ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್‌ವ್ಯಾಗನ್ ಡ್ರೈವ್

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಮೊದಲ ಪಾಪ್ ಅಪ್ ಸ್ಟೋರ್ ಅನ್ನು ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಪಾಪ್ ಅಪ್ ಹಾಗೂ ಸಿಟಿ ಸ್ಟೋರ್‍‍ಗಳು ಕಾರು ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ಡಿಜಿಟಲ್ ಅನುಭವವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಈ ಉದ್ಘಾಟನೆಯ ಅಂಗವಾಗಿ ಫೋಕ್ಸ್ ವ್ಯಾಗನ್ ಕಂಪನಿಯು ತನ್ನ ಎಲ್ಲಾ ಸರಣಿಯ ಕಾರುಗಳನ್ನು ಒಳಗೊಂಡು, ಬೆಂಗಳೂರಿನಲ್ಲಿ ಡ್ರೈವ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನಮಗೂ ಸಹ ಕಾರುಗಳನ್ನು ಚಲಾಯಿಸುವ ಅವಕಾಶ ದೊರಕಿತ್ತು. ಅದರ ಅನುಭವವನ್ನು ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಫೋಕ್ಸ್ ವ್ಯಾಗನ್ ಸಿಟಿ ಸ್ಟೋರ್

ಫೋಕ್ಸ್ ವ್ಯಾಗನ್‍‍ನ ಸಿಟಿ ಹಾಗೂ ಪಾಪ್ ಅಪ್ ಸ್ಟೋರ್‍‍ಗಳನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಫೋಕ್ಸ್ ವ್ಯಾಗನ್ ಕಂಪನಿಯು ಈ ರೀತಿಯ 30 ಕ್ಕೂ ಹೆಚ್ಚಿನ ಸ್ಟೋರ್‍‍ಗಳನ್ನು ದೇಶಾದ್ಯಂತ ಆರಂಭಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಸಿಟಿ ಸ್ಟೋರ್ ಹಾಗೂ ಪಾಪ್ ಅಪ್ ಸ್ಟೋರ್‍‍ಗಳು ಫೋಕ್ಸ್ ವ್ಯಾಗನ್ ಗ್ರಾಹಕರಿಗೆ ಡಿಜಿಟಲ್ ಅನುಭವವನ್ನು ನೀಡುವುದರ ಜೊತೆಗೆ, ತಮ್ಮ ಆದ್ಯತೆಯ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಈ ಸ್ಟೋರ್‍‍ಗಳು ಗ್ರಾಹಕರು ಬಯಸುವ ಕಾರಿನ ಬಗ್ಗೆ ಎಲ್ಲಾ ಮಾಹಿತಿಗಳನ್ನು ಒದಗಿಸಲು ಕನೆಕ್ಟೆಡ್ ಸಲ್ಯೂಷನ್‍‍ಗಳನ್ನು ಬಳಸುತ್ತವೆ. ಗ್ರಾಹಕರು ಯಾವುದೇ ಮಾದರಿಯ, ಬಣ್ಣದ, ಆಕ್ಸೆಸೆರಿಸ್‍‍‍ನ, ಹೆಚ್ಚು ಫೀಚರ್‍‍ಯಿರುವ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅವರು ಒಂದೇ ಮಾದರಿಯ ಎರಡು ಕಾರುಗಳನ್ನು ಹಾಗೂ ಎರಡು ಬೇರೆ ಮಾದರಿಯ ಕಾರುಗಳನ್ನು ಹೋಲಿಸಿ ನೋಡಬಹುದು, ಅವುಗಳ ನಡುವೆಯಿರುವ ವ್ಯತ್ಯಾಸವನ್ನು ತಿಳಿದುಕೊಳ್ಳಬಹುದು.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಈ ಸ್ಟೋರ್‍‍ಗಳು ಹೆಚ್ಚು ಪ್ರಿಮೀಯಂ ಅನುಭವವನ್ನು ನೀಡುವ ಗುರಿಯನ್ನಿಟ್ಟುಕೊಂಡಿವೆ. ಗ್ರಾಹಕರ ಎಲ್ಲಾ ಪ್ರಶ್ನೆಗಳಿಗೂ, ಅವಶ್ಯಕತೆಗಳಿಗೂ ಪೇಪರ್ ರಹಿತ ಡಿಜಿಟಲ್ ಪರಿಹಾರ ಸೂಚಿಸುತ್ತವೆ.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಕಾರುಗಳು

ಡ್ರೈವ್‍‍ಗಾಗಿ ಫೋಕ್ಸ್ ವ್ಯಾಗನ್ ಸರಣಿಯಲ್ಲಿನ ಪೊಲೊ ಜಿಟಿ, ಆಮಿಯೊ, ವೆಂಟೊ, ಟಿಗುವಾನ್ ಹಾಗೂ ಪಸ್ಸಾಟ್ ಸೇರಿದಂತೆ ಎಲ್ಲಾ ವಾಹನಗಳನ್ನು ಒದಗಿಸಲಾಗಿತ್ತು. ನಮಗೆ ಈ ಸರಣಿಯ ಬಹುತೇಕ ವಾಹನಗಳನ್ನು ಚಲಾಯಿಸುವ ಅವಕಾಶ ದೊರೆತಿತ್ತು.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಡ್ರೈವ್‍‍ಗೆ ಹೋಗುವ ಮೊದಲು, ಪ್ರತಿಯೊಂದು ಕಾರುಗಳಲ್ಲಿರುವ ಟೆಕ್ನಿಕಲ್ ಸ್ಪೆಸಿಫಿಕೇಷನ್‍‍ಗಳ ಬಗ್ಗೆ ನೋಡೋಣ. ಮೊದಲಿಗೆ ಫೋಕ್ಸ್ ವ್ಯಾಗನ್ ಆಮಿಯೊ ಕಾರಿನ ಬಗ್ಗೆ ತಿಳಿಯೋಣ. ಆಮಿಯೊ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿ 1.5 ಲೀಟರಿನ ಟಿ‍‍ಡಿ‍ಐ ಡೀಸೆಲ್ ಎಂಜಿನ್‍‍ಯಿದ್ದು, 110 ಬಿ‍‍ಹೆಚ್‍‍ಪಿ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ 7 ಸ್ಪೀಡಿನ ಡಿ‍ಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

MOST READ: ಅನಾವರಣಗೊಂಡ ಡುಕಾಟಿ ಹೈಪರ್‍ ಮೋಟಾರ್ಡ್ 950 ಬೈಕ್ ಪರಿಕಲ್ಪನೆ

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಫೋಕ್ಸ್ ವ್ಯಾಗನ್ ಪೊಲೊ ಜಿಟಿ ಕಾರಿನಲ್ಲಿ 1.2 ಲೀಟರಿನ ಟಿ‍ಎಸ್‍‍ಐ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದು 105 ಬಿ‍‍ಹೆಚ್‍‍ಪಿ ಹಾಗೂ 175 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ 7 ಸ್ಪೀಡಿನ ಡಿ‍ಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದ್ದು, ಮ್ಯಾನುಯಲ್ ಗೇರ್‍‍ಬಾಕ್ಸ್ ಆಯ್ಕೆ ಇರುವುದಿಲ್ಲ.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಟಿಗುವಾನ್ ಎಸ್‍‍‍ಯು‍‍ವಿ ಹಾಗೂ ಪಸ್ಸಾಟ್ ಸೆಡಾನ್‍‍ನಲಿ 2.0 ಲೀಟರಿನ ಟಿ‍ಡಿ‍ಐ ಡೀಸೆಲ್ ಎಂಜಿನ್‍‍ಯಿದ್ದು, ವಿಭಿನ್ನವಾದ ಟ್ಯೂನ್‍‍ಗಳನ್ನು ಹೊಂದಿವೆ. ಟಿಗುವಾನ್‍‍ನಲ್ಲಿರುವ ಎಂಜಿನ್ 143 ಬಿ‍‍ಹೆಚ್‍‍ಪಿ ಹಾಗೂ 340 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, ಪಸ್ಸಾಟ್ 177 ಬಿ‍‍ಹೆಚ್‍‍ಪಿ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಕಾರುಗಳಲ್ಲಿ 7 ಸ್ಪೀಡಿನ ಡಿ‍ಎಸ್‍‍ಜಿ ಗೇರ್ ಬಾಕ್ಸ್ ಅಳವಡಿಸಲಾಗಿದ್ದು, ಮ್ಯಾನುಯಲ್ ಟ್ರಾನ್ಸ್ ಮಿಷನ್ ಆಯ್ಕೆಯನ್ನು ನೀಡಲಾಗಿಲ್ಲ.

MOST READ: ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಇನ್ನೂ ಫೋಕ್ಸ್ ವ್ಯಾಗನ್ ವೆಂಟೊ ಸೆಡಾನ್ ಕಾರಿನಲ್ಲಿ 2 ಪೆಟ್ರೋಲ್ ಹಾಗೂ 1 ಡೀಸೆಲ್ ಎಂಬ ಮೂರು ಎಂಜಿನ್ ಆಯ್ಕೆಗಳಿವೆ. 1.6 ಲೀಟರಿನ ಎಂ‍‍ಪಿ‍ಐ ಪೆಟ್ರೋಲ್ ಎಂಜಿನ್ 105 ಬಿ‍‍ಹೆಚ್‍‍ಪಿ ಹಾಗೂ 153 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, 1.2 ಲೀಟರಿನ ಟಿ‍ಎಸ್‍ಐ ಎಂಜಿನ್ 105 ಬಿ‍‍ಹೆಚ್‍‍ಪಿ ಹಾಗೂ 174 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.5 ಲೀಟರಿನ ಟಿ‍‍ಡಿ‍ಐ ಡೀಸೆಲ್ ಎಂಜಿನ್ 110 ಬಿ‍‍ಹೆಚ್‍‍ಪಿ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.2 ಲೀಟರಿನ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್‍‍ಗಳೆರಡರಲ್ಲೂ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳಿದ್ದರೆ, 1.6 ಲೀಟರಿನ ಪೆಟ್ರೋಲ್ ಎಂಜಿನ್‍‍ನಲ್ಲಿ ಸ್ಟಾಂಡರ್ಡ್ ಆಗಿ ಮ್ಯಾನುಯಲ್ ಟ್ರಾನ್ಸ್ ಮಿಷನ್ ನೀಡಲಾಗುವುದು.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಡ್ರೈವ್ ಬಗ್ಗೆ

ಡ್ರೈವ್‍‍ನ ಅಂಗವಾಗಿ ಆಯೋಜಿಸಲಾಗಿದ್ದ ಇದರಲ್ಲಿ ನಾವು ಹೊಸದಾಗಿ ಶುರುವಾಗಿರುವ ಫೋಕ್ಸ್ ವ್ಯಾಗನ್ ಸಿಟಿ ಸ್ಟೋರ್‍‍ನಿಂದ ಆರಂಭಿಸಿ, ಬೆಂಗಳೂರಿನ ಹೊರವಲಯದಲ್ಲಿರುವ ನಂದಿ ಬೆಟ್ಟಕ್ಕೆ ಹೊರಟೆವು. ಬೆಂಗಳೂರಿನ ಟ್ರಾಫಿಕ್‍‍ಗೆ ಅನುಗುಣವಾಗಿ ನಾವು ಆಮಿಯೊ ಕಾಂಪ್ಯಾಕ್ಟ್ ಸೆಡಾನ್ ಅನ್ನು ಆಯ್ದುಕೊಂಡೆವು.

MOST READ: ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಫೋಕ್ಸ್ ವ್ಯಾಗನ್ ಆಮಿಯೊ ಡೀಸೆಲ್ ಮಾದರಿಯ ಕಾರು ನಗರದ ಟ್ರಾಫಿಕ್‍‍ಗೆ ಹೇಳಿ ಮಾಡಿಸಿದ ಕಾರ್ ಆಗಿದೆ. ಇದರಲ್ಲಿರುವ ಸ್ಟೀಯರಿಂಗ್ ಹಗುರವಾಗಿದ್ದು, ಬೆಂಗಳೂರಿನ ರಸ್ತೆಗಳಲ್ಲಿ ಆರಾಮದಾಯಕವಾದ ಚಾಲನೆಯನ್ನು ಮಾಡಲು ಅನುವು ಮಾಡಿಕೊಟ್ಟಿತು. 110 ಬಿ‍‍ಹೆ‍ಚ್‍‍ಪಿ ಉತ್ಪಾದಿಸುವ ಎಂಜಿನ್ ಹೊಂದಿರುವ ಈ ಕಾರು ನಗರದಲ್ಲಿರುವ ಟ್ರಾಫಿಕ್‍‍ನಲ್ಲಿ ಸರಾಗವಾಗಿ ಚಲಿಸಿತು. ಒವರ್‍‍ಟೇಕ್ ಮಾಡುವಾಗ ಗೇರ್ ಬದಲಿಸಲು ಸ್ಮೂತ್ ಆಗಿರುವ ಗೇರ್ ಟ್ರಾನ್ಸಿಷನ್‍‍ನಿಂದ ಅನುಕೂಲವಾಯಿತು.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಹೈವೇಗೆ ಬಂದ ನಂತರ ಚಿತ್ರಣವೇ ಬದಲಾಯಿತು. 250 ಎನ್‍ಎಂ ಟಾರ್ಕ್ ಉತ್ಪಾದಿಸುವ ಈ ಡೀಸೆಲ್ ಎಂಜಿನ್ ಕಾರು ವೇಗವಾಗಿ ಮುಂದೆ ಸಾಗಿತು. ಆರಂಭದಲ್ಲಿ ಸ್ವಲ್ಪ ಮಂದಗತಿಯಲ್ಲಿ ಸಾಗಿದರೂ, 1,750 ಆರ್‍‍ಪಿ‍ಎಂನಲ್ಲಿ ನಿರಂತರ ವೇಗದಲ್ಲಿ ಚಲಿಸಿತು.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ನಂದಿ ಬೆಟ್ಟದ ಕೆಳ ಭಾಗಕ್ಕೆ ತಲುಪಿದ ನಂತರ ನಾವು ಪೊಲೊ ಜಿಟಿ ಟಿ‍ಎಸ್‍ಐ ಕಾರನ್ನು ಚಲಾಯಿಸಿದೆವು. ಸ್ಪೋರ್ಟಿ ಫೋಕ್ಸ್ ವ್ಯಾಗನ್ ಪೊಲೊ ಜಿಟಿಯಲ್ಲಿ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಹೊಂದಿರುವ ಪೆಟ್ರೋಲ್ ಎಂಜಿನ್ ಇದ್ದು, ಬೆಟ್ಟದಲ್ಲಿರುವ ನ್ಯಾರೋ ರಸ್ತೆಗಳಲ್ಲಿ ಚಲಿಸಲು ಹೇಳಿ ಮಾಡಿಸಿದ ಕಾರ್ ಆಗಿದೆ. ಪೊಲೊ ಜಿಟಿಯಲ್ಲಿರುವ 105 ಬಿ‍‍ಹೆಚ್‍‍ಪಿ ಪವರ್‍‍ನ ಬಗ್ಗೆ ಹೇಳಲು ಪದಗಳೇ ಸಾಲುವುದಿಲ್ಲ. ಇದರಲ್ಲಿರುವ ಸ್ಮೂತ್ ಗೇರ್ ಶಿಫ್ಟ್ ನಿಂದಾಗಿ ನಮಗೆ ಹೆಚ್ಚಿನ ಆತ್ಮವಿಶ್ವಾಸ ಲಭಿಸಿತು.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಬೆಟ್ಟದ ಮೇಲಕ್ಕೆ ಆರಾಮದಾಯಕವಾಗಿ ತಲುಪಿದೆವು. ಪೊಲೊ ಜಿಟಿ ಕಾರು ತಿರುವುಗಳಲ್ಲೂ, ಬ್ರೇಕಿಂಗ್‍‍ನಲ್ಲಿಯೂ ಒಂದೇ ತರಹದ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಕಾರು ಅಲುಗಾಡುವುದನ್ನು ಇದರಲ್ಲಿರುವ ಸಸ್ಪೆಂಷನ್‍‍ಗಳು ನಿಯಂತ್ರಿಸಿದರೆ, ಇದರಲ್ಲಿರುವ ಬ್ರೇಕುಗಳು ಆಕ್ಸೆಲೆರೇಟರ್ ಅನ್ನು ಜೋರಾಗಿ ತುಳಿಯಲು ಆತ್ಮ ವಿಶ್ವಾಸವನ್ನು ನೀಡಿದವು.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಬೆಟ್ಟಕ್ಕೆ ತಲುಪಿ ಫೋಟೊ ಶೂಟ್ ಮುಗಿದ ನಂತರ, ನಾವು ಪಸ್ಸಾಟ್ ಕಾರಿನಲ್ಲಿ ವಾಪಸ್ಸಾದೆವು. ಫೋಕ್ಸ್ ವ್ಯಾಗನ್‍‍ನ ಈ ಫ್ಲಾಗ್‍‍ಶಿಪ್ ಸೆಡಾನ್ ಪ್ರಿಮೀಯಂ ಹಾಗೂ ಸ್ಪೋರ್ಟಿನೆಸ್ ನಡುವೆ ಸಮತೋಲನವನ್ನುಂಟು ಮಾಡಿತು. ಪಸ್ಸಾಟ್‍‍ನ ಕ್ಯಾಬಿನ್ ಅನ್ನು ಲೆದರ್‍‍ನಿಂದ, ಮರಗಳ ತುಂಡುಗಳಿಂದ, ಮೆದುವಾದ ವಸ್ತುಗಳಿಂದ ಕವರ್ ಮಾಡಲಾಗಿದೆ. ಇದರಲ್ಲಿರುವ ಗ್ಲಾಸ್ ಬ್ಲಾಕ್ ಹಾಗೂ ಸಿಲ್ವರ್ ಬಿಡಿ ಭಾಗಗಳಿಂದಾಗಿ ಇದರಲ್ಲಿರುವ ಪ್ರಿಮೀಯಂತನವು ಎದ್ದು ಕಾಣುತ್ತದೆ.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಪಸ್ಸಾಟ್ ಕಾರ್ ಅನ್ನು ರಸ್ತೆಗಳಲ್ಲಿ ಹೆಚ್ಚಿನ ಪರಿಶ್ರಮವಿಲ್ಲದೇ ಚಲಾಯಿಸಬಹುದು. ಇದರಲ್ಲಿರುವ 2.0 ಲೀಟರಿನ ಎಂಜಿನ್ ಕಡಿಮೆ ವೇಗದಲ್ಲೂ ಆರಾಮದಾಯಕವಾಗಿ ಚಲಿಸುತ್ತದೆ. 7 ಸ್ಫೀಡಿನ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಸರಾಗವಾಗಿ, ಸುಲಭವಾಗಿ ವೇಗವಾಗಿ ಗೇರ್‍‍ಗಳನ್ನು ಬದಲಿಸಲು ಸಹಾಯ ಮಾಡುತ್ತದೆ.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಕೊನೆಯದಾಗಿ ನಾವು ಟಿಗುವಾನ್ ಎಸ್‍‍ಯು‍‍ವಿಯನ್ನು ಚಲಾಯಿಸಿದೆವು. ಈ ಕಾರಿನಲ್ಲಿಯೂ ಪಸ್ಸಾಟ್ ಕಾರಿನಲ್ಲಿರುವಂತಹ ಎಂಜಿನ್‍ ಅಳವಡಿಸಲಾಗಿದೆ. ಟಿಗುವಾನ್ ಕಾರು ಚುರುಕಾಗಿ, ವೇಗವಾಗಿದೆ. ಈ ಕಾರು ಸೂಕ್ಷ್ಮ ತಿರುವುಗಳಲ್ಲಿ, ಹೆಚ್ಚು ಬ್ರೇಕ್ ಹಿಡಿಯುವ ಸಂದರ್ಭಗಳಲ್ಲಿ ಹೆಚ್ಚಿನ ನಿಯಂತ್ರಣವನ್ನು ಹೊಂದಿದೆ.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಟಿಗುವಾನ್ ಕಾರಿನಲ್ಲಿರುವ ಸೀಟಿಂಗ್ ಭಂಗಿಗಳು ಮೇಲ್ಮುಖವಾಗಿದ್ದು, ಮುಂದಿರುವ ರಸ್ತೆಗಳ ಮೇಲೆ ಸರಿಯಾಗಿ ದೃಷ್ಟಿಯನ್ನು ಹಾಯಿಸಬಹುದಾಗಿದೆ. ಈ ಕಾರಿನಲ್ಲಿ ನಾಲ್ಕು ಡ್ರೈವಿಂಗ್ ಮೋಡ್‍‍ಗಳಿದ್ದರೂ, ಡ್ರೈವ್‍‍ನಲ್ಲಿ ಆಫ್ ರೋಡ್‍‍ಗಳು ಇಲ್ಲದ ಕಾರಣ ನಮಗೆ ನಾರ್ಮಲ್ ಮೋಡಿನಲ್ಲಿ ಚಾಲನೆ ಮಾಡುವ ಅವಕಾಶ ಮಾತ್ರವೇ ಸಿಕ್ಕಿತು.

ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಡ್ರೈವ್‍‍‍ಸ್ಪಾರ್ಕ್ ಅಭಿಪ್ರಾಯ

ಪೊಲೊ ಹ್ಯಾಚ್‍‍ಬ್ಯಾಕ್‍‍ಗಳಿಂದ ಹಿಡಿದು ಟಾಪ್ ಮಾದರಿಯ ಪಸ್ಸಾಟ್‍‍ವರೆಗೆ ಫೋಕ್ಸ್ ವ್ಯಾಗನ್ ಸರಣಿಯ ಕಾರುಗಳು ಎಲ್ಲಾ ರೀತಿಯ ಗ್ರಾಹಕರಿಗೂ ಇಷ್ಟವಾಗಲಿವೆ.

Most Read Articles

Kannada
English summary
Volkswagen Drive Organised In Bangalore — Hill Climbing With The Volkswagen Fleet - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more