ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಬಹುನಿರೀಕ್ಷೀತ ಟಾಟಾ ಹೆಕ್ಸಾ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದ್ದು, ಈ ಸಂಬಂಧ ಡ್ರೈವ್ ಸ್ಪಾರ್ಕ್ ಹಮ್ಮಿಕೊಂಡಿರುವ ಎಕ್ಸ್ ಕ್ಲೂಸಿವ್ ಚಾಲನಾ ವಿಮರ್ಶೆಯನ್ನು ಕೊಡಲಾಗಿದೆ.

By Nagaraja

ಟಾಟಾ ಸಂಸ್ಥೆಯ ಭಾಗವಾಗಿರುವ ಟಾಟಾ ಮೋಟಾರ್ಸ್, ಪ್ರಯಾಣಿಕ ಕಾರು ಜೊತೆ ಜೊತೆಗೆ ಟ್ರಕ್, ವ್ಯಾನ್, ಬಸ್ಸು ಹಾಗೂ ಮಿಲಿಟರಿ ವಾಹನಗಳನ್ನು ನಿರ್ಮಿಸುತ್ತಿದೆ. ವಿಶ್ವದ ಐದನೇ ಅತಿ ದೊಡ್ಡ ವಾಹನ ನಿರ್ಮಾಣ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ಕಾರು ವಿಭಾಗದಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. 1991ರಲ್ಲಿ ಸಿಯೆರಾ ಮುಖಾಂತರ ಪ್ರಯಾಣಿಕ ಕಾರು ಮಾರುಕಟ್ಟೆಗೆ ಪ್ರವೇಶಿಸಿರುವ ಟಾಟಾ ಮೋಟಾರ್ಸ್, ಬಳಿಕ 2008ರಲ್ಲಿ ವಿಶ್ವದ ಅತಿ ಅಗ್ಗದ ನ್ಯಾನೋ ಕಾರನ್ನು ಪರಿಚಯಿಸಿತ್ತು. 2004ರಲ್ಲಿ ದೆವೂ ಮತ್ತು 2008ರಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಸೇರಿಸಿರುವ ಟಾಟಾ ಮೋಟಾರ್ಸ್, ಇದೀಗ ಅತಿ ನೂತನ ಹೆಕ್ಸಾ ಕ್ರಾಸೋವರ್ ಕ್ರೀಡಾ ಬಳಕೆಯ ವಾಹನವನ್ನು ಪರಿಚಯಿಸುತ್ತಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಟಾಟಾ ಸುಮೋ, ಸಫಾರಿಗಳಂತಹ ಜನಪ್ರಿಯ ಮಾದರಿಗಳನ್ನು ಪರಿಚಯಿಸಿರುವ ಟಾಟಾ ಸಂಸ್ಥೆಗೆ ಹೆಕ್ಸಾ ಮರುಜೀವವನ್ನು ತುಂಬಲಿದೆ. ಇದು ಉಪಯುಕ್ತ ವಾಹನ ವಿಭಾಗದಲ್ಲಿ ಹೆಚ್ಚು ಸ್ಪರ್ಧಾತ್ಮಕ ಮಾರುಕಟ್ಟೆ ಸೃಷ್ಟಿ ಮಾಡಲಿದೆ ಎಂಬುದು ವಾಹನ ವಿಶ್ಲೇಷಕರ ನಂಬಿಕೆಯಾಗಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಟಾಟಾ ಮೋಟಾರ್ಸ್ ಕಾರುಗಳಿಗೆ ಅನುಸರಿಸಲಾಗುತ್ತಿರುವ ನಾವೀನ್ಯ ತಂತ್ರಗಾರಿಕೆಯನ್ನು ಹೆಕ್ಸಾದಲ್ಲೂ ಅನುಸರಿಸಲಾಗಿದೆ. ಇಲ್ಲಿ ಎಸ್ ಯುವಿ ಹಾಗೂ ಎಂಪಿವಿ ಮಿಶ್ರಿತ ವಿನ್ಯಾಸ ನೀತಿಯನ್ನು ಟಾಟಾ ಅನುಸರಿಸಿರುವುದು ಗಮನಾರ್ಹವೆನಿಸುತ್ತದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಕ್ರೀಡಾ ಬಳಕೆಯ ವಾಹನಕ್ಕೆ ತಕ್ಕಂತೆ ಸ್ವಭಾವ ರೇಖೆಯನ್ನು ಮುಂಭಾಗದಲ್ಲಿ ಕೊಡಲಾಗಿದೆ. ಆಧುನಿಕತೆಗೆ ತಕ್ಕಂತೆ ಫಾಗ್ ಲ್ಯಾಂಪ್ ಮೇಲ್ಗಡೆಯಾಗಿ ಡೇಟೈಮ್ ರನ್ನಿಂಗ್ ಲೈಟ್ಸ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮುಂತಾದ ಸೌಲಭ್ಯವಿರಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಮುಂಭಾಗದಲ್ಲಿ ವಿಶಾಲವಾದ ಫ್ರಂಟ್ ಗ್ರಿಲ್ ಕೆಳಗಡೆಯಾಗಿ ಕ್ರೋಮ್ ಪಟ್ಟಿ ಹಾದು ಹೋಗುತ್ತಿದೆ. ಇದು ಟಾಟಾ ಪ್ರೀಮಿಯಂ ಕಾರುಗಳಿಗೆ ಪೂರಕವಾಗಿರಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಬದಿಯಲ್ಲಿ ಸರಳ ಹಾಗೂ ಶುಭ್ರ ಮೈಮಾಟವನ್ನು ಮೈಗೂಡಿಸಿಕೊಂಡು ಬಂದಿದೆ. ಇಲ್ಲೂ ಕ್ರೋಮ್ ಪಟ್ಟಿಯು ಮೂರನೇ ಸಾಲಿನ ವರೆಗೆ ಹಾದು ಹೋಗಲಿದೆ. ಈ ನಿಟ್ಟಿನಲ್ಲಿ ಟಾಟಾ ವಿನ್ಯಾಸಗಾರರನ್ನು ಮೆಚ್ಚಬೇಕಾಗುತ್ತದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ದೊಡ್ಡದಾದ 19 ಇಂಚುಗಳ ಅಲಾಯ್ ಚಕ್ರ ಹಾಗೂ ರೂಫ್ ರೈಲ್ ಗಳು ಟಾಟಾ ಹೆಕ್ಸಾ ಹೆಚ್ಚು ಪ್ರಭಾವಶಾಲಿಯಾಗಿ ಗುರುತಿಸಲು ನೆರವಾಗಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಸಾಧಾರಣ ಟಾಟಾ ಕಾರುಗಿಂತಲೂ ವಿಭಿನ್ನವಾಗಿ ಹೆಚ್ಚು ಪರಿಣಾಮಕಾರಿ, ಸ್ಪಷ್ಟತೆಯ ವಿನ್ಯಾಸವು ಟಾಟಾ ಹೆಕ್ಸಾದಲ್ಲಿ ಅನುಭವಕ್ಕೆ ಬರಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಹಿಂದುಗಡೆಯೂ ಯಾವುದೇ ರಾಜಿಗೂ ಟಾಟಾ ತಯಾರಾಗಿಲ್ಲ. ಇದು ಹಿಂದೆಯು ಗಟ್ಟಿಮುಟ್ಟಾದ ಬಾಗಿಲು ಪಡೆದುಕೊಂಡಿದ್ದು, ನೈಜ ಎಸ್ ಯುವಿ ಶೈಲಿಯನ್ನು ಪ್ರತಿಬಿಂಬಿಸಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಡ್ಯುಯಲ್ ಎಕ್ಸಾಸ್ಟ್ ಕೊಳವೆಯ ಜೊತೆಗೆ ಕ್ರೋಮ್ ಪಟ್ಟಿಗಳು ಇಲ್ಲೂ ಮನಸೆಳೆಯಲಿದೆ. ಟೈಲ್ ಲೈಟ್, ಸ್ಕಿಡ್ ಪ್ಲೇಟ್ ಕಾರಿಗೆ ಹೆಚ್ಚಿನ ಆಕರ್ಷಣೆಯನ್ನು ನೀಡುತ್ತದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಕಾರಿನೊಳಗೆ ಪ್ರವೇಶಿಸಿದಾಗ ಪ್ರಥಮ ನೋಟದಲ್ಲೇ ಬೆನೆಕ್-ಕಾಲಿಕೊ ಲೆಥರ್ ಹೋದಿಕೆಯು ಗಮನ ಸೆಳೆಯುತ್ತದೆ. ಇದು ಟಾಟಾ ಹೆಕ್ಸಾ ಪ್ರೀಮಿಯಂ ಅನುಭವಕ್ಕೆ ಕಾರಣವಾಗಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಇಲ್ಲಿಗೆ ವೈಶಿಷ್ಟ್ಯಗಳು ಕೊನೆಗೊಳ್ಳುವುದಿಲ್ಲ. ಇದರ ಎಬೋನಿ ಬ್ಲ್ಯಾಕ್ ಕನ್ಸಾಲ್ ಐದು ಇಂಚುಗಳ ಮಾಹಿತಿ ಮನರಂಜನಾ ವ್ಯವಸ್ಥೆಯು ಕಾರಿಗೆ ಹೆಚ್ಚಿನ ಐಷಾರಾಮಿತನವನ್ನು ನೀಡುತ್ತದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಕಾರಿನೊಳಗೂ ಬಹಳ ಸ್ಪಷ್ಟ ಮತ್ತು ಸರಳವಾಗಿ ಗೋಚರಿಸುವಂತಹ ಘಟಕಗಳನ್ನು ನೀಡಲಾಗಿದೆ. ಪ್ಲಾಸ್ಟಿಕ್ ಗುಣಮಟ್ಟತೆ ಸಹ ಶ್ಲಾಘನೀಯವಾಗಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಟಾಟಾ ಹೆಕ್ಸಾದಲ್ಲಿರುವ ಕನೆಕ್ಟ್ ನೆಕ್ಸ್ಟ್ ಸ್ಯಾಟ್-ನೇವ್ ಸಿಸ್ಟಂ ಹೊಸ ಅನುಭವಕ್ಕೆ ಕಾರಣವಾಗಲಿದೆ. ಇದು ಟಾಟಾದ ಭವಿಷ್ಯದ ಕಾರುಗಳ ಪ್ರಮುಖ ವೈಶಿಷ್ಟ್ಯವಾಗಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಚಾಲನಾ ಸೀಟಿನಲ್ಲಿ ಕುಳಿತುಕೊಂಡಾಗ ಅಧಿಪತ್ಯಯುತ ಚಾಲನಾ ಸ್ಥಾನವು ನಿಮ್ಮ ಮನ ಸೆಳೆಯಲಿದ್ದು, ಅನುಕೂಲಕರವಾಗಿ ಚಾಲನೆ ಮಾಡಲು ಸಾಧ್ಯವಾಗಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ನೈಜ ರಸ್ತೆ ಚಾಲನಾ ಪರಿಸ್ಥಿತಿಯಲ್ಲಿ ರಸ್ತೆ ಗೋಚರತೆ ಉತ್ತಮವಾಗಿದ್ದು, ಹೊರಗಿನ ರಿಯರ್ ವ್ಯೂ ಮಿರರ್ ದೃಷ್ಟಿಕೋನವು ಸ್ಪಷ್ಟವಾಗಿದೆ. ಇದಲ್ಲದೆ ರಿವರ್ಸ್ ವ್ಯೂ ಕ್ಯಾಮೆರಾ ಸೌಲಭ್ಯವು ಇದರಲ್ಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಎರಡನೇ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟುಗಳು ಅತ್ಯುತ್ತಮ ಸೊಂಟ ಹಾಗೂ ತೊಡೆಯ ಬೆಂಬಲವನ್ನು ನೀಡುತ್ತದೆ. ಹಾಗೆಯೇ ಬೇಕಾದಷ್ಟು ಹೆಡ್ ಮತ್ತು ಲೆಗ್ ರೂಂ ಕಾಪಾಡಿಕೊಂಡಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಹಾಗಿದ್ದರೂ ಎಲ್ಲ ಉಪಯುಕ್ತ ವಾಹನಗಳಲ್ಲಿ ಕಂಡುಬರುವ ಮೂರನೇ ಸಾಲಿನ ಆಸನ ವ್ಯವಸ್ಥೆಯ ತೊಂದರೆಯು

ಟಾಟಾ ಹೆಕ್ಸಾವನ್ನು ಕಾಡುತ್ತಿದೆ. ಬೆಂಚ್ ಸೀಟು ಆಯ್ಕೆಯ ಇಲ್ಲಿನ ಆಸನಗಳು ಉದ್ದನೆಯ ದೇಹಕಾಯವನ್ನು ಹೊಂದಿರುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಕಷ್ಟಕರವಾಗಬಹುದು.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಮೂರನೇ ಸಾಲಿನಲ್ಲಿ ಕಾಲನ್ನು ಹಾಯಾಗಿಡಲು ಸಾಧ್ಯವಾಗದು. ಇನ್ನೊಂದೆಡೆ ಮೇಲ್ಗಡೆ ರೂಫ್ ತಟ್ಟುವ ಭೀತಿಯೂ ಕಾಡಬಹುದು. ದೂರ ಪ್ರಯಾಣದ ವೇಳೆ ಇವೆಲ್ಲಕ್ಕೂ ಹೊಂದಿಕೊಳ್ಳಲೇ ಬೇಕಾಗುತ್ತದೆ. ಹಾಗಾಗಿ ಮಕ್ಕಳಿಗೆ ಹೆಚ್ಚು ಹೊಂದಿಕೆಯಾಗಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಆಫ್ ರೋಡ್ ಚಾಲನಾ ವೈಶಿಷ್ಟ್ಯವನ್ನು ಅರಿತುಕೊಂಡು ಕಾರಿನೊಳಗೆ ಪ್ರವೇಶಿಸಲು ಹಾಗೂ ಹೊರಗಿಳಿಯುವ ನಿಟ್ಟಿನಲ್ಲಿ ಬಹಳ ಜಾಗರೂಕತೆಯಿಂದ ರಚಿಸಲಾಗಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಆರು ಹಾಗೂ ಏಳು ಪ್ರಯಾಣಿಕರಿಗೆ ಆರಾಮದಾಯಕವಾಗಿ ಸಂಚರಿಸಬಹುದಾದ ಹೆಕ್ಸಾದಲ್ಲಿ ಢಿಕ್ಕಿ ಜಾಗದಲ್ಲಿ ಅಭಾವ ಕಂಡುಬರಲಿದೆ. ಬಹುತೇಕ ಉಪಯುಕ್ತ ವಾಹನಗಳಲ್ಲಿ ಈ ಸಮಸ್ಯೆ ಕಾಣುವುದರಿಂದ, ಅಗತ್ಯ ಬಿದ್ದಲ್ಲಿ ಮೂರನೇ ಸಾಲನ್ನು ಢಿಕ್ಕಿ ಜಾಗವಾಗಿ ಬಳಕೆ ಮಾಡಬಹುದಾಗಿದೆ.

ಶ್ಲಾಘನೀಯ ವೈಶಿಷ್ಟ್ಯಗಳು

ಶ್ಲಾಘನೀಯ ವೈಶಿಷ್ಟ್ಯಗಳು

ಸ್ಮಾರ್ಟ್ ಫೋನ್ ನಿಂದಲೇ ನಿಯಂತ್ರಿಸಬಹುದಾದ ಮೂಡ್ ಲೈಟಿಂಗ್ ಮತ್ತು ಎಂಟು ಛಾಯೆಗಳು,

ಕಸ್ಟಮ್ ಟ್ಯೂನ್ಡ್ ಜೆಬಿಎಲ್ 10 ಸ್ಪೀಕರ್ ಮ್ಯೂಸಿಕ್ ಸಿಸ್ಟಂ - ಇದನ್ನು ಟ್ಯೂನ್ ಮಾಡಲು 1000 ತಾಸು ವಿನಿಯೋಗಿಸಿದ ಟಾಟಾ,

ಸೂಪರ್ ಡ್ರೈವ್ ಮೋಡ್: ಕಂಫರ್ಟ್, ಡೈನಾಮಿಕ್, ರಫ್ ರೋಡ್ ಮತ್ತು ಆಟೋ,

ಶ್ಲಾಘನೀಯ ವೈಶಿಷ್ಟ್ಯಗಳು

ಶ್ಲಾಘನೀಯ ವೈಶಿಷ್ಟ್ಯಗಳು

ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋ ಸಿಸ್ಟಂ ಜೊತೆ ಎರಡನೇ ಮತ್ತು ಮೂರನೇ ಸಾಲಿನಲ್ಲಿ ಆರು ಎಸಿ ವೆಂಟ್ಸ್,

ರಿಮೋಟ್ ನಿಯಂತ್ರಿತ ಫಾಲೋ ಮಿ ಹೋಮ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,

ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್ ಮತ್ತು ಏಳು ಸ್ಪೀಡ್ ಮೋಡ್

ಚಾಲನೆ, ಹ್ಯಾಂಡ್ಲಿಂಗ್

ಚಾಲನೆ, ಹ್ಯಾಂಡ್ಲಿಂಗ್

ಉಪಯುಕ್ತ ವಾಹನಕ್ಕೆ ತಕ್ಕಂತೆ ದೈನಂದಿನ ಹಾಗೂ ಆಫ್ ರೋಡ್ ಚಾಲನೆಯನ್ನು ಟಾಟಾ ಹೆಕ್ಸಾ ನಿರ್ವಹಿಸಬಹುದೇ ಎಂಬುದು ಬಹಳ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಟಾಟಾ ಆರಿಯಾಗಿಂತಲೂ ಹೆಚ್ಚು ಉದ್ದಗಲವನ್ನು ಕಾಪಾಡಿಕೊಂಡಿರುವ ಟಾಟಾ ಹೆಕ್ಸಾ, ಅತ್ಯುತ್ತಮ ಹ್ಯಾಂಡ್ಲಿಂಗ್ ಕಾಪಾಡಿಕೊಂಡಿದೆ.

ಹೆಕ್ಸಾ ಆಟೋಮ್ಯಾಟಿಕ್ ಗೇರ್ ಬಾಕ್ಸ್

ಹೆಕ್ಸಾ ಆಟೋಮ್ಯಾಟಿಕ್ ಗೇರ್ ಬಾಕ್ಸ್

ಟಾಟಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಾದರಿಯು ದೀರ್ಘ ದೂರದ ಪ್ರಯಾಣಕ್ಕೂ ಸೂಕ್ತವೆನಿಸಲಿದೆ. ಇಲ್ಲಿ ಹೆಕ್ಸಾ ವೇಗವಾಗಿ ಚಲಿಸುತ್ತಿರುವಂತೆಯೇ ಸ್ಪೋರ್ಟ್ ಮೋಡ್ ವರ್ಗಾಯಿಸಬಹುದಾಗಿದ್ದು, ಹೆಚ್ಚಿನ ಆನಂದದಾಯಕ ಚಾಲನೆಯನ್ನು ಪ್ರದಾನ ಮಾಡಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಇದಕ್ಕೆ ಟಾಟಾ ಹೆಕ್ಸಾದಲ್ಲಿರುವ 400 ಎನ್ ಎಂ ತಿರುಗುಬಲ ನೀಡುವ ವ್ಯಾರಿಕೋರ್ ಎಂಜಿನ್ ಗೆ ಮೆಚ್ಚುಗೆ ಸಲ್ಲುತ್ತದೆ. ಇದು ಆರಿಯಾಗಿಂತಲೂ 80 ಎನ್ ಎಂ ತಿರುಗುಬಲ ಹೆಚ್ಚಾಗಿದೆ. ಆಕ್ಸಿಲೇಟರ್ ಗೆ ಕಾಲು ಅದುಮಿದರೂ ಯಾವುದೇ ದಣಿವಿಲ್ಲದೆ ಮುಂದಕ್ಕೆ ಸಾಗಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ) ಮತ್ತು ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆಯು (ಟಿಸಿಎಸ್) ಕಾರಿನ ಸುರಕ್ಷತೆಯನ್ನು ಕಾಪಾಡಿಕೊಳ್ಳಲಿದೆ.

ಟಾಟಾ ಹೆಕ್ಸಾ ಮ್ಯಾನುವಲ್ ಗೇರ್ ಬಾಕ್ಸ್

ಟಾಟಾ ಹೆಕ್ಸಾ ಮ್ಯಾನುವಲ್ ಗೇರ್ ಬಾಕ್ಸ್

ಟಾಟಾ ಹೆಕ್ಸಾ ಮ್ಯಾನುವಲ್ ಗೇರ್ ಬಾಕ್ಸ್ ಆವೃತ್ತಿಯು ಸೂಪರ್ ಡ್ರೈವ್ ಮೋಡ್ ಗಳನ್ನು ಹೊಂದಿರಲಿದೆ. ಇಲ್ಲಿ ಆಟೋ, ಕಂಫರ್ಟ್, ಡೈನಾಮಿಕ್ ಹಾಗೂ ರಫ್ ರೋಡ್ ಗಳೆಂಬ ನಾಲ್ಕು ಚಾಲನಾ ವಿಧಗಳನ್ನು ಆಯ್ಕೆ ಮಾಡಬಹುದಾಗಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ವಿವಿಧ ಚಾಲನಾ ವಿಧಗಳಿಗೆ ಅನುಸಾರವಾಗಿ ಸೂಪರ್ ಡ್ರೈವ್ ಮೋಡ್ ಗಳನ್ನು ಬಳಕೆ ಮಾಡಬಹುದಾಗಿದ್ದು, ಟಾಟಾ ಹೆಕ್ಸಾ ನಿರ್ವಹಣೆಯನ್ನು ಹೆಚ್ಚಿಸಲಿದೆ.

ಹಾಗಿದ್ದರೂ ಕ್ಲಚ್ ಹಾಗೂ ಬ್ರೇಕ್ ನಿರ್ವಹಣೆ ಸ್ವಲ್ಪ ಕ್ಲಿಷ್ಟಕರವಾದಂತೆ ಭಾಸವಾಗಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಒಟ್ಟಾರೆಯಾಗಿ ಚಾಲನೆ ಮತ್ತು ಹ್ಯಾಂಡ್ಲಿಂಗ್

ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿದೆ. ಇದು ಹಿಂದಿನ ಆರಿಯಾದಲ್ಲಿ ಎದುರಾಗಿರುವ ಎಲ್ಲ ತೊಂದರೆಗಳಿಗೂ ಪರಿಹಾರವಾಗಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

2.2 ಲೀಟರ್ ವ್ಯಾರಿಕೋರ್ 400 ಎಂಜಿನ್ ಆರಂಭಿಕ ನಿರ್ವಹಣೆಯಲ್ಲಿ ಕೊಂಚ ಹಿನ್ನಡೆ ಅನುಭವಿಸಿದರೂ ವೇಗ ಹೆಚ್ಚಿಸಿದಂತೆ ಬಹಳ ಸರಾಗವಾಗಿ ಮುಂದಕ್ಕೆ ಚಲಿಸಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಸರಿ ಸುಮಾರು 200 ಕೀ.ಮೀ.ಗಳಷ್ಟು ದೂರ ಚಾಲನಾ ಪರೀಕ್ಷೆ ನಡೆಸಿರುವ ನಮ್ಮ ತಂಡವು ನಡೆಸಿದ ಪ್ರಾಯೋಗಿಕ ಸಂಚಾರದಲ್ಲಿ ಟಾಟಾ ಹೆಕ್ಸಾ ಪ್ರತಿ ಲೀಟರ್ ಗೆ 10 ಕೀ.ಮೀ. ಮೈಲೇಜ್ ಕಾಪಾಡಿಕೊಂಡಿರುವುದು ಗಮನಾರ್ಹವೆನಿಸುತ್ತದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಎಂಜಿನ್ ವಿಧ: ವ್ಯಾರಿಕೋರ್ 400

ಸಾಮರ್ಥ್ಯ: 2179 ಸಿಸಿ

ಗರಿಷ್ಠ ಅಶ್ವಶಕ್ತಿ: 154

ಗರಿಷ್ಠ ತಿರುಗುಬಲ: 4900 ಎನ್ ಎಂ

ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್/ಆಟೋಮ್ಯಾಟಿಕ್

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಭಾರ: 2280 ಕೆ.ಜಿ

ಇಂಧನ ಟ್ಯಾಂಕ್ ಸಾಮರ್ಥ್ಯ: 60 ಲೀಟರ್

ಚಕ್ರಗಳು: 235/55/ಆರ್19

ಆಯಾಮ (ಉದ್ದXಅಗಲXಎತ್ತರ): 4788ಎಂಎಂX1903ಎಂಎಂX1791ಎಂಎಂ

ಸುರಕ್ಷತೆ

ಸುರಕ್ಷತೆ

ಆರು ಏರ್ ಬ್ಯಾಗ್ (ಚಾಲಕ, ಸಹ ಚಾಲಕ, ಬದಿ ಮತ್ತು ಕರ್ಟೈನ್),

ಎಬಿಎಸ್ ಮತ್ತು ಇಬಿಡಿ - ಬಾಷ್ 9ನೇ ತಲೆಮಾರಿನ ಜೊತೆ ಕಾರ್ನರ್ ಸ್ಟೆಬಿಲಿಟಿ ಸಿಸ್ಟಂ,

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಜೊತೆ ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆ,

ಸುರಕ್ಷತೆ

ಸುರಕ್ಷತೆ

ಹಿಲ್ ಹೋಲ್ಡ್ ಕಂಟ್ರೋಲ್ (ಎಚ್ ಎಚ್ ಸಿ) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್ ಡಿಸಿ),

ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್,

ಸೀಟ್ ಬೆಲ್ಟ್ ಜೊತೆ ಎತ್ತರ ಹೊಂದಾಣಿಸಬಹುದಾದ 3 ಪಾಯಿಂಟ್ ಇಎಲ್ ಆರ್ ಬೆಲ್ಟ್,

ಸೆಂಟ್ರಲ್ ಲಾಕಿಂಗ್ ಜೊತೆ ರಿಮೋಟ್

ಮುನ್ನಡೆಗಳು

ಮುನ್ನಡೆಗಳು

ಆರ್ ಏರ್ ಬ್ಯಾಗ್,

ಆಫ್ ರೋಡ್ ಸಾಮರ್ಥ್ಯ (4x4),

ಆಟೋಮ್ಯಾಟಿಕ್ ಮಾಡೆಲ್ ಜೊತೆ ಸ್ಪೋರ್ಟ್ ಮೋಡ್,

ಒಳಮೈ, ಜೆಬಿಎಲ್ 10 ಸ್ಪೀಕರ್,

ಸೂಪರ್ ಡ್ರೈವ್ ಮೋಡ್,

ಚಾಲನಾ ಸ್ಥಾನ,

ಅನುಕೂಲಕರ ನಿಯಂತ್ರಣ ಸ್ವಿಚ್ ಗಳು

ಹಿನ್ನಡೆಗಳು

ಹಿನ್ನಡೆಗಳು

ಮ್ಯಾನುವಲ್ ಗೇರ್ ಬಾಕ್ಸ್ ನಲ್ಲಿರುವ ಸ್ಟೀರಿಂಗ್ ವಿಮರ್ಶೆ,

ಸಾಧಾರಣ ಮೂರನೇ ಸಾಲಿನ ಆಸನ ವ್ಯವಸ್ಥೆ,

ಮೂರನೇ ಸಾಲಿನ ಹೆಡ್ ರೂಂ ಮತ್ತು ಲೆಗ್ ರೂಂ

ಅಂತಿಮ ತೀರ್ಪು

ಅಂತಿಮ ತೀರ್ಪು

ಸ್ಟೈಲಿಷ್ ವಿನ್ಯಾಸವನ್ನು ಮೈಗೂಡಿಸಿ ಬಂದಿರುವ ಟಾಟಾ ಹೆಕ್ಸಾ, ಮೋಜಿನ ಸವಾರಿಯನ್ನು ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದು ಮಾರುಕಟ್ಟೆಯಲ್ಲಿ ಮಹೀಂದ್ರ ಎಕ್ಸ್ ಯುವಿ500 ಹಾಗೂ ಟೊಯೊಟಾ ಇನ್ನೋವಾ ಕ್ರೈಸ್ಟಾ ಸವಾಲುಗಳನ್ನು ಎದುರಿಸಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಕ್ರೀಡಾ ಬಳಕೆಯ ವಾಹನದ ಜೊತೆಗೆ ಉಪಯುಕ್ತ ವಾಹನದ ಅವಶ್ಯಕತೆಗಳನ್ನು ಟಾಟಾ ಹೆಕ್ಸಾ ತುಂಬಲಿದೆ. ಇದು ದೈನಂದಿನ ಸೇರಿಂದತೆ ವಾರಂತ್ಯದ ಆಫ್ ರೋಡ್ ಪ್ರಯಾಣಕ್ಕೂ ಹೇಳಿ ಮಾಡಿಸಿದಂತಿದೆ. ದೂರ ಪ್ರಯಾಣ ಬಯಸುವ ವಾಹನ ಪ್ರೇಮಿಗಳಿಗೆ ಟಾಟಾ ಹೆಕ್ಸಾ ಒಂದು ಸಂಪೂರ್ಣ ಪವರ್ ಪ್ಯಾಕ್ ಅನುಭವವನ್ನು ನೀಡಲಿದೆ.

ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೊದಲ ಚಾಲನಾ ವಿಮರ್ಶೆ!

ಒಟ್ಟಿನಲ್ಲಿ ಹೆಕ್ಸಾ ಮುಖಾಂತರ ಮಗದೊಂದು ಹೆಜ್ಜೆಯನ್ನು ಮುಂದಿಟ್ಟಿರುವ ಟಾಟಾ ಸಂಸ್ಥೆಯು ಹೆಚ್ಚಿನ ಗುಣಮಟ್ಟದ ವಾಹನಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಪ್ರಶಂಸನೀಯವೇ ಸರಿ.

Most Read Articles

Kannada
English summary
First Drive: Tata Hexa — Hexa-ting Times Ahead!
Story first published: Saturday, October 22, 2016, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X