ಭಾರತದ ರಸ್ತೆಗಳಿಗೆ ಬೆಂಜ್ ಬಸ್ ಸಿಂಗಾರ

Mercedes Benz bus
ಯಾರಿಗುಂಟು ಯಾರಿಗಿಲ್ಲ? ವೋಲ್ವೊ ಎಸಿ ಬಸ್ ಗಳಲ್ಲೇ ಸಂಚರಿಸುವುದೇ ಲಕ್ಷುರಿ ಅಂದುಕೊಂಡವರಿಗೆ ಇಲ್ಲೊಂದು ನಂಬಲರ್ಹ ಸುದ್ದಿಯಿದೆ. ಜರ್ಮನಿಯ ಮರ್ಸಿಡಿಸ್ ಬೆಂಜ್ ಬಸ್ಸುಗಳು ಭಾರತದ ರಸ್ತೆಗಳಲ್ಲಿ ಸದ್ಯದಲ್ಲಿಯೇ ಸಂಚರಿಸಲಿವೆ.

ಇತ್ತೀಚಿನ ದಿನಗಳಲ್ಲಿ ಮಾಮೂಲಿ ಬಸ್ಸುಗಳಿಗಿಂತ ವೋಲ್ವೊ ಬಸ್ಸುಗಳೇ ಹೆಚ್ಚಾಗಿರುವುದರಿಂದ ವೋಲ್ವೊದಲ್ಲಿ ಸಂಚರಿಸುವುದು ಲಕ್ಷುರಿಯಾಗಿ ಉಳಿದಿಲ್ಲ. ಬೆಂಗಳೂರಿನಲ್ಲಿ ಮಾತ್ರ ಈ ಮಾತು ಸತ್ಯ. ಇಲ್ಲಿ ವೋಲ್ವೊ ಬಸ್ಸುಗಳು ಕೂಡ ಕೆಂಪು ಬೋರ್ಡ್ ಬಸ್ಸುಗಳಂತೆ ಜನರನ್ನು ತುಂಬಿಕೊಂಡು ಸಾಗುತ್ತಿರುತ್ತವೆ.

ಬೆಂಜ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವಿಲ್ ಫ್ರೈಡ್ ಅಲ್ಬರ್ ಅವರ ಪ್ರಕಾರ, ಭಾರತದಲ್ಲಿ 2 ಮತ್ತು 3 ಆಕ್ಸಲ್ ಬಸ್ಸುಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿರುವುದರಿಂದ ಭಾರತದಲ್ಲಿಯೂ ಮರ್ಸಿಡಿಸ್ ಬೆಂಜ್ ಬಸ್ಸುಗಳು ನಗರಗಳ ರಸ್ತೆಗಳಿಗೆ ಲಗ್ಗೆ ಇಡಲಿವೆ.

ಭಾರತದಲ್ಲಿ ಇದಕ್ಕಾಗಿಯೇ ಬಸ್ ಅಂಗಾಂಗಗಳನ್ನು ಜೋಡಿಸುವ ಘಟಕಗಳನ್ನು ಸ್ಥಾಪಿಸುವ ಬಗ್ಗೆ ಮರ್ಸಿಡಿಸ್ ಬೆಂಜ್ ಯೋಚಿಸುತ್ತಿದ್ದು, ಪ್ರತಿವರ್ಷ 500 ಬಸ್ ಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಬಸ್ ಗಳ ಸಂಖ್ಯೆ ಪ್ರತಿವರ್ಷ ಶೇ.20ರಷ್ಟು ವೃದ್ಧಿ ಕಾಣಲಿದೆ ಎಂದು ಅಲ್ಬರ್ ಹೇಳಿದ್ದಾರೆ.

ನಗರದ ರಸ್ತೆಗಳಿಗೆ ಹೊಂದುವಂಥ ಬಸ್ ಮಾತ್ರವಲ್ಲ ಸುತ್ತಲಿನ ಊರುಗಳಿಗೆ ಸಂಚರಿಸುವಂಥ ಬಸ್ಸುಗಳನ್ನು ಕೂಡ ಉತ್ಪಾದಿಸಲು ಕಂಪನಿ ಉದ್ದೇಶಿಸಿದೆ. ಜೊತೆಗೆ ದೂರದ ಪ್ರಯಾಣವನ್ನು ಸುಖಮಯವಾಗಿಸುವ ಉದ್ದೇಶದಿಂದ ಇನ್ನೂ ಹೆಚ್ಚಿನ ಬಸ್ಸುಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿವೆ.

ಬೆಂಗಳೂರಿನ ವೋಲ್ವೊ ಬಸ್ಸುಗಳನ್ನು ನೋಡಿದರೆ, ಈ ಎಸಿ ಬಸ್ಸುಗಳು ಉಗುಳುತ್ತಿರುವ ಹೊಗೆ ನಾಲ್ಕು ಕೆಂಪು ಬಸ್ಸುಗಳಿಗೆ ಸಾಕಾಗುವಷ್ಟಿರುತ್ತದೆ. ಈ ಮರ್ಸಿಡಿಸ್ ಎಸಿ ಬಸ್ಸುಗಳು ಹೇಗೋ ಏನೋ? ಮರ್ಸಿಡಿಸ್ ಬಸ್ಸುಗಳು ನಗರಕ್ಕೆ ಬಂದು ನಗರದ ಅಂದವನ್ನು ಹೆಚ್ಚಿಸಲಿವೆ. ಆಗೆಯೇ, ಮರ್ಸಿಡಿಸ್ ಬೆಂಜ್ ಬಸ್ಸುಗಳಿಗೆ ಹೊಂದುವಂತೆ ನಗರದ ರಸ್ತೆಗಳ ಅಂದವನ್ನೂ ಹೆಚ್ಚಿಸಬೇಕಾಗಿದೆ!

Most Read Articles

Kannada
Story first published: Saturday, June 12, 2010, 18:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X