಟ್ಟಾರೆಯಾಗಿ, ಮುಂಭಾಗದಿಂದ ಎಲ್ಲಾ ಬ್ಲ್ಯಾಕ್ ಅಂಶಗಳು ಮತ್ತು ಹುಡ್ ನಲ್ಲಿ ಅಗ್ರೇಸಿವ್ ಲೈನ್ ಗಳೂ ಮತ್ತು ಕ್ರೀಸ್‌ಗಳೊಂದಿಗೆ, ಸೆಡಾನ್‌ಗೆ ಅತ್ಯಂತ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸುಮಾರು 164 ಎಂಎಂ ಗ್ರೌಡ್ ಕ್ಲಿಯರೆನ್ಸ್ ಕಡಿಮೆಯಾಗಿದೆ. ರೈಡ್ ಮಾಡುವಾಗ ಇದು ಸ್ಪೀಡ್ ಬ್ರೇಕರ್‌ಗಳಲ್ಲಿ ಹೆಚ್ಚು ಅನುಭವವಾಗುತ್ತದೆ. ಒ‍ಆರ್‍‍ವಿ‍ಎಂ ಗಳಲ್ಲಿ ಮತ್ತು ವಿಂಡೋಗಳ ಬದಿಯಲ್ಲಿ ಬ್ಲ್ಯಾಕ್ ಅಂಶಗಳನ್ನು ಒಳಗೊಂಡಿದೆ. ಇದು ಅರ್ಥ ಬ್ಲ್ಯಾಕ್ ರೂಫ್ ರೈಲ್ ಅನ್ನು ಪಡೆದುಕೊಳ್ಳುತ್ತದೆ. ನಾವು ಮೇಲೆ ಹೇಳಿದಂತೆ ಕ್ರೋಮ್‌ನ ಏಕೈಕ ಭಾಗವೆಂದರೆ ಫೆಂಡರ್‌ನ ಬದಿಯಲ್ಲಿರುವ ಸ್ಪೋರ್ಟ್‌ಲೈನ್ ಬ್ಯಾಡ್ಜ್ ಆಗಿದೆ ಇನ್ನು ಆಂಥ್ರಾಸೈಟ್ ಗ್ರೇ ಬಣ್ಣದ 17 ಇಂಚಿನ ಮಲ್ಟಿಸ್ಪೋಕ್ ವ್ಹೀಲ್ ಗಳು ಆಕರ್ಷಕವಾಗಿ ಕಾಣುತ್ತದೆ. ಆದರೆ ಈ ವರ್ಷದ ಆರಂಭದಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಇದನ್ನು ಪ್ರದರ್ಶಿಸಲಾಗಿದ್ದರಿಂದ ನಾವು 19 ಇಂಚುಗಳಷ್ಟು ನಿರೀಕ್ಷಿಸುತ್ತಿದ್ದೇವೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಈ ಕಾರಿನ ಹಿಂಭಾಗದಲ್ಲಿ ಹೆಚ್ಚಿನ ಪ್ರಮಾಣದ ಬ್ಲ್ಯಾಕ್ ಅಂಶಗಳನ್ನು ಒಳಗೊಂಡಿವೆ. ಸ್ಕೋಡಾ ಲೋಗೋ ಬದಲಾಗಿ ಸ್ಪೋರ್ಟ್‌ಲೈನ್ ಮಧ್ಯದಲ್ಲಿಯೇ ಸ್ಕೋಡಾ ಬ್ಯಾಡ್ಜ್ ಮತ್ತು ಕೆಳಗಿನ ಸೂಪರ್ಬ್ ಬ್ಯಾಡ್ಜ್ ಅನ್ನು ಪಡೆಯುತ್ತದೆ ಬೂಟ್ ಲಿಪ್ ಸ್ಪಾಯ್ಲರ್ ಅನ್ನು ಸಹ ಪಡೆಯುತ್ತದೆ ಮತ್ತು ಟೇಲ್ ಲೈಟ್ ಗಳು ಕನೆಕ್ಟ್ ಆಗಿರುವ ಟ್ರಿಮ್ ಸಹ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಹೊಂದಿದೆ. ಹಿಂಭಾಗದ ಬಂಪರಿನ ಭಾಗದಲ್ಲಿ ಮಾತ್ರ ಕೆಲವು ಕ್ರೋಮ್ ಅಸೆಂಟ್ ಗಳನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಟೈಲ್‌ಲೈಟ್ ಹೆಡ್‌ಲೈಟ್‌ಗಳಲ್ಲಿರುವ ಅದೇ ಕ್ರೀಸ್ಟಲ್ ಅಂಶಗಳನ್ನು ಹೊಂದಿದೆ. ಎಲ್ಇಡಿ ಒಂದಾಗಿದೆ ಮತ್ತು ಡೈನಾಮಿಕ್ ಎಂಡಿಕೇಟರ್ ಗಳನ್ನು ಹೊಂದಿವೆ.ಈ ಯುನಿಟ್ ಸ್ಲೀಕ್ ಆಗಿ ಮತ್ತು ಕಾರಿನ ಒಟ್ಟಾರೆ ನಿಲುವಿನೊಂದಿಗೆ ನಿಜವಾಗಿಯೂ ಚೆನ್ನಾಗಿ ಕಾಣುತ್ತದೆ. ಹಿಂಭಾಗದ ಟೈಲ್ ಗೇಟ್ ಮಿರರ್ ಫಿನಿಶಿಂಗ್ ಸೆಡಾನ್‌ನ ಹಿಂಭಾಗಕ್ಕೆ ಹೆಚ್ಚಿನ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಕಾರಿನ ಒಳಾಂಗಣ ವಿನ್ಯಾಸ

ಸೂಪರ್ಬ್ ಸ್ಪೋರ್ಟ್‌ಲೈನ್ ಕಾರಿನ ಹೊರಭಾಗದಲ್ಲಿ ಅಲ್ಲದೇ ಒಳಭಾಗದಲ್ಲಿಯು ಬ್ಲ್ಯಾಕ್ ಅಂಶಗಳನ್ನು ಒಳಗೊಂಡಿದೆ. ಕಾರಿನ ಡ್ಯಾಶ್‌ಬೋರ್ಡ್, ಸೀಟುಗಳು ಮತ್ತು ರೂಫ್ ರೈಲ್ ಗಳಲ್ಲಿ ಬ್ಲ್ಯಾಕ್ ಅಂಶಗಳನ್ನು ಹೊಂದಿವೆ. ಕಾರು ನಿಜವಾಗಿಯೂ ಒಳಗಿನಿಂದಲೂ ಸ್ಪೋರ್ಟಿ ಆಗಿ ಕಾಣುತ್ತದೆ, ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸಲು ಕೆಲವು ಬ್ಲ್ಯಾಕ್ ಅಸೆಂಟ್ ಗಳನ್ನು ಅಳವಡಿಸಿದ್ದಾರೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಈ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರಿನ ಸೀಟುಗಳು ಬಗ್ಗೆ ಮಾತನಾಡೋಣ, ಮುಂಭಾಗದ ಎರಡು ಸೀಟುಗಳು ಸ್ಕೋಡಾ ಆಕ್ಟೀವಿಯಾ ವಿಆರ್ಎಸ್ ನಲ್ಲಿರುವಂತೆಯೇ ಇದೆ. ಬ್ಯಾಡ್ಜಿಂಗ್ ಇಲ್ಲದೆ ಈ ಸೀಟುಗಳು ಅರಾಮದಾಯಕ ಅನುಭವವನ್ನು ನೀಡುತ್ತದೆ. ಕಠಿಣವಾದ ತಿರುವುಗಳಲ್ಲಿ ಉತ್ತಮ ಥೈ ಸಂಪೂರ್ಟ್ ಮತ್ತು ಸೈಡ್ ಬೋಲ್‌ಸ್ಟರ್‌ಗಳನ್ನು ನೀಡುತ್ತವೆ. ಈ ಕಾರಿನ ಸೀಟುಗಳ ಮೇಲೆ ಮೇಲೆ ಮತ್ತು ಎಲ್ಲೆಡೆಯೂ ಅಲ್ಕಾಂಟರಾ ಮತ್ತು ಲೆದರ್ ನಿಂದ ಕೂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಮುಂಭಾಗದ ಎರಡು ಸೀಟುಗಳು ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡಬಹುದಾದದ ಸೀಟುಗಳಾಗಿದೆ. ಡ್ರೈವರ್ ಸೀಟ್ ಮಾತ್ರ ಮೆಮೊರಿ ಫಂಕ್ಷನ್ ಅನ್ನು ಹೊಂದಿದೆ. ಮುಂಭಾಗದ ಸೀಟುಗಳು ಸ್ಥಿರ ಹೆಡ್‌ರೆಸ್ಟ್‌ಗಳನ್ನು ಸಹ ಪಡೆಯುತ್ತವೆ, ಅದು ಬಕೆಟ್ ಸೀಟುಗಳ ರೀತಿ ಕಾಣುವಂತೆ ಮಾಡುತ್ತದೆ. ಸೂಪರ್ಬ್ ಕಾರಿನಲ್ಲಿ 625-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಇನ್ನು ಹಿಂದಿನ ಸೀಟುಗಳ ಬಗ್ಗೆ ಹೇಳುವುದಾದರೆ ಸೂಪರ್ಬ್ ಕಾರು ಹಿಂಭಾಗದಲ್ಲಿ ಸೀಟುಗಳ ನಡೆವೆ ಉತ್ತಮ ಸ್ಪೇಸ್ ಅನ್ನು ಹೊಂದಿದೆ. ಮುಂಬೈನಲ್ಲಿರುವ ಒಂದು ಬಿಎಚ್‌ಕೆ ಫ್ಲಾಟ್‌ನಂತಿದೆ ಎಂದು ಬೇಕಾದರೆ ಹೇಳಬಹುದು. ಸಾಕಷ್ಟು ಲೆಗ್ ರೂಂ ಮತ್ತು ಹೆಡ್ ರೂಂ ಅನ್ನು ಹೊಂದಿದೆ. ಹಿಂಭಾಗದಲ್ಲಿ ಸೀಟುಗಳಲ್ಲಿ ಮೂರು ಪ್ರಯಾಣಿಕರು ಅರಾಮಾದಾಯಕವಾಗಿ ಕುಳಿತು ಪ್ರಯಾಣಿಸಬಹುದಾಗಿದೆ. ಹಿಂಭಾಗದ ಪ್ರಯಾಣಿಕರಿಗೆ ಎಸಿ ವೆಂಟ್ ಮತ್ತು ಕ್ಲೈಮೆಂಟ್ ಕಂಟ್ರೋಲ್ ಫೀಚರ್ ಆಯ್ಕೆಯನ್ನು ನೀಡಿದೆ. ಇನ್ನು ಸ್ಪೋರ್ಟ್‌ಲೈನ್ ಕಾರಿನಲ್ಲಿ ಬಾಸ್ ಮೋಡ್ ಸ್ವಿಚ್‌ಗಳನ್ನು ನೀಡಲಾಗಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಇನ್ನು ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಕ್ಯಾಬಿನ್ ಸೆಂಟ್ರಿಲ್ ಅಲ್ಲಿ ನೀಡಲಾಗಿದೆ. ಈ ಸಿಸ್ಟಂ ಸಾಕಷ್ಟು ಮಾಹಿತಿಯನ್ನು ಒದಗಿಸುತದೆ. ಇದು ಅಂಡ್ರಾಯ್ಡ್ ಮತ್ತು ಆಪಲ್ ಕಾರ್ ಪ್ಲೇಯನ್ನು ಸಹ ಒಳಗೊಂಡಿದೆ. ಎಂಟು-ಸ್ಪೀಕರ್ ಆಡಿಯೊ ಸೆಟಪ್ ಅನ್ನು ಪಡೆಯುತ್ತದೆ ಅದು ನಿಜವಾಗಿಯೂ ಉತ್ತಮವಾಗಿದೆ. ಮ್ಯಾಟ್ ಕಾರ್ಬನ್ ಫೈಬರ್ ಟ್ರಿಮ್‌ಗಳನ್ನು ಮತ್ತು ಮುಂಭಾಗದ ಪ್ರಯಾಣಿಕರ ಬದಿಯಲ್ಲಿ ಸ್ಪೋರ್ಟ್‌ಲೈನ್ ಬ್ಯಾಡ್ಜ್ ಅನ್ನು ಸಹ ಪಡೆಯುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಈ ಸೆಡಾನ್ ಸ್ಪೋರ್ಟ್ ಸಾಮರ್ಥ್ಯವನ್ನು ಹೆಚ್ಚಿಸುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮುಖ್ಯ ಹೈಲೈಟ್ ಆಗಿದೆ. ಕ್ಲಸ್ಟರ್ ವಿಭಿನ್ನ ವೀಕ್ಷಣೆ ಸೆಟ್ಟಿಂಗ್‌ಗಳನ್ನು ಹೊಂದಿದೆ ಮತ್ತು ಚಾಲಕನ ಅಗತ್ಯಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದು. ಕಾರಿನ ಬಗ್ಗೆ ಒಂದು ವಿಷಯವೆಂದರೆ ನೀವು ಕಾರಿನ ಸುತ್ತಲಿನ ಬೆಳಕನ್ನು ಎಲ್ಲಿ ಬದಲಾಯಿಸಿದರೂ ಕ್ಲಸ್ಟರ್‌ನಲ್ಲಿನ ಬ್ಯಾಕ್‌ಲೈಟ್ ಕೂಡ ಮೂಡ್ ಲೈಟ್‌ನ ಬಣ್ಣಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಸ್ಪೋರ್ಟ್‌ಲೈನ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ, ಲೆದರ್ ನಿಂದ ಕೂಡಿದ್ದು, ಬ್ಯಾಡ್ಜ್ ಹೊರತುಪಡಿಸಿ ಮತ್ತೆ ವಿಆರ್ಎಸ್ ಮಾದರಿಗಳಂತೆ ಕಾಣುತ್ತದೆ. ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಗಳು ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಎರಡನ್ನೂ ನಿಯಂತ್ರಿಸುತ್ತದೆ. ಸ್ಪೋರ್ಟ್‌ಲೈನ್ ಕಾರು ಹೆಡ್ಸ್-ಅಪ್-ಡಿಸ್ ಪ್ಲೇ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸುತ್ತೇವೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಎಂಜಿನ್ ಸಾಮರ್ಥ್ಯ

ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರಿನ ಹುಡ್ ಅಡಿಯಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಟಿಎಸ್‌ಐ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 188 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಏಳು-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಇದರಲ್ಲಿ ‘ಡಿ' ಮತ್ತು ‘ಎಸ್' ಮೋಡ್ ಹೊರತುಪಡಿಸಿ ಯಾವುದೇ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಎಂಜಿನ್ ಅದ್ಭುತ ಪವರ್ ಮತ್ತು ಪರ್ಫಾಮೆನ್ಸ್ ಅನ್ನು ನೀಡುತ್ತದೆ. ಗೇರ್ ಬಾಕ್ಸ್ ಅನ್ನು ಆಟೋಮ್ಯಾಟಿಕ್ ಮೋಡ್ ಅನ್ನು ಬದಲಾಯಿಸಿದರೆ ನೀವು ಅದರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆಯುತ್ತೀರಿ. . ಶಿಫ್ಟ್‌ಗಳನ್ನು ಸುಲಭಗೊಳಿಸಲು ಪ್ಯಾಡಲ್ ಶಿಫ್ಟರ್‌ಗಳಿವೆ ಮತ್ತು ಅವು ‘ಎಸ್' ಮೋಡ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಐಷಾರಾಮಿ ಸೆಡಾನ್ ಆಗಿರುವುದರಿಂದ ಸೂಪರ್ಬ್ ನಲ್ಲಿ ಉತ್ತಮ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. . ಆದರೆ ಸ್ಪೋರ್ಟ್‌ಲೈನ್‌ನಲ್ಲಿ, ಸೆಟಪ್ ಎಲ್ & ಕೆ ಆವೃತ್ತಿಯಲ್ಲಿನ ಸೆಟಪ್‌ಗಿಂತ ಸ್ವಲ್ಪ ಗಟ್ಟಿಯಾಗಿರುತ್ತದೆ ಮತ್ತು ಅದರಿಂದಾಗಿ ಅತ್ಯುತ್ತಮವಾದ ಡ್ರೈವಿಂಗ್ ಅನುಭವವನ್ನು ನೀಡುತ್ತದೆ,

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಇನ್ನು ರಸ್ತೆಗಳಲ್ಲಿ ಗುಂಡಿಗಳು ಮತ್ತು ಉಬ್ಬುಗಳಲ್ಲಿ ಕಾರು ಇಳಿದಾಗ ಒಳಭಾಗದಲ್ಲಿ ಅಷ್ಟು ಅನುಭವವಾಗುವುದಿಲ್ಲ. ಎನ್ವಿಹೆಚ್ ಮಟ್ಟಗಳು ಮತ್ತು ಕ್ಯಾಬಿನ್ ಇನ್ಸ್ ಲೋಷನ್ ಅತ್ಯುತ್ತಮವಾಗಿದೆ ಮತ್ತು ಹೊರಗಿನ ಶಬ್ದಗಳನ್ನು ಒಳಗೆ ಕೆಳದಂತೆ ನೋಡಿಕೊಳ್ಳುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಮೈಲೇಜ್ ಸಂಬಂಧಿಸಿದಂತೆ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ನಗರಗಳಲ್ಲಿ ಪ್ರತಿ ಲೀಟರ್ ಗೆ 10 ಕಿ.ಮೀ ಮತ್ತು ಹೆದ್ದಾರಿಯಲ್ಲಿ 14 ರಿಂದ 16 ಕಿಮೀ ಮೈಲೇಜ್ ಅನ್ನು ನೀಡುತ್ತದೆ. 66 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯದೊಂದಿಗೆ, ನೀವು ಪೂರ್ಣ ಟ್ಯಾಂಕ್‌ನಲ್ಲಿ 550 ಕಿ.ಮೀ ಗಿಂತ ಹೆಚ್ಚು ಸುಲಭವಾಗಿ ಹೋಗಬಹುದು.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಡ್ರೈವ್‌ಸ್ಪಾಕ್ ಅಭಿಪ್ರಾಯ

ಸ್ಕೋಡಾ ಸೂಪರ್ಬ್ ಮಾರುಕಟ್ಟೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ ಐಷಾರಾಮಿ ಸೆಡಾನ್ ಗಳಲ್ಲಿ ಒಂದಾಗಿದೆ. ಫೇಸ್ ಲಿಫ್ಟ್ ಮೂರನೇ ತಲೆಮಾರಿನ ಸೂಪರ್ಬ್ ಸಂಪೂರ್ಣವಾಗಿ ಅದ್ಭುತವಾಗಿದೆ. ಮುಂಭಾಗದವು ಸ್ಪೋರ್ಟಿ ಲುಕ್ ನಿಂದ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಸೆಡಾನ್

ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.29.99 ಲಕ್ಷಗಳಾಗಿದೆ. ಈ ಸೇಡಾನ್ ವೇಗವಾಗಿ ಚಲಿಸುವಾಗ ಕೂಡ ಉತ್ತಮವಾಗಿ ಕಂಟ್ರೋಲ್ ಅನ್ನು ಹೊಂದಿದೆ. ಲಾಂಗ್ ಡ್ರೈವ್ ಅಲ್ಲಿಯು ಉತ್ತಮ ಕಂಫರ್ಟ್ ಅನುಭವವನ್ನು ನೀಡುತ್ತದೆ.

Most Read Articles

Kannada
Read more on ಸ್ಕೋಡಾ skoda
English summary
Skoda Superb Sportline Road Test Review. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X