ನಿಸ್ಸಾನ್ ಕಿಕ್ಸ್ ಟರ್ಬೋ ರಿವ್ಯೂ: ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಜಪಾನ್ ಕಾರು ಉತ್ಪಾದನಾ ಕಂಪನಿಯಾದ ನಿಸ್ಸಾನ್ ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹಲವು ಕಾರುಗಳ ಮಾರಾಟ ಹೊಂದಿದ್ದರೂ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವಲ್ಲಿ ಹಿಂದೆ ಬಿದ್ದಿದೆ. ಗುಣಮಟ್ಟ, ಆಕರ್ಷಕ ಬೆಲೆಯ ಕಾರು ಮಾದರಿಗಳನ್ನು ಹೊಂದಿದ್ದರೂ ಬೇಡಿಕೆಯಲ್ಲಿ ಸತತ ಹಿನ್ನಡೆ ಅನುಭವಿಸಿದ್ದು, ವಿವಿಧ ಹಂತದ ಮಾರುಕಟ್ಟೆ ಅಧ್ಯಯನದ ನಂತರ ಕಿಕ್ಸ್ ಮಾದರಿಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

2018ರಲ್ಲಿ ಕಿಕ್ಸ್ ಮಾದರಿಯನ್ನು ಬಿಡುಗಡೆ ಮಾಡಿದ್ದ ನಿಸ್ಸಾನ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಯೊಂದಿಗೆ ಅಭಿವೃದ್ದಿಗೊಳಿಸಿದ್ದು, ಕಳೆದ ಎಪ್ರಿಲ್‌ನಲ್ಲಿ ಕಡ್ಡಾಯವಾಗಿ ಜಾರಿಗೆ ಬಂದ ಬಿಎಸ್-6 ಎಮಿಷನ್ ಅನುಸಾರವಾಗಿ ಇದೀಗ ಮಾರುಕಟ್ಟೆ ಪ್ರವೇಶಿಸಿದೆ. ಈ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದ ಕಿಕ್ಸ್ ಕಾರು ಇದೀಗ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಮಾದರಿಯೊಂದಿಗೆ ಮಾರಾಟಗೊಳ್ಳುತ್ತಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಕಿಕ್ಸ್ ಕಾರು ಮಾದರಿಯು ಬಿಎಸ್-6 ಜಾರಿ ನಂತರ 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.3-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಟರ್ಬೋ ಪೆಟ್ರೋಲ್ ಮಾದರಿಯು ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಆಕರ್ಷಕ ಬೆಲೆಯೊಂದಿಗೆ ಖರೀದಿಗೆ ಲಭ್ಯವಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯನ್ನು ಸಹಭಾಗೀತ್ವದ ಆಟೋ ಕಂಪನಿಯಾದ ರೆನಾಲ್ಟ್ ಜೊತೆಗೂಡಿ ನಿರ್ಮಾಣ ಮಾಡಲಾಗಿದ್ದು, ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಟರ್ಬೋ ಪೆಟ್ರೋಲ್ ಮಾದರಿಯು ಪರ್ಫಾಮೆನ್ಸ್‌ನಲ್ಲಿ ಪ್ರತಿಸ್ಪರ್ಧಿ ಕಾರು ಮಾದರಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಬಿಎಸ್-6 ಎಂಜಿನ್‌ನೊಂದಿಗೆ ಕಿಕ್ಸ್ ಉನ್ನತೀಕರಿಸಿದ ನಂತರ ಹೊಸ ಕಾರು ಚಾಲನೆಗೆ ಆಹ್ವಾನಿಸಿದ್ದ ನಿಸ್ಸಾನ್ ಕಂಪನಿಯು ಡ್ರೈವ್‌ಸ್ಪಾರ್ಕ್ ತಂಡಕ್ಕೆ ಟರ್ಬೋ ಪೆಟ್ರೋಲ್ ಮಾದರಿಯನ್ನು ನೀಡಿತ್ತು. ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್‌ ಹೊಂದಿರುವ ಟರ್ಬೋ ಮಾದರಿಯು ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ. ಹಾಗಾದ್ರೆ ಹೊಸ ಕಾರಿನಲ್ಲಿ ಗಮನಸೆಳೆಯುವ ಅಂಶಗಳ ಯಾವವು? ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಿಂತ ವಿಭಿನ್ನವಾಗಿದೆ ಎನ್ನುವ ಮಾಹಿತಿಗಳನ್ನು ಈ ವಿಮರ್ಶೆಯ ಲೇಖನದಲ್ಲಿ ಚರ್ಚಿಸಲಾಗಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಡಿಸೈನ್ ಮತ್ತು ಸ್ಟೈಲ್

ಮೇಲೆ ಹೇಳಿದಂತೆ ಕಿಕ್ಸ್ ಕಾರು ಮಾದರಿಯು ಹೊಸ ಎಂಜಿನ್‌ನೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ನೀರಿಕ್ಷೆಯಲ್ಲಿದ್ದು, ಹೊಸ ಪವರ್ ಟ್ರೈನ್ ಆಯ್ಕೆಯನ್ನು ಹೊರತುಪಡಿಸಿ ಕಾರಿನ ವಿನ್ಯಾಸಗಳು ಈ ಹಿಂದಿನ ಮಾದರಿಯಂತೆ ಮುಂದುವರಿಸಲಾಗಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಹೊಸ ಕಾರಿನಲ್ಲಿ ಟರ್ಬೋ ಪೆಟ್ರೋಲ್ ಮಾದರಿಯನ್ನು ನೀಡಿದ್ದರೂ ಸಹ ಕಾರಿನ ಹೊರಭಾಗದಲ್ಲಿ ಯಾವುದೇ ಟರ್ಬೋ ಬ್ಯಾಡ್ಜ್ ನೀಡದ ನಿಸ್ಸಾನ್ ಕಂಪನಿಯು ಕಾರಿನ ವಿನ್ಯಾಸವನ್ನು ಸಾಮಾನ್ಯ ಮಾದರಿಯಂತೆ ಕಾಯ್ದುಕೊಂಡಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಕಿಕ್ಸ್ ಎಸ್‌ಯುವಿ ಕಾರಿನ ಮುಂಭಾಗವು ಬಲಿಷ್ಠ ವಿನ್ಯಾಸವನ್ನು ಹೊಂದಿದ್ದು, ಮೆಸ್ ಗ್ರಿಲ್ ಮತ್ತು ತೀಕ್ಷ್ಮವಾದ ಕ್ರೋಮ್ ಸೌಲಭ್ಯದೊಂದಿಗೆ ಬ್ರಾಂಡ್ ಲೊಗೊ ಗಮನಸೆಳೆಯುತ್ತದೆ. ಹಾಗೆಯೇ ಕಾರಿನ ಎರಡು ಬದಿಯಲ್ಲೂ ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್, ಎಲ್ಇಡಿ ಪ್ರೋಜೆಕ್ಟರ್, ಎಲ್ಇಡಿ ಡಿಆರ್‌ಎಲ್ಎಸ್ ಸೌಲಭ್ಯಗಳಿವೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಹೊಸ ಕಾರಿನಲ್ಲಿ ಬಲಿಷ್ಠವಾದ ಫ್ರಂಟ್ ಬಂಪರ್ ವಿನ್ಯಾಸ, ಮುಂಭಾಗದ ಎರಡು ಬದಿಗಳಲ್ಲೂ ಫಾಗ್ ಲ್ಯಾಂಪ್, ಕಾರ್ನರಿಂಗ್ ಲ್ಯಾಂಪ್ಸ್, ಸಿಲ್ವರ್ ಫೀನಿಶ್ಡ್ ಸ್ಕೀಡ್ ಪ್ಲೇಟ್ ಸೌಲಭ್ಯವು ಆಕರ್ಷಕವಾಗಿದ್ದು, ಕಾರಿನ ಸುತ್ತಲು ಕ್ಲಾಡಿಂಗ್, ವೀಲ್ಹ್ ಆರ್ಚ್ ಮತ್ತು 17-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್‌ಗಳು ಗಮನಸೆಳೆಯುತ್ತವೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಕಿಕ್ಸ್ ಬಿಎಸ್-6 ಕಾರಿನಲ್ಲಿ ಬ್ಲ್ಯಾಕ್ಡ್ ಔಟ್ ಸಿ ಪಿಲ್ಲರ್, ಫ್ಲೋಟರಿಂಗ್-ರೂಫ್, ಸಿಲ್ವರ್ ರೂಫ್ ರೈಲ್ಸ್ ಸೌಲಭ್ಯಗಳು ಕಾರಿನ ಹೊರನೋಟಕ್ಕೆ ಮತ್ತಷ್ಟು ಮೆರಗು ನೀಡಲಿದ್ದು, ವ್ಯಾರ್ಪ್ ಅರೌಂಡ್ ಎಲ್ಇಡಿ ಟೈಲ್ ಲೈಟ್ಸ್, ರೂಫ್ ಸ್ಪಾಯ್ಲರ್, ಇಂಟ್ರಾಗ್ರೆಟೆಡ್ ಬ್ರೆಕ್ ಲೈಟ್ಸ್, ಕ್ರೋಮ್ ಸ್ಟ್ರೀಪ್ ಮತ್ತು ರಿಪ್ಲೆಕ್ಟರ್ ಒಳಗೊಂಡ ಸಿಲ್ವರ್ ಸ್ಕೀಡ್ ಪ್ಲೇಟ್ ಸೌಲಭ್ಯವಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಕಿಕ್ಸ್ ಇಂಟಿರಿಯರ್

ಪ್ರೀಮಿಯಂ ಇಂಟಿರಿಯಯರ್ ವಿನ್ಯಾಸವನ್ನು ಹೊಂದಿರುವ ಹೊಸ ಕಿಕ್ಸ್ ಕಾರು ಮಾದರಿಯು ಈ ಹಿಂದಿನ ಮಾದರಿಯಂತೆ ಬಹುತೇಕ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಡ್ಯುಯಲ್ ಟೋನ್ ಥೀಮ್ ಒಳಗೊಂಡ ಬ್ಲ್ಯಾಕ್ ಆ್ಯಂಡ್ ಬ್ರೌನ್ ಲೆದರ್ ಆಸನಗಳು, ಸಾಫ್ಟ್ ಟಚ್ ಹೊಂದಿರುವ ಡ್ಯಾಶ್‌ಬೋರ್ಡ್ ಕಾರಿನ ಒಳ ಆಕರ್ಷಣೆಯನ್ನು ಹೆಚ್ಚಿಸುತ್ತವೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ನಿಸ್ಸಾನ್ ಕಂಪನಿಯು ಹೊಸ ಕಾರಿನ ಒಳಭಾಗದ ಟಚ್ ಪಾಯಿಂಟ್‌ಗಳಲ್ಲಿ ಲೆದರ್ ಹೊದಿಕೆಯನ್ನು ಬಳಕೆ ಮಾಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಸ್ಪೀರಿಂಗ್ ವೀಲ್ಹ್, ಡ್ಯಾಶ್‌ಬೋರ್ಡ್, ಸೈಡ್ ಡೋರ್ ಪ್ಯಾನೆಲ್, ಗೇರ್ ಲೀವರ್, ಸೆಂಟರ್ ಆರ್ಮ್ ರೆಸ್ಟ್ ಸೌಲಭ್ಯಗಳು ಲೆದರ್ ಹೊದಿಕೆ ಪಡೆದುಕೊಂಡಿವೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಹೊಸ ಕಾರಿನ ಚಾಲನೆಯನ್ನು ಮತ್ತು ಬಿಗಿ ಹಿಡಿತಕ್ಕಾಗಿ ದೊಡ್ಡ ಗಾತ್ರದ ಫ್ಲ್ಯಾಟ್ ಬಾಟಮ್ ವಿನ್ಯಾಸದ ತ್ರಿ ಸ್ಪೋಕ್ ಸ್ಪೀರಿಂಗ್ ವೀಲ್ಹ್ ನೀಡಲಾಗಿದ್ದು, ಸ್ಟೀರಿಂಗ್ ವೀಲ್ಹ್‌ಗಳಲ್ಲಿ ಆಡಿಯೋ ಮತ್ತು ಕರೆಯನ್ನು ನಿಯಂತ್ರಿಸಲು ಮೌಂಟೆಡ್ ಬಟನ್ ಸೌಲಭ್ಯವನ್ನು ಒಳಗೊಂಡಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಸ್ಟ್ರೀರಿಂಗ್ ವೀಲ್ಹ್ ಹಿಂಬದಿಯಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಪೀಡೋ ಮೀಟರ್ ಸ್ಪಷ್ಟವಾಗಿ ಗೋಚರಿಸಲು ಮಧ್ಯದಲ್ಲಿ ಆಯತಾಕಾರದ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ ನೀಡಲಾಗಿದ್ದು, ಎಂಐಡಿ ಎರಡು ಬದಿಗಳಲ್ಲೂ ಅಗಲಾನ್ ಮಾದರಿಯ ಟ್ಯಾಕೋಮಿಟರ್, ಫ್ಯೂಲ್, ಟೆಂಪ್ರೆಚರ್ ಮೀಟರ್ ನೀಡಲಾಗಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

2020ರ ನಿಸ್ಸಾನ್ ಕಿಕ್ಸ್‌ನಲ್ಲಿ ಸೆಂಟರ್ ಕನ್ಸೋಲ್‌ನಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಬ್ರಾಂಡ್‌ನ ಕನೆಕ್ಟೆಡ್ ಕಾರ್ ಟೆಕ್ನಾಲಜಿ ಜೊತೆಗೆ ಇತರೆ ಸ್ಮಾರ್ಟ್‌ಫೋನ್ ಸಂಪರ್ಕಿತ ಆಯ್ಕೆಗಳಾದ ಬ್ಲೂಟೂತ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಒಳಗೊಂಡಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಹಾಗೆಯೇ ಹೊಸ ಕಾರಿನಲ್ಲಿ ನಿರಂತರವಾಗಿ ಮಾರ್ಗಸೂಚಿ ನೀಡುವ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಹೊಂದಿದ್ದು, ಕ್ಯಾಮೆರಾ ಪರದೆಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತ ಇನ್ನಷ್ಟು ತೀಕ್ಷ್ಮವಾಗುವ ಅವಶ್ಯಕತೆಯಿರುವುದು ಕಾರು ಚಾಲನೆ ವೇಳೆ ಕಂಡುಬಂದಿತು.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಅದಾಗ್ಯೂ ಹೊಸ ಕಾರಿನ ಆಸನ ಸೌಲಭ್ಯವು ಅರಾಮದಾಯಕ ಪ್ರಯಾಣಕ್ಕೆ ಪೂರಕವಾಗಿದ್ದು, ಮುಂಭಾಗದ ಮತ್ತು ಹಿಂಭಾಗದ ಎರಡು ಸಾಲಿನ ಆಸನಗಳಲ್ಲೂ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಜೋಡಿಸಲಾಗಿದೆ. ಜೊತೆಗೆ ಲೆಗ್ ರೂಮ್ ಮತ್ತು ಹೆಡ್ ರೂಮ್ ಆಕರ್ಷಣೆಯಾಗಿದ್ದು, ಹೊಸ ಕಾರು ಚಾಲಕನ ಆಸನವು ಎಲೆಕ್ಟ್ರಾನಿಕ್ ಬದಲಾಗಿ ಮ್ಯಾನುವಲ್ ಹೊಂದಾಣಿಕೆಯ ಫೀಚರ್ಸ್ ನೀಡಲಾಗಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಹಿಂಭಾಗದ ಆಸನ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಜೊತೆ ಹಿಂಭಾಗದಲ್ಲಿ ಎಸಿ ವೆಂಟ್ಸ್ ಜೊತೆಗೆ ಸೆಂಟ್ರಲ್ ಆರ್ಮ್‌ಸ್ಟ್ರೆಸ್ಟ್ ನೀಡಲಾಗಿದ್ದು, 60:40 ರಿಯರ್ ಸೀಟ್ ಸ್ಪೀಟ್‌ನೊಂದಿಗೆ 400-ಲೀಟರ್ ಬೂಟ್‌ಸ್ಪೆಸ್ ನೀಡಲಾಗಿದೆ.

ಕಿಕ್ಸ್ ಉದ್ದಳತೆ

ಉದ್ದ(ಎಂಎಂಗಳಲ್ಲಿ) 4384
ಅಗಲ(ಎಂಎಂಗಳಲ್ಲಿ) 1813
ಎತ್ತರ (ಎಂಎಂಗಳಲ್ಲಿ) 1669
ವೀಲ್ಹ್‌ಬೆಸ್ (ಎಂಎಂಗಳಲ್ಲಿ) 2673
ಗ್ರೌಂಡ್ ಕ್ಲಿಯರೆನ್ಸ್ (ಎಂಎಂಗಳಲ್ಲಿ) 210
ಬೂಟ್ ಸ್ಪೆಸ್ (ಲೀಟರ್‌ಗಳಲ್ಲಿ) 400
ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ವೆರಿಯೆಂಟ್ ಮತ್ತು ಸೇಫ್ಟಿ ಫೀಚರ್ಸ್‌ಗಳು

2020ರ ಕಿಕ್ಸ್ ಕಾರು ಮಾದರಿಯು ಎಕ್ಸ್ಎಲ್, ಎಕ್ಸ್‌ವಿ, ಎಕ್ಸ್‌ವಿ ಪ್ರೀಮಿಯಂ ಮತ್ತು ಎಕ್ಸ್‌ವಿ ಪ್ರೀಮಿಯಂ ಆಪ್ಷನ್ ವೆರಿಯೆಂಟ್‌ ಒಳಗೊಂಡಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಅತ್ಯುತ್ತಮ ಸೇಫ್ಟಿ ಫೀಚರ್ಸ್ ಪಡೆದುಕೊಂಡಿದೆ.

*ಎಲ್‌ಇಡಿ ಪ್ರೋಜೆಕ್ಟರ್

*17-ಇಂಚಿನ ಡ್ಯುಯಲ್ ಅಲಾಯ್ ವೀಲ್ಹ್

* ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ಒಆರ್‌ವಿಎಂ

*ರೈನ್ ಸೆನ್ಸಿಂಗ್ ವೈಪರ್ಸ್

*ಕೀ ಲೆಸ್ ಎಂಟ್ರಿ

*8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ

*ಎಂಜಿನ್ ಸ್ಟಾರ್ಟ್/ಸ್ಟಾಪ್

*ಕ್ರೂಸ್ ಕಂಟ್ರೋಲ್

* ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್

*ಕೂಲ್ಡ್ ಗ್ಲೊಬಾಕ್ಸ್

*6-ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಆಸನ

*ಲೆದರ್ ಸೀಟುಗಳು

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಕಿಕ್ಸ್ ಕಾರಿನಲ್ಲಿ ಪ್ರಮುಖ ಸೇಫ್ಟಿ ಫೀಚರ್ಸ್‌ಗಳು

*4 ಏರ್‌ಬ್ಯಾಗ್‌ಗಳು

*ಎಬಿಎಸ್ ಜೊತೆ ಇಬಿಡಿ

*ಟ್ರಾಕ್ಷನ್ ಕಂಟ್ರೋಲ್

*ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್

*ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್

*ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್

*ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್

*ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್‌ಲಾಕ್

*360 ಡಿಗ್ರಿ ಕ್ಯಾಮೆರಾ

*ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಆಕ್ಟಿವ್ ಗೈಡ್‌ಲೈನ್ಸ್ ಕ್ಯಾಮೆರ್

*ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್

*ಬ್ರೇಕಿಂಗ್ ಅಸಿಸ್ಟೆನ್ಸ್

*ಇಮ್‌ಮೊಬಿಲೈಸರ್

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಎಂಜಿನ್ ಮತ್ತು ಫರ್ಪಾಮೆನ್ಸ್

ಹೊಸ ಕಿಕ್ಸ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ 1.5-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 1.5-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 105-ಬಿಎಚ್‌ಪಿ ಮತ್ತು142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಟರ್ಬೋ ಪೆಟ್ರೋಲ್ ಮಾದರಿಯು 1.3-ಲೀಟರ್ ಎಂಜಿನ್ ಸೌಲಭ್ಯದೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊದಿಗೆ 156-ಬಿಎಚ್‌ಪಿ ಮತ್ತು 254-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಹೊಸ ಕಾರಿನ ಟರ್ಬೋ ಮಾದರಿಯಲ್ಲಿ ಸಿಲಿಂಡರ್ ಕೊಟಿಂಗ್ ಟೆಕ್ನಾಲಜಿಯನ್ನು ರೆನಾಲ್ಟ್ ಮತ್ತು ಡೈಮ್ಲರ್‌ನಿಂದ ಎರವಲು ಪಡೆದುಕೊಳ್ಳಲಾಗಿದ್ದು, ಹೆಚ್‌ಆರ್13 ಡಿಡಿಐ ಟೆಕ್ನಾಲಜಿಯನ್ನು ಆರ್35 ಜಿಟಿ-ಆರ್ ಸೂಪರ್ ಕಾರು ಮಾದರಿಯನ್ನು ಬಳಕೆ ಮಾಡಲಾಗಿದೆ.

ಹೊಸ ಎಂಜಿನ್ ಕೊಟಿಂಗ್ ಟೆಕ್ನಾಲಜಿಯಿಂದಾಗಿ ಕಾರಿನ ಪರ್ಫಾಮೆನ್ಸ್ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದ್ದು, 1750 ಆರ್‌ಪಿಎಂ ಮಾರ್ಕ್‌ನವರೆಗೆ ಆರಂಭಿಕ ಟರ್ಬೊ ಮಂದಗತಿಯಿದ್ದರೂ ಕೆಲವೇ ಸೆಕೆಂಡುಗಳಲ್ಲಿ ಕಾರಿನ ವೇಗವು ಹೊಸ ಅನುಭೂತಿ ನೀಡುತ್ತದೆ.

ಎಂಜಿನ್ 1.3-ಲೀಟರ್ ಟರ್ಬೋ ಪೆಟ್ರೋಲ್
ಎಂಜಿನ್ ಸಾಮಾರ್ಥ್ಯ 1,330ಸಿಸಿ
ಹಾರ್ಸ್ ಪವರ್ 156ಬಿಎಚ್‌ಪಿ 5500ಆರ್‌ಪಿಎಂನಲ್ಲಿ
ಟಾರ್ಕ್ 254ಎನ್ಎಂ 1600ಆರ್‌ಪಿಎಂನಲ್ಲಿ
ಟ್ರಾನ್ಸ್‌ಮಿಷನ್ 6 ಸ್ಪೀಡ್ ಮ್ಯಾನುವಲ್/7-ಸ್ಪೀಡ್ ಆಟೋ
ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಕಡಿಮೆ ಗೇರ್‌ಶಿಫ್ಟ್‌ಗಳಲ್ಲೂ ಹೆಚ್ಚು ಆಕರ್ಷಕವಾಗಿ ಓವರ್‌ಟೇಕ್‌ಗಳನ್ನು ಅನುಮತಿಸುವ ಕಿಕ್ಸ್ ಟರ್ಬೋ ಮಾದರಿಯು 1750 ಆರ್‌ಪಿಎಂ ಮತ್ತು 6000 ಆರ್‌ಪಿಎಂ ಮಾರ್ಕ್ ನಡುವೆ ಹೆಚ್ಚು ಪರ್ಫಾಮೆನ್ಸ್ ಹೊಂದಿದ್ದು, ನಂತರ ಅದು ತುಸು ಕಡಿಮೆಯಾಗಿದೆ ಎನ್ನಿಸುತ್ತದೆ.

ಆದಾಗ್ಯೂ, 1750 ಆರ್‌ಪಿಎಂ ಮಾರ್ಕ್‌ಗಿಂತ ಕೆಳಗಿರುವ ಪರ್ಫಾಮೆನ್ಸ್ ನಗರದಲ್ಲಿನ ವಾಹನ ದಟ್ಟಣೆಯಲ್ಲಿನ ಸ್ಥಿತಿಯಲ್ಲಿರುವಾಗ ಎಸ್‌ಯುವಿ ತುಸು ಹಿನ್ನಡೆ ಅನುಭವಿಸಿದರೂ ಮ್ಯಾನುಯಲ್ ಗೇರ್ ಶಿಫ್ಟ್‌ಗಳಲ್ಲಿನ ಕಡಿಮೆ ವೇಗದಲ್ಲೂ ಸ್ವಲ್ಪ ಅರಾಮದಾಯಕವಾಗಿದೆ. ಹಾಗೆಯೇ ಸ್ಟೀರಿಂಗ್ ವೀಲ್ಹ್ ತುಸು ಬಿಗಿಯಾದ ಅನುಭವವಾದರೂ ಉತ್ತಮ ಪ್ರತಿಕ್ರಿಯೆ ಹೊಂದಿದ್ದು, ಕಡಿಮೆ ಮತ್ತು ಹೆಚ್ಚಿನ ವೇಗದಲ್ಲೂ ಉತ್ತಮ ವಿಶ್ವಾಸವನ್ನು ನೀಡುತ್ತದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಇನ್ನು ಹೊಸ ಕಾರಿನಲ್ಲಿ ಸಸ್ಪೆಂಷನ್ ಸೌಲಭ್ಯವು ಸಹ ಆಕರ್ಷಕವಾಗಿದ್ದು, ಉಬ್ಬು ತಗ್ಗುಗಳಲ್ಲೂ ಆರಾಮದಾಯಕ ಕಾರು ಚಾಲನೆಗೆ ಸಹಕಾರಿಯಾಗಿದ್ದು, 210-ಎಂಎಂ ನಷ್ಟು ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಸುಲಭವಾಗಿ ಚಲಿಸಲು ಸಹಾಯಕಾರಿಯಾಗಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಕಿಕ್ಸ್ ಟರ್ಬೊದಲ್ಲಿರುವ ಬ್ರೇಕಿಂಗ್ ಸೌಲಭ್ಯವು ಉತ್ತಮವಾಗಿದ್ದು, ಅತಿ ವೇಗದಲ್ಲೂ ಎಸ್‌ಯುವಿಯ ನಿಲುಗಡೆಯನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಹಾಗೆಯೇ ಮುಂಭಾಗ ಮತ್ತು ಹಿಂಭಾಗದಲ್ಲಿ ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯವಿದ್ದು, ಎಮರ್ಜೆನ್ಸಿ ಪ್ಯಾನಿಕ್ ಬ್ರೇಕಿಂಗ್ ಮತ್ತು ಉತ್ತಮ ಹಿಡಿತ ಹೊಂದಿರುವ ಟೈರ್ ಸೌಲಭ್ಯವು ಚಾಲಕನಿಗೆ ಹೆಚ್ಚು ವಿಶ್ವಾಸವನ್ನು ನೀಡುತ್ತದೆ.

ಬೆಲೆ ಮತ್ತು ಬಣ್ಣಗಳ ಆಯ್ಕೆ

ಮೇಲೆ ಹೇಳಿದಂತೆ 2020ರ ನಿಸ್ಸಾನ್ ಕಿಕ್ಸ್ ಕಾರು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಖರೀದಿ ಲಭ್ಯವಿದ್ದು, ಕಡಿಮೆ ಪರ್ಫಾಮೆನ್ಸ್ ಹೊಂದಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್ ನಿಯಂತ್ರಿಸಲ್ಪಡುವ ಎಸ್‌ಯುವಿಯು ಆರಂಭಿಕ ಆರಂಭಿಕ ಮಾದರಿಯಾಗಿದ್ದು, ಇದು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.50 ಲಕ್ಷ ಬೆಲೆ ಹೊಂದಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

1.3-ಲೀಟರ್ ಟರ್ಬೊ-ಪೆಟ್ರೋಲ್ ಚಾಲಿತ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.85 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.15 ಲಕ್ಷ ಬೆಲೆ ಹೊಂದಿದ್ದು, ಆರು ಸಿಂಗಲ್ ಟೋನ್ ಮತ್ತು ಮೂರು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿದೆ.

ಸಿಂಗಲ್ ಟೋನ್‌ನಲ್ಲಿ ಪರ್ಲ್ ವೈಟ್, ಬ್ಲೇಡ್ ಸಿಲ್ವರ್, ಬ್ರೊಂಜ್ ಗ್ರೇ, ಡೀಪ್ ಬ್ಲ್ಯೂ ಪರ್ಲ್, ನೈಟ್ ಶೇಡ್ ಮತ್ತು ಫೈರ್ ರೆಡ್ ಬಣ್ಣಗಳ ಆಯ್ಕೆಯಿದ್ದು, ಡ್ಯುಯಲ್ ಟೋನ್‌ನಲ್ಲಿ ಪರ್ಲ್ ವೈಟ್/ಆಕ್ಸಾನ್ ಬ್ಲ್ಯಾಕ್, ಬ್ರೊಂಜ್ ಗ್ರೇ/ಆ್ಯಂಬರ್ ಆರೇಂಜ್ ಮತ್ತು ಫೈರ್ ರೆಡ್/ಆಕ್ಸಾನ್ ಬ್ಲ್ಯಾಕ್ ಬಣ್ಣಗಳನ್ನು ಹೊಂದಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಪ್ರತಿ ಸ್ಪರ್ಧಿಗಳಿಂತ ಕಿಕ್ಸ್ ಕಾರು ಹೇಗೆ ವಿಭಿನ್ನ?

2020ರ ನಿಸ್ಸಾನ್ ಕಿಕ್ಸ್ ಟರ್ಬೊ ಮಾದರಿಯ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲೇ ಹೆಚ್ಚು ಪರ್ಫಾಮೆನ್ಸ್ ಮಾದರಿಯಾಗಿದ್ದು, ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ ಮತ್ತು ರೆನಾಲ್ಟ್ ಡಸ್ಟರ್ ಟರ್ಬೊ ಎಸ್‌ಯುವಿ ಮಾದರಿಗೆ ಹೆಚ್ಚು ಪೈಪೋಟಿ ನೀಡಲಿದೆ.

ಕಾರು ಮಾದರಿಗಳು ಮತ್ತು ತಾಂತ್ರಿಕ ಅಂಶಗಳು ಕಿಕ್ಸ್ ಟರ್ಬೋ ಕಿಯಾ ಸೆಲ್ಟೊಸ್ ಹ್ಯುಂಡೈ ಕ್ರೆಟಾ
ಎಂಜಿನ್ 1.3-ಲೀಟರ್ ಟರ್ಬೋ ಪೆಟ್ರೋಲ್ 1.4-ಲೀಟರ್ ಟಿ-ಜಿಡಿಐ ಟರ್ಬೋ ಪೆಟ್ರೋಲ್ 1.4-ಲೀಟರ್ ಟಿ-ಜಿಡಿಐ ಟರ್ಬೋ ಪೆಟ್ರೋಲ್
ಎಂಜಿನ್ ಸಾಮರ್ಥ್ಯ 1330-ಸಿಸಿ 1353-ಸಿಸಿ 1353-ಸಿಸಿ
ಹಾರ್ಸ್ ಪವರ್ 156-ಬಿಎಚ್‌ಪಿ 5500ಆರ್‌ಪಿಎಂನಲ್ಲಿ 140-ಬಿಎಚ್‌ಪಿ 6000ಆರ್‌ಪಿಎಂನಲ್ಲಿ 140-ಬಿಎಚ್‌ಪಿ 6000ಆರ್‌ಪಿಎಂನಲ್ಲಿ
ಟಾರ್ಕ್ 254-ಎನ್ಎಂ 1600ಆರ್‌ಪಿನಲ್ಲಿ 242-ಎನ್ಎಂ 1500ಆರ್‌ಪಿಎಂನಲ್ಲಿ 242-ಎನ್ಎಂ 1500ಆರ್‌ಪಿಎಂನಲ್ಲಿ
ಟ್ರಾನ್ಸ್‌ಮಿಷನ್ 6ಮ್ಯಾನುವಲ್/ಸಿವಿಟಿ 6ಮ್ಯಾನುವಲ್/7ಡಿಸಿಟಿ 1.4-ಲೀಟರ್ ಟಿ-ಜಿಡಿಐ ಟರ್ಬೋ ಪೆಟ್ರೋಲ್
ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಕಿಕ್ಸ್ ಕುರಿತು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

2020ರ ನಿಸ್ಸಾನ್ ಕಿಕ್ಸ್ ಟರ್ಬೊ ಮಾದರಿಯು ಖಂಡಿತವಾಗಿಯೂ ಆಕರ್ಷಕ ಬೆಲೆಯೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ಆವೃತ್ತಿಯಾಗಿದ್ದು, ಹೊಸ ಕಾರು ಕೊರಿಯನ್ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ತನ್ನ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಗ್ರಾಹಕರಿಗೆ ವಿಭಿನ್ನವಾದ ಚಾಲನಾ ಅನುಭವ ಒದಗಿಸುವಲ್ಲಿ ಸಫಲವಾಗಿದೆ.

ಕೊರಿಯನ್ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾದ ಹೊಸ ಕಿಕ್ಸ್..

ಕಿಕ್ಸ್ ಕಾರಿನಲ್ಲಿ ಇಷ್ಟವಾಗುವ ಅಂಶಗಳು

ಮಧ್ಯಮ ಗಾತ್ರದ ಎಸ್‌ಯುವಿ ಕಾರಿನಲ್ಲೇ ಅತ್ಯುತ್ತಮ ಪರ್ಫಾಮೆನ್ಸ್ ಮತ್ತು

ವಿಶಾಲವಾದ ಕ್ಯಾಬಿನ್ ಸೌಲಭ್ಯ ಮತ್ತು ಬ್ರೇಕಿಂಗ್ ಸಿಸ್ಟಂ ಆಕರ್ಷಕವಾಗಿದೆ.

ನಿರಾಶೆ ಉಂಟು ಮಾಡುವ ಅಂಶಗಳು

ಪ್ರತಿಸ್ಪರ್ಧಿ ಕಾರು ಮಾದರಿಗಳಂತೆ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳಿಲ್ಲದಿರುವುದು ಮತ್ತು

ದೇಶದ ಪ್ರಮುಖ ಕಡೆಗಳಲ್ಲಿ ನಿಸ್ಸಾನ್ ಸರ್ವಿಸ್ ಸೆಂಟರ್‌ಗಳನ್ನು ಮುಚ್ಚಿರುವುದು ಗ್ರಾಹಕರಿಗೆ ನಿರಾಶೆ ಉಂಟು ಮಾಡುವ ಅಂಶಗಳಾಗಿವೆ.

Most Read Articles

Kannada
English summary
2020 Nissan Kicks Turbo Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X