ಡೀಸೆಲ್ ಮೈಲೇಜ್ ಎಸ್‌ಯುವಿ ಕಾರಿನ ಹುಡುಕಾಟದಲ್ಲಿದ್ದೀರಾ?

By Nagaraja

ಜಗತ್ತಿನ ವಾಹನ ಮಾರುಕಟ್ಟೆಯಲ್ಲಿ ಅತಿ ವೇಗದಲ್ಲಿ ಬೆಳೆದು ಬರುತ್ತಿರುವ ಭಾರತದಲ್ಲಿ ಡೀಸೆಲ್ ಕ್ರೀಡಾ ಬಳಕೆಯ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಪ್ರಮುಖವಾಗಿಯೂ ಭಾರತೀಯ ಖರೀದಿಗಾರರು ಕಾರಿನ ಇಂಧನ ಕ್ಷಮತೆಯ ಮೇಲೆ ಹೆಚ್ಚಿನ ಗಮನ ವಹಿಸುತ್ತಾರೆ.

ವಾಹನದ ವಿನ್ಯಾಸದ ಬಗ್ಗೆ ಹೆಚ್ಚು ತೆಲೆ ಕೆಡಿಸಿಕೊಳ್ಳದ ಗ್ರಾಹಕರು ಬೆಲೆಯ ಬಳಿಕ ಮೈಲೇಜ್ ಎಷ್ಟು ಎಂಬ ನೇರವಾದ ಪ್ರಶ್ನೆಯನ್ನು ಮುಂದಿಡುತ್ತಾರೆ.ಇದೇ ವಿಷಯವನ್ನು ಮುಂದಿಟ್ಟುಕೊಂಡು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 10 ಗರಿಷ್ಠ ಇಂಧನ ಕ್ಷಮತೆಯ ಡೀಸೆಲ್ ಕ್ರೀಡಾ ಬಳಕೆಯ ವಾಹನಗಳ ಪಟ್ಟಿಯನ್ನು ಇಲ್ಲಿ ಕೊಡಲಿದ್ದೇವೆ.

10. ಮಹೀಂದ್ರ ಟಿಯುವಿ300

10. ಮಹೀಂದ್ರ ಟಿಯುವಿ300

ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ಮಹೀಂದ್ರ ಬಿಡುಗಡೆ ಮಾಡಿರುವ ಅತಿ ನೂತನ ಟಿಯುವಿ300 ಕ್ರೀಡಾ ಬಳಕೆಯ ವಾಹನವು, ಕೆಯುವಿ100 ಮತ್ತು ನುವೊಸ್ಪೋರ್ಟ್ ನಡುವೆ ಗುರುತಿಸಿಕೊಳ್ಳಲಿದೆ. ಅಲ್ಲದೆ 1.5 ಲೀಟರ್ ಡೀಸೆಲ್ ಎಂಹಾಕ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಟಿಯುವಿ300 ಮೈಲೇಜ್ 18.5 ಕೀ.ಮೀ.

ಟಿಯುವಿ300 ಮೈಲೇಜ್ 18.5 ಕೀ.ಮೀ.

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 7.36 ಲಕ್ಷ ರು.ಗಳಿಂದ 9.64 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿರುವ ಮಹೀಂದ್ರ ಟಿಯುವಿ300 ಪ್ರತಿ ಲೀಟರ್ ಗೆ 18.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

09. ಮಹೀಂದ್ರ ಥಾರ್

09. ಮಹೀಂದ್ರ ಥಾರ್

ಹೊಸ ಹೊಸ ಎಸ್‌ಯುವಿಗಳ ನಡುವೆಯೂ ಕಳೆದ ಅನೇಕ ವರ್ಷಗಳಿಂದ ರಫ್ ಆಂಡ್ ಟಫ್ ಎಂಬ ಪಟ್ಟವನ್ನು ಕಟ್ಟಿಕೊಂಡಿರುವ ಮಹೀಂದ್ರ ಥಾರ್ ತನ್ನ ಸ್ಥಾನವನ್ನು ಭದ್ರವಾಗಿರಿಸಿಕೊಂಡಿದೆ. ಇದು 2.5 ಮತ್ತು 2.6 ಲೀಟರ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುತ್ತದೆ.

ಥಾರ್ ಮೈಲೇಜ್ 18.06 ಕೀ.ಮೀ.

ಥಾರ್ ಮೈಲೇಜ್ 18.06 ಕೀ.ಮೀ.

ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 5.79 ಲಕ್ಷ ರು.ಗಳಿಂದ ಟಾಪ್ ಎಂಡ್ ವೆರಿಯಂಟ್ 8.71 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತಿರುವ ಮಹೀಂದ್ರ ಥಾರ್ ಕ್ರೀಡಾ ಬಳಕೆಯ ವಾಹನವು ಪ್ರತಿ ಲೀಟರ್ ಗೆ 18.06 ಕೀ.ಮೀ. ಮೈಲೇಜ್ ನೀಡುತ್ತದೆ.

08. ರೆನೊ ಡಸ್ಟರ್

08. ರೆನೊ ಡಸ್ಟರ್

ಇತ್ತೀಚೆಗಷ್ಟೇ ಪರಿಷ್ಕೃತ ಡಸ್ಟರ್ ಆವೃತ್ತಿಯನ್ನು ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಪರಿಚಯಿಸಿತ್ತು. ಇದು 1.6 ಲೀಟರ್ ಪೆಟ್ರೋಲ್ (103 ಅಶ್ವಶಕ್ತಿ), 1.5 ಲೀಟರ್ ಡೀಸೆಲ್ (84 ಅಶ್ವಶಕ್ತಿ) ಮತ್ತು 1.5 ಲೀಟರ್ ಡೀಸೆಲ್ (108 ಅಶ್ವಶಕ್ತಿ) ಎಂಜಿನ್ ಗಳಿಂದ ನಿಯಂತ್ರಿಸಲ್ಪಡುತ್ತದೆ.

ಡಸ್ಟರ್ ಮೈಲೇಜ್ 19.87 ಕೀ.ಮೀ.

ಡಸ್ಟರ್ ಮೈಲೇಜ್ 19.87 ಕೀ.ಮೀ.

8.46 ಲಕ್ಷ ರು.ಗಳಿಂದ 13.56 ಲಕ್ಷ ರು.ಗಳಷ್ಟು (ದೆಹಲಿ ಎಕ್ಸ್ ಶೋ ರೂಂ ಬೆಲೆ) ದುಬಾರಿಯೆನಿಸುವ ರೆನೊ ಡಸ್ಟರ್ ಪ್ರತಿ ಲೀಟರ್ ಗೆ 19.87 ಕೀ.ಮೀ. ಮೈಲೇಜ್ ನೀಡಲಿದೆ.

07. ನಿಸ್ಸಾನ್ ಟೆರನೊ

07. ನಿಸ್ಸಾನ್ ಟೆರನೊ

ರೆನೊ ಡಸ್ಟರ್ ಮರು ಲಾಂಛನ ಪಡೆದಿರುವ ನಿಸ್ಸಾನ್ ಟೆರೆನೊ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿರುವ ನಿಸ್ಸಾನ್ ಟೆರನೊಗಳ ಪೈಕಿ 1.5 ಲೀಟರ್ ಡಿಸಿಐ ಎಂಜಿನ್ ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಂಡಿದೆ.

ಟೆರನೊ ಮೈಲೇಜ್ 20.45 ಕೀ.ಮೀ.

ಟೆರನೊ ಮೈಲೇಜ್ 20.45 ಕೀ.ಮೀ.

9.99 ಲಕ್ಷ ರು.ಗಳಿಂದ 12.17 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ (ದೆಹಲಿ ಎಕ್ಸ್ ಶೋ ರೂಂ ಬೆಲೆ) ಲಭ್ಯವಿರುವ ನಿಸ್ಸಾನ್ ಟೆರನೊ ಪ್ರತಿ ಲೀಟರ್ ಗೆ 20.45 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳಲಿದೆ.

06. ಹ್ಯುಂಡೈ ಕ್ರೆಟಾ

06. ಹ್ಯುಂಡೈ ಕ್ರೆಟಾ

ಆಕರ್ಷಕ ವಿನ್ಯಾಸ ಮತ್ತು ಗುಣಮಟ್ಟದೊಂದಿಗೆ ಕ್ರೀಡಾ ಬಳಕೆಯ ವಾಹನ ಖರೀದಿಗಾರರ ನೆಚ್ಚಿನ ಆಯ್ಕೆಯೆನಿಸಿಕೊಂಡಿರುವ ಹ್ಯುಂಡೈ ಕ್ರೆಟಾ ಮೂರು ಎಂಜಿನ್ ಆಯ್ಕೆಗಳಲ್ಲಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳೊಂದಿಗೆ ಲಭ್ಯವಿರುತ್ತದೆ. ಈ ಪೈಕಿ 1.4 ಲೀಟರ್ ಡೀಸೆಲ್ ಎಂಜಿನ್ ಗಮನಾರ್ಹ ಮೈಲೇಜ್ ಕಾಪಾಡಿಕೊಂಡಿದೆ.

ಕ್ರೆಟಾ ಮೈಲೇಜ್ 21.38 ಕೀ.ಮೀ.

ಕ್ರೆಟಾ ಮೈಲೇಜ್ 21.38 ಕೀ.ಮೀ.

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 9.15 ಲಕ್ಷ ರು.ಗಳಿಂದ 14.40 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತಿರುವ ಹ್ಯುಂಡೈ ಕ್ರೆಟಾ ಪ್ರತಿ ಲೀಟರ್ ಗೆ 21.38 ಕೀ.ಮೀ. ಮೈಲೇಜ್ ನೀಡುತ್ತದೆ.

05. ಹೋಂಡಾ ಬಿಆರ್ ವಿ

05. ಹೋಂಡಾ ಬಿಆರ್ ವಿ

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಹೋಂಡಾ ಬಿಆರ್ ವಿ ಲಭ್ಯವಿರುತ್ತದೆ. ಇದು 4 ಸಿಲಿಂಡರ್ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಐ-ಡಿಟೆಕ್ ಡೀಸಲ್ ಎಂಜಿನ್ ಪಡೆದುಕೊಂಡಿದೆ.

ಬಿಆರ್ ವಿ ಮೈಲೇಜ್ 21.9 ಕೀ.ಮೀ.

ಬಿಆರ್ ವಿ ಮೈಲೇಜ್ 21.9 ಕೀ.ಮೀ.

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 9.9 ಲಕ್ಷ ರು.ಗಳಿಂದ 12.9 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತಿರುವ ಹೋಂಡಾ ಬಿಆರ್ ವಿ ಪ್ರತಿ ಲೀಟರ್ ಗೆ 21.9 ಕೀ.ಮೀ. ಮೈಲೇಜ್ ನೀಡಲಿದೆ.

04. ಫೋರ್ಡ್ ಇಕೊಸ್ಪೋರ್ಟ್

04. ಫೋರ್ಡ್ ಇಕೊಸ್ಪೋರ್ಟ್

ಸಮಕಾಲೀನ ನೋಟ ಕಾಯ್ದುಕೊಂಡಿರುವ ಫೋರ್ಡ್ ಇಕೊಸ್ಪೋರ್ಟ್ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಮತ್ತು 1.0 ಲೀಟರ್ ಇಕೊಬೂಸ್ಟ್ ಎಂಜಿನ್ ಗಳ ಆಯ್ಕೆಯೊಂದಿಗೆ ಲಭ್ಯವಿರುತ್ತದೆ. ಈ ಪೈಕಿ 1.5 ಲೀಟರ್ ಡೀಸೆಲ್ ಎಂಜಿನ್ ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಂಡಿದೆ.

ಇಕೊಸ್ಪೋರ್ಟ್ ಮೈಲೇಜ್ 22.3 ಕೀ.ಮೀ.

ಇಕೊಸ್ಪೋರ್ಟ್ ಮೈಲೇಜ್ 22.3 ಕೀ.ಮೀ.

ಭಾರತ ಮಾರುಕಟ್ಟೆಯಲ್ಲಿ 6.68 ಲಕ್ಷ ರು. ಗಳಿಂದ 9.75 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತಿರುವ (ಎಕ್ಸ್ ಶೋ ರೂಂ ದೆಹಲಿ) ಫೋರ್ಡ್ ಇಕೊಸ್ಪೋರ್ಟ್ ಪ್ರತಿ ಲೀಟರ್ ಗೆ 22.3 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳಲಿದೆ.

03. ಮಾರುತಿ ಸುಜುಕಿ ಎಸ್ ಕ್ರಾಸ್

03. ಮಾರುತಿ ಸುಜುಕಿ ಎಸ್ ಕ್ರಾಸ್

ಭಾರತದಲ್ಲಿ ಹೆಚ್ಚಿನ ನಂಬಿಕೆಯನ್ನು ಕಾಪಾಡಿಕೊಂಡರೂ ಎಸ್ ಕ್ರಾಸ್ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಯಶ ಸಾಧಿಸಲು ಯಶಸ್ವಿಯಾಗಿರಲಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ರಿಯಾಯಿತಿ ದರಗಳನ್ನು ಸಂಸ್ಥೆಯು ಘೋಷಿಸುತ್ತಲೇ ಇದೆ. ಅಂದ ಹಾಗೆ ಮಾರುತಿ ಸುಜುಕಿ ಎಸ್ ಕ್ರಾಸ್ 1.3 ಲೀಟರ್ ಡಿಡಿಐಎಸ್ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ ಗಳಲ್ಲಿ ಲಭ್ಯವಿರುತ್ತದೆ. ಇಲ್ಲಿ 1.3 ಲೀಟರ್ ಎಂಜಿನ್ ಹೆಚ್ಚಿನ ಮೈಲೇಜ್ ಕಾಪಾಡಿಕೊಂಡಿದೆ.

ಎಸ್ ಕ್ರಾಸ್ ಮೈಲೇಜ್ 23.65 ಕೀ.ಮೀ.

ಎಸ್ ಕ್ರಾಸ್ ಮೈಲೇಜ್ 23.65 ಕೀ.ಮೀ.

ಮಾರುತಿ ಸುಜುಕಿ ಎಸ್ ಕ್ರಾಸ್ 8,03 ಲಕ್ಷ ರು. ಗಳಿಂದ 12.03 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತಿದ್ದು, ಪ್ರತಿ ಲೀಟರ್ ಗೆ 23.65 ಕೀ.ಮೀ. ನೀಡುತ್ತದೆ.

02. ಮಾರುತಿ ಸುಜುಕಿ ವಿಟಾರಾ ಬ್ರಿಝಾ

02. ಮಾರುತಿ ಸುಜುಕಿ ವಿಟಾರಾ ಬ್ರಿಝಾ

ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಕ್ಕೆ ಹೊಸ ಆಯಾಮ ತುಂಬಿರುವ ಅತಿ ನೂತನ ಮಾರುತಿ ವಿಟಾರಾ ಬ್ರಿಝಾ ಹೆಚ್ಚಿನ ಬೇಡಿಕೆ ಕಾಯ್ದುಕೊಂಡಿದೆ. ಇದು 1.3 ಲೀಟರ್ ಡಿಡಿಐಎಸ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ವಿಟಾರಾ ಬ್ರಿಝಾ ಮೈಲೇಜ್ 24.3 ಕೀ.ಮೀ.

ವಿಟಾರಾ ಬ್ರಿಝಾ ಮೈಲೇಜ್ 24.3 ಕೀ.ಮೀ.

ಮಾರುತಿ ವಿಟಾರಾ ಬ್ರಿಝಾ 6.99 ಲಕ್ಷ ರು.ಗಳಿಂದ 9.68 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತಿದ್ದು, ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ನೀಡಲಿದೆ.

01. ಮಹೀಂದ್ರ ಕೆಯುವಿ 100

01. ಮಹೀಂದ್ರ ಕೆಯುವಿ 100

ದೇಶದ ಅತ್ಯುತ್ತಮ ಮೈಲೇಜ್ ನೀಡುವ ಡೀಸೆಲ್ ಕ್ರೀಡಾ ಬಳಕೆಯ ಕಾರೆಂಬ ಗೌರವಕ್ಕೆ ಮಹೀಂದ್ರ ಬಜೆಟ್ ಕಾರು ಮಹೀಂದ್ರ ಕೆಯುವಿ100 ಪಾತ್ರವಾಗಿದೆ. ಆಕ್ರಮಣಕಾರಿ ವಿನ್ಯಾಸ, ಆರು ಮಂದಿಗೆ ಕುಳಿತುಕೊಳ್ಳಬಹುದಾದ ಸ್ಥಳಾವಕಾಶ ಇದರಲ್ಲಿದೆ. ಎಂಪಾಲ್ಕನ್ ಕುಟುಂಬಕ್ಕೆ ಸೇರಿದ ಇದರ 1.2 ಲೀಟರ್ ಜಿ80 ಪೆಟ್ರೋಲ್ ಎಂಜಿನ್ 114 ಎನ್ ಎಂ ತಿರುಗುಬಲದಲ್ಲಿ 82 ಅಶ್ವಶಕ್ತಿ ಮತ್ತು 1.2 ಲೀಟರ್ ಡಿ75 ಡೀಸೆಲ್ ಎಂಜಿನ್ 190 ಎನ್ ಎಂ ತಿರುಗುಬಲದಲ್ಲಿ 77 ಅಶ್ವಶಕ್ತಿಯನ್ನು ನೀಡಲಿದೆ.

ಕೆಯುವಿ100 ಮೈಲೇಜ್ 25.3 ಕೀ.ಮೀ.

ಕೆಯುವಿ100 ಮೈಲೇಜ್ 25.3 ಕೀ.ಮೀ.

ದೇಶದ ನಂ.1 ಡೀಸೆಲ್ ಮೈಲೇಜ್ ಎಸ್ ಯುವಿ ಕಾರಾಗಿರುವ ಮಹೀಂದ್ರ ಕೆಯುವಿ100 ಪ್ರತಿ ಲೀಟರ್ ಗೆ 25.3 ಕೀ.ಮೀ. ಮೈಲೇಜ್ ನೀಡಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆಯು 4.56 ಲಕ್ಷ ರು.ಗಳಿಂದ 7.02 ಲಕ್ಷ ರು.ಗಳಾಗಿದೆ.

Most Read Articles

Kannada
English summary
Ten Most Fuel-Efficient Diesel SUVs in India
Story first published: Friday, May 27, 2016, 14:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X