ರು.6 ಕೋಟಿ ಬೆಲೆ ಬೆಂಜ್ ಕಾರ್ ಬಿಡುಗಡೆ

By

Mercedes-Benz launches S-Guard
ನವದೆಹಲಿ, ಫೆ. 23 : ಜರ್ಮನಿಯ ಕಾರು ತಯಾರಿಕಾ ಸಂಸ್ಥೆ ಮರ್ಸಿಡಿಸ್ ಬೆಂಜ್ ವಿಲಾಸಿ ಮತ್ತು ಅತ್ಯಂತ ದುಬಾರಿ ಕಾರು ಎಸ್-ಗಾರ್ಡ್ ಅನ್ನು ಸೋಮವಾರ ಭಾರತದ ಮಾರುಕಟ್ಟೆಗೆ ಪರಿಚಯಿಸಿತು. ಈ ಐಷಾರಾಮಿ ಮತ್ತು ಭಾರಿ ಸುರಕ್ಷತೆಯ ಕಾರಿನ ಎಕ್ಸ್ ಷೋರೋಂನ ಬೆಲೆ ಬರೋಬ್ಬರಿ 6 ಕೋಟಿ ರುಪಾಯಿಗಳು.

ಈ ವಿಲಾಸಿ ಕಾರು ಕ್ಷಿಪಣಿ ಮತ್ತು ಗುಂಡು ನಿರೋಧಕವಾಗಿದ್ದು, ಉದ್ದಿಮೆ ಸಂಸ್ಥೆಗಳ ದಿಗ್ಗಜರು, ಸರಕಾರದ ಉನ್ನತ ಅಧಿಕಾರಿಗಳು, ಖ್ಯಾತನಾಮರ ಬಳಕೆಗಾಗಿಯೇ ತಯಾರಿಸಲಾಗಿದೆ. ಸಂಪೂರ್ಣ ಶಸ್ತ್ರಸಜ್ಜಿತ ಮತ್ತು ರಕ್ಷಣಾ ಕೋಟೆಯಂತೆ ಕಾರ್ಯನಿರ್ವಹಿಸುವ ವಾಹನಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಈ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಉದ್ದೇಶ ಮರ್ಸಿಡಿಸ್ ಬೆಂಜ್ ಗೆ ಇದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿ ಸುಹಾಸ್ ಕಡ್ಲಸ್ಕರ್ ಹೇಳಿದ್ದಾರೆ.

ದೇಶದ್ಯಾಂತ ಇರುವ ಸಂಸ್ಥೆಯ ಡೀಲರ್ ಶಿಪ್ ಗಳಲ್ಲಿ ಈ ಕಾರ್ ಗೆ ಮಾರಾಟ ನಂತರದ ಸೇವೆ ಲಭ್ಯ ಇದೆ. ಜರ್ಮನಿಯ ತಯಾರಿಕಾ ಘಟಕದಲ್ಲಿಯೇ ಇದನ್ನು ನಿರ್ಮಿಸಿ ಭಾರತಕ್ಕೆ ತರಲಾಗುವುದು ಎಂದು ಅವರು ಹೇಳಿದರು.

Most Read Articles

Kannada
Story first published: Tuesday, February 23, 2010, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X