ಫಸ್ಟ್ ಡ್ರೈವ್ ರಿವ್ಯೂ: ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲೇ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಡಸ್ಟರ್ ಎಸ್‌ಯುವಿ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾದ ರೆನಾಲ್ಟ್ ಕಾಲಕ್ಕೆ ತಕ್ಕಂತೆ ಹೊಸ ಕಾರು ಮಾದರಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಮೊದಲ ಬಾರಿಗೆ ಹೊಸ ಕಾರಿನಲ್ಲಿ ಟರ್ಬೋ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಿರುವುದು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯಾಗಿರುವ ಡಸ್ಟರ್ ಕಾರು ಮಾದರಿಯನ್ನು ಭಾರತದಲ್ಲಿ ಮೊದಲ ಬಾರಿಗೆ 2012ರಲ್ಲಿ ಪರಿಚಯಿಸಿದ್ದ ರೆನಾಲ್ಟ್ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹಲವಾರು ಬಾರಿ ಹೊಸ ಕಾರಿನ ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸುತ್ತ ಬೇಡಿಕೆಯನ್ನು ಕಾಯ್ದಕೊಂಡಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಪೆಟ್ರೋಲ್ ಟರ್ಬೋ ಎಂಜಿನ್ ಮಾದರಿಯು ಕೂಡಾ ಹಲವಾರು ವಿಶೇಷತೆಗಳಿಗೆ ಕಾರಣವಾಗಿದೆ.

ರಗಡ್ ಸ್ಟೈಲಿಷ್ ಜೊತೆಗೆ ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು ಹಲವಾರು ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಸ್ಟ್ಯಾಂಡರ್ಡ್ ಡಸ್ಟರ್ ಮಾದರಿಗಿಂತಲೂ ಟರ್ಬೋ ಪೆಟ್ರೋಲ್ ಆವೃತ್ತಿಯು ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಎಪ್ರಿಲ್ 1ರಿಂದ ಜಾರಿಗೆ ಬಂದ ಹೊಸ ಎಮಿಷನ್ ಪರಿಣಾಮ ಡಸ್ಟರ್ ಕಾರು ಮಾದರಿಯಲ್ಲಿ ಡೀಸೆಲ್ ಆವೃತ್ತಿಯ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ರೆನಾಲ್ಟ್, ಬಿಎಸ್-6 ಡಸ್ಟರ್ ಕಾರಿನಲ್ಲಿ ಹೊಸ ನಿಯಮ ಅನುಸಾರವಾಗಿ ಪೆಟ್ರೋಲ್ ಮತ್ತು ಪೆಟ್ರೋಲ್ ಟರ್ಬೋ ಮಾದರಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಸ್ಟ್ಯಾಂಡರ್ಡ್ ಪೆಟ್ರೋಲ್ ಡಸ್ಟರ್ ಮಾದರಿಯನ್ನು ಕಳೆದ ಮಾರ್ಚ್‌ನಲ್ಲೇ ಬಿಡುಗಡೆ ಮಾಡಿದ್ದ ರೆನಾಲ್ಟ್ ಕಂಪನಿಯು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದ ಟರ್ಬೋ ಪೆಟ್ರೋಲ್ ಮಾದರಿಯನ್ನು ಇದೀಗ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಪರ್ಫಾಮೆನ್ಸ್ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳ ಪರೀಕ್ಷೆಗಾಗಿ ಇತ್ತೀಚೆಗೆ ಡ್ರೈವ್‌ಸ್ಪಾರ್ಕ್ ತಂಡಕ್ಕೆ ರೆನಾಲ್ಟ್ ಕಂಪನಿಯು ಹೊಸ ಕಾರನ್ನು ಹಸ್ತಾಂತರ ಮಾಡಿತ್ತು.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಸುಮಾರು ಒಂದು ವಾರಗಳ ಕಾಲ ಹೊಸ ಕಾರಿನ ಚಾಲನೆ ಮಾಡಿದ ನಮ್ಮ ತಂಡವು ವಿವಿಧ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಹೊಸ ಕಾರಿನ ಪರ್ಫಾಮೆನ್ಸ್ ಮತ್ತು ತಾಂತ್ರಿಕ ಅಂಶಗಳ ಕುರಿತಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸಿತು. ಫಸ್ಟ್ ಡ್ರೈವ್‌ನಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಕಾರು ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ರೆನಾಲ್ಟ್ ಕಂಪನಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವ ನೀರಿಕ್ಷೆಯಿದೆ ಎನ್ನಬಹುದು.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಡಸ್ಟರ್ ಟರ್ಬೋ ಪೆಟ್ರೋಲ್ ಮಾದರಿಯು ಹೊಸದಾಗಿ ಅಭಿವೃದ್ದಿಗೊಳಿಸಲಾದ 1.3-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಪಡೆದುಕೊಂಡಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಸೆಗ್ಮೆಂಟ್ ಇನ್ ಫೀಚರ್ಸ್‌ಗಳಲ್ಲೂ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಡಿಸೈನ್ ಮತ್ತು ಸ್ಟೈಲ್

ಆಕರ್ಷಕ ಕ್ರೊಮ್‌ನೊಂದಿಗೆ ಫ್ರಂಟ್ ಗ್ರಿಲ್ ಹೊಂದಿರುವ ಟರ್ಬೋ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಗ್ರಿಲ್ ಡಿಸೈನ್ ಜೊತೆಗೆ ರೆಡ್ ಇನ್ಸರ್ಟ್ ಹೊಂದಿದ್ದು, ಫಾಗ್ ಲ್ಯಾಂಪ್ ಮೇಲೂ ಕೂಡಾ ರೆಡ್ ಇನ್ಸರ್ಟ್ ನೀಡಲಾಗಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಹಾಗೆಯೇ ಹೆಡ್‌ಲೈಟ್ ಘಟಕವು ಸಹ ಕೆಲವು ಕ್ರೋಮ್ ಆಕ್ಸೆಂಟ್‌ಗಳನ್ನು ಹೊಂದಿದ್ದು, ರೆನಾಲ್ಟ್ ಬ್ಯಾಡ್ಜ್ ಸುತ್ತ ಕಪ್ಪು ಬಣ್ಣವನ್ನು ಸೇರಿಸಲಾಗಿದೆ. ಹೊಸ ಕಾರಿನಲ್ಲಿ ಪ್ರೊಜೆಕ್ಟರ್ ಒಳಗೊಂಡ ಹೆಡ್‌ಲ್ಯಾಂಪ್ ಮತ್ತು ಹೈಭೀಮ್‌ಗಾಗಿ ಪ್ರತಿಫಲಕವನ್ನು ಹೊಂದಿಸಲಾಗಿದ್ದು, ಎರಡೂ ಕಡೆಗಳಲ್ಲೂ ಹ್ಯಾಲೊಜೆನ್ ಬಲ್ಬ್‌ಗಳನ್ನು ಜೋಡಿಸಲಾಗಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಡಿಆರ್‌ಎಲ್ಎಸ್‌ಗಳಿಗಾಗಿ ಟು ಪೀಸ್ ಸೆಟ್‌ಅಪ್ ಜೋಡಿಸಿರುವುದು ಕೂಡಾ ಕಾರಿನ ಮುಂಭಾಗದ ಅಂದವನ್ನು ಹೆಚ್ಚಿಸಿದ್ದು, ಗ್ರೆ ಆಕ್ಸೆಂಟ್ ಕೂಡಾ ಕಾರಿನ ಬಣ್ಣಕ್ಕೆ ಉತ್ತಮ ಆಯ್ಕೆಯಾಗಿದೆ. ಕಾರಿನ ಸೈಡ್ ಪ್ರೊಫೈಲ್ ಕೂಡಾ ಆಕರ್ಷಕವಾಗಿದ್ದು, ಹಲವಾರು ಹೊಸ ಫೀಚರ್ಸ್‌ಗಳನ್ನು ಡಸ್ಟರ್ ಟರ್ಬೋದಲ್ಲಿ ಜೋಡಿಸಲಾಗಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಹೊಸ ಡಸ್ಟರ್ ಕಾರಿನಲ್ಲಿ 17-ಇಂಚಿನ ಡ್ಯುಯಲ್ ಟೋನ್ ಫೈವ್ ಸ್ಪೋಕ್ ಅಲಾಯ್ ವೀಲ್ಹ್, ಸ್ಪೋರ್ಟಿ ವಿನ್ಯಾಸದ ರೂಫ್ ರೈಲ್ಸ್, ರೆಡ್ ಆಕ್ಸೆಂಟ್ ಹೊಂದಿರುವ ಡಸ್ಟರ್ ಬ್ಯಾಡ್ಜ್, ಬಾಡಿ ಕಲರ್ ಹೊಂದಿರುವ ರಿಯಲ್ ವ್ಯೂ ಮಿರರ್, ಇಂಟ್ರಾಗ್ರೆಟೆಡ್ ಇಂಡಿಕೇಟರ್, 205-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವುದು ಆಫ್-ರೋಡ್ ಚಾಲನೆಗೂ ಸಹಕಾರಿಯಾಗಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಇನ್ನು ಹೊಸ ಕಾರಿನ ಹಿಂಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಲಂಭಾಕಾರದಲ್ಲಿರುವ ಟೈಲ್‌ಲೈಟ್ ಜೊತೆ ಎಲ್ಇಡಿ ಸ್ಟ್ರೀಪ್, ಹೊಲೊಜೆನ್ ಬಲ್ಬ್‌ಗಳನ್ನು ನೀಡಲಾಗಿದೆ. ಹಾಗೆಯೇ ರೆಡ್ ಆಕ್ಸೆಂಟ್ ಹೊಂದಿರುವ 'DUSTER' ಬ್ಯಾಡ್ಜ್ ಕೂಡಾ ಆಕರ್ಷಕವಾಗಿದ್ದು, ಕಾಸ್ಪಿಯಾನ್ ಬ್ಲ್ಯೂ ಮತ್ತು ಗ್ರೇ ಇನ್ಸರ್ಟ್ ಸೌಲಭ್ಯವು ಕಾರಿನ ಖದರ್‌ಗೆ ಮತ್ತಷ್ಟು ಪೂರಕವಾಗಿವೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಇಂಟಿರಿಯರ್ ವಿನ್ಯಾಸ

ಹೊರಭಾಗದ ವಿನ್ಯಾಸದಂತೆ ಒಳಭಾಗದ ವಿನ್ಯಾಸದಲ್ಲೂ ಗಮನಸೆಳೆಯುವ ಡಸ್ಟರ್ ಟರ್ಬೋ ಮಾದರಿಯಲ್ಲಿ ಸಾಕಷ್ಟು ಸ್ಥಳಾವಕಾಶದೊಂದಿಗೆ ಆರಾಮದಾಯಕ ಆಸನ ಸೌಲಭ್ಯ ಹೊಂದಿದ್ದು, ಹೊರಭಾಗದಲ್ಲಿ ಟರ್ಬೋ ಮಾದರಿಯಾಗಿ ಗುರುತಿಸಲು ನೀಡಲಾಗಿರುವ ರೆಡ್ ಆಕ್ಸೆಂಟ್‌ಗಳು ಒಳಭಾಗದಲ್ಲಿ ನೀಡದಿರುವುದು ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಯಂತೆ ಭಾಸವಾಗುತ್ತದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಆದರೆ ಒಳಭಾಗದಲ್ಲಿನ ಬಿಡಿಭಾಗಗಳು ಉತ್ತಮ ಗುಣಮಟ್ಟದ ಅಂಶಗಳ ಸೇರ್ಪಡೆ ಹೊಂದಿದ್ದು, ಚಾಲಕನ ಭಾಗದ ಆಸನವು ಎತ್ತರ ಹೊಂದಾಣಿಕೆಯ ವೈಶಿಷ್ಟ್ಯತೆ ಹೊಂದಿದೆ. ಇವು ದೀರ್ಘಾವಧಿಯ ಪ್ರಯಾಣದ ಸಮಯದಲ್ಲಿ ಹೊಸ ಮಾದರಿಯ ಆಸನಗಳು ನಿಮ್ಮನ್ನು ಆಯಾಸಗೊಳಿಸುವುದಿಲ್ಲವಾದರೂ ಅದೇ ಸಮಯದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಇವು ಉತ್ತಮವಲ್ಲ ಎನ್ನಬಹುದು.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಇನ್ನು ಎರಡನೇ ಸಾಲಿನ ಆಸನ ಸೌಲಭ್ಯದ ಬಗೆಗೆ ಹೇಳುವುದಾದರೇ, ಹಿಂಭಾಗದ ಆಸನದಲ್ಲಿ 3 ಜನ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದು. ಆದರೆ ಆರ್ಮ್ ರೆಸ್ಟ್ ಬಯಸುವುದಾದರೇ ಕೇವಲ ಇಬ್ಬರು ಮಾತ್ರ ಹಿಂಭಾಗದ ಆಸನದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಜೊತೆಗೆ ಹಿಂಭಾಗದ ಪ್ರಯಾಣಿಕರಿಗೆ ಸಾಕಷ್ಟ ಹೆಡ್ ರೂಂ ಸೌಲಭ್ಯವಿದ್ದರೂ ಲೆಗೂ ರೂಂ ಸ್ಥಳಾವಕಾಶ ಕೊರತೆ ದೂರದ ಪ್ರಯಾಣಕ್ಕೆ ತೊಂದರೆ ಉಂಟುಮಾಡಬಹುದು.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಹಾಗೆಯೇ ಪ್ರತಿಸ್ಪರ್ಧಿ ಕಾರು ಮಾದರಿಗಳಲ್ಲಿ ಸಾಮಾನ್ಯವಾಗಿ ನೀಡಲಾಗುತ್ತಿರುವ ಸನ್‌ರೂಫ್ ಸೌಲಭ್ಯವು ಡಸ್ಟರ್ ಟರ್ಬೋ ಹೈ ಎಂಡ್ ಮಾದರಿಯಾದ ಆರ್‌ಎಕ್ಸ್‌ಜೆಡ್ ಮಾದರಿಯಲ್ಲಿರಬಹುದು ಎಂದು ನೀರಿಕ್ಷೆ ಮಾಡಲಾಗಿತ್ತು. ಆದರೆ ರೆನಾಲ್ಟ್ ಕಂಪನಿಯು ಹೊಸ ಕಾರು ಮಾದರಿಯಲ್ಲಿ ಸನ್‌ರೂಫ್ ನೀಡಿಲ್ಲ.

ಮಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಡಸ್ಟರ್ ಟರ್ಬೋದಲ್ಲಿನ ಸ್ಟ್ರೀರಿಂಗ್ ಲೆದರ್ ಹೊದಿಕೆ ಹೊಂದಿದ್ದು, ಉತ್ತಮ ಹಿಡಿತಕ್ಕೆ ಅನುಕೂಲಕವಾಗಿವೆ. ಸ್ಪೀರಿಂಗ್ ಮೌಂಟೆಡ್ ಬಟನ್ಸ್‌ಗಳು ಕೂಡಾ ವಿವಿಧ ತಾಂತ್ರಿಕ ಅಂಶಗಳನ್ನು ಅತಿಸುಲಭವಾಗಿ ನಿಯಂತ್ರಿಸಲು ಸಹಕಾರಿಯಾಗಿದ್ದು, ಬೆಸಿಕ್ ಫೀಚರ್ಸ್‌ಗಳಾದ ಅನ್‌ಲಾಗ್ ಡಯಲ್, ಸ್ಪೀಡೋ ಮತ್ತು ಓಡೋ ಮೀಟರ್ ಸೌಲಭ್ಯ ಹೊಂದಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ ಪರದೆಯಲ್ಲಿ ಟ್ರಿಪ್, ಬಾಕಿ ಇರುವ ದೂರ, ಇಂಧನ ಗೇಜ್ ಮುಂತಾದ ಮಾಹಿತಿಯನ್ನು ಒದಗಿಸುತ್ತದೆ. ಇದರೊಂದಿಗೆ ಹೊಸ ಕಾರಿನಲ್ಲಿ ಉತ್ತಮ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಆ್ಯಂಟಿ ರಿಪ್ಲೆಕೆಷನ್ ಸೌಲಭ್ಯ ಹೊಂದಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಹೊಸ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಸಿಸ್ಟಂ ಅನ್ನು ಸೆಂಟರ್ ಕನ್ಸೋಲ್‌ನ ಕೆಳಗೆ ಇರಿಸಲಾಗಿದೆ. ಇದು ಚಾಲನೆ ಸಂದರ್ಭದಲ್ಲಿ ಅಗತ್ಯ ಮಾಹಿತಿ ಪಡೆಯಲು ಸಹಕಾರಿಯಾಗಿದ್ದು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಸಹ ಒಳಗೊಂಡಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಇನ್‌ಸ್ಟ್ರುಮೆಂಟ್ ಕೆಳಭಾಗದಲ್ಲೇ ಚಾರ್ಜಿಂಗ್ ಸಾಕೆಟ್ ನೀಡಲಾಗಿದ್ದು, ಚಾರ್ಜಿಂಗ್ ಸಾಕೆಟ್‌ಗೆ ಸ್ಟಾರ್ಟ್/ಸ್ಟಾಪ್ ಬಟನ್ ನೀಡಲಾಗಿದೆ. ನೀವು ಅವಶ್ಯಕತೆಯಿದ್ದಾಗ ಸ್ಟಾರ್ಟ್ ಬಟನ್ ಒತ್ತುವ ಮೂಲಕ ಚಾರ್ಜಿಂಗ್ ಸಾಕೆಟ್ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಕಾರು ನಿಲುಗಡೆಯಾದಾಗ ಚಾರ್ಜಿಂಗ್ ಸಾಕೆಟ್ ಕೂಡಾ ನಿಷ್ಕ್ರೀಯಗೊಳ್ಳುತ್ತದೆ. ಇದರಿಂದ ಕಾರಿನ ಇಂಧನ ದಹಿಸುವಿಕೆಯಲ್ಲಿ ತುಸು ಉಳಿತಾಯ ಕಂಡುಬಂದರೂ ಅನೇಕ ಸಂದರ್ಭಗಳಲ್ಲಿ ಈ ಸೌಲಭ್ಯವು ಕಿರಿಕಿರಿ ಉಂಟುಮಾಡಬಹುದಾಗಿದ್ದು, ಬೇಡವಾದಲ್ಲಿ ಹೊಸ ತಾಂತ್ರಿಕ ಸೌಲಭ್ಯವನ್ನು ತೆಗೆದುಹಾಕಬಹುದಾಗಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಎಂಜಿನ್ ಮತ್ತು ಪರ್ಫಾಮೆನ್ಸ್

ಡಸ್ಟರ್ ಟರ್ಬೋ ಪೆಟ್ರೋಲ್ ಮಾದರಿಯು ಹೊಚ್ಚ ಹೊಸ 1ಹೆಚ್13 1.3-ಲೀಟರ್, ಫೋರ್ ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 156-ಬಿಎಚ್‌ಪಿ, 245-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಹೊಸ ಕಾರಿನಲ್ಲಿರುವ ಸಿಲಿಂಡರ್ ಕೊಟಿಂಗ್ ಸೌಲಭ್ಯವು ನಿಸ್ಸಾನ್ ಜಿಟಿ-ಆರ್ ಸೂಪರ್ ಕಾರು ಮಾದರಿಯಲ್ಲಿರುವಂತೆ ಡಸ್ಟರ್ ಟರ್ಬೋದಲ್ಲೂ ಜೋಡಿಸಲಾಗಿದ್ದು, ಸೂಪಿರಿಯರ್ ಪರ್ಫಾಮೆನ್ಸ್ ನೀಡುತ್ತದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಹೊಸ ಎಂಜಿನ್ ಮಾದರಿಯು 7 ಹಂತದ ಕಂಟಿನ್ಯೂ ವೆರಿಬಲ್ ಟ್ರಾನ್‌ಮಿಷನ್(ಸಿವಿಟಿ) ಗೇರ್‌ಬಾಕ್ಸ್ ಸೌಲಭ್ಯ ಹೊಂದಿದ್ದು, ಹೊಸ ಗೇರ್‌ಬಾಕ್ಸ್ ಸೌಲಭ್ಯವು ಹೆದ್ದಾರಿಗಳಲ್ಲಿ ಮಾತ್ರವಲ್ಲ ನಗರಪ್ರದೇಶದ ಚಾಲನೆಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಇದರೊಂದಿಗೆ 6-ಸ್ಪೀಡ್ ಮ್ಯಾನುವಲ್ ಮಾದರಿಯು ಕೂಡಾ ಆಕರ್ಷಕ ಪರ್ಫಾಮೆನ್ಸ್‌ಗೆ ಪೂರಕವಾಗಿದ್ದು, ಶಾರ್ಪ್ ಮೋಡ್ ಹೊಂದಿರುವ ಮ್ಯಾನುವಲ್ ಮಾದರಿಯು ಕೆಲವೊಮ್ಮೆ ಆಟೋಮ್ಯಾಟಿಕ್ ಮಾದರಿಗಿಂತಲೂ ಉತ್ತಮ ಪ್ರಕ್ರಿಯೆಯೊಂದಿಗೆ ಓವರ್‌ಟೆಕ್ ಮಾಡಲು ಸಹಕಾರಿಯಾಗುತ್ತಿದೆ ಎನ್ನಬಹುದು. ಇದು ಹೆದ್ದಾರಿ ಚಾಲನೆ ವೇಳೆ ಸ್ಪಷ್ಟವಾಗಿ ನೋಡಬಹುದಾಗಿದ್ದು, ಕ್ರೂಸ್ ಕಂಟ್ರೋಲ್ ಮತ್ತು ಸ್ಪೀಡ್ ಲೀಮಿಟರ್ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಹೊಸ ಕಾರಿನ ಮತ್ತೊಂದು ಪ್ರಮುಖ ಅಂಶವೆಂದರೆ ಸೆಸ್ಷೆಂಷನ್ ಎನ್ನಬಹುದು. ಸ್ಮೂಥ್ ಡ್ರೈವ್ ಮತ್ತು ಹ್ಯಾಂಡ್‌ಲಿಂಗ್‌ಗೆ ಸಸ್ಷೆಂಷನ್ ಸೌಲಭ್ಯವು ಪೂರಕವಾಗಿದ್ದು, ಕೆಟ್ಟ ರಸ್ತೆಗಳಲ್ಲೂ ಕಾರು ಆರಾಮದಾಯಕವಾಗಿ ನುಗ್ಗುವ ವೈಶಿಷ್ಟ್ಯತೆ ಹೊಂದಿದೆ. ಜೊತೆಗೆ ಹೊಸ ಕಾರಿನಲ್ಲಿ ಎನ್‌ವಿಹೆಚ್ ಮಟ್ಟವು ಕೂಡಾ ಕಡಿಮೆಯಿದ್ದು, ಕಾರಿನ ಒಳಗೆ ಎಂಜಿನ್ ಶಬ್ದವಾಗಲಿ ಅಥವಾ ಹೊರಗಿನ ಶಬ್ದವಾಗಲಿ ಕೇಳಿಸುವುದಿಲ್ಲ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಈ ಮೂಲಕ ಕಾರ್ನರ್‌ಗಳಲ್ಲೂ ಉತ್ತಮ ಹಿಡಿತದೊಂದಿಗೆ ಫರ್ಪಾಮೆನ್ಸ್‌ನಲ್ಲಿ ಗಮನಸೆಳೆಯುವ ಹೊಸ ಕಾರಿನಲ್ಲಿ ಸ್ಟೀರಿಂಗ್ ಸೌಲಭ್ಯವು ತುಸು ಗಟ್ಟಿಯಾಗಿದೆ ಎನ್ನಿಸಬಹುದು. ಇದು ಯಾವುದೇ ತೊಂದರೆ ಅಲ್ಲವಾದರೂ ಯು ಟರ್ನ್ ಸಂದರ್ಭಗಳಲ್ಲಿ ತುಸು ಹೆಚ್ಚಿನ ಪ್ರಮಾಣದ ಶಕ್ತಿ ಪ್ರಯೋಗಿಸಬೇಕಾಗಬಹುದು.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಇದರೊಂದಿಗೆ ಹೊಸ ಕಾರು ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದ್ದು, ಕಾರಿನ ಪರೀಕ್ಷೆ ವೇಳೆ ಸರಿಯಾದ ಇಂಧನ ಲೆಕ್ಕಾಚಾರ ಸಾಧ್ಯವಾಗಲಿಲ್ಲ. ಆದರೆ ಕಂಪನಿಯ ಮಾಹಿತಿ ಪ್ರಕಾರ ಟರ್ಬೋ ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್‌ಗೆ 16ರಿಂದ 17ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಯು ಒಂದೇ ಮಾದರಿಯ ಮೈಲೇಜ್ ಹಿಂದಿರುಗಿಸಲಿವೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಡಸ್ಟರ್ ಟರ್ಬೋ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಡಸ್ಟರ್ ಕಾರು ಮಾದರಿಯು ಸದ್ಯ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದ್ದು, 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಡಸ್ಟರ್ ಕಾರು ಆರಂಭಿಕವಾಗಿ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.59 ಲಕ್ಷ ಬೆಲೆ ಹೊಂದಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಇದರಲ್ಲಿ 1.5-ಲೀಟರ್ ಪೆಟ್ರೋಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.49 ಲಕ್ಷದಿಂದ ರೂ.9.99 ಲಕ್ಷ ಬೆಲೆ ಹೊಂದಿದ್ದರೆ, 1.3-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.49 ಲಕ್ಷದಿಂದ ರೂ.13.59 ಲಕ್ಷ ಬೆಲೆ ಹೊಂದಿದೆ. ಬಿಎಸ್-6 ಜಾರಿ ನಂತರ ರೆನಾಲ್ಟ್ ಕಾರುಗಳಲ್ಲಿ ಡೀಸೆಲ್ ಎಂಜಿನ್ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಕೇವಲ ಪೆಟ್ರೋಲ್ ಮಾದರಿಗಳಲ್ಲಿ ಮಾತ್ರ ಮಾರಾಟಮಾಡಲಾಗುತ್ತಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಡ್ರೈವ್‌ಸ್ಪಾರ್ಕ್ ತಂಡವು ಚಾಲನೆ ಮಾಡಿದ ಮಾದರಿಯು ಆರ್‌ಎಕ್ಸ್‌ಜೆಡ್ ಆವೃತ್ತಿಯಾಗಿದ್ದು, ಇದು ಡಸ್ಟರ್ ಟರ್ಬೋ ಮಾದರಿಯ ಹೈ ಎಂಡ್ ಆವೃತ್ತಿಯಾಗಿದೆ. ಹೈ ಎಂಡ್ ಮಾದರಿಯಲ್ಲಿ ಅಧಿಕ ಮಟ್ಟದ ಫೀಚರ್ಸ್‌ಗಳಿದ್ದು, ಜೊತಗೆ ಅಧಿಕ ಪರ್ಫಾಮೆನ್ಸ್ ಮಾದರಿಯಾಗಿ ಗುರುತಿಸಿಕೊಳ್ಳುತ್ತಿದೆ.

ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಪಡೆದ ರೆನಾಲ್ಟ್ ಡಸ್ಟರ್ ಟರ್ಬೋ

ಡಸ್ಟರ್ ಟರ್ಬೋ ಕುರಿತು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸೆಗ್ಮೆಂಟ್ ಇನ್ ಫೀಚರ್ಸ್‌ಗಳಲ್ಲಿ ಆಕರ್ಷಕವಾಗಿರುವ ಡಸ್ಟರ್ ಟರ್ಬೋ ಪೆಟ್ರೋಲ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದ್ದು, ತುಸು ದುಬಾರಿ ಬೆಲೆ ಹೊಂದಿದ್ದರೂ ಕೂಡಾ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ. ಬಿಎಸ್-6 ಜಾರಿ ನಂತರ ಹೊಸ ಕಾರಿನಲ್ಲಿ ಪೆಟ್ರೋಲ್ ಮತ್ತು ಟರ್ಬೋ ಪೆಟ್ರೋಲ್ ಮಾದರಿಗಳು ಮಾತ್ರವೇ ಖರೀದಿ ಲಭ್ಯವಿದ್ದು, ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿರುವುದು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

Most Read Articles

Kannada
English summary
Renault Duster Turbo Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X