ಎಂಜಿ ಗ್ಲೋಸ್ಟರ್

ಎಂಜಿ ಗ್ಲೋಸ್ಟರ್
Style: ಎಸ್‌ಯುವಿ
38.80 - 43.87 ಲಕ್ಷ
ಜಿಎಸ್‌ಟಿ ಎಕ್ಸ್‌ಶೋರೂಂ ಬೆಲೆ

ಎಂಜಿ ಗ್ಲೋಸ್ಟರ್ ಪ್ರಸ್ತುತ 9 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 1 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಎಂಜಿ ಗ್ಲೋಸ್ಟರ್ ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಗ್ಲೋಸ್ಟರ್ ವಾಹನದ ಆನ್‌ರೋಡ್ ಬೆಲೆಗಳ ಇಎಂಐ ಮಾಹಿತಿ ಪಡೆಯಬಹುದಾಗಿದೆ. ನಾವು ನೀಡುವ ಮಾಹಿತಿಯಿಂದಾಗಿ ಎಸ್‌ಯುವಿ ವಾಹನ ಖರೀದಿಯು ಸುಲಭವಾಗಲಿದ್ದು, ಇತರೆ ವಾಹನಗಳ ಬೆಲೆಗಳೊಂದಿಗೆ ಹೋಲಿಕೆ ಮಾಡಿಕೊಳ್ಳಲು ಡ್ರೈವ್‌ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ.

ಎಂಜಿ ಗ್ಲೋಸ್ಟರ್ ಡೀಸೆಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
38,79,800
ಎಸ್‌ಯುವಿ | Gearbox
40,33,800
ಎಸ್‌ಯುವಿ | Gearbox
40,33,800
ಎಸ್‌ಯುವಿ | Gearbox
41,04,800
ಎಸ್‌ಯುವಿ | Gearbox
41,04,800
ಎಸ್‌ಯುವಿ | Gearbox
43,15,800
ಎಸ್‌ಯುವಿ | Gearbox
43,15,800
ಎಸ್‌ಯುವಿ | Gearbox
43,86,800
ಎಸ್‌ಯುವಿ | Gearbox
43,86,800

ಎಂಜಿ ಗ್ಲೋಸ್ಟರ್ ಮೈಲೇಜ್

ಗೇರ್‌ಬಾಕ್ಸ್ ಇಂಧನ ಮಾದರಿ ಮೈಲೇಜ್
ಡೀಸೆಲ್ 0

ಎಂಜಿ ಗ್ಲೋಸ್ಟರ್ ವಿಮರ್ಶೆ

ಎಂಜಿ ಗ್ಲೋಸ್ಟರ್ Exterior And Interior Design

ಎಂಜಿ ಗ್ಲೋಸ್ಟರ್ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ

ಗ್ಲೊಸ್ಟರ್ ಕಾರು ಮಾದರಿಯು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಎಂಜಿ ಮೋಟಾರ್ ನಿರ್ಮಾಣದ ಫ್ಲ್ಯಾಗ್‌ಶಿಫ್ ಕಾರು ಮಾದರಿಯಾಗಿದೆ. ಗ್ಲೊಸ್ಟರ್ ಹೊಸ ಕಾರು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯ ಮತ್ತು ಅತ್ಯುತ್ತಮ ವಿನ್ಯಾಸ ಪಡೆದುಕೊಂಡಿದೆ.

ಎಂಜಿ ಗ್ಲೊಸ್ಟರ್ ಕಾರಿನ ಮುಂಭಾಗದಲ್ಲಿ ಮೂರು ಅಡ್ಡಲಾದ ಸ್ಲ್ಯಾಟ್‌ಗಳ ಮೂಲಕ ದೊಡ್ಡದಾದ ಗ್ರಿಲ್ ಮತ್ತು ಮಧ್ಯದಲ್ಲಿ ಎಂಜಿ ಲೋಗೊ ನೀಡಲಾಗಿದೆ. ಗ್ರಿಲ್‌ನ ಎರಡೂ ಬದಿಗಳಲ್ಲಿ ಎಲ್ಇಡಿ ಡಿಆರ್‌ಎಲ್ಎಸ್‌ಗಳೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್ ನೀಡಲಾಗಿದೆ. ಮುಂಭಾಗದ ಬಂಪರ್‌ನಲ್ಲಿ ಸಿ-ಆಕಾರದ ಹೌಸಿಂಗ್ ವಿನ್ಯಾಸದೊಂದಿಗೆ ಫಾಗ್ ಲ್ಯಾಂಪ್, ಸೆಂಟ್ರಲ್ ಏರ್ ಡ್ಯಾಮ್ ನೀಡಲಾಗಿದ್ದು, ಏರ್ ಡ್ಯಾಮ್‌ನ ಕೆಳಗಿನ ಭಾಗದಲ್ಲಿ ಸಿಲ್ವರ್ ಫಿನಿಶ್ಡ್ ಸ್ಕಿಡ್ ಪ್ಲೇಟ್ ಅಳವಡಿಸಲಾಗಿದೆ.

ಎಂಜಿ ಗ್ಲೊಸ್ಟರ್‌ನಲ್ಲಿನ ಸೈಡ್ ಮತ್ತು ಹಿಂಭಾಗದ ಪ್ರೊಫೈಲ್ ಎತ್ತರದ ಗಾತ್ರದೊಂದಿಗೆ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ 19-ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ವೀಲ್ಹ್ ನೀಡಲಾಗಿದೆ. ಜೊತೆಗೆ ಕಾರಿನ ಸುತ್ತಲೂ ಸಾಕಷ್ಟು ಕ್ರೋಮ್ ಮತ್ತು ಸಿಲ್ವರ್-ಫಿನಿಶ್ಡ್ ಜೋಡಿಸಲಾಗಿದ್ದು, ಕಾರಿನ ಕಿಟಕಿಗಳು ದೊಡ್ಡದಾಗಿವೆ. ಕಿಟಕಿಗಳು ಕೂಡಾ ಕ್ರೋಮ್ ಪಟ್ಟಿಯಿಂದ ಸುತ್ತುವರಿದ್ದು, ಸಿಲ್ವರ್ ರೂಫ್ ರೈಲ್ಸ್‌ನೊಂದಿಗೆ ಖದರ್ ಪಡೆದುಕೊಂಡಿದೆ.

ಹೊಸ ಕಾರಿನ ಹಿಂಭಾಗದ ಪ್ರೊಫೈಲ್‌ನಲ್ಲಿ ಮುಖ್ಯವಾಗಿ ದೊಡ್ಡದಾದ ಎಲ್ಇಡಿ ಟೈಲ್ ಲೈಟ್ ಆಕರ್ಷಕವಾಗಿದ್ದು, ಬೂಟ್ ಲಿಡ್ ಕೆಳಭಾಗದಲ್ಲಿ ‘GLOSTER’ ಲೋಗೊವನ್ನು ಸಹ ಒಳಗೊಂಡಿದೆ. ಇದರೊಂದಿಗೆ ಗ್ಲೊಸ್ಟರ್ ಕಾರಿನಲ್ಲಿ ಕ್ವಾಡ್ ಎಕ್ಸಾಸ್ಟ್ ಪೈಪ್, ರಿಫ್ಲೆಕ್ಟರ್‌ಗಳು ಮತ್ತು ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್ ಅನ್ನು ಸಹ ಒಳಗೊಂಡಿದೆ.

ಹೊರ ಭಾಗದಲ್ಲಿನ ವಿನ್ಯಾಸದಂತೆ ಗ್ಲೊಸ್ಟರ್ ಕಾರಿನ ಒಳಭಾಗವು ಕೂಡಾ ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ವಿಶಾಲವಾದ ಕ್ಯಾಬಿನ್ ಮತ್ತು ಡ್ಯಾಶ್‌ಬೋರ್ಡ್ ಒಳಗೊಂಡಿದೆ. ಇಡೀ ಕ್ಯಾಬಿನ್ ಪ್ರೀಮಿಯಂ ಲೆದರ್ ಆಸನಗಳನ್ನು ಮತ್ತು ಇತರೆ ಸಾಫ್ಟ್-ಟಚ್ ವಸ್ತುಗಳಿಂದ ಸಿದ್ದವಾಗಿದೆ. ಹೊಸ ಕಾರಿನಲ್ಲಿ ಪ್ರಮುಖವಾಗಿ ಬ್ರಾಂಡ್‌ನ ಐ-ಸ್ಮಾರ್ಟ್ ತಂತ್ರಜ್ಞಾನದೊಂದಿಗೆ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಸಂಪೂರ್ಣವಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇದೆ. ಎರಡನೇ ಮತ್ತು ಮೂರನೇ ಸಾಲಿನಲ್ಲಿಯೂ ಸಹ ಪ್ರೀಮಿಯಂ ಲೆದರ್ ಆಸನಗಳನ್ನು ಪಡೆದುಕೊಂಡಿದ್ದು, ಎಲ್ಲಾ ಪ್ರಯಾಣಿಕರಿಗೂ ಸಾಕಷ್ಟು ಸ್ಥಳಾವಕಾಶ ಹೊಂದಿದೆ.

ಎಂಜಿ ಗ್ಲೋಸ್ಟರ್ ಎಂಜಿನ್ ಮತ್ತು ಸಾಮರ್ಥ್ಯ

ಎಂಜಿ ಗ್ಲೋಸ್ಟರ್ Engine And Performance

ಎಂಜಿ ಗ್ಲೊಸ್ಟರ್ ಮಾದರಿಯ ಎಲ್ಲಾ ರೂಪಾಂತರಗಳಲ್ಲೂ ಸ್ಟ್ಯಾಂಡರ್ಡ್ ಆಗಿ 2.0-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದೆ. ಆದಾಗ್ಯೂ ಲೋವರ್-ಸ್ಪೆಕ್ ಮಾದರಿಯು ಸಿಂಗಲ್ ಟರ್ಬೊ-ಚಾರ್ಜರ್ ಒಳಗೊಂಡಿದ್ದು, 4000 ಆರ್‌ಪಿಎಂನಲ್ಲಿ 160 ಬಿಹೆಚ್‌ಪಿ ಮತ್ತು 1500 ಆರ್‌ಪಿಎಂನಲ್ಲಿ 375 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ.

ಟಾಪ್ ಎಂಡ್ ರೂಪಾಂತರವು ಟ್ವಿನ್ ಟರ್ಬೋ 2.0-ಲೀಟರ್ ಎಂಜಿನ್‌ನೊಂದಿಗೆ ಆಯಿಲ್ ಬರ್ನರ್ ಮೂಲಕ 4000 ಆರ್‌ಪಿಎಂನಲ್ಲಿ 216 ಬಿಹೆಚ್‌ಪಿ ಮತ್ತು 1500 ಆರ್‌ಪಿಎಂನಲ್ಲಿ 480 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಡೀಸೆಲ್ ಎಂಜಿನ್‌ನ ಎರಡೂ ಆವೃತ್ತಿಗಳಲ್ಲೂ ಒಂದೇ ಮಾದರಿಯ 8-ಸ್ಪೀಡ್ ಸ್ವಯಂಚಾಲಿತ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಎಂಜಿ ಗ್ಲೋಸ್ಟರ್ ಇಂಧನ ದಕ್ಷತೆ

ಎಂಜಿ ಗ್ಲೋಸ್ಟರ್ Fuel Efficiency

ಎಂಜಿ ಗ್ಲೊಸ್ಟರ್ ಕಾರಿನಲ್ಲಿ ಎಂಜಿನ್ ಸಾಮಾರ್ಥ್ಯಕ್ಕೆ ಅನುಗುಣವಾಗಿ 75-ಲೀಟರ್ ಸಾಮಥ್ಯದ ಬೃಹತ್ ಇಂಧನ ಟ್ಯಾಂಕ್ ಜೋಡಿಸಲಾಗಿದ್ದು, ಹೊಸ ಕಾರಿನ ಇಂಧನ ದಕ್ಷತೆ ಕುರಿತು ಎಆರ್‌ಎಐ ಸಂಸ್ಥೆಯು ಇನ್ನು ಕೂಡಾ ಪ್ರಮಾಣೀಕರಿಸಿಲ್ಲ. ಆದರೆ ಹೊಸ ಕಾರಿನ ಗಾತ್ರ, ಎಂಜಿನ್ ಪರ್ಫಾಮೆನ್ಸ್ ಆಧಾರದ ಮೇಲೆ ಪ್ರತಿ ಲೀಟರ್‌ಗೆ 8 ಕಿ.ಮೀ ನಿಂದ ರಿಂದ 14 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದೆಂದು ಅಂದಾಜಿಸಲಾಗಿದೆ.

ಎಂಜಿ ಗ್ಲೋಸ್ಟರ್ ಮುಖ್ಯ ವೈಶಿಷ್ಟ್ಯತೆಗಳು

ಎಂಜಿ ಗ್ಲೋಸ್ಟರ್ Important Features

ಗ್ಲೊಸ್ಟರ್ ಕಾರು ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಎಂಜಿ ಬ್ರಾಂಡ್‌‌ನ ಸುಧಾರಿತ ತಂತ್ರಜ್ಞಾನ ಪ್ರೇರಿತ ಕಾರು ಮಾದರಿಯಾಗಿದೆ. ದೇಶದ ಮೊದಲ ಲೆವಲ್ 1 ಆಟೋನಮೊಸ್ ಎಸ್‌ಯುವಿ ಕಾರು ಮಾದರಿಯಾಗಿರುವ ಗ್ಲೊಸ್ಟರ್‌ನಲ್ಲಿ ಆಟೋ ಪಾರ್ಕ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೈನ್ ಡಿಪಾರ್ಚರ್ ವಾರ್ನಿಂಗ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಬ್ಲೈಂಡ್-ಸ್ಪಾಟ್ ಡಿಟೆಕ್ಷನ್ ಮತ್ತು ಫಾರ್ವರ್ಡ್ ಕೂಲಿಷನ್ ವಾರ್ನಿಂಗ್ ಸೌಲಭ್ಯಗಳಿವೆ.

ಇದಲ್ಲದೆ, ಗ್ಲೊಸ್ಟರ್ ಕಾರಿನಲ್ಲಿ ಎಂಜಿ ಬ್ರಾಂಡ್‌ನ ಹೊಸ ಐ-ಸ್ಮಾರ್ಟ್ ಕನೆಕ್ಟೆಡ್ ತಂತ್ರಜ್ಞಾನ, ಎರಡನೇ ಸಾಲಿನಲ್ಲಿ ಪ್ರತ್ಯೇಕವಾದ ಕ್ಯಾಪ್ಟನ್ ಆಸನಗಳು, ವೈರ್‌ಲೆಸ್ ಚಾರ್ಜರ್, ಮಲ್ಟಿ-ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ವೆಂಟೆಲೆಟೆಡ್ ಆಸನಗಳು, ಎಲೆಕ್ಟ್ರಾನಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಆಸನಗಳು ಸೇರಿದಂತೆ ಪನೋರಮಿಕ್ ಸನ್‌ರೂಫ್ ಸೇರಿ ಹಲವು ಸೌಲಭ್ಯಗಳಿವೆ.

ಎಂಜಿ ಗ್ಲೋಸ್ಟರ್ ತೀರ್ಪು

ಎಂಜಿ ಗ್ಲೋಸ್ಟರ್ Verdict

ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಒಳಗೊಂಡಿರುವ ಎಂಜಿ ಗ್ಲೊಸ್ಟರ್ ಕಾರು ಮಾದರಿಯು ಬಲಿಷ್ಠ ಎಸ್‌ಯುವಿ ಕಾರು ಮಾದರಿಯಾಗಿದ್ದು, ಹೊಸ ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಫೀಚರ್ಸ್‌ಗಳು, ಬಲಿಷ್ಠವಾದ ಡೀಸೆಲ್ ಎಂಜಿನ್‌ನೊಂದಿಗೆ ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ.

ಎಂಜಿ ಗ್ಲೋಸ್ಟರ್ ಎಂಜಿ ಗ್ಲೋಸ್ಟರ್ ಬಣ್ಣಗಳು


Metal Black

ಎಂಜಿ ಎಂಜಿ ಗ್ಲೋಸ್ಟರ್ ಫೋಟೋಗಳು

ಎಂಜಿ ಗ್ಲೋಸ್ಟರ್ Q & A

ಎಂಜಿ ಗ್ಲೊಸ್ಟರ್‌ ಕಾರಿನಲ್ಲಿ ಯಾವೆಲ್ಲಾ ರೂಪಾಂತರಗಳಿವೆ?

ಎಂಜಿ ಗ್ಲೊಸ್ಟರ್ ಕಾರು ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ.

Hide Answerkeyboard_arrow_down
ಎಂಜಿ ಗ್ಲೊಸ್ಟರ್‌ ಕಾರಿನಲ್ಲಿರುವ ಬಣ್ಣಗಳ ಆಯ್ಕೆ ಯಾವುವು?

ಎಂಜಿ ಗ್ಲೊಸ್ಟರ್ ಕಾರನ್ನು ನಾಲ್ಕು ಪ್ರಮುಖ ಬಣ್ಣಗಳಲ್ಲಿ ಪರಿಚಯಿಸಲಾಗಿದೆ: ಅಗೇಟ್ ರೆಡ್, ಮೆಟಲ್ ಬ್ಲ್ಯಾಕ್, ಮೆಟಲ್ ಆಶ್ ಮತ್ತು ವಾರ್ಮ್ ವೈಟ್

Hide Answerkeyboard_arrow_down
ಎಂಜಿ ಗ್ಲೊಸ್ಟರ್‌ ಕಾರಿನ ಪ್ರತಿಸ್ಪರ್ಧಿ ಮಾದರಿಗಳು ಯಾವುವು?

ಎಂಜಿ ಗ್ಲೊಸ್ಟರ್ ಕಾರಿಗೆ ಮಹೀಂದ್ರಾ ಅಲ್ಟುರಾಸ್ ಜಿ4, ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್‌ ಮಾದರಿಗಳು ನೇರ ಪ್ರತಿಸ್ಪರ್ಧಿಯಾಗಿವೆ.

Hide Answerkeyboard_arrow_down
ಎಂಜಿ ಗ್ಲೊಸ್ಟರ್‌ ಕಾರಿನ ಅತ್ಯುತ್ತಮ ವೈಶಿಷ್ಟ್ಯತೆ ಯಾವುದು?

ಎಂಜಿ ಗ್ಲೊಸ್ಟರ್ ಕಾರನಲ್ಲಿ ಅತ್ಯುತ್ತಮ ವೈಶಿಷ್ಟ್ಯತೆ ಅಂದರೆ ಎಡಿಎಎಸ್ ಸಿಸ್ಟಂ ಮತ್ತು ಆಟೋನಮೊಸ್ ‘ಲೆವೆಲ್ 1’ ತಂತ್ರಜ್ಞಾನ ಸೌಲಭ್ಯವು ಪ್ರಮುಖವಾಗಿದೆ.

Hide Answerkeyboard_arrow_down
ಎಂಜಿ ಗ್ಲೊಸ್ಟರ್ ಸಮರ್ಥ ಆಫ್-ರೋಡ್ ಕಾರು ಮಾದರಿ ಆಗಿದೆಯೇ?

ಖಂಡಿತವಾಗಿಯೂ ಎಂಜಿ ಗ್ಲೊಸ್ಟರ್ ಪ್ರೀಮಿಯಂ ಕಾರು ಏಳು ಆಸನಗಳೊಂದಿಗೆ ಸಮರ್ಥ ಆಫ್-ರೋಡರ್ ಎಸ್‌ಯುವಿ ಮಾದರಿಯಾಗಿದೆ.

Hide Answerkeyboard_arrow_down
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X