ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಕಾರು ಉತ್ಪಾದನೆಯಲ್ಲಿ ಕಳೆದ ಕೆಲ ವರ್ಷಗಳಿಂದ ಭಾರೀ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಕಾರು ಮಾದರಿಗಳನ್ನು ಹೊಸ ಕಾರು ಉತ್ಪಾದನಾ ತಂತ್ರಜ್ಞಾನದಡಿ ಅಭಿವೃದ್ದಿಗೊಳಿಸುತ್ತಿದೆ. ಕಳೆದ ವರ್ಷದ ಆರಂಭದಲ್ಲಿ ಪರಿಚಯಿಸಲಾಗಿದ್ದ ಹ್ಯಾರಿಯರ್ ಕೂಡಾ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಇದೀಗ ಮತ್ತುಷ್ಟು ಹೊಸ ಬದಲಾವಣೆಗೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

2019ರ ಜನವರಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಹ್ಯಾರಿಯರ್ ಆವೃತ್ತಿಯು ನೀರಿಕ್ಷಿತ ಮಟ್ಟದಲ್ಲಿ ಮಾರಾಟವಾಗತ್ತಿದ್ದರೂ ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮೊದಲ ಹಂತದಲ್ಲಿ ಹೊಸ ಕಾರನ್ನು ಕೇವಲ ಡೀಸೆಲ್ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರವೇ ಬಿಡುಗಡೆ ಮಾಡಿದ್ದರಿಂದ ಆಟೋಮ್ಯಾಟಿಕ್ ವರ್ಷನ್ ಆಯ್ಕೆ ಬಯಸುವ ಗ್ರಾಹಕರು ಹ್ಯಾರಿಯರ್ ಖರೀದಿಗೆ ಹಿಂದೇಟು ಹಾಕಿದ್ದರು. ಆದರೆ ಇದೀಗ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯನ್ನು ಪರಿಚಯಿಸಲಾಗಿದ್ದು, ಎಂಜಿನ್ ಪರ್ಫಾಮೆನ್ಸ್ ಭಾರೀ ಬದಲಾವಣೆ ಮಾಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಬಿಎಸ್-4 ಎಮಿಷನ್‌ಗೆ ಅನುಗುಣವಾಗಿ ಹೊಸ ಹ್ಯಾರಿಯರ್ ಫೇಸ್‌‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸಲಾಗಿದ್ದು, ಹೊಸ ಕಾರು ಹಳೆಯ ಆವೃತ್ತಿಗಿಂತಲೂ ಹೇಗೆ ಭಿನ್ನವಾಗಿದೆ? ಮತ್ತು ಹೊಸ ಟ್ರಾನ್ಸ್‌ಮಿಷನ್ ಆಯ್ಕೆ ಹ್ಯಾರಿಯರ್ ಬೇಡಿಕೆ ಹೆಚ್ಚಿಸುವಲ್ಲಿ ಯಾವ ರೀತಿ ಸಹಕಾರಿಯಾಗಲಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಡಿಸೈನ್ ಮತ್ತು ಸ್ಟೈಲ್

2.0 ಇಂಪ್ಯಾಕ್ಟ್ ಡಿಸೈನ್ ತಂತ್ರಜ್ಞಾನವನ್ನು ಹೊಂದಿರುವ ಹ್ಯಾರಿಯರ್ ಕಾರು ಬಲಿಷ್ಠ ವಿನ್ಯಾಸವನ್ನು ಹೊಂದಿದ್ದು, ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಕೆಲವು ಸಣ್ಣ-ಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಇನ್ನುಳಿದ ಬಹುತೇಕ ಡಿಸೈನ್‌ಗಳು ಹಳೆಯ ಮಾದರಿಯಿಂದ ಎರವಲು ಪಡೆಯಲಾಗಿದೆ.

ಡ್ಯುಯಲ್ ಎಲ್ಇಡಿ ಹೆಡ್‌ಲ್ಯಾಂಪ್ ಯುನಿಟ್, ಎಲ್ಇಡಿ ಡಿಆರ್‌ಎಲ್, ಮುಂಭಾಗದ ಬಂಪರ್‌ಗೆ ಹೊಂದಿಕೊಂಡಂತಿರುವ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಆಕರ್ಷಕವಾಗಿದ್ದು, 17-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಸ್ಲಿಕ್ ವಿಂಗ್ ಮಿರರ್ ಜೊತೆಗೆ ಬ್ಲ್ಯಾಕ್ಡ್ ಔಟ್ ಹೊರವಿನ್ಯಾಸವು ಹೊಸ ಕಾರಿನ ಬಲಿಷ್ಠತೆ ಮತ್ತಷ್ಟು ಪೂರಕವಾಗಿದೆ. ಹೊಸ ಕಾರಿನಲ್ಲಿ ಈ ಹಿಂದಿನ ಮಾದರಿಗಳ ಜೊತೆಗೆ ಹೊಸದಾಗಿ ಆಟೋಮ್ಯಾಟಿಕ್ ಆವೃತ್ತಿಯ ಸ್ಥಾನಪಡೆದುಕೊಂಡಿದ್ದು, ವೆರೆಯೆಂಟ್‌ಗಳ ಬೆಲೆಗಳಿಗೆ ಅನುಗುಣವಾಗಿ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಜೊತೆಗೆ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಹೊಸ ಕಾರಿನ ಬೆಲೆಯು ತುಸು ದುಬಾರಿಯಾಗಿದ್ದರೂ ಸಹ ಹೊಸ ಮಾದರಿಯ ಫೀಚರ್ಸ್‌ಗಳು ಫೇಸ್‌ಲಿಫ್ಟ್ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡಲಿದ್ದು, ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ತಂದಿರುವುದು ಮಾಲಿನ್ಯ ತಡೆಗೆ ಸಾಕಷ್ಟು ಸಹಕಾರಿಯಾಗಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಸದ್ಯ ಮಾರುಕಟ್ಟೆಯಲ್ಲಿ ಹ್ಯಾರಿಯರ್ ಕಾರು ಡೀಸೆಲ್ ಎಂಜಿನ್‌ನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಆವೃತ್ತಿಯು ಕೂಡಾ ಬಿಡುಗಡೆಯ ಪಟ್ಟಿಯಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಈ ಮೂಲಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಸಜ್ಜಾಗುತ್ತಿರುವ ಹೊಸ ಹ್ಯಾರಿಯರ್ ಕಾರು ಅಧಿಕೃತ ಮಾರುಕಟ್ಟೆ ಪ್ರವೇಶಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 16 ವೆರಿಯೆಂಟ್‌ಗಳನ್ನು ಹೊಂದಿದೆ. ಇದರಲ್ಲಿ ಎಕ್ಸ್ಎಂಎ, ಎಕ್ಸ್‌ಜೆಡ್ಎ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಮಾದರಿಗಳಲ್ಲಿ ಮಾತ್ರವೇ ಆಟೋಮ್ಯಾಟಿಕ್ ವರ್ಷನ್ ಖರೀದಿಗೆ ಲಭ್ಯವಿದ್ದು, ಎಕ್ಸ್‌ಜೆಡ್ಎ ಮತ್ತು ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್‌ಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಹೊಂದಿವೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಹ್ಯಾರಿಯರ್‌ನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಖರೀದಿಗೆ ಲಭ್ಯವಿದ್ದರೂ ಹೊಸದಾಗಿ ಬಿಡುಗಡೆಯಾಗಿರುವ ಆಟೋಮ್ಯಾಟಿಕ್ ಆವೃತ್ತಿಯು ಹೆಚ್ಚು ಆಕರ್ಷಕವಾಗಿದ್ದು, ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಲಭ್ಯವಾಗಿರುವ ಫೀಚರ್ಸ್ ಮಾಹಿತಿ ಇಲ್ಲಿ ಚರ್ಚಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಫೀಚರ್ಸ್‌ಗಳು(ಎಕ್ಸ್ಎಂಎ ವೆರಿಯೆಂಟ್‌ನಲ್ಲಿ)

*ಡ್ಯುಯಲ್ ಏರ್‌ಬ್ಯಾಗ್ *ಎಬಿಎಸ್ ಜೊತೆ ಇಬಿಡಿ *ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ *ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೋಲ್ *ಹಿಲ್ ಹೋಲ್ಡ್ ಅಸಿಸ್ಟ್ * ಟ್ರಾಕ್ಷನ್ ಕಂಟ್ರೋಲ್ *ರೋಲ್ ಓವರ್ ಮಿಟಿಗೆಷನ್ *ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ *ಫ್ರಂಟ್ ಫಾಗ್ ಲ್ಯಾಂಪ್ಸ್ *ಮಲ್ಟಿಪಲ್ ಡ್ರೈವ್ ಮೋಡ್(ಇಕೋ, ಸ್ಪೋರ್ಟ್ ಮತ್ತು ಸಿಟಿ) *7.0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ *6 ಸ್ಪೀಕರ್ಸ್ *ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ *ಎಲೆಕ್ಟ್ರಿಕ್‌ ಅಡ್ಜೆಸ್ಟೆಬಲ್ ರಿಯರ್ ವ್ಯೂ ಮಿರರ್ *ರಿಯರ್ ವೈಪರ್ *6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೇರಿದಂತೆ ಹಲವು ಸೌಲಭ್ಯಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಎಕ್ಸ್‌ಜೆಡ್ಎ ವೆರಿಯೆಂಟ್‌ ಫೀಚರ್ಸ್‌ಗಳು

*6 ಏರ್‌ಬ್ಯಾಗ್‌ಗಳು *ಹಿಲ್ ಡಿಸೆಂಟ್ ಕಂಟ್ರೋಲ್ *ಆಫ್ ರೋಡ್ ಎಬಿಎಸ್ *ISOFIX ಚೈಲ್ಡ್ ಸೀಟ್ ಮೌಂಟ್ *ಜೆನಾನ್ ಹೆಚ್‌ಡಿಐ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್ *ಎಲ್ಇಡಿ ಡಿಆರ್‌ಎಸ್ *ಆಟೋ ಹೆಡ್‌ಲ್ಯಾಂಪ್ ಮತ್ತು ವೈಪರ್ಸ್ *ಕಾರ್ನರಿಂಗ್ ಫ್ರಂಟ್ ಫಾಗ್ ಹೆಡ್‌ಲ್ಯಾಂಪ್ಸ್ *17-ಇಂಚಿನ ಅಲಾಯ್ ವೀಲ್ಹ್ *ಫಕ್ಸ್ ವುಡ್ ಇಂಟಿರಿಯರ್ ಟ್ರಿಮ್ *ಬ್ರೌನ್ ಲೆದರ್ ಆಸನಗಳು *ಲೆದರ್ ಹೊದಿಕೆಯ ಸ್ಟೀರಿಂಗ್ ಮತ್ತು ಗೇರ್ ನಾಬ್, 9-ಸ್ಪೀಕರ್ಸ್ ಜೆಬಿಎಲ್ ಆಡಿಯೋ ಸೌಲಭ್ಯಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಹಾಗೆಯೇ ಆ್ಯಪಲ್ ಕಾರ್ ಪ್ಲೇ *7.0-ಇಂಚಿನ ಪಾರ್ಟ್-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ *ಸಾಫ್ಟ್ ಟಚ್ ಡ್ಯಾಶ್‌ಬೋರ್ಡ್ *ರಿಯರ್ ಪಾರ್ಕಿಂಗ್ ಕ್ಯಾಮೆರಾ *ಫುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ *ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ *ಕ್ರೂಸ್ ಕಂಟ್ರೋಲ್ *ಎಲೆಕ್ಟ್ರಿಕ್‌ ಅಡ್ಜೆಸ್ಟೆಬಲ್ ರಿಯರ್ ವ್ಯೂ ಮಿರರ್ *ರಿಯರ್ ಆರ್ಮ್ ರೆಸ್ಟ್ ಜೊತೆ ಕಪ್ ಹೋಲ್ಡ್ *60:40 ಅನುಪಾತದ ಹಿಂಭಾಗದ ಆಸನಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್‌ ಫೀಚರ್ಸ್‌ಗಳು

ಎಕ್ಸ್ಎಂಎ ಮತ್ತು ಎಕ್ಸ್‌ಜೆಡ್ಎ ವೆರಿಯೆಂಟ್‌ನಲ್ಲಿರುವ ಫೀಚರ್ಸ್‌ಗಳ ಜೊತೆಗೆ ಹೆಚ್ಚುವರಿಯಾಗಿ ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್‌ನಲ್ಲಿ ಕೆಲವು ವಿಶೇಷ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಮೊದಲ ಎರಡು ವೆರಿಯೆಂಟ್‌ನಲ್ಲಿ ಇಲ್ಲದ ಪನೊರಮಿಕ್ ಸನ್‌ರೂಫ್, ಆಟೋ-ಡಿಮಿಂಗ್ ರಿಯರ್ ವ್ಯೂ ಮಿಯರ್, ಮತ್ತು 17-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್‌ಗಳು ಹೈಎಂಡ್ ಮಾದರಿಯಲ್ಲಿವೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಹ್ಯಾರಿಯರ್ ಫೇಸ್‌ಲಿಫ್ಟ್‌ನಲ್ಲಿ ಇತರೆ ಫೀಚರ್ಸ್‌ಗಳಿಂತಲೂ ಹೆಚ್ಚಿನ ಬದಲಾವಣೆ ಅಂದರೆ ಅದು ಎಂಜಿನ್ ಟ್ರಾಮಿಷನ್ ಮತ್ತು ಪರ್ಫಾಮೆನ್ಸ್‌ನಲ್ಲಿ ಆಗಿರುವ ಭಾರೀ ಬದಲಾವಣೆಯೇ ಈ ಬಾರಿ ಹೊಸ ಕಾರಿನ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಹ್ಯಾರಿಯರ್ ಎಸ್‌ಯುವಿ ಕಾರು 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಜೊತೆಗೆ ಈ ಬಾರಿ ಹೊಸದಾಗಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಬಿಎಸ್-4 ಆವೃತ್ತಿಯು 140-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಹೊಂದಿದ್ದರೆ ಬಿಎಸ್-6 ಆವೃತ್ತಿಯು ಹಳೆಯ ಮಾದರಿಗಿಂತಲೂ ಭಾರೀ ಬದಲಾವಣೆಯೊಂದಿಗೆ 173-ಬಿಹೆಚ್‍ಪಿ ಮತ್ತು ಈ ಹಿಂದಿನಂತೆಯೇ 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಹೊಸ ಕಾರಿನ ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಸಾಕಷ್ಟು ಹೆಚ್ಚಳ ಮಾಡಲಾಗಿದ್ದರೂ ಕೂಡಾ ಇಂಧನ ದಕ್ಷತೆಯಲ್ಲಿ ಈ ಹಿಂದಿನಂತೆಯೇ ಮುಂದುವರಿಲಿದ್ದು, ಇದು ಪ್ರತಿಸ್ಪರ್ಧಿ ಕಾರು ಮಾದರಿಯಲ್ಲೇ ಅತ್ಯುತ್ತಮ ಮಾದರಿ ಎನ್ನಬಹುದು.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಇದಲ್ಲದೇ ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಹ್ಯಾರಿಯರ್ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ ಮತ್ತು ಎಂಜಿ ಹೆಕ್ಟರ್ ಕಾರುಗಳ ಮಾರಾಟದಲ್ಲೂ ಪೆಟ್ರೋಲ್ ಕಾರುಗಳ ಮಾರಾಟವೇ ಅಗ್ರಸ್ಥಾನದಲ್ಲಿದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಹ್ಯಾರಿಯರ್ ಕಾರಿನಲ್ಲೂ ಪೆಟ್ರೋಲ್ ಎಂಜಿನ್ ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿರುವ ಟಾಟಾ ಸಂಸ್ಥೆಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಮಾಹಿತಿಗಳ ಪ್ರಕಾರ, ಹ್ಯಾರಿಯರ್ ಪೆಟ್ರೋಲ್ ಮಾದರಿಯು 1.5-ಲೀಟರ್ ಡೈರೆಕ್ಟ್-ಇಂಜೆಕ್ಷನ್ ಟರ್ಬೋ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಪರ್ಫಾಮೆನ್ಸ್‌(150ಬಿಎಚ್‌ಪಿ) ಜೊತೆಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಇನ್ನು ಫೇಸ್‌ಲಿಫ್ಟ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು 20.25 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದರಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.25 ಲಕ್ಷದಿಂದ ಆರಂಭಗೊಳ್ಳಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಲಿಷ್ಠ ಎಂಜಿನ್‌ನೊಂದಿಗೆ ರೋಡಿಗಿಳಿದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಹೊಸ ಎಂಜಿನ್ ಪ್ರೇರಿತ ಮ್ಯಾನುವಲ್ ಆವೃತ್ತಿಯಲ್ಲಿ ರೂ.35 ಸಾವಿರದಿಂದ ರೂ.40 ಸಾವಿರ ಹೆಚ್ಚಳವಾದಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಬೆಲೆಯು ಆರಂಭಿಕವಾಗಿಯೇ ರೂ.16.25 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.20.25 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
2020 Tata Harrier BS6 Automatic Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X