ಕಾರು ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ವಿರೋಧ

By Super

 Car price hik
2008ರ ಡಿಸೆಂಬರ್ ತಿಂಗಳಲ್ಲಿ ಕುಸಿಯುತ್ತಿದ್ದ ಕಾರು ಉತ್ಪಾದನೆ ಮತ್ತು ಮಾರಾಟವನ್ನು ಹಿಡಿದೆತ್ತಲು ಕೇಂದ್ರ ಸರ್ಕಾರ ಉತ್ತೇಜಕ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕೆಲ ಕಾರು ತಯಾರಕರು ಕಾರಿನ ಬೆಲೆಯಲ್ಲಿ ಏರಿಸಿರುವುದು ಕೇಂದ್ರದ ಕಣ್ಣು ಕೆಂಪಾಗುವಂತೆ ಮಾಡಿದೆ.

ಸ್ವಿಫ್ಟ್, ಎ ಸ್ಟಾರ್, ಸ್ಯಾಂಟ್ರೋ, ಐ10, ಎಸೆಂಟ್, ಸ್ಪಾರ್ಕ್, ಕೊರೋಲಾ ಕಾರುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕನಿಷ್ಠ 3 ಸಾವಿರ ರು.ಯಿಂದ 50 ಸಾವಿರ ರು.ವರೆಗೆ ಬೆಲೆ ಏರಿಕೆ ಕಂಡುಬಂದಿದೆ. ಈಗ ಸರ್ಕಾರ ಈ ಕಾರು ತಯಾರಕರ ವಿರುದ್ಧ ಕಿಡಿ ಕಾರುತ್ತಿದೆ. ಬೆಲೆ ಏರಿಸಿದ್ದಕ್ಕೆ ಸೂಕ್ತ ಸಮರ್ಥನೆ ನೀಡಬೇಕೆಂದು ಕಾರು ತಯಾರಿಕಾ ಸಂಸ್ಥೆಯನ್ನು ಕೇಳಿಕೊಂಡಿದೆ. ಉತ್ತೇಜಕ ಕ್ರಮಗಳನ್ನು ತೆಗೆದುಕೊಂಡಿದ್ದರೂ ಬೆಲೆ ಏರಿಸಿದ್ದೇಕೆಂದು ಪ್ರಶ್ನಿಸಿದೆ

ಆದರೆ, ಕಾರು ತಯಾರಕರ ವಾದವೇ ಬೇರೆಯಾಗಿದೆ. ಕಾರುಗಳಿಗೆ ಬೇಡಿಕೆ ಇಲ್ಲದ ದಿನಗಳಲ್ಲಿ ಕಾರು ತಯಾರಕರು ಭಾರೀ ನಷ್ಟ ಅನುಭವಸಿದ್ದಾರೆ. ಅದನ್ನು ಸರಿದೂಗಿಸಲು ಅಲ್ಪ ಭಾರವನ್ನು ಖರೀದಿದಾರರ ಮೇಲೆ ಹೇರಲಾಗುತ್ತಿದೆ. ಇದರಲ್ಲಿ ತಪ್ಪೇನೂ ಇಲ್ಲ ಎಂದು ಕಾರು ತಯಾರಕರು ವಾದಿಸುತ್ತಿದ್ದಾರೆ.

ಕಾರು ತಯಾರಕರ ವಾದಕ್ಕೆ ಸೊಪ್ಪು ಹಾಕದ ಕೇಂದ್ರ ಸರ್ಕಾರ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಬೇಕೆಂದು ಆಗ್ರಹಿಸಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರೂ ನಷ್ಟ ಅನುಭವಿಸಿದ್ದಾರೆ, ಆದರೆ ಬೆಲೆ ಏರಿಕೆ ಮಾಡಿಲ್ಲವೆಂಬುದು ಸರ್ಕಾರದ ಸ್ಪಷ್ಟ ನುಡಿ.

Most Read Articles

Kannada
Story first published: Monday, June 18, 2012, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X