2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಜೆಕ್ ಗಣರಾಜ್ಯದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಸ್ಕೋಡಾ ಇದೇ ತಿಂಗಳು 13ರಂದು ತನ್ನ ಬಹುನೀರಿಕ್ಷಿತ 2017 ಒಕ್ಟಾವಿಯಾ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

By Praveen

ಜೆಕ್ ಗಣರಾಜ್ಯದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಸ್ಕೋಡಾ ಇದೇ ತಿಂಗಳು 13ರಂದು ತನ್ನ ಬಹುನೀರಿಕ್ಷಿತ 2017 ಒಕ್ಟಾವಿಯಾ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಕಾರ್ಯಕ್ಷಮತೆ ಕುರಿತು ನಡೆಸಲಾದ ಮೊದಲ ಚಾಲನಾ ವಿಮರ್ಶೆ ಇಲ್ಲಿದೆ.

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

2010ರಲ್ಲಿ ಸೇಕೆಂಡ್ ಜನರೇಷನ್ ಮತ್ತು 2013ರಲ್ಲಿ ಥರ್ಡ್ ಜನರೇಷನ್ ಒಕ್ವಿವಿಯಾ ಕಾರು ಮಾದರಿಗಳನ್ನು ಬಿಡುಗಡೆ ಮಾಡಿದ್ದ ಸ್ಕೋಡಾ ಸಂಸ್ಥೆಯು, ಇದೀಗ ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಹೊಸ 2017 ಸ್ಕೋಡಾ ಒಕ್ಟಾವಿಯಾ ಕಾರು, ಆಂಬಿಷನ್, ಸ್ಟೈಲ್ ಮತ್ತು ಸ್ಟೈಲ್ ಪ್ಲಸ್ ಎಂಬ ಮೂರು ವಿವಿಧ ರೂಪಾಂತರ ಆಯ್ಕೆಗಳಲ್ಲಿ ಲಭ್ಯವಿದ್ದು, ಮೂರೂ ವಿಧಗಳು ಸಹ ವಿಭಿನ್ನ ವೈಶಿಷ್ಟ್ಯತೆಗಳನ್ನು ಹೊಂದಿದೆ.

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಆಂಬಿಷನ್ ಮಾದರಿಯಲ್ಲಿ ಮ್ಯಾನ್ಯುವಲ್ ಗೇರ್‌ಬಾಕ್ಸ್ ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಆಯ್ಕೆ ನೀಡಲಾಗಿದೆ. ಇನ್ನು ಸ್ಟೈಲ್ ಮಾದರಿಯು ಸ್ವಯಂಚಾಲಿತ ಮತ್ತು ಮಾನ್ಯುಯಲ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದೆ.

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಸ್ಟೈಲ್ ಪ್ಲಸ್ ಮಾದರಿಯು ಒಕ್ಟಿವಿಯಾ ಫೆೇಸ್‌ಲಿಫ್ಟ್‌ ಮಾದರಿಗಳಲ್ಲಿ ಟಾಪ್ ಮಾಡೆಲ್ ಆಗಿದ್ದು, ಉನ್ನತ ಮಟ್ಟದ ಆಯ್ಕೆಯೊಂದಿಗೆ ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಸ್ವಯಂಚಾಲಿತ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಒಕ್ಟಿವಿಯಾ ಫೇಸ್‌ಲಿಫ್ಟ್ ಮಾದರಿಯಲ್ಲಿ ಪೆಟ್ರೋಲ್ ಆವೃತ್ತಿಯು 1.4, 1.8-ಲೀಟರ್ ಎಂಜಿನ್ ಆಯ್ಕೆ ಹೊಂದಿದ್ದು, 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು ಪ್ರತಿ ಲೀಟರ್‌ ಪೆಟ್ರೋಲ್‌ಗೆ 16.7 ಕಿ.ಮೀ ಮೈಲೇಜ್ ನೀಡಲಿದೆ.

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಅದೇ ರೀತಿ 1.8 ಲೀಟರ್ ಪೆಟ್ರೋಲ್ ಆವೃತ್ತಿಯು 178 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡುವಷ್ಟು ಬಲಿಷ್ಠವಾಗಿದ್ದು, 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಪ್ರತಿಲೀಟರ್‌ಗೆ 15.1 ಕಿ.ಮೀ ಮೈಲೇಜ್ ನೀಡಲಿದೆ.

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಇನ್ನು 2.0-ಲೀಟರ್ ಟರ್ಬೊ‌ಚಾರ್ಜ್ಡ್ ಡೀಸೆಲ್ ಎಂಜಿನ್ ಕಾರು 141 ರಷ್ಟು ಅಶ್ವಶಕ್ತಿ ನೀಡಲಿದ್ದು, 6-ಸ್ಪೀಡ್ ಮಾನ್ಯುಯಲ್ ಮತ್ತು 6-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಎಂಬ ಎರಡು ರೀತಿಯ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಈ ಕಾರು ಬಿಡುಗಡೆಗೊಂಡಿದೆ.

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಒಕ್ಟಿವಿಯಾ ಫೇಸ್‌ಲಿಫ್ಟ್ ಪೆಟ್ರೋಲ್ ಕಾರುಗಳ ಬೆಲೆ

ಒಕ್ಟಿವಿಯಾ ಆಂಬಿಷನ್ 1.4 ಟಿಎಸ್‌ಐ ಎಂಟಿ - ರೂ.15,49,405

ಒಕ್ಟಿವಿಯಾ ಸ್ಟೈಲ್ 1.4 ಟಿಎಸ್‌ಐ ಎಂಟಿ - ರೂ.17,49,605

ಒಕ್ಟಿವಿಯಾ ಸ್ಟೈಲ್ 1.8 ಟಿಎಸ್‌ಐ ಎಂಟಿ - ರೂ.18,59,429

ಒಕ್ಟಿವಿಯಾ ಸ್ಟೈಲ್ ಪ್ಲಸ್ 1.8 ಟಿಎಸ್ಐ ಎಟಿ - ರೂ.20,89,900

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಒಕ್ಟಿವಿಯಾ ಫೇಸ್‌ಲಿಫ್ಟ್ ಡೀಸೆಲ್ ಕಾರುಗಳ ಬೆಲೆ

ಒಕ್ಟಿವಿಯಾ ಆಂಬಿಷನ್ 2.0 ಟಿಡಿಐ ಸಿಆರ್ ಎಂಟಿ -ರೂ. 16,89,974

ಒಕ್ಟಿವಿಯಾ ಸ್ಟೈಲ್ 2.0 ಟಿಡಿಐ ಸಿಆರ್ ಎಂಟಿ -ರೂ. 18,95,608

ಒಕ್ಟಿವಿಯಾ ಸ್ಟೈಲ್ 2.0 ಟಿಡಿಐ ಸಿಆರ್ ಎಟಿ -ರೂ 20,49,619

ಒಕ್ಟಿವಿಯಾ ಸ್ಟೈಲ್ ಪ್ಲಸ್ 2.0 ಟಿಡಿಐ ಸಿಆರ್ ಎಟಿ -ರೂ.22,89,573

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಸುರಕ್ಷತೆಯ ವಿಷಯದಲ್ಲೂ ಅತ್ಯುತ್ತಮ ಕಾರು ಇದಾಗಿದ್ದು, ಓಕ್ಟಾವಿಯ ಕಾರಿನಲ್ಲಿ ಒಟ್ಟು ಎಂಟು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಈಬಿಡಿ, ಹಿಲ್ ಹೋಲ್ಡ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ವಿಶಿಷ್ಟ ಲಾಕ್, ಟೈಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಡ್ರೈವರ್ ಫ್ಯಾಟಿಗ್ ವಾರ್ನಿಂಗ್ ಸಿಸ್ಟಮ್ ಮತ್ತು ಮಲ್ಟಿ ಕಲೋಸಿಯನ್ ಬ್ರೆಕಿಂಗ್ ಸಿಸ್ಟಮ್ ಪಡೆದುಕೊಂಡಿದೆ.

2017 ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಮೊದಲ ಚಾಲನಾ ವಿಮರ್ಶೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟಯೋಟಾ ಕರೋಲಾ ಆಲ್ಟಿಸ್ ಮತ್ತು ಹ್ಯುಂಡೈ ಎಲಾನ್ತ್ರ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಒಕ್ಟಿವಿಯಾ ಫೇಸ್‌ಲಿಫ್ಟ್ ಬಿಡುಗಡೆಯಾಗಿದ್ದು, ಭಾರತೀಯ ಮಾರುಕಟ್ಟೆ ಮತ್ತೊಮ್ಮೆ ಯಶಸ್ಸು ಸಾಧಿಸುವದಲ್ಲಿ ಯಾವುದೇ ಸಂದೇಹವಿಲ್ಲ.

Most Read Articles

Kannada
English summary
Read in Kannada about Skoda Octavia Facelift Review Test Drive Report.
Story first published: Wednesday, July 26, 2017, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X