2011ಕ್ಕೆ ಜಿಎಂನಿಂದ ಡೀಸೆಲ್ ಎಂಜಿನ್ ಕಾರು

Chevrolet Beat
ಮುಂಬೈ, ಜೂ. 6: ಪ್ರಮುಖ ವಾಹನ ತಯಾರಕ ಜನರಲ್ ಮೋಟಾರ್ಸ್ ಇಂಡಿಯಾ ಪುಣೆಯ ತನ್ನ ಘಟಕದಲ್ಲಿ ಶೆವರ್ಲೆ ಬೀಟ್ ಕಾರಿನ ಡೀಸೆಲ್ ಆವೃತ್ತಿಯನ್ನು ತಯಾರಿಸಲಿದೆ.

ಕಂಪೆನಿ ಸಣ್ಣ ಕಾರು ಬೀಟ್ ನ ಒಂದು ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗುವುದು ಮತ್ತು ಇದನ್ನು ಮುಂದಿನ ವರ್ಷ ಬಿಡುಗಡೆ ಮಾಡಲಾಗುವುದು ಎಂದು ಜನರಲ್ ಮೋಟಾರ್ಸ್ ಇಂಡಿಯಾದ ಮಾರಾಟ ವಿಭಾಗದ ಉಪಾದ್ಯಕ್ಷ ಅಂಕುಶ್ ಅರೋರ ಸುದ್ದಿಗಾರರಿಗೆ ತಿಳಿಸಿದರು.

ಈ ಹಣಕಾಸು ವರ್ಷದ ಅಂತ್ಯಕ್ಕೆ ಕಂಪೆನಿ 1.2 ಲೀಟರ್ ಪೆಟ್ರೋಲ್ ಎಂಜಿನ್ನಿನ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದರು. ಕಂಪೆನಿಯ ಪುಣೆ ಘಟಕ ವಾರ್ಷಿಕ 1,60,000 ಎಂಜಿನ್ ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಕಂಪೆನಿಯ ಅಹ್ಮದಾಬಾದ್ ನ ತಲೋಲ್ ಘಟಕ ಮುಂದಿನ ಆಗಸ್ಟ್ - ಸೆಪ್ಟೆಂಬರ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.

ಕಂಪೆನಿ ತನ್ನ ಸಣ್ಣ ಕಾರು ಬೀಟ್ ಮತ್ತು ಸೇಡನ್ ಕ್ರೂಜ್ ನ ಉತ್ಪಾದನೆಯನ್ನು ಹೆಚ್ಚಿಸಲಿದೆ. ದೇಶಾದ್ಯಂತ 209 ನಗರಗಳಲ್ಲಿ 300 ಮಾರಾಟ ಕೇಂದ್ರಗಳನ್ನು ತೆರೆಯಲೂ ಕಂಪೆನಿ ಯೋಜನೆ ಹಾಕಿಕೊಂಡಿದೆ ಎಂದ ಅವರು ಕಂಪೆನಿ ವಾರ್ಷಿಕ 10,000 ಶೆವರ್ಲೆ ಕಾರುಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಿದರು.

Most Read Articles

Kannada
Story first published: Wednesday, June 13, 2012, 14:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X