ದೇಶದ ಪುರಾತನ ಕಾರು ಕಂಪನಿಯ ಹೊಸ ಕನಸು

Hindustan motors
ಚೆನ್ನೈ,ಮೇ.17:ಸಿಕೆ ಬಿರ್ಲಾ ಮಾಲೀಕತ್ವದ ದೇಶದ ಅತ್ಯಂತ ಹಳೆಯ ಕಾರು ತಯಾರಿಕಾ ಕಂಪೆನಿ ಹಿಂದೂಸ್ಥಾಮ್ ಮೋಟಾರ್ಸ್ ತಮಿಳುನಾಡಿನ ತಿರುವಳ್ಳುರ್ ಘಟಕದ ಸಾಮರ್ಥ್ಯವನ್ನು 2012ರಲ್ಲಿ ದ್ವಿಗುಣಗೊಳಿಸಲು ಯೋಜನೆ ಹಾಕಿಕೊಂಡಿದೆ.

ತಿರುವಳ್ಳುರ್ ಸಾಮರ್ಥ್ಯ ವಾರ್ಷಿಕ 12,000 ಘಟಕಗಳಾಗಿದ್ದು, ಪ್ರಸ್ತುತ 5000 ಘಟಕಗಳನ್ನು ತಯಾರಿಸಲಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಇದನ್ನು 10,000 ಘಟಕಗಳಿಗೆ ಹೆಚ್ಚಿಸಲಾಗುವುದು ಮತ್ತು ಮುಂದೆ 24,000 ಘಟಕಗಳಿಗೆ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಕಂಪೆನಿಯ ಕಾರ್ಯನಿರ್ವಾಹಕ ಉಪಾದ್ಯಕ್ಷ ವೈವಿಎಸ್ ವಿಜಯಕುಮಾರ್ ತಿಳಿಸಿದರು.

ಕಂಪೆನಿ ಪ್ರಸ್ತುತ ದೇಶದಲ್ಲಿ ಎರಡು ಉತ್ಪಾದನಾ ಘಟಕಗಳನ್ನು ಹೊಂದಿದ್ದು ಇನ್ನೊಂದು ಪಶ್ಚಿಮ ಬಂಗಾಳದ ಉತ್ತರಪಾರದಲ್ಲಿದೆ ಹಿಂದುಸ್ಥಾನ್ ಮೋಟಾರ್ಸ್ ಪ್ರಯಾಣಿಕರ ವಾಹನಗಳಾದ ಲಾನ್ಸರ್ ಸೆಡಿಯಾ, ಔಟ್ ಲ್ಯಾಂಡರ್, ಪಜೇರೊ ಹಾಗೂ ಮೊಂತೆರೋಗಳನ್ನು ತಯಾರಿಸುತ್ತಿದ್ದು ಜಪಾನಿನ ಕಾರು ತಯಾರಿಕಾ ಕಂಪೆನಿ ಮಿಟ್ಸುಬಿಷಿ ಜತೆ ಸಹಯೋಗ ಹೊಂದಿದೆ.

ತಿರುವಳ್ಳುರ್ ಘಟಕದಲ್ಲಿ ಸೆಡಿಯಾ, ಔಟ್ ಲ್ಯಾಂಡರ್, ಪಜೇರೊ, ಮತ್ತು ಮೊಂತೆರೋ ವಾಹನಗಳನ್ನು ತಯಾರಿಸುತ್ತಿದ್ದು, ಉತ್ತರಪಾರ ಘಟಕದಲ್ಲಿ ಅಂಬಾಸಿಡರ್, ಟ್ರೆಕ್ಕರ್,ಪೋರ್ಟರ್ ಮತ್ತು ಪುಷ್ಪಕ್ ವಾಹನಗಳನ್ನು ತಯಾರಿಸುತ್ತಿದೆ. ಕಳೆದ ವರ್ಷ ಕಂಪೆನಿ ದೇಶದಲ್ಲಿ 2200 ಘಟಕಗಳನ್ನು ಮಾರಾಟ ಮಾಡಿದೆ. ಕಂಪೆನಿ ಕಡಿಮೆ ಹೂಡಿಕೆಯಲ್ಲಿ ಸಾಮರ್ಥ್ಯ ಹೆಚ್ಚಳಕ್ಕೆ ಮುಂದಾಗಿದೆ. ತಿರುವಳ್ಳುರ್ ಘಟಕದಲ್ಲಿ ಮೂರು ದಶಕಗಳ ಮೊದಲು ಭೂಮಿ ಸಮತಟ್ಟು ಮಾಡುವ ಯಂತ್ರೋಪಕರಣಗಳನ್ನು ತಯಾರಿಸಲಾಗುತ್ತಿದ್ದು 1998ರ ನಂತರ ಕಾರುಗಳನ್ನು ತಯಾರಿಸಲಾಗುತ್ತಿದೆ.

Most Read Articles

Kannada
Story first published: Monday, May 17, 2010, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X