ಹ್ಯುಂಡೈ ಅಲ್ಕಾಜರ್

ಹ್ಯುಂಡೈ ಅಲ್ಕಾಜರ್
Style: ಎಸ್‌ಯುವಿ
16.77 - 21.28 ಲಕ್ಷ
ಜಿಎಸ್‌ಟಿ ಎಕ್ಸ್‌ಶೋರೂಂ ಬೆಲೆ

ಹ್ಯುಂಡೈ ಅಲ್ಕಾಜರ್ ಪ್ರಸ್ತುತ 23 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 3 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಹ್ಯುಂಡೈ ಅಲ್ಕಾಜರ್ ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಅಲ್ಕಾಜರ್ ವಾಹನದ ಆನ್‌ರೋಡ್ ಬೆಲೆಗಳ ಇಎಂಐ ಮಾಹಿತಿ ಪಡೆಯಬಹುದಾಗಿದೆ. ನಾವು ನೀಡುವ ಮಾಹಿತಿಯಿಂದಾಗಿ ಎಸ್‌ಯುವಿ ವಾಹನ ಖರೀದಿಯು ಸುಲಭವಾಗಲಿದ್ದು, ಇತರೆ ವಾಹನಗಳ ಬೆಲೆಗಳೊಂದಿಗೆ ಹೋಲಿಕೆ ಮಾಡಿಕೊಳ್ಳಲು ಡ್ರೈವ್‌ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ.

ಹ್ಯುಂಡೈ ಅಲ್ಕಾಜರ್ ಪೆಟ್ರೋಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
16,77,500
ಎಸ್‌ಯುವಿ | Gearbox
18,67,700
ಎಸ್‌ಯುವಿ | Gearbox
19,03,600
ಎಸ್‌ಯುವಿ | Gearbox
19,98,599
ಎಸ್‌ಯುವಿ | Gearbox
19,98,599
ಎಸ್‌ಯುವಿ | Gearbox
20,27,700
ಎಸ್‌ಯುವಿ | Gearbox
20,27,700
ಎಸ್‌ಯುವಿ | Gearbox
20,32,600
ಎಸ್‌ಯುವಿ | Gearbox
20,63,600
ಎಸ್‌ಯುವಿ | Gearbox
20,63,600

ಹ್ಯುಂಡೈ ಅಲ್ಕಾಜರ್ ಡೀಸೆಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
17,78,200
ಎಸ್‌ಯುವಿ | Gearbox
19,24,900
ಎಸ್‌ಯುವಿ | Gearbox
19,68,800
ಎಸ್‌ಯುವಿ | Gearbox
20,04,700
ಎಸ್‌ಯುವಿ | Gearbox
20,17,700
ಎಸ್‌ಯುವಿ | Gearbox
20,32,700
ಎಸ್‌ಯುವಿ | Gearbox
20,81,300
ಎಸ್‌ಯುವಿ | Gearbox
20,81,300
ಎಸ್‌ಯುವಿ | Gearbox
20,92,500
ಎಸ್‌ಯುವಿ | Gearbox
20,92,500
ಎಸ್‌ಯುವಿ | Gearbox
21,17,500
ಎಸ್‌ಯುವಿ | Gearbox
21,28,400
ಎಸ್‌ಯುವಿ | Gearbox
21,28,400

ಹ್ಯುಂಡೈ ಅಲ್ಕಾಜರ್ ಮೈಲೇಜ್

ಗೇರ್‌ಬಾಕ್ಸ್ ಇಂಧನ ಮಾದರಿ ಮೈಲೇಜ್
ಪೆಟ್ರೋಲ್ 0
ಡೀಸೆಲ್ 18.1

ಹ್ಯುಂಡೈ ಅಲ್ಕಾಜರ್ ವಿಮರ್ಶೆ

ಹ್ಯುಂಡೈ ಅಲ್ಕಾಜರ್ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ

ಹೊಚ್ಚ ಹೊಸ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ಮಾದರಿಯು 7 ಆಸನಗಳ ಸೌಲಭ್ಯದ ಕಾರು ಆವೃತ್ತಿಯಾಗಿದ್ದು, ಹೊಸ ವಿನ್ಯಾಸ, ವಿನೂತ ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಹೊಸ ಅಲ್ಕಾಜರ್ ಕಾರಿನ ಮುಂಭಾಗವು ಕ್ರೆಟಾ ಮಾದರಿಯಂತೆ ಹೋಲಿಕೆ ಪಡೆದುಕೊಂಡಿದ್ದಿದ್ದರೂ 7 ಆಸನಗಳ ಮಾದರಿಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳಿವೆ.

ಹೊಸ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ಮಾದರಿಯು ಕ್ರೆಟಾ ಆವೃತ್ತಿಗಿಂತಲೂ ಉತ್ತಮ ವ್ಹೀಲ್‌ಬೇಸ್ ಹೊಂದಿದ್ದು, 2,760 ಎಂಎಂ ವ್ಹೀಲ್‌ಬೆಸ್‌ನೊಂದಿಗೆ ಮೊದಲ ಮತ್ತು ಎರಡನೇ ಸಾಲಿನ ಆಸನಗಳು ಅತ್ಯುತ್ತಮ ಸೌಕರ್ಯಗಳನ್ನು ಒದಗಿಸುತ್ತದೆ. ಹಾಗೆಯೇ ಮೂರನೇ ಸಾಲಿನ ಆಸನವು ವಯಸ್ಕ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವಿಲ್ಲವಾದರೂ ಮಕ್ಕಳಿಗೆ ಅನುಕೂಲವಾಗಿದೆ.

ಹ್ಯುಂಡೈ ಅಲ್ಕಾಜರ್ ಎಂಜಿನ್ ಮತ್ತು ಸಾಮರ್ಥ್ಯ

ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ರೂಪಾಂತರಗಳು ಖರೀದಿಗೆ ಲಭ್ಯವಿದೆ. ಇದರಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಗರಿಷ್ಠ 156 ಬಿಹೆಚ್‌ಪಿ ಮತ್ತು 191 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು ಗರಿಷ್ಠ 113 ಬಿಹೆಚ್‌ಪಿ ಮತ್ತು 250 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಕಾರಿನಲ್ಲಿ 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿವೆ.

ಹ್ಯುಂಡೈ ಅಲ್ಕಾಜರ್ ಇಂಧನ ದಕ್ಷತೆ

ಹೊಸ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ ಮ್ಯಾನುವಲ್ ಮಾದರಿಯು 14.5 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು ಪ್ರತಿ ಲೀಟರ್‌ಗೆ 14.2 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಡೀಸೆಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 20.4 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು ಲೀಟರ್‌ಗೆ 18.1 ಕಿ.ಮೀ ಮೈಲೇಜ್ ನೀಡುತ್ತದೆ.

ಹ್ಯುಂಡೈ ಅಲ್ಕಾಜರ್ ಮುಖ್ಯ ವೈಶಿಷ್ಟ್ಯತೆಗಳು

ಹೊಸ ಅಲ್ಕಾಜರ್ ಎಸ್‌ಯುವಿಯಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್‌ಇಡಿ ಡೇಲೈಟ್ಸ್, ಬಾಡಿ ಕಲರ್ ರಿಯರ್ ವ್ಯೂ ಮಿರರ್ಸ್, 18 ಇಂಚಿನ ಅಲಾಯ್ ವೀಲ್ಸ್, ರೂಫ್ ರೈಲ್ಸ್ ಮತ್ತು ಕ್ರೋಮ್ ಲೆನ್ಸ್‌ಗಳಲ್ಲಿ ಅಡಕವಾಗಿರುವ ಫ್ರಂಟ್ ಗ್ರಿಲ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಹೊಸ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯಲ್ಲಿ 10.25 ಇಂಚಿನ ಟಚ್‌ಸ್ಕ್ರೀನ್ ಹೊಂದಿರುವ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ಹೊಂದಿದ್ದು, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಬೆಂಬಲಿಸುತ್ತದೆ. ಬ್ಲೂಟೂತ್ ಕನೆಕ್ಟಿವಿಟಿ, ಪನೋರಮಿಕ್ ಸನ್‌ರೂಫ್, 360 ಡಿಗ್ರಿ ಕ್ಯಾಮೆರಾ, ವೆಂಟೆಲೆಟೆಡ್ ಮುಂಭಾಗದ ಆಸನಗಳು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಡ್ಯುಯಲ್ ಟೋನ್ ಇಂಟೀರಿಯರ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಇಬಿಡಿಯೊಂದಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿಯರ್ ಡಿಸ್ಕ್ ಬ್ರೇಕ್, ರಿಯರ್ ವ್ಯೂ ಕ್ಯಾಮೆರಾ, ರಿಯರ್ ಡಿಫಾಗರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಹ್ಯುಂಡೈ ಅಲ್ಕಾಜರ್ ತೀರ್ಪು

ಹೊಸ ಕಾರಿನಗಳು ವಿನ್ಯಾಸಗಳು, ತಾಂತ್ರಿಕ ಸೌಲಭ್ಯಗಳು, ಭದ್ರತಾ ವೈಶಿಷ್ಟ್ಯಗಳು ಪ್ರತಿಸ್ಪರ್ಧಿ ಮಾದರಿಗಿಂತಲೂ ಅತ್ಯುತ್ತಮವಾಗಿವೆ. ಹೊಸ ಕಾರಿನ ಆರಂಭಿಕ ಮಾದರಿಯ ಬೆಲೆಯು ಪ್ರತಿಸ್ಪರ್ಧಿಗಳಿಗಿಂತಲೂ ತುಸು ಹೆಚ್ಚಾಗಿದೆ ಎಂಬ ಅಂಶವು ಹೊಸ ಕಾರಿಗೆ ತುಸು ಹಿನ್ನಡೆ ಉಂಟುಮಾಡಬಹುದಾದರೂ ತಾಂತ್ರಿಕವಾಗಿ ಬಲಿಷ್ಠ ಕಾರು ಮಾದರಿಯಾಗಿದೆ.

ಹ್ಯುಂಡೈ ಅಲ್ಕಾಜರ್ ಹ್ಯುಂಡೈ ಅಲ್ಕಾಜರ್ ಬಣ್ಣಗಳು


Starry Night
Titan Grey
Typhoon Silver

ಹ್ಯುಂಡೈ ಹ್ಯುಂಡೈ ಅಲ್ಕಾಜರ್ ಫೋಟೋಗಳು

ಹ್ಯುಂಡೈ ಅಲ್ಕಾಜರ್ Q & A

ಹೊಸ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯಲ್ಲಿ ಎಷ್ಟು ರೂಪಾಂತರಗಳು ಲಭ್ಯವಿವೆ?

ಅಲ್ಕಾಜರ್ ಕಾರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಪ್ರೆಸ್ಟೀಜ್, ಪ್ಲ್ಯಾಟಿನಂ ಮತ್ತು ಸಿಗ್ನೇಚರ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

Hide Answerkeyboard_arrow_down
ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯಲ್ಲಿ ಎಷ್ಟು ಬಣ್ಣಗಳ ಆಯ್ಕೆ ನೀಡಲಾಗುತ್ತದೆ?

ಹೊಸ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯಲ್ಲಿ ಫ್ಯಾಂಟಮ್ ಬ್ಲ್ಯಾಕ್, ಪೋಲಾರ್ ವೈಟ್, ಸ್ಟಾರಿ ನೈಟ್, ಟೈಗಾ ಬ್ರೌನ್, ಟೈಟಾನ್ ಗ್ರೇ, ಟೈಫೂನ್ ಸಿಲ್ವರ್ ಜೊತೆಗೆ ಪೋಲಾರ್ ವೈಟ್ - ಬ್ಲ್ಯಾಕ್ ಮತ್ತು ಟೈಟಾನ್ ಗ್ರೇ ಮತ್ತು ಫ್ಯಾಂಟಮ್ ಬ್ಲ್ಯಾಕ್ ಒಳಗೊಂಡ ಎರಡು ಡ್ಯುಯಲ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ.

Hide Answerkeyboard_arrow_down
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X