ಟೊಯೊಟಾ ಅರ್ಬನ್ ಕ್ರೂಸರ್

ಟೊಯೊಟಾ ಅರ್ಬನ್ ಕ್ರೂಸರ್
Style: ಎಸ್‌ಯುವಿ
8.72 - 11.40 ಲಕ್ಷ
ಜಿಎಸ್‌ಟಿ ಎಕ್ಸ್‌ಶೋರೂಂ ಬೆಲೆ

ಟೊಯೊಟಾ ಅರ್ಬನ್ ಕ್ರೂಸರ್ ಪ್ರಸ್ತುತ 6 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 6 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಟೊಯೊಟಾ ಅರ್ಬನ್ ಕ್ರೂಸರ್ ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಅರ್ಬನ್ ಕ್ರೂಸರ್ ವಾಹನದ ಆನ್‌ರೋಡ್ ಬೆಲೆಗಳ ಇಎಂಐ ಮಾಹಿತಿ ಪಡೆಯಬಹುದಾಗಿದೆ. ನಾವು ನೀಡುವ ಮಾಹಿತಿಯಿಂದಾಗಿ ಎಸ್‌ಯುವಿ ವಾಹನ ಖರೀದಿಯು ಸುಲಭವಾಗಲಿದ್ದು, ಇತರೆ ವಾಹನಗಳ ಬೆಲೆಗಳೊಂದಿಗೆ ಹೋಲಿಕೆ ಮಾಡಿಕೊಳ್ಳಲು ಡ್ರೈವ್‌ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಪೆಟ್ರೋಲ್ ಮಾದರಿಗಳು

ಟೊಯೊಟಾ ಅರ್ಬನ್ ಕ್ರೂಸರ್ ಮೈಲೇಜ್

ಗೇರ್‌ಬಾಕ್ಸ್ ಇಂಧನ ಮಾದರಿ ಮೈಲೇಜ್
ಪೆಟ್ರೋಲ್ 18.76

ಟೊಯೊಟಾ ಅರ್ಬನ್ ಕ್ರೂಸರ್ ವಿಮರ್ಶೆ

ಟೊಯೊಟಾ ಅರ್ಬನ್ ಕ್ರೂಸರ್ Exterior And Interior Design

ಟೊಯೊಟಾ ಅರ್ಬನ್ ಕ್ರೂಸರ್ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ

ಅರ್ಬನ್ ಕ್ರೂಸರ್ ಕಾರು ಮಾದರಿಯು ಟೊಯೊಟಾ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಕಾರ್ ಬ್ರಾಂಡ್ ಮಾದರಿಯಾಗಿದೆ. ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಯ ಈ ಹೊಸ ಕಾರು ಮಾರುತಿ-ಸುಜುಕಿ ಜೊತೆಗೂಡಿ ವಿಟಾರಾ ಬ್ರೆಝಾ ಮಾದರಿಯನ್ನ ಆಧರಿಸಿ ಟೊಯೊಟಾ ಕಂಪನಿಯು ನಿರ್ಮಾಣ ಮಾಡಲಾದ ಎರಡನೇ ಕಾರು ಮಾದರಿಯಾಗಿದೆ.

ವಿನೂತನ ವಿನ್ಯಾಸ ಮತ್ತು ವೈಶಿಷ್ಟ್ಯತೆ ಹೊಂದಿರುವ ಹೊಸ ಅರ್ಬನ್ ಕ್ರೂಸರ್ ಕಾರು ಮಾದರಿಯು ಎರಡು ಸ್ಲಾಟ್ ಹೊಂದಿರುವ ಫ್ರಂಟ್ ಗ್ರಿಲ್, ಎರಡು ತುದಿಗಳಲ್ಲೂ ದಪ್ಪದಾದ ಕ್ರೊಮ್ ಮೂಲಕ ಆವೃತ್ತವಾಗಿದೆ. ಹೆಡ್‌ಲ್ಯಾಂಪ್‌ಗಳು ಗ್ರಿಲ್‌ನ ಎರಡೂ ಬದಿಯಲ್ಲಿವೆ ಮತ್ತು ಎಲ್‌ಇಡಿ ಪ್ರೊಜೆಕ್ಟರ್ ಘಟಕಗಳನ್ನು ಹೊಂದಿದ್ದು, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. ಮುಂಭಾಗದ ಬಂಪರ್ ಕೆಳಭಾಗದಲ್ಲಿ ಬ್ಲ್ಯಾಕ್ ಕ್ಲ್ಯಾಡಿಂಗ್‌ನೊಂದಿಗೆ ವಿನ್ಯಾಸಗೊಂಡಿದ್ದು, ಏರ್ ಇನ್‌ಕೆಟ್ ಮತ್ತು ಫಾಗ್ ಲ್ಯಾಂಪ್‌ಗಳು ಎರಡೂ ತುದಿಯಲ್ಲಿರುತ್ತವೆ.

ಅರ್ಬನ್ ಕ್ರೂಸರ್ ಕಾರಿನ ಸೈಡ್ ಪ್ರೊಫೈಲ್ ಮತ್ತು ಹಿಂಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಕನಿಷ್ಠ ಮಟ್ಟದ ವಿನ್ಯಾಸ ಗುಣಲಕ್ಷಣಗಳಿದ್ದರೂ ಅಚ್ಚುಕಟ್ಟಾದ ವಿನ್ಯಾಸ ಹೊಂದಿದೆ. ಹಾಗೆಯೇ ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್‌ಗಳೊಂದಿಗೆ ಸ್ಟೈಲಿಶ್ ಆಗಿರುವ 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಹ್ ಮತ್ತು ಬಾಡಿ ಕಲರ್ ಒಳಗೊಂಡಿರುವ ಒಆರ್‌ವಿಎಂಗಳು ಪ್ರಮುಖ ತಾಂತ್ರಿಕ ಅಂಶಗಳಾಗಿವೆ.

ಕಾರಿನ ಹಿಂಭಾಗದಲ್ಲಿ ಎಲ್‌ಇಡಿ ಟೈಲ್ ಲೈಟ್‌ಗಳು, ಅದರ ಮೇಲೆ ಆಕರ್ಷಕವಾಗಿರುವ ‘ಅರ್ಬನ್ ಕ್ರೂಸರ್’ ಹೆಸರಿನ ದಪ್ಪ ಕ್ರೋಮ್ ಸ್ಟ್ರಿಪ್, ಸ್ಟಾಪ್ ಲ್ಯಾಂಪ್ ಹೊಂದಿರುವ ರೂಫ್ ಮೌಟೆಂಡ್ ಸ್ಪಾಯ್ಲರ್ ಮತ್ತು ಹಿಂಭಾಗದ ಬಂಪರ್‌ನಲ್ಲಿ ಪ್ರತಿಫಲಕಗಳೊಂದಿಗೆ ಬರುತ್ತದೆ. ಕೆಳಭಾಗದಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್ ಸಹ ಇದ್ದು, ಇದು ಎಸ್‌ಯುವಿ ಹೊರ ನೋಟದ ಬಲಿಷ್ಠತೆಯನ್ನು ಹೆಚ್ಚಿಸುತ್ತದೆ.

ಇನ್ನು ಟೊಯೊಟಾ ಅರ್ಬನ್ ಕ್ರೂಸರ್ ಕಾರಿನಲ್ಲಿ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್ ವಿನ್ಯಾಸವು ಗಮನಸೆಳೆಯುತ್ತದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೋಲ್‌ನಲ್ಲಿರುವ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಇತರ ಹೆಚ್ಚಿನ ತಾಂತ್ರಿಕ ಅಂಶಗಳನ್ನು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಲ್ಲಿರುವಂತೆಯೆ ಮುಂದುವರಿಸಲಾಗಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಎಂಜಿನ್ ಮತ್ತು ಸಾಮರ್ಥ್ಯ

ಟೊಯೊಟಾ ಅರ್ಬನ್ ಕ್ರೂಸರ್ Engine And Performance

ಟೊಯೊಟಾ ಅರ್ಬನ್ ಕ್ರೂಸರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಂತೆ ಎಂಜಿನ್ ಆಯ್ಕೆ ಹೊಂದಿದೆ. ಬಿಎಸ್-6 ಪ್ರೇರಿತ ಕೆ-ಸೀರಿಸ್ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 104-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಪೆಟ್ರೋಲ್ ಎಂಜಿನ್ ಮಾದರಿಯು ಆರಂಭಿಕ ಆವೃತ್ತಿಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಹೈ ಎಂಡ್ ಮಾದರಿಗಳಲ್ಲಿ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಇಂಧನ ದಕ್ಷತೆ

ಟೊಯೊಟಾ ಅರ್ಬನ್ ಕ್ರೂಸರ್ Fuel Efficiency

ಟೊಯೊಟಾ ಕಂಪನಿಯು ಅರ್ಬನ್ ಕ್ರೂಸರ್ ಕಾರು ಮಾದರಿಯ ಅಧಿಕೃತ ಮೈಲೇಜ್ ಮಾಹಿತಿಯನ್ನು ಹಂಚಿಕೊಂಡಿಲ್ಲವಾದರೂ ವಿಟಾರಾ ಬ್ರೆಝಾ ಮಾದರಿಯನ್ನೇ ಆಧರಿಸಿರುವ ಹೊಸ ಕಾರು ಉತ್ತಮ ಮೈಲೇಜ್ ಹಿಂದಿರುಗಿಸಲಿದೆ.

ಅರ್ಬನ್ ಕ್ರೂಸರ್ 1.5-ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 17.3 ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18.76 ಕಿ.ಮೀ ಮೈಲೇಜ್ ನೀಡಲಿದ್ದು, ಮೈಲೇಜ್ ಅಂಕಿ-ಅಂಶಗಳು ಆಟೋಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ ಸಂಸ್ಥೆಯಿಂದ ಪ್ರಮಾಣೀಕರಿಸಲಾಗಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಮುಖ್ಯ ವೈಶಿಷ್ಟ್ಯತೆಗಳು

ಟೊಯೊಟಾ ಅರ್ಬನ್ ಕ್ರೂಸರ್ Important Features

ಅರ್ಬನ್ ಕ್ರೂಸರ್ ಕಾರು ಮಾದರಿಯಲ್ಲಿ ಟೊಯೊಟಾ ಕಂಪನಿಯು ಹಲವಾರು ಬೆಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್ ನೀಡಿದ್ದು, ಹೊಸ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಫಾಗ್ ಲ್ಯಾಂಪ್ಸ್, 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಹ್, ಎಲ್ಇಡಿ ಟೈಲ್ ಲೈಟ್ಸ್, 7-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡ್ಯುಯಲ್-ಟೋನ್ ಇಂಟಿರಿಯರ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸ್ಟ್ರೀರಿಂಗ್ ಮೌಂಟೆಡ್ ಕಂಟ್ರೋಲ್, ಕೀ ಲೆಸ್ ಇಗ್ನಿಷನ್, ಹಿಂಬದಿಯ ಆಸನದಲ್ಲಿ 60:40 ಅನುಪಾತದ ಸ್ಪ್ಲಿಟ್ ಸೀಟ್, ಆಟೋ ರೈನ್ ಸೆನ್ಸಿಂಗ್ ವೈಪರ್, ವಿದ್ಯುಮಾನ ಪ್ರೇರಿತ ರಿಯಲ್ ವ್ಯೂ ಮಿರರ್ ಮತ್ತು ಇಂಟ್ರಾಗ್ರೆಟೆಡ್ ಟರ್ನ್ ಸಿಗ್ನಲ್ಸ್ ಸೌಲಭ್ಯಗಳಿವೆ.

ಟೊಯೊಟಾ ಅರ್ಬನ್ ಕ್ರೂಸರ್ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳು: ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಹಿಲ್-ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಮಿರರ್ ಜೊತೆ ಪಾರ್ಕಿಂಗ್ ಗೈಡ್‌ಲೆನ್ಸ್, ಸೀಟ್-ಬೆಲ್ಟ್ ಪ್ರಿಟೆನ್ಷನರ್‌ಗಳು ಮತ್ತು ಹೈ-ಸ್ಪೀಡ್ ವಾರ್ನಿಂಗ್ ಸೇರಿ ಹಲವಾರು ಸುರಕ್ಷಾ ಸೌಲಭ್ಯಗಳಿವೆ. 

ಟೊಯೊಟಾ ಅರ್ಬನ್ ಕ್ರೂಸರ್ ತೀರ್ಪು

ಟೊಯೊಟಾ ಅರ್ಬನ್ ಕ್ರೂಸರ್ Verdict

ಪ್ರವೇಶ ಮಟ್ಟದ ಎಸ್‌ಯುವಿ ಆವೃತ್ತಿಯಾಗಿರುವ ಟೊಯೊಟಾ ಅರ್ಬನ್ ಕ್ರೂಸರ್ ಕಾರು ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ನಿರ್ಮಾಣದ ವಿಟಾರಾ ಬ್ರೆಝಾ ಆಧರಿಸಿ ನಿರ್ಮಾಣವಾದ ಕಾರು ಮಾದರಿಯಾಗಿದೆ. ಮೂಲ ಕಾರು ಮಾದರಿಗಿಂತಲೂ ಹಲವಾರು ಹೊಸ ಫೀಚರ್ಸ್ ಹೊಂದಿರುವ ಅರ್ಬನ್ ಕ್ರೂಸರ್ ಕಾರು ಮಾದರಿಯು ಅತ್ಯುತ್ತಮ ಎಂಜಿನ್ ಪರ್ಫಾಮೆನ್ಸ್, ಹಲವಾರು ಹೊಸ ವೈಶಿಷ್ಟ್ಯತೆಯ ಫೀಚರ್ಸ್‌ಗಳೊಂದಿಗೆ ದಿನನಿತ್ಯದ ಚಾಲನೆಗೆ ಅತ್ಯಂತ ವಿಶ್ವಾಸಾರ್ಹ ಕಾರು ಮಾದರಿಯಾಗಲಿದೆ ಎನ್ನಬಹುದು.

ಟೊಯೊಟಾ ಅರ್ಬನ್ ಕ್ರೂಸರ್ ಟೊಯೊಟಾ ಅರ್ಬನ್ ಕ್ರೂಸರ್ ಬಣ್ಣಗಳು


Spunky Blue
Iconic Grey
Rustic Brown
Suave Silver
Groovy Orange
Sunny White

ಟೊಯೊಟಾ ಟೊಯೊಟಾ ಅರ್ಬನ್ ಕ್ರೂಸರ್ ಫೋಟೋಗಳು

ಟೊಯೊಟಾ ಅರ್ಬನ್ ಕ್ರೂಸರ್ Q & A

ಟೊಯೊಟಾ ಅರ್ಬನ್ ಕ್ರೂಸರ್‌ ಕಾರಿನಲ್ಲಿರುವ ರೂಪಾಂತರಗಳು ಯಾವವು?

ಟೊಯೊಟಾ ಅರ್ಬನ್ ಕ್ರೂಸರ್ ಕಾರಿನಲ್ಲಿ ಮಿಡ್, ಹೈ ಮತ್ತು ಪ್ರೀಮಿಯಂ ಎಂಬ ಮೂರು ರೂಪಾಂತರಗಳಲ್ಲಿ ನೀಡಲಾಗುತ್ತದೆ.

Hide Answerkeyboard_arrow_down
ಟೊಯೊಟಾ ಅರ್ಬನ್ ಕ್ರೂಸರ್ ಕಾರಿನಲ್ಲಿರುವ ಬಣ್ಣ ಆಯ್ಕೆ ಯಾವವು?

ಟೊಯೊಟಾ ಅರ್ಬನ್ ಕ್ರೂಸರ್ ಕಾರಿನಲ್ಲಿ ಒಟ್ಟು ಒಂಬತ್ತು ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಸುವ್ ಸಿಲ್ವರ್, ಗ್ರೊವಿ ಆರೆಂಜ್, ಐಕಾನಿಕ್ ಗ್ರೇ, ಸ್ಪಂಕಿ ಬ್ಲೂ, ಸನ್ನಿ ವೈಟ್, ರೂಸ್ಟಿಕ್ ಬ್ರೌನ್, ಸ್ಪಂಕಿ ಬ್ಲ್ಯೂ/ ಸಿಜ್ಲಿಂಗ್ ಬ್ಲ್ಯಾಕ್, ರೂಸ್ಟಿಕ್ ಬ್ರೌನ್/ಸಿಜ್ಲಿಂಗ್ ಬ್ಲ್ಯಾಕ್ ಮತ್ತು ಗ್ರೊವಿ ಆರೆಂಜ್/ಸನ್ನಿ ವೈಟ್.

Hide Answerkeyboard_arrow_down
ಟೊಯೊಟಾ ಅರ್ಬನ್ ಕ್ರೂಸರ್‌ ಪ್ರತಿಸ್ಪರ್ಧಿ ಕಾರುಗಳು ಯಾವವು?

ಟೊಯೊಟಾ ಅರ್ಬನ್ ಕ್ರೂಸರ್ ಕಾರಿಗೆ ಕಿಯಾ ಸೊನೆಟ್, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಫೋರ್ಡ್ ಇಕೋಸ್ಪೋರ್ಟ್‌ ಕಾರುಗಳು ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ.

Hide Answerkeyboard_arrow_down
ಟೊಯೊಟಾ ಅರ್ಬನ್ ಕ್ರೂಸರ್ ಕೇವಲ ಮಾರುತಿ ಸುಜುಕಿ ವಿಟಾರಾ ಬ್ರೆಝಾ ರೀಬ್ಯಾಡ್ಜ್ ಆವೃತ್ತಿಯೇ?

ಹೌದು, ಟೊಯೊಟಾ ಅರ್ಬನ್ ಕ್ರೂಸರ್ ವಿಟಾರಾ ಬ್ರೆಝಾ ಕಾರಿನಿಂದ ಮರುರೂಪಿಸಲಾದ ಕಾರು ಮಾದರಿಯಾಗಿದ್ದರೂ ಕೂಡಾ ಟೊಯೊಟಾ ಕಂಪನಿಯು ಎರಡು ಕಾರುಗಳನ್ನು ಪ್ರತ್ಯೇಕಿಸಲು ಹಲವಾರು ಬದಲಾವಣೆಗಳನ್ನ ಪರಿಚಯಿಸಿದೆ.

Hide Answerkeyboard_arrow_down
ಟೊಯೊಟಾ ಅರ್ಬನ್ ಕ್ರೂಸರ್ ಅನ್ನು ಡೀಸೆಲ್‌ ಮಾದರಿಯಲ್ಲಿ ನೀಡಲಾಗಿದೆಯೇ?

ಇಲ್ಲ, ಟೊಯೊಟಾ ಅರ್ಬನ್ ಕ್ರೂಸರ್ ಅನ್ನು ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ನೀಡಲಾಗುವುದಿಲ್ಲ.

Hide Answerkeyboard_arrow_down
ಟೊಯೊಟಾ ಅರ್ಬನ್ ಕ್ರೂಸರ್‌ನಲ್ಲಿ ಪೆಟ್ರೋಲ್-ಆಟೋಮ್ಯಾಟಿಕ್ ರೂಪಾಂತರವಿದೆಯೇ?

ಹೌದು, ಟೊಯೊಟಾ ಅರ್ಬನ್ ಕ್ರೂಸರ್ ಕಾರಿನ ಎಲ್ಲಾ ಮೂರು ರೂಪಾಂತರಗಳು ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿವೆ.

Hide Answerkeyboard_arrow_down
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X